POST

ಶಾಂತಿ ಕದಲಿದ ಹಿಂದೂ ಮುಸ್ಲಿಂ ಬುದ್ಧಿವಂತರು


ಕರ್ನಾಟಕದಲ್ಲಿ ಇತ್ತೀಚೆಗೆ ಧರ್ಮಗಳ ಸಂಘರ್ಷದಲ್ಲಿ ಶಾಂತಿಯನ್ನು ಕೆಲವರು ಕದಲುತ್ತಿದ್ದಾರೆ. ರನ್ನ ಪಂಪನಿಂದ ಹಿಡಿದು ಆಧುನಿಕತೆಯ ಕವಿಗಳಾದ ಕುವೆಂಪುವರೆಗೂ ಅಂದರೆ ಕವಿರಾಜ ಮಾರ್ಗದಿಂದ ಹಿಡಿದು ಇಂದಿನ ಚಂದ್ರಶೇಖರ ಕಂಬಾರ ಅವರ ಸಾಹಿತ್ಯದವರೆಗೂ ಕನ್ನಡ ನಾಡನ್ನು ಶಾಂತಿಯ ತವರು, ಬನವಾಸಿಯ ಬೀಡು, ಶ್ರೀ ಗಂಧದ ನಾಡು, ಸರ್ವಜನರ ಶಾಂತಿಯ ತೋಟ ಎಂದೆಲ್ಲ ಕನ್ನಡ ನಾಡನ್ನು ಹಾಡಿ ಹೊಗಳಿದ್ದಾರೆ. ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು. ಎಂಬ ಗೀತೆಯೊಂದಿಗೆ ನಾಡಿನ ಮಹತ್ವವನ್ನು ಡಾ|| ರಾಜ್‍ಕುಮಾರ್ ರವರ ಕಂಠ ಸಿರಿಯಲ್ಲಿ ಹೇಳಿದ ಈ ಕನ್ನಡ ನಾಡು ಇಂದು ಧರ್ಮ ಸಂಘರ್ಷದ ಮೂಲ ಸ್ಥಾನವಾಗಿ ಬಿಂಬಿತವಾಗುತ್ತಿದೆ. ಉಡುಪಿಯ ಕಾಲೇಜ್ ಒಂದರಲ್ಲಿ ಪ್ರಾರಂಭವಾದ ಹಿಜಾಬ್ ಕೇಸರಿ ಕದನವು ರಾಜ್ಯ ವ್ಯಾಪ್ತಿ ವ್ಯಾಪಿಸಿ ನ್ಯಾಯಾಲಯದ ಮುಂದೆ ನಿಂತಾಗ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಉಡುಪುಗಳನ್ನು ನಿಷೇಧಿಸಿ ಹಿಜಾಬ್‍ಗೆ ಅನುಮತಿಯನ್ನು ನಿರಾಕರಿಸಿತು. ಈ ವಿಚಾರದಲ್ಲಿ ಹೊತ್ತಿಕೊಂಡ ಬೆಂಕಿಯು ಮುಸ್ಲಿಂ ಸಮುದಾಯದಲ್ಲಿ ಮಾರ್ಚ್ 17ರಂದು ಹಿಜಾಬ್ ತೀರ್ಪನ್ನು ವಿರೋಧಿಸಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಕರ್ನಾಟಕ ಬಂದ್ ಮಾಡಿದರು. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹಿಂದೂ ಸಂಘಟನೆಗಳು ಹಿಂದೂ ಯುವ ಜನತೆ ಹಿಜಾಬ್‍ಗೋಸ್ಕರ ಒಂದು ದಿನ ನೀವು ಅಂಗಡಿ ಮುಚ್ಚುವುದಾದರೆ ಮುಂದಿನ ದಿನಗಳಲ್ಲಿ ಹಿಂದೂಗಳು ಮುಸ್ಲಿಂ ಅಂಗಡಿಗಳಲ್ಲಿ ವ್ಯಾಪಾರ ಮಾಡದಂತೆ ಜಾಗೃತಿ ಮೂಡಿಸಲು ಪ್ರಾರಂಭ ಮಾಡಿದರು. ಈ ಜಾಗೃತಿ ಮುಂದುವರೆದು ಕರಾವಳಿ ಕರ್ನಾಟಕದ ಕೆಲವು ಗ್ರಾಮಗಳ ಜಾತ್ರೆಗಳಲ್ಲಿ ಮುಸ್ಲಿಂ ಅಂಗಡಿಗಳಿಗೆ ಅನುಮತಿ ಬೇಡ ಎಂಬ ಹೋರಾಟ ಪ್ರಾರಂಭವಾಯಿತು ಈ ಹೋರಾಟವು ಮೊದಮೊದಲು ಶಿವಮೊಗ್ಗ, ಉಡುಪಿ, ಚಿಕ್ಕಮಂಗಳೂರು ನಂತರದ ದಿನಗಳಲ್ಲಿ ಕಲ್ಬುರ್ಗಿ, ಬೆಂಗಳೂರಿಗೂ ವ್ಯಾಪಿಸಿ ಇಂದು ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರದ ವಿರುದ್ದ ಹಿಂದೂತ್ವದ ಹೆಸರಿನಲ್ಲಿ ಧ್ವನಿಯೆತ್ತಲಾಗುತ್ತಿದೆ. ಈ ಸಂಘರ್ಷದ ಮಧ್ಯೆ ಹಲಾಲ ಮಾಂಸದ ವ್ಯಾಪಾರವು ಉತ್ತುಂಗಕ್ಕೇರಿದೆ. ಹಿಂದೂ ಬುದ್ದಿ ಜೀವಿಗಳು, ಮಠಾಧೀಶರು ಸೇರಿದಂತೆ ರಾಜಕಾರಣಿಗಳು ಹಿಂದೂ ಪರ ಸಂಘಟನೆಗಳು ಈ ಸಂಘರ್ಷಕ್ಕೆ ಬೆಂಕಿಯಿಡುತ್ತಿದ್ದಾರೆ. ಇತ್ತೀಚೆಗೆ ಈ ಒಂದು ಸಮಸ್ಯೆಯನ್ನು ರಾಜಕೀಯ ಮಾಡಿಕೊಂಡು ಕೆಲವು ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ. ಭಾರತ ಸಂವಿಧಾನದ ಮೂಲ ಆಸೆಯಂತೆ ದೇಶವು ಜಾತ್ಯಾತೀತ ಆಗಬೇಕಿತ್ತು. 75 ವರ್ಷಗಳಿಗಿಂತ ಹೆಚ್ಚು ಕಳೆದರೂ ಜಾತಿ – ಧರ್ಮದ ವಿಷಯದಲ್ಲಿ ನಾವು ಬದುಕುತ್ತಿದ್ದೇವೆ ಎನ್ನುವುದಾದರೆ ಅಂಬೇಡ್ಕರ್ ಸೇರಿದಂತೆ ಹಲವಾರು ಮಹಾನಿಯರಿಗೆ ನಾವು ಮಾಡುತ್ತಿರುವ ಅವಮಾನವಲ್ಲವೇ? ಅನಾದಿಕಾಲದಿಂದಲೂ ಹಿಂದೂ ಮುಸ್ಲಿಂ ಸೇರಿದಂತೆ ಹಲವಾರು ಧರ್ಮಿಯರು, ಜಾತಿಯವರು ಒಂದಾಗಿ ಬದುಕುತ್ತಿದ್ದಾರೆ. ಅಧಿಕಾರಕ್ಕಾಗಿ, ಹೆಸರಿಗಾಗಿ ಮತ್ತು ಬಾಯಿ ಚಪಲಕ್ಕಾಗಿ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕಾರ್ಯವು ನಡೆಯುತ್ತಿವೆ. ಇದರ ಮಧ್ಯೆ ಕಾಳಿ ಸ್ವಾಮಿಯಂತಹ ಕೆಲವು ವಿಕೃತ ಮನಸ್ಸಿನ ಹೋರಾಟಗಾರರು ಮುಸ್ಲಿಂರನ್ನು ವಿರೋಧಿಸುವ ಧಾವಂತದಲ್ಲಿ ನಮ್ಮ ಧರ್ಮದ ತನ್ನ ಸ್ಥಾನದ ಸಾಮಾನ್ಯ ಪ್ರಜ್ಞೆಯನ್ನು ಕಳೆದುಕೊಂಡಂತೆÉ ವರ್ತಿಸುತ್ತಿದ್ದಾರೆ. ಹಿಂದೂ ಮತ್ತು ಹಿಂದೂತ್ವದ ಪರಿಕಲ್ಪನೆಯಲ್ಲಿ ಮತ್ತು ಇಸ್ಲಾಂ ಮತ್ತು ಭಾರತೀಯ ಮುಸ್ಲಿಂ ಎಂಬ ವಿಚಾರಗಳಲ್ಲಿ ಪರಿಪೂರ್ಣ ವ್ಯಾಖ್ಯಾನಗಳಿಲ್ಲದಿದ್ದರೂ ಕೂಡ ಅರೆಬೆಂದ ಅಜ್ಞಾನಿಗಳು ಹುಚ್ಚು ನಾಯಿಯಂತೆ ಕಿರುಚುವುದನ್ನೆ ಉದ್ಯೋಗ ಮಾಡಿಕೊಂಡಿದ್ದಾರೆ. ಬಿ.ಜೆ.ಪಿ ಯವರು ತಮ್ಮ ಓಟ್ ಬ್ಯಾಂಕಿಗಾಗಿ ಹಿಂದೂತ್ವದ ಅಜಾಂಡದಲ್ಲಿ ಕಾಂಗ್ರೆಸ್‍ನವರು ಅಲ್ಪಸಂಖ್ಯಾತರು ಮತ್ತು ಮುಸ್ಲಿಂರನ್ನು ತಮ್ಮ ಓಟ್ ಬ್ಯಾಂಕಿಗಾಗಿ ಬೆಂಕಿ ಹಚ್ಚಿ ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿದ್ದಾರೆ. ಈ ವಿಕೃತ ಮನಸ್ಸಿನ ರಾಜಕೀಯ ವ್ಯವಸ್ಥೆಯಿಂದ ಸಾಮಾನ್ಯ ಜನರಿಗೆ, ಕಾರ್ಮಿಕ ವರ್ಗಕ್ಕೆ, ಸಣ್ಣ ಪುಟ್ಟ ವ್ಯಾಪರಸ್ಥರಿಗೆ ತೊಂದರೆಯಾಗುತ್ತದೆಯೇ ಹೊರೆತು ಹುಚ್ಚು ನಾಯಿಯಂತೆ ಬೊಗಳುವ ಹೋರಾಟಗಾರರಿಗಾಗಲೀ, ಸಮಾಜದಲ್ಲಿ ಬೆಂಕಿ ಹಚ್ಚಿ ತಮ್ಮ ರಾಜಕೀಯ ಜೀವನವನ್ನು ಉಜ್ವಲ ಮಾಡಿಕೊಳ್ಳುವ ನಾಮರದ ರಾಜಕಾರಣಿಗಳಿಗಾಗಲಿ ಆಗುವುದಿಲ್ಲ ರಾಜಕಾರಣಿಗಳು ಕಾರ್ಪೊರೆಟ್ ಬಿಸನೆಸ್ ಮ್ಯಾನತರ ಸಮಾಜದ ನೆಮ್ಮದಿಯನ್ನು ಹಾಳುಮಾಡಿ ತಮ್ಮ ರಾಜಕೀಯ ಬಿಸ್‍ನೆಸ್ ಅನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಿದ್ದಾರೆ. ರಾಮ, ರಹೀಮ್, ಅಲ್ಲಾ, ಯೇಸು ಧರ್ಮ ಸಂಕಟದ ಮಧ್ಯೆ ರಕ್ತ ಹರಿದರೆ ಬಂದು ಕಾಪಾಡುವುದಿಲ್ಲ.
ಕರ್ನಾಟಕವನ್ನು ಶಾಂತಿ ಸೌಹರ್ದತೆಯ ತೋಟ ಎನ್ನುತ್ತಾರೆ ಇಂತಹ ತೋಟದಲ್ಲಿ ಓದುವ ಮಕ್ಕಳ ತಲೆಯಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತಿ ಪರೀಕ್ಷೆಗಳನ್ನು ಆತಂಕದಲ್ಲಿ ಬರೆಯುವಂತೆ ಸ್ವಯಂಘೋಷಿತ ಬುದ್ದಿ ಜೀವಿಗಳು, ಧರ್ಮ ಪಾಲಕರು, ಧರ್ಮ ಅನುಯಾಯಿಗಳು ಮತ್ತು ಹೋರಾಟಗಾರರು ತಮ್ಮ ತಮ್ಮ ಉಳಿವಿಗಾಗಿ ಇಂತಹ ಬೆಂಕಿ ಹಚ್ಚುತ್ತಿದ್ದಾರೆಯೇ ಹೊರತು ಬೇರೆ ಯಾವುದೇ ಕಾರಣಗಳಿಲ್ಲ. ಒಬ್ಬ ನಿಜವಾದ ಮುಸ್ಲಿಂನಿಗೆ ಹಲಾಲ್, ಬುರ್ಕಾ, ಹಿಜಾಬ್, ತಲಾಖ್ ಮುಖ್ಯ ಅನ್ನುವುದಾದರೆ ಅದೇ ಖುರಾನಿನಲ್ಲಿ ಪ್ರತಿಯೊಬ್ಬರನ್ನು ಗೌರವಿಸಬೇಕು ಬೇರೆಯವರನ್ನು ಪ್ರೀತಿಸಬೇಕು, ದಾನಧರ್ಮ (ಜಕಾತ್) ಮಾಡಬೇಕು ಅಂತಹ ಅದೆಷ್ಟೋ ಒಳ್ಳೆಯ ವಿಚಾರಗಳು ಅರ್ಥವಾಗಿಲ್ಲವೇ? ಹಿಂದೂ ಧರ್ಮವು ಮೂಢನಂಬಿಕೆಯಿಂದ ಕೂಡಿದೆ ಎನ್ನುವ ನೀವು ನಿಮ್ಮ ಧರ್ಮದ ಮೂಢನಂಬಿಕೆಗಳು, ಕೆಟ್ಟ ಪದ್ದತಿಗಳು ಮತ್ತು ಮಹಿಳಾ ಶೋಷಣೆಯ ವಿರುದ್ಧ ಏಕೆ ಧ್ವನಿಯೆತ್ತುವಿದಿಲ್ಲ? ಹಾಗೆಯೇ ಹಿಂದೂ ಧರ್ಮದ “ವಸುದೈವ ಕುಟುಂಬಕಂ” ಮತ್ತು ಸ್ವಾಮಿ ವಿವೇಕಾನಂದರು ಹೇಳುವಂತೆ “ಬೇರೆ ಧರ್ಮದ ಬಗ್ಗೆ ತಪ್ಪು ಸಂದೇಶ ಸಾರುವ ಮುನ್ನ ಹಿಂದೂ ಧರ್ಮದ ಒಳ್ಳೆಯ ವಿಚಾರಗಳನ್ನು ಹೇಳು” ಸೇರಿದಂತೆ ಹಲವಾರು ಹಿಂದೂ ತಪ್ಪುಗಳನ್ನು ಸ್ವಯಂ ಘೋಷಿತ ಹಿಂದೂ ರಾಜಕಾರಣಿಗಳು ಖಾವಿ ತೊಟ್ಟ ಸ್ವಾಮಿಗಳು ಅರಿತಿದ್ದಾರ ಸತ್ಯಗಳೇ ಗೊತ್ತಿಲ್ಲದ ಅರೆಜ್ಞಾನಿಗಳಿಂದ ಆಧುನಿಕ ತಂತ್ರಜ್ಞಾನದ ಜಗತ್ತು ತಲೆಯಲ್ಲಿ ಇರಬೇಕಾದದ್ದು ಗೂಗಲ್‍ನಲ್ಲಿದೆ. ಗೂಗಲ್‍ನಲ್ಲಿ ಇರಬೇಕಾಗಿದ್ದು ತಲೆಯಲ್ಲಿದೆ. ಮನುಷ್ಯನ ವಿಕೃತ ವಾದಗಳು ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡ ನಾಡಿನ ಶಾಂತಿಯನ್ನು ಕದಲುವ ಜೊತೆಗೆ ಕರ್ನಾಟಕದ ಗೌರವವನ್ನು ಅಂತರ್ ರಾಷ್ರ್ಟೀಯ ಮಟ್ಟದಲ್ಲಿ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಭಾರತ ಅಂದರೆ ಹಿಂದೂ ಹಿಂದೂನೇ ಇಲ್ಲಿ ಸಾರ್ವಭೌಮ ಆದರೆ ಮುಸ್ಲಿಂ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಏಕೆಂದರೆ ವಾಹನಗಳ ರಿಪೇರಿ, ಹಳೇ ವಸ್ತುಗಳ ಮರುಬಳಕೆ ಮತ್ತು ಬಿರಿಯಾನಿಯಂತಹ ಅಡುಗೆಗೆ ನಮ್ಮ ಮುಸ್ಲಿಂನೇ ಬೇಕು. ಪಾಯಸ, ಹೋಳಿಗೆ ಹಿಂದೂ ಮನೆಯಲ್ಲಿ ತಿಂದರೆ ಬಿರಿಯಾನಿ ಮುಸ್ಲಿಂ ಮನೆಯಲ್ಲಿ ತಿನ್ನಬೇಕು. ಅದೇ ಚೆಂದ ಮನುಷ್ಯ ಬದುಕುವುದೇ 60 ರಿಂದ 70 ವರ್ಷ ಇದರ ಮಧ್ಯೆ ಹಲಾಲ್, ಜಟಕಾ ಬೇಕಾ? ನಾ ಅಳಿದರೂ, ಉಳಿದರೂ ನಾನು, ನನ್ನವರು ಸತ್ತರು ನನ್ನ ತನವು ನಶಿಸಿ ಹೋದರೂ ಕನ್ನಡ ನಾಡಿಗೆ ಒಂದು ಇತಿಹಾಸವಿದೆ. ಕನ್ನಡ ಮಣ್ಣಿಗೆ ಒಂದು ಧರ್ಮವಿದೆ. ಪಾಲಿಸಲು ಕಲಿಯಿರಿ ಈ ಮೂರು ದಿನದ ಸಂತೆಯಲಿ. ಸಂತೆ ಮುಗಿದ ಮೇಲೆ ಚಟ್ಟಕ್ಕೆ ಹೆಗಲು ಕೊಡುವವರು ಯಾರೋ ಗೊತ್ತಿಲ್ಲ. ಮಸಣದ ಮಣ್ಣು ಅಗೆಯುವವರು ಯಾರೊ ಗೊತ್ತಿಲ್ಲ. ಧರ್ಮವನ್ನು ಪಾಲಿಸಿ ಅಂಧರಾಗಿ ಅಲ್ಲ ಬೆಳಕಿನಿಂದ ಕನ್ನಡ ನಾಡಿನ ಶಾಂತಿಯನ್ನು ಕಾಪಾಡಲು ನಿಮ್ಮ ಸಂಯಮವು ಅತ್ಯಂತ ಮುಖ್ಯವಾಗಿದೆ.

2022ರ ಬಜೆಟ್


ವಿತ್ತ ಸಚಿವೆ ನಿರ್ಮಲಾ ಸೀತರಾಮ್‍ನ್ ರವರು ಈ ಬಾರಿ ಮಂಡಿಸುವ ಬಜೆಟ್ ಪ್ರಗತಿಯ ವೇಗವನ್ನು ಹೆಚ್ಚಿಸುವ ಭವಿಷ್ಯದ ಗುರಿಯೊಂದಿಗಿನ ಈ ಬಜೆಟ್ ನೇರವಾಗಿ ಯುವಕರು, ಮಹಿಳೆಯರು, ರೈತರು ಮತ್ತು ಹಿಂದುಳಿದವರಿಗೆ ಅನುಕೂಲ ಒದಗಿಸಲಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ 25000 ಕಿ.ಮೀ ಹೆದ್ದಾರಿ ಅಭಿವೃದ್ಧಿಗಾಗಿ 3.8 ಕೋಟಿ ರೂ, 80 ಲಕ್ಷ ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ 48000 ಕೋಟಿ ರೂ, ನರೇಗಾ ಯೋಜನೆಗೆ 73,000 ಕೋಟಿ ರೂ, ಎಂ ಎಸ್ ಪಿ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ 2.37 ಲಕ್ಷ ಕೋಟಿ ರೂ, ಷೇರು ವಿಕ್ರಯಗುರಿಗೆ 65,000 ಕೋಟಿ ರೂ, ಮೆಟ್ರೋ ಯೋಜನೆಗಳಿಗೆ 19,130 ಕೋಟಿ ರೂ, ಬಿಟ್ ಕಾಯಿನ್ ನಂತಹ ಡಿಜಿಟಲ್ ಆಸ್ತಿಗಳ ಮೇಲಿನ ಆದಾಯಕ್ಕೆ 30% ರಷ್ಟು ತೆರಿಗೆ ವರ್ಗಾವಣೆ ಮೊತ್ತದ ಮೇಲೆ 1% ಟಿಡಿಎಸ್, ಷೇರು ಈಕ್ವೀಟಿಯಂತಹ ದೀರ್ಘಕಾಲೀನ ಹೂಡಿಕೆಗಳಿಂದ ಆದಾಯದ ಮೇಲಿನ ಸರ್ಚಾಜ್ ಗೆ ಗರಿಷ್ಠ 15% ರಷ್ಟು ಮಿತಿ, ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಡಿಜಿಟಲ್ ಕರೆನ್ಸಿಗೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಉದ್ದೇಶಿಸಿಲ್ಲ ಎಂದು ಸ್ಪಷ್ಟಪಡಿಸಿದ ಸೀತಾರಾಮನ್ ರವರು 30% ರಷ್ಟು ತೆರಿಗೆಯನ್ನು ಕ್ರಿಪ್ಟೋ ಕರೆನ್ಸಿಗಳ ಮೇಲೆ ವಿಧಿಸಲಾಗುವುದು ಎಂದು ಹೇಳಿದ್ದಾರೆ. 400 “ವಂದೇ ಭಾರತ್ ರೈಲು” ಘೋಷಣೆ. ಇಂಧನ ದಕ್ಷÀತೆ ಮತ್ತು ಪ್ರಯಾಣಿಕ ಸ್ನೇಹಿ ತಂತ್ರಜ್ಞಾನದ ರೈಲು, ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಯಡಿ 100 ಸರಕು ಟರ್ಮಿನಲ್ ನಿರ್ಮಾಣ ಗುರಿ, ಸ್ಟಾರ್ಟ್ ಅಫ್ ಕಂಪನಿಗಳಿಗೆ ತೆರಿಗೆ ರಿಯಾಯಿತಿ, ಒನ್ ಕ್ಲಾಸ್ ಮತ್ತು ಒನ್ ಚಾನಲ್, ಕೃಷಿಗೆ ಉತ್ತೇಜನ, ರಫ್ತು ಉತ್ತೇಜನಕ್ಕೆ ಕ್ರಮ, ಕಿಸಾನ್ ಡ್ರೋನ್ ಯೋಜನೆಯಡಿ ಕೃಷಿ ಭೂಮಿ ಸಮೀಕ್ಷೆ, ದಾಖಲೆಗಳ ಡಿಜಿಟಲೀಕರಣ, ಕೃಷಿ ಆಧಾರಿತ ಸ್ಟಾರ್ಟ್ ಅಫ್‍ಗಳ ನೆರವಿಗೆ ನಬಾರ್ಡ ಸಾಲ, ಗ್ರಾಮೀಣರ ಮನೆಗೆ ನಲ್ಲಿ ನೀರಿನ ಸಂಪರ್ಕ ಯೋಜನೆ “ಹರ್ ಘರ್ ನಲ್ ಸೇ ಜಲ್” ಗೆ 60,000 ಕೋಟಿ ರೂ, ಕ್ರೀಡೆಗೆ 3.062 ಕೋಟಿ ರೂ ಮಂಡಿಸಿದ್ದಲ್ಲದೇ, ಇ-ಪಾಸ್ ಪೋರ್ಟ್ ಜಾರಿ, ತೆರಿಗೆದಾರರು 2 ವರ್ಷಗಳ ಅವಧಿಯಲ್ಲಿ ಪರಿಷ್ಕøತ ರಿಟನ್ರ್À ಸಲ್ಲಿಸಲು ಅವಕಾಶ, ನದಿ ಜೋಡಣೆಗೆ ಸಮ್ಮತಿ, ಜಲಶಕ್ತಿಗೆ ಅನುದಾನ ಹೆಚ್ಚಳ, ಗ್ರಾಮ ರಸ್ತೆ ನಿರ್ಮಾಣಕ್ಕೆ ಒತ್ತು, ಪಂಚ ನದಿ ಜೋಡಣೆ ಗುರಿ, ಪರಿಸರ ಅರಣ್ಯ ಇಲಾಖೆಗೆ 3,030ಕೋಟಿ ರೂ ಅನುದಾನ, ಭೂ ವಿಜ್ಞಾನಕ್ಕೆ 1,897 ಕೋಟಿ ರೂ ಅನುದಾನ ನೀಡಿದೆ. ಅಲ್ಲದೇ ಸಿರಿಧಾನ್ಯಗಳ ಮಾರುಕಟ್ಟೆ ವಿಸ್ತರಣೆ ಮಾಡುವುದರ ಜೊತೆಗೆ 2023 ಅನ್ನು “ಅಂತರ್ ರಾಷ್ಟ್ರೀಯ ಸಿರಿಧಾನ್ಯಗಳ” ವರ್ಷವೆಂದು ಘೋಷಣೆ ಮಾಡಿದೆ.
ಈ ಬಾರಿಯ ಬಜೆಟ್ ಅನ್ನು ಹಣಕಾಸು ಸಚಿವರು ಮುಂದಿನ 2 ವರ್ಷಗಳಲ್ಲಿ ಬರುವ ಲೋಕಸಭಾ ಚುನಾವಣೆ ಮತ್ತು ಭಾರತದ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಳ್ಳುವುದರ ಜೊತೆಗೆ ಕೊರೋನಾದ 3 ಅಲೆಗಳ ಮಧ್ಯೆ ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ್ದು ಇದು “ವರ್ಚುವಲ್ ಬಜೆಟ್” ಆಗಿ ಗಮನಸೆಳೆದಿದೆ.
ಏರಿಕೆ
ವಿಮಾನಯಾನ, ಛತ್ರಿಗಳು
ಇಮಿಟೇಶನ್ ಜ್ಯುವೆಲರಿ,
ಸ್ಮಾರ್ಟ್ ಮೀಟರ್, ಸ್ಪೀಕರ್
ಸೋಲಾರ್ ಸೆಲ್, ಮಾಡ್ಯೂಲ್
ಎಕ್ಸರೇ ಮೆಷಿನ್
ಹೆಡ್ ಫೋನ್ ಮತ್ತು ಇಯರ್ ಫೋನ್
ಎಲ್ಲಾ ಆದಾಯದ ಉತ್ಪನ್ನಗಳು
ಇಳಿಕೆ
ಎಲೆಕ್ಡ್ರಾನಿಕ್ ಬಿಡಿ ಭಾಗಗಳು
ಮುತ್ತುಗಳು, ಪಾಲೀಷ್ ಮಾಡಿದ ವಜ್ರ
ಮೊಬೈಲ್, ಮೊಬೈಲ್ ಕ್ಯಾಮೆರಾ ಲೆನ್ಸ್,
ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನಗಳು
ಮೀಥೈಲ್, ಆಲ್ಕೋಹಾಲ್, ಮೆಂಥಾಲ್,
ಅಟಿಟಿಕ್ ಆಸಿಡ್, ಕೋಕಾ ಬೀನ್ಸ್,
ಪೆಟ್ರೋಲಿಯಂ ಉತ್ಪನ್ನಗಳಿಗೆ ಬಳಸುವ ರಾಸಾಯನಿಕ
ಶೀತಲೀಕರಿಸಿದ ಚಿಪ್ಪು ಜೀವಿಗಳು, ಸ್ಕ್ವೀಡ್
ಕೃಷಿ ಸಲಕರಣೆಗಳು, ಇಂಗು

ಹಿಜಾಬ್ ಕೇಸರಿ ಕದನ : ಶಿಕ್ಷಣ ಪಥನ

ಉಡುಪಿಯ ಕಾಲೇಜ್ ಒಂದರಲ್ಲಿ ನಡೆದ ಘಟನೆಯಿಂದ ಕರಾವಳಿ ಕರ್ನಾಟಕ ಸೇರಿದಂತೆ ಕರ್ನಾಟಕದ ತುಂಬಾ ವ್ಯಾಪಿಸಿದೆ. 9 ಮತ್ತು 10ನೇ ತರಗತಿಯವರೆಗೆ ಫೆಬ್ರವರಿ 14 ರವರೆಗೆ ಮತ್ತು ಪಿಯು, ಡಿಗ್ರಿ ಸೇರಿದಂತೆ ಕಾಲೇಜ್‍ಗಳ ಶಿಕ್ಷಣವನ್ನು ಅನಿರ್ಧಿಷ್ಟ ಅವಧಿಗೆ ನಿಲ್ಲಿಸಲಾಗಿದೆ. ಹಿಜಾಬ್ ಮತ್ತು ಕೇಸರಿ ಶಾಲಿನ ಪ್ರಕರಣವು ರಾಜಕೀಯ ಬಣ್ಣವನ್ನು ತಳಿಯುತ್ತಾ ಜಾತಿ ಮತ್ತು ಧರ್ಮಗಳ ಭಾವನೆಗಳೊಂದಿಗೆ ಆಟವಾಡುತ್ತಾ ಈಗ ಶಾಲಾ ಕಾಲೇಜುಗಳ ಆವರಣದಿಂದ ಹೊರ ಬಂದಿದೆ . ಈ ಹಿಜಾಬ್ ಕೇಸರಿ ಕದನವು ವೈಯಕ್ತಿಕ ಮತ್ತು ರಾಜಕೀಯ ಪ್ರೇರಣೆಯಿಂದ ಕೂಡಿದ್ದು ಕಾಣದ ಕೈಗಳ ಮತ್ತು ದುಷ್ಟ ಮನಸ್ಥಿತಿಯ ರಾಜಕಾರಣಿಗಳಿಂದ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಒಂದು ಸಾರಿ ಹಿಜಾಬ್‍ನ ಹಿನ್ನಲೆಯನ್ನು ತಿಳಿಯುತ್ತಾ ಹೋದರೆ ಈ ಆಧುನಿಕತೆಯ ದೇಶದಲ್ಲಿ ಬಳಸುವುದು ಅಪ್ರಸ್ತುತ ಅನಿಸುತ್ತದೆ. ಇಸ್ಲಾಂ ಧರ್ಮದ ಹುಟ್ಟು ಖುರಾನ್ ಬರೆದ ಸಂಧರ್ಭದಲ್ಲಿ ಮೆಕ್ಕಾ ಮದೀನಾ ಸೇರಿದಂತೆ ಗುಡ್ಡ ಗಾಡು ಪ್ರದೇಶಗಳ ಮೇಲೆ ಯಹೂದಿ , ಹಳೆಯ ಕ್ರಿಶ್ಚಿಯನ್ ಧರ್ಮ ಸೇರಿದಂತೆ ಹಲವಾರು ಅನ್ಯ ಧರ್ಮಿಯರ ಆಕ್ರಮಣವನ್ನು ಅರೇಬಿಯನ್ ಪ್ರದೇಶಗಳು ಎದುರಿಸ ಬೇಕಾಯಿತು. ಈ ಹೋರಾಟದಲ್ಲಿ ಮಾನವನ ಕ್ರೂರತೆ ಬೇರೆ ಧರ್ಮಗಳ ಮೇಲಿದ್ದ ಆಕ್ರೋಶ ಮತ್ತು ಹಿಂಸೆಗಳಿಂದ ಇಸ್ಲಾಂ ಧರ್ಮವು ತನ್ನ ಹೆಣ್ಣುಮಕÀ್ಕಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಖುರಾನ್‍ನ ಪ್ರಕಾರ ಮಕ್ಕಳು, ವೃದ್ಧರು ಮತ್ತು ಹೆಣ್ಣು ಮಕ್ಕಳನ್ನು ಮುಸ್ಲಿಂ ಓರ್ವ ವ್ಯಕ್ತಿ ರಕ್ಷಣೆ ಮಾಡುವುದು ಕಡ್ಡಾಯವಾಗಿರುತ್ತದೆ. ಆ ಸಂಧರ್ಭದಲ್ಲಿ ಆಗಾಗ ನಡೆಯುತ್ತಿರುವ ದಾಳಿಗಳು ಯುದ್ಧ ನೀತಿಯನ್ನೇ ಅನುಸರಿಸದ ಅನಾಗರೀಕ ದಾಳಿ ಕೋರರಿಂದ ರಕ್ಷಣೆ ಮಾಡಲು ಈ ಹಿಜಾಬ್ ಅಥವಾ ಬುರ್ಕಾವನ್ನು ಧರಿಸುತ್ತಿದ್ದರು. ಇದೇ ರೀತಿಯ ಪದ್ಧತಿಗಳು ಭಾರತೀಯ ರಜಪೂತ್ ಮನೆತನದಲ್ಲಿ ಸೇರಿದಂತೆ ಹಲವಾರು ರಾಜಮನೆತನದಲ್ಲಿ ಪರದಾ ಪದ್ದತಿಯನ್ನು ಅನುಸರಿಸಲಾಗುತ್ತಿತ್ತು. ಈ ಪರದಾ ಪದ್ದತಿ ಅಥವಾ ಹಿಜಾಬ್ ಒಂದು ರೀತಿ ಕಾಲಕ್ಕೆ ತಕ್ಕ ಪದ್ದತಿಗಳೇ ಆಗಿದ್ದವೇ ಹೊರತು ಧಾರ್ಮಿಕ ಆಚರಣೆಗೆ ಹೋಲಿಸುವಷ್ಟು ಶ್ರೇಷ್ಠವಾಗಿಲ್ಲ. ಅಕ್ರಮಣಕಾರಿ ಜನರಿಂದ ಹೆಣ್ಣು ಮಕ್ಕಳ ರಕ್ಷಣೆ ಮಾನ ಮತ್ತು ಪ್ರಾಣ ರಕ್ಷಣೆಗಾಗಿ ಇಂತಹ ಪದ್ದತಿಗಳು ಜಾರಿಯಲ್ಲಿದ್ದವು. ಇಂದು ಆಧುನಿಕತೆಯ ಮತ್ತು ಪ್ರಜಾಪ್ರಭುತ್ವವು ಬಲಿಷ್ಠವಾಗಿರುವ ಸಂಧರ್ಭದಲ್ಲಿ ಇಂತಹ ಪದ್ದತಿಗಳನ್ನು ಆಚರಿಸುವುದು ಎಷ್ಟು ಸೂಕ್ತ ? ಹಿಜಾಬ್ ಪದ್ದತಿಯಿಂದ ಮುಸ್ಲಿಂ ಮಹಿಳೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ. ಜೊತೆಗೆ ಭಾರತೀಯ ಮೂಲ ಸ್ವಾತಂತ್ರ್ಯಗಳ ಜಾರಿಗೆ ಅಡ್ಡಿಯಾಗುತ್ತದೆ. ವೈಜ್ಞಾನಿಕ ನೆಲೆಘಟ್ಟಿನಲ್ಲಿ ಹೇಳುವುದಾದರೆ ಮಾನವರಿಗೆ ವಿಟಮಿನ್ ಡಿ, ವಿಟಮಿನ್ ಬಿ ಸೂರ್ಯನ ಬೆಳಕಿನಿಂದ ದೊರೆಯುತ್ತದೆ. ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಹೊರ ಸುತ್ತುವುದರಿಂದ ವಿಟಮಿನ್ ಡಿ ದೊರೆಯುವುದಿಲ್ಲ. ಇದೇ ರೀತಿ ಇಡೀ ದೇಹವನ್ನು ಬಟ್ಟೆಯಲ್ಲಿ ಮುಚ್ಚಿಕೊಂಡು ಬದುಕುವುದರಿಂದ ಮಾನಸಿಕ, ದೈಹಿಕ ಸ್ವಾತಂತ್ರ್ಯ ಕಳೆದುಕೊಂಡಂತೆ ಭಾಸವಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ದೈಹಿಕ ನ್ಯೂನ್ಯತೆಗಳು ಮತ್ತು ಕೆಲವು ಕಾಯಿಲೆಗಳು ಕಾಣಿಸಿಕೊಳ್ಳಬಹುದು ಮಾನಸಿಕವಾಗಿ ಹೆಣ್ಣು ಮಕ್ಕಳು ಕುಗ್ಗಿ ಹೋಗುವುದರ ಜೊತೆಗೆ ಬುದ್ದಿವಂತಿಕೆ ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಸರಿಯಾಗಿ ಭಾಗವಹಿಸದೇ ಭವಿಷ್ಯದ ಕನಸುಗಳನ್ನು ಕಾಣದೇ ಹತಾಶೆ ಮತ್ತು ಜಿಗುಪ್ಸೆಯಲ್ಲಿ ಬದುಕ ಬೇಕಾಗುತ್ತದೆ. ಕುಟುಂಬ ವ್ಯವಸ್ಥೆಯನ್ನು ಸೇರಿದಂತೆ ಸಮಾಜವನ್ನು ಅನುಮಾನಿಸುವ ಜೊತೆಗೆ ದ್ವೇಷದ ಭಾವನೆಯೊಂದಿಗೆ ಬದುಕಬೇಕಾಗುತ್ತದೆ. ಈ ರೀತಿಯ ಮಾನಸಿಕ ಅಲ್ಲೋಲ ಕಲ್ಲೋಲ ಹೊಂದಿರುವ ತಾಯಿಯಿಂದ ಹುಟ್ಟುವ ಮಗು ಮಾನಸಿಕ ಮತ್ತು ದೈಹಿಕವಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮ ಸೇರಿದಂತೆ ಹಲವಾರು ಧರ್ಮದಲ್ಲಿ ಆ ಧರ್ಮಗಳು ಹುಟ್ಟಿದ ಕಾಲಘಟ್ಟಕ್ಕೆ ಹೊಂದಿದಂತೆ ರೀತಿ ನೀತಿ ನಿಯಮ ಆಚರಣೆಗಳನ್ನು ಜಾರಿಗೆ ತಂದಿವೆ. ಆದರೆ ಕೆಲವು ಮತಾಂದರರು ಮೂಢ ನಂಬಿಕೆಗಳನ್ನು ಬಲವಂತವಾಗಿ ಜನರ ಮೇಲೆ ಹಾಕುತ್ತಿದ್ದಾರೆ. ಧರ್ಮಗಳ ಉಳಿವಿಗಾಗಿ ಒತ್ತಾಯ ಪೂರ್ವಕವಾಗಿ ವಿಧಿಸುವ ಆಚರಣೆಗಳಿಂದ ಮಾನವ ಧರ್ಮದ ನಾಶ ಮತ್ತು ಮನುಷ್ಯನ ವಿಕಾಸದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಭಾರತೀಯ ಸಂವಿಧಾನದ ಪ್ರಕಾರ ಸಮಾನತೆ ಅತ್ಯಂತ ಮಹತ್ವ ಪೂರ್ಣವಾಗಿದೆ. ಕಲಿಯುವ ಹಂತದಲ್ಲೇ ಸಮಾನತೆಯನ್ನು ತರಬೇಕಾದರೆ ಬಟ್ಟೆ ಮತ್ತು ಓದುವ ಪಾಠಗಳಲ್ಲಿ ಸಾಮರಸ್ಯ ಕೂಡಿದ ಸಮಾನತೆ ಇರಬೇಕು. ಕರೋನದಿಂದ 2 ವಷರ್ದದಿಂದ ಸತತವಾಗಿ ಶಿಕ್ಷಣ ವಂಚಿತ ವಿದ್ಯಾರ್ಥಿಗಳಲ್ಲಿ ಕೇಸರಿ ಮತ್ತು ಹಿಜಾಬ್‍ನ ಬೆಂಕಿ ಹಚ್ಚಿದರು ರಾಜಕಾರಣಿಗಳು ಅಂಧ ಮತಾಂದರರು ಆಗಿದ್ದಾರೆ. ಹಲವಾರು ವರ್ಷಗಳಿಂದ ಶಿಕ್ಷಣ ಪದ್ಧತಿಯಲ್ಲಿ ಹಿಜಾಬ್ ಹಾಕಿ ಬರುವವರು ಇದ್ದರೂ ಕೂಡ ಈಗಿನ ಪ್ರಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನಾರ್ಟಕ ಮತ್ತು ಭಾರತವನ್ನು ತಲೆತಗ್ಗಿಸುವಂತೆ ಮಾಡುತ್ತಿದೆ. ಕರ್ನಾಟಕ ಹೈ ಕೋರ್ಟಿನ ಮಧ್ಯಂತರ ಆದೇಶದ ಪ್ರಕಾರ ವಿದ್ಯಾರ್ಥಿಗಳು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಕೇಸರಿ ಶಾಲು ಮತ್ತು ಸ್ಕಾರ್ಪ್ ಹಿಜಾಬ್ ಧಾರ್ಮಿಕ ಧ್ವಜಗಳು ಅಥವಾ ಸಂಕೇತಗಳನ್ನು ಧರಿಸಿ ಶಾಲಾ ಕಾಲೇಜಿಗೆ ಬರುವುದನ್ನು ಮುಂದಿನ ಆದೇಶದವರೆಗೂ ನಿರ್ಬಂಧಿಸಲಾಗಿದೆ. ಈ ತೀರ್ಪಿನ ವಿರುದ್ಧ ಕೆಲವರು ಸುಪ್ರೀಂ ಕೋರ್ಟಿಗೆ ಹೋದಾಗಲೂ ಕೂಡ ಪ್ರಯೋಜನವಾಗಿಲ್ಲ. ಈ ಕರ್ನಾಟಕದ ಹಿಜಾಬ್ ಪ್ರಕರಣವು ಮಹಾರಾಷ್ಟ್ರ, ಪಶ್ಚಿಮಬಂಗಾಳ, ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಿಗೆ ವ್ಯಾಪಿಸಿದೆ. ಇನ್ನೂ ಕೆಲವು ದಲಿತಪರ ಸಂಘಟನೆಗಳು ಹಿಜಾಬ್ ಅನ್ನು ಬೆಂಬಲಿಸಿ ಹೋರಾಟ ನಡೆಸುತ್ತಿವೆ. ಸಂವಿಧಾನದ ಮೂಲ ಆಸೆಯ ಪ್ರಕಾರ ಮತ್ತು ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಆಧಾರದ ಮೇಲೆ ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡಬಾರದು ಮತ್ತು ಯಾವುದೇ ಧಾರ್ಮಿದ ಬಟ್ಟೆ ಅಥವಾ ಪದ್ಧತಿ ಅಂದರೆ ಹಿಜಾಬ್ ಧರಿಸುವುದು, ಪರದಾ ಹಾಕಿಕೊಳ್ಳುವುದು ಮತ್ತು ಕೇಸರಿ ಶಾಲುಗಳನ್ನು ಹಾಕಿಕೊಳ್ಳುವುದನ್ನು ನಿಷೇಧಿಸುವುದು ಉತ್ತಮ. ಇದರಿಂದ ಮಕ್ಕಳಲ್ಲಿ ಸಮಾನತೆ ಬೆಳೆಯುವುದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಕೆಟ್ಟ ಘಟನೆಗಳು ನಡೆಯುವುದಿಲ್ಲ ಹೇಗೆಂದರೆ ಹಿಜಾಬ್ ಹಾಕಿಕೊಂಡು ಓರ್ವ ಹುಡುಗಿಯ ಹೆಸರಿನಲ್ಲಿ ಉಗ್ರಗಾಮಿಯೋ, ಡ್ರಕ್ಸ್ ಮಾರುವವನೋ ಅಥವಾ ಇನ್ಯಾರೋ ಬರುವುದನ್ನು ತಪ್ಪಿಸಬಹುದು. ಮಾನವ ಧರ್ಮ, ಭಾರತೀಯ ಸಂವಿಧಾನ ಮತ್ತು ಮಕ್ಕಳಿಗೆ ಸಮಾನತೆಯ ಪಾಠ, ಭವಿಷ್ಯದ ದೃಷ್ಠಿಯಿಂದ ಶಿಕ್ಷಣದಲ್ಲಿ ಜಾತಿ ಧರ್ಮ ಆಚರಣೆಗಳನ್ನು ತರುವುದು ಬೇಡ.

ಈಶ್ವರಪ್ಪನ ದೇಶ ದ್ರೋಹಕ್ಕೆ : ಕಾಂಗ್ರೆಸ್ ತೆರಿಗೆ ಗುಳುಂ

ವಿಧಾನ ಸಭೆ ಮತ್ತು ವಿಧಾನ ಪರಿಷತ್ 2022ರ ಮೊದಲ ಅಧಿವೇಶನವು ಪ್ರಾರಂಭವಾಗುತ್ತಲೇ ಈಶ್ವರಪ್ಪನ ದೇಶ ದ್ರೋಹದ ಹೇಳಿಕೆಗಳು ತೀವ್ರ ಚರ್ಚೆಗೀಡಾದವು. “ಇನ್ನು ಕೆಲವೇ ದಿನಗಳಲ್ಲಿ ಕೆಂಪು ಕೋಟೆಯ ಮೇಲೆ ರಾಷ್ಟ್ರ ಧ್ವಜದ ಜೊತೆಗೆ ಕೇಸರಿ ಧ್ವಜವನ್ನು ಹಾರಿಸಲಾಗುತ್ತದೆ” ಎಂದು ಈಶ್ವರಪ್ಪ ಹೇಳಿರುವ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಪ್ರತಿಭಟನೆಯಿಂದ ಕರ್ನಾಟಕ ವಿಧಾನ ಸಭೆಯ ಕಲಾಪಗಳಿಗೆ ಅಡ್ಡಿಯಾಗಿ ಯಾವುದೇ ರೀತಿಯ ಮಹತ್ವದ ಚರ್ಚೆಗಳಿಗೆ ವಿರೋಧ ಪಕ್ಷ ಕಾಂಗ್ರೆಸ್ ಬಿಡದೇ ರಾಜ್ಯದ ತೆರಿಗೆ ಹಣವನ್ನು ಪೋಲುಮಾಡಿತ್ತಿದೆ. ಒಂದು ದಿನದ ಕಲಾಪಗಳು ನಡೆಯಲು ಶಾಸಕರ ಭತ್ಯೆ ಸೇರಿದಂತೆ ಊಟ-ತಿಂಡಿ, ವಸತಿಗೆ ಒಟ್ಟಾರೆಯಾಗಿ ಸರಿಸುಮಾರು 80 ಲಕ್ಷ ಖರ್ಚಾಗುತ್ತದೆ. ಈ 80 ಲಕ್ಷವು ಯಾವುದೇ ಪಕ್ಷಕ್ಕೆ ಸೇರಿದ ಹಣವಲ್ಲ. ಅದು ಸಾಮಾನ್ಯ ವ್ಯಕ್ತಿಯ ತೆರಿಗೆ ಹಣವಾಗಿರುತ್ತದೆ. ಬಿ.ಜೆ.ಪಿ ಪಕ್ಷದ ಪರವಾಗಿ ಹೇಳುವುದಾದರೆ ಬಸವರಾಜ್ ಯತ್ನಾಳ್ , ಈಶ್ವರಪ್ಪ ಆಗಾಗ ನಾಲಿಗೆಯನ್ನು ಹರಿಬಿಡುತ್ತಾರೆ. ಆದರೆ ಈ ಹಿಂದಿನ ಹೇಳಿಕೆಯನ್ನು ಮುಖ್ಯಮಂತ್ರಿ ಸೇರಿದಂತೆ ಬಿ.ಜೆ.ಪಿಯ ಎಲ್ಲಾ ಶಾಸಕರು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಕಾನೂನಿನ ವ್ಯಾಖ್ಯಾನಗಳನ್ನು ಮಾಡುವಾಗ ಈ ಹೇಳಿಕೆಯು ಅತ್ಯಂತ ಸೂಕ್ಷ್ಮವಾಗಿದ್ದು ರಾಷ್ಟ್ರಧ್ವಜಕ್ಕೆ ಅವಮಾನ ಮತ್ತು ಗೌರವಗಳೊಂದಿಗೆ ಸಂವಿಧಾನದಲ್ಲಿ ಸಾಕಷ್ಟು ಉಲ್ಲೇಖಗಳಿದ್ದರೂ ಕೂಡ ರಾಷ್ಟ್ರಧ್ವಜದ ಜೊತೆಗೆ ಇನ್ನೊಂದು ಧ್ವಜವನ್ನು ಏರಿಸುತ್ತೇನೆ ಎಂಬುದಕ್ಕೆ ಸ್ಪಷ್ಟ ನಿರ್ದೇಶನಗಳಿಲ್ಲ. ಆದರೂ ಕೂಡ ತ್ರಿವರ್ಣ ಧ್ವಜದ ಜೊತೆಗೆ ಅದರ ಪಕ್ಕದಲ್ಲಿಯೇ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಇನ್ನೊಂದು ಧ್ವಜವನ್ನು ಏರಿಸುವುದು ದೇಶ ದ್ರೋಹದ ಕೆಲಸವಾಗುತ್ತದೆ. ಅದಕ್ಕೆ ಕಾನೂನಿನಲ್ಲಿ ತಕ್ಕ ಶಿಕ್ಷೆಯುಂಟು. ಆದರೆ ಈಶ್ವರಪ್ಪನ ಹೇಳಿಕೆಯಲ್ಲಿ ಈ ಸ್ಪಷ್ಟತೆಯಿಲ್ಲದಿರುವುದರಿಂದ ದೇಶ ದ್ರೋಹದ ಕಾನೂನಿನಡಿ ಶಿಕ್ಷೇ ನೀಡಲು ಸಾಧ್ಯವೇ? ಈ ಹೇಳಿಕೆಯನ್ನು ವಿಧಾನ ಸಭೆಯ ಹೊರಗಡೆ ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ಪ್ರಬುದ್ಧತೆಯನ್ನು ಮೆರೆಯಬೇಕಾಗಿತ್ತು ಆದರೂ ಕೂಡ ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಈಶ್ವರಪ್ಪ ಒಬ್ಬನನ್ನು ಹಿಡಿದುಕೊಂಡು ಪ್ರತಿಭಟನೆಯ ಹೆಸರಿನಲ್ಲಿ ಕಲಾಪಗಳಲ್ಲಿ ನಡೆಯ ಬೇಕಾದ ಚರ್ಚೆಗಳು ಮತ್ತು ನಿಡುವಳಿಗಳು ಮತ್ತು ಅಂಗೀಕಾರಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಕಾಂಗ್ರೆಸ್‍ನ ಶಾಸಕರು ಮೊದಲು ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡಬೇಕು. ರಾಜ್ಯದಲ್ಲಿ ಹಿಜಾಬ್ ಕೇಸರಿ ಕದನವು ಶಾಂತಿಯನ್ನು ಕದಲುತ್ತಿದೆ. ರಾಜ್ಯ ವ್ಯಾಪ್ತಿ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರವು ಸೋತಿದೆ. ಕೋವಿಡ್ ಸಮಸ್ಯೆ, ನಿರುದ್ಯೋಗ, ಶಾಲಾ-ಕಾಲೇಜುಗಳ ಸಮಸ್ಯೆಗಳು ಹೀಗೆ ಹತ್ತಾರು ಸಮಸ್ಯೆಗಳಿರುವಾಗ ಈಶ್ವರಪ್ಪನ ಒಂದು ಹೇಳಿಕೆಯನ್ನು ದೊಡ್ಡದು ಮಾಡಿಕೊಂಡು ನಾಲ್ಕೈದು ದಿನ ಕಲಾಪಗಳನ್ನು ಅಡ್ಡಿಪಡಿಸುವುದು ಯಾವ ನ್ಯಾಯ? ಒಂದು ದಿನಕ್ಕೆ 80 ಲಕ್ಷ ಖರ್ಚಾಗುತ್ತದೆ ಎಂದರೆ 5 ದಿನಕ್ಕೆ 4 ಕೋಟಿ ಆಗುತ್ತದೆ. ಇದು ಯಾರಪ್ಪನ ದುಡ್ಡು? ಕಾನೂನಿನ ಪದವಿ ಓದಿದ ಸಿದ್ದರಾಮಯ್ಯಗೆ ಇಷ್ಟು ಜ್ಞಾನವಿಲ್ಲವೇ? ಡಿ.ಕೆ.ಶಿಯ ಮಾತಿಗೆ ನಿಂತು ಸಿದ್ದರಾಮಯ್ಯ ರಾಜಕೀಯ ನೈತಿಕತೆಯನ್ನು ಕಳೆದುಕೊಂಡರೆ ಈಶ್ವರಪ್ಪನ ಹೇಳಿಕೆಯನ್ನು ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿ ರಾಜ್ಯದ ಹಿತಕ್ಕಾಗಿ ಕಾಂಗ್ರೆಸ್‍ವು ಪ್ರತಿಭಟನೆ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಪ್ರತಿಭಟನೆಯನ್ನು ನಿಲ್ಲಿಸದಿದ್ದರೆ ಸ್ಪೀಕರ್ ಆದ ಖಾಗೇರಿಯವರಿಗೆ ಕಲಾಪಗಳನ್ನು ಅನಿರ್ಧಿಷ್ಟ ಅವಧಿಗೆ ಮುಂದೂಡಲು ಸೂಚಿಸಿದ್ದಾರೆ. ಕಾಂಗ್ರೆಸ್‍ನ ಹೋರಾಟವನ್ನು ಚಿಕ್ಕ ಮಕ್ಕಳು ಮತ್ತು ಬುದ್ಧಿ ಹೇಡಿಗಳು ಮಾಡುವ ಹೋರಾಟ ಎನ್ನಬಹುದು. ಭವಿಷ್ಯದಲ್ಲಿ ಇದರಿಂದ ಕಾಂಗ್ರೆಸ್‍ಗೆ ಏನು ದೊಡ್ಡ ಪ್ರಯೋಜನವಾಗುವುದಿಲ್ಲ. ಇಂತಹ ಸಿಲ್ಲಿ ಹೋರಾಟಗಳನ್ನು ಬಿಟ್ಟು ಪ್ರಭುತ್ವ ಪಕ್ಷದಂತೆ ಮತ್ತು ಪ್ರಬುದ್ಧ ವಿಚಾರಗಳತ್ತ ಕಾಂಗ್ರೆಸ್ ಪಕ್ಷವು ಪ್ರಯತ್ನಿಸಬೇಕು. ಕಾಂಗ್ರೆಸ್ ನಡೆಯನ್ನು ರಾಜ್ಯವು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಹತ್ತಾರು ಪ್ರಮುಖ ಸಮಸ್ಯೆಗಳಿದ್ದರು ಒಂದು ಸಣ್ಣ ವಿಚಾರಕ್ಕೆ ದೊಡ್ಡ ಮಟ್ಟದ ಹೋರಾಟ ಮಾಡುತ್ತಿರುವುದು ಅತ್ಯಂತ ಕೀಳು ಮಟ್ಟದ ವಿಚಾರವಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಹೋರಾಟದ ಕುರಿತು ಕರ್ನಾಟಕ ಜನತೆಗೆ ಸರಿಯಾದ ಉತ್ತರ ಕೊಡುವುದರ ಜೊತೆಗೆ ತಕ್ಷಣ ಕಲಾಪದಲ್ಲಿ ಹೋರಾಟ ಮಾಡುವುದನ್ನು ಬಿಟ್ಟು ಬೇರೆ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಜನರಿಗೆ ಸರ್ಕಾರದತ್ತ ಇನ್ನಷ್ಟು ಉತ್ತಮವಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು.

ಕ್ಷಮಿಸು ಬಿಡು ನವೀನಾ ! ನಿನ್ನ ಸಾವಿಗೆ ನಾವೇ ಕಾರಣ !

ಕರ್ನಾಟಕ ಮೂಲದ ನವೀನ ಶೇಖರಪ್ಪ ಗ್ಯಾನಗೌಡರ ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಿಗೇರಿಯ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ರಷ್ಯಾ ಉಕ್ರೇನ್ ಯುದ್ದದ ಸಂಧÀರ್ಭದಲ್ಲಿ ಹತ್ಯೆಯಾಗಿರುವ ಈತ ಅತ್ಯಂತ ಬುದ್ದಿವಂತ 10ನೇ ವಯಸ್ಸಿನಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆದರ್ಶ ಶಾಲೆ ಸೇರಿದ. ನವೀನನ ತಂದೆ ಶೇಕರಪ್ಪ ಸೌತ್ ಇಂಡಿಯಾ ಪೇಪರ್ ಮಿಲ್‍ನ ವೆಹಿಕಲ್ ಮೆಂಟೇನೆನ್ಸ್ ವಿಭಾಗದಲ್ಲಿ ನಂಜನಗೂಡಿನಲ್ಲಿ ಕೆಲಸ ಮಾಡುತ್ತಿದ್ದರು. ಈ ಕಾರಣ ಮತ್ತು ಮಗನ ಬುದ್ದಿವಂತಿಕೆಯಿಂದ ನಂಜನಗೂಡಿನ ಆದರ್ಶ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯ ವರೆಗೆ ವ್ಯಾಸಂಗ ಮಾಡಿದ್ದಾನೆ. ಎಸ್.ಎಸ್.ಎಲ್.ಸಿ ಯಲ್ಲಿ 625 ಅಂಕಗಳಿಗೆ 604 ಅಂಕಗಳನ್ನು ಪಡೆದು ಆದರ್ಶ ಶಾಲೆಗೆ ಮೊದಲಿಗರಾಗಿ ಉತ್ತೀರ್ಣರಾಗಿದ್ದಾರೆ. ನಂತರ ಮೈಸೂರಿನ ಯೂನಿಟಿ ಕಾಲೇಜಿಗೆ ಸೇರಿ ಪಿ.ಯು.ಸಿ ವಿಜಾÐನ ವಿಭಾಗದಲ್ಲಿ ಶೇ.92.2% ರಷ್ಟು ಪ್ರತಿಶತ ಪಡೆದರೂ ಸಹ ಕರ್ನಾಟಕ ಸೇರಿದಂತೆ ಭಾರತದಲ್ಲಿ ಮೆಡಿಕಲ್ ಸೀಟ್ ಸಿಗಲಿಲ್ಲ ಬುದ್ದಿವಂತ ಮಗನ ಕನಸು ನನಸಾಗಿಸುವ ಪ್ರಯತ್ನದಲ್ಲಿ ತಂದೆ ಕಷ್ಟಪಟ್ಟು ಉಕ್ರೆನ್ ದೇಶದಲ್ಲಿ ವೈದ್ಯಕೀಯ ಕೋರ್ಸನ್ನು ಓದಿಸುತ್ತಿದ್ದರು. ಉಕ್ರೆನ್ ಮೆಡಿಕಲ್ ಕಾಲೇಜಿನಲ್ಲೂ ನವೀನ ತುಂಬಾ ಕ್ರಿಯಾಶೀಲವಾಗಿ ಓದುತ್ತಿದ್ದು ಕನ್ನಡದ ಅಭಿಮಾನವನ್ನು ಮೆರೆದಿದ್ದ. ಆದರೆ ಮೊನ್ನೆ ರಷ್ಯಾದ ಶೆಲ್ ದಾಳಿಗೆ ಬಲಿಯಾಗಿದ್ದಾನೆ. ತನಗೆ ಮತ್ತು ತನ್ನ ಗೆಳೆಯರಿಗಾಗಿ ಊಟ ಮತ್ತು ದಿನಸಿ ತರಲು ಹೋಗಿ ರಷ್ಯಾದ ಸೈನ್ಯಕ್ಕೆ ಬಲಿಯಾಗಿದ್ದಾನೆ. ನವೀನ್ ಮತ್ತು ಚಂದನ್ ಜಿಂದಾಲ್ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ವಿದೇಶಿಯ ಅದೆಷ್ಟೋ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಸಾವು ನೋವುಗಳ ಮಧ್ಯೆ ಆ ಎಲ್ಲಾ ಸಾವುಗಳಿಗೆ ಯಾರು ಹೊಣೆಯೆಂದು ಕೇಳಿದರೆ ತಕ್ಷಣ ಉತ್ತರಿಸುತ್ತೇವೆ. ರಷ್ಯಾ ಮತ್ತು ಉಕ್ರೇನ್ ಎಂದು ಇಂದಿನ ಭಾರತ ವಿದೇಶಾಂಗ ನೀತಿಗಳ ಮತ್ತು ಭಾರತವು ಈಗ ವಿಶ್ವದ ಗುರು ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಧ್ವಜ ಒಂದು ಉಕ್ರೆನ್‍ನಲ್ಲಿ ವಾಸವಿರುವ ಭಾರತೀಯರ ಜೀವ ಉಳಿಸುವುದರ ಜೊತೆಗೆ ವಿದೇಶಿಯರ ಜೀವ ಉಳಿಸಿರುವ ಹೆಮ್ಮೆ ನಮಗಿದೆ. ಉಕ್ರೆನ್‍ನಿಂದ ಮರುಳುತ್ತಿರುವ ಹಲವಾರು ವಿದ್ಯಾರ್ಥಿಗಳು ಮತ್ತು ನಾಗರೀಕರು ಆಫ್ರೆಷನ್ ಗಂಗಾ ಕಾರ್ಯಕ್ರಮವನ್ನು ಹಾಡಿ ಹೊಗಳುತ್ತಿದ್ದಾರೆ. ಏರ್ ಇಂಡಿಯಾ ವಿಮಾನಗಳ ಜೊತೆಗೆ ಸ್ಪೈಸ್ ಜೆಟ್ ಕೂಡ ಕೈ ಜೋಡಿಸಿ ನಮ್ಮ ವಾಯು ಸೇನೆಯ ಬಲವನ್ನು ಹೆಚ್ಚಿಸಿವೆ. ಹಲವಾರು ಪ್ರಯತ್ನಗಳಿಂದ ಭಾರತೀಯರನ್ನು ರಕ್ಷಿಸುವ ಪ್ರಯತ್ನವನ್ನು ಭಾರತ ಸರ್ಕಾರವು ಪ್ರಮಾಣಿಕವಾಗಿ ಮಾಡುತ್ತಿವೆ. ಆದರೆ ಕೆಲವು ವಿರೋದಿಗಳು ಜ್ಞಾನವಿಲ್ಲದೆ ಉಕ್ರೆನಿಗೆ ಹೋದ ವಿದ್ಯಾರ್ಥಿಗಳು ಬಾಯಿಗೆ ಬಂದಂತೆ ದೇಶದ ವ್ಯವಸ್ಥೆಯನ್ನು ಬೈಯುತ್ತಿದ್ದಾರೆ. ಹಣದ ಮದದಿಂದ ಮತ್ತು ಎನ್.ಇ.ಇ.ಟಿ ಪರೀಕ್ಷೆಯನ್ನು ಪಾಸಾಗದ ಅಯೋಗ್ಯರಿಂದ ಅಂತಹ ಮಾತುಗಳು ಕೇಳಿ ಬರುವುದು ಸಾಮಾನ್ಯ ಯುದ್ಧದ ಸಂಧರ್ಭದಲ್ಲಿ ವಿದೇಶಾಂಗ ನೀತಿಗಳು 2 ಬೇರೆ ಬೇರೆ ದೇಶಗಳ ನಡುವೆ ನಡೆಯುವ ಯುದ್ಧದ ಸಂಧರ್ಭದಲ್ಲಿ ಇನ್ನೊಂದು ದೇಶದ ನಾಗರೀಕರ ರಕ್ಷಣೆಯ ಹೊಣೆ ಮತ್ತು ಅಂತರ ರಾಷ್ರ್ಟೀಯ ನಿಯಮ ನಿಭಂದನೆಗಳು ಗೊತ್ತಿಲ್ಲದ ಶಿಕ್ಷಣ ಪಡೆದ ಅಜ್ಞಾನಿಗಳಿಂದ ಇಂತಹ ಕೀಳು ಮಟ್ಟದ ಮಾತುಗಳು ಕೇಳಿ ಬರುವುದು ಸಾಮಾನ್ಯ ಅದರಲ್ಲಿ ಒಬ್ಬ ವಿದ್ಯಾರ್ಥಿ ಹೇಳುತ್ತಾನೆ ತಿನ್ನಲು ಅನ್ನ, ನೀರು ಸಿಗಲಿಲ್ಲ ಎಂದು ಯುದ್ಧದ ಸಂಧರ್ಭದಲ್ಲಿ ಸೈನಿಕರು ಸೇರಿದಂತೆ ನಾಗರೀಕರಿಗೆ ಅದೆಷ್ಟೋ ತೊಂದರೆಗಳಾಗಿರುತ್ತವೆ. ಆತ ಮುಂದುವರೆದು ಹೇಳುತ್ತಾನೆ ಭಾರತೀಯ ಸೈನ್ಯವು ನಮ್ಮನ್ನು ರಕ್ಷಿಸಲು ದೇಶದ ಒಳಗಡೆ ಬರಲಿಲ್ಲ ನಾವೇ ಗಡಿವರೆಗೆ ಬರಬೇಕಾಯಿತು ಎರಡು ದೇಶಗಳ ಯುದ್ಧದ ಮಧ್ಯೆ ಇನ್ನೊಂದು ದೇಶದ ಸೈನಿಕರು ಬರುವುದು ಅತಿಕ್ರಮಣವಾಗುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲ ಇಂತಹ ಹಲವಾರು ದೇಶ ಬಿಟ್ಟು ಓದಲು ಹೋದ ವಿದ್ಯಾರ್ಥಿಗಳ ಮಧ್ಯೆಯೇ ಕನ್ನಡ ಮತ್ತು ದೇಶದ ಅಭಿಮಾನ ಹೊಂದಿದ ನವೀನನ ವಿಚಾರವೇ ಬೇರೆ ನವೀನನ ತಂದೆಗೆ ಪ್ರಧಾನಿ ಮೋದಿಯವರೇ ಕರೆ ಮಾಡಿ ಸಾಂತ್ವಾನ ಹೇಳಿದರೂ ಕೂಡ ನವೀನನ ಆತ್ಮಕ್ಕೆ ಮುಕ್ತಿ ಸಿಗುವುದೇ ಡೌಟ್ ! ಏಕೆಂದರೆ ನವೀನನ ತಂದೆಯ ಒಂದು ಹೇಳಿಕೆಯು ದೇಶದ ವ್ಯವಸ್ಥೆಯನ್ನು ಮುಟ್ಟಿ ನೋಡಿಕೊಳ್ಳುವಂತಿದೆ “ಮಗ ನವೀನ್‍ಗೆ ಮೀಸಲಾತಿಯಿಂದ ಇಲ್ಲಿ ಸೀಟ್ ಸಿಗಲಿಲ್ಲ. ಇದು ಅತ್ಯಂತ ಬೇಸರದ ವಿಷಯ ಪ್ರತಿಭೆಯಿರುವ ಬಡ ವಿದ್ಯಾರ್ಥಿಗಳಿಗೆ ದೇಶದ ಅವಕಾಶಗಳಲ್ಲಿ ಅಷ್ಟು ಅಂಕ ಪಡೆದರು ಸರ್ಕಾರದ ಮೀಸಲಾತಿ ಮತ್ತು ನಿಯಮಗಳಿಂದ ನನ್ನ ಮಗನಿಗೆ ಮೆಡಿಕಲ್ ಸೀಟ್ ಸಿಗಲಿಲ್ಲ ಮತ್ತು ದೇಶದಲ್ಲಿ ಖಾಸಗಿಯಾಗಿ ಮೆಡಿಕಲ್ ಓದ ಬೇಕಾದರೆ 1.5 ಕೋಟಿ ಯಿಂದ 2 ಕೋಟಿ ಹಣ ಬೇಕಾಗುತ್ತದೆ. ಅಭಿವೃದ್ಧಿ ಶೀ¯ ದೇಶದಲ್ಲಿ ಇಷ್ಟು ಖರ್ಚಾದರೆ ನಮ್ಮಂತಹ ಬಡವರು ಓದಿಸುವುದು ಹೇಗೆ? ಉಕ್ರೆನ್ ನಂತಹ ಸಣ್ಣ ರಾಷ್ರ್ಟಗಳಲ್ಲಿ 25ರಿಂದ 30 ಲಕ್ಷಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಬಹುದು. ನಮ್ಮ ದೇಶದ ಸರ್ಕಾರ ಮತ್ತು ವ್ಯವಸ್ಥೆ ಮೊದಲು ಬದಲಾಗಬೇಕು.” ಎಂಬ ಹೇಳಿಕೆಯು ಭಾರತದ ವ್ಯವಸ್ಥೆಯನ್ನು ಮತ್ತೊಮ್ಮೆ ಮುಟ್ಟಿ ನೋಡಿಕೊಳ್ಳಬೇಕಾದ ಹಂತಕ್ಕೆ ಬಂದು ನಿಂತಿದೆ. ನವೀನನ ಸಾವಿನಲ್ಲಿಯೂ ರಾಜಕೀಯ ಮಾಡುತ್ತಿರುವ ದೇಶದ ರಾಜಕೀಯ ವ್ಯವಸ್ಥೆಯು ಒಂದು ಸಾರಿ ತಲೆ ತಗ್ಗಿಸಿ ನಿಲ್ಲಬೇಕು. ಸಿದ್ದರಾಮಯ್ಯ ಹೇಳುವಂತೆ ನವೀನನ ಸಾವಿಗೆ ಕೇಂದ್ರ ಸರ್ಕಾರವೇ ಕಾರಣ. ಇತ್ತ ಯು.ಟಿ ಖಾದರ ಹೇಳುತ್ತಾರೆ ನವೀನ ಶಿಕ್ಷಣದ ಖರ್ಚನ್ನು ಮರಳಿ ಕೊಡಬೇಕು. ಡಿ.ಕೆ.ಶಿವಕುಮಾರ ಹೇಳುತ್ತಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷದಿಂದ ನೂರಾರು ಕನ್ನಡಿಗರು ಸಂಕಷ್ಟದಲ್ಲಿದ್ದಾರೆ. ಬಿ.ಜೆ.ಪಿ ಯ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಪ್ರಕಾರ ಭಾರತೀಯರನ್ನು ಉಕ್ರೆನ್‍ನಿಂದ ಕರೆತರುವಲ್ಲಿ ಮೋದಿ ಸರ್ಕಾರವು ಯಶಸ್ವಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬನವರಾಜ್ ಬೊಮ್ಮಾಯಿಯವರು ಹೇಳುತ್ತಾರೆ ಮೃತ ದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮಾಡಲಾಗುತ್ತಿದೆ. ಇತ್ತ ಹೆಚ್.ಡಿ.ಕುಮಾರಸ್ವಾಮಿಯವರ ಒಂದು ವಿಚಾರವು ಗಮನಾರ್ಹ ಚರ್ಚೆಗೆ ಒಳಗಾಗಿದೆ. ಕೇಂದ್ರ ಸರ್ಕಾರವನ್ನು ಆಪಾಧನೆ ಮಾಡುತ್ತಾ ಉಕ್ರೆನ್ ಭಾರತೀಯ ರಾಯಭಾರಿ ಕಛೇರಿ ಸೂಕ್ತವಾಗಿ ಸ್ಪಂಧಿಸುತ್ತಿಲ್ಲ ಎಂಬ ಆಪಾಧನೆಯನ್ನು ಕೂಡ ಮಾಡುತ್ತಾರೆ. ಜೊತೆಗೆ ಹೆಚ್.ಡಿ.ಕುಮಾರಸ್ವಾಮಿಯವರು ಎನ್.ಇ.ಇ.ಟಿ ಪರೀಕ್ಷೆಯಿಂದ ನವೀನ್‍ಗೆ ರಾಜ್ಯದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗದೆ ಪ್ರತಿಭಾವಂತನನ್ನು ಕಳೆದು ಕೊಂಡಿದ್ದೇವೆ.
“ಅಭ್ಯರ್ಥಿಯು ಜಿ.ಎಮ್.ಎ.ಟಿ ಅಥವಾ ಜಿ.ಆರ್.ಇ ನಲ್ಲಿ 97% ಸ್ಕೋರ್ ಮಾಡಬೇಕಾದರೆ ಅವನು ಬೇರೆ ಯಾವುದಾದರೂ ದೇಶದಲ್ಲಿದ್ದರೆ ಅವನು ಹಾವರ್ಡ್ ಅಥವಾ ಸ್ಕ್ಯಾನ್ ಪೋರ್ಡ್‍ನಲ್ಲಿ ಸಂಪೂರ್ಣ ಅನುದಾನಿತ ವಿದ್ಯಾರ್ಥಿ ವೇತನದಲ್ಲಿ ಓದಬಹುದು ಆದರೆ ದುಃಖದ ಸಂಗತಿಯೆಂದರೆ ನವೀನ್ ಮೆರಿಟ್‍ನಲ್ಲಿ ಭಾರತದಲ್ಲಿ ವೈದ್ಯಕೀಯ ಸೀಟು ಪಡೆಯಲು ಸಾಧ್ಯವಾಗಲಿಲ್ಲ” ಐ.ಪಿ.ಎಸ್ ಅಧಿಕಾರಿ ಕಾರ್ತೀಕೇಯ.ಜಿ. ಟ್ವಿಟ್ ಮಾಡುವ ಮೂಲಕ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇನ್ನು ಉಕ್ರೆನ್‍ನಿಂದ ಜೀವಂತ ಇರುವವರನ್ನೆ ಕರೆತರುವುದು ಕಷ್ಟ ಇಂತಹದರಲ್ಲಿ ಮೃತ ದೇಹವನ್ನು ತರುವುದು ಇನ್ನೂ ಕಷ್ಟ ನವೀನ್ ಮೃತ ದೇಹ ತರುವ ಜಾಗದಲ್ಲಿ 10 ಮಂದಿಯನ್ನು ಕರೆತರಬಹುದು ಎಂದು ಶಾಸಕ ಅರವಿಂದ್ ಬೆಲ್ಲದ್ ಬೇಜಾವಾಬ್ದಾರಿ ಹೇಳಿಕೆಯಿಂದ ರಾಜಕಾರಣಿಗಳ ಬುದ್ದಿ ಪ್ರಬುದ್ದತೆ ಪಡೆದಿಲ್ಲ ಎಂಬ ವಿಚಾರವಾದವನ್ನು ಮತ್ತೊಮ್ಮೆ ಸಾಬೀತು ಪಡೆಸಿದ್ದಾರೆ. ಬೇರೆಯವರಿಗಿಂತ ನವೀನನ ವಿಚಾರವನ್ನಿಟ್ಟುಕೊಂಡು ಇಷ್ಟೊಂದು ವಿಶ್ಲೇಷಣೆ ಮಾಡಲು ಕಾರಣ ನವೀನನ ದೇಹವನ್ನು ರಷ್ಯಾ ಸೈನಿಕರು ಉಕ್ರೆನ್‍ನಲ್ಲಿ ಹತ್ಯೆ ಮಾಡಿರಬಹುದು ಆದರೆ ನವೀನ ನಂತಹ ಮೆಲ್ವರ್ಗದ ಪ್ರತಿಭಾವಂತನ ಕನಸುಗಳನ್ನು ಈ ದೇಶದ ವ್ಯವಸ್ಥೆ ಹತ್ಯೆ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಾಗಲೂ ಜಾತಿ, ಧರ್ಮ, ಭಾಷೆಯ ಆಧಾರದಲ್ಲಿ ಮೀಸಲಾತಿ ನೀಡುವುದು ಎಷ್ಟು ಸರಿ? ಈ ದೇಶದ ಪಾರ್ಲಿಮೆಂಟ್ ಇತಿಹಾಸದಲ್ಲಿ ಜನ ಪ್ರತಿನಿಧಿಯ ಕಾಯ್ದೆಗಳು ಸಂಬಳ ಹೆಚ್ಚಳ ಮತ್ತು ಜಾತಿ ಮೀಸಲಾತಿಯ ಕಾಯ್ದೆಗಳು ಯಾವುದೇ ವಿರೋಧವಿಲ್ಲದೆ ಅಂಗೀಕಾರ ಗೊಳ್ಳುತ್ತಿರುವುದೇ ದುರಂತ ಒಂದು ದೇಶದ ಸ್ವಾತಂತ್ರ್ಯ ಅಥವಾ ಹುಟ್ಟು ಅಥವಾ ಸ್ವಂತ ವ್ಯವಸ್ಥೆಯಲ್ಲಿ ಆಡಳಿತ ಮಾಡಿ 75 ವರ್ಷಗಳು ಕಳೆದರೂ ಹಿಂದುಳಿದವರನ್ನು ಅಲ್ಪಸಂಖ್ಯಾತರನ್ನು ಮತ್ತು ಹಿಂದುಳಿದ ಜಾತಿಯನ್ನು ಸುಧಾರಿಸಲು ಆಗಿಲ್ಲ ಅಂದರೆ ನಾಚಿಕೆಯಾಗಬೇಕು. ಒಬ್ಬ ಮನುಷ್ಯನ ಸಾಮಾನ್ಯ ಆಯುಷ್ಯವೇ 60 ವರ್ಷ ಆಗಿರುವುದರಿಂದ ಆದರೆ 75 ವರ್ಷ ಕಳೆದ ಬಾರತದಲ್ಲಿ ಮೀಸಲಾತಿ ಪದ್ದತಿಗಳು ಇನ್ನೂ ಜೀವಂತವಾಗಿಟ್ಟಿದ್ದೇವೆ ಎಂದರೆ 5-6 ದಶಕಗಳ ವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಆತ್ಮ ಸಾಕ್ಷಿ ಅನ್ನುವುದೇ ಇಲ್ಲವೇ. ಕಾಂಗ್ರೆಸ್ ಮತ್ತು ಬಿ.ಜೆ.ಪಿ ಸೇರಿದಂತೆ ಈ ದೇಶವನ್ನಾಳುತ್ತಿರುವ ಪಕ್ಷಗಳು ಮತ್ತು ರಾಜಕಾರಣೀಗಳು ಆತ್ಮ ಸಾಕ್ಷಿಯನ್ನೊಮ್ಮೆ ಮುಟ್ಟಿ ನೋಡಿಕೊಳ್ಳಬೇಕು. ಹಿಂದುಳಿದವರ ಮತ್ತು ಅಲ್ಪ ಸಂಖ್ಯಾತರ ಹೆಸರಿನಲ್ಲಿ ಪ್ರತಿಭಾವಂತರಿಗೆ ಮೋಸ ಮಾಡುತ್ತಿದ್ದೀರಿ ಜೊತೆಗೆ ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೂ ಮೋಸ ಮಾಡುತ್ತಿದ್ದೀರಿ ಏಕೆಂದರೆ ಸ್ಪರ್ಧೆಯಿದ್ದರೆ ಮಾತ್ರ ಗೆಲುವು ಮತ್ತು ಸಂತೋಷ ಸಾಧ್ಯ ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರನ್ನು ಮಾನಸಿಕವಾಗಿ ತುಳಿಯುತ್ತಿದ್ದೀರಿ. ಮತ್ತು ಪ್ರತಿಭಾವಂತರನ್ನ ಹತ್ಯೆ ಮಾಡುತ್ತಿದ್ದೀರಿ. ಹಾಗಾದರೇ ಇದೇ ಸತ್ಯವಲ್ಲವೇ ನವೀನನ ಸಾವಿಗೆ ನಾವೇ ಅಂದರೆ ನಮ್ಮ ವ್ಯವಸ್ಥೆಯೇ ಕಾರಣ ಆತನನ್ನು ರಷ್ಯಾ ಸೈನಿಕರು ದೈಹಿಕವಾಗಿ ಕೊಂದರೆ ನಾವು ಮಾನಸಿಕವಾಗಿ ಕನಸುಗಳನ್ನು ಕೊಂದಿಲ್ಲವೇ ಇಂತಹ ಅನಿಷ್ಟ ಪದ್ಧತಿಗಳನ್ನು ನೀರು ಗೊಬ್ಬರ ಹಾಕಿ ಬೆಳೆಸುತ್ತಿರುವ ರಾಜಕಾರಣಿಗಳನ್ನು ಮತ್ತು ರಾಜಕೀಯ ವ್ಯವಸ್ತೆಯನ್ನು ಬೆಂಬಲಿಸಿವುದೂ ಕೂಡ ಅಪರಾಧವಲ್ಲವೇ? ನವೀನನ ಕನಸುಗಳ ಹತ್ಯೆಯೊಂದಿಗೆ ನಮ್ಮ ವ್ಯವಸ್ಥೆಯ ದುರಂತವು ಕಣ್ಣು ಮುಂದೆ ಬರುತ್ತದೆ. ಇನ್ನು ಎಷ್ಟು ದಿನ ಸಹಿಸಿಕೊಳ್ಳುತ್ತೀರಿ?

ತಮಿಳುನಾಡಿನ ಜಲಧಾಹ ನೀಗುವುದು ಯಾವಾಗ ?

ಕರ್ನಾಟಕ ಮತ್ತು ತಮಿಳುನಾಡು ಎನ್ನುತ್ತಲೇ ಪ್ರತಿಯೊಬ್ಬರಿಗೂ ನೆನಪಾಗುವುದು ಕಾವೇರಿ ನದಿ ಸಮಸ್ಯೆ. ಇದಕ್ಕೆ ಪ್ರಮುಖ ಕಾರಣ ಹಲವು ವರ್ಷಗಳಿಂದ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಕಾವೇರಿಯ ವಿಚಾರವಾಗಿ ಗಲಾಟೆಗಳು ಹೋರಾಟಗಳು ನಡೆಯುತ್ತಲೇ ಬಂದಿವೆ. ಇದರ ಮಧ್ಯೆ ಕರ್ನಾಟಕ ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆಯು ಗಮನ ಸೆಳೆಯಿತು. ಏಕೆಂದರೆ ಕರ್ನಾಟಕ ಸರ್ಕಾರ ಕುಡಿಯುವ ನೀರಿಗಾಗಿ ರಾಮನಗರದ ಮೇಕೆದಾಟು ಎಂಬಲ್ಲಿ ಕಿರು ಅಣೆಕಟ್ಟು ಕಟ್ಟಿ ಬೆಂಗಳೂರಿಗೆ ಕುಡಿಯುವ ನೀರು ಮತ್ತು ಜಲವಿದ್ಯುತ್ ಉತ್ಪಾದಿಸಲು ಯೋಜನೆಯೊಂದನ್ನು ರೂಪಿಸಿಕೊಂಡು ಕೇಂದ್ರ ಜ¯ಸಂಪನ್ಮೂಲ ಇಲಾಖೆಯ ಒಪ್ಪಿಗೆಯನ್ನು ಪಡೆದಾಗ ತಮಿಳುನಾಡಿನ ರಾಜಕಾರಣಿಗಳಿಗೆ ಉರಿ ಹತ್ತಿಕೊಂಡಿತು. ಇದುವರೆಗೆ ತಮಿಳುನಾಡು ಕಾವೇರಿ ನೀರನ್ನು ಬಳಸಿಕೊಂಡಿರುವುದಕ್ಕಿಂತ ರಾಜಕೀಯ ಲಾಭವನ್ನು ಪಡೆದಿದೆ ಎನ್ನಬಹುದು. ಜಯಲಲಿತ ತನ್ನ ರಾಜಕೀಯ ಜೀವನದುದ್ದಕ್ಕೂ ಕಾವೇರಿಯ ಹೆಸರಲ್ಲೇ ರಾಜಕೀಯ ಮಾಡಿ ಕಾವೇರಿ ನದಿಯ ಪ್ರದೇಶಗಳಲ್ಲಿ ಗೆದ್ದಿದ್ದಾಳೆ ಎನ್ನಬಹುದು. ಇದರ ಹಿಂದೆ ರಾಜಕೀಯ ಹುನ್ನಾರಗಳಿವೆಯೇ ಹೊರತು ಕನ್ನಡ ಮತ್ತು ತಮಿಳು ರೈತರ ಹಿತಾಸಕ್ತಿ ಹೊಂದಿಲ್ಲ. ಕಾವೇರಿ ನದಿಯ ಹಂಚಿಕೆ ಪ್ರಾಧಿಕಾರ ಹೇಳುವಂತೆ ತಮಿಳುನಾಡಿಗೆ 404 ಖಿಒಅ ಕರ್ನಾಟಕಕ್ಕೆ 284 ಖಿಒಅ ಕೇರಳಕ್ಕೆ 30 ಖಿಒಅ ಪಾಂಡಿಚೇರಿಗೆ 7 ಖಿಒಅ ಪರಿಸರ ರಕ್ಷಣೆಗಾಗಿ 10 ಖಿಒಅ ಮೀಸಲಿಟ್ಟು ಆದೇಶ ಹೊರಡಿಸಿರುವುದನ್ನು ನೋಡಿದರೆ ಪ್ರತಿಯೊಂದು ರಾಜ್ಯಗಳಿಗೂ ನ್ಯಾಯವನ್ನು ನೀಡಿ ಕಾವೇರಿಯನ್ನು ಸದುಪಯೋಗ ಪಡಿಸಲು ಆದೇಶವಾಗಿರುತ್ತದೆ. ಈಗ ಕರ್ನಾಟಕವು ಮೇಕೆದಾಟು ಯೋಜನೆಯನ್ನು ಪ್ರಾರಂಭಿಸುವುದರಿಂದ 65 ರಿಂದ 66 ಖಿಒಅ ಹೆಚ್ಚುವರಿಯ ನೀರನ್ನು ಬಳಸಿಕೊಳ್ಳುವ ಉದ್ದೇಶ ಇದಾಗಿದೆ. ಏಕೆಂದರೆ ಪ್ರಸ್ತುತ ಬೆಂಗಳೂರು ನಗರಕ್ಕೆ 1350 ಮಿಲಿಯನ್ ಲೀಟರ್ ಕಾವೇರಿ ನೀರು ಹರಿಯುತ್ತಿದ್ದು 2030ರ ವೇಳೆಗೆ 2285 ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ. ತಮಿಳುನಾಡಿನ ಈಗಿನ ಪಾಲಿನ 177 ಖಿಒಅ ನೀರನ್ನು ಬಿಟ್ಟು ಅನವಶ್ಯಕವಾಗಿ ಪೋಲಾಗುವ 65 ಖಿಒಅ ನೀರನ್ನು ಬಳಸಿಕೊಂಡು ಈ ಯೋಜನೆಯನ್ನು 5912 ಕೋಟಿ ವೆಚ್ಚ ಮಾಡಿ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಿಂದ 64 ಖಿಒಅ ನೀರನ್ನು ಸಂಗ್ರಹಿಸಬಹುದು. ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಇದರಿಂದ ತಮಿಳುನಾಡಿಗೆ ಯಾವ ಧಕ್ಕೆಯು ಆಗುವುದಿಲ್ಲ. ಆದರೂ ಕೂಡ ತಮಿಳುನಾಡು ಖ್ಯಾತೆ ತೆಗೆದಿದೆ. 1892 ರಿಂದ ನಡೆದ ಘಟನೆಗಳು ಕರ್ನಾಟಕದ ಮೈಸೂರು ಸಂಸ್ಥಾನಕ್ಕೂ ಮದ್ರಾಸ್ ಸಂಸ್ಥಾನಕ್ಕೂ ನಡೆಯುತ್ತಲೇ ಬಂದಿದ್ದು ಮೈಸೂರಿನ ರಾಜಮನೆತನಗಳು ಕಾವೇರಿ ನೀರನ್ನು ಸಂಗ್ರಹಿಸಲು ಈ ಭಾಗದ ಜನರಿಗೆ ನೀರು ಕುಡಿಯಲು ಮತ್ತು ಕೃಷಿ ಬಳಕೆಗಾಗಿ ಉಪಯೋಗವಾಗಲೆಂದು ಅಣೆಕಟ್ಟನ್ನು ಕಟ್ಟಿ 1924ರಲ್ಲಿ ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಸಂಸ್ಥಾನಗಳ ಮಧ್ಯೆ 50 ವರ್ಷಗಳ ಒಪ್ಪಂದವಾಗಿತ್ತು. ಕಾವೇರಿ ಹುಟ್ಟಿದ್ದು ಕರ್ನಾಟಕದಲ್ಲಿ ಏ.ಖ.S ಅನ್ನು ಕಟ್ಟಿರುವುದು ಕನ್ನಡದ ರಾಜರು, ಸರ್.ಎಂ.ವಿಶ್ವೇಶ್ವರಯ್ಯನವರ ಪ್ಲ್ಯಾನ್ ಪ್ರಕಾರ ಅಣೆಕಟ್ಟು ಕಟ್ಟಲು ಕನ್ನಡಿಗರು ಬೆವರು ಹರಿಸಿದ್ದಾರೆ. ಈ ಅಣೆಕಟ್ಟು ಕಟ್ಟಲು ಮೈಸೂರಿನ ರಾಜಮನೆತನದವರು ತಮ್ಮ ಹೆಣ್ಣುಮಕ್ಕಳ ಬಂಗಾರದ ಒಡವೆ ಜೊತೆಗೆ ಆಸ್ತಿಪಾಸ್ತಿಗಳನ್ನು ದಾನ ಮಾಡಿದ್ದಾರೆ. ಜೊತೆಗೆ ಈ ಅಣೆಕಟ್ಟಿನ ಹಿನ್ನೀರಿನಿಂದ 13,923 ಎಕ್ಕರೆ ಖುಷ್ಕಿ ಭೂಮಿ, 9,520 ಎಕ್ಕರೆ ತರಿ ಭೂಮಿ, 8500 ಸರ್ಕಾರಿ ಭೂಮಿ, 25 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿವೆ. 15,000 ದಷ್ಟು ಜನರು ವಸತಿ ಕಳೆದುಕೊಂಡಿದ್ದರು. ಈ ಎಲ್ಲಾ ಸಮಸ್ಯೆಗಳಿಗೆ ಮೈಸೂರಿನ ರಾಜ ಮನೆತನ ಮತ್ತು ಕರ್ನಾಟಕ ಸರ್ಕಾರದಿಂದ ಪರಿಹಾರ ಸಿಕ್ಕಿದೆಯೇ ಹೊರತು ತಮಿಳುನಾಡಿನಿಂದಲ್ಲ. ಕಾವೇರಿ ಉಗಮ ಸ್ಥಾನವು ಕರ್ನಾಟಕದಲ್ಲಿ ಆಗಿದ್ದರೂ ಕೂಡ ತಮಿಳುನಾಡಿನಲ್ಲಿ ಅತಿ ಹೆಚ್ಚು ಉದ್ದಕ್ಕೂ ಹರಿದು, ಕೇರಳ, ಪಾಂಡಿಚೇರಿಯಲ್ಲಿಯೂ ಹರಿದು ಸಮುದ್ರ ಸೇರುತ್ತದೆ. ಏ.ಖ.S ಇಲ್ಲದಿದ್ದರೆ ಇಂದು ತಮಿಳುನಾಡು ನೀರು ಕೇಳುವ ಪರಿಸ್ಥಿತಿಯಿರಲಿಲ್ಲ ಏಕೆಂದರೆ ಮಳೆಗಾಲದಲ್ಲಿ ಏ.ಖ.S ನಲ್ಲಿ ನೀರು ಸಂಗ್ರಹಿಸದಿದ್ದರೆ ಬೇಸಿಗೆಯಲ್ಲಿ ತಮಿಳುನಾಡು ಸೇರಿದಾಗ ಕಾವೇರಿ ಬತ್ತುತ್ತಾಳೆ. ನ್ಯಾಯ ಸಮ್ಮತವಾಗಿ ತಮಿಳುನಾಡಿಗೆ ನೀರು ಕೊಡಬಹುದು ಆದರೆ ಪದೇಪದೇ ಖ್ಯಾತೆ ತೆಗೆಯುವುದು ಅನವಶ್ಯಕವಾಗಿ ಕರ್ನಾಟಕದ ವಿಷಯದಲ್ಲಿ ತಲೆತೂರುವುದು ಮತ್ತು ತನಗೆ ಸಂಬಂಧವಿಲ್ಲದ ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡದಂತೆ ಸರ್ಕಾರವು ನಿರ್ಣಯ ಮಂಡಿಸಿ ಕೇಂದ್ರಕ್ಕೆ ಮನವಿ ಮಾಡುವುದು ಹೀಗೆ ಹಲವಾರು ಸಣ್ಣ ವಿಷಯಗಳಿಗೆ ಖ್ಯಾತೆ ತೆಗೆಯುವುದು ತಮಿಳುನಾಡಿನ ವ್ಯವಸ್ಥೆಗೆ ಶೋಭೆ ತರುತ್ತದೆಯೇ. ಕಾವೇರಿಯನ್ನು ಹೊರತು ಪಡಿಸಿ ತಮಿಳುನಾಡಿನಲ್ಲಿ ಸಾಕಷ್ಟು ನದಿಗಳು ಇದ್ದು ಜೊತೆಗೆ ಕಾವೇರಿಯ ಪ್ರಸ್ತುತ ಜಲಾನಯನ ಪ್ರದೇಶದಲ್ಲಿ ಯಾವುದೇ ಅಭಿವೃದ್ದಿ ಮಾಡದೆ ಬೇರೆಯವರೊಂದಿಗೆ ಜಗಳ ತೆಗೆಯುವುದೇ ತಮಿಳುನಾಡಿನ ಉದ್ದೇಶವೇ? ತಮಿಳುನಾಡು ಕೆಲವು ತಮಿಳು ಸ್ಥಳೀಯ ಪತ್ರಿಕೆಗಳ 6-7 ಕಿಲೋ ಮೀಟರ್ ವ್ಯಾಪ್ತಿಯ ಜನವಸತಿಗೆ ಮತ್ತು ಧಾರ್ಮಿಕ ಸ್ಥಳಗಳಿಗೆ ಅಪಾರ ಪ್ರಮಾಣದ ಕಾಡು ನಾಶವಾಗುತ್ತದೆ. ಅದರಲ್ಲಿಯೂ 4996 ಹೆಕ್ಟರ್ ಅರಣ್ಯ ಭೂಮಿಯೂ ಮುಳುಗಡೆಯಾಗುತ್ತದೆ. ಇದರಲ್ಲಿ ಶೇ 90% ರಷ್ಟು ಅರಣ್ಯ ಭೂಮಿ ಮತ್ತು ಶೇ 10% ರಷ್ಟು ಕಂದಾಯ ಭೂಮಿ ಸೇರಿದೆ ಇದರಿಂದ ಆನೆ, ಜಿಂಕೆ ಸೇರಿದಂತೆ ವನ್ಯ ಸಂಕುಲಗಳಿಗೆ ತೊಂದರೆಯಾಗುತ್ತದೆ. ಸಂಗಮ ಅರಣ್ಯ ಪ್ರದೇಶದಲ್ಲಿನ ಆನೇಕಾರಿಡಾರ ತೊಂದರೆಯಾಗುತ್ತದೆ ಎಂದು ಪತ್ರಿಕೆಗಳ ವರದಿಗಳ ಆಧಾರದ ಮೇಲೆ ತಮಿಳುನಾಡು ಸರ್ಕಾರವು ಕೇಂದ್ರ ಪರಿಸರ ಖಾತೆಗೆ ಈ ಯೋಜನೆಯನ್ನು ತಡೆಯುವಂತೆ ಮನವಿ ಮಾಡಿದೆ. ಪತ್ರಿಕೆಗಳ ವರದಿಗಳನ್ನು ಒಪ್ಪಿಕೊಳ್ಳೋಣ ಪರಿಸರದ ಬಗ್ಗೆ ಅಷ್ಟು ಕಾಳಜಿ ತಮಿಳುನಾಡಿಗಿದ್ದರೆ ತನ್ನ ನೆರಳಲ್ಲಿ ಅರಣ್ಯ ಬೆಳೆಸಬಹುದಿತ್ತು. ರಾಜಕೀಯ ಲಾಭಕ್ಕಾಗಿ ಬಿಟ್ಟಿ ಯೋಜನೆಗಳನ್ನು ಕೊಟ್ಟು ರೈತರು ಹೊಲದ ಕಡೇನೆ ಹೋಗದಂತೆ ಮಾಡಿದ್ದು ಇದೇ ತಮಿಳುನಾಡು ಆಳಿದ ರಾಜಕಾರಣಿಗಳ ಸಾಧನೆ ಎನ್ನಬಹುದು. ಕರ್ನಾಟಕದಲ್ಲಾಗುವ ಅರಣ್ಯದ ಹಾನಿ ಮತ್ತು ಜನವಸತಿಯ ಪ್ರದೇಶಗಳಿಗಾಗುವ ಹಾನಿಯನ್ನು ಸರಿದೂಗಿಸುವ ಪ್ರಯತ್ನವನ್ನು ಇಲ್ಲಿಯ ಸರ್ಕಾರ ಮಾಡುತ್ತದೆ. ತನ್ನದಲ್ಲದ ವಿಚಾರವನ್ನು ಖ್ಯಾತೆ ತೆಗೆಯುತ್ತಾ ತನ್ನ ಗಣತಿಯನ್ನೇ ಕಳೆದುಕೊಳ್ಳುತ್ತಿದೆ. ಕರ್ನಾಟಕದ ಬಸವರಾಜ್ ಬೊಮ್ಮಯಿ ಸರ್ಕಾರವು ವಿಧಾನ ಸಭೆಯಲ್ಲಿ ಸರ್ವಾನು ಮತದಿಂದ ಪಕ್ಷ ಬೇಧ ಮರೆತು ತಮಿಳುನಾಡಿನ ನಿರ್ಣಯವನ್ನು ಖಂಡಿಸಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ ಇದರಿಂದಾದರೂ ಕನ್ನಡ ಭಾಷೆ, ನೆಲ, ಜಲಕ್ಕಾಗಿ ನಾವು ಒಂದಾಗುತ್ತೇವೆ. ನಿದ್ದೆಯಿಂದ ಎದ್ದ ರಾಜಕಾರಣಿಗಳು ಒಪ್ಪಿಕೊಂಡಿದ್ದಾರೆ. ತಮಿಳುನಾಡು ಮತ್ತು ಕರ್ನಾಟಕ ತಮ್ಮ ರಾಜಕೀಯ ಲಾಭವನ್ನು ಬದಿಗಿಟ್ಟು ಏ.ಖ.S ಹೂಳೆತ್ತುವ ಪ್ರಯತ್ನ ಮಾಡಿದರೆ ನೀರಿನ ಸಮಸ್ಯೆಯೇ ಬರುವುದಿಲ್ಲ. ತಮಿಳುನಾಡಿಗೆ ಅದರಲ್ಲಿಯೂ ಜಯಲಲಿತ ಮತ್ತು ಆಕೆಯ ಸರ್ಕಾರಕ್ಕೆ ಸಾಕಷ್ಟು ಬಾರಿ ನ್ಯಾಯಾಲಯ, ಕೇಂದ್ರ ಮತ್ತು ಪ್ರಾಧಿಕಾರಗಳ ಮುಂದೆ ಅವಮಾನವಾದರೂ ಕೂಡ ಕೇವಲ ಓಟಿಗಾಗಿ ಕಾವೇರಿ ಸಮಸ್ಯೆಯನ್ನು ಜೀವಂತವಾಗಿಟ್ಟಿದ್ದಾರೆ. ಅದೆಷ್ಟೋ ಬಾರಿ ತಮ್ಮ ಪಾಲನ್ನು ಕೇಳಿ ಪಡೆದು ಸಮುದ್ರಕ್ಕೆ ಹರಿಸಿದ್ದಾರೆ. ಈ ಮೊಂಡುತನದ ಜಲಧಾಹವು ತಮಿಳುನಾಡಿಗೆ ತೀರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯವು ಇನ್ನೊಂದು ರಾಜ್ಯದೊಂದಿಗೆ ಸೌಹರ್ದಯುತವಾಗಿ ನಡೆದುಕೊಳ್ಳುವುದು ಮತ್ತು ಸಮಸ್ಯೆಗಳನ್ನು ತಮ್ಮ ತಮ್ಮಲೇ ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳುವುದು ಯೋಗ್ಯವಾಗಿರುತ್ತದೆ.

ದಿ ಕಾಶ್ಮೀರಿ ಪೈಲ್ಸ್ ಹಿಂದಿನ ಸತ್ಯವೇನು?


ಭಾರತ ದೇಶದಲ್ಲಿ ಮನೋರಂಜನಾ ಮಾಧ್ಯಮವಾದ ಚಲನಚಿತ್ರವೂ ಕೂಡ ಒಂದೊಂದು ಸಾರಿ ಸತ್ಯ ಘಟನೆಯಾಧಾರಿತ ಚಿತ್ರ ನಿರ್ಮಿಸುವ ಮೂಲಕ ಹಲವಾರು ರೀತಿಯ ಸತ್ಯಗಳನ್ನು ಕೆದಕುವ ಪ್ರಯತ್ನವು ಮೊದಲಿನಿಂದಲೂ ನಡೆದು ಬಂದಿದೆ. ಈ ಪ್ರಯತ್ನದ ದಾರಿಯಲ್ಲಿ ದಿ ಕಾಶ್ಮೀರಿ ಪೈಲ್ಸ್ ಚಿತ್ರವು ನೀಲುತ್ತದೇಯೇ? ಈ ಚಿತ್ರಕ್ಕೆ ಭಾರತದ ಒಂದು ವರ್ಗವು ಬೆಂಬಲಕ್ಕೆ ನಿಲ್ಲುವ ಜೊತೆಗೆ ಬಿಜೆಪಿಯು ಚಿತ್ರವನ್ನು ನೋಡಲೇಬೇಕೆನ್ನುವಂತೆ ಜನರ ಮೇಲೆ ಮನಸಿಕ ಒತ್ತಡವನ್ನು ಏರುತ್ತಿದೆ. ಈ ಚಿತ್ರದಲ್ಲಿ ಮನರಂಜನೆ ಜೊತೆಗೆ ಸತ್ಯವನ್ನು ತೋರಿಸಿದ್ದೇವೆ ಎನ್ನುವ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಕೇಂದ್ರ ಸರ್ಕಾರವು ವೈಶ್ರೇಣಿಯ ಭದ್ರತೆಯನ್ನು ಒದಗಿಸಿ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಘೋಷಣೆ ಮಾಡಿದೆ. ದೇಶದ ಪುರಾಮಿ ಮೋದಿ ಈ ಚಿತ್ರವನ್ನು ಹಾಡಿ ಹೋಗಳುತ್ತಾರೆ. ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಮಾಡುವ ಜೊತೆಗೆ ಚಿತ್ರವನ್ನು ನೋಡುವಂತೆ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಈ ಚಿತ್ರದ ಮುಖ್ಯ ಸಾರಾಂಶವು 1989-90ರ ಸಾಲಿನಲ್ಲಿ ನಡೆದ ಕಾಶ್ಮೀರ್ ಪಂಡಿತರ ಹತ್ಯೆಯ ಕುರಿತಾಗಿದೆ. 1990ರ ಸಂದಂರ್ಭದಲ್ಲಿ ಕಾಂಗ್ರೆಸ್ ಹೆತರ ಸರ್ಕಾರ ಆಡಳಿತ ಮಾಡುತ್ತಿತ್ತು. ಆ ಸಂದಂರ್ಭದಲ್ಲಿ ರಾಷ್ರ್ಟೀಯ ಪ್ರಂಟ್ ಸರ್ಕಾರ ಆಡಳಿತದಲ್ಲಿತ್ತು. ಬಿಜೆಪಿ ಪಕ್ಷವು ನೇರವಾಗಿ ವಿ.ಪಿ.ಸಿಂಗ್‍ಗೆ ಬೆಂಬಲ ಕೊಟ್ಟಿದ್ದವು. ಆಗ ಲೋಕಸಭೆಯಲ್ಲಿ ವಾಜಪೇಯಿ ಮತ್ತು ಆಡ್ವಾನಿ ಸೇರಿದಂತೆ 89 ಸದಸ್ಯರನ್ನು ಒಳಗೊಂಡಿತ್ತು. ವಿ.ಪಿ.ಸಿಂಗ್ ಸರ್ಕಾರಕ್ಕೆ ಬಿ.ಜೆ.ಪಿ ಯ ಬೆಂಬಲವು ಅತ್ಯಂತ ನಿರ್ಣಯಕವಾಗಿತ್ತು. ಈ 1990ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ರಾಜ್ಯ ಪಾಲರಾಗಿ ಜಗಮೋಹನ್ ಕಾರ್ಯನಿರ್ವಹಿಸುತ್ತಿದ್ದರು. ಇವರು ಮೂಲ ಬಿ.ಜೆ.ಪಿ ಗರು ಮತ್ತು ವಾಜಪೇಯಿ ಮತ್ತು ಅಡ್ವಾನಿಯವರಿಂದ ನೇಮಕಗೊಂಡಿದ್ದರು. ಇಂತಹ ನರಮೇಧದ ಸಂದರ್ಭದಲ್ಲಿ ಸರಕಾರವಾಗಲೀ, ರಾಜ್ಯ ಪಾಲರಾಗಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಜೊತೆಗೆ ಕೇಂದ್ರ ಸರ್ಕಾರವು ಮೌನದಿಂದ ಇದ್ದು ಇದಕ್ಕೂ ನನಗೂ ಸಂಬಂಧವಿಲ್ಲದಂತಿತ್ತು. ಇದರ ಕುರಿತು ಸಂಸತ್ತಿನಲ್ಲಿ ರಾಜೀವ್ ಗಾಂಧಿ ಕಾಶ್ಮೀರಿ ಪಂಡಿತರಿಗೆ ರಕ್ಷಣೆ ಒದಗಿಸಬೇಕು ಮತ್ತು ಅವರಲ್ಲಿರುವ ಆತಂಕವನ್ನು ದೂರ ಮಾಡಿ ಕಾಶ್ಮೀರದಲ್ಲಿ ಬದುಕಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು. ಆದರೂ ಕೂಡ ಸರ್ಕಾರವೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರ ಹಿಂದೆ ಹತ್ತು ಹಲವು ಪ್ರಶ್ನೆಗಳು ಹೇಳುತ್ತವೆ. ಆ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು ?

  1. ಈ ಘಟನೆಯಲ್ಲಿ ಕಾಂಗ್ರೆಸ್‍ನ ವೈಫಲ್ಯವೇನು? ರಾಜಕೀಯ ಪಾತ್ರವೇನು?
  2. 1990ರಲ್ಲಿ ಉಗ್ರಗಾಮಿಗಳನ್ನು 15,000 ಮುಸ್ಲಿಂರನ್ನು ಕೊಂದಿದ್ದರು. 300 ಹಿಂದೂಗಳನ್ನು ಕೊಂದಿದ್ದರು. ಈ ಮಾರಣ ಹೋಮದಲ್ಲಿ 219 ಕಾಶ್ಮೀರಿ ಪಂಡಿತರ ಹತ್ಯೆಯಾಗಿತ್ತು. ಆದರೆ ಚಿತ್ರದಲ್ಲಿ 4,000 ಕಾಶ್ಮೀರಿ ಪಂಡಿತರ ಹತ್ಯೆಯಾಗಿದೆ ಎಂದು ತೋರಿಸಲಾಗಿದೆ. ಹಾಗಾದರೆ ಈ ಚಿತ್ರವನ್ನು ಸತ್ಯ ಆಧಾರಿತ ಚಿತ್ರವೆಂದು ಹೇಗೆ ವರ್ಗೀಕರಣ ಮಾಡುವುದು?
  3. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ಕಾಂಗ್ರೆಸ್ ಮುಖಂಡರು ಈ ಚಿತ್ರವನ್ನು ಏಕೆ ನಿರಾಕರಿಸುತ್ತಾರೆ?
  4. ರಾಜ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಾಶ್ಮೀರಿ ಪೈಲ್ಸ್ ಸಿನಿಮಾ ನೋಡದವರು ದೇಶ ದ್ರೋಹಿಗಳು ಎಂದು ಹೇಳಿದ್ದಾರೆ. ಇದು ಎಷ್ಟು ಸಮಂಜಸವಾದ ಹೇಳಿಕೆ? ರಾಜಕಾರಣಿಗಳ ನಾಲಿಗೆಗೂ ಮೆದುಳಿಗೂ ಸಂಬಂಧವೇ ಇಲ್ಲವೇ?
  5. ಕನ್ನಡದಲ್ಲಿ ರಾಷ್ರ್ಟೀಯ ಅಂತರರಾಷ್ರ್ಟಿಯ ಪ್ರಶಸ್ತಿ ಪಡೆದ ಅದೆಷ್ಟೋ ಚಿತ್ರಗಳಿದ್ದರೂ ಚಕಾರ ವೆತ್ತದ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಈ ಚಿತ್ರವನ್ನು ತಮ್ಮ ಕ್ಷೇತ್ರದಲ್ಲಿ ತಮ್ಮ ಹಣದಲ್ಲಿ ಉಚಿತವಾಗಿ ತೋರಿಸುತ್ತಿದ್ದಾರೆ. ಇದು ಕನ್ನಡಿಗರಿಗೆ ಮಾಡುವ ಅವಮಾನವಲ್ಲವೇ?
  6. ವಿ.ಪಿ.ಸಿಂಗ್ ಸರಕಾರದ ನಂತರ ವಾಜಪೇಯಿಯವರ 5 ವರ್ಷದ ಸಂಪೂರ್ಣ ಸರಕಾರ ನಂತರದ ಮೋದಿಯ 2ನೇ ಅವಧಿಯ ಸರಕಾರ ಏಕೆ ಕಾಶ್ಮೀರಿ ಪಂಡಿತರಿಗೆ ನ್ಯಾಯ ಕೊಡಲಿಲ್ಲ?
  7. 1947 ರಿಂದ ಇಲ್ಲಿಯವರೆಗೆ ಕಾಶ್ಮೀರದಲ್ಲಿ ಅದೆಷ್ಟೋ ಹತ್ಯೆಗಳು ನಡೆದಿವೆ. ಆ ಹತ್ಯೆಗಳ ಹಿಂದೆ ಉಗ್ರಗಾಮಿಗಳಿದ್ದರು. ಅವರಿಗೆ ನೆರವಾದರು ಪಾಕಿಸ್ನಾನಿಗಳು ದೇಶದ ಒಳಗೆ ನುಸುಳಲು ನೆರವಾದವರು ಈ ದೇಶದ ರಾಜಕಾಣಿಗಳು ಇಂತಹವರಿಗೆ ಏಕೆ ಶಿಕ್ಷೆ ಆಗಲಿಲ್ಲ.
  8. ಭಯೋತ್ಪಾದಕರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್ ಧರ್ಮ ಜಾತಿ ನೋಡದೆ ಅದೆಷ್ಟೋ ಜನರನ್ನು ಕಾಶ್ಮೀರ್ ಸೇರಿದಂತೆ ದೇಶದಲ್ಲಿ ಕೊಂದಿದ್ದಾರೆ. ಆದರೆ ಪಂಡಿತರು ಮಾತ್ರ ಮನುಷ್ಯರು ಉಳಿದವರು ಮನುಷ್ಯರಲ್ಲವೇ?
  9. ಒಂದು ವಿಜ್ಞಾನದ ಅಧ್ಯಯನದ ಪ್ರಕಾರ ಬ್ರಾಹ್ಮಣರು ಈ ದೇಶದ ಮೂಲ ನಿವಾಸಿಗಳೇ ಅಲ್ಲ ಜೊತೆಗೆ ಇತಿಹಾಸದ ಪ್ರಕಾರವೂ ಕೂಡ ದ್ರಾವಿಡರು ಮೂಲ ನಿವಾಸಿಗಳು. ಆರ್ಯರು ಈ ದೇಶಕ್ಕೆ ನೆಲೆಸಲು ಬಂದು ದ್ರಾವಿಡರನ್ನು ಕೆಳತಳ್ಳಿದ್ದಾರೆ. ಇದರ ಬಗ್ಗೆ ಏಕೆ ಪ್ರಶ್ನೆ ಇಲ್ಲ?
  10. ದೇಶದಲ್ಲಿ ಮಳೆಯಿಂದ ಪ್ರಕೃತಿ ವಿಕೋಪದಿಂದ ಬೇರೆ ದಾಳಿಯಿಂದ ರೋಗರುಜಿನಗಳಿಂದ ಅದೆಷ್ಟೋ ಜನ ಸಾಯುತ್ತಾರೆ. ದಾಳಿಗಳಿಂದ ಅದೆಷ್ಟೋ ಸಮುದಾಯಗಳು ನಶಿಸಿ ಹೋಗಿವೆ. ಸರಕಾರದ ಕೆಲವು ಪ್ರಗತಿ ಯೋಜನೆಗಳು ಕೂಡ ಕೆಲವು ಬುಡಕಟ್ಟು ಜನಾಂಗಗಳನ್ನು ಒಕ್ಕಲು ಎಬ್ಬಿಸಿವೆ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಕಾಶ್ಮೀರಿ ಪಂಡಿತರಿಗೆ ಆದ ಸಮಸ್ಯೆ ದೊಡ್ಡದೇ?
  11. ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹ ಇದು ಸಂಘ ಪರಿವಾರದ ಶಕ್ತಿಯೆಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಕೊಳ್ಳುವ ಜೊತೆಗೆ ಆರ್.ಎಸ್.ಎಸ್. ನ ಗೀತೆ “ನಮಸ್ತೆ ಸದಾ ವತ್ಸಲೇ” ಸಭೀಕರು ಹಾಡುತ್ತಿರುವ ಒಂದು ತುಣುಕನ್ನು ಟ್ಯಾಗ್ ಮಾಡಿದ್ದಾರೆ. ಹಾಗಾದರೆ ದಿ ಕಾಶ್ಮೀರಿ ಪೈಲ್ಸ್ ಆರ್.ಎಸ್.ಎಎಸ್.ನ ಪ್ರಚಾರವೇ? ಹಾಗದರೆ ಆರ್.ಎಸ್.ಎಸ್ ವು ಕೇವಲ ಬ್ರಾಹ್ಮಣರಿಗೆ ಸೀಮಿತವೇ? ಹಿಂದೂ ಸಂಘಟನೆ ಅಲ್ಲವೇ?
  12. ಚಿತ್ರವನ್ನು ಮನೋರಂಜನೆ ಮಾಧ್ಯಮವಾಗಿ ನೋಡಲಿ ಆದರೆ ಸತ್ಯ ಹೇಳುವ ಕಥೆಯೆಂದು ಏಕೆ ಬಿಂಬಿಸಲಾಗುತ್ತಿದೆ?
  13. ಬಿ.ಜೆ.ಪಿ ರಾಜ್ಯ ಸರಕಾರಗಳಲ್ಲಿ ತೆರಿಗೆ ವಿನಾಯಿತಿ ಮಾಡಿರುವುದು ರಾಜ್ಯಂಗದ ಪ್ರಕಾರ ಎಷ್ಟು ಸರಿ?
  14. ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳು ಇರುವಾಗ ಈ ಚಿತ್ರದ ಬಗ್ಗೆ ಸದನದ ಒಳಗೂ ಮತ್ತು ಹೊರಗೂ ಚರ್ಚೆ ಬೇಕೆ?
  15. ಸ್ವಾಮಿ ವಿವೇಕಾನಂದರು ಹೇಳುವಂತೆ “ನಿನ್ನ ಧರ್ಮದ ಉನ್ನತ ವಿಚಾರಗಳನ್ನು ಹೇಳು ಆದರೆ ಬೇರೆ ಧರ್ಮದ ಬಗ್ಗೆ ಟೀಕೆ ಮಾಡಬೇಡ ಈ ವ್ಯಾಖ್ಯಾನವನ್ನು ಈ ದೇಶದ ಬುದ್ದಿ ಜೀವಿಗಳು ಆರ್.ಎಸ್.ಎಸ್. ನವರು ಹಿಂದೂ ರಾಜಕಾಣಿಗಳು ಹಿಂದೂ ಪರ ಸಂಘನೆಗಳು ಪಾಲಿಸುತ್ತಿದ್ದಾರಾ?
    ಹೋಗಲಿ ಬಿಡಿ ಸರ್ವ ಸಾಮಾನ್ಯನಾಗಿ ನಾನು ವಿಚಾರ ಮಾಡುವುದೇನೆಂದರೆ 80% ಹಿಂದೂಗಳು ಸೋತಿರುವುದು ಆತ್ಮ ವಿಮರ್ಶೆಯಿಲ್ಲದೆ. ಒಂದು ದೇಶದಲ್ಲಿ 80% ಇರುವ ಒಂದು ಧರ್ಮ ಒಂದು ಚಿತ್ರಕ್ಕೆ ಸೀಮಿತವಾಗಬೇಕೆ?
    ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ನಾವು ಸದೃಢ ಎಂದು ತೋರಿಸಿಕೊಳ್ಳಲು ಇಷ್ಟೇಲ್ಲಾ ಪ್ರಯತ್ನ ಬೇಕೆ! ನೂರು ಜನರಲ್ಲಿ 80 ಜನ ಒಂದಾದರೆ ಇನ್ನು 20 ಜನ ಏನು ಮಾಡುತ್ತಾರೆ? ಹಿಂದೂ ಪರ ಸಂಘನೆಗಳು ಮತ್ತು ಬಿ.ಜೆ.ಪಿ ಪಕ್ಷವು ಹಿಂದೂ ಪರ ಎನ್ನುತ್ತಲೇ ಮೇಲ್ ವರ್ಗಕ್ಕೆ ಮಾತ್ರ ಸೀಮಿತವಾಗಿದೆ. ಇನ್ನೂ ಕಾಂಗ್ರೆಸ್ ಪಕ್ಷವು ಮುಸ್ಲಿಂ ರು ಮತ್ತು ಅಲ್ಪಸಂಖ್ಯಾತರ ಹೆಸರಿನಲ್ಲಿ ಮೇಲ್ವರ್ಗವನ್ನು ಅತ್ಯಂತ ಹೀನಾಯವಾಗಿ ಕಾಣುತ್ತಿವೆ? ಹಿಂದೂಗಳು ಅಂದರೆ ಬ್ರಾಹ್ಮಣರು, ಲಿಂಗಾಯಿತರು ಅಷ್ಟೇ? ದಲಿತರು ಸೇರಿದಂತೆ ಕೆಳವರ್ಗದವರು ಹಿಂದೂಗಳಲ್ಲವೇ? ಇಂತಹ ಅದೆಷ್ಟೋ ತಾರತಮ್ಯ ವಿಚಾರಗಳಿಂದ ಭಾರತದಲ್ಲಿ ಹಿಂದೂಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ? ದಿ ಕಾಶ್ಮೀರಿ ಪೈಲ್ಸ್ ಬದಿಗಿಟ್ಟು ಒಗ್ಗಟ್ಟು ಅಭಿವೃದ್ಧಿಗೆ ಶ್ರಮಿಸಿದರೆ ಭಾರತವು ವಿಶ್ವ ಗುರು ಆಗುತ್ತದೆ.

ಪಾಂಡವಪುರ ತಾಲೂಕಿನ ಬೋರಾಪುರ ಗ್ರಾಮದಲ್ಲಿ ಜವರೇಗೌಡ ಎಂಬುವವರ ಮಂಗಳೂರು ಹೆಂಚಿನ ಮನೆಯೊಂದು ಕುಸಿದು ಬಿದ್ದಿರುವ ಹಿನ್ನೆಲೆ ಬಿಜೆಪಿ ಮುಖಂಡ ಎಸ್‌ಎನ್‌ಟಿ ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರು.

ಪಾಂಡವಪುರ : ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಬೋರಾಪುರ ಗ್ರಾಮದಲ್ಲಿ ಜವರೇಗೌಡ ಎಂಬುವವರ ಮಂಗಳೂರು ಹೆಂಚಿನ ಮನೆಯೊಂದು ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಕೊಟ್ಟಿಗೆ ಸೇರಿದಂತೆ ಮನೆಯ ಒಂದು ಭಾಗ ಸಂಪೂರ್ಣ ನೆಲ ಕಚ್ಚಿದ್ದು, ಹಸು ಮತ್ತು ಕರು ಗಂಭೀರವಾಗಿ ಗಾಯಗೊಂಡಿವೆ. ಹತ್ತು ಕೋಳಿಗಳು ಘಟನೆಯಲ್ಲಿ ಮೃತಪಟ್ಟಿದ್ದು, ಮನೆ ಕುಸಿದ ಸಂದರ್ಭದಲ್ಲಿ ಒಳಗೆ ಮಲಗಿದ್ದ ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಮನೆ ಕುಸಿತಕ್ಕೆ ಸಮೀಪದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕಾರಣವಾಗಿದ್ದು, ನಿರಂತರ ಗಣಿ ಸ್ಪೋಟದಿಂದಾಗಿ ಇಲ್ಲಿನ ಹಲವಾರು ಮನೆಗಳು ಬಿರುಕು ಬಿಟ್ಟಿವೆ. ಮಳೆಯ ಸಂದರ್ಭದಲ್ಲಿ ಇವು ಕುಸಿಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದರು.
`ಗುರುವಾರ ರಾತ್ರಿಯಿಂದಲೇ ಈ ಭಾಗದಲ್ಲಿ ಮಳೆ ಪ್ರಾರಂಭವಾಯಿತು. ಊಟ ಮುಗಿಸಿ ನಾವು ಮಲಗಿದ್ದೇವು. ಸುಮಾರು ೧೧ ಗಂಟೆಗೆ ಇದ್ದಕ್ಕಿದ್ದಂತೆ ಮನೆಯ ಜಂತಿಗಳು ಮುರಿಯುವ ಸದ್ದು ಕೇಳಿ ಎಚ್ಚರವಾಗಿ ಮನೆಯವರನ್ನು ಎಬ್ಬಿಸುವಷ್ಟರಲ್ಲಿ ಮನೆ ಕುಸಿದು ಬಿತ್ತು. ಕಗ್ಗತ್ತಲು, ಹಸು ಕರು ಛಾವಣಿಯ ಕೆಳಗೆ ಸಿಲುಕಿ ಕಿರುಚಾಡುತ್ತಿದ್ದವು. ಈ ವೇಳೆ ಗ್ರಾಮಸ್ಥರು ಬಂದು ಹಸು ಕರುವನ್ನು ಎಳೆದು ತಂದರು’ ಎಂದು ಜವರೇಗೌಡರ ಪತ್ನಿ ನರಸಮ್ಮ ತಿಳಿಸಿದರು.
ಯಜಮಾನನ ಪ್ರಾಣ ಉಳಿಸಿದ ಸೊಳ್ಳೆ ಪರದೆ : ಮನೆಯ ಒಳಗೆ ಗೋಡೆ ಮಗ್ಗುಲಲ್ಲಿ ಮಲಗಿದ್ದ ಮನೆ ಯಜಮಾನ ಜವರೇಗೌಡರ ಮೇಲೆ ಹೆಂಚು ಮತ್ತು ಇಟ್ಟಿಗೆ ಉರುಳಿ ಬಿದ್ದಿದೆ. ಆದರೆ, ಅವರು ಸೊಳ್ಳೆ ಪರದೆ ಕಟ್ಟಿಕೊಂಡಿದ್ದ ಕಾರಣ ಮೇಲಿನಿಂದ ಬಿದ್ದ ಹೆಂಚು ಮತ್ತು ಇಟ್ಟಿಗೆಯನ್ನು ಸೊಳ್ಳೆ ಪರದೆ ತಡೆದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿಜೆಪಿ ಮುಖಂಡ ಎಸ್.ಎನ್.ಟಿ.ಸೋಮಶೇಖರ್ ಭೇಟಿ : ಘಟನಾ ಸ್ಥಳಕ್ಕೆ ಜಕ್ಕನಹಳ್ಳಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಸ್.ಎನ್.ಟಿ.ಸೋಮಶೇಖರ್ ಭೇಟಿ ನೀಡಿ ಜವರೇಗೌಡರ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ ಆರ್ಥಿಕ ನೆರವು ನೀಡಿ ಧೈರ್ಯ ತುಂಬಿದರು.
ಬಳಿಕ ಅವರು ಮಾತನಾಡಿ, ಸ್ಥಳೀಯ ಕಲ್ಲು ಗಣಿಗಾರಿಕೆಯಿಂದ ಇಲ್ಲಿನ ಮನೆಗಳು ಬಿರುಕು ಬಿಟ್ಟು ಮಳೆಯ ಸಂದರ್ಭದಲ್ಲಿ ಕುಸಿಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಈ ಹಿಂದೆ ಸಂಸದೆ ಸುಮಲತಾ ಅಂಬರೀಶ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇದೇ ಮನೆ ಬಿರುಕು ಬಿಟ್ಟಿರುವುದನ್ನು ನೋಡಿ ಪರಿಶೀಲಿಸಿದ್ದರು. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದ ಅವರು, ಶೀಘ್ರದಲ್ಲೆ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಸಿ.ನಾರಾಯಣಗೌಡ ಅವರನ್ನು ಕರೆಸುವುದಾಗಿಯೂ, ಜತೆಗೆ ಸರ್ಕಾರದಿಂದ ಸಿಗುವ ನೆರವನ್ನೂ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಈ ವೇಳೆ ಮನೆಯ ಮಾಲಿಕರಾದ ಟೀಪು ಜವರೇಗೌಡ, ನರಸಮ್ಮ, ಗ್ರಾ.ಪಂ ಸದಸ್ಯ ಕೆಂಪೇಗೌಡ, ಮಾಜಿ ಸದಸ್ಯ ಸ್ವಾಮಿಶೆಟ್ಟಿ, ತಾಲೂಕು ಬಿಜೆಪಿ ಉಪಾಧ್ಯಕ್ಷ ಪುರುಷೋತ್ತಮ, ಮುಖಂಡರಾದ ಕರೀಗೌಡ, ಕಾರ್ತಿಕ್, ಸಂಜಯ್, ಸಂತೋಷ್, ಪ್ರಕಾಶ್, ಶಶಿಧರ್, ವಿನೋದ್, ಮಹದೇವು, ಅನಿಲ್, ಲೋಕೇಶ್, ಶಂಭೂನಹಳ್ಳಿ ರವಿ ಇತರರು ಇದ್ದರು.
ಗ್ರಾಮಕ್ಕೆ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಭೇಟಿ ನೀಡಿದ್ದರು. ಇದೇ ವೇಳೆ ತಾಲೂಕಿನ ಕಾಮನಾಯಕನಹಳ್ಳಿಯಲ್ಲಿ ಬೋರಮ್ಮ ಎಂಬುವರ ಮನೆ ಕುಸಿದು ಬಿದ್ದಿದೆ.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಸಾರ್ವಜನಿಕರಿಂದ ಅವಹಾಲುಗಳ ಸುರಿಮಳೆ

ಹೊಳಲು: ಸರ್, ನಮ್ಮೂರಿಗೆ ಬರೋದು ಒಂದೆ ಒಂದು ಬಸ್ಸು ಸರ್, ಅದು ಕೂಡಾ ಸರಿಯಾಗಿ ಬಾರದ ಕಾರಣ ಮಕ್ಕಳಿಗೆ ಶಾಲೆಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ. ಸರ್, ಸಮಯಕ್ಕೆ ಸರಿಯಾಗಿ ರಸಗೊಬ್ಬರ ಪೂರೈಕೆ ಮಾಡಿ ಹಾಗಾದರೆ ರೈತರು ಸರಿಯಾಗಿ ಬೆಳೆ ತೆಗೆಯಲು ಸಾಧ್ಯವಾಗುತ್ತದೆ. ಸರ್, ಈ ಸ್ವತ್ತು ಎನ್ನುವುದು ಸಾರ್ವಜನಿಕರಿಗೆ ಕುತ್ತಾಗಿ ಪರಿಣಮಿಸಿದೆ. ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಕಾಯಬೇಕಾಗಿದೆ ಬಹಳಷ್ಟು ವಿಳಂಬವಾಗುತ್ತಿರುವ ಈಸ್ವತ್ತು ಪ್ರಕ್ರಿಯೆಯನ್ನು ಆದಷ್ಟು ಕಡಿಮೆ ಕಾಲಮಿತಿಯಲ್ಲಿ ಕಾರ್ಯನಿರ್ವಹಿಸಿಕೊಡಿ. ಇಂತಹ ನೂರಾರು ಅವಹಾಲುಗಳು ಕಂಡುಬAದದ್ದು ಸಮೀಪದ ದಾಸನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮದಲ್ಲಿ.
ಹೌದು ಶನಿವಾರ ಹೂವಿನಹಡಗಲಿ ತಾಲೂಕು ದಾಸನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ತಹಶೀಲ್ದಾರ ಮಹೇಂದ್ರ ಮಾತನಾಡಿ ಸ್ಥಳೀಯ ಸಮಸ್ಯೆ ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಉದ್ದೇಶದಿಂದ ಸರಕಾರ ಪ್ರತಿ ತಿಂಗಳ ಮೂರನೇ ಶನಿವಾರ ಒಂದೊAದು ಗ್ರಾಮ ಪಂಚಾಯತಿಯಲ್ಲಿ ತಾಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ಇಂತಹ ಒಂದು ಮಹತ್ವಪೂರ್ಣ ಕಾರ್ಯಕ್ರಮವನ್ನು ಕೈಗೊಂಡಿದ್ದು ಅರ್ಥಪೂರ್ಣವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ನAತರ ನರೇಗಾ ಇಒ ಯು.ಹೆಚ್ ಸೋಮಶೇಖರ ಮಾತನಾಡಿ ಆರೋಗ್ಯ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳ ಪರಿಶ್ರಮದಿಂದ ದಾಸನಹಳ್ಳಿ ಗ್ರಾಮ ತಾಲೂಕಿನಲ್ಲಿಯೇ ಶೇ ೧೦೦ರಷ್ಟು ಕೊರೋನಾ ಲಸಿಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಹಾಗೂ ರೈತ ಬಂಧು ಯೋಜನೆ ಅತಿಹೆಚ್ಚು ಫಲಾನುಭವಿಗಳಿಗೆ ತಲುಪಿರುವುದು ಅಧಿಕಾರಿಗಳ ಕಾರ್ಯ ದಕ್ಷತೆಗೆ ಹಿಡಿದ ಕಯಗನ್ನಡಿಯಾಗಿದೆ ಎಂದು ತಿಳಿಸಿದ ಅವರು ಗ್ರಾಮ ನೈರ್ಮಲ್ಯ, ಬದು ನಿರ್ಮಾಣ ಸೇರಿದಂತೆ ನರೇಗಾ ಯೋಜನೆ ಅಡಿಯಲ್ಲಿ ಬರುವ ಉದ್ಯೋಗಾವಕಾಶಗಳಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಾರಿ ಬಸವರಾಜ, ಎ.ಡಿ ಜಯಪ್ರಕಾಶ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂದ್ಯಾ ಸುರಕ್ಷಾ ಯೋಜನೆ, ವಿದವಾ ವೇತನಾ ಸೇರಿದಂತೆ ಕೆಲ ಫಲಾನುಬವಿಗಳಿಗೆ ಸ್ಥಳದಲ್ಲಿ ಆದೇಶ ಪ್ರತಿ ನೀಡಲಾಯಿತು.
ಈವೇಳೆ ಕಂದಾಯ ೬೯, ತಾ.ಪಂ ೧೮೦, ಕೃಷಿ, ಭೂಮಾನ, ಸಾರಿಗೆ ಸೇರಿದಂತೆ ಒಟ್ಟು ೨೮೭ ಅರ್ಜಿಗಳು ಸ್ವೀಕೃತಿಯಾಗಿದ್ದವು. ಅದರಲ್ಲಿ ಮಾತ್ರ ಬಗೆಹಿದಿದ್ದು, ಉಳಿದ ಅರ್ಜಿದಾರರ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಕೆಲವೇ ದಿನಗಳಲ್ಲಿ ಬಗೆಹರಿಸುಉದಾಗಿ ತಹಶೀಲ್ದಾರ ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಹೆಚ್.ಮಂಜವ್ವ ಅಧ್ಯಕ್ಷತೆ ವಹಿಸಿದ್ದರು, ತಾ.ಪಂ ಇಒ ಪ್ರಭುರೆಡ್ಡಿ, ಗ್ರಾ.ಪಂ ಉಪಾಧ್ಯಕ್ಷೆ ಬೂದನೂರು ಹುಲಿಗೆಮ್ಮ ಹಾಗೂ ಪಿಡಿಒ ರವೀಂದ್ರ ಸೇರಿದಂತೆ ಸರ್ವ ಸದಸ್ಯರು ಹಾಗೂ ತಾಲೂಕಿನ ವಿವಿಧ ಇಲಾಖೆಗಳಿಂದ ಆಗಮಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು. ಉಪ ತಹಶೀಲ್ದಾರ ಮಲ್ಲಿಕಾರ್ಜುನ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕ ಪ್ರಕಾಶ ವಂದಿಸಿದರು.

ರೇಷ್ಮೆ ಬೆಳೆಗಾರರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಕೋಲಾರದ ರೀರ‍್ಸ್ಗಳು ರಾಮನಗರ ಮಾದರಿಯಲ್ಲಿ ಕೋಲಾರ ರೇಷ್ಮೆ ಗೂಡು ಮಾರಾಟವಾಗಬೇಕು: ರೈತಸೇನೆ ತಾಲ್ಲೂಕು ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್

ಬAಗಾರಪೇಟೆ: ಕೋಲಾರ ಜಿಲ್ಲೆ, ರೇಷ್ಮೆ ಮತ್ತು ಹಾಲಿಗೆ ಬಹಳ ಪ್ರಮುಖವಾಗಿ ಮುಂಚೂಣಿಯಲ್ಲಿದ್ದು, ಜಿಲ್ಲೆಯಲ್ಲಿ ಸಾಕಷ್ಟು ರೈತರು, ರೇಷ್ಮೆ ಬೆಳೆಯನ್ನೇ ವಾಣಿಜ್ಯ ಬೆಳೆಯನ್ನಾಗಿಸಿಕೊಂಡು ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯನ್ನು ಅತಿ ಹೆಚ್ಚಾಗಿ ರೇಷ್ಮೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಜಿಲ್ಲೆಯ ರೇಷ್ಮೆ ಬೆಳೆಗಾರರು ತಿಂಗಳೆಲ್ಲಾ ಕಷ್ಟಪಟ್ಟು ರೇಷ್ಮೆ ಬೆಳೆ ಬೆಳೆದು ಕೋಲಾರ ರೇಷ್ಮೆ ಗೂಡಿನ ಮಾರುಕಟ್ಟೆಗೆ ರೇಷ್ಮೆ ಗೂಡನ್ನು ಮಾರಾಟ ಮಾಡುವುದಕ್ಕೆ ಮಾರುಕಟ್ಟೆಗೆ ರೈತರು ಹೋದರೆ, ರೇಷ್ಮೆ ಬೆಳೆ ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗದೇ ಕಂಗಾಲಾಗುತ್ತಿದ್ದಾರೆ. ಹಾಗೂ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ರೈತ ಸೇನೆ ಒತ್ತಾಯಿಸಿ ರೇಷ್ಮೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಅವರಿಗೆ ಮನವಿ ನೀಡಿದರು.
ಈ ವೇಳೆ ಕರ್ನಾಟಕ ರೈತಸೇನೆ ತಾಲ್ಲೂಕು ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್ ಮಾತನಾಡಿ, ರೈತರು ಬೆಳೆದಂತಹ ರೇಷ್ಮೆ ಗೂಡನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವ ವ್ಯಾಪಾರಸ್ಥರು (ರೀರ‍್ಸ್ಗಳು) ರೈತನು ಬೆಳೆದ ರೇಷ್ಮೆಗೂಡನ್ನು ಮಾರುಕಟ್ಟೆಯಿಂದ ಸ್ಯಾಂಪಲ್ ತೆಗೆದುಕೊಂಡುಹೋಗಿ ಆ ಗೂಡನ್ನು ದಾರ ಬಿಚ್ಚಾಣಿಕೆಗೆ ಹಾಕಿ ಆ ಗೂಡಿನಿಂದ ದಾರ ಬಿಚ್ಚಾಣಿಕೆ ಬಂದರೆ ಮಾತ್ರ ರೇಷ್ಮೆ ಗೂಡನ್ನು ಉತ್ತಮ ಬೆಲೆಗೆ ಕೊಳ್ಳುತ್ತಾರೆ. ಇಲ್ಲವಾದರೆ ಈ ರೇಷ್ಮೆಗೂಡಿನಲ್ಲಿ ಸರಿಯಾಗಿ ದಾರ ಬಿಚ್ಚಾಣಿಕೆ ಬರುವುದಿಲ್ಲವೆಂದು ರೇಷ್ಮೆ ರೈತರ ಮೇಲೆ ಗೂಬೆ ಕೂರಿಸುತ್ತಿದ್ದಾರೆ, ಕೋಲಾರ ಜಿಲ್ಲೆಯ ಲೋಕಲ್ ರೇಷ್ಮೆ ಮಾರುಕಟ್ಟೆಯಲ್ಲಿ ಈ ರೀತಿ ಸ್ಯಾಂಪಲ್ ಚೆಕ್ ಮಾಡುವುದರಿಂದ, ನಿಗಧಿತ ಬೆಲೆಗೆ ವಂಚಿತರಾಗಿ, ರೇಷ್ಮೆ ರೈತರ ಹೊಟ್ಟೆ ಮೇಲೆ ಹೊಡೆಯುವಂತಹ ಕೆಲಸ ರೀರ‍್ಸ್ಗಳು ಮಾಡುತ್ತಿದ್ದಾರೆ. ರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡಿರುವ ಮಾರುಕಟ್ಟೆಯಲ್ಲೊಂದಾದ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರ ರೇಷ್ಮೆಗೂಡಿಗೆ ಗುಣಮಟ್ಟದ ಆಧಾರದಲ್ಲಿ ಬೆಲೆಯನ್ನು ನಿರ್ಧರಿಸಲಾಗುತ್ತಿದೆ. ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸ್ಯಾಂಪಲ್ ಚೆಕ್ ಮಾಡುವ ಅವಕಾಶವಿರುವುದಿಲ್ಲ. ಆಗಾಗಿ ಇದರಿಂದ ಯಾವುದೇ ರೇಷ್ಮೆ ರೈತರಿಗೆ ಅನ್ಯಾಯವಾಗುವುದಿಲ್ಲ.
ಆದಕಾರಣ ಈ ಕೂಡಲೇ ರೇಷ್ಮೆ ಗೂಡುಗಳನ್ನು ಯಾವುದೇ ಕಾರಣಕ್ಕೂ ರೀರ‍್ಸ್ಗಳು ಗೂಡನ್ನು ಸ್ಯಾಂಪಲ್ ತೆಗೆದುಕೊಂಡು ಹೋಗಿ ದಾರ ಬಿಚ್ಚಾಣಿಕೆ ಮಾಡುವುದಕ್ಕೆ ಕೋಲಾರದ ರೇಷ್ಮೆ ಸಹಾಯಕ ವ್ಯವಸ್ಥಾಪಕ ಅಧಿಕಾರಿಗಳು ಹಾಗೂ ರೈತರು ಅವಕಾಶ ಮಾಡಿಕೊಡಬಾರದು ಹಾಗೂ ರೈತರಿಗೆ ರೇಷ್ಮೆ ಗೂಡಿಗೆ ಗುಣಮಟ್ಟದ ಆಧಾರದ ಮೇಲೆ ಬೆಲೆಯನ್ನು ನಿಗಧಿಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೇಣುಗೋಪಾಲಪುರ ಆನಂದ್, ನಾಗೇಶ್‌ಗೌಡ, ನಾರಾಯಣಸ್ವಾಮಿ, ಶ್ರೀನಿವಾಸ್, ಹಾಗೂ ಮುಂತಾದವರು ಹಾಜರಿದ್ದರು.