ಶಾಂತಿ ಕದಲಿದ ಹಿಂದೂ ಮುಸ್ಲಿಂ ಬುದ್ಧಿವಂತರು

ಶಾಂತಿ ಕದಲಿದ ಹಿಂದೂ ಮುಸ್ಲಿಂ ಬುದ್ಧಿವಂತರು

Share


ಕರ್ನಾಟಕದಲ್ಲಿ ಇತ್ತೀಚೆಗೆ ಧರ್ಮಗಳ ಸಂಘರ್ಷದಲ್ಲಿ ಶಾಂತಿಯನ್ನು ಕೆಲವರು ಕದಲುತ್ತಿದ್ದಾರೆ. ರನ್ನ ಪಂಪನಿಂದ ಹಿಡಿದು ಆಧುನಿಕತೆಯ ಕವಿಗಳಾದ ಕುವೆಂಪುವರೆಗೂ ಅಂದರೆ ಕವಿರಾಜ ಮಾರ್ಗದಿಂದ ಹಿಡಿದು ಇಂದಿನ ಚಂದ್ರಶೇಖರ ಕಂಬಾರ ಅವರ ಸಾಹಿತ್ಯದವರೆಗೂ ಕನ್ನಡ ನಾಡನ್ನು ಶಾಂತಿಯ ತವರು, ಬನವಾಸಿಯ ಬೀಡು, ಶ್ರೀ ಗಂಧದ ನಾಡು, ಸರ್ವಜನರ ಶಾಂತಿಯ ತೋಟ ಎಂದೆಲ್ಲ ಕನ್ನಡ ನಾಡನ್ನು ಹಾಡಿ ಹೊಗಳಿದ್ದಾರೆ. ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು. ಎಂಬ ಗೀತೆಯೊಂದಿಗೆ ನಾಡಿನ ಮಹತ್ವವನ್ನು ಡಾ|| ರಾಜ್‍ಕುಮಾರ್ ರವರ ಕಂಠ ಸಿರಿಯಲ್ಲಿ ಹೇಳಿದ ಈ ಕನ್ನಡ ನಾಡು ಇಂದು ಧರ್ಮ ಸಂಘರ್ಷದ ಮೂಲ ಸ್ಥಾನವಾಗಿ ಬಿಂಬಿತವಾಗುತ್ತಿದೆ. ಉಡುಪಿಯ ಕಾಲೇಜ್ ಒಂದರಲ್ಲಿ ಪ್ರಾರಂಭವಾದ ಹಿಜಾಬ್ ಕೇಸರಿ ಕದನವು ರಾಜ್ಯ ವ್ಯಾಪ್ತಿ ವ್ಯಾಪಿಸಿ ನ್ಯಾಯಾಲಯದ ಮುಂದೆ ನಿಂತಾಗ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಉಡುಪುಗಳನ್ನು ನಿಷೇಧಿಸಿ ಹಿಜಾಬ್‍ಗೆ ಅನುಮತಿಯನ್ನು ನಿರಾಕರಿಸಿತು. ಈ ವಿಚಾರದಲ್ಲಿ ಹೊತ್ತಿಕೊಂಡ ಬೆಂಕಿಯು ಮುಸ್ಲಿಂ ಸಮುದಾಯದಲ್ಲಿ ಮಾರ್ಚ್ 17ರಂದು ಹಿಜಾಬ್ ತೀರ್ಪನ್ನು ವಿರೋಧಿಸಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಕರ್ನಾಟಕ ಬಂದ್ ಮಾಡಿದರು. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹಿಂದೂ ಸಂಘಟನೆಗಳು ಹಿಂದೂ ಯುವ ಜನತೆ ಹಿಜಾಬ್‍ಗೋಸ್ಕರ ಒಂದು ದಿನ ನೀವು ಅಂಗಡಿ ಮುಚ್ಚುವುದಾದರೆ ಮುಂದಿನ ದಿನಗಳಲ್ಲಿ ಹಿಂದೂಗಳು ಮುಸ್ಲಿಂ ಅಂಗಡಿಗಳಲ್ಲಿ ವ್ಯಾಪಾರ ಮಾಡದಂತೆ ಜಾಗೃತಿ ಮೂಡಿಸಲು ಪ್ರಾರಂಭ ಮಾಡಿದರು. ಈ ಜಾಗೃತಿ ಮುಂದುವರೆದು ಕರಾವಳಿ ಕರ್ನಾಟಕದ ಕೆಲವು ಗ್ರಾಮಗಳ ಜಾತ್ರೆಗಳಲ್ಲಿ ಮುಸ್ಲಿಂ ಅಂಗಡಿಗಳಿಗೆ ಅನುಮತಿ ಬೇಡ ಎಂಬ ಹೋರಾಟ ಪ್ರಾರಂಭವಾಯಿತು ಈ ಹೋರಾಟವು ಮೊದಮೊದಲು ಶಿವಮೊಗ್ಗ, ಉಡುಪಿ, ಚಿಕ್ಕಮಂಗಳೂರು ನಂತರದ ದಿನಗಳಲ್ಲಿ ಕಲ್ಬುರ್ಗಿ, ಬೆಂಗಳೂರಿಗೂ ವ್ಯಾಪಿಸಿ ಇಂದು ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರದ ವಿರುದ್ದ ಹಿಂದೂತ್ವದ ಹೆಸರಿನಲ್ಲಿ ಧ್ವನಿಯೆತ್ತಲಾಗುತ್ತಿದೆ. ಈ ಸಂಘರ್ಷದ ಮಧ್ಯೆ ಹಲಾಲ ಮಾಂಸದ ವ್ಯಾಪಾರವು ಉತ್ತುಂಗಕ್ಕೇರಿದೆ. ಹಿಂದೂ ಬುದ್ದಿ ಜೀವಿಗಳು, ಮಠಾಧೀಶರು ಸೇರಿದಂತೆ ರಾಜಕಾರಣಿಗಳು ಹಿಂದೂ ಪರ ಸಂಘಟನೆಗಳು ಈ ಸಂಘರ್ಷಕ್ಕೆ ಬೆಂಕಿಯಿಡುತ್ತಿದ್ದಾರೆ. ಇತ್ತೀಚೆಗೆ ಈ ಒಂದು ಸಮಸ್ಯೆಯನ್ನು ರಾಜಕೀಯ ಮಾಡಿಕೊಂಡು ಕೆಲವು ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ. ಭಾರತ ಸಂವಿಧಾನದ ಮೂಲ ಆಸೆಯಂತೆ ದೇಶವು ಜಾತ್ಯಾತೀತ ಆಗಬೇಕಿತ್ತು. 75 ವರ್ಷಗಳಿಗಿಂತ ಹೆಚ್ಚು ಕಳೆದರೂ ಜಾತಿ – ಧರ್ಮದ ವಿಷಯದಲ್ಲಿ ನಾವು ಬದುಕುತ್ತಿದ್ದೇವೆ ಎನ್ನುವುದಾದರೆ ಅಂಬೇಡ್ಕರ್ ಸೇರಿದಂತೆ ಹಲವಾರು ಮಹಾನಿಯರಿಗೆ ನಾವು ಮಾಡುತ್ತಿರುವ ಅವಮಾನವಲ್ಲವೇ? ಅನಾದಿಕಾಲದಿಂದಲೂ ಹಿಂದೂ ಮುಸ್ಲಿಂ ಸೇರಿದಂತೆ ಹಲವಾರು ಧರ್ಮಿಯರು, ಜಾತಿಯವರು ಒಂದಾಗಿ ಬದುಕುತ್ತಿದ್ದಾರೆ. ಅಧಿಕಾರಕ್ಕಾಗಿ, ಹೆಸರಿಗಾಗಿ ಮತ್ತು ಬಾಯಿ ಚಪಲಕ್ಕಾಗಿ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕಾರ್ಯವು ನಡೆಯುತ್ತಿವೆ. ಇದರ ಮಧ್ಯೆ ಕಾಳಿ ಸ್ವಾಮಿಯಂತಹ ಕೆಲವು ವಿಕೃತ ಮನಸ್ಸಿನ ಹೋರಾಟಗಾರರು ಮುಸ್ಲಿಂರನ್ನು ವಿರೋಧಿಸುವ ಧಾವಂತದಲ್ಲಿ ನಮ್ಮ ಧರ್ಮದ ತನ್ನ ಸ್ಥಾನದ ಸಾಮಾನ್ಯ ಪ್ರಜ್ಞೆಯನ್ನು ಕಳೆದುಕೊಂಡಂತೆÉ ವರ್ತಿಸುತ್ತಿದ್ದಾರೆ. ಹಿಂದೂ ಮತ್ತು ಹಿಂದೂತ್ವದ ಪರಿಕಲ್ಪನೆಯಲ್ಲಿ ಮತ್ತು ಇಸ್ಲಾಂ ಮತ್ತು ಭಾರತೀಯ ಮುಸ್ಲಿಂ ಎಂಬ ವಿಚಾರಗಳಲ್ಲಿ ಪರಿಪೂರ್ಣ ವ್ಯಾಖ್ಯಾನಗಳಿಲ್ಲದಿದ್ದರೂ ಕೂಡ ಅರೆಬೆಂದ ಅಜ್ಞಾನಿಗಳು ಹುಚ್ಚು ನಾಯಿಯಂತೆ ಕಿರುಚುವುದನ್ನೆ ಉದ್ಯೋಗ ಮಾಡಿಕೊಂಡಿದ್ದಾರೆ. ಬಿ.ಜೆ.ಪಿ ಯವರು ತಮ್ಮ ಓಟ್ ಬ್ಯಾಂಕಿಗಾಗಿ ಹಿಂದೂತ್ವದ ಅಜಾಂಡದಲ್ಲಿ ಕಾಂಗ್ರೆಸ್‍ನವರು ಅಲ್ಪಸಂಖ್ಯಾತರು ಮತ್ತು ಮುಸ್ಲಿಂರನ್ನು ತಮ್ಮ ಓಟ್ ಬ್ಯಾಂಕಿಗಾಗಿ ಬೆಂಕಿ ಹಚ್ಚಿ ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿದ್ದಾರೆ. ಈ ವಿಕೃತ ಮನಸ್ಸಿನ ರಾಜಕೀಯ ವ್ಯವಸ್ಥೆಯಿಂದ ಸಾಮಾನ್ಯ ಜನರಿಗೆ, ಕಾರ್ಮಿಕ ವರ್ಗಕ್ಕೆ, ಸಣ್ಣ ಪುಟ್ಟ ವ್ಯಾಪರಸ್ಥರಿಗೆ ತೊಂದರೆಯಾಗುತ್ತದೆಯೇ ಹೊರೆತು ಹುಚ್ಚು ನಾಯಿಯಂತೆ ಬೊಗಳುವ ಹೋರಾಟಗಾರರಿಗಾಗಲೀ, ಸಮಾಜದಲ್ಲಿ ಬೆಂಕಿ ಹಚ್ಚಿ ತಮ್ಮ ರಾಜಕೀಯ ಜೀವನವನ್ನು ಉಜ್ವಲ ಮಾಡಿಕೊಳ್ಳುವ ನಾಮರದ ರಾಜಕಾರಣಿಗಳಿಗಾಗಲಿ ಆಗುವುದಿಲ್ಲ ರಾಜಕಾರಣಿಗಳು ಕಾರ್ಪೊರೆಟ್ ಬಿಸನೆಸ್ ಮ್ಯಾನತರ ಸಮಾಜದ ನೆಮ್ಮದಿಯನ್ನು ಹಾಳುಮಾಡಿ ತಮ್ಮ ರಾಜಕೀಯ ಬಿಸ್‍ನೆಸ್ ಅನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಿದ್ದಾರೆ. ರಾಮ, ರಹೀಮ್, ಅಲ್ಲಾ, ಯೇಸು ಧರ್ಮ ಸಂಕಟದ ಮಧ್ಯೆ ರಕ್ತ ಹರಿದರೆ ಬಂದು ಕಾಪಾಡುವುದಿಲ್ಲ.
ಕರ್ನಾಟಕವನ್ನು ಶಾಂತಿ ಸೌಹರ್ದತೆಯ ತೋಟ ಎನ್ನುತ್ತಾರೆ ಇಂತಹ ತೋಟದಲ್ಲಿ ಓದುವ ಮಕ್ಕಳ ತಲೆಯಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತಿ ಪರೀಕ್ಷೆಗಳನ್ನು ಆತಂಕದಲ್ಲಿ ಬರೆಯುವಂತೆ ಸ್ವಯಂಘೋಷಿತ ಬುದ್ದಿ ಜೀವಿಗಳು, ಧರ್ಮ ಪಾಲಕರು, ಧರ್ಮ ಅನುಯಾಯಿಗಳು ಮತ್ತು ಹೋರಾಟಗಾರರು ತಮ್ಮ ತಮ್ಮ ಉಳಿವಿಗಾಗಿ ಇಂತಹ ಬೆಂಕಿ ಹಚ್ಚುತ್ತಿದ್ದಾರೆಯೇ ಹೊರತು ಬೇರೆ ಯಾವುದೇ ಕಾರಣಗಳಿಲ್ಲ. ಒಬ್ಬ ನಿಜವಾದ ಮುಸ್ಲಿಂನಿಗೆ ಹಲಾಲ್, ಬುರ್ಕಾ, ಹಿಜಾಬ್, ತಲಾಖ್ ಮುಖ್ಯ ಅನ್ನುವುದಾದರೆ ಅದೇ ಖುರಾನಿನಲ್ಲಿ ಪ್ರತಿಯೊಬ್ಬರನ್ನು ಗೌರವಿಸಬೇಕು ಬೇರೆಯವರನ್ನು ಪ್ರೀತಿಸಬೇಕು, ದಾನಧರ್ಮ (ಜಕಾತ್) ಮಾಡಬೇಕು ಅಂತಹ ಅದೆಷ್ಟೋ ಒಳ್ಳೆಯ ವಿಚಾರಗಳು ಅರ್ಥವಾಗಿಲ್ಲವೇ? ಹಿಂದೂ ಧರ್ಮವು ಮೂಢನಂಬಿಕೆಯಿಂದ ಕೂಡಿದೆ ಎನ್ನುವ ನೀವು ನಿಮ್ಮ ಧರ್ಮದ ಮೂಢನಂಬಿಕೆಗಳು, ಕೆಟ್ಟ ಪದ್ದತಿಗಳು ಮತ್ತು ಮಹಿಳಾ ಶೋಷಣೆಯ ವಿರುದ್ಧ ಏಕೆ ಧ್ವನಿಯೆತ್ತುವಿದಿಲ್ಲ? ಹಾಗೆಯೇ ಹಿಂದೂ ಧರ್ಮದ “ವಸುದೈವ ಕುಟುಂಬಕಂ” ಮತ್ತು ಸ್ವಾಮಿ ವಿವೇಕಾನಂದರು ಹೇಳುವಂತೆ “ಬೇರೆ ಧರ್ಮದ ಬಗ್ಗೆ ತಪ್ಪು ಸಂದೇಶ ಸಾರುವ ಮುನ್ನ ಹಿಂದೂ ಧರ್ಮದ ಒಳ್ಳೆಯ ವಿಚಾರಗಳನ್ನು ಹೇಳು” ಸೇರಿದಂತೆ ಹಲವಾರು ಹಿಂದೂ ತಪ್ಪುಗಳನ್ನು ಸ್ವಯಂ ಘೋಷಿತ ಹಿಂದೂ ರಾಜಕಾರಣಿಗಳು ಖಾವಿ ತೊಟ್ಟ ಸ್ವಾಮಿಗಳು ಅರಿತಿದ್ದಾರ ಸತ್ಯಗಳೇ ಗೊತ್ತಿಲ್ಲದ ಅರೆಜ್ಞಾನಿಗಳಿಂದ ಆಧುನಿಕ ತಂತ್ರಜ್ಞಾನದ ಜಗತ್ತು ತಲೆಯಲ್ಲಿ ಇರಬೇಕಾದದ್ದು ಗೂಗಲ್‍ನಲ್ಲಿದೆ. ಗೂಗಲ್‍ನಲ್ಲಿ ಇರಬೇಕಾಗಿದ್ದು ತಲೆಯಲ್ಲಿದೆ. ಮನುಷ್ಯನ ವಿಕೃತ ವಾದಗಳು ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡ ನಾಡಿನ ಶಾಂತಿಯನ್ನು ಕದಲುವ ಜೊತೆಗೆ ಕರ್ನಾಟಕದ ಗೌರವವನ್ನು ಅಂತರ್ ರಾಷ್ರ್ಟೀಯ ಮಟ್ಟದಲ್ಲಿ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಭಾರತ ಅಂದರೆ ಹಿಂದೂ ಹಿಂದೂನೇ ಇಲ್ಲಿ ಸಾರ್ವಭೌಮ ಆದರೆ ಮುಸ್ಲಿಂ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಏಕೆಂದರೆ ವಾಹನಗಳ ರಿಪೇರಿ, ಹಳೇ ವಸ್ತುಗಳ ಮರುಬಳಕೆ ಮತ್ತು ಬಿರಿಯಾನಿಯಂತಹ ಅಡುಗೆಗೆ ನಮ್ಮ ಮುಸ್ಲಿಂನೇ ಬೇಕು. ಪಾಯಸ, ಹೋಳಿಗೆ ಹಿಂದೂ ಮನೆಯಲ್ಲಿ ತಿಂದರೆ ಬಿರಿಯಾನಿ ಮುಸ್ಲಿಂ ಮನೆಯಲ್ಲಿ ತಿನ್ನಬೇಕು. ಅದೇ ಚೆಂದ ಮನುಷ್ಯ ಬದುಕುವುದೇ 60 ರಿಂದ 70 ವರ್ಷ ಇದರ ಮಧ್ಯೆ ಹಲಾಲ್, ಜಟಕಾ ಬೇಕಾ? ನಾ ಅಳಿದರೂ, ಉಳಿದರೂ ನಾನು, ನನ್ನವರು ಸತ್ತರು ನನ್ನ ತನವು ನಶಿಸಿ ಹೋದರೂ ಕನ್ನಡ ನಾಡಿಗೆ ಒಂದು ಇತಿಹಾಸವಿದೆ. ಕನ್ನಡ ಮಣ್ಣಿಗೆ ಒಂದು ಧರ್ಮವಿದೆ. ಪಾಲಿಸಲು ಕಲಿಯಿರಿ ಈ ಮೂರು ದಿನದ ಸಂತೆಯಲಿ. ಸಂತೆ ಮುಗಿದ ಮೇಲೆ ಚಟ್ಟಕ್ಕೆ ಹೆಗಲು ಕೊಡುವವರು ಯಾರೋ ಗೊತ್ತಿಲ್ಲ. ಮಸಣದ ಮಣ್ಣು ಅಗೆಯುವವರು ಯಾರೊ ಗೊತ್ತಿಲ್ಲ. ಧರ್ಮವನ್ನು ಪಾಲಿಸಿ ಅಂಧರಾಗಿ ಅಲ್ಲ ಬೆಳಕಿನಿಂದ ಕನ್ನಡ ನಾಡಿನ ಶಾಂತಿಯನ್ನು ಕಾಪಾಡಲು ನಿಮ್ಮ ಸಂಯಮವು ಅತ್ಯಂತ ಮುಖ್ಯವಾಗಿದೆ.


Share