ಕಾಳಗಿ:- ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆ ಮಹತ್ವದ ಸ್ಥಾನ ಹೊಂದಿ, ಕವಿರಾಜ ಮಾರ್ಗ ಅತಿ ಮಹತ್ವದ ಕೃತಿಯಾಗಿ, ಕನ್ನಡ ನಾಡು ಮೌಲಿಕ ವಿಷಯ ಹೊಂದುವುದರ ಮೂಲಕ ಜಗತ್ತಿನ ಅತೀ ಶ್ರೀಮಂತ ಭಾಷೆಯಾಗಿದೆ ಎಂದು ಸಾಹಿತಿ, ಪ್ರಾಧ್ಯಾಪಕ ಡಾ. ಶಿವಶರಣಪ್ಪ ಮೊತಕಪಳ್ಳಿ ಹೇಳಿದರು.
ಪಟ್ಟಣದ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಯುವ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಘಟಕ ವತಿಯಿಂದ ಹಮ್ಮಿಕೊಂಡ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹಾಗೂ ಪರಂಪರೆ ಹೊಂದಿರುವ ಕನ್ನಡ ಭಾಷೆಯು ಅತ್ಯಂತ ಶ್ರೀಮಂತ ಭಾಷೆಯಾಗಿದ್ದು ಎಂಟು ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಕನ್ನಡ ಭಾಷೆಗೆ ಸಲ್ಲುತ್ತದೆ. ಕನ್ನಡ ನಾಡಿನ ಶಿಲ್ಪಕಲೆ, ಸಾಹಿತ್ಯ ಅಮೋಘವಾಗಿದೆ. ಕನ್ನಡ ನಾಡನ್ನು ಆಳಿದ ಅನೇಕ ರಾಜಮನೆತನಗಳು ಕನ್ನಡ ಭಾಷೆಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿವೆ. ಈ ಸುಂದರ ನಾಡಿನಲ್ಲಿ ವಾಸವಿರುವ ನಾವೇ ಧನ್ಯರು.
ನಾವು ನಮ್ಮ ಮಕ್ಕಳನ್ನು ಮಾತೃ ಭಾಷೆ ಕನ್ನಡದಲ್ಲೇ ಓದಿಸುವುದರ ಮೂಲಕ ಕನ್ನಡ ಬೆಳವಣಿಗೆಗೆ ಸಹಕರಿಸಬೇಕೆಂದು ಹೇಳಿದರು.
ಯುವ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಂಗಮನಾಥ ಹಿರೇಗೌಡ ಮಾತನಾಡಿ, ಕನ್ನಡ ಹಬ್ಬ ಆಚರಿಸುವ ಮೂಲಕ ಕನ್ನಡ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಶ್ರಮಿಸಬೇಕು. ಕನ್ನಡ ಕೂಗು ನವಂಬರ್ ತಿಂಗಳಿಗಷ್ಟೇ ಸೀಮಿತವಾಗದೆ ವರ್ಷಪೂರ್ತಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಕುಮಾರ ಶಾಸ್ತ್ರಿ ಮಾತನಾಡಿದರು. ಇದೇ ವೇಳೆ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದಕ್ಕೂ ಮೊದಲು ಬೆಳಗ್ಗೆ ಪಟ್ಟಣದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಶಾಸಕ ಡಾ. ಅವಿನಾಶ್ ಜಾಧವ್ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು. ಸರ್ಕಾರಿ ಪ್ರೌಢ ಶಾಲಾ ಆವರಣದಿಂದ ಅಂಬೇಡ್ಕರ್ ವೃತ್ತ, ಹಳೆ ಬಸ್ ನಿಲ್ದಾಣ, ಮುಖ್ಯಬಜಾರ ಮೂಲಕ ನೀಲಕಂಠ ಕಾಳೇಶ್ವರ ದೇವಸ್ಥಾನದ ವರೆಗೆ ವಿವಿಧ ಕಲಾ ತಂಡಗಳು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ನೃತ್ಯಗಳ ಮೂಲಕ ಅದ್ದೂರಿ ಮೆರವಣಿಗೆ ಜರುಗಿತು. ರಾಜ್ಯೋತ್ಸವ ಅಂಗವಾಗಿ ಪಟ್ಟಣದಲ್ಲಿ ಚಾಲಕರ ಸಂಘದಿಂದ ಕ್ರೋಸರ್ ಯ್ರಾಲಿ ನಡೆಯಿತು.
ತಹಶಿಲ್ದಾರ ಘಮಾವತಿ ರಾಠೋಡ ಕಾರ್ಯಕ್ರಮ ಉದ್ಘಾಟಿಸಿದರು. ಭರತನೂರ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಕಾಳಗಿ ನೀಲಕಂಠ ಮರಿದೇವರು, ಯುವ ಕರಸೇ ತಾಲೂಕು ಗೌರವಾಧ್ಯಕ್ಷ ಪರಮೇಶ್ವರ ಕಟ್ಟಿಮನಿ, ತಾಲೂಕಾಧ್ಯಕ್ಷ ದತ್ತು ಗುತ್ತೇದಾರ, ನೀಲಕಂಠ ಗುತ್ತೇದಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವಲಿಂಗಪ್ಪ ಡಿಗ್ಗಿ, ಪಿಡ್ಬ್ಲೂಡಿ ಎಇಇ ಮಲ್ಲಿಕಾರ್ಜುನ ದಂಡಿನ, ಸಿಪಿಐ ಜಗದೇವಪ್ಪ ಪಾಳ, ಕೃಷಿ ಅಧಿಕಾರಿ ಸರೋಜ ಕಲಬುರಗಿ, ಜೆಸ್ಕಾಂ ಎಇಇ ಇಲೀಯಾಜ್ ಅಹ್ಮದ್, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅನೀಲಕುಮಾರ ಗುತ್ತೇದಾರ, ಮಾಜಿ ಅಧ್ಯಕ್ಷ ಶರಣಗೌಡ ಪೆÇೀಲಿಸ್ ಪಾಟೀಲ, ಸಿಡಿಪಿಓ ಆರತಿ ತುಪ್ಪದ, ರಾಘವೇಂದ್ರ ಗುತ್ತೇದಾರ, ಮಲ್ಲಿನಾಥ ಪಾಟೀಲ, ಯುವ ಕರಸೇ ತಾಲೂಕು ಉಪಾಧ್ಯಕ್ಷ ಬಾಬು ನಾಟೀಕಾರ, ಚಿತ್ರಶೇಖರ ದಂಡೋತಿಕರ್, ದೀಲೀಪ ಅರಣಕಲ್, ಅನೀಲಕುಮಾರ ಗುತ್ತೇದಾರ, ಇಬ್ರಾಹಿಂ ಶಾ, ಕಾಳಶೆಟ್ಟಿ ಬೆಳಗುಂಪ್ಪಿ, ರೇವಣಸಿದ್ಧ ಪೂಜಾರಿ, ಮಂಜುನಾಥ ದಂಡಿನ, ಅವಿನಾಶ್ ಗುತ್ತೇದಾರ, ದತ್ತಾತ್ರೇಯ ಮದ್ದೂರ, ಕಾಳಪ್ಪ ತಳವಾರ, ಪ್ರಶಾಂತ ಕದಮ, ಶಿವಶರಣಪ್ಪ ಕಮಲಾಪೂರ, ಶಿವಶರಣಪ್ಪ ಗುತ್ತೇದಾರ, ವಿಶ್ವನಾಥ ವನಮಾಲಿ, ಸಂತೋಷ ನರನಾಳ, ಪರಮೇಶ್ವರ ಮಡಿವಾಳ ಇತರರು ಇದ್ದರು.
ದಯಾನಂದ ಹೊಸಮನಿ ಸ್ವಾಗತಿಸಿದರು, ಐಶ್ವರ್ಯ ಪ್ರಾರ್ಥಿಸಿದರು, ಬಾಬು ನಾಟೀಕಾರ ಪ್ರಾಸ್ತಾವಿಕ ಮಾತನಾಡಿದರು, ಶಿವರುದ್ರಯ್ಯಸ್ವಾಮಿ ಸಾಲಿ ನಾಡಗೀತೆ ಹಾಡಿದರು. ಪ್ರೀಯಾಂಕ ದಂಡಿನ ನಿರೂಪಿಸಿ ವಂದಿಸಿದರು
ವರದಿ-ಡಾ ಎಮ್ ಬಿ ಹಡಪದ ಸುಗೂರ ಎನ್