ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ಕಾರ್ಯಕ್ರಮದಲ್ಲಿ ಬೆಂಗಳೂರು ಅರಕೆರೆ ಮಿತ್ರ ಅಕಾಡೆಮಿ ಶಾಲೆಗೆ ೩ನೇ ತಂಡದ ಪಥ ಸಂಚಲನದಲ್ಲಿ ದ್ವಿತೀಯ ಪ್ರಶಸ್ತಿ ಬಂದಿದ್ದು ಈ ಕಾರ್ಯಕ್ರಮದ ಕೇಂದ್ರ ಬಿಂದುವಾದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಅಮೃತ ಹಸ್ತದಿಂದ ಬಹುಮಾನವನ್ನು ವಿತರಣೆ ಮಾಡಲಾಯಿತು.

76ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಶಾಲಾ ಮಕ್ಕಳು ಮತ್ತು ನಾಡಿನ ಗಣ್ಯರು ಹಿರಿಯರು ಭಾಗಿಯಾಗಿದ್ದು ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವಾರು ಗೌರವಾನ್ವಿತ ವ್ಯಕ್ತಿಗಳು ಭಾಗಿಯಾಗಿ ದೇಶದ ಗಣ್ಯ ವಿಚಾರಗಳನ್ನು ವಾಸ್ತವಿಕವಾಗಿ ಮಾತನಾಡಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳ ವಿಭಾಗದಲ್ಲಿ ೩ನೇ ತಂಡದ ಪಥ ಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಮಿತ್ರ ಅಕಾಡೆಮಿ ಶಾಲೆಗೆ ದ್ವಿತೀಯ ಬಹುಮಾನ ಬಂದಿರುವುದು ಶಾಲಾ ಮುಖ್ಯಸ್ಥರಿಗೆ ಹಾಗೂ ಎಲ್ಲಾ ಸಿಬ್ಬಂದಿವರ್ಗದವರಿಗೆೆ ಅತ್ಯಂತ ಸಂತಸದ ಸಂಗತಿಯಾಗಿದೆ.
