ಬಸವೇಶ್ವರ ತತ್ವಗಳು ಮತ್ತು ವಿಚಾರಗಳು ಜಗತ್ತಿಗೆ ಬೆಳಕು ನೀಡುವಷ್ಟು ಪ್ರಖರವಾಗಿದ್ದು, ಮಾನವಕುಲದ ಅಭಿವೃದ್ಧಿ ಮತ್ತು ಭವಿಷ್ಯಕ್ಕಾಗಿ ವಚನಗಳ ಸೃಷ್ಠ ಆಗಿದೆ ಅನ್ನಬಹುದು. ಬಸವಾದಿ ಶರಣರ ವಚನಗಳ ಮೂಲಕ ಸಾರಿದ ತತ್ವಗಳು ಲಿಂಗಾಯತ-ವೀರಶೈವ ಸೇರಿದಂತೆ ಎಲ್ಲಾ ಧರ್ಮಿಯರಿಗೂ ಅನ್ವಯಿಸುತ್ತವೆ.12ನೇ ಶತಮಾನದಲ್ಲಿ ಬಸವಣ್ಣ,ಅಲ್ಲಮಪ್ರಭು ಮತ್ತು ಅಕ್ಕ ಮಹಾದೇವಿ ಸೇರಿದಂತೆ ಎಲ್ಲಾ ಶರಣರು ಕೂಡ ಜಗತ್ತಿನ ಅಂದಕಾರವನ್ನು ಹೋಗಲಾಡಿಸಿ ಮಾನವಕುಲದ ಆತ್ಮದಲ್ಲಿ ಜ್ಞಾನದ ಜ್ಯೋತಿ ಬೆಳೆಗೆಸುವ ಪ್ರಯತ್ನ ಮಾಡಿದ್ದರು. ಹಿಂದೂ ಧರ್ಮದ ಜಾತಿ ಪದ್ದತಿಯನ್ನು ವಿರೋಧಿಸಿದ್ದು ವಚನ ಸಾಹಿತ್ಯ. ಶರಣರು ಅಚಿದೇ ಕೆಳಜಾತಿಯ ಮತ್ತು ಮೇಲ್ಜಾತಿ ಜೊತೆಗೆ ವಿವಾಹ ಮಾಡಿದ್ದು, ಮೂರ್ತಿ ಪೂಜೆ ವಿರೋಧಿಸಿದರು. ಮೇಲು-ಕೀಳು ವಿರೋಧಸಿದರು,ಲಿಂಗ ಬೇಧ ಮಾಡಲಿಲ್ಲ, ಹೆಣ್ಣಿಗೂ ಸ್ವಾತಂತ್ರ್ಯ ಇದೆ ಅಂತ ತೊರಿಸಿದ ಹೆಮ್ಮೆ ಅನುಭವ ಮಂಟಪಕ್ಕೆ ಇದೆ. ಅಕ್ಕ ಮಹಾದೇವಿಗೆ ಅವಕಾಶ ನೀಡುವ ಮೂಲಕ ಹೆಣ್ಣು ಮಕ್ಕಳು ಮನೆಯಲ್ಲೂ ಮತ್ತು ಸಮಾಜದಲ್ಲೂ ಮಾತನಾಡಬಹುದು ಅಂತ ಜಗತ್ತಿಗೆ ತೊರಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ. 6ನೇ ಶತಮಾನದಲ್ಲಿ ಜಗತ್ತಿನಲ್ಲೂ ಧರ್ಮ ಉದಯದ ಪರ್ವ ಅಂದರೆ 12ನೇ ಶತಮಾನವನ್ನು ಶರಣರ ಮೂಲಕ ಜಗತ್ತಿಗೆ ಬೆಳಕು ನೀಡಿದ ಯುಗ ಅಂತ ಕರೆಯಬಹುದು. ಆತ್ಮ ಮತ್ತು ಆತ್ಮ ಶುದ್ಧಿ ಜೊತೆಗೆ ಪರರ ಆತ್ಮಕ್ಕೂ ಲೇಸು ಬಯಸುವುದೇ ಶ್ರೇಷ್ಠ ಮತ್ತು ಕಾಯಕ ನಿಷ್ಠೆ ಹೀಗೆ ಹಲವಾರು ತತ್ವಗಳನ್ನು ಸಾರಿದ ಮಹನೀಯರು ಶರಣರು.
ಶರಣರ ತತ್ವಗಳು ಜಗತ್ತಿಗೆ ಬೆಳಕಾಗಬೇಕಾಗಿತ್ತು ಆದರೆ ವೀರಶೈವ ಲಿಂಗಾಯತರಿಗೆ ಸೀಮಿತವಾದವು. ಎಂಬಿಎ ಅಂತಹ ಪಠ್ಯಕ್ರಮದಲ್ಲಿ ವಚನ ಸಿದ್ದಾಂತಗಳು ಸೇರಬೇಕಾಗಿದ್ದವು ಆದರೆ ಲಿಂಗಾಯತ ಗ್ರಂಥಾಯಲಯದಲ್ಲಿ ದೂಳು ಹಿಡಿಯುತ್ತಿವೆ. ಮೂರ್ತಿ ಪೂಜೆ ವಿರೋಧಿಸಿದ ಬಸವಣ್ಣನವರ ಮೂರ್ತಿಗಳನ್ನು ರಾಜ್ಯ,ರಾಷ್ಟ್ರ ಮತ್ತು ಅಚಿತರಾಷ್ಟ್ರೀಯ ಮಟ್ಟದಲ್ಲಿ ಹಲವು ಕಡೆ ಸ್ಥಾಪಿಸಿದರೂ ಹೊರತು ಅವರ ತತ್ವಗಳನ್ನು ಜನರ ಮನಸ್ಸಿಗೆ ಮುಟ್ಟಿಸಲೇ ಇಲ್ಲ. ಬಸವಣ್ಣ ಸೇರಿದಂತೆ ಶರಣರ ಭಾವಚಿತ್ರಗಳು ದೇವರ ಮನೆಸೇರಿದವು ಹೊರತು ಅವರ ತತ್ವಗಳು ಮನಸೇರಲೇ ಇಲ್ಲ. ವಚನಗಳ ಪುಸ್ತಕಗಳು,ಬಸವಾದಿ ಶರಣರ ಪುಸ್ತಕಗಳು ಅಲಂಕಾರಿಕ ವಸ್ತುಗಳಂತೆ ಮನೆಯಲ್ಲಿ ಇವೆ ಹೊರತು ಅವುಗಳನ್ನು ಓದಿ ಪಾಲಿಸುತ್ತಿಲ್ಲ. ಮಕ್ಕಳಿಗೆ ವಚನಗಳ ಮಹತ್ವ ಹೇಳುವಂತಹ ಪ್ರಯತ್ನವನ್ನು ಪಾಲಕರು ಮಾಡುತ್ತಿಲ್ಲ. ಇಡೀ ಜೀವನದ ಸಾರಾಂಶವು ವಚನ ಸಾಹಿತ್ಯದಲ್ಲಿ ಅಡಗಿದೆ. ವೇಧ,ಭಗವತ್ತಗೀತೆ,ಕುರಾನ್ ಮತ್ತು ಬೈಬಲ ಸೇರಿದಂತೆ ಎಲ್ಲಾ ಧರ್ಮ ಗ್ರಂಥಗಳಲ್ಲಿ ಇರುವ ಅಮೃತಕ್ಕಿಂತ ಶ್ರೇಷ್ಠ ಅನುಭವ ಅಮೃತ ವಚನಗಳಲ್ಲಿ ಇದ್ದರೂ ಕೂಡ ಅದನ್ನು ಮನೆ-ಮನಗಳಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಆಗುತ್ತಿಲ್ಲ. ಬಸವ ಜಯಂತಿ ಅಂದು ಸಿಹಿಹಂಚಿ ಸುಮ್ಮನಾಗುವುದೇ ಬಸವಣ್ಣಗೆ ಮಾಡುವ ಅಪಮಾನವಾಗಿದೆ.
ಒಂದು ಕಡೆ ನಾವು ಬಸವಣ್ಣ ಅನುವಾಯಿಗಳು ಅಂತ ಹೇಳುತ್ತಲ್ಲೇ ಬಸವ ತತ್ವಗಳನ್ನು ಆಚರಸದೇ ಮತ್ತು ಬಸವ ವಿರೋಧಿ ಪದ್ಧತಿಗಳನ್ನು ಆಚರಣೆ ತರುವ ಮೂಲಕ ಸಾಗರದ ಆಚೆಗೂ ಮುಟ್ಟಬೇಕಾದ ಬಸವ ತತ್ವಗಳನ್ನು ಕಟ್ಟಿ ಹಾಕಿರುವುದು ನಮ್ಮವರೇ ಅನ್ನುವಷ್ಟು ಸತ್ಯ ಇದೆ. ಧಾರ್ಮಿಕ ಆಚರಣೆಯಿಂದ ಹಿಡಿದು, ದೇವರ ಬಗ್ಗೆ ಸ್ವಷ್ಟ ಪರಿಕಲ್ಪನೆಯನ್ನು ಕಂಡುಕೊಂಡು ಜಗತ್ತಿಗೆ ವಚನಗಳ ಮೂಲಕ ಸಾರಿದವರು ಶರಣರು ಆದರೆ ಇಂದು ಅವರು ಪೂಜೆಗೆ ಮಾತ್ರ ಸೀಮಿತವಾಗಿದ್ದಾರೆ. ಆಡಳಿತ, ರಾಜಕೀಯ ಮತ್ತು ಧರ್ಮ ಹಾಗೂ ಪದ್ದತಿಗಳ ಬಗ್ಗೆ ಅತ್ಯಂತ ಸರಳ ರೂಪದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಾರೆ.ಆದರೆ ಅವುಗಳನ್ನು ಮುಟ್ಟಿಸುವಲ್ಲಿ ಧರ್ಮ ಗುರುಗಳು, ಮಠಾದೀಶರು, ಸಮಾಜ ಮುಂಡರು, ರಾಜಕೀಯ ನಾಯಕರು ಮತ್ತು ಧರ್ಮ ಪಾಲಕರು ಸೊತ್ತಿದ್ದಾರೆ. ಇಂದಿನ ಆಧುನಿಕ ಭಾರತವು ಬಸವ ಭಾರತ ಆಗಬೇಕಿತ್ತು ಆದರೆ ಪ್ರಚಾರದ ಕೊರತೆಯಿಂದ ಆಗಿಲ್ಲ.
ಬಸವ ಸಮಿತಿ, ಕೂಡಲಸಂಗಮ ಮಠ ಸೇರಿದಂತೆ ಕೇಲ ಪ್ರಯತ್ನಗಳು ನಡೆದರೂ ಕೂಡ ಇನ್ನುಳಿದಂತೆ ದೊಡ್ಡ ಮಟ್ಟದ ಪ್ರಯತ್ನಗಳು ಎಲ್ಲರಿಂದ ನಡೆದರೇ ಮಾತ್ರ ಬಸವಣ್ಣ ಪುಸ್ತಕದಿಂದ ಹೊರ ಬಂದು ಜಗತ್ತಿಗೆ ಬೆಳಕಾಗಿ ಜನಸಾಮಾನ್ಯರ ಮನ ಸೇರುತ್ತಾರೆ-ಆಗ ಜಾತಿ,ಧರ್ಮ ಭೇದವಿಲ್ಲದ,ಸಮಾನತೆಯ ಮತ್ತು ಉದ್ಯೋಗಸ್ಥ,ಮೂಡನಂಬಿಕೆ ಇಲ್ಲದ ಸಮಾಜ ನಿರ್ಮಾಣವಾಗುತ್ತದೆ.
Category: ಚರ್ಚೆ
ಎಲ್ಲಿದ್ದೇ ಇಲಿಯತನಕ-ಸೋಗಲಾಡಿ ರಾಜಕಾರಣ
ಕರ್ನಾಟಕ ವಿಧಾನ ಸಭೆಯ ಅವಧಿಯು ಮೇ 2023ಕ್ಕೆ ಮುಗಿಯುತ್ತದೆ.ಇದರ ಮಧ್ಯ ಕೇಲವು ರಾಜಕಾರಣಿಗಳು ಮತ್ತು ರಾಜಕೀಯ ಚಿಂತಕರ ಅಭಿಪ್ರಾಯದಂತೆ ಇದೇ ವರ್ಷ ನವಂಬರ್ ಅಥವಾ ಡಿಸೆಂಬರ್‍ನಲ್ಲಿ ಚುನಾವಣೆ ನಡೆಯಬಹುದು ಅಂತ ರಾಜಕೀಯ ವಲಯದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ. ಬಿಜೆಪಿಯು ಕೂಡಾ ಸಂಪುಟ ವಿಸ್ತರಿಸುವ ಬದಲಿಗೆ ಚುನಾವಣೆಗೆ ಹೋಗುವ ಇಂಗಿತ ವ್ಯಕ್ತವಾದಂತೆ ಕಾಣುತ್ತದೆ. ರಾಜ್ಯ ಸೇರಿದಂತೆ ದೇಶದಲ್ಲಿ ಈ ಹಿಂದಿನ 4 ವರ್ಷಗಳಲ್ಲಿ ಹಲವಾರು ಬದಲಾವಣೆಗಳು ಕಂಡುಬಂದಿವೆ. ಕರೋನ ಇಡೀ ಜಗತ್ತನ್ನು 15ರಿಂದ 20 ವರ್ಷ ಹಿಂದಕ್ಕೆ ಒಯ್ಯುವ ಜೊತೆಗೆ ಮಾನವಕುಲಕ್ಕೆ ಭಯದ ಪರಿಚಯ ಮಾಡಿಸಿದೆ. ಇದು ದೇಶ ಮತ್ತು ರಾಜ್ಯದಲ್ಲೂ ನಡೆದಿದ್ದು, ಅಭಿವೃದ್ಧಿ ಮಾಡುವುದಕ್ಕಿಂತ ಬದುಕುವುದು ಮತ್ತು ಬದುಕಿಸುವುದೇ ದೊಡ್ಡ ಸಾಧನೆ ಆಗಿತ್ತು ಕರೋನ ಮೊದಲ ಅಲೆಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಕೊಟ್ಟಿತ್ತು ಎರಡನೆಯ ಅಲೆಗೆ ಕರ್ನಾಟಕ ಸ್ಭೆರಿಂದಂತೆ ಭಾರತವು ಸಿದ್ದವಾಗಿತ್ತು. ಈಗ ಮತ್ತೆ ಮೂರನೆಯ ಅಲೆಯ ಸದ್ದು ಮಾಡುತ್ತಿದೆ. ಇದರ ಮಧ್ಯ ಚುನಾವಣೆಗಳು ರಾಜಕಾರಣಿಗಳ ಪಕ್ಷಾಂತರ, ಅಧಿಕಾರಕ್ಕಾಗಿ ರಸ್ತೆಗಿಳಿದು ಜಗಳ ಹೀಗೆ ಮಾಡುತ್ತಾ ಕಾಲಕಳೆದ ರಾಜಕಾರಣಿಗಳು ಚುನಾವಣೆ ಹತ್ತಿರ ಬರುತ್ತಲ್ಲೆ ಜನರತ್ತ ಮುಖ ಮಾಡಿದ್ದಾರೆ. ಜೀವನವನ್ನೆ ನಡೆಸಲು ಕಷ್ಟವಾದಾಗ, ತಮ್ಮವರೇ ಸತ್ತಾಗ ಮುಖ ನೋಡಲು ಆಗದಿದ್ದಾಗ ಮತ್ತು ಬದುಕುವುದಕ್ಕಿಂತ ಸಾಯುವುದೇ ಮೇಲು ಅಂತ ಅನ್ನಿಸಿದ್ದಾಗ ಕಾಣದ ರಾಜಕಾರಣಿಗಳು ಈಗ ಕಷ್ಟ ಕೇಳಲು ಮನೆಗೆ ಬರುತ್ತಿದ್ದಾರೆ.
ಬಿಜೆಪಿ,ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆಯ ತಯಾರಿಗೆ ಸಿದ್ದತೆ ನಡೆಸುತ್ತಿವೆ. ಕಾಂಗ್ರೇಸ್ ಪಕ್ಷವು ಮೇಕೆದಾಟು ಹೋರಾಟ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಹೇಳಿಕೆಗಳು ಮತ್ತು ಹೋರಾಟಗಳು 2023 ಚುನಾವಣೆಗೆ ಬೆಂಬಲವಾಗಿವೆ ಹೊರತು ರಾಜ್ಯಕ್ಕೆ ಅನುಕೂಲವಾಗಲಿ ಅಂತ ಇಲ್ಲ. ಇನ್ನೂ ಜೆಡಿಎಸ್‍ವು ಜನತಾ ಜಲಧಾರೆ ಎಂಬ ಕಾರ್ಯಕ್ರಮ ರೂಪಿಸಿಕೊಂಡು ಜನತೆಯ ಹತ್ತಿರವಾಗುತ್ತಿದ್ದಾರೆ. ಕುಮಾರಸ್ವಾಮಿ ಅದೇ ಹಳೆಯ ವರ್ಷೆ ಪ್ರಾರಂಭಿಸಿದ್ದಾರೆ- ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೆ ಪಕ್ಷವನ್ನು ವಿಸರ್ಜಸುತ್ತೇವೆ ಅನ್ನುತ್ತಲ್ಲೆ ಕಣ್ಣಿರು ಹಾಕುತ್ತಿದ್ದಾರೆ. ಹಿಂದೆ ಯಡ್ಡಿಯೂರಪ್ಪ ಅಧಿಕಾರ ನೀಡದೇ ಮೋಸ ಮಾಡಿದ ಕುಮಾರಸ್ವಾಮಿ ಮತ್ತು ಕಾಂಗ್ರೇಸ್‍ಗೂ ಅನ್ಯಾಯ ಮಾಡಿದ್ದಾರೆ ಆದರೂ ಕೂಡ ತಾವು ಅತ್ಯಂತ ಪ್ರಾಮಾಣಿಕ ಸಿದ್ದಾಂತವಾದಿ ರಾಜಕಾರಣಿಯಂತೆ ಪೋಜ್ ಕೋಡುತ್ತಿದ್ದಾರೆ. ತಾವೇ ಮುಖ್ಯಮಂತ್ರಿಯಾದಾಗ ಕೇಳಿದ ಸಮಸ್ಯೆಗಳನ್ನು ಬಗ್ಗೆ ಹರಿಸದೇ ಈಗ ಅವುಗಳನ್ನೆ ಕಾಂಗ್ರೇಸ್ ಮತ್ತು ಬಿಜೆಪಿ ಮೇಲೆ ಹಾಕುತ್ತಾ ಜನರನ್ನು ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.ಕುಮಾರ ಸ್ವಾಮಿ ಒಮ್ಮೆ ಬಿಜೆಪಿ ವಿರೋಧಿಸಿದ್ದರೆ ಮತ್ತೊಮ್ಮೆ ಹೋಗಳುತ್ತಾರೆ. ಇತ್ತ ಕಾಂಗ್ರೇಸ್ ಜೊತೆಗೂ ಅದೇ ರೀತಿ ನಡೆದುಕೊಳ್ಳುತ್ತಾರೆ. ಜೆಡಿಎಸ್ ಪಕ್ಷವು ಕನ್ನಡಿಗರ ಪಕ್ಷ ಅನ್ನುವುದಕ್ಕಿಂತ ದೇವೆಗೌಡರ ಕುಟುಂಬ ಪಕ್ಷ ಅನ್ನಬಹುದು. ಕುಮಾರಸ್ವಾಮಿಯ ನಾಟಕಗಳು ಚುನಾವಣೆ ಹತ್ತಿರವಾಗುತ್ತಲ್ಲೆ ಹೆಚ್ಚಾಗುತ್ತವೆ. ಇದೇ ಸಾಲಿನಲ್ಲಿ ಆಮ್ ಆದ್ಮೀ ಪಕ್ಷ ಮತ್ತು ಕೆ.ಆರ್.ಎಸ್ ಪಕ್ಷಗಳು ಕೂಡ ಚುನಾವಣೆ ಗೆಲ್ಲಬೇಕು ಅನ್ನುವ ಒಚಿದೇ ಕಾರಣಕ್ಕೆ ಒಂದಿಷ್ಟು ಕ್ರಿಯಾಶೀಲವಾಗಿ ಕಾಣುತ್ತಿವೆ.ಇಲ್ಲಿಯವರೆಗೆ ಸುಮ್ಮನಿದ್ದು ಚುನಾವಣೆ ಹತ್ತಿರ ಬರುತ್ತಲ್ಲೆ ಹೋರಾಟ, ಸೇವೆ ಮತ್ತು ಕಾರ್ಯಕ್ರಮಗಳು ಮತ್ತು ಭವಿಷ್ಯದ ದೃಷ್ಠಿಕೋನಗಳು ಹೀಗೆ ಹೇಳುತ್ತಾ ಜನರಿಗೆ ಹತ್ತಿರವಾಗುತ್ತಿರುವ ರಾಜಕಾರಣಿಗಳ ಸೋಗಲಾಡಿತನವನ್ನು ಜನ ಅರ್ಥ ಮಾಡಿಕೊಳ್ಳಬೇಕು. ಹಿರಿಯ ಕಿರಿಯ ರಾಜಕಾರಣಿಗಳು ಕ್ಷೇತ್ರ ಸುತ್ತುವ ಜೊತೆಗೆ ಜನರ ಮನೆ ಬಾಗಲಿಗೆ ಹೋಗುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಸಮಯಸಾಧಕರು ತಮ್ಮ ಲಾಭಕ್ಕಗಿ ಜನರನ್ನು ಮರಳು ಮಾಡಲು ಬರುತ್ತಿದ್ದಾರೆ.
ಚುನಾವಣೆ ಹತ್ತಿರ ಬರುತ್ತಲ್ಲೆ ಹೊಸ ಪಕ್ಷಗಳು ಹುಟ್ಟಿಕೊಳ್ಳುತ್ತವೆ, ಯುವ ನಾಯಕರು ಹುಟ್ಟಿಕೊಳ್ಳುತ್ತಾರೆ, ಸಮಾಜ ಸೇವಕರು ಹುಟ್ಟಿಕೊಳ್ಳುತ್ತಾರೆ ಹಾಗೂ ಪತ್ರಿಕೆಗಳು ಮಾಧ್ಯಮಗಳು ಹುಟ್ಟಿಕೊಳ್ಳುತ್ತವೆ ಚುನಾವಣೆ ಮುಗಿದ ನಂತರ ಎಲ್ಲವು ಮಾಯ ! ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪ್ರಾದೇಶಿಕ ಪಕ್ಷಗಳು ಮತ್ತು ಹೊಸ ಪಕ್ಷಗಳು ಚುನಾವಣೆಗೆ ಕೊಡುವಷ್ಟು ಮಹತ್ವವನ್ನು ಅಭಿವೃದ್ದಿಗೆ ನೀಡಿದ್ದರೆ ಸಮಸ್ಯೆಮುಕ್ತ ಜಗತ್ತಿನ ನಂಬರ್ ಒನ್ ದೇಶ ನಮ್ಮದಾಗಿರುತ್ತಿತ್ತು.ಜನ ಮರಳೋ ಜಾತ್ರೆ ಮರಳೋ ಅನ್ನುವಂತೆ ಜನತೆಯನ್ನು ಮರಳು ಮಾಡುತ್ತಿದ್ದಾರೆ ರಾಜಕಾರಣಿಗಳು. ಚುನಾವಣೆ ದೂರ ಇರುವಾಗ ಒಂದು ರೂಪಾಯಿ ಖರ್ಚು ಮಾಡದ ರಾಜಕಾರಣಿಗಳು ಚುನಾವಣೆ ಬರುತ್ತಲ್ಲೆ ಕೋಟಿ-ಕೋಟಿ ಖರ್ಚು ಮಾಡುತ್ತಾರೆ.ಕೇಳಿದ್ದು ಕೊಡುತ್ತಾರೆ. ಹೀಗೆ ಚುನಾವಣೆಗೆಗಾಗಿ ಚರ್ಚು ಮಾಡುವುದನ್ನೆ ಕೇಲವರು ಭವಿಷ್ಯದ ದೃಷ್ಟಿ ಅಥವಾ ಸಮಾಜಸೇವೆ ಅಂತ ಹೇಳುತ್ತಾರೆ.ಚುನಾವಣೆ ಮುಗಿದ ನಂತರ ನಾಪತ್ತೆ ಆಗುವ ರಾಜಕಾರಣಿಗಳು ಅಂದರೆ ಗೆದ್ದªರು ಸೋತ್ತವರು ಇಬ್ಬರು ಅಷ್ಟೆ ಏಕೆಂದರೆ ಒಂದೇ ಬಾವಿಯ ಕಪ್ಪೆಗಳಂತೆ ಈ ರಾಜಕಾರಣಿಗಳ ಬುದ್ದಿ.
ಚುನಾವಣೆಯ ಪ್ರಣಾಳಿಕೆ ಹೆಸರಿನಲ್ಲಿ ಜನತೆಗೆ ಹಲವಾರು ಆಶೆ ತೋರಿಸಿ ಮತ ಕಿತ್ತುಕೊಳ್ಳುತ್ತಾರೆ,ಕೆಲವರಿಗೆ ಹಣ ಹೆಚಿಡ ಬಟ್ಟೆ ಕುಕ್ಕರ್ ಇತ್ಯಾದಿ ಕೊಟ್ಟು ಕೊಂಡುಕೊಳ್ಳುತ್ತಾರೆ.ಹೀಗೆ ಮಾರಿದ ಅಥವಾ ಆಸೆಯಿಂದ ಕೊಟ್ಟ ಮತದಿಂದ ಕೊಳ್ಳೆಹೊಡೆಯುತ್ತಾರೆ.ಕಷ್ಟಕ್ಕೆ ಬರದ ರಾಜಕಾರಣಿಗಳು ಇನ್ನು ಮುಂದೆ ಬರುತ್ತಾರೆ ಏಕೆಂದರೆ 2023ಕ್ಕೆ ಚುನಾವಣೆಗಾಗಿ ಇದು ಹೇಗೆ ಅಂದರೆ ಅಂದು ಬ್ರಿಟಿಷರು ವ್ಯಾಪಾರಕ್ಕಾಗಿ ಬಂದು ದೇಶ ಆಳಿದರು ಇಂದು ಸಹಾಯ ಮಾಡುತ್ತೇವೆ ಅಥವಾ ಕನಸು ತುಂಬಿ ದೇಶ ಲೂಟಿ ಮಾಡುವ ಪ್ರಬುದ್ಧ ಕ್ರಿಮೀನಲ್ ಬರುತ್ತಾರೆ ಈಗಲಾದರೂ ಎಚ್ಚರದಿಂದ ಇರಿ. ಭವಿಷ್ಯದ ಅಭಿವೃದ್ಧಿಗಾಗಿ ಮತನೀಡಿ-ಪ್ರಜಾಪ್ರಭುತ್ವ
ಭಗವಾನ್ ಮಹಾವೀರರ ಬೋಧನೆಗಳು
ಭಗವಾನ್ ಮಹಾವೀರರು ಈ ವರ್ತಮಾನ ಕಾಲದ ಭರತ ಕ್ಷೇತ್ರದ 24 ನೇಯ (ಅಂತಿಮ) ತೀರ್ಥಂಕರರು. ಈಗ ನಡೆಯುತ್ತಿರುವುದು ಅವರ ತೀರ್ಥಕಾಲ ಚೈತ್ರ ಶುಕ್ಲ ತ್ರಯೋದಶಿ ಶುಭಯೋಗ ಸ್ವಾತಿ ನಕ್ಷತ್ರದಲ್ಲಿ ಸುಮಾರು 5621 ವರ್ಷಗಳ ಹಿಂದೆ ಭಗವಾನ್ ಮಹಾವೀರರ ಜನನವಾಯಿತು. ಕುಂಡಲಪುರದ ಅರಸ ಸಿದ್ದಾರ್ಥ ರಾಜ ಮತ್ತು ತ್ರಿಶಲಾ ರ ಏಕಮಾತ್ರ ಸುಪುತ್ರ ಇವರು. ಇವರ ಜನನಕ್ಕೆ 6 ತಿಂಗಳು ಮುಂಚಿತವಾಗಿಯೇ ಸಿದ್ಧಾರ್ಥ ರಾಜನ ಅರಮನೆಯ ಅಂಗಳದಲ್ಲಿ ಪ್ರತಿದಿನ ಮೂರುಬಾರಿ ಮೂರುವರೆ ಕೋಟಿ ಮುತ್ತು ರತ್ನಗಳ ಸುರಿಮಳೆ ಆಗುವುದಕ್ಕೆ ಪ್ರಾರಂಭವಾಯಿತು. ಒಟ್ಟು ಹದಿನೈದು ತಿಂಗಳು ಈ ರತ್ನವೃಷ್ಟಿ ಮುಂದುವರೆದು ಧನ-ಧನ್ಯಾದಿಗಳಿಂದ ರಾಜ್ಯ ಸುಭೀಕ್ಷವಾಯಿತು. ಮಹಾಪುರುಷರೆಂದರೆ ಹೀಗೆ ಪುಣ್ಯದ ಹೊಳೆಯೇ ಹರಿಯುತ್ತದೆ.
ತೀರ್ಥಂಕರರು:- ತೀರ್ಥಂಕರರೆಂದರೆ ಧರ್ಮ ತೀರ್ಥ ಪ್ರವರ್ತಕರು ‘ತರಂತಿ ಸಂಸಾರ ಮಹಾರ್ಣವಂ ಏಸ ತತ್ ತೀರ್ಥಂ’
ಅರ್ಥ:- ಯಾರ ಉಪದೇಶದ ಮುಖಾಂತರವಾಗಿ ಈ ಸಂಸಾರ ಸಾಗರವನ್ನು ದಾಟಲು ಸಾಧ್ಯವಾಗುತ್ತದೆಯೋ ಅದೇ ತೀರ್ಥವಾಗಿದೆ.(ಕಲ್ಯಾಣಕಾರಿಯಾಗಿದೆ)
ಭಗವಾನ್ ಮಹಾವೀರರ ಜನ್ಮಕಲ್ಯಾಣೋತ್ಸವದಂದು ಅವರ ಉನ್ನತ ವಿಚಾರಗಳ , ತತ್ವಗಳ ಸಿದ್ದಾಂತಗಳನ್ನು ಅರಿತು ಅದರಂತೆ ನಡೆಯುವುದು ಕಲ್ಯಾಣಕರವಾಗಿದೆ.
ಮಹಾವೀರರ ಸಿದ್ಧಾಂತಗಳು:- ಜೈನ ತತ್ವಗಳಾದ ಅಹಿಂಸೆ, ಅಪರಿಗೃಹ ಮತ್ತು ಅನೇಕಾಂತವಾದಗಳು ಭಗವಾನ್ ಮಹಾವೀರರ ಕಾಲದಲ್ಲಿ ಪ್ರಚಾರವಾಗಿ ಪುನರ್ ಸ್ಥಾಪನೆಗೊಂಡವು. ಇವುಗಳ ಪ್ರಚಾರ ಮಾಡಿ ಭಗವಾನ್ ಮಹಾವೀರರು ತಾವು ಉತ್ತಮ ಸಮಾಜ ಶಾಸ್ತ್ರಜ್ಞರು ಮತ್ತು ಸಮಾಜ ಸುಧಾರಕರು ಎಂಬುದನ್ನು ನಿರೂಪಿಸಿದರು. ಈ ಸಿದ್ಧಾಂತಗಳನ್ನು ಪಾಲಿಸುವುದರಿಂದ ಹೇಗೆ ಜೀವನವನ್ನು ಸ್ವರ್ಗಸಮಾನವನ್ನಾಗಿ ಮಾಡಿಕೊಂಡು ಬಾಳಬಹುದು ಎಂದು ಭೋಧಿಸಿದರು. ಇಷ್ಟಲ್ಲದೇ ಶಾಶ್ವತ ಸುಖವನ್ನು ಪಡೆಯುವ ಮೋಕ್ಷಮಾರ್ಗ , ರತ್ನತ್ರಯ ಮಾರ್ಗವನ್ನೂ ಭೋಧಿಸಿದರು.
ಅಹಿಂಸೆ:- ಅಹಿಂಸಾ ಪರಮೋಧರ್ಮ: ಬಾಳು ಮತ್ತು ಬಾಳಗೊಡು ಐive ಚಿಟಿಜ ಐeಣ ಐive ಇವು ಮಹಾವೀರರ ವಿಚಾರ. ಈ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೆ ಬದುಕುವ ಹಕ್ಕಿದೆ . ಆ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಕೇವಲ ತಮ್ಮ ನಾಲಗೆಯ ರುಚಿಗಾಗಿ ಮತ್ತೊಂದು ಜೀವಿಯನ್ನು ಕೊಂದು ತಿನ್ನುವುದು ಮಹಾಪಾಪ ಎಂದು ಮಾನವರಿಗೆ ಭೋಧಿಸಿದರು. ನಮ್ಮ ಸುತ್ತಮುತ್ತಲು ಇರುವ ಏಕೇಂದ್ರಿಯದಿಂದ ಪಂಚೇದ್ರಿಯ ಜೀವಿಗಳ ವರೆಗೆ ಯಾವ ಜೀವಿಗೂ ಉದ್ದೇಶಪೂರ್ವಕವಾಗಿ ಹಿಂಸೆ ಮಾಡಬಾರದು ಎಂದರು. ಸಾವಿರರು ವರ್ಷಗಳ ಹಿಂದೆಯೇ ಭಗವಾನ್ ಮಹಾವೀರರು ಪರಿಸರ ಸಂರಕ್ಷಣೆಯ ವಿಚಾರವಾಗಿ ಒತ್ತುಕೊಟ್ಟರು. ಮನುಜ ಇಂದು ತನ್ನ ಸ್ವಾರ್ಥ ಮತ್ತು ದುರಾಸೆಯಿಂದ ಪ್ರಕೃತಿಯ ಮೇಲೆ, ಪರಿಸರದ ಮೇಲೆ ಪ್ರಹಾರ ಮಾಡುತ್ತಾ ದಬ್ಬಾಳಿಕೆ ನಡೆಸುತ್ತಿದ್ದಾನೆ. ಗುಡ್ಡ ಬೆಟ್ಟ , ನದಿ ಸಮುದ್ರ, ಗಿಡ ಮರ, ಅರಣ್ಯಗಳ ಸಂಪತ್ತನ್ನೆಲ್ಲಾ ಲೂಟಿ ಮಾಡಲು ಅವನ್ನು ನಾಶಮಾಡುತ್ತಿದ್ದಾನೆ, ಕಲುಷಿತಗೊಳಿಸುತ್ತಿದ್ದಾನೆ. ನಮ್ಮ ಪರಿಸರದಲ್ಲಿ ತುಂಬಿರುವ ಏಕೇಂದ್ರಿಯ ಜೀವಿಗಳಿಗೆ ಮತ್ತು ತ್ರಸ ಜೀವಿಗಳಿಗೂ ಇದರಿಂದ ಅಪಾರ ಹಿಂಸೆಯಗುತ್ತಿದೆ. ಈ ಹಿಂಸೆಯಿಂದಾಗಿಯೇ ಇಂದು ಮನುಕುಲ ಅನೇಕ ಪ್ರಾಕೃತಿಕ ವಿಕೋಪಗಳಿಗೆ ಗುರಿಯಾಗಿದೆ. ಮಾನವನ ದಬ್ಬಾಳಿಕೆಗೆ ಪ್ರಕೃತಿ ಈಗ ಸಿಡಿದೆದ್ದಿದೆ. ಗ್ಲೋಬಲ್ ವಾರ್ಮಿಂಗ್, ಸುನಾಮಿ, ಭೂಕಂಪ ,ಚಂಡಮಾರುತ ಬರ ಮುಂತಾದವುಗಳು ಹೆಚ್ಚಾಗುತ್ತಿವೆ. ಕೊರೋನಾ ಸಮಯದಲ್ಲಿ ಆಕ್ಸಿಜನ್‍ಗಾಗಿ ಮನುಷ್ಯರು ಪರದಾಡಿ ಪರಿಪಾಟಲು ಪಟ್ಟರು. ಪರಿಸರವನ್ನು ಸಂರಕ್ಷಿಸಿ ಆಗ ನೀವೂ ಸುರಕ್ಷಿತ ಎಂದೂ ಭಗವಾನ್ ಮಹಾವೀರರು ಆ ಕಾಲದಲ್ಲೇ ಬೋಧಿಸಿದ್ದರು.
ಪರಸ್ಪರೋಪಗೃಹೋ ಜೀವಾನಾಮ್- ಜೀವಿಗಳು ಬದುಕಿಗಾಗಿ ಪರಸ್ಪರ ಅವಲಂಭಿಸಿರುತ್ತವೆ. ಆದ್ದರಿಂದ ಸರ್ವಹಿತವನ್ನು ಬಯಸುವುದೇ ಧರ್ಮ ಎಂದು ಭಗವಾನ್ ಮಹಾವೀರರು ಭೋಧಿಸಿದರು.
ಧರ್ಮ:-
- ಯಾವುದನ್ನು ನೀನು ನಿನಗಾಗಿ ಬಯಸುತ್ತಿಯೋ ಅದನ್ನು ಬೇರೆಯವರಿಗೂ ಬಯಸಬೇಕು. ಯಾವುದನ್ನು ನೀನು ನಿನಗಾಗಿ ಬಯಸುವುದಿಲ್ಲವೋ ಅದನ್ನು ಬೇರೆಯವರಿಗೂ ಬಯಸಬಾರದು.
- ಧರ್ಮದ ಹೆಸರಿನಲ್ಲಿ ಹಿಂಸೆ ಮಾಡಿದರೆ ಅದು ಧರ್ಮವನ್ನೇ ಕೊಲೆ ಮಾಡಿದಂತೆ.
- ಧರ್ಮೋ ರಕ್ಷತಿ ರಕ್ಷಿತಃ:- ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವು ರಕ್ಷಿಸುತ್ತದೆ.
ಮುಪ್ಪು ನಮ್ಮನ್ನಾವರಿಸುವ ಮುನ್ನ, ಇಂದ್ರಿಯಾಗಳು ಶಿಥಿಲವಾಗುವ ಮುನ್ನ ಬೇನೆ ಬೇಸರಿಕೆಗಳು ಬೆಳೆಯುವ ಮುನ್ನ ಧರ್ಮವನ್ನಾಚರಿಸಬೇಕು ಎಂದು ಭಗವಾನ್ ಮಹಾವೀರರು ಭೋಧಿಸಿದರು.
ಸ್ವಹಿಂಸೆ, ಪರಹಿಂಸೆ ಎರಡನ್ನು ಮಾಡಬಾರದು ಕ್ರೋಧ, ಮಾನ, ಮಾಯಾ, ಲೋಭಗಳು ನಮ್ಮ ಆತ್ಮಘಾತವನ್ನು ಮಾಡಿ ನಮ್ಮನ್ನು ಅಧೋಗತಿಗೆ ದೂಡುತ್ತವೆ. ಆದ್ದರಿಂದ ನಾವು ಕಷಾಯಗಳನ್ನು ಕಡಿಮೆ ಮಾಡಿಕೊಳ್ಳುವ ನಿರಂತರ ಪ್ರಯತ್ನವನ್ನು ಮಾಡಬೇಕು.
ಅನೇಕಾಂತವಾದ:- ಯಾವುದೇ ವಸ್ತುವನ್ನಾಗಲೀ, ವಿಷಯವನ್ನಾಗಲೀ ವಿವಿಧ ದೃಷ್ಟಿಕೋನಗಳಿಂದ ವೀಕ್ಷಿಸಿದಾಗಲೇ ಸತ್ಯ ಗೋಚರಿಸುತ್ತದೆ. ಇನ್ನು ಸಮಾಜದಲ್ಲಿ ಸಹ ಅಸ್ತಿತ್ವ, ಹೋಂದಾಣಿಕೆ ಇರಬೇಕೆಂದರೆ ಅನೇಕಾಂತ ದೃಷ್ಟಿ ಇರಬೇಕು. ನಾನೇ ಸರಿ, ನನ್ನದು ಮಾತ್ರ ಸರಿ ಎಂದರೆ ಅದು ಏಕಾಂತವಾದ ಆಗುತ್ತದೆ. ಏಕಾಂತದಲ್ಲಿ ವಾದ, ವಿವಾದ, ಕಲಹವಿದೆ. ಅನೇಕಾಂತದಲ್ಲಿ ಸಂವಾದವಿದೆ, ಸ್ನೇಹವಿದೆ. ಅನೇಕಾಂತ ದೃಷ್ಟಿಕೋನವಿದ್ದರೆ ಈ ವಿಶ್ವದಲ್ಲಿ ಮಹಾಯುದ್ಧಗಳೇ ಸಂಭವಿಸುತ್ತಿರಲಿಲ್ಲ. ಸಾಮಾಜಿಕ ಸಂಘರ್ಷಣೆಗಳು ಕಡಿಮೆಯಾಗುತ್ತಿದ್ದವು. ಲೋಕ ಹಿತವಾಗುತ್ತಿತ್ತು.
ಅಪರಿಗೃಹ:-ಮಾನವನ ಪರಿಗ್ರಹ ಬುದ್ಧಿ, ಅತಿ ಆಸೆ, ಅತಿ ಸಂಗ್ರಹಣೆ ಮಾಡುವ ಬುದ್ಧಿಯೇ ಇದು ಇಡೀ ಸಮಾಜದ ಅಧಃಪತನಕ್ಕೆ ಕಾರಣ. ಧನಿಕ, ಬಡವ ಎನ್ನುವ ಅಂತರ ಹೆಚ್ಚಾದಷ್ಟು ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತದೆ. ಕಳ್ಳತನ, ಕೊಲೆ, ಸುಲಿಗೆ, ದರೋಡೆ, ಮುಂತಾದವು ಹೆಚ್ಚುತ್ತದೆ. ಆದ್ದರಿಂದ ಇವನ್ನೆಲ್ಲಾ ತಡೆಗಟ್ಟಲು ಇದ್ದವರು, ಇಲ್ಲದವರಿಗೆ ದಾನ ನೀಡಬೇಕು. ಸಾಮಾಜಿಕ ಸಮಾನತೆಗಾಗಿ ಪ್ರಯತ್ನಪಡಬೇಕು ಎಂದು ಚತುರ್ವಿಧ ದಾನಗಳನ್ನು ಭೋಧಿಸಿದರು. ಆಹಾರ ದಾನ, ಆಭಯದಾನ, ಔಷಧದಾನ ಮತ್ತು ಜ್ಞಾನದಾನ ಪ್ರತಿಯೊಬ್ಬ ಶ್ರಾವಕನೂ ಯಥಾಶಕ್ತಿ ದಾನ ನೀಡಿ ಸಮಾಜದ ಋಣವನ್ನು ತೀರಿಸಬೇಕು ಎಂದು ಭೋಧಿಸಿದರು.
ಭಗವಾನ್ ಮಹಾವೀರರ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ.
ಲೇಖಕಿ:-ಡಾ|| ನೀರಜಾ ನಾಗೇಂದ್ರ ಕುಮಾರ್
ಅಶ್ವಿನಿ ಕ್ಲಿನಿಕ್
ಬೆಂಗಳೂರು-75
ಬಸವಣ್ಣ ಮತ್ತು ಪ್ರಸ್ತುತತೆ
ದೃಷ್ಠಿಯಿಂದ ಸಮಷ್ಠಿಯವರೆಗೆ, ರಾಜ್ಯದಿಂದ ದೇಶದವರೆಗೆ, ರಾಷ್ಟ್ರದಿಂದ ಅಂತರ್ ರಾಷ್ಟ್ರದವರೆಗೆ, ಅಂತಿಮವಾಗಿ ಜಗತ್ತಿನ ಸರ್ವೋತ್ತಮ ಅಭಿವೃದ್ಧಿಯಾಗಬೇಕಾದರೆ ಕೆಲವೊಂದು ನೀತಿ, ನಿಯಮ, ತತ್ವ ಸಿದ್ಧಾಂತಗಳು ಅನಿವಾರ್ಯವಾಗುತ್ತವೆ. ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಸರ್ವ ಸಮನಾನತೆಯ ಸಂದೇಶವನ್ನು ಸಾರುವ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಹಿತ್ಯಿಕ ಹಾಗೂ ಆಧ್ಯಾತ್ಮಿಕ ತತ್ವ ಸಿದ್ಧಾಂತಗಳನ್ನು ಪರಿ ಪಾಲಿಸಿದ್ದೆಯಾದರೆ ಇವುಗಳೆಲ್ಲವುಗಳಲ್ಲಿ ಸ್ಥಿರತೆಯನ್ನು ತರಬಹುದು. ಪ್ರಜಾಪ್ರಭುತ್ವ ಸರ್ಕಾರಗಳಾಗಲಿ, ರಾಜ ತಾಂತ್ರಿಕ ಸರ್ಕಾರಗಳಾಗಲಿ ಅಥವಾ ನೌಕರಶಾಹಿ ವ್ಯವಸ್ಥೆಗಳಾಗಲಿ, ಮೂಲಭೂತವಾಗಿ ಕೆಲವು ಧ್ಯೇಯೋದ್ಧೇಶ ತತ್ವಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಜನತೆ ಶಾಂತಿ, ಸೌಖ್ಯ, ಸಾಮರಸ್ಯ, ಸೌಹಾರ್ದತೆಗಳಿಂದ ಬಾಳಲು ಸಾಧ್ಯವಾಗುತ್ತದೆ. ಇದನ್ನೇ ಕೆಲವು ಇತಿಹಾಸಕಾರರು, ಚಿಂತಕರು, ಮೇಧಾವಿಗಳು ಹೇಳುತ್ತಲೇ ಬಂದಿದ್ದಾರೆ. ಇದಕ್ಕಾಗಿ ಕೆಲವು ಉದ್ ಗ್ರಂಥಗಳು ರಚನೆಯಾಗಿವೆ. ಅವುಗಳ ಆಧಾರದಿಂದ ಜನ ಜೀವನ ಸುಖಮಯವಾಗಿಸಲು ಪ್ರಯತ್ನಗಳು ನಡೆದಿವೆ. ಅನೇಕ ದಾರ್ಶನಿಕರು , ಮಹಾತ್ಮರು ಇದಕ್ಕಾಗಿ ಅಹರ್ನಿಶಿ ದುಡಿದಿದ್ದಾರೆ.
ಭಾರತೀಯ ನೆಲೆಯಲ್ಲಿ ಅನೇಕ ಸಾಧು ಸಂತರು , ಧಾರ್ಮಿಕ ವ್ಯಕ್ತಿಗಳು, ರಾಜಕೀಯ ವ್ಯವಸ್ಥೆ, ಮುತ್ಸದಿಗಳು ಆಗಿ ಹೋಗಿದ್ದಾರೆ. ಕ್ರಿಸ್ತ ಪೂರ್ವದಲ್ಲೇ ಬುದ್ಧ ದೇವ ಸರ್ವಸಮಾನತೆಯನ್ನು ಶಾಂತಿ ಸೌಹಾರ್ದತೆಯನ್ನು ಭೋಧಿಸಿದರು. ಅವರ ನಂತರ ಹನ್ನೇರಡನೇ ಶತಮಾನದಲ್ಲಿ ಬಸವಾದಿ ಶರಣರು ಕರ್ನಾಟಕದಲ್ಲಿ ಉದಯಿಸಿ ಸಾಮಾಜಿಕ ಕ್ರಾಂತಿಯನ್ನೇ ಉಂಟುಮಾಡಿದರು. ಅವರ ಬಗ್ಗೆ ರಾಷ್ಟ್ರಪಿತ ಮಹಾತ್ಮಗಾಂಧಿಜಿಯವರು ಹೇಳುತ್ತಾರೆ ಬಸವಣ್ಣನವರು 800 ವರ್ಷಗಳ ಹಿಂದೆ ಮಾಡಿದಂತ ಸಾಮಾಜಿಕ ಸುಧಾರಣೆಯನ್ನು ಇನ್ನಾರು ಮಾಡಲು ಸಾಧ್ಯವಿಲ್ಲ. ಅವರು ನೀಡಿದ ತತ್ವಗಳನ್ನು ಸಿದ್ಧಾಂತಗಳನ್ನು ಪರಿಪೂರ್ಣವಾಗಿ ಕಾರ್ಯ ರೂಪಕ್ಕೆ ತಂದಿದ್ದೇಯಾದರೇ ಭಾರತವಷ್ಟೇ ಅಲ್ಲ ಇಡೀ ಜಗತ್ತನ್ನೇ ಸಂವೃದ್ಧಿ ಪಥದಲ್ಲಿ ಕೊಂಡೋಯ್ಯಬಹುದೆಂದು ಈ ವಿಚಾರಗಳನ್ನೇಲ್ಲಾ ಪರಿಭಾವಿಸಿ ವಿಶ್ವ ಸಂಸ್ಥೆಯು ಭಾರತೀಯ ಮೂಲದ ಸಾಮಾಜಿಕ ಸಾಂಸ್ಕøತಿಕ ಸಂದೇಶಗಳನ್ನು ಪರಿಪಾಲಿಸಿದ್ದೆ ಆದರೆ ಲೋಕ ಕಲ್ಯಾಣವಾಗುವುದರಲ್ಲಿ ಸಂಶಯವಿಲ್ಲ.
ಪ್ರಸ್ತುತ ಸಾಮಾಜಿಕ ಸಂಧರ್ಭ ಸಮಸ್ಯೆಗಳ ಸುಳಿಯಲ್ಲಿ ಮುಳುಗಿ ಹೋಗಿದೆ. ಜಾತಿಜಗಳ, ಅಸಮಾನತೆ, ಪ್ರತ್ಯೆಕತೆ, ಶೋಷಣೆಯಂತಹ ಜ್ವಲಂತ ಸಮಸ್ಯೆಗಳು ಈಗ ಮತ್ತಷ್ಟು ಉರಿಯುತ್ತದೆ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡ ಅನೇಕರು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಪರಿಸರ ದಿನಿತ್ಯ ಮಲೀನವಾಗುತ್ತಿದೆ. ನಿಸರ್ಗ ಸಮತೋಲನವನ್ನು ಕಳೆದುಕೊಂಡು ಜಾಗತೀಕರಣವು ತುಚ್ಚೀಕರಿಸುತ್ತಾ ಸಾಗುತ್ತಿದೆ. ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ಅನೇಕ ಚಿಂತಕರ ಚಿಂತನೆಗಳು ನಮಗೆ ಮಾರ್ಗದರ್ಶನವಾಗಬಲ್ಲವು. ಬುದ್ಧನ ಜೀವನ ಪ್ರೀತಿ, ಬಸವಣ್ಣನ ದಯೆ, ಅಂಬೇಡ್ಕರರ ಹೋರಾಟ, ಗಾಂಧೀಜಿಯ ಸರಳತೆ, ಮತ್ತೆಮತ್ತೆ ನಮ್ಮ ಚಿಂತನೆಯ ಮೊರೆಯಲ್ಲಿ ಮೂಡಿಬಂದಾಗ ಹೊಸ ಬೆಳಕನ್ನು ಕಾಣಬಹುದಾಗಿದೆ.
ಈಗಿನ ಜಗತ್ತು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದಾಗಿ ಹೊರಗಿನ ಶೃಂಗಾರ ಒಳಗಣ ರಣರಂಗದಂತಾಗಿ ಮಾನಸೀಕ ಸ್ಥಿರತೆಯನ್ನು ಕಳೆದುಕೊಂಡಿದೆ. ವಿಜ್ಞಾನ ತಂತ್ರಜಾÐನದ ಕಾರಣದಿಂದಾಗಿ ವಿವೇಕವನ್ನು ಕಳೆದುಕೊಂಡು ಅಮಾನುಷವಾಗಿ ವರ್ತಿಸುತ್ತಾ ಕಡಿವಾಣವಿಲ್ಲದ ಕುದುರೆಯಂತೆ ಎತ್ತೆತ್ತಲೋ ಓಡುತ್ತಿದೆ. ಅದನ್ನು ತಹಬದಿಗೆ ತರಬೇಕಾದರೆ, ಸಮಾಜಿಕ ಪರಿವರ್ತನೆಯಾಗಬೇಕಾದರೆ ಒಂದು ರೂಢಿ ಮೂಲವಾದ ಪರಂಪರೆ ಬೇಕಾಗುತ್ತದೆ. ನೀತಿ ನಿಯಮ ಸ್ಥಿರತೆಯ ಪ್ರಜ್ಞೆ ಆಳುವವರಲ್ಲಿ ಮೂಢ ಬೇಕಾಗುತ್ತದೆ.
ಪ್ರಸ್ತುತ ಸಮಾಜಿಕ ಸಂಧರ್ಭದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿಗೆ ಬಸವಣ್ಣನವರು , ಶರಣರ ವಚನಗಳಲ್ಲಿ ಉತ್ತರವಿದೆ. ಹನ್ನೇರಡನೆ ಶತಮಾನದಲ್ಲಿ ವಚನ ಚಳುವಳಿಯನ್ನು ಹುಟ್ಟುಹಾಕಿ ಸಹಸ್ರಾರು ನೊಂದ ಜೀವಿಗಳ ಧನಿಯಾಗಿ ನಿಂತ ಬಸವಾದಿ ಪ್ರಮಥರು ಅನೇಕ ನಿಷ್ಟುರತೆ ಪರಿಹಾರಗಳನ್ನು ಸೂಚಿಸಿದ್ದಾರೆ. ಅಲ್ಲಿಯ ಅನೇಕ ವಿಚಾರಗಳು ಇಂದಿಗೂ ಪ್ರಸ್ತುತವೆನಿಸಿವೆ. ಶರಣರ ಆದರ್ಶ ಜೀವನ ಮಾರ್ಗಗಳು ಅಂತರಂಗ ಬಹಿರಂಗ ಶುದ್ಧತೆಗೆ ಅಣಿ ಮಾಡಿದವುಗಳಾಗಿವೆ. ದಯೆ, ಕರುಣೆ, ಕಾಯಕ, ದಾಸೋಹ, ಸ್ತ್ರೀ ಸಮಾನತೆ, ಅಹಿಂಸೆಗಳನ್ನು ರೂಪಿಸಿ ವಚನಗಳಲ್ಲಿ ಬರೆದಂತೆ ಬದುಕಿ ತೋರಿಸಿದ್ದಾರೆ. ವೈಯಕ್ತಿಕ ವಿಕಾಸದೊಂದಿಗೆ ಸಾಮಾಜಿಕ ವಿಕಾಸವಾದವು ಹೇಗೆ ಪ್ರತಿಫಲಿತವಾಗಬಹುದೆಂಬುದನ್ನು ಸಾಕ್ಷ ಭೂತವಾಗಿ ತೋರಿಸಿಕೊಟ್ಟಿದ್ದಾರೆ.
ಶುದ್ಧ ಮನಸ್ಸಿನವರಾಗಿ ಕಾಯಕ ಜೀವಿಯಾಗಿ ಮಾನವೀಯ ಗುಣಗಳಿಂದ ಹೇಗೆ ಜೀವನ ನಡೆಸ ಬಹುದೆಂಬುದನ್ನು ಶರಣ ನುಲಿಯ ಚಂದಯ್ಯ ಈ ವಚನದಲ್ಲಿ ಹೇಳಿದ್ದಾರೆ.
ನೇಮದ ಕೂಲಿ ಅಂದಿನ ನಿತ್ಯ ನೇಮದಲ್ಲಿ ಸಂದಿರಬೇಕು
ನೇಮದ ಕೂಲಿಯ ಬಿಟ್ಟು ಹೇಮದಾಸೆಗೆ ಕಾಮಿಸಿ
ನಿನ್ನಾಸೆಯ ವೇಷದ ಪಾಶಕ್ಕೆ ನೀನೆ ಹೋಗುವೆ
ಚಂದೇಶ್ವರ ಲಿಂಗಕ್ಕೆ ದೂರಾಗುವೆ.
ಪ್ರತಿಯೊಬ್ಬನು ಆಸೆ ಆಮಿಷಕ್ಕೆ ಬಲಿಬೀಳದೆ ಸತ್ಯ ಪ್ರಮಾಣಿಕವಾಗಿ ಸ್ವ ದುಡಿಮೆ ಮಾಡಿದರೆ ಅವನ ಬದುಕಿನಲ್ಲಿ ಶ್ರೇಷ್ಟತೆ ಇರುತ್ತದೆ. ಅವನನ್ನು ದೇವರು ಮೆಚ್ಚುವನು. ಆಗಿಲ್ಲದಿದ್ದರೆ ವೇಷದ ಪಾಶಕ್ಕೆ ಹೋಗುವೆ ಎಂದು ಎಚ್ಚರಿಸುತ್ತಾರೆ. ವಚನಕಾರರು ಭ್ರಷ್ಟರನ್ನು ಅನಾಚಾರಿಗಳನ್ನು ಮತ್ತು ವೇಷಾಧಾರಿಗಳನ್ನು ಕಟುವಾಗಿ ಟೀಕಿಸಿದ್ದಾರೆ. ಶಿವಶರಣೆ ಅಕ್ಕಮ್ಮ ವಚನವೊಂದರಲ್ಲಿ ಹೀಗೆ ಹೇಳುತ್ತಾಳೆ.
ಗುರುವಾದಡೂ ಆಚಾರ ಭ್ರಷ್ಟನಾದಡೆ ಅನುಸರಿಸಲಾಗದು
ಜಂಗಮವಾದಡೂ ಆಚಾರ ದೋಷವಾದಲ್ಲಿ ಪೂಜಿಸಲಾಗದು.
ಲಿಂಗವಾದಡೂ ಆಚಾರ ಅನುಸರಣೆಯಾಗದಿದ್ದರೆ ಕೂಡಲಾಗದು
ಆಚಾರವೇ ವ್ರತ, ಪ್ರಾಣ ಕ್ರಿಯೆ, ಜ್ಞಾನ ಆಚಾರವೇ ಪ್ರಾಣವಾಗಿಪ್ಪ
ರಾಮೇಶ್ವರ ಲಿಂಗವು
ಇಂತಹ ಮೌಲ್ಯಯುತವಾದ ಸಾಮಾಜಿಕ ಅನಿವಾರ್ಯತೆಗಳಾದ ತತ್ವ ಸಿದ್ಧಾಂತಗಳನ್ನು ಬೆಳೆಸುವುದರ ಮೂಲಕ ಅಧಿಕಾರ ಅಂತಸ್ತು ಸಾಂಸ್ಕøತಿಕ ಸಮಾನತೆಯ ಅರಿವನ್ನುಂಟುಮಾಡಿ ಅದನ್ನು ಪಾಲಿಸುವುದರ ಮೂಲಕ ಏಕತೆಯಲ್ಲಿ ಐಕ್ಯತೆಯನ್ನು ಕಾಣಬಹುದಾಗಿದೆ. ಭಯೋತ್ಪಾದನೆ, ಕೋಮುಗಲಭೆ, ಜಾತಿ ವೈಷಮ್ಯ, ಲಿಂಗಭೇದಗಳಿಗೆ ಸಿದ್ಧೌಷಧವನ್ನು ಶರಣರು ತಮ್ಮ ವಚನಗಳಲ್ಲಿ ಪ್ರತಿಪಾದಿಸಸಿದ್ದಾರೆ. ಮೇಲು-ಕೀಳು ಭಾವನೆಗಳನ್ನು ತೊಡೆದು ಹಾಕುವುದು, ರಾಜಕೀಯ ವೈಷಮ್ಯಗಳನ್ನು ನಿಲ್ಲಿಸಿ ಏಕೋಭಾವನೆಯಿಂದ ರಾಷ್ಟ್ರಾಭಿವೃದ್ಧಿಗೆ ಶ್ರಮಿಸುವುದು, ಅಹಂಕಾರ ಮಮಕಾರಗಳನ್ನು ತೊರೆದು ಸಮಷ್ಠಿ ಪ್ರಜ್ಞೆಯನ್ನು ತಾಳುವುದು ಈಗಿನ ಸಂಧರ್ಭದಲ್ಲಿ ಪ್ರಸ್ತುತವೆನಿಸಿದೆ. ಇದಲ್ಲದೆ ಈ ಕೆಳಕಂಡ ಕೆಲವಂಶಗಳನ್ನು ತಮ್ಮ ವಚನಗಳಲ್ಲಿ ಪ್ರತಿಬಿಂಬಿಸಿದ್ದಾರೆ.ಅವುಗಳೆಂದರೆ
- ಧರ್ಮದ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ತಪ್ಪಿಸಿ ಸಾಮಾಜಿಕ ಭಯ ಭೀತಿಗಳನ್ನು ದೂರಿಕರಿಸುವುದು.
- ಜಾತಿ ವ್ಯವಸ್ಥೆಯನ್ನು ತಡೆದು ಎಲ್ಲರೂ ನಮ್ಮವರೆಂದು ಅಪ್ಪಿಕೊಳ್ಳುವುದು. ಅದನ್ನೇ ಬಸವಣ್ಣ “ಇವನಾರವ ಎನಿಸದಿರಯ್ಯ ಇವ ನಮ್ಮವನೆನಿಸಯ್ಯ” ಎಂದು ಹಾಡಿದ್ದಾರೆ.
- ಮೂಢನಂಬಿಕೆಗಳನ್ನು , ಅಂಧಸಂಪ್ರಾದಾಯಗಳನ್ನು ತಡೆದು ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವುದು.
- ಕಾಯಕ-ದುಡಿಮೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು. ಯಾವ ಕಾಯಕವಾದರೂ ಶ್ರೇಷ್ಠವೇ ಅದರಿಂದ ಪ್ರಮಾಣಿಕವಾದ ಆರ್ಥಿಕ ಸಮಾನತೆಯನ್ನು ತರುವುದು.
- ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿ ಅವರು ಸಾಂಸ್ಕøತಿಕವಾಗಿ ಸಾಮಾಜಿಕವಾಗಿ ಬೆಳೆಯಲು ಕಾರಣವಾಗುವುದು.
- ಅಹಿಂಸೆಯನ್ನು ಪ್ರತಿಪಾದಿಸುವುದು, ಸಕಲ ಜೀವಾತ್ಮರಿಗೆ ಲೇಸನೆ ಬಯುಸುವುದು ಅದನ್ನೇ ಬಸÀವಣ್ಣನವರು “ಕಳಬೇಡ ಕೊಲಬೇಡ ಹುಸಿಯನುಡಿಯಲು ಬೆಡ ತನ್ನ ಬಣ್ಣಿಸಬೇಡ ಇದಿರ ಅಳಿಯಲು ಬೇಡ” ಎಂಬ ಸಪ್ತ ಸೂತ್ರಗಳಲ್ಲಿ ಹೇಳಿದ್ದಾರೆ.
- ಅಸ್ಪøಶ್ಯತೆಯನ್ನು ಹೋಗಲಾಡಿಸಿ ಗುರು ಹಿರಿಯರಲ್ಲಿ ಭಕ್ತಿಭಾವದಿಂದ ವರ್ತಿಸುವುದು.
- ಸಾಂಘೀಕ ಜೀವನಕ್ಕೆ ಮಹತ್ವ ನೀಡುವುದು. ಅನುಭವ ಮಂಟಪವನ್ನು ಸ್ಥಾಪಿಸಿ, ನಿರಕ್ಷರ ಕುಕ್ಷಿಗಳಿಗೆ ಶಿಕ್ಷಣ ನೀಡಿದ್ದು ಮತ್ತು ವಚನ ಸಾಹಿತ್ಯವನ್ನು ರಚಿಸಿ ಜ್ಞಾನ ಪ್ರಸಾರ ಮಾಡಿದ್ದು ಶರಣರ ಹೆಗ್ಗಳಿಕೆ.
- ಧಾರ್ಮಿಕ ಕ್ಷೇತ್ರಗಳಲ್ಲಿ ಸರಳತೆ ನೈಜತೆಯಿಂದ ಏಕೋದೇವೋಪಾಸನೆಯನ್ನು ತರುವುದು.
- ಪರಿಸರ ಸಂರಕ್ಷಣೆ “ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರೆರೆದರೆ ಮೇಲೆ ಫಲ್ಲವಿಸಿತ್ತು ನೋಡಾ”
- ಆತ್ಮ ನಿರೀಕ್ಷಣೆ ಪ್ರತಿಯೊಬ್ಬನು ತನ್ನನ್ನು ತಾನು ಪ್ರಶ್ನಸಿಕೊಳ್ಳುವುದು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದು.
- ಅಪರಿಗ್ರಹ “ಬಯಸಿ ಬಂದುದು ಲಿಂಗಭೋಗ, ಬಯಸದೇ ಬಂದುದು ಅಂಗ ಭೋಗ” ಆಸೆ ಅಮಿಷಗಳನ್ನು ತೊರೆದು ಸಹಜವಾಗಿ ಬದುಕುವುದು.
- ಸ್ವಾಭಿಮಾನದಿಂದ ಬದುಕುವುದು, ಅರಸೊತ್ತಿಗೆಯ ಪರಿಸರದಲ್ಲಿದ್ದರೂ “ಆಸು ಓಲಿದಂತೆ ಹಾಡುವೆ ಎನ್ನುವಂತೆ’ “ಶರಣರಿಗೂ ಅಂಜುವವನಲ್ಲ” ಎಂಬ ಸ್ವಾಭಿಮಾನಿಯಾಗುವುದು.
- ಮಾನವೀಯತೆಯನ್ನು ಬೆಳೆಸಿಕೊಳ್ಳುವುದು, ಇಂತಹ ಅನೇಕ ಸಂಗತಿಗಳನ್ನು ಶರಣರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಅದರಂತೆ ಅನುಸರಿಸಿದರೆ ಮಾನವನ ಬಾಳು ಬಂಗಾರವಾಗದಿರದು.
ಇಂತಹ ವಿಷಯಗಳನ್ನು ಅನೇಕ ವಚನಗಳಲ್ಲಿ ಹೇಳಿರುವ ಸಂಗತಿಗಳು ಇಂದಿನ ಸಾಮಾಜಿಕ ಸಂದರ್ಭಕ್ಕೆ ತೀರಾ ಅಗತ್ಯವಗಿದೆ. ಬದುಕಿನ ಅದಮ್ಯತೆಯನ್ನು ಹೇಳಿದ ಬಸವಾದಿ ಪ್ರಮಾಥರು ಜೀವನೋತ್ಸವದ ಜತೆಗೆ ಜೀವದ ಪ್ರೀತಿಯನ್ನು ಕಲಿಸಿದವರು ಮಾನವೀಯ ಮೌಲ್ಯಗಳು ಬೆಳೆದಾಗ ಮನುಷ್ಯ ಬೆಳೆಯಬಲ್ಲನು. ಕೇವಲ ಆರ್ಥಿಕ , ಸಾಮಾಜಿಕ, ಸಮಾನತೆ ಬಂದಾಕ್ಷಣ ಮನುಷ್ಯ ಎತ್ತರಕ್ಕೆ ಹೇರಲಾರ ಮಾನವೀಯತೆ ಬೆಳೆದಾಗ ಮಾತ್ರ ಇದು ಸಾಧ್ಯ. ಇಂತಹ ಮಾನವೀಯ ಮೌಲ್ಯಗಳನ್ನು ಕೊಟ್ಟ ಬಸವಾದಿ ಪ್ರಮಥರ ವಿಚಾರಗಳು ಇಂದಿಗೂ ಸ್ವಾಗತಾರ್ಹವಾಗಿವೆ. ಎಂಟುನೂರು ವರ್ಷಗಳ ಹಿಂದೆ ಆಲೋಚಿಸಿದ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ.
ಕೆ.ಎಂ ರೇವಣ್ಣ
ನಿವೃತ್ತ ತಹಸೀಲ್ದಾರರು
ಬೆಂಗಳೂರು
ಏನಿದು ಎಣ್ಣೆಹೊಳೆ…?
ಹೇಮಾವತಿ ನದಿ ಕಾವೇರಿ ನದಿಯ ಮುಖ್ಯ ಉಪನದಿ. ಈ ನದಿಯನ್ನು ಶಾಸನವು ‘ಚಂಡಿಹೊಳೆ’ ಎಂದು ಹೆಸರಿಸುತ್ತದೆ. ಪ್ರಾದೇಶಿಕವಾಗಿ ಈ ನದಿಯನ್ನು ‘ಎಣ್ಣೆಹೊಳೆ’ ಎಂದು ಕರೆಯುತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟದ ಶ್ರೇಣಿಯ ಮೇಲಬಂಗಾಡಿಯ ಜಾವಳಿಯಲ್ಲಿ ಉಗಮಿಸುವ ಈ ನದಿ, ಮಂಡ್ಯ ಜಿಲ್ಲೆಯ ಪಶ್ಚಿಮದ ಅಂಚಿನಲ್ಲಿ ಸ್ವಲ್ಪದೂರ ಹಾಸನ ಮಂಡ್ಯ ಜಿಲ್ಲೆಗಳ ಗಡಿಯಾಗಿ ದಕ್ಷಿಣಾಭಿಮುಖವಾಗಿ ಹರಿಯುತ್ತದೆ. ಅನಂತರ ಕೃಷ್ಣರಾಜಪೇಟೆ ತಾಲ್ಲೂಕಿನ ಗುಡ್ಡೇಹೊಸಹಳ್ಳಿ ಬಳಿ ಮಂಡ್ಯಜಿಲ್ಲೆಯನ್ನು ಪ್ರವೇಶಿಸುತ್ತದೆ. ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೃಷ್ಣರಾಜಸಾಗರದ ಹಿಂದಿನ ನೀರಿನಲ್ಲಿಕಾವೇರಿ ನದಿಯನ್ನು ಸೇರುತ್ತದೆ. ಹಿನ್ನೀರಿನ ಪ್ರದೇಶಕುಗ್ಗಿದಂತೆ ಬೇಸಿಗೆಯ ಕಾಲದಲ್ಲಿಕೃಷ್ಣರಾಜಪೇಟೆತಾಲ್ಲೂಕಿನ ಅಂಬಿಗರಹಳ್ಳಿ ಬಳಿಯ ಸಂಗಮದಲ್ಲಿಕಾವೇರಿ ನದಿಗೆ ಹೇಮಾವತಿ ನದಿಯು ಸೇರುವುದನ್ನು ಇಂದಿಗೂ ಕಾಣಬಹುದು. ಹಾಸನ ಜಿಲ್ಲೆಯಗೊರೊರಿನಲ್ಲಿ ಹೇಮಾವತಿ ನದಿಯಅಡ್ಡವಾಗಿಅಣೆಕಟ್ಟೆಯನ್ನುಕಟ್ಟಲಾಗಿದೆ. ಈ ನದಿಯು ಸುಮಾರು 245 ಕಿಲೋ ಮೀಟರ್‍ಉದ್ದ ಹಾಗೂ 5410 ಕಿಲೋ ಮೀಟರ್ ನೀರಾವರಿ ಪ್ರದೇಶವನ್ನು ಒಳಗೊಂಡಿದೆ. ಇದು ಸುಮಾರು 5410 ಚದರ ಕಿಲೋ ಮೀಟರ್‍ಜಲಾ ಪ್ರದೇಶವನ್ನು ಹೊಂದಿದೆ.
ಹೇಮಾವತಿ ನದಿ ಜಾಬಾಲಿ ಸತ್ಯಕಾಮರ ವರಪ್ರಸಾದ
ಹೇಮಾವತಿ ನದಿಯ ಉಗಮ ಸ್ಥಳದಲ್ಲಿರುವ ಗಣೇಶನದೇವಾಲಯದಲ್ಲಿ ಹೇಮಾವತಿ ನದಿಯಉಗಮದ ಪುರಾಣಕಥೆ ಪ್ರಚಲಿತದಲ್ಲಿದೆ. ಬಹಳ ಹಿಂದೆಗೌತಮ ಮಹರ್ಷಿಗಳು ದಂಡಕಾರಣ್ಯ ಪ್ರದೇಶದಲ್ಲಿಆಶ್ರಮ ಮಾಡಿಕೊಂಡು ಸಂಚಾರ ಮಾಡುತ್ತಿದ್ದಕಾಲದಲ್ಲಿ ಸತ್ಯಕಾಮನೆಂಬ ಬಾಲಕನು ಗೌತಮರನ್ನುಕಂಡುತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಶಿಕ್ಷಣ ನೀಡುವಂತೆ ವಿನಂತಿಸಿದನು. ಆಗ ಗೌತಮರು ನಾನು ಬ್ರಾಹ್ಮಣ ವಟುಗಳಿಗೆ ಮಾತ್ರ ಶಿಕ್ಷಣ ನ ಡುವ ಸಂಕಲ್ಪದವನಾಗಿದ್ದೇನೆ, ನಿನ್ನಗೋತ್ರ ಪ್ರವರಗಳನ್ನು ತಿಳಿಸು ಎಂದು ಸತ್ಯಕಾಮನನ್ನು ಕೇಳಿದರು. ಅದಕ್ಕೆಉತ್ತರವಾಗಿ ಸತ್ಯಕಾಮನು ನನಗೆ ನನ್ನತಾಯಿಗೊತ್ತೇ ವಿನಾ ಗೋತ್ರ, ಸೂತ್ರ, ಪ್ರವರಾದಿಗಳು ತಿಳಿದಿಲ್ಲ, ನಾನು ನನ್ನತಾಯಿಯನ್ನು ಕೇಳಿ ಆಕೆಯಿಂದು ತಿಳಿದು ನಿಮಗೆ ನನ್ನಗೋತ್ರ ಪ್ರವರಗಳನ್ನು ತಿಳಿಸುತ್ತೇನೆಂದು ಹೇಳಿ ಮನೆಗೆ ಬಂದನು. ಮನೆಗೆ ಬಂದ ಸತ್ಯಕಾಮನುತಾಯಿಯಲ್ಲಿತನ್ನಗೋತ್ರ, ಸೂತ್ರ, ಪ್ರವರಾದಿಗಳ ಬಗ್ಗೆ ಗೌತಮರು ಪ್ರಶ್ನಿಸಿದ್ದನ್ನು ತಿಳಿಸಿ, ನನ್ನಜನ್ಮಕಾರಣವನ್ನು ತಿಳಿಸುವಂತೆ ಕೇಳಿಕೊಂಡನು. ಅದಕ್ಕೆ ಸತ್ಯಕಾಮನತಾಯಿಜಾಬಾಲಿಯು, ‘ಮಗನೇ ನಾನು ಬ್ರಾಹ್ಮಣನೋರ್ವನ ಮನೆಯಲ್ಲಿ ದಸಿಯಾಗಿ ಸೇವೆಸಲ್ಲಿಸುತ್ತಿದ್ದ ವೇಳೆಯಲ್ಲಿ ನಾನು ಹಲವಾರು ಅತಿಥಿಗಳನ್ನು ಸತ್ಕರಿಸಿದ ಸಮಯದಲ್ಲಿ ನಿನ್ನಜನನವಾಗಿದೆ. ಹಾಗಾಗಿ ನಿನಗೆ ಪಿತೃಸ್ಥಾನವನ್ನು ನೀಡಿದ ವ್ಯಕ್ತಿಯನ್ನು ನಾನು ಗುರುತಿಸಲು ಸಾಧ್ಯವಿಲ್ಲ. ಹಾಗಾಗಿ ನನ್ನ ಹೆಸರನ್ನೇ ನಿನ್ನ ಹೆಸರಿನೊಂದಿಗೆ ಬಳಸಿ ಇನ್ನು ಮುಂದೆಜಾಬಾಲಿ ಸತ್ಯಕಾಮನೆಂದು ನಿನ್ನ ನಾಮಾಂಕಿತವನ್ನು ಹೇಳು’ ಎಂದು ತಿಳಿಸಿದಳು. ಸತ್ಯಕಾಮನುತಾಯಿಯಿಂದ ವಿಷಯವರಿತುಗೌತಮರಲ್ಲಿ ಮತ್ತೆ ಬಂದುತಾಯಿ ಹೇಳಿದ ಎಲ್ಲವನ್ನೂಅವರಿಗೆ ಹೇಳಿ ತನ್ನನ್ನು ಶಿಷ್ಯನಾಗುವಂತೆ ಕೇಳಿಕೊಂಡನು. ತ್ರಿಲೋಕ ಜ್ಞಾನಿಗಳಾದ ಗೌತಮ ಮಹರ್ಷಿಗಳು ಜಾಬಾಲಿಯಜನನದ ಮರ್ಮವನ್ನರಿತು ಅವನ ಸತ್ಯವಾಕ್ಯಕ್ಕೆ ಮೆಚ್ಚಿಆತನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಅವನಿಗೆ ಉಪನಯನವನ್ನು ನೆರವೇರಿಸಿದರು. ಕೆಲವು ಕಾಲಾನಂತರಆತನಿಗೆ ನಾಲ್ಕು ನೂರು ಗೋವುಗಳನ್ನು ಕೊಟ್ಟು, ಅವುಗಳನ್ನು ಸಾವಿರವಾಗಿ ಪರಿವರ್ತಿಸಿಕೊಂಡು ಬರುವಂತೆ ತಿಳಿಸಿದರು.
ಸತ್ಯಕಾಮನುತನಗೆಗೌತಮ ಮಹರ್ಷಿಗಳು ನೀಡಿದ ಹಸುಗಳ ಸಹಿತಕಾಡಿಗೆ ಬಂದು ನೆಲೆ ನಿಂತನು. ಕಾಡಿನಲ್ಲಿ ಪಂಚಭೂತಗಳು ಜಾಬಾಲಿ ಸತ್ಯಕಾಮನಿಗೆ ಬ್ರಹ್ಮಜ್ಞಾನದ ಮತ್ತು ಆದಿಶಕ್ತಿಯ ಪರಿಚಯ ಮಾಡಿಕೊಟ್ಟವು, ಸತ್ಯಕಾಮನುತಪಸ್ಸಗೆ ಕುಳಿತುಕೊಳ್ಳಲು ನಿರ್ಧರಿಸಿದ ಸ್ಥಳದಲ್ಲಿ ನೀರಿನಆಸರೆಇರಲಿಲ್ಲ. ಅದನ್ನು ಮನಗಂಡ ಸತ್ಯಕಾಮನು ಆದಿಶಕ್ತಿಯನ್ನು ಕುರಿತು ಅತಿಶಯ ಭಕ್ತಯಿಂದ ತಪಸ್ಸನ್ನಾಚರಿಸಿ ಶಿವನ ಜಟೆಯಿ/ ಮದ ಧುಮುಕುವ ಗಂಗೆಯನ್ನು ಕರುಣಿಸಲು ಉಧ್ಯುಕ್ತ ನಾಮನು ತಪಸ್ಸಿಗೆ ಕುಳಿತ ಸ್ಥಳವೇ ಜಾವಳಿಯ ಸಮೀಪವಿರುವ ಹೇಮಾವತಿ ಗುಡ್ಡವೆಂದು ಇಲ್ಲಿನ ಸ್ಥಳೀಯರು ನಂಬಿದ್ದಾರೆ. ಆತನು ನಿರ್ಮಿಸಿದ ಆಶ್ರಮದ ಬಳಿ ಇಂದು ಹೇಮಾವತಿ ನದಿಯ ಮೂಲಸ್ಥಾನವಿದೆ. ಸತ್ಯಕಾಮನ ತಪಸ್ಸಿಗೆ ಪಾರ್ವತಿದೇವಿಯು ಪ್ರತ್ಯಕ್ಷಳಾಗಿ ಸತ್ಯಕಾಮನಿಗೆ ವರವಿತ್ತಳು. ಹಿಮಾಲಯದ ಹಿಮ ಕರಗಿದಂಡಕಾರಣ್ಯದ ಈ ಪ್ರದೇಶದಲ್ಲಿ ನದಿಯಾಗಿ ಪ್ರವಹಿಸುವಂತೆ ವರ ನೀಡಿದಳು. ದಂಡಕಾರಣ್ಯದಲ್ಲಿ ಗುಪ್ತವಾಗಿ ಹರಿದುಕೊಟ್ಟಿಗೆ ಹಾರದಿಂದ ಹೊರನಾಡಿಗೆ ಹೋಗುವ ಮಧ್ಯೆ ಬರುವ ಜಾವಳಿಯ ಸಮೀಪವಿರುವ ಹೇಮಾವತಿಗುಡ್ಡವೇ ಈ ಹೇಮಾವತಿ ನದಿಯ ಉಗಮಸ್ಥಾನ. ಇದರಿಂದ ಹಾಸನ ಜಿಲ್ಲೆ ಸಮೃದ್ಧವಾಯಿತು. ಆ ನದಿಯನ್ನು ಹಿಂದೆ ಹೇಮವಾಹಿನಿ ಎಂದೂ ಅನಂತರ ಹೇಮಾವತಿಯೆಂದೂ ಕರೆಯಲಾಯಿತು. ಇಂದು ಹೇಮಾವತಿ ನದಿ ಹಾಸನ, ಮಂಡ್ಯಜಿಲ್ಲೆಗೆ ವರಪ್ರಸಾದವಾಗಿ ಜನರ ಜೀವನಾಡಿಯಾಗಿ ಪರಿವರ್ತಿತವಾಗಿದೆ.
ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ 12, 1863 – ಜುಲೈ 4, 1902) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12 ರಂದು ರಾಷ್ಟ್ರೀಯ “ಯುವದಿನ”ವೆಂದು ಆಚರಿಸಲಾಗುತ್ತದೆ.
ಜನನ
ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು 1863, ಜನವರಿ 12ರಂದು ಕೊಲ್ಕತ್ತದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ‘ವಿವೇಕಾನಂದ’ ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿμï ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ರಾಮಕೃಷ್ಣರ ಒಡನಾಟ :
ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಹೆಸ್ಟಿಯವರು ವಿಲಿಯಮ್ ವಡ್ಸ್ರ್ವವರ್ತ್ ಅವರ “ದ ಎಕ್ಸ್ಸಕರ್ಶನ್” ಎಂಬ ಕವಿತೆಯಲ್ಲಿನ “ಸಮಾಧಿ” ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು. ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೋಡಲು ಉತ್ಸುಕರಾದರು. ಆವರಲ್ಲಿ ನರೇಂದ್ರರೂ ಒಬ್ಬರು.
1881ನೇ ಇಸವಿ ನವೆಂಬರದಲ್ಲಿ ಎಫ್.ಎ (ಲಲಿತಕಲೆ) ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾಗ, ರಾಮಚಂದ್ರದತ್ತರು ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು ಸುರೇಂದ್ರನಾಥ ಮಿತ್ರರ ಮನೆಗೆ ಕರೆದರು. ಅಲ್ಲಿ ರಾಮಕೃಷ್ಣರು ನರೇಂದ್ರನಿಗೆ ಹಾಡಲು ಕೇಳಿಕೊಂಡರು. ಅವರ ಗಾಯನ ಪ್ರತಿಭೆಯನ್ನು ಮೆಚ್ಚಿ ರಾಮಕೃಷ್ಣರು ನರೆಂದ್ರನನ್ನು ದಕ್ಷಿಣೇಶ್ವರಕ್ಕೆ ಬರಲು ಆಮಂತ್ರಿಸಿದರು. ಆದರೆ ನರೇಂದ್ರರು ಅದರ ಬಗ್ಗೆ ಉತ್ಸಾಹ ತೊರಿಸಲಿಲ್ಲ.
1882 ರಲ್ಲಿ ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ ಅವರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳ್ಳಲಿಲ್ಲ. ರಾಮಕೃಷ್ಣರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಗುವಿನಂಥ ವ್ಯಕ್ತಿತ್ವ ಅವರನ್ನು ಪದೇ ಪದೇ ದಕ್ಷಿಣೀಶ್ವರಕ್ಕೆ ಭೇಟಿ ನೀಡಲು ಪ್ರೇರೇಪಿಸಿತು.
ಮೊದಮೊದಲಿಗೆ ರಾಮಕೃಷ್ಣರ ಭಾವಪರವಶತೆಯ ಮತ್ತು ದೂರದೃಷ್ಟಿಯನ್ನು ಕೇವಲ ಕಾಲ್ಪನಿಕ ಬರಿ ಭ್ರಮೆ ಎಂದು ಭಾವಿಸಿದ್ದರು. 1884 ಇಸವಿಯಲ್ಲಿ ಅನಿರೀಕ್ಷಿತವಾಗಿ ನರೇಂದ್ರರ ತಂದೆಯವರು ಇಹಲೋಕ ತ್ಯಜಿಸಿದರು. ಅವರ ಮರಣಾ ನಂತರ ಕುಟುಂಬ ದಿವಾಳಿಯಾಯಿತು, ಸಾಲಗಾರರ ಬಾಧೆ ಶುರುವಾಯಿತು.ಅವರ ಕುಟುಂಬದವರು ಪೂರ್ವಜರ ಮನೆಯಿಂದ ಹೊರಗೆ ಹಾಕಿದರು.
ಅವರು ಕೆಲಸ ಹುಡುಕುವುದರಲ್ಲಿ ವಿಫಲರಾದಾಗ, ದೇವರ ಅಸ್ತಿತ್ವದ ಬಗ್ಗೆಯೇ ಸಂದೇಹಪಟ್ಟರು. ಆದರೆ ರಾಮಕೃಷ್ಣರ ಸಾನಿಧ್ಯ ಅವರಿಗೆ ಸಾಂತ್ವನ ನೀಡುತಿತ್ತು. ಒಂದು ದಿನ ನರೇಂದ್ರರು ಅವರ ಕುಟುಂಬದ ಅಭ್ಯುದಯಕ್ಕೋಸ್ಕರ ಕಾಳಿ ದೇವಿಯನ್ನು ಪ್ರಾರ್ಥಿಸುವಂತೆ ರಾಮಕೃಷ್ಣರನ್ನು ಕೇಳಿಕೊಂಡರು. ಅದಕ್ಕೆ ಅವರು ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಎರಡು, ಮೂರು ಸಲ ದೇವಸ್ಥಾನಕ್ಕೆ ಹೋದರು.
ಆದರೆ ಅವರು ಯಾವುದೇ ರೀತಿಯ ಲೌಕಿಕ ಅವಶ್ಯಕತೆಗಳನ್ನು ಪೂರೈಸಲು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದರಲ್ಲಿ ವಿಫಲರಾದರು. ಆದರೆ ಪ್ರತಿ ಬಾರಿಯು ಮುಕ್ತಿಗಾಗಿ ಕೇಳಿಕೊಳ್ಳಲμÉ್ಟೀ ಶಕ್ತರಾದರು. ಕೊನೆಗೆ ಅವರು ಸರ್ವಸಂಗ ಪರಿತ್ಯಾಗ ಮಾಡಿ ರಾಮಕೃಷ್ಣರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಿದರು. 1885 ರಲ್ಲಿ ರಾಮಕೃಷ್ಣರು ಕಲ್ಕತ್ತಾದ ಕೊಸ್ಸಿಪುರದಲ್ಲಿ ಇರುವ ಅವರ ತೋಟದ ಮನೆಯಲ್ಲಿ ಗಂಟಲಿನ ಹುಣ್ಣಿನಿಂದ ಬಳಲುತಿದ್ದರು.
ನರೇಂದ್ರರು ತಮ್ಮ ಆಧ್ಯಾತ್ಮಿಕ ವಿಧ್ಯಾಭ್ಯಾಸವನ್ನು ಮುಂದುವರಿಸಿದರು. ಅವರು ಕೊಸ್ಸಿಪುರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಅನುಭವಿಸಿದರು. ನರೇಂದ್ರ ಮತ್ತು ರಾಮಕೃಷ್ಣರ ಇತರ ಶಿಷ್ಯರು ಗುರುಗಳ ಅದೇಶದಂತೆ ಅವರಂತೆ ನಿಲುವಂಗಿ ಮತ್ತು ಕಾವಿ ತೊಟ್ಟುಕೊಂಡರು. ಜನ ಸೇವೆಯೇ ಜನಾರ್ದನನ ಸೇವೆ ಎಂದರು. ರಾಮಕೃಷ್ಣರು ನರೇಂದ್ರರನ್ನು ತಮ್ಮ ಶಿಷ್ಯವೃಂದದ ನಾಯಕರನ್ನಾಗಿ ನೇಮಿಸಿದರು. ರಾಮಕೃಷ್ಣರು 1886, ಆಗಸ್ಟ 16 ರಂದು ನಿಧನ ಹೊಂದಿದರು.
ರಾಮಕೃಷ್ಣ ಮಠದ ಸ್ಥಾಪನೆ
ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯವು ಕಡಿಮೆಯಾಯಿತು. ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು. ಬಾರನಗರದಲ್ಲಿ ನರೇಂದ್ರರು ಶಿಥಿಲವಾದ ಮನೆಯನ್ನು ಖರೀದಿಸಿ, ಆ ಮನೆಯನ್ನು ಅವರು ಮಠವನ್ನಾಗಿ ಪರಿವರ್ತಿಸಲು ಆಲೋಚಿಸಿದರು. ಆ ಮನೆಯ ಬಾಡಿಗೆಯನ್ನು ಭಿಕ್ಷಾಟನೆ ಮೂಲಕ ತುಂಬುತಿದ್ದರು.
ಈ ಮನೆಯೆ ರಾಮಕೃಷ್ಣರ ಮಠದ ಮೊದಲ ಶಾಖೆಯಾಯಿತು. ಅಲ್ಲಿ ನರೇಂದ್ರ ಮತ್ತು ಅವರ ಶಿಷ್ಶರು ಹೆಚ್ಚಿನ ಸಮಯವನ್ನು ಧ್ಯಾನ ಮತ್ತು ಧಾರ್ಮಿಕ ವಿಷಯಗಳನ್ನು ಅಭ್ಯಾಸ ಮಾಡುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಮುಂದಿನ ಆ ದಿನಗಳನ್ನು ನೆನೆಸುತ್ತಾ “ಪ್ರತಿದಿನ ಬೆಳಿಗ್ಗೆ 3 ರಿಂದ ರಾತ್ರಿಯವರೆಗು ನಾವು ಧ್ಯಾನದಲ್ಲೆ ಕಳೆಯುತ್ತಿದ್ದೆವು.
ಜಗತ್ತಿನ ಪರಿವೆಯೆ ಇಲ್ಲದೆ, ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು” 1881 ನೇ ಇಸವಿಯಲ್ಲಿ ನರೇಂದ್ರರು ವೈಷ್ಣವ ಚರಣ್ ಬಾಸ್ಕರವರ ಜೊತೆ ಬಂಗಾಳಿ ಭಾμÉಯ ಕವಿತೆಗಳನ್ನೊಳಗೊಂಡ “ಸಂಗೀತ ಕಲ್ಪತರು “ಎಂಬ ಪುಸ್ತಕವನ್ನು ಸಂಗ್ರಹಿಸಿದರು. ಆದರೆ ಹಲವು ಸಮಸ್ಯೆಗಳಿಂದ ಅದನ್ನು ಪ್ರಕಟಿಸಲಾಗಲಿಲ್ಲ..
ವಿವೇಕಾನಂದರ ಭಾರತ ಪರ್ಯಟನೆ
1888 ನರೇಂದ್ರರು ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆ ಹಾಗೂ “ದಿ ಇಮಿಟೆಶ್ನ್ ಆಫ್ ಕ್ರೈಸ್ತ್” ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು.
ಉತ್ತರ ಭಾರತ
1888 ರಲ್ಲಿ ಗೌತಮ ಬುದ್ಧ ಮತ್ತು ಆದಿ ಶಂಕರಾಚಾರ್ಯರು ಧರ್ಮ ಪ್ರಚಾರ ಮಾಡಿದ ವಾರಣಾಸಿಗೆ ಭೇಟಿ ನೀಡಿದರು. ಅಲ್ಲಿ ಅವರು ಬಂಗಾಳಿ ಬರಹಗಾರ ಭೂದೇವ ಮುಖ್ಯೋಪಾಧ್ಯಾಯ ಮತ್ತು ಹಿಂದು ಸಂತ ತ್ರ್ಯೆಲಂಗರನ್ನು ಭೇಟಿ ಮಾಡಿದರು. ಭೂದೇವ ಮುಖ್ಯೋಪಾಧ್ಯಾಯರು “ಇಂತಹ ದೂರದೃಷ್ಟಿ ಮತ್ತು ವಿಚಾರವಾದವನ್ನು ಇಷ್ಟು ಕಿರಿಯ ಪ್ರಾಯದಲ್ಲಿ ಪಡೆದುಕೊಂಡ ನೀನು ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುವೆ” ಎಂದು ಪ್ರಶಂಸಿಸಿದರು. ನಂತರ ಸಂಸ್ಕ್ರತ ಮತ್ತು ವ್ಯೆದಿಕ ವಿದ್ವಾಂಸರಾದ ಬಾಬು ಪರಮದಾಸ್ ಮಿತ್ರ ಅವರನ್ನು ಭೇಟಿ ಮಾಡಿದರು. ನಂತರ ಅವರು ಅಯೋಧ್ಯಾ, ಲಕ್ನೋ ವೃಂದಾವನ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದರು.
ಅದ್ವೈತ ಸಿದ್ಧಾಂತದ ಉಪಯುಕ್ತತೆ
ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು.
ಇದೇ ಅವರ ಮಂತ್ರವಾಯಿತು ಮತ್ತು ಅವರ “ದರಿದ್ರ ನಾರಾಯಣ ಸೇವೆ’ ಎಂಬ ತತ್ತ್ವಕ್ಕೆ ದಾರಿ ಮಾಡಿ ಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು.
ಅವರ ಅಂತಿಮವಾದ ತೀರ್ಮಾನವೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ.
ವಿವೇಕಾನಂದರ ವಿಶ್ವಪರ್ಯಟನೆ
ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ ಪ್ರಚಾರ ಮಾಡಿದರು. ಅವರು ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು. ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದರು. ಗುರು ರಾಮಕೃಷ್ಣರ ಮರಣಾ ನಂತರ ವಿವೇಕಾನಂದರು ಭಾರತ ಪ್ರವಾಸ ಕೈಗೊಂಡರು.
ಭಾರತದ ಉಪಖಂಡದಲ್ಲಿ ಬ್ರಿಟೀಷರ ಷರತ್ತುಗಳನ್ನು ಆಧ್ಯಯನ ಮಾಡಿದರು. ನಂತರ ಅವರು ಅಮೇರಿಕಾ ಪ್ರವಾಸ ಕೈಗೊಂಡರು. 1893ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು. ವಿವೇಕಾನಂದರು ನೂರಕ್ಕು ಹೆಚ್ಚು ಖಾಸಗಿ ಹಿಂದೂಸಂಸ್ಥೆಗಳಲ್ಲಿ ತಮ್ಮ ವಿಚಾರಧಾರೆಯನ್ನು ಹರಿಸಿದರು. ದೇಶ ವಿದೇಶಗಳಲ್ಲಿ ಹಿಂದೂಧರ್ಮದ ತತ್ವವನ್ನು ಭೋಧಿಸಿದರು.
ಅವರು ಪ್ರಪಂಚದಾದ್ಯಂತ ಪ್ರಯಾಣ ಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯ ಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ. *ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು.
ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ. ವಿವೇಕಾನಂದರು, ಧರ್ಮ ಮತ್ತು ಸರ್ಕಾರ ದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು.
ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕøತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ. ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ.
ಸರ್ವಧರ್ಮಸಮ್ಮೇಳನದಲ್ಲಿ ಮಾಡಿದ ಭಾಷಣ
ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು1893 ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ “ಅಮೆರಿಕದ ಸಹೋದರ ಸಹೋದರಿಯರೇ” ಎಂಬ ವಾಕ್ಯ ಚಿರಸ್ಮರಣೀಯವಾಗಿದೆ.
‘ವಿಶ್ವದ ಧರ್ಮಗಳ ಸಂಸತ್ತು’ ಸೆಪ್ಟೆಂಬರ್ 11, 1893 ರಂದು ವಿಶ್ವದ ಕೊಲಂಬಿಯನ್ ಪ್ರದರ್ಶನದ ಭಾಗವಾಗಿ ಈಗ ಚಿಕಾಗೋದ, “ಆರ್ಟ್ ಇನ್ಸ್ಟಿಟ್ಯೂಟ್ನ ಶಾಶ್ವತ ಸ್ಮಾರಕ ಕಲಾ ಭವನ” ದಲ್ಲಿ (ವಿಶ್ವದ ಕಾಂಗ್ರೆಸ್ ಸಹಾಯಕ ಕಟ್ಟಡ ಎಂದೂ ಗುರುತಿಸಲ್ಪಟ್ಟಿದೆ) ಪ್ರಾರಂಭವಾಯಿತು. ವಿವೇಕಾನಂದರು ಆ ದಿನ ತಮ್ಮ ಮೊದಲ ಉಪನ್ಯಾಸವನ್ನು ನೀಡಿದರು. ಇವರ ಸರದಿಯನ್ನು ತುಂಬಾ ಮುಂದೂಡುವಿಕೆಯ ನಂತರ ಮಧ್ಯಾಹ್ನದ ಹೊತ್ತಿಗೆ ಇವರ ಸರದಿ ಬಂದಿತು. ಆರಂಭದಲ್ಲಿ ಅವರು ಆತಂಕಕ್ಕೊಳಗಾಗಿದ್ದರೂ, ಅವರು ಹಿಂದೂ ವಿದ್ಯಾ ದೇವತೆಯಾದ ಸರಸ್ವತಿಗೆ ನಮಸ್ಕರಿಸಿದರು, ಮತ್ತು ಅವರು ತಮ್ಮ ದೇಹದಲ್ಲಿ ಹೊಸ ಶಕ್ತಿಯನ್ನು ಪಡೆದುಕೊಂಡಿರವುದಾಗಿ ಭಾವಿಸಿದರು; ಯಾರೋ ಅಥವಾ ಇನ್ನೊಬ್ಬರು ತಮ್ಮ ದೇಹವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಅವರು ಭಾವಿಸಿದರು- (ಅದು”ದಿ ಸೋಲ್ ಆಫ್ ಇಂಡಿಯಾ, ಋಷಿಯ ಪ್ರತಿಧ್ವನಿ, ರಾಮಕೃಷ್ಣರ ಧ್ವನಿ, ಪುನರುತ್ಥಾನಗೊಂಡ ಸಮಯದ ಚೈತನ್ಯದ ಮುಖವಾಣಿ”) ನಂತರ “ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ!” ಎಂದು ಸಂಬೋಧಿಸಿ ಮಾತು ಆರಂಭಿಸಿದರು. ಈ ಮಾತುಗಳಿಗೆ ಅವರು ಅಲ್ಲಿದ್ದ ಏಳು ಸಾವಿರ ಜನಸಮೂಹದಿಂದ ‘ನಿಂತು ಚಪ್ಪಾಳೆಯ ಮೆಚ್ಚಗೆ ಸೂಚಿಸಿಸ ಗೌರವ’ ಪಡೆದರು, ಅದು ಎರಡು ನಿಮಿಷಗಳ ಕಾಲ ನಡೆಯಿತು. ಮೌನವನ್ನು ಪುನಃಸ್ಥಾಪಿಸಿದಾಗ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. “ವಿಶ್ವದ ಅತ್ಯಂತ ಪ್ರಾಚೀನ ವೈದಿಕ ಕ್ರಮ ಅನುಸರಿಸಿದ ಸನ್ಯಾಸಿಗಳ, ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮದ ಪರವಾಗಿ ಅವರು ಯುವ ರಾಷ್ಟ್ರಗಳನ್ನು ಅಭಿನಂದಿಸಿದರು.!” (ಭಾರತಕ್ಕಿಂತ ಅವು ಕಿರಿಯ/ ಯುವ ರಾಷ್ಟ್ಟ್ರಗಳು)
ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. ‘ಪೂರ್ವ ದೇಶದ ವಿಚಿತ್ರ ಧರ್ಮ’ ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು, ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ ‘ನ್ಯೂಯಾರ್ಕ್’ ಮತ್ತು ‘ಲಂಡನ್’ ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು.
ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಹಾಗೆಯೇ “ಆತ್ಮನೋ ಮೋಕ್ಷಾಥರ್ಂ ಜಗದ್ ಹಿತಾಯ ಚ” (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ@ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ.
‘ಸ್ವಾಮಿ ವಿವೇಕಾನಂದ’ರು ದಿವಂಗತರಾದಾಗ ಕೇವಲ 39 ವರ್ಷದವರಾಗಿದ್ದರು. ಯುವಕರಿಗೆ ದಾರಿ ದೀಪವಾಗಿದ್ದರು. ಸ್ವಾಮಿ ಅವರ ಭಾಷಣದ ಆಯ್ದ ಭಾಗ ಹೀಗಿದೆ:-“ನಾನು ಮಾಡಿರುವ ಅಲ್ಪ ಕಾರ್ಯ ಕೇವಲ ನನ್ನಲ್ಲಿರುವ ಶಕ್ತಿಯಿಂದಲ್ಲ. ನನ್ನ ಪರಮಮಿತ್ರ ಪ್ರಿಯತಮ ಮಾತೃಭೂಮಿಯಿಂದ ಹೊರಟ ಉತ್ತೇಜನ ಶುಭಾಶಯ ಆಶೀರ್ವಾದಗಳು”.
ಸ್ವದೇಶ ಮಂತ್ರ
ಹೋ ಜಂಬೂದ್ವೀಪದ ಮೂಲ ನಿವಾಸಿಗಳೇ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ!
ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು. *ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು – ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು.
ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‍ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ “ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ”. ಸಹೋದರರೆ, ಹೀಗೆ ಸಾರಿ “ಭಾರತ ಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ.” ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, “ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ಹೋಗಲಾಡಿಸಿ, ನಮ್ಮಲ್ಲಿ ವೀರತ್ವವನ್ನು ತುಂಬು.
ಚಿಕಾಗೋದಲ್ಲಿ ಒಬ್ಬ ಕ್ರಿಶ್ಚನ್ನ ಯುವಕರು ತಮ್ಮಗ್ರಂಥವನ್ನು ಭಗವದ್ಗೀತೆಯ ಕೆಳಗಿಟ್ಟು ತಮ್ಮಧರ್ಮ ಶ್ರೇಷ್ಠ ಎಂಬ ಮಂಡುವಾದ ಮಾಡಿದರು. ಆ ಪುಸ್ತಕ ಸರಿಸಿದ ವಿವೇಕಾನಂದರು ಕೆಳಗಿದ್ದ ಪುಸ್ತಕ ವನ್ನು ಕುರಿತು ಎಲ್ಲಾಧರ್ಮಗಳಿಗಿಂತ ಮೂಲ ಧರ್ಮ ನಮ್ಮಧರ್ಮ.ಎಲ್ಲಾ ಧರ್ಮವು ಒಂದೇ ಎಂದು ಹೇಳಿದರು.
ಜಗದ ಯುಗದ ಕವಿ – ರಾಷ್ಟ್ರಕವಿ ಕುವೆಂಪು
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿನಿಮಿರುವುದು
ಕನ್ನಡ.. ಕನ್ನಡ.. ಆ..ಸವಿ ಕನ್ನಡ..
ಎಂದು ಕನ್ನಡಗರನ್ನು ಸಾಹಿತ್ಯದಲೆಗಳ ಮೇಲೆ ತೇಲುವಂತೆ ಮಾಡಿದ ಶ್ವಬ್ದಮಾಂತ್ರಿಕ.. ಕರುನಾಡಿಗೆ ‘ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕಮಾತೆ’ ಎಂಬ ನಾಡಿಗೀತೆಯ ಪದಪುಂಜಗಳಿಂದ ಕನ್ನಡಮಾತೆಗೆ ಶಬ್ಧಾರ್ಚನೆಮಾಡಿದ ಸಹ್ಯಾದ್ರಿ ಸಾಲ ಕವಿಕುಲೋತ್ತಮ ಕುವೆಂಪು ಕನ್ನಡ ಸಾಹಿತ್ಯ ಲೋಕದ ಅಪ್ಪಟ ಕವಿಕೋಗಿಲೆ.
ಕುವೆಂಪುರವರು ಕನ್ನಡ ನಾಡಿನ ಹೆಮ್ಮೆಯ ರಸಕವಿ, ಋಷಿಕವಿ, ರಾಷ್ಟ್ರಕವಿ ಕನ್ನಡದ ಮತ್ತೋರ್ವ ವರಕವಿಗಳಾದ ಬೇಂದ್ರೆಯವರಿಂದಲೇ ಯುಗದಕವಿ ಜಗದಕವಿ ಎಂದು ಕೀರ್ತಿತರಾಗಿದ್ದಂತಹವರು. ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ತರಗಳಲ್ಲಿ ಎತ್ತಿ ಹಿಡಿದ ಮಹಾನ್ ಚೇತನ.
ಕುವೆಂಪು ಒಬ್ಬ ದಾರ್ಶನಿಕ ಲೇಖಕರು. ವರ್ತಮಾನದ ನಿತ್ಯವನ್ನೂ, ತ್ರಿಕಾಲದ ಭವ್ಯವನ್ನೂ, ಭೂಮವನ್ನೂ, ಅಲ್ಪವನ್ನೂ ಒಂದು ಪೂರ್ಣ ದೃಷ್ಟಿಯಲ್ಲಿ ಒಳಗೊಳ್ಳಲು ಪ್ರಯತ್ನಿಸಿದ ತಪಸ್ವಿಗಳು ‘ಕಾಡಿನ ಕೊಳಲಿದು, ಕಾಡ ಕವಿಯು ನಾ, ನಾಡಿನ ಜನರೊಲಿದಾಲಿಪುದು’ ಎಂಬ ಭಿನ್ನಹದೊಂದಿಗೆ ಕಳೆದ ಶತಮಾನದ 3ನೆಯ ದಶಕದಲ್ಲಿ ಕನ್ನಡ ನವೋದಯವನ್ನು ಪ್ರವೇಶಿಸಿದ ಈ ಕಾಡಿನ ಕವಿ ಅನಂತರ ನಾಡಿನ ಕವಿಯಾಗಿ ಕುವೆಂಪು ಎಂಬ ಮೂರಕ್ಷರದಿಂದಲೇ ಕನ್ನಡಿಗರ ಮನೆ ಮಾತಾದ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ, ಹೊಸಗನ್ನಡ ಸಾಹಿತ್ಯದ ಹಿರಿಯ ಕವಿ. ಕನ್ನಡ ಸಾಹಿತ್ಯವನ್ನು ವಿಶ್ವ ಸಾಹಿತ್ಯ ವೇದಿಕೆಗೆ ಕೊಂಡೊಯ್ದ ವಿಶ್ವಮಾನವ, ಕನ್ನಡದ ಮಹಾನ್ ಚೇತನ.
ಬಾಲ್ಯ ಜೀವನದ ಕಂಪು :
ಕುವೆಂಪುರವರು ಹುಟ್ಟಿದ್ದು 29 ಡಿಸೆಂಬರ್ 1904, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ, ತಂದೆ ವೆಂಕಟಪ್ಪಗೌಡರು, ತಾಯಿ ಸೀತಮ್ಮ, ಆದರೆ ಕುವೆಂಪುರವರು ಹುಟ್ಟಿದ್ದು ತಾಯಿಯ ತವರಾದ ಚಿಕ್ಕಮಗಳೂರು ಜಿಲ್ಲೆಯ ಹಿರೇಕೊಡಗಿ ಗ್ರಾಮದಲ್ಲಿ. ಮಲೆನಾಡಿನ ಮಡಿಲಿನಲ್ಲಿ ಹುಟ್ಟಿ ಬೆಳೆದ ಕುವೆಂಪುರವರು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚಿನ ವಿಷಯವನ್ನು ಕಲಿಸಿದ್ದು ಮಲೆನಾಡಿನ ಪ್ರಕೃತಿ, ಹೀಗಾಗೆ ಅವರ ಎಲ್ಲಾ ಕೃತಿಗಳಲ್ಲಿ ಮಲೆನಾಡಿನ ಸೊಬಗು ಕಂಗೊಳಿಸುತ್ತದೆ.
ಓದುವಾಗಲೇ ಕವಿಹೃದಯ :
ಎಸ್.ಎಸ್.ಎಲ್.ಸಿ ಓದುವಾಗಲೇ ಕುವೆಂಪುರವರ ಬರೆದಿದ್ದ ‘ಬಿಗಿನರ್ಸ್ ಮ್ಯೂಸ್’ ಎಂಬ ಇಂಗ್ಲೀಷ್ ಕವನ ಸಂಕಲನ ಭಾರತ ಭೇಟಿಗೆ ಬಂದಿದ್ದ ಐರಿಷ್ ಕವಿ ಜೆ.ಹೆಚ್.ಕಸಿನ್ಸ್‍ರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಅವರ ಸಲಹೆಯಂತೆ ಕನ್ನಡದಲ್ಲಿ ಬರೆಯಲಾರಂಭಿಸಿದ ಕುವೆಂಪುರವರು ಬರೆದ ಮೊದಲ ಕನ್ನಡ ಕವನ ಸಂಕಲನ ‘ಅಮಲನ ಕಥೆ’ ಚಿಕ್ಕಂದಿನಿಂದಲೇ ಮಲೆನಾಡಿನ ಪರಿಸರದಲ್ಲಿ ಬೆಳೆದ ಕುವೆಂಪುರವರಿಗೆ ಅಪಾರವಾದ ಪರಿಸರ ಪ್ರೇಮ, ಅವರ ಪರಿಸರ ಪ್ರೀತಿಯೇ ಅವರ ಕಾವ್ಯದಲ್ಲಿ ಜೀವಂತವಾಗಿ ಮೇಳೈಸಿದೆ.
ಮಹಾಮಹಿಮರ ಮಾರ್ಗದರ್ಶನ :
ಜೊತೆಗೆ ನಾಡು ಕಂಡ ಧೀಮಂತರಾದ ಶ್ರೀ ಟಿ.ಎಸ್.ವೆಂಕಣ್ಣಯ್ಯ, ಬಿ.ಎಂ.ಶ್ರೀ, ಎ.ಆರ್.ಕೃಷ್ಣಶಾಸ್ತ್ರಿರವರ ಒಡನಾಟ, ಮಾರ್ಗದರ್ಶನಗಳು ಅವರ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು. 1925ರಲ್ಲಿ ಪ್ರಕಟವಾದ ಕುವೆಂಪುರವರ ‘ಬೊಮ್ಮನಹಳ್ಳಿ ಕಿಂದರಿ ಜೋಗಿ’ ನಾಡಿನಾದ್ಯಂತ ಮಕ್ಕಳ ಬಾಯಲ್ಲಿ ನಲಿದಾಡಿತು. ಸೆಂಟ್ರಲ್ ಕಾಲೇಜು ವಿದ್ಯಾರ್ಥಿಯಾಗಿದ್ದ ಕುವೆಂಪುರವರಿಗೆ ಕವಿ ಸಮ್ಮೇಳನದ ಅಧ್ಯಕ್ಷ ಪದವಿಯೂ ಇವರನ್ನು ಅರಸಿ ಬಂತು.
ವಿಶ್ವಮಾನವ ಸಂದೇಶ :
ಕುವೆಂಪು ತಮ್ಮ ಬದುಕಿನ ಸಂದೇಶವೆಂದು ‘ವಿಶ್ವಮಾನವನ’ ಪರಿಕಲ್ಪನೆಯೊಂದನ್ನು ಮಂಡಿಸಿದವರು ‘ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನ’ನ್ನಾಗಿ ಮಾಡುತ್ತೇವೆ. ಮತ್ತೇ ಅದನ್ನು ವಿಶ್ವಮಾನವನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಇದನ್ನು ಕಾರ್ಯಗತಗೊಳಿಸಲು ಅಗತ್ಯವಾದ ಸಪ್ತ ಸೂತ್ರಗಳನ್ನು ಮಂಡಿಸುತ್ತಾ ‘ಮನುಷ್ಯಜಾತಿ ತಾನೊಂದೇ ವಲಂ’ ಎಂಬ ಕವಿ ಪಂಪನ ಸೂತ್ರವನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು ಎನ್ನುತ್ತಾರೆ ಕುವೆಂಪು, ಆದರೆ ಮನುಷ್ಯ ಮನುಷ್ಯನಾಗಿ ಬದುಕುವುದೇ ಸಾಧ್ಯವಾಗದಂತಹ ವಿದ್ಯಮಾನಗಳು ಸಂಭವಿಸುತ್ತಿರುವ ಈ ಹೊತ್ತಿನಲ್ಲಿ ಅನೇಕ ವಿಚ್ಛಿದ್ರಕಾರಕ ಶಕ್ತಿಗಳಿಂದ ಮನುಷ್ಯತ್ವವೇ ಚೂರು ಚೂರಾಗುತ್ತಿರುವ ಸಂದರ್ಭದಲ್ಲಿ ಕುವೆಂಪು ಅವರ ವಿಶ್ವಮಾನವ ಕಲ್ಪನೆ ಒಂದು ದೂರದ, ಎತ್ತರದ ಬೆಳಕು ಮಾತ್ರ!.
ಕಾಡು ಕವಿ :
ಪಂಪನಿಗೆ ಧರ್ಮ ಮತ್ತು ಕಾವ್ಯಧರ್ಮ ಹೇಗೆ ಬೇರೆ ಬೇರೆಯಾಗಿರಲಿಲ್ಲವೋ ಹಾಗೆಯೇ ಕುವೆಂಪು ಅವರಿಗೆ ಪ್ರಕೃತಿ ಮತ್ತು ಕಾವ್ಯ ಪ್ರಕೃತಿ ಬೇರೆ ಬೇರೆಯಾಗಿರಲಿಲ್ಲ. ಕಣ್ಣಿಗೆ ಕಾಣುವ ಪ್ರಕೃತಿ ಹಾಗೂ ಕಣ್ಣಿಗೆ ಕಾಣದ ಪ್ರಕೃತಿಗಳ ಅಂತರ ಸಂಬಂಧವನ್ನು, ಅಂತರ ವಿರೋಧವನ್ನು ತಮ್ಮ ಕೃತಿಗಳಲ್ಲಿ ಅನುಸಂಧಾನ ಮಾಡುತ್ತಾರೆ. ಕಾಡಿನ ರುದ್ರ ಭೀಕರತೆಯನ್ನು ಸೌಮ್ಯ ಸೌಂಧರ್ಯವನ್ನು ತಮ್ಮ ಪಾತ್ರಗಳ ವ್ಯಕ್ತಿತ್ವಗಳ ಬೆಳವಣಿಗೆಗೆ ಭಿತ್ತಿಯಾಗಿ ಬೆಳೆಸುತ್ತಾರೆ. ಕಾಡಿನ ಮಹತ್ವ, ಪ್ರಕೃತಿಯ ಅನಂತತೆಯನ್ನು ಸಾರುತ್ತಾರೆ. ಪ್ರಕೃತಿ ತನಗೋಸ್ಕರ ಇದೆ ಎಂಬ ಯಜಮಾನ ಧೋರಣೆಯನ್ನು ಖಂಡಿಸಿ ತಾನು ಅದರ ಒಂದು ಭಾಗ ಮಾತ್ರ ಎಂಬುದನ್ನು ಮನದಟ್ಟಾಗಿಸಿ ಮನುಷ್ಯ ಸಾಧ್ಯತೆಗಳ ಮಿತಿಯನ್ನು ತೋರಿಸುವುದು ಕುವೆಂಪು ಅವರ ಉದ್ಧೇಶವಾಗಿದೆ.
ಕುವೆಂಪು ತಮ್ಮ ಎರಡು ಕಾದಂಬರಿಗಳಲ್ಲೂ ಮಲೆನಾಡಿನ ಬದುಕನ್ನು ಚಿತ್ರಿಸಿದ್ದಾರೆ, ಹೀಗೆ ಚಿತ್ರಿಸುವಾಗ ಇದು ಸೌಂದರ್ಯ ವರ್ಣನೆ, ಇದು ಕಾಡಿನ ವರ್ಣನೆ, ಇದು ಸಂಪ್ರದಾಯದ ವರ್ಣನೆ ಎಂದೇನು ವಿಭಾಗಿಸಿಲ್ಲ. ಕುವೆಂಪು ಸಾಹಿತ್ಯದಲ್ಲಿ ಪರಿಸರ ಎಂದ ಕೂಡಲೇ ನಮ್ಮ ಮನಸ್ಸಿನಲ್ಲಿ ಮೂಡುವುದು ಅಲ್ಲಿನ ಮರಗಿಡ ಬಳ್ಳಿಗಳು, ನದಿ ತೊರೆಗಳು, ಬೆಟ್ಟ ಗುಡ್ಡಗಳು, ಪ್ರಾಣಿಪಕ್ಷಿಗಳು, ಇನ್ನಿತರ ಸಂಗತಿಗಳನ್ನು ಹೇಗೆ ವರ್ಣಿಸಿದ್ದಾರೆ ಎಂಬುದು ಬೇರೆಲ್ಲಾ ಅವರ ಕೃತಿಗಳಿಗಿಂತ ಕಾದಂಬರಿಗಳಲ್ಲಿ ಇವೆಲ್ಲದರ ವರ್ಣನೆ ಹೆಚ್ಚಾಗಿಯು ಇದೆ.
ಕುವೆಂಪು ಅವರ ಎರಡು ಕಾದಂಬರಿಗಳಲ್ಲಿ ಬರುವ ಪರಿಸರ ಚಿತ್ರಣ, ಕಾಡು, ಗಿಡ, ಮರ, ಬೆಟ್ಟ ಗುಡ್ಡಕ್ಕೆ ಮೀಸಲಿಲ್ಲ, ಅಜ್ಞಾನ, ಮೂಢನಂಬಿಕೆ, ಶೋಷಣೆ ಇವೆಲ್ಲವುಗಳಿಂದ ಮುಕ್ತವಾಗಿ ಬದುಕಲಿಕ್ಕೆ ಬೇಕಾದ ಸಹನೀಯ ವಾತಾವರಣ ನಿರ್ಮಿಸುವುದಾಗಿದೆ. ಒಂದು ಜೀವ ಬದುಕಲಿಕ್ಕೆ ಸಾಧ್ಯವಾಗದಂತಹ ಪರಿಸರ ನಿರ್ಮಾಣವಾಗಿರುವುದನ್ನು ವಿರೋಧಿಸುವ ಮೂಲಕ ಸಮಾನತೆಯ ಕಾಳಜಿಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ.
ವಿಚಾರವಾದಿಯ ರೂಪ :
ಇಂಗ್ಲೀಷ್ ಶಿಕ್ಷಣ, ಪ್ರಾಚ್ಯ – ಪಾಶ್ಚಾತ್ಯ, ತತ್ತ್ವಜ್ಞಾನಗಳ ತಳಸ್ಪರ್ಶಿಯಾದ ತಿಳುವಳಿಕೆ ಆಧುನಿಕ ವಿಜ್ಞಾನ ಮತ್ತು ಜಾಗತಿಕ ಸಮಾಜವಾದಿ ಚಿಂತನೆಗಳೊಂದಿಗೆ ನಡೆಸಿದ ಸಂವಾದ, ಶ್ರೀ ರಾಮಕೃಷ್ಣ – ವಿವೇಕಾನಂದ – ಗಾಂಧಿ – ಅರವಿಂದ ಮತ್ತು ಲೋಹಿಯಾ ಇಂತಹ ವ್ಯಕ್ತಿತ್ವಗಳ ಚಿಂತನೆಯ ಪ್ರಭಾವ ಇತ್ಯಾದಿಗಳಿಂದ ರೂಪುಗೊಂಡ ಕುವೆಂಪು ಅವರ ವೈಚಾರಿಕತೆಯು ಮನುಷ್ಯ ಚೈತನ್ಯದ ಚಲನಶೀಲತೆಯನ್ನು ಸ್ತಗಿತಗೊಳಿಸುವ ಎಲ್ಲಾ ವಿಕೃತಿಗಳನ್ನು ವಿರೋಧಿಸುತ್ತಾ, ಮನುಷ್ಯರೆಲ್ಲರ ಘನತೆಯನ್ನು ಎತ್ತಿ ಹಿಡಿಯುವ ಸ್ವರೂಪದ್ದಾಗಿದೆ.
ಕನ್ನಡಕ್ಕೆ ಕುವೆಂಪು ಸಾಹಿತ್ಯ ಕಾಣಿಕೆ :
ಕುವೆಂಪು ಅವರು ಬರೆದ ಎರಡು ಕಾದಂಬರಿಗಳಾದ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮಧುಮಗಳು’ ಭಾರತೀಯ ಸಾಹಿತ್ಯ ಪ್ರಪಂಚದಲ್ಲೇ ಶ್ರೇಷ್ಠಕೃತಿಗಳೆಂಬ ಪ್ರಶಂಸೆಗೆ ಪಾತ್ರವಾಗಿವೆ. ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದು ಕೊಟ್ಟ ಹಿರಿಮೆಯನ್ನು ಹೊಂದಿದ ಇವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ ಸಂಸ್ಕøತ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿದೆ.
ಇವರು ‘ಬೆರಳ್ಗೆ ಕೊರಳ್, ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರಂ, ರಕ್ತಾಕ್ಷಿ, ಜಲಗಾರ’ ಮೊದಲಾದ ನಾಟಕಗಳನ್ನು ಬರೆದಿದ್ದಾರೆ. ಜೊತೆಗೆ ಕೊಳಲು, ಅಗ್ನಿಹಂಸ, ಅನಿಕೇತನ, ಅನುತ್ತರಾ, ಇಕ್ಷುಗಂಗೋತ್ರಿ ಕಥನ ಕವನಗಳು ಕಲಾ ಸುಂದರಿ, ಕಿಂಕಿಣಿ, ಕೃತ್ತಿಕೆ, ಜೇನಾಗುವೆ, ನವಿಲು, ಪಕ್ಷಿಕಾಶಿ, ಚಿತ್ರಾಂಗದಾ ಮೊದಲಾದ ಕವನ ಸಂಕನಗಳು ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಗಳನ್ನು ಇವರು ಬರೆದಿದ್ದಾರೆ. ‘ನೆನಪಿನ ದೋಣಿಯಲ್ಲಿ’ ಕುವೆಂಪುರವರ ಆತ್ಮ ಕಥೆ.
‘ಅನಿಕೇತನ’ ಪದ್ಯದ ಮೂಲಕ ವಿಶ್ವಮಾನವ ಸಂದೇಶವನ್ನು ಸಾರಿದ ಮಹಾಕವಿ ಕುವೆಂಪು, ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನ ತಾತ್ವಿಕತೆಯನ್ನು ವಿಸ್ತರಿಸಿದವರು ಕುವೆಂಪು. ನಮಗೆ ಬೇಕಾಗಿರುವುದು ಆ ಮತ ಈ ಮತ ಅಲ್ಲ, ಮನುಜ ಮತ. ಆ ಪಥ ಈ ಪಥ ಅಲ್ಲ, ಸರ್ವರ ಸರ್ವಸ್ತರರ ಬದುಕು ಎನ್ನುತ್ತಾರೆ ಕುವೆಂಪು ನಮ್ಮ ಹಳೆಯ ಶಾಸ್ತ್ರ ಪುರಾಣಗಳನ್ನು ಹೊಸ ಬೆಳಕಿನಲ್ಲಿಟ್ಟು ನೋಡಿ, ಅದರೊಳಗಿನ ಕಸ – ಕೊಳೆಗಳನ್ನು ತೆಗೆದೆಸೆದು ಅಲ್ಲಿ ಹೊಸ ದೃಷ್ಟಿಕೋನವನ್ನಿಟ್ಟು ಕಸಿ ಮಾಡಿದರು. ಜಾತಿ ವ್ಯವಸ್ಥೆ, ಅಸ್ಪøಶ್ಯತೆ ಮತ್ತು ಮೌಢ್ಯಗಳಿಂದ ಮುಕ್ತವಾದ ಸನಾತನ ಧರ್ಮ ಅವರ ಕನಸಾಗಿತ್ತು.
ಬೇಂದ್ರೆಯೂರಲ್ಲಿ ಅಧ್ಯಕ್ಷತೆ :
ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ಧಾರವಾಡದಲ್ಲಿ ನಡೆದ 1957ನೇ ವರ್ಷದಲ್ಲಿ ನಡೆದ 39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1956ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.
ಮೊದಲ ಜ್ಞಾನಪೀಠ :
ಇವರ ಶ್ರೀ ರಾಮಾಯಣ ದರ್ಶನಂ ಕೃತಿಯು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕøತಗೊಂಡ ಇವರು ‘ಜೈ ಭಾರತ ಜನನಿಯ ತನುಜಾತೆ’ ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರುಕವಿ. ರಾಷ್ಟ್ರಕವಿ ಬಿರುದು ಪಡೆದ ಮಹಾನ್ ಕವಿ.
ಸಾಹಿತ್ಯದ ಮೂಲಕವೇ ನಾಡಿನ ಜನ ಮಾನಸವನ್ನು ಅವರಷ್ಟು ಬಲವಾಗಿ ಪ್ರಭಾವಿಸಿದ ಮತ್ತೊಬ್ಬ ಬರಹಗಾರ ಇಲ್ಲ. ಕುವೆಂಪುರವರಿಗೆ ಕುವೆಂಪು ಅವರೇ ಸಾಟಿ!
ಕನ್ನಡ ಸಾಹಿತ್ಯದಲ್ಲಿ 20ನೇ ಶತಮಾನವನ್ನು ‘ಕುವೆಂಪು ಯುಗ’ ಎಂದು ಕರೆಯಲಾಗಿದೆ. ಸುಮಾರು ಮುಕ್ಕಾಲು ಶತಮಾನದ ಕಾಲ ಅವರು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕøತಿಕ ಕ್ಷೇತ್ರದಲ್ಲಿ ಅನಭಿಷಿಕ್ತ ಸಾಮ್ರಾಟರಾಗಿ ರಾರಾಜಿಸಿದರು. ಮಲೆನಾಡಿನ ಯಾವುದೋ ಒಂದು ಮೂಲೆಯಲ್ಲಿ ಹುಟ್ಟಿದ ಈ ಕವಿಚೇತನ ಅಸಾಧಾರಣ ಶ್ರದ್ಧಾಭಕ್ತಿಯಿಂದಲೂ, ತಮ್ಮ ಏಕಾಗ್ರತೆಯಿಂದಲೂ, ವ್ಯಾಸಂಗ ಅಭ್ಯಾಸಗಳನ್ನು ನಡೆಸಿ ಒಬ್ಬ ಮಹಾಕವಿಯಾಗಿ, ಚಿಂತನಶೀಲರಾಗಿ, ವಿಚಾರವಾದಿಯಾಗಿ, ವಿಫುಲ ಸಾಹಿತ್ಯ ರಚನೆ ಮಾಡಿ ಕನ್ನಡಿಗರ ಗೌರವಾಧರಗಳಿಗೆ ಪಾತ್ರರಾಗಿದ್ದಾರೆ.
ನಿಮಗೆ ನೀವೇ ಸರಿಸಾಟಿ :
ಕನ್ನಡ-ಕರ್ನಾಟಕದ ಬಗ್ಗೆ ಅವರು ಬರೆದಿರುವ ಭಾವಗೀತೆಗಳು ನಿತ್ಯನೂತನ, ಮನುಜ ಮತ ವಿಶ್ವಪಥವನ್ನು ಸಾರಿದ ಈ ಸಾಹಿತ್ಯ ಶ್ರೇಷ್ಠ ವಿಶ್ವಮಾನವರೆನಿಸಿದವರು. ಮಹಾಕಾವ್ಯ, ನಾಟಕ, ಖಂಡಕಾವ್ಯ, ಕಥನಕಾವ್ಯ, ಭಾವಗೀತೆಯೇ ಮೊದಲಾದ ಹಲವು ಪ್ರಕಾರಗಳಲ್ಲಿ ಅತ್ಯುತ್ತಮ ಕೃತಿಗಳನ್ನು ನೀಡಿದ ಅದ್ವೀತಿಯ. ಕುವೆಂಪು ಅವರಂತೆ ಸರ್ವ ಪ್ರಕಾರಗಳಲ್ಲೂ ಏಕ ಪ್ರಕಾರವಾದ ಸಿದ್ಧಿ ಪಡೆದ ಕವಿಗಳು ಅತಿ ವಿರಳ.
ಕುವೆಂಪು ಆ ಹೆಸರಲ್ಲೇ ಏನೋ ಒಂದು ವಿಧವಾದ ಕಂಪು. ಇದು ಕನ್ನಡದ ಕಂಪು. ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಏರುಗತಿಯಲ್ಲಿ ಸಾಗಲು ಕುವೆಂಪು ಕಾರಣಕರ್ತರು ಎಂದರೆ ತಪ್ಪಾಗಲಾರದು. ಕವನ, ಕಾವ್ಯ, ಸಣ್ಣಕಥೆಗಳು, ನಾಟಕ, ಕಾದಂಬರಿ, ಮಹಾಕಾವ್ಯ, ವಿಮರ್ಶೆ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಗೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮೂಲಕ ಅಜರಾಮರವಾಗಿ ಉಳಿದಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದ ಖ್ಯಾತಿಯನ್ನು ತಂದುಕೊಟ್ಟಿದ್ದಾರೆ.
ಸಂಸಾರ ನೌಕೆ :
1937 ಎಪ್ರಿಲ್ 30 ರಂದು ಹೇಮಾವತಿಯವರನ್ನು ಕೈ ಹಿಡಿದರು..ಪೂರ್ಣಚಂದ್ರ ತೇಜಸ್ವಿ ಮತ್ತು ಕೋಕಿಲೋದಯ ಚೈತ್ರ ಎಂಬ ಪುತ್ರರು, ಇಂದುಕಲಾ ಮತ್ತು ತರಿಣಿ ಎಂಬ ಇಬ್ಬ ಪುತ್ರಿಯರಿದ್ದಾರೆ. ರಾಮಕೃಷ್ಣ ಪರಮಹಂಸರ ಜೀವನದಿಂದ ಪ್ರಭಾವಿತರಾದ ಕುವೆಂಪುರವರು ಸ್ವಾಮಿ ಶಿವಾನಂದರಿಂದ ದೀಕ್ಷೆ ಪಡೆದಿದ್ದಾರೆ.
ಕುವೆಂಪು ರಾಷ್ಟೀಯ ಪ್ರತಿಷ್ಠಾನ ಇವರು ಜನಿಸಿದ ಮನೆಯನ್ನು ಕವಿಮನೆ ಹೆಸರಿನ ಮ್ಯೂಸಿಯಂ ಮಾಡಿದ್ದಾರೆ.1987 ರಲ್ಲಿ ಶಿವಮೊಗ್ಗದಲ್ಲಿ ಕುವೆಂಪುರವ ಗೌರವಾರ್ಥವಾಗಿ ಕುವೆಂಪು ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು.
ಇಂತಹ ಮಹಾನ್ ಚೇತನ ನ.11 1994 ರಲ್ಲಿ ಮೈಸೂರಿನಲ್ಲಿ ಕೊನೆಯುಸಿರೆಳದರು ಕನ್ನಡ ಮಾತೆಯ ಮಡಿಲು ಸೇರಿಕೊಂಡರು. ಕುಪ್ಪಳಿಯ ಕವಿಶೈಲದಲ್ಲಿ ಇಂದಿಗೂ ಅವರ ಸಮಾಧಿ ಇದೆ. ಅವರು ಹುಟ್ಟಿದ ಮನೆಯನ್ನು ಪ್ರವಾಸಿಗರಿಗೆ ಪ್ರವಾಸಿ ಕ್ಷೇತ್ರವನ್ನಾಗಿಸಿದ್ದಾರೆ.
ವಿಶ್ವ ಮಾನವ ದಿನ ;
ಕರ್ನಾಟಕ ಸರ್ಕಾರವು 2015ರ ಡಿಸೆಂಬರ್‍ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್ 29 ಅನ್ನು “ವಿಶ್ವ ಮಾನವ” ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಈ ಮೂಲಕ ವಿಶ್ವಮಾನವ ಸಂದೇಶ ಸಾರಿದ ಕವಿಗೆ ಮತ್ತೊಂದು ಗೌರವ ಸಂದಾಯವಾದಂತಾಯ್ತು.
- ಡಾ.ಡಿ.ಸಿ.ರಾಮಚಂದ್ರ
ಅಪ್ಪ
ಅಪ್ಪ ಈ ಎರಡು ಅಕ್ಷರದಲ್ಲಿ ತುಂಬಾ ಅರ್ಥವಿದೆ. ಅಪ್ಪ “ಕಣ್ಣಿಗೆ ಕಾಣೋ ದೇವರು” ಎಂದರೆ ತಪ್ಪಾಗಲಾರದು, ಅಪ್ಪ ಅನ್ನೋ ಪದದ ಬದಲಾಗಿ ಇತ್ತೀಚೆಗೆ “ಪಪ್ಪಾ, ಡ್ಯಾಡಿ” ಎಂದೆಲ್ಲಾ ಕರೆಯುತ್ತೇವೆ. ಹೇಗೇ ಕರೆದರೂ ಅದರ ಅರ್ಥ ಒಂದೇ ಅಪ್ಪ. ಸಂಸಾರವೆಂಬ ನೌಕೆಯಲ್ಲಿ ಅಪ್ಪನದೇ ಮುಖ್ಯ ಪಾತ್ರ. ಏಕೆಂದರೆ, ಅಷ್ಟು ಜವಾಬ್ದಾರಿ ಅಪ್ಪನ ಮೇಲಿರುತ್ತದೆ. ಮಗು ಹುಟ್ಟಿದ ತಕ್ಷಣ ಕನಸು ಕಾಣುವ ಮನಸ್ಸು ಅಪ್ಪನದು. ಆ ಮಗುವಿಗೆ ಏನು ಹೆಸರಿಡಬೇಕು, ಏನು ಓದಿಸಬೇಕು, ಯಾವ ರೀತಿ ಅವರಿಗೆ ಸಮಾಜದಲ್ಲಿ ಬದುಕುವ ರೀತಿ ನೀತಿಗಳನ್ನು ಕಲಿಸಬೇಕು, ಎಂದು ಮನಸ್ಸಿನಲ್ಲಿಯೇ ಲೆಕ್ಕಚಾರ ಮಾಡುವವರು ಅಪ್ಪ. ಈ ಅಪ್ಪ ಅನ್ನೋ ಪಾತ್ರ ಬರೀ ಮಕ್ಕಳನ್ನು ಮಾತ್ರವಲ್ಲ, ಅವರ ತಂದೆ, ತಾಯಿ, ಹೆಂಡತಿ ಎಲ್ಲರನ್ನೂ ಸರಿ ಸಮನಾಗಿ ನೋಡಿಕೊಳ್ಳುವ ಮಹಾನ್ ವ್ಯಕ್ತಿ ಅಪ್ಪ. ತಾನು ಎಷ್ಟೇನೊಂದರು ತನ್ನ ಮಕ್ಕಳಿಗೆ ಕಷ್ಟವನ್ನು ತೋರಿಸದೆ ಅವರ ಬೆಳವಣಿಗೆ ನೋಡಿ ಖುಷಿಪಡುವ ಮನಸ್ಸು ಆತನದು.ಆದರೆ ತನ್ನ ಪ್ರೀತಿಯನ್ನು ಎದೆಯಲ್ಲಿ ಬಚ್ಚಿಟ್ಟು ತನ್ನ ಮಕ್ಕಳ ಎದುರಿಗೆ ಕೆಲವೊಮ್ಮೆ ನಿಷ್ಠುರವಾಗಿ ನಡೆದುಕೊಳ್ಳುತ್ತಾರೆ. ಏಕೆಂದರೆ ಮಕ್ಕಳು ಮಾಡಿದ ತಪ್ಪನ್ನೆಲ್ಲಾ ಸಂತೋಷವಾಗಿ ಒಪ್ಪಿಕೊಂಡರೆ ಅಥವಾ ಸಮಾಧಾನವಾಗಿ ತಿದ್ದಲು ಹೋದರೆ, ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗುವುದಿಲ್ಲ ಆದ್ದರಿಂದ ತಪ್ಪು ಮಾಡಿದಾಗ ಕಠಿಣ ಶಿಕ್ಷೆಯನ್ನು ಅಂದರೆ ಹೊಡೆಯುವುದು ಅಥವಾ ಕಠೋರವಾಗಿ ಬೈಯುವುದರ ಮುಖಾಂತರ ತಿದ್ದಲು ಪ್ರಯತ್ನಿಸುತ್ತಾರೆ. ಆದರೆ ಆ ವಯಸ್ಸಿನಲ್ಲಿ ಅದನ್ನು ಅರ್ಥ ಮಾಡಿಕೊಳ್ಳದೇ ಮಕ್ಕಳಾದ ನಾವು ಅವರನ್ನು ದ್ವೇಷಿಸುತ್ತೇವೆ, ನಿಂದಿಸುತ್ತೇವೆ. ಆಗ ಅದರ ಒಳ ಅರ್ಥ ನಮಗೆ ತಿಳಿದಿರುವುದಿಲ್ಲ. ತಾಯಿಯಾದವಳು ತನ್ನ ಮಕ್ಕಳನ್ನು ಸೆರಗಿನಲ್ಲಿ ಬಚ್ಚಿಟ್ಟುಕೊಂಡರೆ, ತಂದೆ ತನ್ನ ಎದೆಗೂಡಿನಲ್ಲಿ ಆ ಮಕ್ಕಳನ್ನು ಜೋಪಾನವಾಗಿಟ್ಟು ಕೊಂಡಿರುತ್ತಾನೆ.
“ರವಿ ಕಾಣದ್ದನ್ನು ಕವಿ ಕಂಡ” ಎಂಬ ನಾಣ್ಣುಡಿಯಂತೆ ತಂದೆ ತಾನು ಕಾಣದ ಪ್ರಪಂಚವನ್ನು ತನ್ನ ಮಕ್ಕಳು ನೋಡಲಿ ಎಂದು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಸುತ್ತಾಡಿಸುತ್ತಾರೆ. ತಾನು ಒಬ್ಬರ ಮನೆಯಲ್ಲಿ ಜೀತದಾಳಾಗಿ ದುಡಿದರೂ ನನ್ನ ಮಕ್ಕಳು ದೊಡ್ಡ ವ್ಯಕ್ತಿಗಳಾಗಲೀ ಎಂದು ಸದಾ ಹಂಬಲಿಸುತ್ತಿರುತ್ತಾರೆ. ತಾನು ಒಬ್ಬರ ಮುಂದೆ ಕೈ ಚಾಚಿದರೂ ಕೂಡ ತನ್ನ ಮಕ್ಕಳು ಕೈಚಾಚದಂತೆ ಸ್ವಾಭಿಮಾನಿಗಳನ್ನಾಗಿ ಬೆಳೆಸುತ್ತಾರೆ. ತನ್ನ ಕೊನೆಯ ಉಸಿರಿರುವವರೆಗೂ ತನ್ನ ಮಕ್ಕಳ ಶ್ರೇಯಸ್ಸನ್ನು ಬಯಸುತ್ತಾರೆ. ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಏನು ಮಾಡಬೇಕೆಂಬ ಪ್ರತಿ ವಿಷಯವನ್ನು ತಂದೆ ಮನಸ್ಸಿನಲ್ಲಿಯೇ ನಿರ್ಧರಿಸುತ್ತಾರೆ. ಮಕ್ಕಳಿಗೆ ಏನು ಬೇಕು ಏನು ಬೇಡ ಎಂಬ ಒಂದು ಚಿಕ್ಕ ವಿಷಯವೂ ಕೂಡ ತಂದೆಗೆ ತಿಳಿದಿರುತ್ತದೆ. ಮಕ್ಕಳ ಸಂತೋಷದಲ್ಲಿಯೇ ತನ್ನ ದುಃಖವನ್ನೆಲ್ಲಾ ಮರೆಯುವ ಏಕೈಕ ಜೀವಿ ಅಪ್ಪ.
ಆದರೆ ಮಕ್ಕಳಾದ ನಾವು ಮಾಡುತ್ತಿರುವುದೇನು? ಅಪ್ಪ ಬೈಯುತ್ತಾರೆಂದು ತಿಳಿದು ಅವರನ್ನು ಪ್ರೀತಿಸುವುದಿಲ್ಲ, ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ, ಸದಾ ನನಗೆ ನನ್ನ ತಂದೆಯನ್ನು ಕಂಡರೆ ಭಯವಾಗುತ್ತದೆ, ಎಂದು ದೂರ ಉಳಿದು ಬಿಡುತ್ತೇವೆ. ಆದರೆ ಅದರ ಒಳ ಅರ್ಥ ಏನೆಂದು ನಮಗೆ ಆಗ ತಿಳಿದಿರುವುದಿಲ್ಲ, ಮುಂದೆ ನಾವು ತಂದೆಯಾದಾಗ ಅವರ ಸ್ಥಾನದಲ್ಲಿ ನಾವು ನಿಂತಾಗ ಅವರ ಜವಾಬ್ದಾರಿ ತಿಳಿದು ಬರುತ್ತದೆ. ಆಗ ನಮ್ಮ ತಂದೆ ಮಾಡಿದ್ದು ಇದನ್ನೇ ಎಂದು ನಾವು ತಿಳಿಯುವ ಹೊತ್ತಿಗೆ ನಮ್ಮ ತಂದೆ ನಮ್ಮಿಂದ ತುಂಬಾ ದೂರ ಉಳಿದಿರುತ್ತಾರೆ. ಅಥವಾ ಅವರು ನಮ್ಮನ್ನು ಬಿಟ್ಟು ಹೋಗಿರುತ್ತಾರೆ. ಆಗ ನಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಲು ನಮ್ಮ ಮನಸ್ಸು ಒಪ್ಪುವುದಿಲ್ಲ. ಏಕೆಂದರೆ, ನಾವು ನಮ್ಮ ತಂದೆಯೊಡನೆ ನಡೆದುಕೊಂಡ ರೀತಿ.
ಅಪ್ಪನಾದವನು ತನ್ನ ಮಕ್ಕಳು ಒಂದು ವಯಸ್ಸಿಗೆ ಬಂದ ಮೇಲೆ ಅವರ ಜೊತೆ ಒಬ್ಬ ಒಳ್ಳೆಯ ಸ್ನೇಹಿತನಾಗಲು ಹಂಬಲಿಸುತ್ತಿರುತ್ತಾನೆ. ಏಕೆಂದರೆ, ಅವರ ಮಕ್ಕಳÀ ಆಗಿನ ಆಸೆ ಆಕಾಂಕ್ಷೆಗಳನ್ನು ತಿಳಿದು ಅವರ ಬೇಕು ಬೇಡಗಳನ್ನು ಅರ್ಥೈಸಿಕೊಂಡು ಅವರಿಗೆ ಒಂದು ಒಳ್ಳೆಯ ಮಾರ್ಗವನ್ನು ತೋರಿಸುತ್ತಾ, ತನ್ನ ಮಕ್ಕಳ ಏಳಿಗೆಯನ್ನು ನೋಡಿ ಸಂತಸ ಪಡುತ್ತಾನೆ. ತನ್ನ ಮಕ್ಕಳು ಇತರರಿಗೆ ಮಾದರಿಯಾಗ ಬೇಕೆಂದು ಆಶಿಸುತ್ತಾನೆ. ಹೀಗೆ ಮಗುವಾದಾಗಿನಿಂದಲೂ ತನ್ನ ಮಕ್ಕಳ ಯಶಸ್ಸು, ಶ್ರೇಯೋಭಿವೃದ್ಧಿಗಾಗಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟು ತನ್ನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಮಕ್ಕಳಲ್ಲಿಯೇ ನೋಡಿ ಆನಂದಿಸುವ ಒಂದೇ ಒಂದು ಮಹಾನ್ ಜೀವ ಅದೇ ಆ ದೈವ ಸೃಷ್ಠಿಸಿದ ಜೀವ ಅಪ್ಪ.
ಅಂತಹ ಎಲ್ಲಾ ಅಪ್ಪಂದಿರಿಗೆ ನನ್ನ ತುಂಬು ಹೃದÀಯದ ಸಾವಿರ ಸಾವಿರ ವಂದನೆಗಳು
ಹಿಜಾಬ್ ಕೇಸರಿ ಕದನ : ಶಿಕ್ಷಣ ಪಥನ
ಉಡುಪಿಯ ಕಾಲೇಜ್ ಒಂದರಲ್ಲಿ ನಡೆದ ಘಟನೆಯಿಂದ ಕರಾವಳಿ ಕರ್ನಾಟಕ ಸೇರಿದಂತೆ ಕರ್ನಾಟಕದ ತುಂಬಾ ವ್ಯಾಪಿಸಿದೆ. 9 ಮತ್ತು 10ನೇ ತರಗತಿಯವರೆಗೆ ಫೆಬ್ರವರಿ 14 ರವರೆಗೆ ಮತ್ತು ಪಿಯು, ಡಿಗ್ರಿ ಸೇರಿದಂತೆ ಕಾಲೇಜ್‍ಗಳ ಶಿಕ್ಷಣವನ್ನು ಅನಿರ್ಧಿಷ್ಟ ಅವಧಿಗೆ ನಿಲ್ಲಿಸಲಾಗಿದೆ. ಹಿಜಾಬ್ ಮತ್ತು ಕೇಸರಿ ಶಾಲಿನ ಪ್ರಕರಣವು ರಾಜಕೀಯ ಬಣ್ಣವನ್ನು ತಳಿಯುತ್ತಾ ಜಾತಿ ಮತ್ತು ಧರ್ಮಗಳ ಭಾವನೆಗಳೊಂದಿಗೆ ಆಟವಾಡುತ್ತಾ ಈಗ ಶಾಲಾ ಕಾಲೇಜುಗಳ ಆವರಣದಿಂದ ಹೊರ ಬಂದಿದೆ . ಈ ಹಿಜಾಬ್ ಕೇಸರಿ ಕದನವು ವೈಯಕ್ತಿಕ ಮತ್ತು ರಾಜಕೀಯ ಪ್ರೇರಣೆಯಿಂದ ಕೂಡಿದ್ದು ಕಾಣದ ಕೈಗಳ ಮತ್ತು ದುಷ್ಟ ಮನಸ್ಥಿತಿಯ ರಾಜಕಾರಣಿಗಳಿಂದ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಒಂದು ಸಾರಿ ಹಿಜಾಬ್‍ನ ಹಿನ್ನಲೆಯನ್ನು ತಿಳಿಯುತ್ತಾ ಹೋದರೆ ಈ ಆಧುನಿಕತೆಯ ದೇಶದಲ್ಲಿ ಬಳಸುವುದು ಅಪ್ರಸ್ತುತ ಅನಿಸುತ್ತದೆ. ಇಸ್ಲಾಂ ಧರ್ಮದ ಹುಟ್ಟು ಖುರಾನ್ ಬರೆದ ಸಂಧರ್ಭದಲ್ಲಿ ಮೆಕ್ಕಾ ಮದೀನಾ ಸೇರಿದಂತೆ ಗುಡ್ಡ ಗಾಡು ಪ್ರದೇಶಗಳ ಮೇಲೆ ಯಹೂದಿ , ಹಳೆಯ ಕ್ರಿಶ್ಚಿಯನ್ ಧರ್ಮ ಸೇರಿದಂತೆ ಹಲವಾರು ಅನ್ಯ ಧರ್ಮಿಯರ ಆಕ್ರಮಣವನ್ನು ಅರೇಬಿಯನ್ ಪ್ರದೇಶಗಳು ಎದುರಿಸ ಬೇಕಾಯಿತು. ಈ ಹೋರಾಟದಲ್ಲಿ ಮಾನವನ ಕ್ರೂರತೆ ಬೇರೆ ಧರ್ಮಗಳ ಮೇಲಿದ್ದ ಆಕ್ರೋಶ ಮತ್ತು ಹಿಂಸೆಗಳಿಂದ ಇಸ್ಲಾಂ ಧರ್ಮವು ತನ್ನ ಹೆಣ್ಣುಮಕÀ್ಕಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಖುರಾನ್‍ನ ಪ್ರಕಾರ ಮಕ್ಕಳು, ವೃದ್ಧರು ಮತ್ತು ಹೆಣ್ಣು ಮಕ್ಕಳನ್ನು ಮುಸ್ಲಿಂ ಓರ್ವ ವ್ಯಕ್ತಿ ರಕ್ಷಣೆ ಮಾಡುವುದು ಕಡ್ಡಾಯವಾಗಿರುತ್ತದೆ. ಆ ಸಂಧರ್ಭದಲ್ಲಿ ಆಗಾಗ ನಡೆಯುತ್ತಿರುವ ದಾಳಿಗಳು ಯುದ್ಧ ನೀತಿಯನ್ನೇ ಅನುಸರಿಸದ ಅನಾಗರೀಕ ದಾಳಿ ಕೋರರಿಂದ ರಕ್ಷಣೆ ಮಾಡಲು ಈ ಹಿಜಾಬ್ ಅಥವಾ ಬುರ್ಕಾವನ್ನು ಧರಿಸುತ್ತಿದ್ದರು. ಇದೇ ರೀತಿಯ ಪದ್ಧತಿಗಳು ಭಾರತೀಯ ರಜಪೂತ್ ಮನೆತನದಲ್ಲಿ ಸೇರಿದಂತೆ ಹಲವಾರು ರಾಜಮನೆತನದಲ್ಲಿ ಪರದಾ ಪದ್ದತಿಯನ್ನು ಅನುಸರಿಸಲಾಗುತ್ತಿತ್ತು. ಈ ಪರದಾ ಪದ್ದತಿ ಅಥವಾ ಹಿಜಾಬ್ ಒಂದು ರೀತಿ ಕಾಲಕ್ಕೆ ತಕ್ಕ ಪದ್ದತಿಗಳೇ ಆಗಿದ್ದವೇ ಹೊರತು ಧಾರ್ಮಿಕ ಆಚರಣೆಗೆ ಹೋಲಿಸುವಷ್ಟು ಶ್ರೇಷ್ಠವಾಗಿಲ್ಲ. ಅಕ್ರಮಣಕಾರಿ ಜನರಿಂದ ಹೆಣ್ಣು ಮಕ್ಕಳ ರಕ್ಷಣೆ ಮಾನ ಮತ್ತು ಪ್ರಾಣ ರಕ್ಷಣೆಗಾಗಿ ಇಂತಹ ಪದ್ದತಿಗಳು ಜಾರಿಯಲ್ಲಿದ್ದವು. ಇಂದು ಆಧುನಿಕತೆಯ ಮತ್ತು ಪ್ರಜಾಪ್ರಭುತ್ವವು ಬಲಿಷ್ಠವಾಗಿರುವ ಸಂಧರ್ಭದಲ್ಲಿ ಇಂತಹ ಪದ್ದತಿಗಳನ್ನು ಆಚರಿಸುವುದು ಎಷ್ಟು ಸೂಕ್ತ ? ಹಿಜಾಬ್ ಪದ್ದತಿಯಿಂದ ಮುಸ್ಲಿಂ ಮಹಿಳೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ. ಜೊತೆಗೆ ಭಾರತೀಯ ಮೂಲ ಸ್ವಾತಂತ್ರ್ಯಗಳ ಜಾರಿಗೆ ಅಡ್ಡಿಯಾಗುತ್ತದೆ. ವೈಜ್ಞಾನಿಕ ನೆಲೆಘಟ್ಟಿನಲ್ಲಿ ಹೇಳುವುದಾದರೆ ಮಾನವರಿಗೆ ವಿಟಮಿನ್ ಡಿ, ವಿಟಮಿನ್ ಬಿ ಸೂರ್ಯನ ಬೆಳಕಿನಿಂದ ದೊರೆಯುತ್ತದೆ. ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಹೊರ ಸುತ್ತುವುದರಿಂದ ವಿಟಮಿನ್ ಡಿ ದೊರೆಯುವುದಿಲ್ಲ. ಇದೇ ರೀತಿ ಇಡೀ ದೇಹವನ್ನು ಬಟ್ಟೆಯಲ್ಲಿ ಮುಚ್ಚಿಕೊಂಡು ಬದುಕುವುದರಿಂದ ಮಾನಸಿಕ, ದೈಹಿಕ ಸ್ವಾತಂತ್ರ್ಯ ಕಳೆದುಕೊಂಡಂತೆ ಭಾಸವಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ದೈಹಿಕ ನ್ಯೂನ್ಯತೆಗಳು ಮತ್ತು ಕೆಲವು ಕಾಯಿಲೆಗಳು ಕಾಣಿಸಿಕೊಳ್ಳಬಹುದು ಮಾನಸಿಕವಾಗಿ ಹೆಣ್ಣು ಮಕ್ಕಳು ಕುಗ್ಗಿ ಹೋಗುವುದರ ಜೊತೆಗೆ ಬುದ್ದಿವಂತಿಕೆ ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಸರಿಯಾಗಿ ಭಾಗವಹಿಸದೇ ಭವಿಷ್ಯದ ಕನಸುಗಳನ್ನು ಕಾಣದೇ ಹತಾಶೆ ಮತ್ತು ಜಿಗುಪ್ಸೆಯಲ್ಲಿ ಬದುಕ ಬೇಕಾಗುತ್ತದೆ. ಕುಟುಂಬ ವ್ಯವಸ್ಥೆಯನ್ನು ಸೇರಿದಂತೆ ಸಮಾಜವನ್ನು ಅನುಮಾನಿಸುವ ಜೊತೆಗೆ ದ್ವೇಷದ ಭಾವನೆಯೊಂದಿಗೆ ಬದುಕಬೇಕಾಗುತ್ತದೆ. ಈ ರೀತಿಯ ಮಾನಸಿಕ ಅಲ್ಲೋಲ ಕಲ್ಲೋಲ ಹೊಂದಿರುವ ತಾಯಿಯಿಂದ ಹುಟ್ಟುವ ಮಗು ಮಾನಸಿಕ ಮತ್ತು ದೈಹಿಕವಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮ ಸೇರಿದಂತೆ ಹಲವಾರು ಧರ್ಮದಲ್ಲಿ ಆ ಧರ್ಮಗಳು ಹುಟ್ಟಿದ ಕಾಲಘಟ್ಟಕ್ಕೆ ಹೊಂದಿದಂತೆ ರೀತಿ ನೀತಿ ನಿಯಮ ಆಚರಣೆಗಳನ್ನು ಜಾರಿಗೆ ತಂದಿವೆ. ಆದರೆ ಕೆಲವು ಮತಾಂದರರು ಮೂಢ ನಂಬಿಕೆಗಳನ್ನು ಬಲವಂತವಾಗಿ ಜನರ ಮೇಲೆ ಹಾಕುತ್ತಿದ್ದಾರೆ. ಧರ್ಮಗಳ ಉಳಿವಿಗಾಗಿ ಒತ್ತಾಯ ಪೂರ್ವಕವಾಗಿ ವಿಧಿಸುವ ಆಚರಣೆಗಳಿಂದ ಮಾನವ ಧರ್ಮದ ನಾಶ ಮತ್ತು ಮನುಷ್ಯನ ವಿಕಾಸದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಭಾರತೀಯ ಸಂವಿಧಾನದ ಪ್ರಕಾರ ಸಮಾನತೆ ಅತ್ಯಂತ ಮಹತ್ವ ಪೂರ್ಣವಾಗಿದೆ. ಕಲಿಯುವ ಹಂತದಲ್ಲೇ ಸಮಾನತೆಯನ್ನು ತರಬೇಕಾದರೆ ಬಟ್ಟೆ ಮತ್ತು ಓದುವ ಪಾಠಗಳಲ್ಲಿ ಸಾಮರಸ್ಯ ಕೂಡಿದ ಸಮಾನತೆ ಇರಬೇಕು. ಕರೋನದಿಂದ 2 ವಷರ್ದದಿಂದ ಸತತವಾಗಿ ಶಿಕ್ಷಣ ವಂಚಿತ ವಿದ್ಯಾರ್ಥಿಗಳಲ್ಲಿ ಕೇಸರಿ ಮತ್ತು ಹಿಜಾಬ್‍ನ ಬೆಂಕಿ ಹಚ್ಚಿದರು ರಾಜಕಾರಣಿಗಳು ಅಂಧ ಮತಾಂದರರು ಆಗಿದ್ದಾರೆ. ಹಲವಾರು ವರ್ಷಗಳಿಂದ ಶಿಕ್ಷಣ ಪದ್ಧತಿಯಲ್ಲಿ ಹಿಜಾಬ್ ಹಾಕಿ ಬರುವವರು ಇದ್ದರೂ ಕೂಡ ಈಗಿನ ಪ್ರಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನಾರ್ಟಕ ಮತ್ತು ಭಾರತವನ್ನು ತಲೆತಗ್ಗಿಸುವಂತೆ ಮಾಡುತ್ತಿದೆ. ಕರ್ನಾಟಕ ಹೈ ಕೋರ್ಟಿನ ಮಧ್ಯಂತರ ಆದೇಶದ ಪ್ರಕಾರ ವಿದ್ಯಾರ್ಥಿಗಳು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಕೇಸರಿ ಶಾಲು ಮತ್ತು ಸ್ಕಾರ್ಪ್ ಹಿಜಾಬ್ ಧಾರ್ಮಿಕ ಧ್ವಜಗಳು ಅಥವಾ ಸಂಕೇತಗಳನ್ನು ಧರಿಸಿ ಶಾಲಾ ಕಾಲೇಜಿಗೆ ಬರುವುದನ್ನು ಮುಂದಿನ ಆದೇಶದವರೆಗೂ ನಿರ್ಬಂಧಿಸಲಾಗಿದೆ. ಈ ತೀರ್ಪಿನ ವಿರುದ್ಧ ಕೆಲವರು ಸುಪ್ರೀಂ ಕೋರ್ಟಿಗೆ ಹೋದಾಗಲೂ ಕೂಡ ಪ್ರಯೋಜನವಾಗಿಲ್ಲ. ಈ ಕರ್ನಾಟಕದ ಹಿಜಾಬ್ ಪ್ರಕರಣವು ಮಹಾರಾಷ್ಟ್ರ, ಪಶ್ಚಿಮಬಂಗಾಳ, ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಿಗೆ ವ್ಯಾಪಿಸಿದೆ. ಇನ್ನೂ ಕೆಲವು ದಲಿತಪರ ಸಂಘಟನೆಗಳು ಹಿಜಾಬ್ ಅನ್ನು ಬೆಂಬಲಿಸಿ ಹೋರಾಟ ನಡೆಸುತ್ತಿವೆ. ಸಂವಿಧಾನದ ಮೂಲ ಆಸೆಯ ಪ್ರಕಾರ ಮತ್ತು ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಆಧಾರದ ಮೇಲೆ ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡಬಾರದು ಮತ್ತು ಯಾವುದೇ ಧಾರ್ಮಿದ ಬಟ್ಟೆ ಅಥವಾ ಪದ್ಧತಿ ಅಂದರೆ ಹಿಜಾಬ್ ಧರಿಸುವುದು, ಪರದಾ ಹಾಕಿಕೊಳ್ಳುವುದು ಮತ್ತು ಕೇಸರಿ ಶಾಲುಗಳನ್ನು ಹಾಕಿಕೊಳ್ಳುವುದನ್ನು ನಿಷೇಧಿಸುವುದು ಉತ್ತಮ. ಇದರಿಂದ ಮಕ್ಕಳಲ್ಲಿ ಸಮಾನತೆ ಬೆಳೆಯುವುದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಕೆಟ್ಟ ಘಟನೆಗಳು ನಡೆಯುವುದಿಲ್ಲ ಹೇಗೆಂದರೆ ಹಿಜಾಬ್ ಹಾಕಿಕೊಂಡು ಓರ್ವ ಹುಡುಗಿಯ ಹೆಸರಿನಲ್ಲಿ ಉಗ್ರಗಾಮಿಯೋ, ಡ್ರಕ್ಸ್ ಮಾರುವವನೋ ಅಥವಾ ಇನ್ಯಾರೋ ಬರುವುದನ್ನು ತಪ್ಪಿಸಬಹುದು. ಮಾನವ ಧರ್ಮ, ಭಾರತೀಯ ಸಂವಿಧಾನ ಮತ್ತು ಮಕ್ಕಳಿಗೆ ಸಮಾನತೆಯ ಪಾಠ, ಭವಿಷ್ಯದ ದೃಷ್ಠಿಯಿಂದ ಶಿಕ್ಷಣದಲ್ಲಿ ಜಾತಿ ಧರ್ಮ ಆಚರಣೆಗಳನ್ನು ತರುವುದು ಬೇಡ.
ಈಶ್ವರಪ್ಪನ ದೇಶ ದ್ರೋಹಕ್ಕೆ : ಕಾಂಗ್ರೆಸ್ ತೆರಿಗೆ ಗುಳುಂ
ವಿಧಾನ ಸಭೆ ಮತ್ತು ವಿಧಾನ ಪರಿಷತ್ 2022ರ ಮೊದಲ ಅಧಿವೇಶನವು ಪ್ರಾರಂಭವಾಗುತ್ತಲೇ ಈಶ್ವರಪ್ಪನ ದೇಶ ದ್ರೋಹದ ಹೇಳಿಕೆಗಳು ತೀವ್ರ ಚರ್ಚೆಗೀಡಾದವು. “ಇನ್ನು ಕೆಲವೇ ದಿನಗಳಲ್ಲಿ ಕೆಂಪು ಕೋಟೆಯ ಮೇಲೆ ರಾಷ್ಟ್ರ ಧ್ವಜದ ಜೊತೆಗೆ ಕೇಸರಿ ಧ್ವಜವನ್ನು ಹಾರಿಸಲಾಗುತ್ತದೆ” ಎಂದು ಈಶ್ವರಪ್ಪ ಹೇಳಿರುವ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಪ್ರತಿಭಟನೆಯಿಂದ ಕರ್ನಾಟಕ ವಿಧಾನ ಸಭೆಯ ಕಲಾಪಗಳಿಗೆ ಅಡ್ಡಿಯಾಗಿ ಯಾವುದೇ ರೀತಿಯ ಮಹತ್ವದ ಚರ್ಚೆಗಳಿಗೆ ವಿರೋಧ ಪಕ್ಷ ಕಾಂಗ್ರೆಸ್ ಬಿಡದೇ ರಾಜ್ಯದ ತೆರಿಗೆ ಹಣವನ್ನು ಪೋಲುಮಾಡಿತ್ತಿದೆ. ಒಂದು ದಿನದ ಕಲಾಪಗಳು ನಡೆಯಲು ಶಾಸಕರ ಭತ್ಯೆ ಸೇರಿದಂತೆ ಊಟ-ತಿಂಡಿ, ವಸತಿಗೆ ಒಟ್ಟಾರೆಯಾಗಿ ಸರಿಸುಮಾರು 80 ಲಕ್ಷ ಖರ್ಚಾಗುತ್ತದೆ. ಈ 80 ಲಕ್ಷವು ಯಾವುದೇ ಪಕ್ಷಕ್ಕೆ ಸೇರಿದ ಹಣವಲ್ಲ. ಅದು ಸಾಮಾನ್ಯ ವ್ಯಕ್ತಿಯ ತೆರಿಗೆ ಹಣವಾಗಿರುತ್ತದೆ. ಬಿ.ಜೆ.ಪಿ ಪಕ್ಷದ ಪರವಾಗಿ ಹೇಳುವುದಾದರೆ ಬಸವರಾಜ್ ಯತ್ನಾಳ್ , ಈಶ್ವರಪ್ಪ ಆಗಾಗ ನಾಲಿಗೆಯನ್ನು ಹರಿಬಿಡುತ್ತಾರೆ. ಆದರೆ ಈ ಹಿಂದಿನ ಹೇಳಿಕೆಯನ್ನು ಮುಖ್ಯಮಂತ್ರಿ ಸೇರಿದಂತೆ ಬಿ.ಜೆ.ಪಿಯ ಎಲ್ಲಾ ಶಾಸಕರು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಕಾನೂನಿನ ವ್ಯಾಖ್ಯಾನಗಳನ್ನು ಮಾಡುವಾಗ ಈ ಹೇಳಿಕೆಯು ಅತ್ಯಂತ ಸೂಕ್ಷ್ಮವಾಗಿದ್ದು ರಾಷ್ಟ್ರಧ್ವಜಕ್ಕೆ ಅವಮಾನ ಮತ್ತು ಗೌರವಗಳೊಂದಿಗೆ ಸಂವಿಧಾನದಲ್ಲಿ ಸಾಕಷ್ಟು ಉಲ್ಲೇಖಗಳಿದ್ದರೂ ಕೂಡ ರಾಷ್ಟ್ರಧ್ವಜದ ಜೊತೆಗೆ ಇನ್ನೊಂದು ಧ್ವಜವನ್ನು ಏರಿಸುತ್ತೇನೆ ಎಂಬುದಕ್ಕೆ ಸ್ಪಷ್ಟ ನಿರ್ದೇಶನಗಳಿಲ್ಲ. ಆದರೂ ಕೂಡ ತ್ರಿವರ್ಣ ಧ್ವಜದ ಜೊತೆಗೆ ಅದರ ಪಕ್ಕದಲ್ಲಿಯೇ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಇನ್ನೊಂದು ಧ್ವಜವನ್ನು ಏರಿಸುವುದು ದೇಶ ದ್ರೋಹದ ಕೆಲಸವಾಗುತ್ತದೆ. ಅದಕ್ಕೆ ಕಾನೂನಿನಲ್ಲಿ ತಕ್ಕ ಶಿಕ್ಷೆಯುಂಟು. ಆದರೆ ಈಶ್ವರಪ್ಪನ ಹೇಳಿಕೆಯಲ್ಲಿ ಈ ಸ್ಪಷ್ಟತೆಯಿಲ್ಲದಿರುವುದರಿಂದ ದೇಶ ದ್ರೋಹದ ಕಾನೂನಿನಡಿ ಶಿಕ್ಷೇ ನೀಡಲು ಸಾಧ್ಯವೇ? ಈ ಹೇಳಿಕೆಯನ್ನು ವಿಧಾನ ಸಭೆಯ ಹೊರಗಡೆ ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ಪ್ರಬುದ್ಧತೆಯನ್ನು ಮೆರೆಯಬೇಕಾಗಿತ್ತು ಆದರೂ ಕೂಡ ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಈಶ್ವರಪ್ಪ ಒಬ್ಬನನ್ನು ಹಿಡಿದುಕೊಂಡು ಪ್ರತಿಭಟನೆಯ ಹೆಸರಿನಲ್ಲಿ ಕಲಾಪಗಳಲ್ಲಿ ನಡೆಯ ಬೇಕಾದ ಚರ್ಚೆಗಳು ಮತ್ತು ನಿಡುವಳಿಗಳು ಮತ್ತು ಅಂಗೀಕಾರಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಕಾಂಗ್ರೆಸ್‍ನ ಶಾಸಕರು ಮೊದಲು ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡಬೇಕು. ರಾಜ್ಯದಲ್ಲಿ ಹಿಜಾಬ್ ಕೇಸರಿ ಕದನವು ಶಾಂತಿಯನ್ನು ಕದಲುತ್ತಿದೆ. ರಾಜ್ಯ ವ್ಯಾಪ್ತಿ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರವು ಸೋತಿದೆ. ಕೋವಿಡ್ ಸಮಸ್ಯೆ, ನಿರುದ್ಯೋಗ, ಶಾಲಾ-ಕಾಲೇಜುಗಳ ಸಮಸ್ಯೆಗಳು ಹೀಗೆ ಹತ್ತಾರು ಸಮಸ್ಯೆಗಳಿರುವಾಗ ಈಶ್ವರಪ್ಪನ ಒಂದು ಹೇಳಿಕೆಯನ್ನು ದೊಡ್ಡದು ಮಾಡಿಕೊಂಡು ನಾಲ್ಕೈದು ದಿನ ಕಲಾಪಗಳನ್ನು ಅಡ್ಡಿಪಡಿಸುವುದು ಯಾವ ನ್ಯಾಯ? ಒಂದು ದಿನಕ್ಕೆ 80 ಲಕ್ಷ ಖರ್ಚಾಗುತ್ತದೆ ಎಂದರೆ 5 ದಿನಕ್ಕೆ 4 ಕೋಟಿ ಆಗುತ್ತದೆ. ಇದು ಯಾರಪ್ಪನ ದುಡ್ಡು? ಕಾನೂನಿನ ಪದವಿ ಓದಿದ ಸಿದ್ದರಾಮಯ್ಯಗೆ ಇಷ್ಟು ಜ್ಞಾನವಿಲ್ಲವೇ? ಡಿ.ಕೆ.ಶಿಯ ಮಾತಿಗೆ ನಿಂತು ಸಿದ್ದರಾಮಯ್ಯ ರಾಜಕೀಯ ನೈತಿಕತೆಯನ್ನು ಕಳೆದುಕೊಂಡರೆ ಈಶ್ವರಪ್ಪನ ಹೇಳಿಕೆಯನ್ನು ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿ ರಾಜ್ಯದ ಹಿತಕ್ಕಾಗಿ ಕಾಂಗ್ರೆಸ್‍ವು ಪ್ರತಿಭಟನೆ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಪ್ರತಿಭಟನೆಯನ್ನು ನಿಲ್ಲಿಸದಿದ್ದರೆ ಸ್ಪೀಕರ್ ಆದ ಖಾಗೇರಿಯವರಿಗೆ ಕಲಾಪಗಳನ್ನು ಅನಿರ್ಧಿಷ್ಟ ಅವಧಿಗೆ ಮುಂದೂಡಲು ಸೂಚಿಸಿದ್ದಾರೆ. ಕಾಂಗ್ರೆಸ್‍ನ ಹೋರಾಟವನ್ನು ಚಿಕ್ಕ ಮಕ್ಕಳು ಮತ್ತು ಬುದ್ಧಿ ಹೇಡಿಗಳು ಮಾಡುವ ಹೋರಾಟ ಎನ್ನಬಹುದು. ಭವಿಷ್ಯದಲ್ಲಿ ಇದರಿಂದ ಕಾಂಗ್ರೆಸ್‍ಗೆ ಏನು ದೊಡ್ಡ ಪ್ರಯೋಜನವಾಗುವುದಿಲ್ಲ. ಇಂತಹ ಸಿಲ್ಲಿ ಹೋರಾಟಗಳನ್ನು ಬಿಟ್ಟು ಪ್ರಭುತ್ವ ಪಕ್ಷದಂತೆ ಮತ್ತು ಪ್ರಬುದ್ಧ ವಿಚಾರಗಳತ್ತ ಕಾಂಗ್ರೆಸ್ ಪಕ್ಷವು ಪ್ರಯತ್ನಿಸಬೇಕು. ಕಾಂಗ್ರೆಸ್ ನಡೆಯನ್ನು ರಾಜ್ಯವು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಹತ್ತಾರು ಪ್ರಮುಖ ಸಮಸ್ಯೆಗಳಿದ್ದರು ಒಂದು ಸಣ್ಣ ವಿಚಾರಕ್ಕೆ ದೊಡ್ಡ ಮಟ್ಟದ ಹೋರಾಟ ಮಾಡುತ್ತಿರುವುದು ಅತ್ಯಂತ ಕೀಳು ಮಟ್ಟದ ವಿಚಾರವಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಹೋರಾಟದ ಕುರಿತು ಕರ್ನಾಟಕ ಜನತೆಗೆ ಸರಿಯಾದ ಉತ್ತರ ಕೊಡುವುದರ ಜೊತೆಗೆ ತಕ್ಷಣ ಕಲಾಪದಲ್ಲಿ ಹೋರಾಟ ಮಾಡುವುದನ್ನು ಬಿಟ್ಟು ಬೇರೆ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಜನರಿಗೆ ಸರ್ಕಾರದತ್ತ ಇನ್ನಷ್ಟು ಉತ್ತಮವಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು.