ತ್ರಿಶೂರ್: ಒಂದೇ ದಿನ 3 ATM ದರೋಡೆ; 65 ಲಕ್ಷ ರೂ ದೋಚಿದ ಗ್ಯಾಂಗ್!

Share

ತ್ರಿಶೂರ್: ತ್ರಿಶೂರ್ ನಲ್ಲಿ ರಾತ್ರೋರಾತ್ರಿ 5 ಮಂದಿ ಇದ್ದ ದರೋಡೆ ಗ್ಯಾಂಗ್ ಎಸ್ ಬಿ ಐ ಎಟಿಎಂ ಲೂಟಿ ಮಾಡಿ 65 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿದೆ. ಒಂದೇ ಬಾರಿಗೆ 3 ಬೇರೆ ಬೇರೆ ಪ್ರದೇಶಗಳ ಎಟಿಎಂ ಗಳಲ್ಲಿ ತಡ ರಾತ್ರಿ ಈ ದರೋಡೆ ನಡೆದಿದೆ.

ಮಧ್ಯರಾತ್ರಿ 2: 30 ರ ವೇಳೆಗೆ ಗ್ಯಾಸ್ ಕಟ್ಟರ್ ನ್ನು ಬಳಕೆ ಮಾಡಿ ಮಾಪ್ರಾಣಾಮ್ ನಲ್ಲಿ ದರೋಡೆ ಮಾಡಲಾಗಿದೆ. ಕ್ಯಾಶ್ ಟ್ರೇ ನ್ನು ತುಂಡರಿಸಿ ದರೋಡೆ ಮಾಡಲಾಗಿದ್ದು, ಬ್ಯಾಂಕ್ ಅಧಿಕಾರಿಗಳು ಮಾಹಿತಿ ಸಿಗುತ್ತಿದ್ದಂತೆಯೇ ಪೊಲೀಸರಿಗೆ ತಿಳಿಸಿದ್ದಾರೆ. ಸ್ಪ್ರೇ ಪೇಂಟ್ ಬಳಸಿ ಸಿಸಿಟಿವಿ ಕ್ಯಾಮರಾಗಳನ್ನು ಮುಚ್ಚಲಾಗಿತ್ತು. ಆದರೆ ಸ್ಥಳೀಯ ಹೊಟೆಲ್ ಬಳಿ ಇದ್ದ ಸಿಸಿಟಿವಿ ಮೂಲಕ ಮುಖ ಮುಚ್ಚಿಕೊಂಡಿರುವ ದರೋಡೆ ಕೋರರು ಎಟಿಎಂ ನತ್ತ ಧಾವಿಸುತ್ತಿರುವುದು ಪತ್ತೆಯಾಗಿದೆ.
ಬೆಳಗಿನ ಜಾವ 3.15ರ ಸುಮಾರಿಗೆ ಕೊಳಜಿ ಎಸ್‌ಬಿಐ ಎಟಿಎಂನಲ್ಲಿ ದರೋಡೆ ಮಾಡಿದ ನಂತರ ಶೋರನೂರು ರಸ್ತೆಯಲ್ಲಿರುವ ಎಸ್‌ಬಿಐ ಎಟಿಎಂ ನ್ನು ಅದೇ ರೀತಿಯಲ್ಲಿ ಲೂಟಿ ಮಾಡಲಾಗಿದೆ.

ಪೊಲೀಸರು ತನಿಖೆ ಆರಂಭಿಸಿದರು. ಫೋರೆನ್ಸಿಕ್ ತಂಡ ಮತ್ತು ಶ್ವಾನ ದಳ ಸ್ಥಳಕ್ಕೆ ಆಗಮಿಸಿದೆ. ಕೃತ್ಯಕ್ಕೆ ಗ್ಯಾಂಗ್ ಬಿಳಿ ಬಣ್ಣದ ಹುಂಡೈ ಕ್ರೆಟಾ ಕಾರನ್ನು ಬಳಸಿರುವ ಶಂಕೆ ವ್ಯಕ್ತವಾಗಿದೆ.


Share

ಕೇರಳದಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣ ಪತ್ತೆ: 26 ವರ್ಷದ ಯುವಕನಿಗೆ ಸೋಂಕು

Share

ತಿರುವನಂತಪುರಂ: ಯುನೈಟೆಡ್ ಅರಬ್ ಎಮಿರೇಟ್ಸ್(UAE)ನಿಂದ ಬಂದಿದ್ದ ಕೇರಳದ ಎರ್ನಾಕುಲಂನ 26 ವರ್ಷದ ಯುವಕನಿಗೆ ಮಂಕಿಪಾಕ್ಸ್ ಶುಕ್ರವಾರ ದೃಢಪಟ್ಟಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರ ರಕ್ತದ ಮಾದರಿಗಳನ್ನು ಅಲಪ್ಪುಳರದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಲಾಗಿದೆ. ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಜೀನೋಮಿಕ್ ಸೀಕ್ವೆನ್ಸಿಂಗ್‌ಗಾಗಿ ಮಾದರಿಗಳನ್ನು ಕಳುಹಿಸಲಾಗಿದೆ.

ಇದು ಈ ವರ್ಷ ರಾಜ್ಯದಲ್ಲಿ ಎರಡನೇ ಮತ್ತು ದೇಶದಲ್ಲಿ ಮೂರನೇ ಮಂಕಿಪಾಕ್ಸ್ ಪ್ರಕರಣವಾಗಿದೆ.

ಈ ಹಿಂದೆ ಮಲಪ್ಪುರಂನ ಎಡವನ್ನಾ ಎಂಬ ಪ್ರದೇಶದ 38 ವರ್ಷದ ವ್ಯಕ್ತಿಗೆ ಸೆಪ್ಟೆಂಬರ್ 18 ರಂದು ಮಂಕಿಪಾಕ್ಸ್ ಕಂಡುಬಂದಿತ್ತು. ನಂತರ ಅವರ ಸೋಂಕಿಗೆ ವೈರಸ್‌ನ ಕ್ಲೇಡ್ 1 ಬಿ ಸ್ಟ್ರೈನ್ ಕಾರಣ ಎಂದು ತಿಳಿದುಬಂತು.ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕ ಸೌಲಭ್ಯಗಳನ್ನು ಸ್ಥಾಪಿಸಿ ತೀವ್ರ ಕಣ್ಗಾವಲು ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಮಂಕಿಪಾಕ್ಸ್ ತಡೆಗಟ್ಟುವಿಕೆ ಮತ್ತು ಪರಿಣಾಮಕಾರಿ ಚಿಕಿತ್ಸೆಗಾಗಿ ಮಾರ್ಗಸೂಚಿಗಳನ್ನು ನವೀಕರಿಸಲು ಆರೋಗ್ಯ ಇಲಾಖೆಯು ಮುಂದಾಗಿದೆ.

ಈ ಹಿಂದೆ ಮಂಕಿಪಾಕ್ಸ್ ಎಂದು ಕರೆಯಲ್ಪಡುತ್ತಿದ್ದ ಎಂಪಾಕ್ಸ್, ಆರ್ಥೋಪಾಕ್ಸ್ ವೈರಸ್ ಜಾತಿಯ ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುವ ಹರಡುವ ಕಾಯಿಲೆಯಾಗಿದೆ. ವೈರಸ್‌ನಲ್ಲಿ ಕ್ಲಾಡ್ I (ಉಪಕ್ಲೇಡ್‌ಗಳೊಂದಿಗೆ Ia ಮತ್ತು Ib) ಮತ್ತು ಕ್ಲಾಡ್ II (ಉಪಕ್ಲೇಡ್‌ಗಳೊಂದಿಗೆ IIa ಮತ್ತು IIb) ಎಂಬ ಎರಡು ವಿಧಗಳಿವೆ.


Share

ಗುಜರಾತ್​ನಲ್ಲಿ ಭೀಕರ ಅಪಘಾತ: ಬಸ್​ಗೆ ಲಾರಿ ಡಿಕ್ಕಿ, 6 ಮಂದಿ ದುರ್ಮರಣ

Share

ಆನಂದ್ (ಗುಜರಾತ್): ಗುಜರಾತ್​ನ ಆನಂದ್​ ಬಳಿ ಬಸ್’ಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ 6 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಅಹಮದಾಬಾದ್ ವಡೋದರಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

ಇಂದು ಬೆಳಿಗ್ಗೆ 4.30 ರ ಸುಮಾರಿಗೆ ಐಷಾರಾಮಿ ಬಸ್‌ಗೆ ಲಾರಿ ಡಿಕ್ಕಿ ಹೊಡೆದಿದೆ. 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಬಸ್ ಮಹಾರಾಷ್ಟ್ರದಿಂದ ರಾಜಸ್ಥಾನಕ್ಕೆ ಹೋಗುತ್ತಿತ್ತು. ಆನಂದ್ ಬಳಿ ಬಸ್ ಪಂಕ್ಚರ್ ಆಗಿತ್ತು. ಇದರಿಂದಾಗಿ ಬಸ್ಸಿನ ಚಾಲಕ ಹಾಗೂ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದು ನಿಂತಿದ್ದರು. ಈ ವೇಳೆ ಹಿಂದಿನಿಂದ ಬಂದ ಲಾರಿಯೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿ, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಅಪಘಾತದ ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳ, ಎಕ್ಸ್‌ಪ್ರೆಸ್ ಹೈವೇ ಪೆಟ್ರೋಲಿಂಗ್ ತಂಡ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಬಳಿಕ ಎಲ್ಲಾ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಿದ್ದಾರೆ. ಡಿಕ್ಕಿಯ ನಂತರ ಬಸ್ ಮತ್ತು ಟ್ರಕ್ ತೀವ್ರವಾಗಿ ಜಖಂಗೊಂಡಿದೆ.


Share

ಉತ್ತರ ಪ್ರದೇಶ: ಹಾಲಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಡಬಲ್ ಡೆಕ್ಕರ್ ಬಸ್; ಸ್ಥಳದಲ್ಲೇ 18 ಮಂದಿ ದುರ್ಮರಣ- 20 ಜನರಿಗೆ ಗಾಯ

Share

ಲಕ್ನೋ: ಹಾಲಿನ ಟ್ಯಾಂಕರ್ ಗೆ ಡಬಲ್ ಡೆಕ್ಕರ್ ಬಸ್ ಡಿಕ್ಕಿ ಹೊಡೆದ ಪರಿಣಾಮ 18 ಮಂದಿ ಸಾವನ್ನಪ್ಪಿ 20 ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಉನ್ನಾವೊದ ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ಮುಂಜಾನೆ ನಡೆದಿದೆ.

ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಬಿಹಾರದ ಶಿವಗಢದಿಂದ ದೆಹಲಿಗೆ ಹೋಗುತ್ತಿದ್ದ ಬಸ್ ಬೆಹ್ತಾ ಮುಜಾವರ್ ಪೊಲೀಸ್ ಠಾಣೆ ವ್ಯಾಪ್ತಿಯ ಏರ್‌ಸ್ಟ್ರಿಪ್‌ನಲ್ಲಿ ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಸ್ ಮತ್ತು ಟ್ಯಾಂಕರ್ ಹಾರಿ ಹೋಗಿವೆ. ಅಪಘಾತದಲ್ಲಿ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ 18 ಜನರು ಸಾವನ್ನಪ್ಪಿದ್ದಾರೆ. ಅದೇ ವೇಳೆ ಸುಮಾರು 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಆಗಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಸಿಒ ಬಂಗಾರ್ಮೌ ಅರವಿಂದ್ ಚೌರಾಸಿಯಾ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಸ್ ಬಿಹಾರದ ಸೀತಾಮರ್ಹಿಯಿಂದ ದೆಹಲಿಗೆ ಹೋಗುತ್ತಿತ್ತು ಎಂದು ಹೇಳಲಾಗುತ್ತಿದೆ. ಅಪಘಾತದ ಮಾಹಿತಿ ಪಡೆದ ಡಿಎಂ ಮತ್ತು ಎಸ್ಪಿ ಕೂಡ ಸ್ಥಳಕ್ಕೆ ಆಗಮಿಸಿದರು.ಬೆಹ್ತಾ ಮುಜಾವರ್ ಪ್ರದೇಶದ ಅಡಿಯಲ್ಲಿ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ ಕಿಮೀ ಸಂಖ್ಯೆ 247 ರಲ್ಲಿ ಬೆಳಿಗ್ಗೆ 05.15 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬಿಹಾರದಿಂದ ದೆಹಲಿಗೆ ಹೋಗುತ್ತಿದ್ದ ಡಬಲ್ ಡೆಕ್ಕರ್ ಬಸ್ ಸಂಖ್ಯೆ UP95 T 4720, ಹಾಲಿನ ಟ್ಯಾಂಕರ್ ಸಂಖ್ಯೆ UP70 CT 3999 ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ 18 ಜನರು ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದವರ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. “ದುಃಖದಲ್ಲಿರುವ ಕುಟುಂಬಗಳಿಗೆ ನನ್ನ ಸಂತಾಪವಿದೆ. ಸ್ಥಳದಲ್ಲಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಲು ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ. ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.


Share

ರೋಟರಿ ಪರಿವಾರದ ಡಾಕ್ಟರ್ ಹಾಗೂ ಸಿ.ಎ ಗಳಿಗೆ ವಿಧಾತ್ರಿ ಅಕಾಡೆಮಿಯಿಂದ ಸನ್ಮಾನ.

Share

ಕುಮಟಾ : ರೋಟರಿ ಕ್ಲಬ್ ಹಾಗೂ ವಿಧಾತ್ರಿ ಅಕಾಡೆಮಿಯ ಸಹಯೋಗದಲ್ಲಿ, ಇಲ್ಲಿನ ನಾದಶ್ರೀ ಕಲಾಕೇಂದ್ರದಲ್ಲಿ ನಡೆದ ರೋಟರಿ ವಾರದ ಸಭೆಯಲ್ಲಿ ಕುಮಟಾ ತಾಲ್ಲೂಕಿನ ರೋಟರಿಯನ್ ಡಾಕ್ಟರ್ ಗಳಿಗೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಡಾಕ್ಟರ್ಸ್ ಡೇ ಮತ್ತು ಚಾರ್ಟರ್ಡ್ ಅಕೌಂಟೆಂಟ್ಸ್ ಡೇ ನಿಮಿತ್ತ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಹಿರಿಯ ವೈದ್ಯ ಡಾ. ಡಿ. ಡಿ. ನಾಯ್ಕ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಡಾಕ್ಟರ್ ಗಳ ಕೆಲಸ ಸಾಮಾನ್ಯ ಕೆಲಸವಲ್ಲಾ, ಅವರು ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಸೇವೆಯನ್ನು ಒದಗಿಸುವ ಮನಸ್ಸಿನಲ್ಲಿಯೇ ಇರಬೇಕಾಗುತ್ತದೆ. ಕುಮಟಾದ ವೈದ್ಯರುಗಳು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ರೋಗವನ್ನು ಗುಣಪಡಿಸುವ ಕಾರ್ಯವನ್ನು ನಿರಂತರವಾಗಿ, ನಿಸ್ವಾರ್ಥವಾಗಿ ಮಾಡುತ್ತಾ ಬಂದಿದ್ದಾರೆ. ಡಾಕ್ಟರ್ ಗಳ ಸೇವೆಯನ್ನು ಗುರುತಿಸಿ ರೋಟರಿ ಕ್ಲಬ್ ಹಾಗೂ ವಿಧಾತ್ರಿ ಅಕಾಡೆಮಿಯವರು ಗೌರವಿಸುತ್ತಿರುವುದು ಅವರ ಜನಪರ ಕಾಳಜಿಗೆ ಹಿಡಿದ ಕೈ ಗನ್ನಡಿಯಾಗಿದೆ ಎಂದರು.ಇನ್ನೋರ್ವ ಖ್ಯಾತ ವೈದ್ಯ ಹೈಟೆಕ್ ಆಸ್ಪತ್ರೆಯ ಡಾ. ನಿತೀಶ ಶಾನಭಾಗ ಅವರು ಗೌರವ ಸ್ವೀಕರಿಸಿ ಮಾತನಾಡುತ್ತಾ ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿಧಾತ್ರಿ ಅಕಾಡೆಮಿಯು ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಗುರುರಾಜ ಶೆಟ್ಟಿಯವರ ನೇತೃತ್ವದಲ್ಲಿ ಮುನ್ನಡೆಯುತ್ತಿದ್ದು, ಕುಮಟಾ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತ ಬಂದಿದೆ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಜನಮೆಚ್ಚುವಂತಾಗಿದೆ, ಹಾಗೆಯೇ ರೋಟರಿ ಕ್ಲಬ್ ನ ಸೇವಾ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ವಿಧಾತ್ರಿ ಹಾಗೂ ರೋಟರಿ ಕ್ಲಬ್ ನ ಸೇವಾ ಕಾರ್ಯಗಳು ಹೀಗೆ ನಿರಂತರವಾಗಿ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.ರೋಟರಿ ಕ್ಲಬ್ ಕುಮಟಾ ಶಾಖೆಯ ಅಧ್ಯಕ್ಷ ಅತುಲ್ ಕಾಮತ್, ಕಾರ್ಯದರ್ಶಿಯಾದ ವಿನಾಯಕ ಹೆಗಡೆ, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿಯವರು ಡಾಕ್ಟರ್ ಗಳಿಗೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಸನ್ಮಾನ ಕಾರ್ಯವನ್ನು ನೆರವೇರಿಸಿದರು.ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟ ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿಯವರು ಮಾತನಾಡಿ, ಚಾರ್ಟರ್ಡ್ ಅಕೌಂಟೆಂಟ್ ಗಳು ಆರ್ಥಿಕತೆಯ ಬೆನ್ನೆಲುಬು ಎಂದು ಹೇಳಬಹುದು, ಅವರ ಮಾರ್ಗದರ್ಶನ ಸದಾಕಾಲವೂ ಒಬ್ಬ ವ್ಯಕ್ತಿ, ಸಂಸ್ಥೆ, ಉದ್ಯಮ, ಹೀಗೆ ವಿವಿಧ ಕ್ಷೇತಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗೇ ಜೀವರಕ್ಷಕರಾದ ವೈದ್ಯರುಗಳ ಸೇವಾ ಕಾರ್ಯ ದೇವರಿಗೆ ಸಮಾನವಾದ್ದು. ಈ ಸಂದರ್ಭದಲ್ಲಿ ಇಂತವರನ್ನು ಗೌರವಿಸುವುದು ನಮ್ಮ ಸೌಭಾಗ್ಯ ಎಂದೆ ಭಾವಿಸಿಕೊಳ್ಳುತ್ತೇವೆ ಎಂದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಮಟಾದ ಖಜಾಂಚಿ ಪವನ ಶೇಟ್ ಹಾಗೂ ಇತರ ಸದಸ್ಯರುಗಳು ಉಪಸ್ಥಿತರಿದ್ದರು

Add New Post


Share

ಟಿ20 ವಿಶ್ವಕಪ್ ಗೆಲುವಿನ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕನ್ನಡಿಗನ ಪರಿಶ್ರಮ

Share

ಕುಮಟಾ :- ಟೀಮ್ ಇಂಡಿಯಾ ವಿಶ್ವಕಪ್ ತಂಡದಲ್ಲಿ ಈ ಬಾರಿ ಇರಲಿಲ್ಲ ಅನ್ನೋದು ಬೇಸರ ಸಂಗತಿ ಆದರೆ ಭಾರತ ತಂಡದ ಗೆಲುವಿಗೆ ಹಾಗೂ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳ ಸಕ್ಸಸ್ ಹಿಂದೆ ಕನ್ನಡಿಗರಿದ್ದ ಖುಷಿಯ ಸಂಗತಿ ಮರೆಯುವಂತಿಲ್ಲ. ಅವರೇ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೀವಗಿ ರಾಘವೇಂದ್ರ ಸುಮಾರು 13 ವರ್ಷದಿಂದ ಭಾರತ ತಂಡ ಜೊತೆ ಇದ್ದು ತಂಡದ ಯಶಸ್ವಿಗೆ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ.ಈ ಒಂದು ಪರಿಶ್ರಮಕ್ಕೆ ಟೀ ಟ್ವೆಂಟಿ ವಿಶ್ವಕಪ್ನಲ್ಲಿ ದೊಡ್ಡ ಪ್ರತಿಫಲ ಸಿಕ್ಕಿದೆ. ಓರ್ವ ಶಿಕ್ಷಕರ ಮಗನಾದ ರಾಘವೇಂದ್ರ ಮೋಹನ್ ದೀವಗಿ 24 ವರ್ಷಗಳ ಹಿಂದೆ ನಾನು ಕ್ರಿಕೆಟ್ ಆಟಗಾರನಾಗಬೇಕೆಂದು ಕನಸು ಕಂಡು ಕೇವಲ 21 ರೂಪಾಯಿನೊಂದಿಗೆ ಮನೆಬಿಟ್ಟರು. ಬಳಿಕ ಇವರ ಆಸೆ ಕಮರಿತು.ಕಳೆದುಕೊಂಡದ್ದನ್ನು ಹುಡುಕಲು ಹೊರಟಿ ಇಂದು ಭಾರತದ ಟಿ20 ವಿಶ್ವಕಪ್ ರೂವಾರಿಗಳಲ್ಲಿ ಒಬ್ಬರಾಗಿ ನಿಂತಿದ್ದಾರೆ. ರಾಘವೇಂದ್ರ ಅವರ ಪ್ರಯಾಣ ಭಾರತ ವಿಶ್ವ ಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವಲ್ಲಿ ಬಂದು ತಲುಪಿದೆ. ಈ ಗೆಲುವಿನ ಹಿಂದೆ ಕನ್ನಡಿಗನ ಪಾತ್ರ ಇದೆ ಅನ್ನೋದು ಮರೆಯುವಂತಿಲ್ಲ. ಟೀಮ್ ಇಂಡಿಯಾ ಬಳಗದಲ್ಲಿ ಗುರುತಿಸಿಕೊಂಡಿರುವ ರಾಘವೇಂದ್ರ ದೀವಗಿ ಥ್ರೋಡೌನ ಎಕ್ಸ್ಪರ್ಟ್ ಅಭ್ಯಾಸದ ಸಮಯದಲ್ಲಿ ಎಲ್ಲಾ ಆಟಗಾರರಿಗೂ ಬೌನ್ಸ ರ ಶಾರ್ಟ್ ಬಾಲ್ ಎಸೆದು ಅವರ ಯಶಸ್ವಿಗೆ ಕಾರಣರಾಗಿದ್ದಾರೆ.ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಪ್ರತಿಯೊಬ್ಬ ಬ್ಯಾಟ್ಸ್ಮನ್ ಗಳಿಗೆ ರಾಘವೇಂದ್ರ ತಲಾ 3೦೦ಎಸೆತಗಳನ್ನು ಒಬ್ಬರಿಗೆ ಎಸೆದು ಸರಿಸುಮಾರು 3000 ಎಸತೆಗಳನ್ನು ಬ್ಯಾಟ್ಸ್ಮನ್ ಗಳಿಗೆ ಎಸೆಯುತ್ತಾರೆ. ರಾಘವೇಂದ್ರ ಪ್ರತಿಭೆಯನ್ನು ಸಚಿನ್ ತೆಂಡೂಲ್ಕರ್ ಬೇಗನೆ ಗುರುತಿಸಿ 2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ಸೇರಿಕೊಂಡರು. ಕಳೆದ 13 ವರ್ಷಗಳಿಂದ ಭಾರತ ತಂಡದ ಯಶಸ್ಸಿಗೆ ಪಾತ್ರ ವಹಿಸುತ್ತಾ ಬಂದಿದ್ದಾರೆ ಈ ಕನ್ನಡಿಗನ ಸಾಧನೆಗೆ ಇಡೀ ಕರ್ನಾಟಕವೇ ಹೆಮ್ಮೆಪಡುವ ವಿಚಾರವಾಗಿದೆ


Share

ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಕಾರವಾರ ಪಕ್ಷದ ಕಚೇರಿಯಲ್ಲಿ ಮೋರ್ಚಾದ ಸಭೆ

Share

ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಕಾರವಾರ ಪಕ್ಷದ ಕಚೇರಿಯಲ್ಲಿ ಮೋರ್ಚಾದ ಸಭೆ ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿಯವರ ಅಧ್ಯಕ್ಷತೆ ಯಲ್ಲಿ ನಡೆಯಿತು, ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿ ಆರಂಭಿಸಲಾಯಿತು ಸಭೆಯಲ್ಲಿ ಮಹಿಳಾ ಮೋರ್ಚಾದ ಆರತಿ ಬಾನಾವಳಿ, ಓ ಬಿ ಸಿ ಮೋರ್ಚಾದ ಶೃದ್ದಾ ನಾಯ್ಕ್, ಎಸ್ ಸಿ ಮೋರ್ಚಾದ ಉದಯ ಬಸಟ್ಟಿ, ಸುಜಾತಾ, ಬಾಂದೆ ಕರ್, ಸಂಘಟನೆ ಕುರಿತು ಮಾತನಾಡಿದರು ಯುವ ಮೋರ್ಚಾದ ಸುರೇಂದ್ರ ಗಾವಕರ್, ರೈತ ಮೋರ್ಚಾದ ದೇವಿದಾಸ್ ಉಪಸ್ಥಿತರಿದ್ದರು ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ ಮಾತನಾಡಿ ಮೋರ್ಚಾಗಳು ಪಕ್ಷದ ಬೆನ್ನೆಲುಬು ಆ ನಿಟ್ಟಿನಲ್ಲಿ ತಾವುಗಳು ಕಾರ್ಯ ಪ್ರವರ್ಥ ರಾಗಿ ಕೆಲಸ ಮಾಡಬೇಕು ನಿಕಟ ಪೂರ್ವ ಶಾಸಕಿ ರಾಜ್ಯ ಬಿ ಜೆ ಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ್ ರವರು ನಮಗೆ ಬೆನ್ನೆಲುಬು ಆಗಿ ನಿಂತು ಸಂಘಟನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು ವೇದಿಕೆ ಮೇಲೆ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ್ ಅಮದಳ್ಳಿ, ಸೂರಜ್ ದೇಸಾಯಿ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಸುಜಾತಾ ಬಾಂದೆಕರ್, ಮಹಿಳಾ ಮೋರ್ಚಾ ಅಧ್ಯಕ್ಷರು ಕಲ್ಪನಾ ನಾಯ್ಕ್, ಪ್ರಧಾನ ಕಾರ್ಯದರ್ಶಿ, ಚಂದಾ ನಾಯ್ಕ್, ಅಶ್ವಿನಿ ಮಾಲ್ಸೇಕರ್, ಎಲ್ಲಾ ಮೋರ್ಚಾದ ಸದಸ್ಯರು ಕಾರ್ಯಕರ್ತರು, ಸಾಮಾಜಿಕ ಜಾಲತಾಣದ ಕಿಶನ್ ಕಾಂಬ್ಳೆ ಕಾರ್ಯಕರ್ತರು ಉಪಸ್ಥಿತರಿದ್ದರು ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚಂದಾ ನಾಯ್ಕ್ ಸ್ವಾಗತಿಸಿದರುತದ ನಂತರ ಏಕ್ ಪೇಡ್ ಮಾ ಕೆ ನಾಮ, ಗಿಡ ನೆಡುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು


Share

ಅನುದಾನದ ಕೊರತೆ: 100ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದ TISS

Share

ಮುಂಬೈ: ಟಾಟಾ ಟ್ರಸ್ಟ್‌ನಿಂದ ಅನುದಾನದ ಸ್ವೀಕರಿಸದ ಕಾರಣ TATA ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್(TISS) ಸುಮಾರು 100 ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ಒಂದು ದಶಕಕ್ಕೂ ಹೆಚ್ಚು ಕಾಲ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ 50ಕ್ಕೂ ಹೆಚ್ಚು ಅಧ್ಯಾಪಕರು ಮತ್ತು 60 ಬೋಧಕೇತರ ಗುತ್ತಿಗೆ ಸಿಬ್ಬಂದಿ ಈಗ ನಿರುದ್ಯೋಗಿಗಳಾಗಿದ್ದಾರೆ.

“ಕಳೆದ 10-15 ವರ್ಷಗಳಿಂದ ನಾವು ವಿವಿಧ ಕೋರ್ಸ್‌ಗಳನ್ನು ಕಲಿಸಲು ಹೆಚ್ಚುವರಿ ಅಧ್ಯಾಪಕರನ್ನು ನೇಮಿಸಿಕೊಳ್ಳಲು ಟಾಟಾ ಟ್ರಸ್ಟ್‌ನಿಂದ ಅನುದಾನ ಪಡೆಯುತ್ತಿದ್ದೇವೆ. ಆದರೆ ಆ ಅನುದಾನ ಸ್ಥಗಿತಗೊಳಿಸಲಾಗಿದೆ. ಅನುದಾನದ ನವೀಕರಣ ನಡೆದಂತೆ ತೋರುತ್ತಿಲ್ಲ. ಹೀಗಾಗಿ ವಜಾಗೊಳಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧ್ಯಾಪಕ ಸದಸ್ಯರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.”ಗುತ್ತಿಗೆಗಳನ್ನು ನವೀಕರಿಸದಿರುವ ಬಗ್ಗೆ ಜೂನ್ 28 ರಂದು ನಮಗೆ ತಿಳಿಸಲಾಯಿತು. ಟಾಟಾ ಟ್ರಸ್ಟ್‌ನಿಂದ ಸ್ಪಷ್ಟನೇ ಪಡೆಯುವವರೆಗೆ ಪತ್ರಗಳನ್ನು(ಗುತ್ತಿಗೆಗಳನ್ನು ನವೀಕರಿಸದಿರುವಿಕೆಗೆ ಸಂಬಂಧಿಸಿದಂತೆ) ನೀಡದಂತೆ ನಾವು TISS ಆಡಳಿತಕ್ಕೆ ತಿಳಿಸಿದ್ದೇವೆ. ನಾವು ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಿದೇವು. ಆದರೆ ನಮ್ಮ ಮನವಿಗೆ ಯಾವುದೇ ಪ್ರಯೋಜನವಾಗಿಲ್ಲ’’ ಎಂದು ಅಧ್ಯಾಪಕರೊಬ್ಬರು ಹೇಳಿದ್ದಾರೆ.

TISS ಆಡಳಿತವು ಅಧ್ಯಾಪಕರು ಮತ್ತು ಇತರ ಸಿಬ್ಬಂದಿ ವಜಾ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸಂಸ್ಥೆಯ ವಿದ್ಯಾರ್ಥಿಗಳ ವೇದಿಕೆ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

“ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿರಾಸಕ್ತಿ ಮತ್ತು ಸಂಸ್ಥೆ ನಡೆಸುವಲ್ಲಿ TISS ಆಡಳಿತದ ಪ್ರಸ್ತುತ ನಾಯಕತ್ವ ಸಂಪೂರ್ಣ ವಿಫಲವಾಗಿದೆ” ಎಂದು ಪ್ರಗತಿಪರ ವಿದ್ಯಾರ್ಥಿಗಳ ವೇದಿಕೆ ಹೇಳಿದೆ.


Share

2000 ರೂ. ನೋಟು: ಸಾರ್ವಜನಿಕರ ಬಳಿಯೇ ಇದೆ 7,581 ಕೋಟಿ!

Share

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಕೋಟಿ ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆ ಇತ್ತೀಚಿನ ಮಾಹಿತಿಯನ್ನು ಹಂಚಿಕೊಂಡಿದೆ.

2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಆರ್ ಬಿಐ (RBI) ಹಿಂಪಡೆದಿದ್ದು, ಸಾರ್ವಜನಿಕರ ಕೈಲಿದ್ದ ನೋಟುಗಳ ಪೈಕಿ ಈ ವರೆಗೂ ಶೇ.97.87 ರಷ್ಟು ನೋಟುಗಳು ಮರಳಿ ಆರ್ ಬಿಐ ವ್ಯಾಪ್ತಿಗೆ ಬಂದಿದೆ. 7,581 ಕೋಟಿ ರೂಪಾಯಿ ಮೌಲ್ಯದ ಮುಖಬೆಲೆಯ ನೋಟುಗಳು ಮಾತ್ರವೇ ಸಾರ್ವಜನಿಕರ ಬಳಿ ಇದೆ ಎಂದು ಆರ್ ಬಿಐ ತಿಳಿಸಿದೆ.2023 ರ ಮೇ.19 ರಂದು ಆರ್ ಬಿಐ 2000 ರೂ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಹೇಳಿತ್ತು. ಚಲಾವಣೆಯಲ್ಲಿರುವ 2000 ರೂ.ಗಳ ನೋಟುಗಳ ಒಟ್ಟು ಮೌಲ್ಯವು 2023 ರ ಮೇ 19 ರಂದು ವ್ಯವಹಾರದ ಮುಕ್ತಾಯದ ವೇಳೆಗೆ 3.56 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು, ಜೂನ್ 28, 2024 ರಂದು ವ್ಯವಹಾರದ ಮುಕ್ತಾಯದ ವೇಳೆಗೆ 7,581 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ.

ಠೇವಣಿ ಮತ್ತು/ಅಥವಾ ರೂ 2000 ಬ್ಯಾಂಕ್ ನೋಟುಗಳ ವಿನಿಮಯದ ಸೌಲಭ್ಯವು ಅಕ್ಟೋಬರ್ 7, 2023 ರವರೆಗೆ ದೇಶದ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಲಭ್ಯವಿತ್ತು.


Share

ದೆಹಲಿ ಆಯ್ತು, ಈಗ ರಾಜ್ ಕೋಟ್ ವಿಮಾನ ನಿಲ್ದಾಣದ ಹೊರಗಿನ ಮೇಲ್ಫಾವಣಿ ಕುಸಿತ!

Share

ರಾಜ್ ಕೋಟ್: ದೆಹಲಿ ಆಯ್ತು, ಈಗ ಗುಜರಾತಿನ ರಾಜ್ ಕೋಟ್ ವಿಮಾನ ನಿಲ್ದಾಣದ ಹೊರಗಿನ ಮೇಲ್ಫಾವಣಿ ಕುಸಿದು ಬಿದ್ದಿದೆ. ಭಾರೀ ಮಳೆಯ ನಡುವೆ ರಾಜ್‌ಕೋಟ್ ವಿಮಾನ ನಿಲ್ದಾಣದ ಟರ್ಮಿನಲ್‌ ಹೊರಗಿನ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿನ ಮೇಲ್ಛಾವಣಿ ಕುಸಿದಿದೆ. ಆದರೆ, ಯಾವುದೇ ಹಾನಿ ಬಗ್ಗೆ ಇನ್ನೂ ವರದಿಯಾಗಿಲ್ಲ.ನಿನ್ನೆ ದಿನ ದೆಹಲಿ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಟರ್ಮಿನಲ್ 1ರ ಛಾವಣಿಯ ಒಂದು ಭಾಗ ಕುಸಿದಿದ್ದರಿಂದ ಒಬ್ಬರು ಮೃತಪಟ್ಟು, ಎಂಟು ಜನರು ಗಾಯಗೊಂಡಿದ್ದರು. ಇದಾದ ಮಾರನೇ ದಿನವೇ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ನ ರಾಜ್ ಕೋಟ್ ನಲ್ಲಿಯೂ ಇಂತಹುದೇ ಘಟನೆ ನಡೆದಿದೆ.

ಇದು ದೇಶದಲ್ಲಿ ಸಂಭವಿಸಿದ ಮೂರನೇ ಘಟನೆಯಾಗಿದೆ. ರಾಜ್‌ಕೋಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 27, 2023 ರಂದು ಉದ್ಘಾಟಿಸಿದರು.


Share
1 2 3 14