ಕೊಡಗು ಜಿಲ್ಲೆ ಗೋಣಿಕೊಪ್ಪಲು ಮಹಿಳಾ ದಸರಾದಲ್ಲಿ ಸಾಧಕ ಮಹಿಳೆಯರಿಗೆ ಸನ್ಮಾನ ಮಾಡಿ ಗೌರವಿಸಿರುತ್ತಾರೆ. ಶ್ರೀ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪಲು ನಡೆದಂತಹ ಈ ಕಾರ್ಯಕ್ರಮದಲ್ಲಿ ಮಹಿಳಾ ದಸರಾದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮಾನ್ ಕುಲ್ಲಚಂಡ ಪ್ರಮೋದ್ ಗಣಪತಿರವರು ಉದ್ಘಾಟಿಸಿದರು, ದಸರಾ ಸಮಿತಿಯ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Category: ಸಾಧನೆ
ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಂಗನವಾಡಿಪಾತ್ರ ಹಿರಿದಾದುದು: ಶಿವಾನಂದ ಹೆಗಡೆ
ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಂಗನಾಡಿಗಳ ಪಾತ್ರ ಹಿರಿದಾದುದು: ಶಿವಾನಂದ ಹೆಗಡೆ
ಕುಮಟಾ: ಅಂಗನವಾಡಿ ಕೇಂದ್ರಗಳು ಶಿಕ್ಷಣ ವ್ಯವಸ್ಥೆಯ ಅಡಿಗಲ್ಲು, ಇಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಪೂರಕ ಮತ್ತು ಪ್ರೇರಕವಾದ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಕೆ ಡಿ ಸಿ ಬ್ಯಾಂಕ್ ನಿರ್ದೇಶಕ ಹಾಗೂ ಮಾಜಿ ಜಿ.ಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಹೇಳಿದರು.ತಾಲೂಕಿನ ಸೋಪ್ಪಿನ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯ ಬಂಗಣೆಯಲ್ಲಿ ಕುಮಟಾ ಕನ್ನಡ ಸಂಘ ಹಾಗೂ ಬಾಲ ವಿಕಾಸ ಸಮಿತಿ ಬಂಗಣೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಗುರು ಮಾತೆಯರಿಗೆ ವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಸಂಸ್ಕøತಿ ಉಳಿಯಬೇಕಾದರೆ ನಿಮ್ಮಂತ ನಿಸ್ವಾರ್ಥ ಮಹಿಳೆಯರಿಂದ ಮಾತ್ರ ಸಾಧ್ಯವಿದೆ. ಮಕ್ಕಳ ಸರ್ವತೊಮುಖ ಏಳ್ಗೆಯಲ್ಲಿ ಅಂಗನವಾಗಡಿ ಕೇಂದ್ರಗಳ ಪಾತ್ರ ಹಿರಿದಾದದುದು. ಬಾಲ್ಯಾವಸ್ಥೆಯಲ್ಲಿರುವ ಮಗುವನ್ನು ಸಂಸ್ಕಾರಯುತವಾಗಿ ಬೆಳೆಸಿ ಅವರಲ್ಲಿ ಜ್ಞಾನ ದೀವಿಗೆಯನ್ನು ಹೊತ್ತಿಸಿ ಸತ್ಪ್ರಜೆಗಳನ್ನಾಗಿಸುವ ಕಾರ್ಯ ಮಾಡುವುದು ನಿಮ್ಮಂತ ಮಾತೆಯರಿಂದ ಮಾತ್ರ ಸಾಧ್ಯ. ಮಹಿಳೆಯರು ಮತ್ತು ಮಕ್ಕಳಿಗೆ ಅಗತ್ಯವಾದ ಪೋಷಕಾಂಶವನ್ನು ನೀಡುವ ಹಾಗೂ ಅವರ ಆರೋಗ್ಯವನ್ನು ಕಾಯ್ದುಕೊಳ್ಳುವುದು ಮತ್ತು ಸರಿಯಾದ ಆರೋಗ್ಯಪೂರ್ಣವಾದ ಮಕ್ಕಳನ್ನು ಹೊಂದುವುದನ್ನೂ ಕೂಡ ಈ ಅಂಗನವಾಡಿ ಕೇಂದ್ರಗಳಲ್ಲಿ ಮಾಡಲಾಗುತ್ತದೆ.ಸಂಸ್ಕ್ರತಿ ಉಳಿಯಬೇಕಾದರೆ ನಿಮ್ಮಂತ ಮಾತೆಯರಿಂದ ಮಾತ್ರ ಸಾಧ್ಯ.ಅಂಗನವಾಡಿ ಎಂಬುದು ಶಿಕ್ಷಣ ವ್ಯವಸ್ಥೆಯ ಅಡಿಗಲ್ಲು. ಸರ್ಕಾರದ ವಿವಿಧ ಯೋಜನೆಗಳ ಮೂಲಕ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ನೀವುಗಳು ದೇಶದ ಆಸ್ತಿ. ಅಂಗನವಾಡಿ ಕೇಂದ್ರಗಳಿಂದಲೇ ಈ ದೇಶದ ಅಭಿವೃದ್ದಿ ಆಗುವಂತದ್ದು. ಕೇವಲ ಶಿಕ್ಷಣದಿಂದ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯವಿಲ್ಲ. ಶಿಕ್ಷಣ ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿಸ ಬಹುದು ಆದರೆ ಶಿಕ್ಷಣದ ಜೊತೆಯಲ್ಲಿ ಸಂಸ್ಕøತಿ ಇದ್ದಾಗ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯವಾಗುತ್ತದೆ. ಇಂತಹ ಜ್ಞಾನ ದೇಗುಲಗಳಾದ ಅಂಗನವಾಡಿ ಕೇಂದ್ರಗಳಲ್ಲಿ ನಿಶ್ವಾರ್ಥತೆಯಿಂದ ಕಾರ್ಯನಿರ್ವಹಿಸುತ್ತಿರುವ ನಿಮ್ಮನ್ನು ಸರ್ಕಾರ ಹಾಗೂ ಸಮುದಾಯ ಗೌರವಯುತವಾಗಿ ನಡೆಸಿಕೊಂಡು ಆರ್ಥಿಕವಾಗಿ ನೀವುಗಳು ಸದೃಡರಾಗುವಂತ ವಾತಾವರಣ ನಿರ್ಮಾಣವಾಗಬೇಕು. ಈ ದಿಸೆಯಲ್ಲಿ ಬರಲಿರುವ ದಿನಗಳಲ್ಲಿ ನನ್ನಿಂದಾಗುವ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮುಖ್ಯ ಅತಿಥಿ ಸಿ.ಡಿ.ಪಿ.ಓ ಶೀಲಾ ಪಟೇಲ್ ಮಾತನಾಡಿ ನಮ್ಮ ಅಂಗನವಾಡಿ ಕೇಂದ್ರಗಳು ಶಿಕ್ಷಣ ವ್ಯವಸ್ಥೆಯ ತಳಪಾಯವಿದ್ದಂತೆ. ಅವರು ಉತ್ತಮವಾಗಿ ಕೆಲಸ ಮಾಡಿದಾಗ ಉತ್ತಮ ಸಮಾಜ ನಿಮಾರ್ಣಮಾಡಲು ಸಾಧ್ಯವಿದೆ. ಈ ದಿಸೆಯಲ್ಲಿ ನಮ್ಮ ಅಂಗವಾಡಿ ಕೇಂದ್ರಗಳ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಗ್ರಾಮೀಣ ಪ್ರದೇಶಗಳಲ್ಲೂ ಸೂಕ್ತ ಶಿಕ್ಷಣಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಂಡು ನಿರಂತರವಾಗಿ ದುಡಿದ ನಮ್ಮ ಕಾರ್ಯಕರ್ತೆಯರನ್ನು ಗೌರವಿಸಿ ಸನ್ಮಾನಿಸುವ ನಿಮ್ಮೆಲ್ಲರ ಕಾರ್ಯ ಶ್ಲಾಘನೀಯ. ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಒದಗಿಸಿಕೊಡುವ ಜೊತೆಯಲ್ಲಿ ನಿಮ್ಮೆಲ್ಲರ ನೋವು ನಲಿವಿನಲ್ಲಿ ನಾನು ಕೈಜೋಡಿಸುವೆ. ನಮ್ಮ ಕಾರ್ಯಕರ್ತೆಯರನ್ನು ಗುರುತಿಸಿ ಗೌರವಿಸುವ ಕುಮಟಾ ಕನ್ನಡ ಸಂಘದ ಇಂತಹ ಸಮಾಜಮುಖಿ ಕಾರ್ಯಗಳು ಮುಂದುವರಿಯಲಿ ಎಂದರು. ಕುಮಟಾ ಕನ್ನಡ ಸಂಘದ ಆಧ್ಯಕ್ಷ ಹಾಗೂ ಪತ್ರಕರ್ತ ಸದಾನಂದ ದೇಶಭಂಡಾರಿ ಮಾತನಾಡಿ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರು ಅತ್ಯಲ್ಪ ಸಂಭಳ ಪಡೆದರೂ ಸಂತೋಷವಾಗಿ ನಿಶ್ವಾರ್ಥ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರ ಸಂಕಷ್ಟಗಳಿಗೆ ಸರ್ಕಾರ ಹಾಗೂ ಸಮುದಾಯ ಸ್ಪಂಧಿಸಬೇಕು. ಬರಲಿರುವ ದಿನಗಳಲ್ಲಿ ನಿಮ್ಮೆಲ್ಲ ತಾಯಿಂದಿರನ್ನು ಗುರುತಿಸಿ
ಗೌರವಿಸುವ ಕಾರ್ಯವನ್ನು ಕುಮಟಾ ಕನ್ನಡ ಸಂಘ ಮಾಡಲಿದೆ ಎಂದರು. ಈ ಸಂದರ್ಭದಲ್ಲಿ ನಿವೃತ್ತಿ ಅಂಚಿನಲ್ಲಿರುವ ಹಾಗೂ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿಯರಾದ ಉಷಾ ನಾಯ್ಕ,ಪದ್ಮಾವತಿ ನಾಯ್ಕ,ದಾಕ್ಷಾಣಿ ನಾಯ್ಕ,ಕುಸುಮಾ ರವೀಂದ್ರ ನಾಯ್ಕ ಕಡತೋಕಾ,ಚಂದ್ರಿಕಾ ಜಿ ಶೆಟ್ಟಿ ಕೆಕ್ಕಾರ,ಕುಸುಮಾ ಉದಯ ನಾಯ್ಕ ಕುಮಟಾ, ಅಶ್ವಿನಿ ಉದಯ ಭಟ್ಟ, ಶಶಿಕಲಾ ನಾಯ್ಕ,ವಿಜಯಾ ನಾಯ್ಕ,ಕಲಾವತಿ ಆರ್ ಮರಾಠಿ ಇವರನ್ನು ಆತ್ಮೀಯವಾಗಿ ಗೌರವಿಸಲಾಯಿತು.ಕೆ.ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಎನ್.ಭಟ್ಟ,ಗ್ರಾ.ಪಂ ಸದಸ್ಯ ಈಶ್ವರ ಮರಾಠಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಗಣಪತಿ ಮರಾಠಿ,ಹಿರಿಯರಾದ ಶೇಷ ಜಾಯು ಮರಾಠಿ,ಕುಮಾರಿ ಮರಾಠಿ ತಲಗೋಡ,ವಿಮಲಾ ಮರಾಠಿ,ಸುರೇಶ ಮರಾಠಿ,ಷಣ್ಮುಮುಖ ಮರಾಠಿ, ಬಾಲ ವಿಕಾಶ ಸಮಿತಿ ಅಧ್ಯಕ್ಷೆ ಯಶೋಧಾ ಮರಾಠಿ ಇನ್ನಿತರರು ಇದ್ದರು.ಕುಮಟಾ ಕನ್ನಡ ಸಂಘದ ಉಪಾಧ್ಯಕ್ಷ ಉದಯ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಪ್ರಶಸ್ತಿ ವಿಜೇತ ಅಂಗನವಾಡಿ ಶಿಕ್ಷಕಿ ಪದ್ಮಾವತಿ ನಾಯ್ಕ ವಂದಿಸಿದರು. ಅಶ್ವಿನಿ ಉದಯ ಭಟ್ಟ ಸ್ವಾಗತಿಸಿ ಪ್ರಾರ್ಥಿಸಿದರು.
ಶ್ರೀಕ್ಷೇತ್ರ ಬಂಗಾರಮಕ್ಕಿಯಿಂದ ಯಕ್ಷಾಂಜನೇಯ ಪ್ರಶಸ್ತಿ ಪ್ರಧಾನ
ಹೊನ್ನಾವರ :- ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠಮ್, ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಅಕ್ಟೋಬರ್ 03ರಿಂದ 17ರವರೆಗೆ “ಯಕ್ಷ ಪೂರ್ಣಿಮೆ – 2024” ಎಂಬ ಹೆಸರಿನೊಂದಿಗೆ ಪೌರಾಣಿಕ ಯಕ್ಷಗಾನ ಸೇವೆಯನ್ನು ಆಯೋಜಿಸಲಾಗಿತ್ತು. ದಿನಾಂಕ 17-10-2024ರಂದು ‘ಯಕ್ಷಾಂಜನೇಯ ಪ್ರಶಸ್ತಿ’ ಪ್ರಧಾನ ಕಾರ್ಯಕ್ರಮ ಹಾಗೂ “ಯಕ್ಷ ಪೂರ್ಣಿಮೆ – 2024”ರ ಸಮಾರೋಪ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.
ಶ್ರೀಕ್ಷೇತ್ರ ಬಂಗಾರಮಕ್ಕಿಯ ಸಂಸ್ಥಾಪಕರಾದ ದಿ|| ವೇ|| ಮೂ|| ಶ್ರೀ ಗಣೇಶ ಭಟ್ಟರ ಸ್ಮರಣಾರ್ಥ ಪ್ರತೀ ವರ್ಷ ಕೊಡಮಾಡುವ “ಯಕ್ಷಾಂಜನೇಯ” ಪ್ರಶಸ್ತಿಗೆ ಪ್ರಸ್ತುತ ಈ ವರ್ಷ ಯಕ್ಷಗಾನ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರಮನೆ (ರಿ.) ಕಲಾ ತಂಡವನ್ನು ಆಯ್ಕೆಮಾಡಿದ್ದು ಇದರ ಪ್ರತಿನಿಧಿಯಾಗಿ ಶ್ರೀಮತಿ ಗೌರಿ ಶಂಭು ಹೆಗಡೆ ಇವರು ಗೌರವವನ್ನು ಸ್ವಿಕರಿಸಿದರು.
ಶ್ರೀ ವೀರಾಂಜನೇಯ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ವಹಿಸಿದ್ದರು. ಸಾಹಿತಿ ಶ್ರೀ ಅರವಿಂದ ಕರ್ಕಿಕೋಡಿಯವರು ಅಧ್ಯಕ್ಷತೆ ವಹಿಸಿದ್ದರು, ವಿಶೇಷ ಆಹ್ವಾನಿತರಾಗಿ ನ್ಯಾಯವಾದಿ ಶ್ರೀ ನಾಗರಾಜ ನಾಯಕ್ ಪಾಲ್ಗೊಂಡಿದ್ದರು. ಸಂಸ್ಥೆಯ ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳು, ಸಿಬ್ಬಂದಿಗಳು, ಶ್ರೀಕ್ಷೇತ್ರದ ಭಕ್ತಾದಿಗಳು, ಕಲಾವಿದರು, ಕಲಾ ಪ್ರೇಕ್ಷಕರು, ಪ್ರಾಯೋಜಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದರು.
ರೋಟರಿ ಪರಿವಾರದ ಡಾಕ್ಟರ್ ಹಾಗೂ ಸಿ.ಎ ಗಳಿಗೆ ವಿಧಾತ್ರಿ ಅಕಾಡೆಮಿಯಿಂದ ಸನ್ಮಾನ.
ಕುಮಟಾ : ರೋಟರಿ ಕ್ಲಬ್ ಹಾಗೂ ವಿಧಾತ್ರಿ ಅಕಾಡೆಮಿಯ ಸಹಯೋಗದಲ್ಲಿ, ಇಲ್ಲಿನ ನಾದಶ್ರೀ ಕಲಾಕೇಂದ್ರದಲ್ಲಿ ನಡೆದ ರೋಟರಿ ವಾರದ ಸಭೆಯಲ್ಲಿ ಕುಮಟಾ ತಾಲ್ಲೂಕಿನ ರೋಟರಿಯನ್ ಡಾಕ್ಟರ್ ಗಳಿಗೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಡಾಕ್ಟರ್ಸ್ ಡೇ ಮತ್ತು ಚಾರ್ಟರ್ಡ್ ಅಕೌಂಟೆಂಟ್ಸ್ ಡೇ ನಿಮಿತ್ತ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಹಿರಿಯ ವೈದ್ಯ ಡಾ. ಡಿ. ಡಿ. ನಾಯ್ಕ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಡಾಕ್ಟರ್ ಗಳ ಕೆಲಸ ಸಾಮಾನ್ಯ ಕೆಲಸವಲ್ಲಾ, ಅವರು ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಸೇವೆಯನ್ನು ಒದಗಿಸುವ ಮನಸ್ಸಿನಲ್ಲಿಯೇ ಇರಬೇಕಾಗುತ್ತದೆ. ಕುಮಟಾದ ವೈದ್ಯರುಗಳು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ರೋಗವನ್ನು ಗುಣಪಡಿಸುವ ಕಾರ್ಯವನ್ನು ನಿರಂತರವಾಗಿ, ನಿಸ್ವಾರ್ಥವಾಗಿ ಮಾಡುತ್ತಾ ಬಂದಿದ್ದಾರೆ. ಡಾಕ್ಟರ್ ಗಳ ಸೇವೆಯನ್ನು ಗುರುತಿಸಿ ರೋಟರಿ ಕ್ಲಬ್ ಹಾಗೂ ವಿಧಾತ್ರಿ ಅಕಾಡೆಮಿಯವರು ಗೌರವಿಸುತ್ತಿರುವುದು ಅವರ ಜನಪರ ಕಾಳಜಿಗೆ ಹಿಡಿದ ಕೈ ಗನ್ನಡಿಯಾಗಿದೆ ಎಂದರು.ಇನ್ನೋರ್ವ ಖ್ಯಾತ ವೈದ್ಯ ಹೈಟೆಕ್ ಆಸ್ಪತ್ರೆಯ ಡಾ. ನಿತೀಶ ಶಾನಭಾಗ ಅವರು ಗೌರವ ಸ್ವೀಕರಿಸಿ ಮಾತನಾಡುತ್ತಾ ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿಧಾತ್ರಿ ಅಕಾಡೆಮಿಯು ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಗುರುರಾಜ ಶೆಟ್ಟಿಯವರ ನೇತೃತ್ವದಲ್ಲಿ ಮುನ್ನಡೆಯುತ್ತಿದ್ದು, ಕುಮಟಾ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತ ಬಂದಿದೆ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಜನಮೆಚ್ಚುವಂತಾಗಿದೆ, ಹಾಗೆಯೇ ರೋಟರಿ ಕ್ಲಬ್ ನ ಸೇವಾ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ವಿಧಾತ್ರಿ ಹಾಗೂ ರೋಟರಿ ಕ್ಲಬ್ ನ ಸೇವಾ ಕಾರ್ಯಗಳು ಹೀಗೆ ನಿರಂತರವಾಗಿ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.ರೋಟರಿ ಕ್ಲಬ್ ಕುಮಟಾ ಶಾಖೆಯ ಅಧ್ಯಕ್ಷ ಅತುಲ್ ಕಾಮತ್, ಕಾರ್ಯದರ್ಶಿಯಾದ ವಿನಾಯಕ ಹೆಗಡೆ, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿಯವರು ಡಾಕ್ಟರ್ ಗಳಿಗೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಸನ್ಮಾನ ಕಾರ್ಯವನ್ನು ನೆರವೇರಿಸಿದರು.ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟ ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿಯವರು ಮಾತನಾಡಿ, ಚಾರ್ಟರ್ಡ್ ಅಕೌಂಟೆಂಟ್ ಗಳು ಆರ್ಥಿಕತೆಯ ಬೆನ್ನೆಲುಬು ಎಂದು ಹೇಳಬಹುದು, ಅವರ ಮಾರ್ಗದರ್ಶನ ಸದಾಕಾಲವೂ ಒಬ್ಬ ವ್ಯಕ್ತಿ, ಸಂಸ್ಥೆ, ಉದ್ಯಮ, ಹೀಗೆ ವಿವಿಧ ಕ್ಷೇತಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗೇ ಜೀವರಕ್ಷಕರಾದ ವೈದ್ಯರುಗಳ ಸೇವಾ ಕಾರ್ಯ ದೇವರಿಗೆ ಸಮಾನವಾದ್ದು. ಈ ಸಂದರ್ಭದಲ್ಲಿ ಇಂತವರನ್ನು ಗೌರವಿಸುವುದು ನಮ್ಮ ಸೌಭಾಗ್ಯ ಎಂದೆ ಭಾವಿಸಿಕೊಳ್ಳುತ್ತೇವೆ ಎಂದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಮಟಾದ ಖಜಾಂಚಿ ಪವನ ಶೇಟ್ ಹಾಗೂ ಇತರ ಸದಸ್ಯರುಗಳು ಉಪಸ್ಥಿತರಿದ್ದರು
ಟಿ20 ವಿಶ್ವಕಪ್ ಗೆಲುವಿನ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕನ್ನಡಿಗನ ಪರಿಶ್ರಮ
ಕುಮಟಾ :- ಟೀಮ್ ಇಂಡಿಯಾ ವಿಶ್ವಕಪ್ ತಂಡದಲ್ಲಿ ಈ ಬಾರಿ ಇರಲಿಲ್ಲ ಅನ್ನೋದು ಬೇಸರ ಸಂಗತಿ ಆದರೆ ಭಾರತ ತಂಡದ ಗೆಲುವಿಗೆ ಹಾಗೂ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳ ಸಕ್ಸಸ್ ಹಿಂದೆ ಕನ್ನಡಿಗರಿದ್ದ ಖುಷಿಯ ಸಂಗತಿ ಮರೆಯುವಂತಿಲ್ಲ. ಅವರೇ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೀವಗಿ ರಾಘವೇಂದ್ರ ಸುಮಾರು 13 ವರ್ಷದಿಂದ ಭಾರತ ತಂಡ ಜೊತೆ ಇದ್ದು ತಂಡದ ಯಶಸ್ವಿಗೆ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ.ಈ ಒಂದು ಪರಿಶ್ರಮಕ್ಕೆ ಟೀ ಟ್ವೆಂಟಿ ವಿಶ್ವಕಪ್ನಲ್ಲಿ ದೊಡ್ಡ ಪ್ರತಿಫಲ ಸಿಕ್ಕಿದೆ. ಓರ್ವ ಶಿಕ್ಷಕರ ಮಗನಾದ ರಾಘವೇಂದ್ರ ಮೋಹನ್ ದೀವಗಿ 24 ವರ್ಷಗಳ ಹಿಂದೆ ನಾನು ಕ್ರಿಕೆಟ್ ಆಟಗಾರನಾಗಬೇಕೆಂದು ಕನಸು ಕಂಡು ಕೇವಲ 21 ರೂಪಾಯಿನೊಂದಿಗೆ ಮನೆಬಿಟ್ಟರು. ಬಳಿಕ ಇವರ ಆಸೆ ಕಮರಿತು.ಕಳೆದುಕೊಂಡದ್ದನ್ನು ಹುಡುಕಲು ಹೊರಟಿ ಇಂದು ಭಾರತದ ಟಿ20 ವಿಶ್ವಕಪ್ ರೂವಾರಿಗಳಲ್ಲಿ ಒಬ್ಬರಾಗಿ ನಿಂತಿದ್ದಾರೆ. ರಾಘವೇಂದ್ರ ಅವರ ಪ್ರಯಾಣ ಭಾರತ ವಿಶ್ವ ಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವಲ್ಲಿ ಬಂದು ತಲುಪಿದೆ. ಈ ಗೆಲುವಿನ ಹಿಂದೆ ಕನ್ನಡಿಗನ ಪಾತ್ರ ಇದೆ ಅನ್ನೋದು ಮರೆಯುವಂತಿಲ್ಲ. ಟೀಮ್ ಇಂಡಿಯಾ ಬಳಗದಲ್ಲಿ ಗುರುತಿಸಿಕೊಂಡಿರುವ ರಾಘವೇಂದ್ರ ದೀವಗಿ ಥ್ರೋಡೌನ ಎಕ್ಸ್ಪರ್ಟ್ ಅಭ್ಯಾಸದ ಸಮಯದಲ್ಲಿ ಎಲ್ಲಾ ಆಟಗಾರರಿಗೂ ಬೌನ್ಸ ರ ಶಾರ್ಟ್ ಬಾಲ್ ಎಸೆದು ಅವರ ಯಶಸ್ವಿಗೆ ಕಾರಣರಾಗಿದ್ದಾರೆ.ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಪ್ರತಿಯೊಬ್ಬ ಬ್ಯಾಟ್ಸ್ಮನ್ ಗಳಿಗೆ ರಾಘವೇಂದ್ರ ತಲಾ 3೦೦ಎಸೆತಗಳನ್ನು ಒಬ್ಬರಿಗೆ ಎಸೆದು ಸರಿಸುಮಾರು 3000 ಎಸತೆಗಳನ್ನು ಬ್ಯಾಟ್ಸ್ಮನ್ ಗಳಿಗೆ ಎಸೆಯುತ್ತಾರೆ. ರಾಘವೇಂದ್ರ ಪ್ರತಿಭೆಯನ್ನು ಸಚಿನ್ ತೆಂಡೂಲ್ಕರ್ ಬೇಗನೆ ಗುರುತಿಸಿ 2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ಸೇರಿಕೊಂಡರು. ಕಳೆದ 13 ವರ್ಷಗಳಿಂದ ಭಾರತ ತಂಡದ ಯಶಸ್ಸಿಗೆ ಪಾತ್ರ ವಹಿಸುತ್ತಾ ಬಂದಿದ್ದಾರೆ ಈ ಕನ್ನಡಿಗನ ಸಾಧನೆಗೆ ಇಡೀ ಕರ್ನಾಟಕವೇ ಹೆಮ್ಮೆಪಡುವ ವಿಚಾರವಾಗಿದೆ
ಉತ್ತರಕನ್ನಡ ಯುವತಿಗೆ ಒಲಿದ ವಿಶ್ವ ಸುಂದರಿ ಕಿರೀಟ
ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ ಯುವತಿಯೊಬ್ಬಳು ಇತ್ತೀಚಿಗೆ ಅಮೆರಿಕದಲ್ಲಿ ಜರುಗಿದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.ಮುಂಡಿಗೆಸರ ಅಜ್ಜೊರಮನೆ ಕುಟುಂಬದವರಾದ ಹುಬ್ಬಳ್ಳಿಯಲ್ಲಿ ನೆಲೆಸಿದ ಕೃಷ್ಣ ಹೆಗಡೆ, ಕಮಲಾ ದಂಪತಿಯ ಪುತ್ರಿ ಶೃತಿ ಹೆಗಡೆ ಅಮೆರಿಕದಲ್ಲಿ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ. ಈಕೆ ಈ ಮೊದಲು 2018 ರಲ್ಲಿ ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ ವಿಜೇತೆಯಾಗಿದ್ದರು. 2023 ರಲ್ಲಿ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದ ಈಕೆ, ಈಗ ಅಮೆರಿಕದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ನಿವೃತ್ತ ಹಾಗೂ ಮುಂಬಡ್ತಿ ಪಡೆದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಂಕೋಲಾ ಘಟಕದಲ್ಲಿ ಸೇವೆ ಸಲ್ಲಿಸಿದ ನೌಕರರಿಗೆ ಬೀಳ್ಕೊಡುಗೆ ಸಮಾರಂಭ
ಅಂಕೋಲಾ : ರಸ್ತೆ ಸಾರಿಗೆ ನೌಕರರು ಕರ್ತವ್ಯ ನಿರ್ವಹಣೆಯಲ್ಲಿ ಸಾರ್ವಜನಿಕರಿಗೆ ಗೌರವದಿಂದ ವರ್ತಿಸುವ ಮೂಲಕ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ನೀಡಿ ವಾ.ಕ.ರ.ಸಾ ಸಂಸ್ಥೆಯ ಅಂಕೋಲ ಘಟಕದಿಂದ ಕೆಲವು ಚಾಲಕ& ನಿರ್ವಾಹಕರು. ಸಂಚಾರ ನಿಯಂತ್ರಕರು ನಿವೃತ್ತಿ ಹೊಂದಿದ್ದು ಇನ್ನು ಕೆಲವರಿಗೆ ನಿರ್ವಾಹಕ ಹುದ್ದೆಯಿಂದ ಸಂಚಾರ ನಿಯಂತ್ರಕರಾಗಿ ಮುಂಬಡ್ತಿ ದೊರೆತಿದ್ದು. ಅಂತಹ ನೌಕರರಿಗೆ ವಾ.ಕ.ರ.ಸಾ ಅಂಕೋಲಾ ಘಟಕದ ಘಟಕ ವ್ಯವಸ್ಥಾಪಕಿ ಚೈತನ್ಯ ಅಗಳಗಟ್ಟಿ ಹಾಗೂ ಸಂಸ್ಥೆಯ ನೌಕರ ವರ್ಗ ಆತ್ಮೀಯವಾಗಿ ಘಟಕದಲ್ಲಿ ಬಿಳ್ಕೊಟ್ಟು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಘಟಕ ವ್ಯವಸ್ಥಾಪಕರು ಸಾರಿಗೆ ಸಂಸ್ಥೆಯ ಚಾಲಕ& ನಿರ್ವಾಹಕರು ಸಂಸ್ಥೆಯ ಆಸ್ತಿ ಇದ್ದಂತೆ.. ಇಷ್ಟು ವರ್ಷಗಳ ಕಾಲ ಸಾರ್ವಜನಿಕರೊಂದಿಗೆ ಬೆರೆತು ಪ್ರಾಮಾಣಿಕವಾಗಿ ತಾಳ್ಮೆಯಿಂದ ಕೆಲಸವನ್ನು ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಅವರ ನಿವೃತ್ತಿಯ ಬದುಕು ನೆಮ್ಮದಿಯಿಂದ ಕೂಡಿರಲಿ. ನಿವೃತ್ತಿಯ ಬಳಿಕ ಅವರಿಗೆ ಸಂಸ್ಥೆಯಿಂದ ಸಿಗಬಹುದಾದ ಸೌಲಭ್ಯಗಳನ್ನು ಕಾನೂನಿನ ಚೌಕಟ್ಟಿಗೊಳಪಟ್ಟು ಪೂರೈಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ನಿರ್ವಾಹಕರಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ನಿರ್ವಾಹಕ ಹುದ್ದೆಯಿಂದ ಸಂಚಾರ ನಿಯಂತ್ರಕರಾಗಿ ಯಲ್ಲಾಪುರ ಮತ್ತು ಕುಮಟಾ ತಾಲೂಕಿಗೆ ಮುಂಬಡ್ತಿ ಪಡೆದು ವರ್ಗಾವಣೆಗೊಂಡ ನೌಕರರನ್ನು ಕೂಡ ಆತ್ಮೀಯವಾಗಿ ಬಿಳ್ಕೊಟ್ಟು ಶುಭ ಹಾರೈಸಿದರು. ಅಂಕೋಲ ಘಟಕದಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ ನೌಕರರು.ಉಮೇಶ್ ನಾಯ್ಕ. ನಾಗೇಶ್ ನಾಯ್ಕ. ವಿಶ್ವನಾಥ ಆಗೇರ್. ಎನ್ ಎಚ್ ನಾಯ್ಕ್. ಪ್ರಕಾಶ್ ನಾಯ್ಕ ಮಂಜಗುಣಿ. ಅಂಕೋಲಾ ಘಟಕದಿಂದ ಬೇರೆ ಬೇರೆ ತಾಲೂಕಿಗೆ ನಿರ್ವಾಹಕ ಹುದ್ದೆಯಿಂದ ಸಂಚಾರ ನಿಯಂತ್ರಕರಾಗಿ ಮುಂಬಡ್ತಿ ಪಡೆದ ನೌಕರರು.ಶಾಂತ. ಯು. ನಾಯ್ಕ. ಮತ್ತು ಆರ್ ಡಿ ಸ್ವಾಮಿ ಇವರಿಗೆ ಸಂಚಾರ ನಿಯಂತ್ರಕರಾಗಿ ಯಲ್ಲಾಪುರ ವಾ. ಕ್. ರ. ಸಾ ಘಟಕಕ್ಕೆ ಮುಂಬಡ್ತಿ ನೀಡಲಾಗಿದೆ . ನಾಗರಾಜ್ ನಾಯ್ಕ್. ಇವರಿಗೆ ಸಂಚಾರ ನಿಯಂತ್ರಕರಾಗಿ ಕುಮಟಾ ವಾ. ಕ್. ರ. ಸಾ ಘಟಕಕ್ಕೆ ಮುಂಬಡ್ತಿ ನೀಡಲಾಗಿದೆ . ಸದರಿ ಬೀಳ್ಕೊಡುಗೆ ಸಮಾರಂಭದಲ್ಲಿ ಅಂಕೋಲ ಘಟಕದ ವ್ಯವಸ್ಥಾಪಕರು ಚೈತನ್ಯ ಅಗಳಗಟ್ಟಿ. ಮಂಜುನಾಥ ( AWS) ಶಿವಾನಂದ ನಾಯ್ಕ್ ಸಂಚಾರ ಅಧೀಕ್ಷಕರು. ರಾಜು ನಾಯಕ ಸಂಚಾರ ನಿಯಂತ್ರಕ. ಕಾರ್ಯಕ್ರಮದ ಮೇಲುಸ್ತುವಾರಿ ಅಧ್ಯಕ್ಷ ದಿಲೀಪ್ ನಾಯ್ಕ್. ಉಪಾಧ್ಯಕ್ಷದ ದೇವಣ್ಣ್ ನಾಯ್ಕ್. ಸಾಗರ. ಎಸ್ ನಾಯ್ಕ್ ಕಾರ್ಯದರ್ಶಿ. ಎಸ್ ಆರ್ ಬಂಟ್ ಸ್ವಾಗತಿಸಿದರು ಹಾಗೂ ಶಿವಕುಮಾರ್ ನಾಯಕ. ಎನ್ ಕೆ ಆಚಾರಿ ಹಾಗೂ ಇತರ ಅನೇಕ ಸಿಬ್ಬಂದಿಗಳು ಜೊತೆಗೆ ನಿವೃತ್ತಿ ಹೊಂದಿದ ನೌಕರರ ಕುಟುಂಬದವರು ಸದರಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು :ಡಿವೈಎಸ್ಪಿ ಚಂದ್ರಶೇಖರ.
ಸಿರುಗುಪ್ಪ:ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಗಳಿಸುವ ಅಪಾರ ಜ್ಞಾನ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ಯುವ ಪೀಳಿಗೆಯನ್ನು ಸುಸಂಸ್ಕೃತರನ್ನಾಗಿ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರಿದ್ದಾರೆ ಎಂದು ಡಿವೈಎಸ್ಪಿ ಜಿ ಚಂದ್ರಶೇಖರ ಹೇಳಿದ್ದಾರು.
ತಾಲೂಕಿನ ಕರ್ಚಿಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಸಹ ಶಿಕ್ಷಕ ಕೆ ಖಾಸಿಂಸಾಬ್ ಅವರ ವಯೋ ನಿವೃತ್ತಿ , ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿಸಿದರು.
ಮೊದಲು ಬಾರಿಗೆ 1998 ರಲ್ಲಿ ಕರ್ಚಿಗನೂರು ಸರ್ಕಾರಿ ಶಾಲೆಗೆ ಮೊದಲ ಬಾರಿಗೆ ಶಿಕ್ಷಕ ವೃತ್ತಿ ಪ್ರಾರಂಭ ಮಾಡಿ ಅದೇ ಶಾಲೆಯಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದಿಗೆ ನಿವೃತ್ತಿ ಹೊಂದುತ್ತಿದ್ದು ನಿವೃತ್ತಿ ಹೊಂದಿದ ಶಿಕ್ಷಕ ಕೆ ಖಾಸಿಂ ಸಾಬ್ ಅವರಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಗ್ರಾಮದ ಮಹಿಳೆಯರು ಕಳಸಾ ಕುಂಭ ಹೊತ್ತು ಸ್ವಾಗತದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಗಿತ್ತು.
ಶಾಲೆಯ ಮುಖ್ಯಗುರು ರಾಘವೇಂದ್ರ ಮಾತನಾಡಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿ ಶಾಲೆಯ ಶಿಕ್ಷಕ ಕೆ ಖಾಸಿಂ ಸಾಬ್ ಅವರಿಗೆ ನಮ್ಮ ಶಾಲೆಯಲ್ಲಿ 26 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಶಿಕ್ಷಕ ವೃತ್ತಿಗೆ ನಿವೃತ್ತಿ ಹೊಂದಿದ್ದು ಅವರ ನಿವೃತ್ತಿ ಜೀವನ ಸುಖವಾಗಿರಲಿ ಎಂದು ಹೇಳಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಪ್ರ.ಸ್ವ ಅಭಿನವ ಮಹಾಂತ ಮಹಾಸ್ವಾಮಿಗಳು,ಡಾ ಎ ಚನ್ನಪ್ಪ ಕುಲ ಸಚಿವರು (ಆಡಳಿತ) ವಿಶ್ವವಿದ್ಯಾಲಯ ಧಾರವಾಡ,ಶಿಕ್ಷಣ ಸಂಯೋಜಕರಾದ ತಮ್ಮನಗೌಡ ಪಾಟೇಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಧರ, ಪದವಿಧಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ ವೆಂಕಟೇಶ್, ಸಿ ಆರ್ ಪಿ ರಾಮಚಂದ್ರಪ್ಪ,ರಾಜಶೇಖರ್,ಪ್ರಭಾರಿ ಮುಖ್ಯಗುರು ರಾಘವೇಂದ್ರ, ಮತ್ತು ವಿವಿಧ ಶಾಲೆಯ ಶಿಕ್ಷಕರು,ಹಾಗೂ ಹಳೇ ವಿದ್ಯಾರ್ಥಿಗಳಾದ ಪಿ.ಎಸ್.ಐ ಯರ್ರೆಪ್ಪ,ಮಾರೇಶ್,,ಭಾಷ, ವೆಂಕಟೇಶ್,ಬಸವರಾಜ ನಾಗರಾಜ್,ಗಾದಿಲಿಂಗಪ್ಪ,ಈರಣ್ಣ, ಮತ್ತು ಶಾಲೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.
ವರದಿ.ಶೇಖರ್ ಹೆ
ಸುಂದರ ಮನಸ್ಸಿನ ಸಮಾಜ ಸೇವಕ- ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್
ಡಾ ಮಲ್ಲಿಕಾರ್ಜುನ ತಂ/ ಬಸವರಾಜ ಹಡಪದ ಸುಗೂರ ಎನ್ ಅವರು ಸಮಾಜ ಸೇವೆ ಮಾಡಲು ಕಟ್ಟಿರುವ ವೇದಿಕೆಯೆ ಹಡಪದ ಅಪ್ಪಣ(ಕ್ಷೌರಿಕ) ಸಮಾಜ.
” ಮಲ್ಲಿಕಾರ್ಜುನ ಬಿ ಹಡಪದ ಅವರು ಕಟ್ಟಿದ ಈ ಸುಂದರ ಮನಸ್ಸಿನ ವೇದಿಕೆ
ಇದು ಒಂದು ವ್ಯಕ್ತಿಯ ಹೆಸರಲ್ಲ. ಈ ಹೆಸರಿನ ಹಿಂದೆ ಸುಂದರ ಅರ್ಥವಿದೆ.ಅದುವೇ ಸುಂದರ ಮನಸ್ಸಿನ ಹಡಪದ ಸಮಾಜದ ನಾಗರಿಕರು.
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಇರುವ
ಮಲ್ಲಿಕಾರ್ಜುನ ತಂ/ ಬಸವರಾಜ ಹಡಪದ ಸುಗೂರ ಎನ್ ಅವರು ತಮ್ಮ ಹಡಪದ ಅಪ್ಪಣ (ಕ್ಷೌರಿಕ) ಸಮುದಾಯದ ಮೂಲಕವೇ ಮಾಡಿದ ಸಮಾಜ ಸೇವೆಗೆ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಬೆಂಗಳೂರು ವತಿಯಿಂದ ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ. ಸಮಾಜ ಸೇವೆ ಮಾಡಲು ಸುಂದರ ಮನಸ್ಸು ಬೇಕು . ಅದು ನಿಷ್ಕಲ್ಮಶವಾಗಿರಬೇಕು. ಸೇವಾ ಮನೋಭಾವನೆ ಮಾತ್ರ ಇರಬೇಕು. ಹಾಗಿದ್ದರೆ ಮಾತ್ರ ನಿಜವಾದ ಸಮಾಜ ಸೇವೆ ಮಾಡಲು ಸಾಧ್ಯ.ಈ ಹಿನ್ನೆಲೆಯಲ್ಲಿ ಸುಂದರ ಮನಸ್ಸಿನ ಹಡಪದ ಸಮಾಜದ ನಾಗರಿಕರು ಎಂಬುದರ ಮೊದಲ ಅಕ್ಷರಗಳನ್ನು ತೆಗೆದುಕೊಂಡು ಹಡಪದ ಅಪ್ಪಣ (ಕ್ಷೌರಿಕ) ಸಮಾಜ ಸಂಘವು ರಾಜ್ಯ ಹಾಗೂ ಜಿಲ್ಲಾ ಮತ್ತು ತಾಲೂಕಾ ಗ್ರಾಮೀಣ ಮಟ್ಟದಲ್ಲಿ ಹೆಮ್ಮರವಾಗಿ ಬೆಳೆಯುತ್ತಿದೆ. ಈ ಹಡಪದ ಅಪ್ಪಣ (ಕ್ಷೌರಿಕ) ಸಮಾಜದ ವತಿಯಿಂದ ಮೊದಲ ವರ್ಷದ ಕೋವಿಢ್-೧೯ ಕೂರೊನಾ ಸಂಧರ್ಭದಲ್ಲಿ ಯಾರಿಗೆ ಯಾರು ಮುಟ್ಟಲಾರದ ಪರಿಸ್ಥಿತಿ ಸಮಯದಲ್ಲಿ ಸಹ ಈ ನಮ್ಮ ಹಡಪದ ಸಮಾಜದ ನಿಸ್ವಾರ್ಥಿಯ ಸಮಾಜದ ಸೇವಕನ ಸೇವೆ ಸಾಗಿ ಬಂದ ಹಾದಿ ಹೀಗಿದೆ ಹಿರಿಯ ವೃದ್ಧರಿಗೆ, ಅನಾಥರಿಗೆ, ಅಂಧರಿಗೆ, ಶಾಲಾ ಮಕ್ಕಳಿಗೆ .ಕಟ್ಟಡ್ ಕಾರ್ಮಿಕರಿಗೆ.
ನಿರ್ಗತಿಕರಿಗೆ. ಮೂಕರಿಗೆ.
ಸಾಧು-ಸಂತರಿಗೆ.
ಕಿವುಡರಿಗೆ.ಅಂಧ -ಮಕ್ಕಳಿಗೆ, ಬುದ್ದಿ ಮಾಧ್ಯರಿಗೆ.
ಅಂಗವಿಕಲರಿಗೆ.
ಪೌರ ಕಾರ್ಮಿಕರಿಗೆ. ಅನಾಥ ಆಶ್ರಯ ದ ನಿರ್ಗತಿಕರಿಗೆ, ಮತ್ತು
ಗ್ರಾಮೀಣ ಭಾಗದ ಬಡ ರೈತರಿಗೆ. ಅನಾಥ ಆಶ್ರಮದಲ್ಲಿ ಇರುವ ಹಿರಿಯ ವೃದ್ದರಿಗೆ.ಮತ್ತು ನಿರ್ಗತಿಕರಿಗೆ. ಹೀಗೆ ಒಟ್ಟು 13 ವಿವಿಧ ಕಡೆಯಲ್ಲೂ ಸೇರಿದಂತೆ ಇಲ್ಲಿಯವರೆಗೆ ಒಟ್ಟು 1350 ಕ್ಕೊ ಹೆಚ್ಚು ಅನಾಥರಿಗೆ ನಿರ್ಗತಕರಿಗೆ.ಉಚಿತ ಕ್ಷೌರ ಸೇವೆ ಮಾಡಿದ್ದಾರೆ. ಇದೇ ಜೂನ್ -6-ರಂದು ಕಲಬುರಗಿ ಜಿಲ್ಲೆಯ ಹಡಪದ ಸಮಾಜದ ಸಂಘಟನೆಯ ಚತುರ. ಯುವ ಉತ್ಸಾಹಿ ಕಾಯಕಯೋಗಿ ಸಮಾಜದ ಸೇವಕ ಮತ್ತು ಡಾ. ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಗೇ 31 ವರ್ಷ ಮುಗಿದು 32 ನೇ ವರ್ಷಕ್ಕೆ – ಪಾದಾರ್ಪಣೆ. ಅವರ ಜನ್ಮ ದಿನದ ಅಂಗವಾಗಿ ಈ ವಿಶೇಷ ಲೇಖನ ಹಡಪದ ಅಪ್ಪಣ ಸಮಾಜ ಸೇವೆಯ ಹೆಜ್ಜೆಯ ಗುರುತು. ಈ ನಿಸ್ವಾರ್ಥಿಯ ಕಾಯಕ ಯೋಗಿಯು ನಡೆದು ಬಂದ ಹಾದಿ, ಸಮಾಜಕ್ಕಾಗಿ ಸದಾ ಮಿಡಿಯುವ ಮನಸ್ಸು.
ಕನ್ನಡ ನಾಡು -ನುಡಿ -ಭಾಷೆಯ ಬಗ್ಗೆ ಅಪಾರ ಪ್ರೀತಿಯಿಂದ ‘ಕನ್ನಡ ಉಳಿಸಿ ಕನ್ನಡ ಬೆಳಸಿ’ ಮತ್ತು ಹಿರಿಯರಿಗೆ. ಅನಾಥರಿಗೆ ನಿರ್ಗತಿಕರಿಗೆ.ಅಂಧರಿಗೆ ಉಚಿತ ಕ್ಷೌರ ಸೇವೆ ಸಲ್ಲಿಸಿದ್ದಾರೆ ಹಾಗೇಯೆ ಈ ರೀತಿಯ ಅನೇಕ ವೃದ್ದಾಶ್ರಮ.ಶಾಲೆಯಲ್ಲಿ. ಆಶ್ರಮದಲ್ಲಿ ಇರುವ ಅನಾಥ ನಿರ್ಗತಿಕರಿಗೆ. ಸೇವೆ ಸಲ್ಲಿಸುತ್ತಾ ಹಡಪದ ಅಪ್ಪಣ ಸಮಾಜದಿಂದಲೇ. ವಿವಿಧ (ಬೇರೆ ಬೇರೆ ) ಸಮಾಜಕ್ಕೆ ಮಾದರಿಯಾಗಿದ್ದಾರೆ.ರಾಜ್ಯದಲ್ಲಿ ಹಡಪದ ಅಪ್ಪಣ ಸಮುದಾಯವು ಸಣ್ಣ ಸಣ್ಣ ಸಮುದಾಯ ಈ ಸಮಾಜವು ತೀರಾ ಹಿಂದುಳಿದ್ದು. ಈ ಹಡಪದ ಸಮಾಜದ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ಈಗಾಗಲೇ ಹಿಂದಿನ ಬಿಜೆಪಿ ಸರ್ಕಾರದ ಮಾಜಿ ಸಿ.ಎಮ್ ಬಸವರಾಜ ಭೊಮ್ಮಾಯಿ ಅವರು ಘೋಷಣೆ ಮಾಡಿದ್ದು. ಈ ಹಡಪದ ಅಪ್ಪಣ ಸಮುಧಾಯವನ್ನು ಈಗಿನ ಕಾಂಗ್ರೇಸ್ ಸರ್ಕಾರದ ಸಿ.ಎಮ್ ಸಿದ್ರಾಮಯ್ಯನವರು ಸಮಪರ್ಕವಾಗಿ ನಮ್ಮ ‘ ಹಡಪದ ಅಪ್ಪಣ ಸಮುದಾಯದ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ಜಾರಿಗೆ ತಂದು ಈ ಹಡಪದ ಅಪ್ಪಣ ಸಮುದಾಯಕ್ಕೆ 25 ಕೋಟಿ ರೊ. ಮೀಸಲಿಟ್ಟು ಈ ಸಮಾಜದ ಅಭಿವೃದ್ದಿ ಗೇ ಕಾಂಗ್ರಸ್ ಸರ್ಕಾರ ಶ್ರಮಿಸಲಿ.ಮತ್ತು
ಈ ಹಡಪದ ಅಪ್ಪಣ ಸಮುದಾಯವು ದಲಿತರಿಗಿಂತ ಹೀನಾಯ ಬದುಕು ಸಾಗಿಸುತ್ತಿದೆ. ತೀರಾ ಹಿಂದುಳಿದ ಸಮಾಜವಾಗಿದೆ. ರಾಜ್ಯದಲ್ಲಿ ಹಡಪದ ಅಪ್ಪಣ ಸಮಾಜವನ್ನು ಪರಿಗಣಿಸಿ ಕಾಂಗ್ರೆಸ್ ಸರ್ಕಾರವು ಹಡಪದ ಅಪ್ಪಣ ಸಮಾಜದ ಕುಲ ಶಾಸ್ತ್ರ ಅಧ್ಯಯನ್ ವರದಿಯನ್ನು ಮಾಡಿಸಿ. ಈ ಹಡಪದ ಸಮಾಜವನ್ನು ಆರ್ಥಿಕವಾಗಿ.
ಸಾಮಾಜಿಕವಾಗಿ. ಶೈಕ್ಷಣೀಕವಾಗಿ. ರಾಜಕೀಯವಾಗಿ ತೀರಾ ಹಿಂದುಳಿದ ಸಮುದಾಯವಾಗಿದೆ.ಈ ಸಮಾಜದ ಅಭಿವೃದ್ದಿಯನ್ನು ಮಾಡಲಿ.ಮತ್ತು ಈ ಸಮುದಾಯವನ್ನು ‘ಎಸ್ಸಿಗೇ ಅಥವಾ ಎಸ್ಟಿ ” – ಪಟ್ಟಿಗೇ ಸೇರ್ಪಡೆ ಮಾಡಲು ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕು. ಜಾತಿ ನಿಂದನೆ ಪದ(ಅವಾಚ್) ಪದ ಬಳಕೆ ಮಾಡುವ ಜನರಿಗೆ ‘ಅಟ್ರಾಸಿಟಿ “ಕಾನೂನು ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವೆ, ಈ ಹಡಪದ ಅಪ್ಪಣ ಸಮುದಾಯದ ಹತ್ತು ಹಲವು ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ರಾಜ್ಯ ಕಾಂಗ್ರೇಸ್ ಸರ್ಕಾರದ ಸಿ.ಎಮ್ ಸಿದ್ರಾಮಯ್ಯನವರು ಮತ್ತು
ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವುಕುಮಾರ ಅವರು ಹಾಗೂ ಕ್ಯಾಬಿನೆಟ್ ಸಚಿವರು ಶಾಸಕರು ಎಲ್ಲರೊ ಸೇರಿ ಈ ಹಡಪದ ಅಪ್ಪಣ ಸಮಾಜಕ್ಕೆ ನ್ಯಾಯ ಒದಗಿಸಿಕೊಂಡುವಂತೆ ಈ ಪತ್ರಿಕೆ ಮೂಲಕ
ಮನವಿಯನ್ನು ತಿಳಿಸಿದ್ದರು. ನಮ್ಮ ಹಡಪದ ಸಮಾಜದ ಜನತೆಗೆ ಕಾರ್ಮಿಕ ಇಲಾಖೆಯ ಅಸಂಘಟಿತ ವಲಯದ ಅಡಿಯಲ್ಲಿ ಬರುವ ಕ್ಷೌರಿಕರಿಗೆ. ಸ್ಮಾರ್ಟ ಕಾಡ್೯( ಲೇಬಸ್೯ ಕಾಡ್೯) ವಿತರಣೆ. ಹಾಗೂ ಇ-ಶ್ರಮ್ ಕಾಡ್೯ ವಿತರಣೆ. ಹಾಗೂ ಕಾರ್ಮಿಕ ಇಲಾಖೆಯ ಅಡಿಯಲ್ಲಿ ನಮ್ಮ ಕ್ಷೌರಿಕ ಅಂಗಡಿಗಳಿಗೆ ಲೈಸೆನ್ಸ್ ಸಹ ಮಾಡಿಸಿದ್ದು. ಹಾಗೆ ಸರ್ಕಾರದ ಅನೇಕ ಯೋಜನೆಗಳನ್ನು ನಮ್ಮ ಹಡಪದ ಅಪ್ಪಣ ಸಮಾಜದ ಜನತೆ
ಮಾಡಿಕೊಳ್ಳುತ್ತಿದ್ದು.
ಮತ್ತು ಅದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದು. ಮತ್ತು ಕಾಡ್೯ಗಳನ್ನು ಸಹ ಫಲಾನುಭವಿಗಳಿಗೆ ನೀಡಿದ್ದೇವೆ. ಇನ್ನೊ ಕೇಂದ್ರ ಸರ್ಕಾರದ ಐದು ಲಕ್ಷದ ವರೆಗೊ ಆಸ್ಪತ್ರೆಯ ವೆಚ್ಚ ಈ ಆಯುಷ್ಮಾನ್ ಭಾರತ್ ಕಾಡ್೯ ಬರಿಸಲಿದೆ.ಈ ಕಾಡ್೯ ಅನ್ನು ಸಹ ನಮ್ಮ ಹಡಪದ ಅಪ್ಪಣ (ಕ್ಷೌರಿಕ) ಸಮಾಜದ ಜನರಿಗೆ (ಜನತೆಗೆ) ಮಾಡಿಸಿಕೊಡಲಾಗಿದೆ. ಹಾಗೇಯೆ ರಕ್ತದಾನದ ಕುರಿತು ಜಾಗೃತಿ ಮೂಡಿಸಿಕೊಂಡು ರಕ್ತಧಾನ ಶಿಭಿರ. ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ.
ಕಾಯಕದಲ್ಲಿಯೇ ಶ್ರೇಷ್ಠವಾದ. ಕಾಯಕ ನಮ್ಮ ಹಡಪದ ಅಪ್ಪಣ (ಕ್ಷೌರಿಕ) ಸಮಾಜದ ‘ಕ್ಷೌರಿಕ” ವೃತ್ತಿಯ ಸೇವೆಯ ಮೂಲಕ ಅನಾಥರಿಗೆ.
ನಿರ್ಗತಿಕರಿಗೆ. ಅಂಗವಿಕಲರಿಗೆ.
ಅಂಧರಿಗೆ. ಪೌರ ಕಾರ್ಮಿಕರಿಗೆ.ಬುದ್ದಿಮಾಧ್ಯರಿಗೆ. ಕಟ್ಟಡ್ ಕಾರ್ಮಿಕರಿಗೆ.
ಮೂಕರಿಗೆ. ಸಾಧು-ಸಂತರಿಗೆ.
ಕಿವುಡರಿಗೆ.ಅನಾಥ ಶಾಲಾ ಮಕ್ಕಳಿಗೆ ಉಚಿತ ಕ್ಷೌರ ಸೇವೆ (ಪ್ರೀಯಾಗಿ ) ಸೇವೆ ನೀಡಿದರೆ ಅದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ.
ಯಾಕೆಂದರೆ ಅನಾಥರಿಗೆ ನೀಡುವ ಉಚಿತ ಸೇವೆಯಿಂದ ಸುಂದರ ಮಾನವ ಪ್ರಜೆಯನ್ನು ಸೃಷ್ಟಿಸಬಹುದು . ಇವರು ಸಹ ಆರೋಗ್ಯವಂತರಾಗಿ ಈ ನಿರ್ಗತಿಕರು .
ಬುದ್ದಿ ಮಾದ್ಯರು ಅವರ ಕುಟುಂಬವನ್ನು ಸೇರಿ ಚೆನ್ನಾಗಿ ಜೀವನ ನಡೆಸಲಿ. ಎಂದು ಭಗವಂತನಲ್ಲಿ ಪ್ರಾರ್ಥನೆ. ಈ ಹಿನ್ನೆಲೆಯಲ್ಲಿ ಡಾ ಮಲ್ಲಿಕಾರ್ಜುನ ಅವರು ತಮ್ಮ ಹಡಪದ ಸಮಾಜದ ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸಮಾಜವನ್ನು ಸಂಘಟನೆಯ ಮೂಲಕ ಸಮಾಜ ಸೇವೆ ಮಾಡುತ್ತಾ. ಮತ್ತು ಕನಸಿನ್ ಭಾರತ್ ಪತ್ರಿಕೆಯ ವರದಿಯಲ್ಲಿ ವರದಿಗಾರರಾಗಿ ಪತ್ರಿಕಾ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಾ. ಈ ವಿಭಿನ್ನ ರೀತಿಯ ತಮ್ಮ ವೃತ್ತಿಯಲ್ಲಿ ಯೇ ಉಚಿತ ಕ್ಷೌರ ಸೇವೆಯನ್ನು . ತಮ್ಮ ಹಡಪದ ಅಪ್ಪಣ (ಕ್ಷೌರಿಕ) ಸಮಾಜದ (ಸಂಘದ) ಮೂಲಕ ಅವರು ಸಮಾಜದ ಜನರನ್ನು ಕೈ ಜೋಡಿಸಿ ಟೀಮ್ ವರ್ಕ ಆಗಿ ಒಟ್ಟು 13 ಕಡೆಯಲ್ಲೂ ಸೇರಿದಂತೆ ಒಟ್ಟು “ಉಚಿತ ಕ್ಷೌರ ಸೇವೆ’ ಸುಮಾರು 1350 ಕ್ಕೊ ಹೆಚ್ಚು ನಿರ್ಗತಿಕರಿಗೆ ಪ್ರೀಯಾಗಿ ಸೇವೆ ನೀಡುತ್ತಾ ಬರುತ್ತಿದ್ದಾರೆ.
2016ರಲ್ಲಿ ಲಕ್ಷ್ಮೀ ಹಡಪದ ಬಗದುರಿ ಎಂಬುವರೊಂದಿಗೆ. ವಿವಾಹವಾದ ಬಳಿಕ ಅವರು ಈ ರೀತಿಯ ವಿಭಿನ್ನ ಸಮಾಜದ ಕಾರ್ಯ ಚಟುವಟಿಕೆಗಳನ್ನು .ಮತ್ತು ಸಮಾಜದಲ್ಲಿ ಅನೇಕ ಹೋರಾಟಗಳನ್ನು , ಜಿಲ್ಲಾ ಪದಾಧಿಕಾರಿಗಳ ಜೊತೆಯಲ್ಲಿಯೇ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ ಸಮಾಜದ ಸಂಘಟನಾ ಕಾರ್ಯದರ್ಶಿ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ಮುನ್ನೆಡೆಸುತ್ತಿದ್ದಾರೆ.
ಈ ಉಚಿತ ಕ್ಷೌರ ಸೇವೆ ಗೆ ಅನೇಕ ರಾಜ್ಯ ಮಟ್ಟದ ಮತ್ತು ಜಿಲ್ಲಾ ಹಾಗೂ ತಾಲೂಕ ಮಟ್ಟದ, ಅಂತರ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು .ಹಾಗೆಯೇ ಗೌರವ ಡಾಕ್ಟರೇಟ್ ಪ್ರಶಸ್ತಿಯ ಜೊತೆಗೆ ಅನೇಕ ಹರಿಯಾಣ.ಉತ್ತರ ಪ್ರಧೇಶ.ಮದ್ಯಪ್ರಧೇಶ.ದೆಹಲಿ. ರಾಜಸ್ಥಾನದ ಜೈಪೂರ ರಾಜ್ಯ ಹಾಗೂ ಬೇರೆ ಬೇರೆ ರಾಜ್ಯದ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಯ ಸರ್ಟಿಪೀಕೆಟ್ ಗಳನ್ನು ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರ ಮುಡಿಗೇರಿವೆ.
ಈ ನಿಮ್ಮ ಹಡಪದ ಅಪ್ಪಣ ಸಮಾಜದ ಕಂದನ ಮೇಲೆ ಎಲ್ಲಾ ಬಂಧುಗಳ ಶುಭ ಹಾರೈಕೆ.ಆಶೀರ್ವಾದ ಇರಲಿ ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷರ ಹಾಗೂ ಜಿಲ್ಲಾ ಪದಾಧಿಕಾರಿಗಳ ಮತ್ತು ಅನೇಕ ತಾಲೂಕಿನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ.ಮತ್ತು ಸಮಾಜದ ಯುವಕ ಮಿತ್ರರ ಸಹಾಯ ಸಹಕಾರ ನಿಮ್ಮ.ಪ್ರೀತಿ.ವಿಶ್ವಾಸ್ ಈ ಹಡಪದ ಅಪ್ಪಣ ಸಮಾಜದ ಸೇವಕನ ಮೇಲೆ ಇರಲಿ ಎಂದು ಸಮಸ್ತ ಹಡಪದ ಸಮಾಜದ ಬಂಧುಗಳಲ್ಲಿ .ಹಾಗೂ ಆತ್ಮೀಯ ಯುವಕ ಮಿತ್ರರಿಗೊ ತಮ್ಮೆಲ್ಲರಿಗೊ ಮತ್ತೊಮ್ಮೆ ಅನಂತ್ ಧನ್ಯವಾದಗಳು ಕೋರುವೆ ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ. ಮತ್ತು ಹಡಪದ ಸಮಾಜದ ನಿಸ್ವಾರ್ಥಿಯ ಸಮಾಜ ಸೇವಕರು.
“ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಇನ್ನೊಂದು ಗರಿ”
ಕುಮಟಾ :-ಯು ಜಿ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ ದಿಶಾ ಮಾಸ್ತಿ ಕಟ್ಟ720ಕ್ಕೆ 626 ಅಂಕ ಗಳಿಸಿದರೆ ಕುಮಾರ್, ಚಿನ್ಮಯ್ ವಿಷ್ಣು ಭಟ್ಟ 720ಕ್ಕೆ 622 ಅಂಕ ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಇವರ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ. ಜಿ ಹೆಗಡೆ, ಪ್ರಾಚಾರ್ಯರಾದ ಶ್ರೀ ಡಿ .ಎನ್ ಭಟ್ಟ , ಉಪನ್ಯಾಸಕವೃಂದದವರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ