ರೂರಲ್ ಐಟಿ ಕ್ವಿಜ್‌ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ

ರೂರಲ್ ಐಟಿ ಕ್ವಿಜ್‌ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ

Share

ಪಾಂಡವಪುರ : ತಾಲೂಕಿನ ಎಸ್‌ಟಿಜಿ ಪಬ್ಲಿಕ್ ಶಾಲೆಯಲ್ಲಿ ೧೦ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಎಂ.ಜಯAತ್ ಅವರು ಟಿಸಿಎಸ್ ಕಂಪನಿಯವರು ನಡೆಸುವ ರೂರಲ್ ಐಟಿ ಕ್ವಿಜ್‌ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಮೈಸೂರು ವಿಭಾಗದಿಂದ ವಿಭಾಗೀಯ ಮಟ್ಟದ ಐಟಿ ಕ್ವಿಜ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಕ್ವಿಜ್‌ನಲ್ಲಿ ಒಟ್ಟು ೯ ಜಿಲ್ಲೆಗಳಿಂದ ಭಾಗವಹಿಸಿದ ಒಟ್ಟು ೧೩೫ ವಿದ್ಯಾರ್ಥಿಗಳಿಂದ ೬ ವಿದ್ಯಾರ್ಥಿಗಳಲ್ಲಿ ಮಂಡ್ಯ ಜಿಲ್ಲೆಯಿಂದ ಪ್ರಥಮ ಸ್ಥಾನದಲ್ಲಿ ಎಂ.ಜಯAತ್ ಆಯ್ಕೆಯಾಗಿದ್ದಾರೆ. ಕ್ವಿಜ್‌ನಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಎಂ.ಜಯAತ್ ಅವರನ್ನು ಎಸ್‌ಟಿಜಿ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವರ್ಗ, ಆಡಳಿತ ಮಂಡಳಿ, ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ಲೋಕೇಶ್, ವಿದ್ಯಾರ್ಥಿ ತಂದೆ ಕೆ.ಆರ್.ಮೋಹನ, ಐಸಿಟಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಮತ್ತು ಸಂಪನ್ಮೂಲ ವ್ಯಕ್ತಿ ಕೆ.ಆರ್.ಪೇಟೆ ಹಾಗೂ ತಾಯಿ ಎಸ್.ವೈ.ಅನಿತಾ, ಶಿಕ್ಷಣ ಸಂಯೋಜಕರು ಪಾಂಡವಪುರ ಅವರುಗಳು ಅಭಿನಂದಿಸಿದ್ದಾರೆ.


Share