ಮಂಡ್ಯ ಟು ಇಸ್ರೇಲ್

ಮಂಡ್ಯ ಟು ಇಸ್ರೇಲ್

Share

ಪಾಂಡವಪುರ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಿದ್ದ `ಮಂಡ್ಯ ಟು ಇಸ್ರೇಲ್’ ವೈಜ್ಞಾನಿಕ ಕೃಷಿಯ ಸುತ್ತ ಪಕ್ಷಿನೋಟ ಸಂವಾದ ಕಾರ್ಯಕ್ರಮದಲ್ಲಿ ಪ್ರಗತಿಪರ ರೇಷ್ಮೆ ಕೃಷಿಕ ನವೀನ್ ಸಂಗಾಪುರ ಮಾತನಾಡಿದರು. ಮತ್ತೊಂದು ಚಿತ್ರದಲ್ಲಿ ಇಸ್ರೆಲ್ ಕೃಷಿಯ ವಿಡಿಯೋ ಚಿತ್ರೀಕರಣದೊಂದಿಗೆ ರೈತರಿಗೆ ನವೀನ್ ಸಂಗಾಪುರ ತಿಳಿಸಿಕೊಟ್ಟ ದೃಶ್ಯ.

ಪಾಂಡವಪುರ : ಇಸ್ರೇಲ್ ದೇಶದ ಕೃಷಿ ಬಹಳ ಅದ್ಭುತವಾಗಿದೆ. ಸಂಪೂರ್ಣವಾಗಿ ವೈಜ್ಞಾನಿಕ ಕೃಷಿಯಿಂದ ಅವರು ಜಗತ್ತಿನ ಬಹುಪಾಲು ರಾಷ್ಟçಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಗಳಿಸುತ್ತಾರೆ ಎಂದು ಪ್ರಗತಿಪರ ರೇಷ್ಮೆ ಕೃಷಿಕ ನವೀನ್ ಸಂಗಾಪುರ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಿದ್ದ `ಮಂಡ್ಯ ಟು ಇಸ್ರೇಲ್’ ವೈಜ್ಞಾನಿಕ ಕೃಷಿಯ ಸುತ್ತ ಪಕ್ಷಿನೋಟ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದಕ್ಕೆ ಪೂರಕವಾಗಿ ಅಲ್ಲಿನ ಸರ್ಕಾರ ರೈತರಿಗೆ ಅಗತ್ಯವಾದ ವಿದ್ಯುತ್, ನೀರು ಇತರೆ ಸೌಲಭ್ಯಗಳನ್ನು ವ್ಯತ್ಯಾಸವಿಲ್ಲದೆ ಒದಗಿಸುತ್ತದೆ. ಇದರಿಂದ ರೈತರು ಯಾವುದೇ ಆತಂಕವಿಲ್ಲದೆ ಕೃಷಿಯಲ್ಲಿ ಲಾಭಗಳಿಸುತ್ತಿದ್ದಾರೆ ಎಂದರು.
ಹನಿ ನೀರಾವರಿ ಯೋಜನೆ ಇಸ್ರೇಲ್ ಕೃಷಿಯ ಯಶಸ್ಸಿನ ಗುಟ್ಟಾಗಿದೆ. ಭತ್ತ, ಗೋದಿಯ ಜತೆ ವಿವಿಧ ಹಣ್ಣುಗಳನ್ನು ಅಂತಾರಾಷ್ಟಿçÃಯ ಗುಣಮಟ್ಟದಲ್ಲಿ ಬೆಳೆಯಲಾಗುತ್ತದೆ. ಅಲ್ಲದೇ ಇಲ್ಲಿನ ಮೀನು ಸಾಕಾಣಿಕೆ ಪದ್ಧತಿಯೂ ಅಮೋಘವಾಗಿದೆ. ಹೈನುಗಾರಿಕೆಯಲ್ಲೂ ಇಸ್ರೇಲ್ ಅದ್ಭುತ ಸಾಧನೆ ಮಾಡಿದೆ ಎಂದು ತಿಳಿಸಿದರು.
ನಮ್ಮ ರೈತರು ತಮ್ಮ ಬೆಳೆಗಳನ್ನು ಅಂತಾರಾಷ್ಟಿçÃಯ ಗುಣಮಟ್ಟದಲ್ಲಿ ಬೆಳೆದಾಗ ಮಾತ್ರ ಲಾಭ ಗಳಿಸಲು ಸಾಧ್ಯ. ಭಾರತದ ಕೃಷಿ ವಿಧಾನದಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕು. ಜನರು ಇಲ್ಲಿನ ಪಾರಂಪರಿಕ ಕೃಷಿ ಪದ್ಧತಿಯ ಜತೆಗೆ ಕಾಲಾನುಕಾಲಕ್ಕೆ ಬದಲಾಗುವ ವೈಜ್ಞಾನಿಕ ಕೃಷಿಗೆ ತಮ್ಮನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಹಸಿಲ್ದಾರ್ ಪ್ರಮೋದ್ ಎಲ್.ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿ ಪ್ರಧಾನವಾದ ಪಾಂಡವಪುರ ತಾಲೂಕಿನಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡುವವರ ಸಂಖ್ಯೆ ತೀರಾ ಕಡಿಮೆ. ನವೀನ್ ಸಂಗಾಪುರ ಅವರಂತಹ ಪ್ರಗತಿಪರ ರೈತರು ಸಂವಾದ, ಚರ್ಚೆ, ಗೋಷ್ಠಿಗಳ ಮೂಲಕ ರೈತರನ್ನು ವೈಜ್ಞಾನಿಕ ಪದ್ಧತಿಗೆ ಆಕರ್ಷಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಪ್ರಗತಿಪರ ರೈತರಾದ ಬೆಳ್ಳಾಳೆ ಮಲ್ಲೇಶ್, ಎಚ್.ಎಲ್.ನಂಜೇಗೌಡ, ಎಚ್.ಆರ್.ಧನ್ಯಕುಮಾರ್, ಸಾಹಿತಿ ಚಂದ್ರಶೇಖರಯ್ಯ, ಶಿಕ್ಷಕರಾದ ಪ.ಮ.ನಂಜುAಡಸ್ವಾಮಿ, ಪ್ರಕಾಶ್ ಮೇನಾಗರ, ಅಮಿತ್ ಕ್ಯಾತನಹಳ್ಳಿ ಇತರರಿದ್ದರು.
ಸಂವಾದದಲ್ಲಿ ನವೀನ್ ಸಂಗಾಪುರ ಅವರು ಕೃಷಿಯನ್ನು ವೈಜ್ಞಾನಿಕವಾಗಿ ಅನುಸರಿಸುವÀ ಮೂಲಕ ಸರಳ ಹಾಗೂ ಲಾಭಕರವಾಗಿ ಮಾಡಿಕೊಳ್ಳಬಹುದು ಎಂದು ನವೀನ್ ಸಂಗಾಪುರ ಅವರು ಸುದೀರ್ಘವಾಗಿ ರೈತರಿಗೆ ಮಾರ್ಗದರ್ಶನ ಮಾಡುವ ಮೂಲಕ ತಮ್ಮ ಇಸ್ರೇಲ್ ಪ್ರವಾಸದ ಕೃಷಿ ಅನುಭವಗಳನ್ನು ಹಂಚಿಕೊAಡರು. ರೇಷ್ಮೆ ಸಹಾಯಕ ನಿರ್ದೇಶಕ ರವಿಕುಮಾರ್, ರೈತ ಬೋಳಾರಿಗೌಡ, ಡಾ.ಕೆ.ವೈ.ಶ್ರೀನಿವಾಸ್ ಇತರರು ಸಂವಾದದಲ್ಲಿ ಪ್ರಶ್ನೆಗಳನ್ನು ಕೇಳಿದರು.


Share