ಎಲ್ಲಿದ್ದೇ ಇಲಿಯತನಕ-ಸೋಗಲಾಡಿ ರಾಜಕಾರಣ

ಎಲ್ಲಿದ್ದೇ ಇಲಿಯತನಕ-ಸೋಗಲಾಡಿ ರಾಜಕಾರಣ

Share

ಕರ್ನಾಟಕ ವಿಧಾನ ಸಭೆಯ ಅವಧಿಯು ಮೇ 2023ಕ್ಕೆ ಮುಗಿಯುತ್ತದೆ.ಇದರ ಮಧ್ಯ ಕೇಲವು ರಾಜಕಾರಣಿಗಳು ಮತ್ತು ರಾಜಕೀಯ ಚಿಂತಕರ ಅಭಿಪ್ರಾಯದಂತೆ ಇದೇ ವರ್ಷ ನವಂಬರ್ ಅಥವಾ ಡಿಸೆಂಬರ್‍ನಲ್ಲಿ ಚುನಾವಣೆ ನಡೆಯಬಹುದು ಅಂತ ರಾಜಕೀಯ ವಲಯದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ. ಬಿಜೆಪಿಯು ಕೂಡಾ ಸಂಪುಟ ವಿಸ್ತರಿಸುವ ಬದಲಿಗೆ ಚುನಾವಣೆಗೆ ಹೋಗುವ ಇಂಗಿತ ವ್ಯಕ್ತವಾದಂತೆ ಕಾಣುತ್ತದೆ. ರಾಜ್ಯ ಸೇರಿದಂತೆ ದೇಶದಲ್ಲಿ ಈ ಹಿಂದಿನ 4 ವರ್ಷಗಳಲ್ಲಿ ಹಲವಾರು ಬದಲಾವಣೆಗಳು ಕಂಡುಬಂದಿವೆ. ಕರೋನ ಇಡೀ ಜಗತ್ತನ್ನು 15ರಿಂದ 20 ವರ್ಷ ಹಿಂದಕ್ಕೆ ಒಯ್ಯುವ ಜೊತೆಗೆ ಮಾನವಕುಲಕ್ಕೆ ಭಯದ ಪರಿಚಯ ಮಾಡಿಸಿದೆ. ಇದು ದೇಶ ಮತ್ತು ರಾಜ್ಯದಲ್ಲೂ ನಡೆದಿದ್ದು, ಅಭಿವೃದ್ಧಿ ಮಾಡುವುದಕ್ಕಿಂತ ಬದುಕುವುದು ಮತ್ತು ಬದುಕಿಸುವುದೇ ದೊಡ್ಡ ಸಾಧನೆ ಆಗಿತ್ತು ಕರೋನ ಮೊದಲ ಅಲೆಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಕೊಟ್ಟಿತ್ತು ಎರಡನೆಯ ಅಲೆಗೆ ಕರ್ನಾಟಕ ಸ್ಭೆರಿಂದಂತೆ ಭಾರತವು ಸಿದ್ದವಾಗಿತ್ತು. ಈಗ ಮತ್ತೆ ಮೂರನೆಯ ಅಲೆಯ ಸದ್ದು ಮಾಡುತ್ತಿದೆ. ಇದರ ಮಧ್ಯ ಚುನಾವಣೆಗಳು ರಾಜಕಾರಣಿಗಳ ಪಕ್ಷಾಂತರ, ಅಧಿಕಾರಕ್ಕಾಗಿ ರಸ್ತೆಗಿಳಿದು ಜಗಳ ಹೀಗೆ ಮಾಡುತ್ತಾ ಕಾಲಕಳೆದ ರಾಜಕಾರಣಿಗಳು ಚುನಾವಣೆ ಹತ್ತಿರ ಬರುತ್ತಲ್ಲೆ ಜನರತ್ತ ಮುಖ ಮಾಡಿದ್ದಾರೆ. ಜೀವನವನ್ನೆ ನಡೆಸಲು ಕಷ್ಟವಾದಾಗ, ತಮ್ಮವರೇ ಸತ್ತಾಗ ಮುಖ ನೋಡಲು ಆಗದಿದ್ದಾಗ ಮತ್ತು ಬದುಕುವುದಕ್ಕಿಂತ ಸಾಯುವುದೇ ಮೇಲು ಅಂತ ಅನ್ನಿಸಿದ್ದಾಗ ಕಾಣದ ರಾಜಕಾರಣಿಗಳು ಈಗ ಕಷ್ಟ ಕೇಳಲು ಮನೆಗೆ ಬರುತ್ತಿದ್ದಾರೆ.
ಬಿಜೆಪಿ,ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆಯ ತಯಾರಿಗೆ ಸಿದ್ದತೆ ನಡೆಸುತ್ತಿವೆ. ಕಾಂಗ್ರೇಸ್ ಪಕ್ಷವು ಮೇಕೆದಾಟು ಹೋರಾಟ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಹೇಳಿಕೆಗಳು ಮತ್ತು ಹೋರಾಟಗಳು 2023 ಚುನಾವಣೆಗೆ ಬೆಂಬಲವಾಗಿವೆ ಹೊರತು ರಾಜ್ಯಕ್ಕೆ ಅನುಕೂಲವಾಗಲಿ ಅಂತ ಇಲ್ಲ. ಇನ್ನೂ ಜೆಡಿಎಸ್‍ವು ಜನತಾ ಜಲಧಾರೆ ಎಂಬ ಕಾರ್ಯಕ್ರಮ ರೂಪಿಸಿಕೊಂಡು ಜನತೆಯ ಹತ್ತಿರವಾಗುತ್ತಿದ್ದಾರೆ. ಕುಮಾರಸ್ವಾಮಿ ಅದೇ ಹಳೆಯ ವರ್ಷೆ ಪ್ರಾರಂಭಿಸಿದ್ದಾರೆ- ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೆ ಪಕ್ಷವನ್ನು ವಿಸರ್ಜಸುತ್ತೇವೆ ಅನ್ನುತ್ತಲ್ಲೆ ಕಣ್ಣಿರು ಹಾಕುತ್ತಿದ್ದಾರೆ. ಹಿಂದೆ ಯಡ್ಡಿಯೂರಪ್ಪ ಅಧಿಕಾರ ನೀಡದೇ ಮೋಸ ಮಾಡಿದ ಕುಮಾರಸ್ವಾಮಿ ಮತ್ತು ಕಾಂಗ್ರೇಸ್‍ಗೂ ಅನ್ಯಾಯ ಮಾಡಿದ್ದಾರೆ ಆದರೂ ಕೂಡ ತಾವು ಅತ್ಯಂತ ಪ್ರಾಮಾಣಿಕ ಸಿದ್ದಾಂತವಾದಿ ರಾಜಕಾರಣಿಯಂತೆ ಪೋಜ್ ಕೋಡುತ್ತಿದ್ದಾರೆ. ತಾವೇ ಮುಖ್ಯಮಂತ್ರಿಯಾದಾಗ ಕೇಳಿದ ಸಮಸ್ಯೆಗಳನ್ನು ಬಗ್ಗೆ ಹರಿಸದೇ ಈಗ ಅವುಗಳನ್ನೆ ಕಾಂಗ್ರೇಸ್ ಮತ್ತು ಬಿಜೆಪಿ ಮೇಲೆ ಹಾಕುತ್ತಾ ಜನರನ್ನು ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.ಕುಮಾರ ಸ್ವಾಮಿ ಒಮ್ಮೆ ಬಿಜೆಪಿ ವಿರೋಧಿಸಿದ್ದರೆ ಮತ್ತೊಮ್ಮೆ ಹೋಗಳುತ್ತಾರೆ. ಇತ್ತ ಕಾಂಗ್ರೇಸ್ ಜೊತೆಗೂ ಅದೇ ರೀತಿ ನಡೆದುಕೊಳ್ಳುತ್ತಾರೆ. ಜೆಡಿಎಸ್ ಪಕ್ಷವು ಕನ್ನಡಿಗರ ಪಕ್ಷ ಅನ್ನುವುದಕ್ಕಿಂತ ದೇವೆಗೌಡರ ಕುಟುಂಬ ಪಕ್ಷ ಅನ್ನಬಹುದು. ಕುಮಾರಸ್ವಾಮಿಯ ನಾಟಕಗಳು ಚುನಾವಣೆ ಹತ್ತಿರವಾಗುತ್ತಲ್ಲೆ ಹೆಚ್ಚಾಗುತ್ತವೆ. ಇದೇ ಸಾಲಿನಲ್ಲಿ ಆಮ್ ಆದ್ಮೀ ಪಕ್ಷ ಮತ್ತು ಕೆ.ಆರ್.ಎಸ್ ಪಕ್ಷಗಳು ಕೂಡ ಚುನಾವಣೆ ಗೆಲ್ಲಬೇಕು ಅನ್ನುವ ಒಚಿದೇ ಕಾರಣಕ್ಕೆ ಒಂದಿಷ್ಟು ಕ್ರಿಯಾಶೀಲವಾಗಿ ಕಾಣುತ್ತಿವೆ.ಇಲ್ಲಿಯವರೆಗೆ ಸುಮ್ಮನಿದ್ದು ಚುನಾವಣೆ ಹತ್ತಿರ ಬರುತ್ತಲ್ಲೆ ಹೋರಾಟ, ಸೇವೆ ಮತ್ತು ಕಾರ್ಯಕ್ರಮಗಳು ಮತ್ತು ಭವಿಷ್ಯದ ದೃಷ್ಠಿಕೋನಗಳು ಹೀಗೆ ಹೇಳುತ್ತಾ ಜನರಿಗೆ ಹತ್ತಿರವಾಗುತ್ತಿರುವ ರಾಜಕಾರಣಿಗಳ ಸೋಗಲಾಡಿತನವನ್ನು ಜನ ಅರ್ಥ ಮಾಡಿಕೊಳ್ಳಬೇಕು. ಹಿರಿಯ ಕಿರಿಯ ರಾಜಕಾರಣಿಗಳು ಕ್ಷೇತ್ರ ಸುತ್ತುವ ಜೊತೆಗೆ ಜನರ ಮನೆ ಬಾಗಲಿಗೆ ಹೋಗುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಸಮಯಸಾಧಕರು ತಮ್ಮ ಲಾಭಕ್ಕಗಿ ಜನರನ್ನು ಮರಳು ಮಾಡಲು ಬರುತ್ತಿದ್ದಾರೆ.
ಚುನಾವಣೆ ಹತ್ತಿರ ಬರುತ್ತಲ್ಲೆ ಹೊಸ ಪಕ್ಷಗಳು ಹುಟ್ಟಿಕೊಳ್ಳುತ್ತವೆ, ಯುವ ನಾಯಕರು ಹುಟ್ಟಿಕೊಳ್ಳುತ್ತಾರೆ, ಸಮಾಜ ಸೇವಕರು ಹುಟ್ಟಿಕೊಳ್ಳುತ್ತಾರೆ ಹಾಗೂ ಪತ್ರಿಕೆಗಳು ಮಾಧ್ಯಮಗಳು ಹುಟ್ಟಿಕೊಳ್ಳುತ್ತವೆ ಚುನಾವಣೆ ಮುಗಿದ ನಂತರ ಎಲ್ಲವು ಮಾಯ ! ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪ್ರಾದೇಶಿಕ ಪಕ್ಷಗಳು ಮತ್ತು ಹೊಸ ಪಕ್ಷಗಳು ಚುನಾವಣೆಗೆ ಕೊಡುವಷ್ಟು ಮಹತ್ವವನ್ನು ಅಭಿವೃದ್ದಿಗೆ ನೀಡಿದ್ದರೆ ಸಮಸ್ಯೆಮುಕ್ತ ಜಗತ್ತಿನ ನಂಬರ್ ಒನ್ ದೇಶ ನಮ್ಮದಾಗಿರುತ್ತಿತ್ತು.ಜನ ಮರಳೋ ಜಾತ್ರೆ ಮರಳೋ ಅನ್ನುವಂತೆ ಜನತೆಯನ್ನು ಮರಳು ಮಾಡುತ್ತಿದ್ದಾರೆ ರಾಜಕಾರಣಿಗಳು. ಚುನಾವಣೆ ದೂರ ಇರುವಾಗ ಒಂದು ರೂಪಾಯಿ ಖರ್ಚು ಮಾಡದ ರಾಜಕಾರಣಿಗಳು ಚುನಾವಣೆ ಬರುತ್ತಲ್ಲೆ ಕೋಟಿ-ಕೋಟಿ ಖರ್ಚು ಮಾಡುತ್ತಾರೆ.ಕೇಳಿದ್ದು ಕೊಡುತ್ತಾರೆ. ಹೀಗೆ ಚುನಾವಣೆಗೆಗಾಗಿ ಚರ್ಚು ಮಾಡುವುದನ್ನೆ ಕೇಲವರು ಭವಿಷ್ಯದ ದೃಷ್ಟಿ ಅಥವಾ ಸಮಾಜಸೇವೆ ಅಂತ ಹೇಳುತ್ತಾರೆ.ಚುನಾವಣೆ ಮುಗಿದ ನಂತರ ನಾಪತ್ತೆ ಆಗುವ ರಾಜಕಾರಣಿಗಳು ಅಂದರೆ ಗೆದ್ದªರು ಸೋತ್ತವರು ಇಬ್ಬರು ಅಷ್ಟೆ ಏಕೆಂದರೆ ಒಂದೇ ಬಾವಿಯ ಕಪ್ಪೆಗಳಂತೆ ಈ ರಾಜಕಾರಣಿಗಳ ಬುದ್ದಿ.
ಚುನಾವಣೆಯ ಪ್ರಣಾಳಿಕೆ ಹೆಸರಿನಲ್ಲಿ ಜನತೆಗೆ ಹಲವಾರು ಆಶೆ ತೋರಿಸಿ ಮತ ಕಿತ್ತುಕೊಳ್ಳುತ್ತಾರೆ,ಕೆಲವರಿಗೆ ಹಣ ಹೆಚಿಡ ಬಟ್ಟೆ ಕುಕ್ಕರ್ ಇತ್ಯಾದಿ ಕೊಟ್ಟು ಕೊಂಡುಕೊಳ್ಳುತ್ತಾರೆ.ಹೀಗೆ ಮಾರಿದ ಅಥವಾ ಆಸೆಯಿಂದ ಕೊಟ್ಟ ಮತದಿಂದ ಕೊಳ್ಳೆಹೊಡೆಯುತ್ತಾರೆ.ಕಷ್ಟಕ್ಕೆ ಬರದ ರಾಜಕಾರಣಿಗಳು ಇನ್ನು ಮುಂದೆ ಬರುತ್ತಾರೆ ಏಕೆಂದರೆ 2023ಕ್ಕೆ ಚುನಾವಣೆಗಾಗಿ ಇದು ಹೇಗೆ ಅಂದರೆ ಅಂದು ಬ್ರಿಟಿಷರು ವ್ಯಾಪಾರಕ್ಕಾಗಿ ಬಂದು ದೇಶ ಆಳಿದರು ಇಂದು ಸಹಾಯ ಮಾಡುತ್ತೇವೆ ಅಥವಾ ಕನಸು ತುಂಬಿ ದೇಶ ಲೂಟಿ ಮಾಡುವ ಪ್ರಬುದ್ಧ ಕ್ರಿಮೀನಲ್ ಬರುತ್ತಾರೆ ಈಗಲಾದರೂ ಎಚ್ಚರದಿಂದ ಇರಿ. ಭವಿಷ್ಯದ ಅಭಿವೃದ್ಧಿಗಾಗಿ ಮತನೀಡಿ-ಪ್ರಜಾಪ್ರಭುತ್ವ


Share