ಪವನಮುಕ್ತಾಸನ ಭಾಗ ೧ ಸಂಧಿವಾತ ನಿರೋಧ ಗುಂಪು

ಪವನಮುಕ್ತಾಸನ ಭಾಗ ೧ ಸಂಧಿವಾತ ನಿರೋಧ ಗುಂಪು

Share

ಈ ಗುಂಪಿನ ಆಸನಗಳು ದೇಹದ ಸಂದು ಅಥವಾ ಕೀಲುಗಳನ್ನು ಸಡಿಲಗೊಳಿಸುವುದಕ್ಕೆ ಸಂಬAಧಿಸಿವೆ. ಸಂಧಿವಾತ, ವಾತರೋಗ, ರಕ್ತದ ಒತ್ತಡ, ಹೃದ್ರೋಗಗಳು ಮತ್ತು ಇತರೆ ಖಾಯಿಲೆಯವರಿಗೆ ಹಾಗೂ ಹೆಚ್ಚಿನ ದೈಹಿಕ ಶ್ರಮ ಕೂಡದೆಂದು ಹೇಳಲಾಗಿರುವ ವ್ಯಕ್ತಿಗಳಿಗೆ ಅತ್ಯುತ್ತಮವಾಗಿವೆ. ಈ ಆಸನಗಳು ಕೀಲುಗಳಲ್ಲಿ ಮತ್ತು ದೇಹದ ಬಾಹ್ಯ ಅಂಗಗಳಲ್ಲಿ ಚೈತನ್ಯದ ಪ್ರವಾಹಕ್ಕೆ ಇರುವ ಅಡೆತಡೆಗಳನ್ನು ಕಿತ್ತೆಸೆಯುವುದರ ಜೊತೆಗೆ ಪ್ರಾಣಮಯ ಹಾಗೂ ಮನೋಮಯ ಶರೀರಗಳ ಮೇಲೂ ಪರಿಣಾಮ ಬೀರುತ್ತವೆ.
ಗಮನ : ಈ ಅಭ್ಯಾಸಗಳನ್ನು ಮೂರು ವಿಧಾನಗಳಲ್ಲಿ ಮಾಡಬಹುದು :
೧. ವಾಸ್ತವಿಕ ದೇಹ ಚಲನೆಯ ಮೇಲೆ ಗಮನವಿಟ್ಟು ಮಾಡಬಹುದು. ದೇಹದ ವಿವಿಧ ಅಂಗಾAಗಳ ಪರಸ್ಪರಕ್ರಿಯೆ ಅಂದರೆಸ ಎಲುಬು, ಕೀಲು, ಅಸ್ತಿರಜ್ಜು, ಸ್ನಾಯು ಇತ್ಯಾದಿಗಳ ಮೇಲೆ ಗಮನವಿರಿಸಬಹುದು. ದೇಹದ ಇತರ ಅಂಗಾAಗಗಳಿಗೆ ಸಂಬAಧಿಸಿದAತೆ ಗಮನವಿರಿಸಬಹುದು; ಪ್ರತಿಯೊಂದೂ ಪೂರ್ಣಸುತ್ತು ಮುಗಿಯುವ ತನಕ ಮನಸ್ಸಿನಲ್ಲಿ ಎಣಿಕೆ ಮಾಡಬೇಕು. ಜೊತೆಗೆ ಮನಸ್ಸಿನಲ್ಲಿ ಉದ್ಭವಿಸುವ ಆಲೋಚನೆಗಳ ಮೇಲೆ ಗಮನವಿರಿಸಬೇಕು. ಈ ರೀತಿಯ ಅಭ್ಯಾಸವು ಶಾಂತಿ, ಸಮಸ್ಥಿತಿ ಹಾಗೂ ಏಕಾಗ್ರತೆಯನ್ನುಂಟುಮಾಡಿ ದೈಹಿಕ ಶರೀರವನ್ನು ನಿಯಂತ್ರಣಕ್ಕೆ ತರಲು ಸಹಕಾರಿಯಾಗಿದೆ.
೨. ಉಸಿರಾಟದ ಬಗ್ಗೆ ಗಮನ ಹಾಗೂ ಅದನ್ನು ಮೇಳೈಸಿಕೊಳ್ಳುವ ವಿಧಾನ. ಮೇಲೆ ತಿಳಿದಂತೆ ದೈಹಿಕ ಚಲನೆಯ ಮೇಲೆ ಗಮನವಿರಿಸುವ ಜೊತೆಗೆ, ಒಂದೊAದು ಚಲನೆಯೊಂದಿಗೂ ಉಸಿರಾಟವನ್ನು ಮೇಳೈಸಬೇಕು. ಚಲನೆಗಳು ನಿಧಾನವಾಗುತ್ತಾ ಆ ಮೂಲಕ ಮಿದುಳಿನ ತರಂಗಗಳನ್ನು ನಿಧಾನಗೊಳಿಸುತ್ತವೆ. ಇದು ವಿಶ್ರಾಮಸ್ಥಿತಿ ಹಾಗೂ ಗಮನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಅಭ್ಯಾಸ ವಿಧಾನವು ದೈಹಿಕ ಹಾಗೂ ಪ್ರಾಣಮಯ ನೆಲೆಗಳಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ ಮತ್ತು ದೇಹವನ್ನು ಸಾಮರಸ್ಯಗೊಳಿಸಿ ಪುನಶ್ಚೇತನಗೊಳಿಸುವುದಕ್ಕೆ ಮತ್ತು ಆಂತರಿಕ ಅವಯವಗಳ ಕಾರ್ಯವನ್ನು ಸುಧಾರಿಸುವುದಕ್ಕೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಪ್ರತಿಯೊಂದು ಆಸನದ ಸಂದರ್ಭದಲ್ಲಿ ವಿವರಿಸಿರುವ ಪ್ರಕಾರ ಉಸಿರಾಟವನ್ನು ಅಭ್ಯಾಸ ಮಾಡಬೇಕು. ಇದಲ್ಲದೆ ಉಜ್ಜಾಯೀ ಪ್ರಾಣಾಯಾಮ (ಪ್ರಾಣಾಯಾಮ ಅಭ್ಯಾಸದ ಭಾಗವನ್ನು ನೋಡಿ)ವನ್ನು ಉಸಿರಾಟದ ವಿಧಾನವಾಗಿ ಅಭ್ಯಾಸಮಾಡಿ ಇನ್ನೂ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು. ಇದು, ನಾಡಿಗಳಲ್ಲಿ ಪ್ರವಹಿಸುತ್ತಿರುವ ಪ್ರಾಣಮಯ ಚೈತನ್ಯದ ಮೇಲೆ ಪರಿಣಾಮಕಾರಿಯಾದ ಪ್ರಚೋದನೆ ಉಂಟುಮಾಡುತ್ತದೆ ಹಾಗೂ ಸಮತೋಲನವನ್ನು ಸಾಧಿಸುತ್ತದೆ.
೩. ದೇಹದಲ್ಲಿ ಪ್ರಾಣವು ಚಲಿಸುತ್ತಿರುವುದರ ಮೇಲೆ ಗಮನವಿರಿಸುವುದು ಇನ್ನೊಂದು ವಿಧಾನ. ದೇಹದಲ್ಲಿ ಉಂಟಾಗುವ ಕ್ಷಣ ಕ್ಷಣ ಶಬ್ಧದ (ಣiಟಿgಟiಟಿg) ಸಂವೇದನೆಯ ಮೂಲಕ ಪ್ರಾಣದ ಸಂಚಲನೆಯನ್ನು ಅನುಭವಕ್ಕೆ ತಂದುಕೊಳ್ಳಬಹುದು. ಅಭ್ಯಾಸದಲ್ಲಿ ಪಳಗಿದ ಹಾಗೆ ಇದರ ಅರಿವು ಬೆಳೆಯುತ್ತದೆ.
ನಿಯತಕಾಲಿಕ ವಿಶ್ರಾಂತಿ : ಪ್ರತಿ ಎರಡು ಮೂರು ಚಲನೆಗಳ ನಂತರ ಪ್ರಾರಂಭಿಕ ಸ್ಥಿತಿಯಲ್ಲಿ ಅಲುಗಾಡದೆ ಕುಳಿತುಕೊಳ್ಳಿ. ಕಣ್ಣನ್ನು ಮುಚ್ಚಿ. ಸಹಜ ಉಸಿರಾಟದ ಮೇಲೆ, ಆಗಷ್ಟೇ ಚಲಿಸಿದ ದೇಹ ಭಾಗ ಅಥವಾ ಭಾಗಗಳ ಮೇಲೆ ಮತ್ತು ಮನಸ್ಸಿನಲ್ಲಿ ಉಂಟಾದ ಚಿಂತನೆ ಅಥವಾ ಭಾವನೆಗಳ ಮೇಲೆ ಗಮನವಿರಿಸಿ. ಸುಮಾರು ಒಂದು ನಿಮಿಷ ಬಿಟ್ಟು ಪುನಃ ಅಭ್ಯಾಸವನ್ನು ಮುಂದುವರೆಸಿ. ಹೀಗೆ ಮಾಡುವುದರಿಂದ ದೇಹಕ್ಕೆ ವಿಶ್ರಾಂತಿ ಸಿಗುವುದರ ಜೊತೆಗೆ ಆಂತರಿಕ ಚೈತನ್ಯ ವಿನ್ಯಾಸಗಳ ಅರಿವು ಮತ್ತು ಮಾನಸಿಕ ಹಾಗೂ ಭಾವನಾತ್ಮಕ ಪ್ರಕ್ರಿಯೆಗಳ ಅರಿವು ಬೆಳೆಯುತ್ತದೆ. ಈ ವಿಶ್ರಾಂತಿಯ ಭಾಗವೂ ಆಸನಗಳಷ್ಟೇ ಮುಖ್ಯ. ಆದ್ದರಿಂದ ಇದನ್ನು ಕಡೆಗಣಿಸಬಾರದು.
ಆಸನಾಭ್ಯಾಸ ಮಾಡುತ್ತಿರುವ ಯಾವುದೇ ಸಂದರ್ಭದಲ್ಲಿ ಆಯಾಸವೆನ್ನಿಸಿದರೆ ಶವಾಸನದಲ್ಲಿ ವಿಶ್ರಮಿಸಿ. ಆಸನಾಭ್ಯಾಸ ಮುಗಿದ ನಂತರ ಮೂರರಿಂದ ಐದು ನಿಮಿಷಗಳವರೆಗೆ ಶವಾಸನವನ್ನು ಮಾಡಬೇಕು.

 


Share

Leave a Reply

Your email address will not be published. Required fields are marked *