ನಂಜನಗೂಡು: ಅತಿ ವೇಗವಾಗಿ ಬೆಳೆಯುತ್ತಿರುವ ನಂಜನಗೂಡು ಪಟ್ಟಣ ವಾಗಿದ್ದು ತಾಲೂಕು ಕೇಂದ್ರವಾಗಿದೆ. ಚಿಂತಾಮಣಿ ಗಣಪತಿ ದೇವಸ್ಥಾನದ ಮುಂದೆ ಹಲವರು ಹೂ ಮಾರುವ ಕಾಯಕವನ್ನು ಮಾಡಿಕೊಂಡಿದ್ದು ಸುಮಾರು 25 ವರ್ಷಗಳಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ದೇವರ ಕಾರ್ಯವನ್ನು ಹಾಗೂ ಭಕ್ತಾದಿಗಳ ಸೇವೆಯನ್ನು ಹೂ ಮಾರುವುದರ ಮೂಲಕ ಬದುಕನ್ನು ಕಂಡುಕೊಂಡಿದ್ದಾರೆ. ಆದರೆ ಈಗ ಆ ಸ್ಥಳದಲ್ಲಿ ಜನದಟ್ಟಣೆ ಮತ್ತು ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಅಕ್ಷರಸಹ ಸತ್ಯವಾಗಿದೆ. ಆದರೆ ಈಗ ಪಟ್ಟಣ ಸಂಚಾರಿ ಉಪನಿರೀಕ್ಷಕರು ಹೂ ಮಾರುವವರಿಗೆ ಸ್ಥಳವ ಬದಲಾವಣೆ ಮಾಡಿ ಎಂದು ಸೂಚನೆ ನೀಡಿದ್ದು, ಹೂ ಮಾರುವರು ನಮ್ಮ ಜೀವನ ಇದರಲ್ಲೇ ಸಾಗಬೇಕೆಂದು ದೇವಸ್ಥಾನದ ಮುಂದೆ ನಮ್ಮ ಕಾಯಕವನ್ನು ಮುಂದುವರೆಸಲು ಅವಕಾಶ ನೀಡಬೇಕೆಂದು ಪತ್ರಿಕೆಯ ಮೂಲಕ ಭರತ್, ಲಕ್ಷ್ಮಮ್ಮ ಮನವಿ ಮಾಡಿದ್ದಾರೆ.
Category: ಪ್ರಾದೇಶಿಕ
ಗೌರಿ ಗಣೇಶ ಹಬ್ಬದ ಜನ ಸಂಪರ್ಕ ಶಾಂತಿ ಸಭೆ
ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಠಾಣಾಮಟ್ಟದ ಗೌರಿ ಗಣೇಶ ಹಬ್ಬದ ಜನ ಸಂಪರ್ಕ ಶಾಂತಿ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಗೌರಿ ಗಣೇಶ ಹಬ್ಬದ ಆಚರಣೆಯ ಸಲಹೆ ಸೂಚನೆಗಳನ್ನು ತಿಳಿಸಲಾಯಿತು. ಎಲ್ಲರೂ ಗೌರಿ ಗಣೇಶ ಹಬ್ಬವನ್ನು ಶಾಂತಿಯಿಂದ ಸಂಭ್ರಮವಾಗಿ ಆಚರಿಸಬೇಕೆಂದು ಸೂಚನೆ ನೀಡಲಾಯಿತು ಸಭೆಯಲ್ಲಿ ಡಿವೈಎಸ್ಪಿ ರಘು ಹಾಗೂ ಉಪನಿರೀಕ್ಷಕರು ರವೀಂದ್ರ ಹಾಜರಿದ್ದರು. ಪಟ್ಟಣ ಠಾಣೆಯ ಗೌರಿ ಗಣೇಶ ಹಬ್ಬದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
ಇಂಗಳೇಶ್ವರದ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ.
ವಿಜಯಪುರ: ಬಸವನ ಬಾಗೇವಾಡಿ ತಾಲ್ಲೂಕಿನ ಸುಕ್ಷೇತ್ರ ಬಸವ ಜನ್ಮಸ್ಥಳವಾದ ಇಂಗಳೇಶ್ವರ ಗ್ರಾಮದ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವವು ಇದೆ ಡಿಸೆಂಬರ್ 11 ರಿಂದ 18 ರ ವರೆಗೆ ಅದ್ದೂರಿಯಾಗಿ ನಡೆಯಲಿದ್ದು ಈ ವರ್ಷವು ಜಾತ್ರೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 1996 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಳಗದಿಂದ ಯೋಗ ಗುರುಗಳಾದ ಕಾಶಿನಾಥ್ ಅವಟಿ ನೇತೃತ್ವದಲ್ಲಿ ಡಿಸೆಂಬರ್ 9 ರಿಂದ 15 ರವರೆಗೆ ಪ್ರತಿದಿನ ಬೆಳಿಗ್ಗೆ 5:30 ರಿಂದ 7:30ರ ವರೆಗೆ ಯೋಗ ಶಿಬಿರ ನಡೆಯಲಿದೆ.
ದಿನಾಂಕ 11 ರಂದು ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಆಗಮನ ಪಲ್ಲಕ್ಕಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಶ್ರೀ ಬಸವೇಶ್ವರ ಭಜನಾ ಮಂಡಳಿ ಇವರಿಂದ ಭಜನಾ ಸೇವೆ ನಡೆಯಲಿದೆ ಹಾಗೂ ಅನ್ನಪ್ರಸಾದ ನಡೆಯಲಿದ್ದು, ಆದೆ ದಿನ ರಾತ್ರಿ ಚೌಡಕಿಪದಗಳು ಜರುಗಲಿವೆ. ದಿನಾಂಕ 12 ರಂದು ಬೆಳಿಗ್ಗೆ 8 ಗಂಟೆಗೆ ಗೇರ್ ಗಾಡಿಯ ಸ್ಟೋ ಸೈಕಲ್ ಮೋಟರ್ ರೆಸ್, ಸಂಜೆ 4 ಗಂಟೆಗೆ ಚಿನ್ನು ಗ್ರೂಪ್ ವತಿಯಿಂದ ಹಾಲ ಹಲ್ಲಿನ ಟಗರು, ಎರಡು ಹಲ್ಲಿನ ಟಗರು, ನಾಲ್ಕು ಹಲ್ಲಿನ ಟಗರು ಹಾಗೂ ಓಪನ್ ಟಗರಿನ ಕಾಳಗ ನಡೆಯಲಿದೆ. ಸಂಜೆ 7ಗಂಟೆಗೆ 2007ನೇ ಸಾಲಿನ ಎಸ್ ಎಸ್ ಎಲ್ ಸಿ ಗೆಳೆಯರ ಬಳಗದ ವತಿಯಿಂದ ಶ್ರೀ ಕಲಾಗುರು ಮೆಲೋಡಿಸ್ ಇಂಗಳೇಶ್ವರ ಇವರಿಂದ ಹಾಸ್ಯರಸಮಂಜರಿ ಕಾರ್ಯಕ್ರಮ ಜರುಗಲಿದೆ. ದಿನಾಂಕ 13 ರಂದು 2007ನೇ ಸಾಲಿನ ಎಸ್ ಎಸ್ ಎಲ್ ಸಿ ಗೆಳೆಯರ ಬಳಗದ ವತಿಯಿಂದ ಶಿರಗುಪ್ಪಿಯ ಶ್ರೀ ಸ್ವಾಮಿ ವಿವೇಕಾನಂದ ಯೋಗಿಮಂದಿರ ಮಲ್ಲಗಂಬ ತರಬೇತಿ ಕೇಂದ್ರದಿಂದ ಮಲ್ಲಗಂಬ ಪ್ರದರ್ಶನಗೊಳ್ಳಲಿದೆ. ದಿನಾಂಕ 14 ರಂದು ಬೆಳಿಗ್ಗೆ 9 ಗಂಟೆಗೆ ಒಂದು ಎತ್ತು ಒಂದು ಕುದುರೆ ಓಟದ ಸ್ಪರ್ಧೆ ನಡೆಯಲಿದೆ. ಜಿಲ್ಲಾಡಳಿತ ಜಿಲ್ಲಾ ಪಂಚಾಯತ ವಿಜಯಪುರ,ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಬಸವನಬಾಗೇವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕುದುರಿಸಾಲೊಡಗಿ ಹಾಗೂ ಗ್ರಾಮ ಪಂಚಾಯಿತಿ ಇಂಗಳೇಶ್ವರ ಇವರ ಸಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು ಅದೇ ದಿನ ಸಂಜೆ 5 ಗಂಟೆಗೆ 2000ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ 25ನೇ ವರ್ಷದ ಬೆಳ್ಳಿ ಮಹೋತ್ಸವ ಸ್ನೇಹ ಸಮ್ಮಿಲನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ತದನಂತರ ಕೊಣ್ಣೂರಿನ ಜೈ ಕಿಸಾನ್ ಸಂಸ್ಕೃತಿಕ ಮತ್ತು ಜನಪದ ಕಲಾತಂಡದಿಂದ ಜನಪದ ಜಾತ್ರೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ಸಿದ್ದಪ್ಪ ಬಿದರಿಯವರು ಪಾಲ್ಗೊಳ್ಳಲಿದ್ದಾರೆ.
ದಿನಾಂಕ 15 ರಂದು ಬೆಳಿಗ್ಗೆ 8 ಗಂಟೆಗೆ ಜೋಡು ಎತ್ತಿನ ಓಟದ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ರೇವಣಸಿದ್ದೇಶ್ವರ ನವೋದಯ ಮತ್ತು ಸೈನಿಕ ಕೋಚಿಂಗ್ ಕ್ಲಾಸ್ ಇಂಗಳೇಶ್ವರ ವತಿಯಿಂದ ತಾಲೂಕು ಮಟ್ಟದ ರಸಪಶ್ನೆ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 10 ಗಂಟೆಗೆ ಶ್ರೀ ನೆಲಮಾಳಸಿದ್ದೇಶ್ವರ ಡೊಳ್ಳಿನ ಹಾಡಕಿ ಸಂಘ ಇಂಗಳೇಶ್ವರ ಹಾಗೂ ಶ್ರೀ ರೇವಣಸಿದ್ದೇಶ್ವರ ಡೊಳ್ಳಿನ ಹಾಡಿಸಿ ಸಂಘ ಮನಗೂಳಿ ಇವರಿಂದ ಡೊಳ್ಳಿನ ಪದಗಳು ಜರಗುವುದು. ಸಂಜೆ 7:30ಕ್ಕೆ 2003 ನೇ ಸಾಲಿನ ಬಾಲ್ಯದ ಗೆಳೆಯರ ಬಳಗದ ವತಿಯಿಂದ ಜೀ ಕನ್ನಡ ಮಾದರಿಯ ಸರಿಗಮಪ ಗ್ರಾಂಡ್ ಫಿನಾಲೆ ಆದ್ಧೂರಿ ಕಾರ್ಯಕ್ರಮ ಹಾಗೂ ಸಾಧನೆಗೈದ ಸಾಧಕರಿಗೆ ಸನ್ಮಾನ ನಡೆಯಲಿದೆ. ಅದೇ ದಿನ ರಾತ್ರಿ 9ಕ್ಕೆ ಶ್ರೀ ಬಸವೇಶ್ವರ ಭಜನಾ ಮಂಡಳಿ ಇಂಗಳೇಶ್ವರ ಹಾಗೂ ಪ್ರೀತಿಯ ಪಾರಿವಾಳ ಖ್ಯಾತಿಯ ರಮೇಶ್ ಕುರಬಗಟ್ಟಿ ಇವರ ಶ್ರೀ ಜಗದ್ಗುರು ಶ್ರೀ ಶಿವಾನಂದ ಭಜನಾ ಮಂಡಳಿ ಕುರುಬಗಟ್ಟಿ ಇವರಿಂದ ಬಜನಾ ಪದಗಳು ಜರಗಲಿವೆ. ಹೀಗೆ ಇನ್ನೂ ಹಲವಾರು ಕಾರ್ಯಕ್ರಮ ಜರುಗಲಿವೆ ಎಂದು ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಜಾತ್ರಾ ಕಮಿಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಯಮನಪ್ಪ ಚೌಧರಿ
ಕನಕ ಜಯಂತಿ ಕಾರ್ಯಕ್ರಮಕ್ಕೆ ಪಿಡಿಒ ತಿಲಕ್ ರಾಜ್ ಗೈರು ಹಾಜರಿ
ಸಾಲಿಗ್ರಾಮ ಗ್ರಾಮ ಪಂಚಾಯಿತಿ. ಸಾಲಿಗ್ರಾಮ ಗ್ರಾಮ ಪಂಚಾಯತಿಯಲ್ಲಿ ಇಂದು ಕನಕ ಜಯಂತಿ ಇದ್ದರೂ ಕೂಡ ಪಿಡಿಒ ತಿಲಕ್ ರಾಜ್ ಅವರು ಗೈರು ಹಾಜರಾಗಿದ್ದಾರೆ ಆದರೆ ಇದೊಂದು ಕಾರ್ಯಕ್ರಮ ಅಲ್ಲ ಯಾವುದೇ ಕಾರ್ಯಕ್ರಮ ಆದರೂ ಬರೋದಿಲ್ಲ ಆದರೆ ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಫಾತಿಮಾ ಒನ್ನಿಸಾ.ಉಪಾಧ್ಯಕ್ಷರು ಶಶಿಕಲಾ ಶಿವರಾಜ್. ಸದಸ್ಯರುಗಳು ಮಾತ್ರ ಕನಕ ಜಯಂತಿಯನ್ನು ಆಚರಣೆ ಮಾಡಿದರು. ಆದರೆ ತಾಲೂಕು ಪಂಚಾಯಿತಿ ಇಒ ಅವರಿಗೂ ಪಿಡಿಒ ಅವರು ಗೈರು ಹಾಜರಾಗಿರುವ ಬಗ್ಗೆ ಮಾಹಿತಿ ಇರುವುದಿಲ್ಲ. ಎಂದು ತಿಳಿಸಿದ್ದಾರೆ. ಎಸ್ಆರ್ ಪ್ರಕಾಶ್. ಸುಧಾ ರೇವಣ್ಣ. ಹರೀಶ್. ಲೋಕೇಶ್. ಶಕೀಲ್. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು
ಹಲಕರ್ಟಿಯಲ್ಲಿ ಅಂಬಲಿ ಬಿಂದಿಗೆ ಮೆರವಣಿಗೆ
ಚಿತ್ತಾಪೂರ:- ತಾಲೂಕಿನ ವಾಡಿ ಸಮೀಪದ ಹಲಕರ್ಟಿ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಶುಕ್ರವಾರ ಚಿಕ್ಕವೀರಪ್ಪನವರ ಮನೆಯಿಂದ ಮಲ್ಲಯ್ಯನ ದೇವಸ್ಥಾನ ವರೆಗೆ ಅಂಬಲಿ ಬಿಂದಿಗೆಭವ್ಯ ಮೆರವಣಿಗೆ ಜರುಗಿತು. ಊರಿನ ಪ್ರಮುಖ ಓಣಿಯಲ್ಲಿ ಮಲಯ್ಯ ದೇವಸ್ಥಾನಕ್ಕೆ ಮೆರವಣಿಗೆ ತಲುಪಿತು ಮೆರವಣಿಗೆಗೆ ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯರು ಚಾಲನೆ ನೀಡಿದರು. ಶ್ರೀ ಗಳು ಎತ್ತಿನ ಬಂಡಿ ಏರಿ ಮಲಯ್ಯ ದೇವಸ್ಥಾನವರೆಗೆ ಆಗಮಿಸಿದರು.ಡೋಲು, ಬಾಜಾಭಜಂತ್ರಿ, ಭಜನೆ,ಹಲಗಿ ಕುಣಿತ, ದೇವರ ಜಯ ಘೋಷಣೆಯೊಂದಿಗೆ ಜನರು ಮೆರಗು ತಂದರು. ಚಂದ್ರಕಾಂತ್ ಮೇಲಿನಮನಿ. ಶರಣಪ್ಪ ಚಾಗಿ. ನಾಗರಾಜ ಪೂಜಾರಿ. ನಾಗಣ್ಣ ಮುಗುಟಿ. ಬಸವರಾಜ್ ಲೋಕನಳ್ಳಿ. ಅಶೋಕ್ ಛತ್ರಿಕಿ. ಮಲ್ಲಪ ಯಧುರುಮನಿ.ಮಲ್ಲಿಕಾರ್ಜುನ ಬಡಿಗೇರ್. ಶ್ರೀಶೈಲ್ ಬಡಿಗೇರ್ ಅಭಿಷೇಕ್ ಅಂಗಡಿ ಸೇರಿದಂತೆ ಹಲವಾರು ಭಕ್ತರು ಪಾಲ್ಗೊಂಡರು.
ವರದಿ-ಡಾ ಎಮ್ ಬಿ ಹಡಪದ ಸುಗೂರ ಎನ
ರೋಟರಿ ಕ್ಲಬ್ ವತಿಯಿಂದ ಉಚಿತ ಅರೋಗ್ಯ ಶಿಬಿರ ನಡೆಯಿತು
ಕುಮಟಾ :ರೋಟರಿ ಕ್ಲಬ್ ಕುಮಟಾ ಅಯೋಜಿಸಿದ್ದ ಉಚಿತ ಅರೋಗ್ಯ ಪರೀಕ್ಷಾ ಶಿಬಿರವನ್ನು ಖ್ಯಾತ ಶಸ್ತ್ರವೈದ್ಯರಾದ ಡಾ.ಸಚ್ಚಿದಾನಂದ ನಾಯಕರು ಉದ್ಘಾಟಿಸಿದರು. ಹುಬ್ಬಳ್ಳಿ ರೋಟರಿ ಕ್ಲಬನವರ ಅತ್ಯಂತ ಸುಸಜ್ಜಿತ ಆರೋಗ್ಯ ವಾಹಿನಿಯಲ್ಲಿ ಪರಿಣಿತ ತಜ್ಞರು ಉಚಿತ ಆರೋಗ್ಯ ಪರೀಕ್ಷೆಯನ್ನು ನಡೆಸಿ ಸಲಹೆಗಳನ್ನು ನೀಡಿದರು. ನೂರಕ್ಕಿಂತ ಅಧಿಕ ಸಾರ್ವಜನಿಕರು ಈ ಶಿಬಿರದ ಉಪಯೋಗ ಪಡೆದುಕೊಂಡ ಬಗ್ಗೆ ಅಧ್ಯಕ್ಷರಾದ ಅತುಲ ವಿ ಕಾಮತ್ ಸಂತಸ ವ್ಯಕ್ತಪಡಿಸಿದರು. ಕೆನರಾ ಕಾಲೇಜ ಸೊಸೈಟಿ ಹಾಗೂ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಸಹಕಾರದೊಂದಿಗೆ ನಡೆದ ಈ ಜನೋಪಕಾರಿ ಶಿಬಿರದಲ್ಲಿ ಫ್ಯಾಮಿಲಿ ಪ್ಲಾನಿಂಗ ಅಸೋಸಿಯೇಷನ್ನಿನ ಸಿಬ್ಬಂದಿಗಳು ಕೂಡ ಸಕ್ರಿಯರಾಗಿ ಪಾಲ್ಗೊಂಡರು.
ತಾಲೂಕಾ ವೈದ್ಯಾಧಿಕಾರಿ ಡಾ.ಆಜ್ಞಾ ನಾಯಕ ಮಾರ್ಗದರ್ಶನ ನೀಡಿದರು.
ಪ್ರಾಯೋಜಕರಾಗಿ ಎಚ್ ಡಿ ಎಫ್ ಸಿ ಎರ್ಗೋ ಹಾಗೂ ಗೌರವಾನ್ವಿತ ಪೋಷಕರಾಗಿ ಫ್ಲೆವಿಯನ್ ಫರ್ನಾಂಡಿಸ್, ಉದಯ ಮಡಿವಾಳ ಹಾಗೂ ನವೀನ ನಾಯ್ಕ ಸಹಕರಿಸಿದರು.
ರೋಟರಿ ಅಧ್ಯಕ್ಷರಾದ ಅತುಲ ವಿ ಕಾಮತ ಸ್ವಾಗತಿಸಿದರು. ಕಾರ್ಯದರ್ಶಿ ವಿನಾಯಕ ಹೆಗಡೆ, ಕಾರ್ಯಕ್ರಮ ಸಂಯೋಜಕ ಸಂದೀಪ ನಾಯಕ,ಕೆನರಾ ಕಾಲೇಜ ಕಾರ್ಯಾಧ್ಯಕ್ಷ ಹನುಮಂತ ಶ್ಯಾನಭಾಗ, ಡಾ.ಪ್ರೀತಿ ಭಂಡಾರ್ಕರ, ನಿವೃತ್ತ ಪೋಲಿಸ ವರಿಷ್ಟಾಧಿಕಾರಿ ಪ್ರಮೋದ ರಾವ್, ರೋಟರಿ ಖಜಾಂಚಿ ಪವನ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.
