ಹಲಕರ್ಟಿಯಲ್ಲಿ ಅಂಬಲಿ ಬಿಂದಿಗೆ ಮೆರವಣಿಗೆ ‌ ‌ ‌ ‌

ಹಲಕರ್ಟಿಯಲ್ಲಿ ಅಂಬಲಿ ಬಿಂದಿಗೆ ಮೆರವಣಿಗೆ ‌ ‌ ‌ ‌

Share

ಚಿತ್ತಾಪೂರ:- ತಾಲೂಕಿನ ವಾಡಿ ಸಮೀಪದ ಹಲಕರ್ಟಿ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಶುಕ್ರವಾರ ಚಿಕ್ಕವೀರಪ್ಪನವರ ಮನೆಯಿಂದ ಮಲ್ಲಯ್ಯನ ದೇವಸ್ಥಾನ ವರೆಗೆ ಅಂಬಲಿ ಬಿಂದಿಗೆಭವ್ಯ ಮೆರವಣಿಗೆ ಜರುಗಿತು. ಊರಿನ ಪ್ರಮುಖ ಓಣಿಯಲ್ಲಿ ಮಲಯ್ಯ ದೇವಸ್ಥಾನಕ್ಕೆ ಮೆರವಣಿಗೆ ತಲುಪಿತು ಮೆರವಣಿಗೆಗೆ ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯರು ಚಾಲನೆ ನೀಡಿದರು. ಶ್ರೀ ಗಳು ಎತ್ತಿನ ಬಂಡಿ ಏರಿ ಮಲಯ್ಯ ದೇವಸ್ಥಾನವರೆಗೆ ಆಗಮಿಸಿದರು.ಡೋಲು, ಬಾಜಾಭಜಂತ್ರಿ, ಭಜನೆ,ಹಲಗಿ ಕುಣಿತ, ದೇವರ ಜಯ ಘೋಷಣೆಯೊಂದಿಗೆ ಜನರು ಮೆರಗು ತಂದರು. ಚಂದ್ರಕಾಂತ್ ಮೇಲಿನಮನಿ. ಶರಣಪ್ಪ ಚಾಗಿ. ನಾಗರಾಜ ಪೂಜಾರಿ. ನಾಗಣ್ಣ ಮುಗುಟಿ. ಬಸವರಾಜ್ ಲೋಕನಳ್ಳಿ. ಅಶೋಕ್ ಛತ್ರಿಕಿ. ಮಲ್ಲಪ ಯಧುರುಮನಿ.ಮಲ್ಲಿಕಾರ್ಜುನ ಬಡಿಗೇರ್. ಶ್ರೀಶೈಲ್ ಬಡಿಗೇರ್ ಅಭಿಷೇಕ್ ಅಂಗಡಿ ಸೇರಿದಂತೆ ಹಲವಾರು ಭಕ್ತರು ಪಾಲ್ಗೊಂಡರು. ‌

ವರದಿ-ಡಾ ಎಮ್ ಬಿ ಹಡಪದ ಸುಗೂರ ಎನ


Share