ಹೃದಯವಂತ ಮಹೇಂದ್ರ ಮುಣೋತ್

ಹೃದಯವಂತ ಮಹೇಂದ್ರ ಮುಣೋತ್

Share

ಎಲ್ಲೆಲ್ಲೂ ಕರೋನ ಲಾಕ್‍ಡೌನ್ ಸಂದರ್ಭ ಬಡವರಿಗೆ, ನಿರಾಶ್ರಿತರಿಗೆ, ಕಾರ್ಮಿಕ ವರ್ಗಕ್ಕೆ ದಿಕ್ಕು ಕಾಣದೆ ಕಾಂಗಾಲಾದ ಸಂದರ್ಭ ಸಮಸ್ಯೆ ಮುಗಿದಿಲ್ಲ. ಒಂದು ಕಡೆ ಸಾವು ನೋವುಗಳ ಭೀಕರ ದೃಶ್ಯಗಳು. ಸಂಬಂಧಗಳನ್ನೇ ಮರೆತು ಮಾನವೀಯತೆಯ ಮೇಲೆ ಬಿದ್ದ ದೊಡ್ಡ ಪೆಟ್ಟು. ಇಡೀ ಪ್ರಪಂಚವೇ ಎಂದೂ ಕೇಳರಿಯದ ಕಷ್ಟದ ಕಾಲವನ್ನು ಈ ಎರಡು ವರ್ಷಗಳಲ್ಲಿ ನೋಡಲಾಯಿತು. ಇಡೀ ಪ್ರಪಂಚವು ಕರೋನ ಕಪಿಮುಷ್ಠಿಯಲ್ಲಿ ತತ್ತರಿಸಿ ಹೋದಾಗ ಸರ್ಕಾರ ಸೇರಿದಂತೆ ಆಡಳಿತ ವರ್ಗವೂ ಕೂಡಾ ಸಹಾಯ ಮಾಡಲು ಆಗದ ಸಂದರ್ಭ ಹಲವಾರು ದೇಶಗಳಿಗೆ ಬಂದೊದಗಿತು. ಇಂತಹ ಸಂದರ್ಭದಲ್ಲಿ ಮಾನವೀಯ ಹೃದಯವಂತ ಹಲವಾರು ಸಮಾಜ ಸೇವಕರು ಜನತೆಯ ನೆರಳಿಗೆ ನಿಂತರು. ಅಂತಹ ಸಾಲಿನಲ್ಲಿ ಸೂರ್ಯನಂತೆ ಬೆಳಗಿದ ಕರುನಾಡಿನ ಹೆಮ್ಮೆಯ ಪುತ್ರ ಮಾರುತಿ ಮೆಡಿಕಲ್‍ನ ಮಾಲೀಕರಾದ ಶ್ರೀ ಮಹೇಂದ್ರ ಮುಣೋತ್ ಮುಂಚೂಣಿಯಲ್ಲಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅದರಲ್ಲೂ ಬೆಂಗಳೂರಿನ ಸುತ್ತಮುತ್ತ ನಿರಾಶ್ರಿತರು, ಬಡವರು, ಕೂಲಿ ಕಾರ್ಮಿಕರಿಗೆ ಸಹಾಯದ ಮಹಾಪೂರವನ್ನೇ ಹರಿಸಿದರು. ಪ್ರತಿನಿತ್ಯವು ಲಕ್ಷಾಂತರ ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿ ಅನ್ನದಾಸೋಹಿ ಎನ್ನಿಸಿಕೊಂಡಿದ್ದಾರೆ. ಇನ್ನು ಕೆಲ ಮಧ್ಯಮ ವರ್ಗಗಳಿಗೆ ಮತ್ತು ಕಾರ್ಮಿಕ ವರ್ಗಗಳಿಗೆ ಆಹಾರ ಕಿಟ್‍ಗಳನ್ನು ನೀಡುವ ಮೂಲಕ ನೊಂದು ದಿಕ್ಕು ಕಾಣದ ಜನತೆಯಲ್ಲಿ ನಿಮ್ಮೊಂದಿಗೆ ನಾವು ಮಾನವೀಯ ಮೌಲ್ಯಗಳೊಂದಿಗೆ ಸಹಾಯ ನೀಡುತ್ತೇವೆ ಧೈರ್ಯದಿಂದ ಈ ಸಮಯವನ್ನು ಕಳೆಯೋಣ ಎಂದು ಧೈರ್ಯ ತುಂಬಿದರು. “ಈ ಸಮಯವು ಕಳೆದು ಹೋಗುತ್ತದೆ” ಎಂಬ ಶೀ ಕೃಷ್ಣನ ಹೇಳಿಕೆಯಂತೆ ಕಷ್ಟವಾಗಲಿ ಸುಖವಾಗಲಿ ಸ್ವಲ್ಪ ಸಮಯದವರೆಗೆ ಇರುತ್ತದೆ. ಈ ಸಮಯ ಕಳೆದ ನಂತರ ಒಳ್ಳೆಯ ದಿನಗಳು ಬರುತ್ತವೆ ಎಂಬ ಅಚಲವಾದ ನಂಬಿಕೆಯೊಂದಿಗೆ ಬದುಕು ಕಟ್ಟಿಕೊಳ್ಳಲು ಎಲ್ಲಾ ರೀತಿಯ ಸಹಾಯವನ್ನು ಮಾಡಿರುತ್ತಾರೆ.
ಶ್ರೀ ಮಹೇಂದ್ರ ಮುಣೋತ್ ಅವರು ಮೂಲತಃ ಔಷಧಿ ವ್ಯಾಪಾರಿಗಳಾಗಿದ್ದರೂ ಕೂಡಾ ಕನ್ನಡ ನಾಡಿನ ಬಗ್ಗೆ ಅಪಾರವಾದ ಅಭಿಮಾನ ಕಲೆ, ಸಂಸ್ಕøತಿಗೆ ಸಹಾಯ, ಬಡವರಿಗೆ ಮತ್ತು ನಿರಾಶ್ರಿತರಿಗೆ ಸಹಾಯ ಹೊಸ ಪ್ರತಿಭೆಗಳಿಗೆ, ಹೊಸ ಯೋಜನೆಗಳಿಗೆ ಮುಕ್ತ ಮನಸ್ಸಿನಿಂದ ಸಹಾಯ ಸಹಕಾರ ನೀಡುತ್ತಾರೆ. ಲಕ್ಷಾಂತರ ಜನರಿಗೆ ಜೀವನ ರೂಪಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಕರೋನ ಸಂದರ್ಭವನ್ನು ಹೊರತುಪಡಿಸಿಯೂ ಕೂಡಾ ಸಹಾಯ ಮಾಡುವ ಕಾಯಕವು ಸದಾ ನಡೆಯುತ್ತಿರುತ್ತದೆ. ಸಹಾಯ ಕೇಳಿಕೊಂಡು ಬರುವ ಯಾರೇ ವ್ಯಕ್ತಿಗೂ ಬರಿಗೈಯಲ್ಲಿ ಮರಳಿ ಕಳುಹಿಸಿದ ಉದಾಹರಣೆಗಳೇ ಇಲ್ಲ. ಇಂತಹ ಮಾನವೀಯ ಮೌಲ್ಯಗಳನ್ನು ಹೊಂದಿರುವ ಶ್ರೀಯುತರು ಕರೋನ ಕುರಿತು ಅನೇಕ ಕಿರುಚಿತ್ರ ಹಾಡಿನ ಮೂಲಕ ಜಾಗೃತಿಯನ್ನು ಕೂಡ ಮೂಡಿಸಿದ್ದಾರೆ. ಕರ್ನಾಟಕ ಪ್ರೆಸ್ ಕ್ಲಬ್ ಸೇರಿದಂತೆ ಬೆಂಗಳೂರಿನ ಹಲವಾರು ಎನ್.ಜಿ.ಓ.ಗಳ ಸಹಕಾರದೊಂದಿಗೆ ಬೆಂಗಳೂರಿನ ನಾಗರೀಕರಿಗೆ ಆಹಾರ ಕಿಟ್ ವಿತರಣೆ, ಮಧ್ಯಾಹ್ನದ ಊಟದ ವ್ಯವಸ್ಥೆ, ವೈದ್ಯಕೀಯ ನೆರವು ಮತ್ತು ನೀರು ಸೇರಿದಂತೆ ಹಲವಾರು ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ. ವಿವಿಧ ಕಾರ್ಮಿಕ ವರ್ಗಗಳಿಗೆ ಒಂದು ಲಕ್ಷಕ್ಕೂ ಅಧಿಕ ಆಹಾರ ಕಿಟ್‍ಗಳನ್ನು ನೀಡಿರುತ್ತಾರೆ. ಕರ್ನಾಟಕ ಪ್ರೆಸ್ ಕ್ಲಬ್ ಸಹಕಾರದೊಂದಿಗೆ ಮಾಧ್ಯಮ ವರ್ಗದವರಿಗೆ ಸುಮಾರು 2 ಸಾವಿರಕ್ಕಿಂತ ಅಧಿಕ ಆಹಾರ ಕಿಟ್‍ಗಳನ್ನು ನೀಡಿ ಮಾಧ್ಯಮ ವರ್ಗವನ್ನೂ ಸೇರಿದಂತೆ ಎಲ್ಲಾ ಕಾರ್ಮಿಕ ವರ್ಗದವರಿಗೆ ನಿಮ್ಮೊಂದಿಗೆ ನಾವು ಇದ್ದೇವೆ ಎಂಬ ಧೈರ್ಯವನ್ನು ನೀಡಿದ್ದಾರೆ. ಆರೋಗ್ಯದ ತುರ್ತು ಸೇವೆಗಳಾದ ಆಂಬುಲೆನ್ಸ್ ಮತ್ತು ಔಷಧ ವಿತರಣೆ ಮೂಲಕವು ಕರೋನ ರೋಗಿಗಳಿಗೆ ಸಹಾಯ ನೀಡುತ್ತಾ ಹೃದಯ ವೈಶಾಲ್ಯತೆಯನ್ನು ತೋರಿದ್ದಾರೆ.


Share