ಪ್ರಾರಂಭಿಕರ ಗುಂಪುರ ಪವನಮುಕ್ತಾಸನ ಸರಣಿ

ಪ್ರಾರಂಭಿಕರ ಗುಂಪುರ ಪವನಮುಕ್ತಾಸನ ಸರಣಿ

Share

ಪವನಮುಕ್ತಾಸನ ಸರಣಿಯ ಆಸನಗಳು ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮಕಾರೀ ಪ್ರಭಾವ ಉಂಟುಮಾಡುತ್ತವೆ. ಈ ಸರಣಿಯ ಆಸನಗಳು ಅಭ್ಯಾಸದ ಮೂಲಕ ದೈಹಿಕ ಹಾಗೂ ಮಾನಸಿಕ ಅಸಮತೋಲನಗಳ ನಿವಾರಣೆಗೆ ಮತ್ತು ಆರೋಗ್ಯ ರಕ್ಷಣೆಗೆ ಉಪಯುಕ್ತ ಸಾಧನಗಳಾಗಿವೆ. ಈ ಸರಣಿಯು ಬಿಹಾರ್ ಯೋಗ ವಿದ್ಯಾಲಯ ಮತ್ತು ಪರಮಹಂಸ ಸತ್ಯಾನಂದ ಬೋಧನೆಯ ಅಮೂಲ್ಯ ಕೊಡುಗೆ. ಹಠಯೋಗದಲ್ಲಿ ಬೋಧಿಸಲಾಗುವ ಪ್ರಾಥಮಿಕ ಅನುಷ್ಠಾನ ಯೋಗ್ಯ ಗುಂಪಿಗೆ ಈ ಸರಣಿಯು ಸೇರಿದೆ. ಯೋಗ ಜೀವನಕ್ಕೆ ಬಹು ಭದ್ರ ತಳಹದಿಯನ್ನು ಒದಗಿಸುವ ಸರಣಿಯಾಗಿ ಇದು ಅತ್ಯವಶ್ಯವಾಗಿದೆ. ಆಸನದ ಅರ್ಥ ತಿಳಿಯಲು ಪವನಮುಕ್ತಾಸನವು ಅಮೂಲ್ಯ ಸಾಧನವಾಗಿದ್ದು, ದೇಹದ ಚಲನವಲನದ ಬಗ್ಗೆ ಮತ್ತು ನಮ್ಮ ಅಸ್ತಿತ್ವದ ವಿವಿಧ ಪಾತಳಿಗಳಲ್ಲಿ (ಮಟ್ಟಗಳಲ್ಲಿ) ಉಂಟಾಗುವ ಪರಿಣಾಮಗಳ ಬಗ್ಗೆ ತೀವ್ರಗಮನ ಹರಿಸುವಲ್ಲಿ ಇದು ಸಹಕಾರಿಯಾಗಿದೆ. ಇದು ಎಲ್ಲ ಪ್ರಮುಖಕೀಲುಗಳನ್ನು ಮುಕ್ತಗೊಳಿಸುತ್ತದೆ ಮತ್ತು ದೇಹದ ಸ್ನಾಯುಗಳನ್ನು ಸಡಿಲಿಸುತ್ತದೆಯಾದ್ದರಿಂದ ಒಂದು ಪೂರ್ವ ಸಿದ್ಧತಾ ಆಸನವಾಗಿ ಇದು ಬಹಳ ಉಪಯುಕ್ತ. ಈ ಸರಣಿಯ ಆಸನಗಳನ್ನು ಯಾರು ಬೇಕಾದರೂ ಮಾಡಬಹುದು ಹೊಸಬರಿರಬಹುದು ಇಲ್ಲವೇ ನುರಿತವರಾಗಿರಬಹುದು. ಚಿಕ್ಕವರಿರಬಹುದು ಇಲ್ಲವೇ ವಯಸ್ಸಾದವರಿರಬಹುದು ಮತ್ತು ಖಾಯಿಲೆಯವರು ಅಥವಾ ಖಾಯಿಲೆಯಿಂದ ಚೇತರಿಸಿಕೊಳ್ಳುವವರೂ ಆಗಿರಬಹುದು. ಈ ಆಸನಗಳ ಅಭ್ಯಾಸವು ಸರಳ, ಆರಾಮದಾಯಕ ಮತ್ತು ಸುಲಭ ಎಂಬ ಕಾರಣಕ್ಕಾಗಿ ಇವುಗಳನ್ನು ಉಪೇಕ್ಷೆ ಮಾಡಕೂಡದು ಮತ್ತು ಲಘುವಾಗಿ ಪರಿಗಣಿಸಕೂಡದು.
ಈ ಆಸನಗಳನ್ನು ಸಂಸ್ಕೃತದಲ್ಲಿ ಸೂಕ್ಷö್ಮವ್ಯಾಯಾಮ ಎಂದು ನಿರ್ದೇಶಿಸಲಾಗಿದೆ. ಪವನ ಎಂದರೆ ‘ವಾಯು’ ಅಥವಾ ‘ಪ್ರಾಣ’ ಎಂದರ್ಥ. ಮುಕ್ತ ಎಂದರೆ ಬಿಡುಗಡೆ. ಆಸನ ಎಂದರೆ ಭಂಗಿ. ಆದ್ದರಿಂದ ಪವನಮುಕ್ತಾಸನ ಎಂದರೆ ದೇಹ ಮತ್ತು ಮನಸ್ಸಿನಲ್ಲಿ ಚೈತನ್ಯದ ಮುಕ್ತ ಪ್ರವಾಹಕ್ಕೆ ಅಡ್ಡಿ ಉಂಟುಮಾಡುವ ತಡೆಗಳ ನಿವಾರಣೆ ಮಾಡುವಂಥ ಆಸನಗಳ ಗುಂಪು. ಕೆಲವೊಮ್ಮೆ ನಮ್ಮ ದೇಹದ ಅಸಮರ್ಪಕ ಭಂಗಿಯಿAದ, ದೈಹಿಕ ಕ್ರಿಯೆಗಳ ಕ್ಷೆÆÃಭೆಯಿಂದ, ಮಾನಸಿಕ ಇಲ್ಲವೇ ಭಾವನಾತ್ಮಕ ತೊಂದರೆಗಳಿAದ ಅಥವಾ ಅಸಮತೋಲನ ಜೀವನ ಕ್ರಮದಿಂದ ಚೈತನ್ಯವು ಪ್ರವಹಿಸುವುದಕ್ಕೆ ಅಡಚಣೆಯಾಗುತ್ತದೆ. ಪ್ರಾರಂಭಸ್ಥಿತಿಯಲ್ಲಿ ಇದು ಮಾಂಸಖAಡಗಳ ಬಿಗುವು, ಪೆಡಸುತನ, ಅಸಮರ್ಪಕ ರಕ್ತಚಲನೆ ಇತ್ಯಾದಿ ಸಣ್ಣಪುಟ್ಟ ಲೋಪದೋಷಗಳ ಮೂಲಕ ಪ್ರಕಟವಾಗುತ್ತದೆ. ಆದರೆ ಈ ಚೈತನ್ಯ ಪ್ರವಾಹಕ್ಕೆ ಅಡ್ಡಿಯು ತೀವ್ರವಾದಾಗ ಕೈಕಾಲು, ಇಲ್ಲವೆ ಕೀಲು ಅಥವಾ ಅವಯವ ಅಸಮರ್ಪಕವಾಗಿ ಕೆಲಸ ಮಾಡಬಹುದು. ಪೂರ್ತಿ ನಿಷ್ಕಿçಯವೂ ಆಗಬಹುದು. ರೋಗಗ್ರಸ್ತವಾಗಬಹುದು. ಪವನ ಮುಕ್ತಾಸನ ಕ್ರಮಬದ್ಧ ಅಭ್ಯಾಸವು ದೇಹದಲ್ಲಿ ಚೈತನ್ಯದ ಪ್ರವಾಹಕ್ಕೆ ಇರುವ ಅಡ್ಡಿಗಳನ್ನು ನಿವಾರಿಸುವುದಲ್ಲದೆ ಹೊಸ ಅಡಚಣೆ ಉಂಟಾಗದAತೆ ನೋಡಿಕೊಳ್ಳುತ್ತದೆ. ಈ ವಿಧದಿಂದ ಇದು ದೇಹದಲ್ಲಿ ಚೈತನ್ಯ ಪ್ರವಾಹವನ್ನು ನಿಯಂತ್ರಿಸಿ ಸಮಸ್ಥಿತಿಗೆ ತರುವ ಮೂಲಕ ದೇಹಕ್ಕೆ ಪೂರ್ಣ ಆರೋಗ್ಯವನ್ನು ಒದಗಿಸುತ್ತದೆ.
ಮನಸ್ಸು-ದೇಹ
ಬಹುತೇಕ ಆಧುನಿಕ ರೋಗಗಳು ಮನೋದೈಹಿಕ ಸ್ವರೂಪದವು. ಈ ರೋಗಗಳಿಗಾಗಿ ಸೇವಿಸುವ ಔಷಧಗಳು ಕೇವಲ ರೋಗಲಕ್ಷಣಗಳನ್ನು ನಿವಾರಿಸುತ್ತವೆಯೇ ವಿನಹ ರೋಗಗಳನ್ನು ಬೇರು ಸಹಿತ ಕಿತ್ತೊಗೆಯುವುದಿಲ್ಲ. ಈ ಆಸನಗಳನ್ನು ಯಾವ ಸ್ಪರ್ಧಾತ್ಮಕ ಭಾವನೆ ಮೆದುಳನ್ನು ಪ್ರಚೋದಿಸುತ್ತದೆ ; ತನ್ಮೂಲಕ ಮನಸ್ಸನ್ನೂ ವಿಶ್ರಾಮಸ್ಥಿತಿಗೆ ತರುತ್ತದೆ. ಉಸಿರಾಟ ಮತ್ತು ಅದರ ಮೇಲಿನ ನಮ್ಮ ಗಮನವನ್ನು ಮೇಳವಿಸುವುದರಿಂದಾಗಿ ಮನಸ್ಸಿನ ಅವಧಾನಶಕ್ತಿಯು ಜಾಗೃತವಾಗುತ್ತದೆ. ತತ್ಫಲವಾಗಿ ಮನಸ್ಸು ಒತ್ತಡ ಉದ್ವೇಗಗಳಿಗೆ ಒಳಗಾಗುವುದಿಲ್ಲ. ಇದರಿಂದಾಗಿ ಈ ಆಸನಗಳಲ್ಲಿ ದೈಹಿಕಕ್ಕಿಂತ ಮಾನಸಿಕ ಅಂಶವೇ ಪ್ರಧಾನ ಎಂಬುದು ಗೋಚರವಾಗುತ್ತದೆ. ಈ ಆಸನಗಳ ಸಕ್ರಮ ಅಭ್ಯಾಸದಿಂದ ಮನಸ್ಸು ವಿಶ್ರಾಮಸ್ಥಿತಿಗೆ ಬರುತ್ತದೆ. ಕ್ರಿಯಾಶೀಲ (ಚಿuಣoಟಿomiಛಿ) ನರಗಳು ಹಾರ್ಮೋನು (hಚಿಡಿಟಿmoಟಿಚಿಟ) ಕ್ರಿಯೆಗಳು ಮತ್ತು ಶರೀರದ ಆಂತರಿಕ ಅವಯುಗಳು ಸರಿಗೊಳ್ಳುತ್ತವೆ. ಆದುದರಿಂದ ಈ ಆಸನಗಳು ಮಹತ್ತರವಾದ ಪ್ರತಿಬಂಧಕ ಹಾಗೂ ನಿವಾರಣಾತ್ಮಕ ಅಂಶಗಳನ್ನು ಹೊಂದಿವೆ.
ಮೂರು ಗುಂಪುಗಳು
ಪವನ ಮುಕ್ತಾಸನವನ್ನು ಮೂರು ಪ್ರಧಾನ ಗುಂಪುಗಳಾಗಿ ವಿಂಗಡಿಸಲಾಗಿದೆ. ಸಂಧಿವಾತ ನಿರೋಧ ಗುಂಪು, ಪಾಚಕ ಉದರಗುಂಪು ಮತ್ತು ಶಕ್ತಿಬಂಧ ಅಥವಾ ಚೈತ್ನಯರೋಧಕ ಗುಂಪು. ಈ ಗುಂಪುಗಳು ಒಂದಕ್ಕೊAದು ಪೂರಕವಾಗಿವೆ. ದೇಹದಲ್ಲಿ ಚೈತನ್ಯವು ಮುಕ್ತವಾಗಿ ಪ್ರವಹಿಸುವಂತೆ ಪ್ರಚೋದಿಸುತ್ತವೆ. ಹಾಗೂ ಉತ್ತೇಜನ ನೀಡುತ್ತವೆ. ಅಭ್ಯಾಸಿಗಳು ಪ್ರಧಾನ ಆಸನಗಳತ್ತ ಗಮನಹರಿಸುವ ಮುನ್ನ ಮೇಲೆ ಹೇಳಿರುವ ಮೂರೂ ಗುಂಪಿನ ಆಸನಗಳಲ್ಲಿ ಪರಿಣತಿ ಗಳಿಸಿರಬೇಕು. ಪವನಮುಕ್ತಾಸನ ಭಾಗ ೧, ೨ ಮತ್ತು ೩ ಇವುಗಳನ್ನು ಪ್ರತಿದಿನ ತಪ್ಪದೆ ಕೆಲವು ತಿಂಗಳವರೆಗೆ ಮಾಡಿದರೆ ದೇಹ ಮನಸ್ಸುಗಳಲ್ಲಿ ಪರಿಣಾಮಕಾರಿಯಾದ ವಿಶ್ರಾಂತಿ, ಇಡೀ ಮನೋದೇಹ ವ್ಯವಸ್ಥೆಯಲ್ಲಿ ಒಂದು ಹುರುಪು ಕಂಡುಬರುತ್ತದೆ. ಮತ್ತು ಮುಂದುವರೆದ ಆಸನಗಳಿಗೆ ಹೆಚ್ಚಿನ ದೈಹಿಕ ಸಾಮರ್ಥ್ಯದ ಅಗತ್ಯವಿದೆ ಮತ್ತು ಅವುಗಳು ದೇಹ ಹಾಗೂ ಮನಸ್ಸಿನ ಮೇಲೆ ಶಕ್ತಿಶಾಲಿ ಪರಿಣಾಮ ಬೀರುತ್ತವೆ. ಈ ಅಂಶದಿAದಾಗಿ ಆಸನಗಳ ಅಭ್ಯಾಸಕ್ಕೆ ಸರಿಯಾದ ಸಿದ್ಧತೆ ಅಗತ್ಯ.
ಪ್ರತಿಯೊಂದು ಗುಂಪಿನ ಆಸನಗಳನ್ನು ಮುಂದೆ ತಿಳಿಸಿರುವ ಅನುಕ್ರಮದಲ್ಲಿಯೇ ಅಭ್ಯಾಸ ಮಾಡಬೇಕು.


Share

Leave a Reply

Your email address will not be published. Required fields are marked *