ವಿತ್ತ ಸಚಿವೆ ನಿರ್ಮಲಾ ಸೀತರಾಮ್‍ನ್ ರವರು ಈ ಬಾರಿ ಮಂಡಿಸುವ ಬಜೆಟ್ ಪ್ರಗತಿಯ ವೇಗವನ್ನು ಹೆಚ್ಚಿಸುವ ಭವಿಷ್ಯದ ಗುರಿಯೊಂದಿಗಿನ ಈ ಬಜೆಟ್ ನೇರವಾಗಿ ಯುವಕರು, ಮಹಿಳೆಯರು, ರೈತರು ಮತ್ತು ಹಿಂದುಳಿದವರಿಗೆ ಅನುಕೂಲ ಒದಗಿಸಲಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ 25000 ಕಿ.ಮೀ ಹೆದ್ದಾರಿ ಅಭಿವೃದ್ಧಿಗಾಗಿ 3.8 ಕೋಟಿ ರೂ, 80 ಲಕ್ಷ ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ 48000 ಕೋಟಿ ರೂ, ನರೇಗಾ ಯೋಜನೆಗೆ 73,000 ಕೋಟಿ ರೂ, ಎಂ ಎಸ್ ಪಿ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ 2.37 ಲಕ್ಷ ಕೋಟಿ ರೂ, ಷೇರು ವಿಕ್ರಯಗುರಿಗೆ 65,000 ಕೋಟಿ ರೂ, ಮೆಟ್ರೋ ಯೋಜನೆಗಳಿಗೆ 19,130 ಕೋಟಿ ರೂ, ಬಿಟ್ ಕಾಯಿನ್ ನಂತಹ ಡಿಜಿಟಲ್ ಆಸ್ತಿಗಳ ಮೇಲಿನ ಆದಾಯಕ್ಕೆ 30% ರಷ್ಟು ತೆರಿಗೆ ವರ್ಗಾವಣೆ ಮೊತ್ತದ ಮೇಲೆ 1% ಟಿಡಿಎಸ್, ಷೇರು ಈಕ್ವೀಟಿಯಂತಹ ದೀರ್ಘಕಾಲೀನ ಹೂಡಿಕೆಗಳಿಂದ ಆದಾಯದ ಮೇಲಿನ ಸರ್ಚಾಜ್ ಗೆ ಗರಿಷ್ಠ 15% ರಷ್ಟು ಮಿತಿ, ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಡಿಜಿಟಲ್ ಕರೆನ್ಸಿಗೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಉದ್ದೇಶಿಸಿಲ್ಲ ಎಂದು ಸ್ಪಷ್ಟಪಡಿಸಿದ ಸೀತಾರಾಮನ್ ರವರು 30% ರಷ್ಟು ತೆರಿಗೆಯನ್ನು ಕ್ರಿಪ್ಟೋ ಕರೆನ್ಸಿಗಳ ಮೇಲೆ ವಿಧಿಸಲಾಗುವುದು ಎಂದು ಹೇಳಿದ್ದಾರೆ. 400 “ವಂದೇ ಭಾರತ್ ರೈಲು” ಘೋಷಣೆ. ಇಂಧನ ದಕ್ಷÀತೆ ಮತ್ತು ಪ್ರಯಾಣಿಕ ಸ್ನೇಹಿ ತಂತ್ರಜ್ಞಾನದ ರೈಲು, ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಯಡಿ 100 ಸರಕು ಟರ್ಮಿನಲ್ ನಿರ್ಮಾಣ ಗುರಿ, ಸ್ಟಾರ್ಟ್ ಅಫ್ ಕಂಪನಿಗಳಿಗೆ ತೆರಿಗೆ ರಿಯಾಯಿತಿ, ಒನ್ ಕ್ಲಾಸ್ ಮತ್ತು ಒನ್ ಚಾನಲ್, ಕೃಷಿಗೆ ಉತ್ತೇಜನ, ರಫ್ತು ಉತ್ತೇಜನಕ್ಕೆ ಕ್ರಮ, ಕಿಸಾನ್ ಡ್ರೋನ್ ಯೋಜನೆಯಡಿ ಕೃಷಿ ಭೂಮಿ ಸಮೀಕ್ಷೆ, ದಾಖಲೆಗಳ ಡಿಜಿಟಲೀಕರಣ, ಕೃಷಿ ಆಧಾರಿತ ಸ್ಟಾರ್ಟ್ ಅಫ್‍ಗಳ ನೆರವಿಗೆ ನಬಾರ್ಡ ಸಾಲ, ಗ್ರಾಮೀಣರ ಮನೆಗೆ ನಲ್ಲಿ ನೀರಿನ ಸಂಪರ್ಕ ಯೋಜನೆ “ಹರ್ ಘರ್ ನಲ್ ಸೇ ಜಲ್” ಗೆ 60,000 ಕೋಟಿ ರೂ, ಕ್ರೀಡೆಗೆ 3.062 ಕೋಟಿ ರೂ ಮಂಡಿಸಿದ್ದಲ್ಲದೇ, ಇ-ಪಾಸ್ ಪೋರ್ಟ್ ಜಾರಿ, ತೆರಿಗೆದಾರರು 2 ವರ್ಷಗಳ ಅವಧಿಯಲ್ಲಿ ಪರಿಷ್ಕøತ ರಿಟನ್ರ್À ಸಲ್ಲಿಸಲು ಅವಕಾಶ, ನದಿ ಜೋಡಣೆಗೆ ಸಮ್ಮತಿ, ಜಲಶಕ್ತಿಗೆ ಅನುದಾನ ಹೆಚ್ಚಳ, ಗ್ರಾಮ ರಸ್ತೆ ನಿರ್ಮಾಣಕ್ಕೆ ಒತ್ತು, ಪಂಚ ನದಿ ಜೋಡಣೆ ಗುರಿ, ಪರಿಸರ ಅರಣ್ಯ ಇಲಾಖೆಗೆ 3,030ಕೋಟಿ ರೂ ಅನುದಾನ, ಭೂ ವಿಜ್ಞಾನಕ್ಕೆ 1,897 ಕೋಟಿ ರೂ ಅನುದಾನ ನೀಡಿದೆ. ಅಲ್ಲದೇ ಸಿರಿಧಾನ್ಯಗಳ ಮಾರುಕಟ್ಟೆ ವಿಸ್ತರಣೆ ಮಾಡುವುದರ ಜೊತೆಗೆ 2023 ಅನ್ನು “ಅಂತರ್ ರಾಷ್ಟ್ರೀಯ ಸಿರಿಧಾನ್ಯಗಳ” ವರ್ಷವೆಂದು ಘೋಷಣೆ ಮಾಡಿದೆ.
ಈ ಬಾರಿಯ ಬಜೆಟ್ ಅನ್ನು ಹಣಕಾಸು ಸಚಿವರು ಮುಂದಿನ 2 ವರ್ಷಗಳಲ್ಲಿ ಬರುವ ಲೋಕಸಭಾ ಚುನಾವಣೆ ಮತ್ತು ಭಾರತದ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಳ್ಳುವುದರ ಜೊತೆಗೆ ಕೊರೋನಾದ 3 ಅಲೆಗಳ ಮಧ್ಯೆ ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ್ದು ಇದು “ವರ್ಚುವಲ್ ಬಜೆಟ್” ಆಗಿ ಗಮನಸೆಳೆದಿದೆ.
ಏರಿಕೆ
ವಿಮಾನಯಾನ, ಛತ್ರಿಗಳು
ಇಮಿಟೇಶನ್ ಜ್ಯುವೆಲರಿ,
ಸ್ಮಾರ್ಟ್ ಮೀಟರ್, ಸ್ಪೀಕರ್
ಸೋಲಾರ್ ಸೆಲ್, ಮಾಡ್ಯೂಲ್
ಎಕ್ಸರೇ ಮೆಷಿನ್
ಹೆಡ್ ಫೋನ್ ಮತ್ತು ಇಯರ್ ಫೋನ್
ಎಲ್ಲಾ ಆದಾಯದ ಉತ್ಪನ್ನಗಳು
ಇಳಿಕೆ
ಎಲೆಕ್ಡ್ರಾನಿಕ್ ಬಿಡಿ ಭಾಗಗಳು
ಮುತ್ತುಗಳು, ಪಾಲೀಷ್ ಮಾಡಿದ ವಜ್ರ
ಮೊಬೈಲ್, ಮೊಬೈಲ್ ಕ್ಯಾಮೆರಾ ಲೆನ್ಸ್,
ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನಗಳು
ಮೀಥೈಲ್, ಆಲ್ಕೋಹಾಲ್, ಮೆಂಥಾಲ್,
ಅಟಿಟಿಕ್ ಆಸಿಡ್, ಕೋಕಾ ಬೀನ್ಸ್,
ಪೆಟ್ರೋಲಿಯಂ ಉತ್ಪನ್ನಗಳಿಗೆ ಬಳಸುವ ರಾಸಾಯನಿಕ
ಶೀತಲೀಕರಿಸಿದ ಚಿಪ್ಪು ಜೀವಿಗಳು, ಸ್ಕ್ವೀಡ್
ಕೃಷಿ ಸಲಕರಣೆಗಳು, ಇಂಗು