ಪಂಚ ಚುನಾವಣೆ ಲೋಕ ಸಭೆಯ ಮುನ್ಸೂಚನೆಯೇ?

ಪಂಚ ಚುನಾವಣೆ ಲೋಕ ಸಭೆಯ ಮುನ್ಸೂಚನೆಯೇ?

Share


ಇತ್ತೀಚೆಗೆ ನಡೆದ ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ, ಮಣಿಪುರ ಮತ್ತು ಪಂಜಾಬ್ ದಲ್ಲಿ ನಡೆದ ಚುನಾವಣೆಯು ಜಾಗತೀಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಚುನಾವಣೆಯಿಂದ ಮುಂದೆ ಬರುವ ಲೋಕಸಭೆಯ ಚುನಾವಣೆ ಮೇಲೆ ನೇರ ಪರಿಣಾಮ ಬೀರುತ್ತದೆ. ಹೇಗೆಂದರೆ ದೇಶದಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು ಲೋಕಸಭಾ ಚುನಾವಣೆಯನ್ನು ಹೊಂದಿದ ರಾಜ್ಯವಾಗಿದೆ. ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯನ್ನು ದೇಶದ ಮಿನಿ ಮಹಾ ಚುನಾವಣೆಯೆಂದೆ ಪರಿಗಣಿಸುವುದು ವಾಡಿಕೆ. 2024 ರಲ್ಲಿ ಲೋಕಸಭಾ ಚುನಾವಣೆ ಬರಲಿದ್ದು ಈ ಚುನಾವಣೆಯಲ್ಲಿ ಉತ್ತರ ಪ್ರದೇಶ ಒಂದರಿಂದಲೇ ಬಿಜೆಪಿ 50 ರಿಂದ 60 ಸೀಟುಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಈ ಪಂಚ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮತ್ತು ಉತ್ತರಖಂಡಾದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿ.ಜೆ.ಪಿ ಅಧಿಕಾರ ಹಿಡಿಯುತ್ತದೆ. ಗೋವಾ ಮತ್ತು ಮಣಿಪುರದಲ್ಲಿ ಒಂದಿಬ್ಬರ ಸಹಾಯದೊಂದಿಗೆ ಅಧಿಕಾರ ಹಿಡಿಯುವ ಬಲ ಬಿಜೆಪಿಗಿದೆ. ಇನ್ನು ಈ ಹಿಂದೆ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಮುಖ ಭಂಗವಾಗಿದ್ದು ಬಿ.ಜೆ.ಪಿಯ ರೈತ ವಿರೋಧಿ ನೀತಿಯನ್ನು ಅರವಿಂದ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷವು ಸರಳವಾಗಿ ಬಹುಮತ ಪಡೆದು ಪಂಜಾಬಿನಲ್ಲಿ ಅಧಿಕಾರವನ್ನು ಹಿಡಿದಿದೆ ಇದರ ಮಧ್ಯೆ ಕಾಂಗ್ರೆಸ್ ಇನ್ನೋಂದು ರಾಜ್ಯವನ್ನು ಕಳೆದುಕೊಂಡು ಮೌನವಾಗಿದೆ. 2023 ರಲ್ಲಿ ಕರ್ನಾಟಕ ಸೇರಿದಂತೆ ಹಲವಾರು ವಿಧಾನ ಸಭೆಗಳ ಚುನಾವಣೆಗಳಿದ್ದು ಈ ಪಂಚ ರಾಜ್ಯಗಳ ಚುನಾವಣೆಯು ಪ್ರಭಾವ ಬೀರುತ್ತದೆ. ಇತ್ತ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸೋಲಿನ ಭೀತಿ ಕಾಡುತ್ತಿದೆ. ರಾಹುಲ್ ಗಾಂಧಿ ಈ ಚುನಾವಣೆಯ ಸೋಲನ್ನು ಒಪ್ಪಿಕೊಂಡಿದ್ದು ಸೋನಿಯಾ ಗಾಂಧಿ ಪರಾಮರ್ಶೆ ಮಾಡಿ ಕೊಳ್ಳುತ್ತಿದ್ದಾರೆ. ಬಿಜೆಪಿ ಪಾಳೆಯದಲ್ಲಿ ಮೋದಿ ಯೋಗಿ, ಅಮಿತ್‍ಶಾ ನಡ್ಡ ಮುಂತಾದವರು ಗೆಲುವನ್ನು ಕಾರ್ಯಕರ್ತರ ಜೊತೆ ಹಂಚಿಕೊಳ್ಳುವುದರ ಜೊತೆಗೆ ಗೆಲುವಿಗಾಗಿ ಶ್ರಮಿಸಿದವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಚುನಾವಣೆಯಲ್ಲಿ ಹಲವಾರು ವಿಸ್ಮಯಗಳು ನಡೆದಿದ್ದು ಅದರಲ್ಲಿಯೂ ಉತ್ರರ ಪ್ರದೇಶದಲ್ಲಿ ಬಿಜೆಪಿಗೆ ಶೇ42% ರಷ್ಟು ಮತ ಪಡೆಯುವುದರೊಂದಿಗೆ ದಾಖಲೆ ಸೃಷ್ಟಿಯಾಗಿದೆ. ಇನ್ನೊಂದು ಆಶ್ಚರ್ಯಕರ ಬೆಳವಣಿಗೆಯೆಂದರೆ ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಕೂಡ ಸೋತಿದ್ದಾರೆ. ಪಂಜಾಬಿನ Pಅಅ ಅಧ್ಯಕ್ಷ ನವಜೋತ್ ಸಿಂಗ್ ಸಿದ್ದು ಕೂಡ ಸೋತಿದ್ದಾರೆ. ಉತ್ತರಖಂಡಾದ ಅಒ ಪುಷ್ಕಾರ್ ಸಿಂಗ್ ಧಾಮಿ ಕೂಡ ಸೋತು ಭಾರತ ಇತಿಹಾಸದಲ್ಲಿ ಚುನಾವಣಾ ವಿಷಯದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶವು ಬಿಜೆಪಿಯನ್ನು ಎಲ್ಲಾ ರೀತಿಯ ಜನ ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಬಿಜೆಪಿಯ ಧರ್ಮ ನೀತಿಗಳು ವಿದೇಶಾಂಗ ನೀತಿಗಳು ಮತ್ತು ರೈತ ವಿರೋಧಿ ಕಾನೂನುಗಳ ಮಧ್ಯೆಯೂ ದೇಶದ ಯುವ ಜನತೆ ಸೇರಿದಂತೆ ಪ್ರಬುದ್ದ ಮತದಾರ ಕೂಡ ಬಿಜೆಪಿ ಯತ್ತ ಒಲವು ತೋರಿಸುತ್ತಿರುವುದನ್ನು ನೋಡಿದರೆ ಬಿಜೆಪಿ ಲೋಕಸಭೆಯಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಖಚಿತವಾಗಿದೆ ಎನ್ನಬಹುದು. ಈ ಪಂಚ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿಯು ಶೇ%ವಾರು ಮತಗಳಿಕೆ ಯಲ್ಲಿಯೂ ಹೆಚ್ಚಾಗಿರುವುದನ್ನು ನೋಡಿದರೆ ಬಿಜೆಪಿಗೆ ಮತ್ತೊಂದು ಅವಕಾಶ ಇರುವುದು ಖಚಿತವಾಗಿರುತ್ತದೆ.


Share