POST

ವಿಶ್ವ ಕುಟುಂಬ ದಿನದ (Global Family Day)ಪ್ರಯುಕ್ತ ವಿಶೇಷ ಲೇಖನ

ಕುಟುಂಬವು ಸಮಾಜದ ಬಹು ಮುಖ್ಯ ಅಂಗವಾಗಿದೆ.ಉತ್ತಮ ಕುಟುಂಬದಿಂದಲೇ ಅತ್ಯುತ್ತಮ ಸಮಾಜ ನರ್ಮಾಣ ಸಾಧ್ಯ.”ವಸುದೈವ ಕುಟುಂಬಕಂ” ಎಂಬೊಂದು ನುಡಿಯಿದೆ.ಇದರ ರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಇದು ಕುಟುಂಬವೊಂದರ ಮಹತ್ವವನ್ನು ಸಾರುತ್ತದೆ. ಈ ಕುಟುಂಬ ಎಂಬ ಪರಿಕಲ್ಪನೆ ತುಂಬಾ ಪವಿತ್ರ ಮತ್ತು ಮಹತ್ವವಾದದ್ದು. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಆಧುನಿಕ ಜೀವನಕ್ಕೆ ಹೊಂದಿಕೊಂಡಂತೆ ಕುಟುಂಬಗಳು ಸಣ್ಣದಾಗತೊಡಗಿವೆ. ಬಾಲ್ಯದಲ್ಲಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ತಂದೆ-ತಾಯಿಯನ್ನು ವೃದ್ಧಾಪ್ಯದಲ್ಲಿ ಆಶ್ರಮಕ್ಕೆ ದೂಡುವ ಮಕ್ಕಳಿಗೆ ಕುಟುಂಬದ ಮಹತ್ವವನ್ನು ತಿಳಿಸಿಕೊಡುವ ಕಾರ್ಯವಾಗಬೇಕು. ಪ್ರತಿಯೋರ್ವ ವ್ಯಕ್ತಿ ಮತ್ತು ಸಮಾಜವನ್ನು ಒಂದೆಡೆ ಕೇಂದ್ರಿಕರಿಸುವ ಈ ವ್ಯವಸ್ಥೆ ನಮ್ಮ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಹುಶಃ ಕುಟುಂಬವೆಂಬ ಪರಿಕಲ್ಪನೆ ಇಲ್ಲದಿದ್ದರೆ. ಇಡೀ ಜಗತ್ತನ್ನು ಊಹಿಸಲು ಅಸಾಧ್ಯವಾಗುತ್ತಿತ್ತು. ಅಷ್ಟರ ಮಟ್ಟಿಗೆ ಕುಟುಂಬದ ಅಗತ್ಯ ನಮ್ಮ ವಿಶ್ವಕ್ಕೆ ಇದೆ.ಮುಂದೆ ಕೂಡಾ ಜಗತ್ತು ಶಾಂತಿ, ಸಂಯಮದ ಹಾದಿಯಲ್ಲಿ ಸಾಗಬೇಕಿದ್ದರೆ ಅದಕ್ಕೆ ಕುಟುಂಬದ ತಳಪಾಯ ಅತಿ ಅಗತ್ಯ.ಅದು ನಮ್ಮ ದೇಶವಾಗಿರಲಿ ಅಥವಾ ವಿದೇಶವಾಗಿರಲಿ ಎಲ್ಲಾ ಕಡೆಯೂ ಕುಟುಂಬವೆಂಬ ಭದ್ರ ಬುನಾದಿ ಇದ್ದೇ ಇದೆ. ಆದ್ದರಿಂದಲೇ ನಮ್ಮ ವಿಶ್ವ ಇಂದು ಉಳಿದುಕೊಂಡು ಮುಂದಕ್ಕೆ ಬೆಳೆಯುತ್ತಿದೆ.
ಭಾರತದ ಇತಿಹಾಸ ಹಾಗೂ ಸಂಸ್ಕøತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗಿಕರಿಸಬಹುದು. ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿಗೆ ಏಕ ಪೆÇೀಷಕ ಕುಟುಂಬವೊಂದು ನಿರ್ಮಾಣವಾಗಿದೆ ಅದುವೇ ವಿಭಕ್ತ ಕುಟುಂಬ.
ಅವಿಭಕ್ತ ಕುಟುಂಬ ಅಥವಾ ಕೂಡು ಕುಟುಂಬ ಇದ್ದಾಗ ಮಾತ್ರ ಸಮಾಜದ ನಿರ್ಮಾಣಕ್ಕೆ ನಾಂದಿ ಎನ್ನುವ ಮಾತಿದೆ. ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ. ಅವಿಭಕ್ತ ಕುಟುಂಬ ಎಂದರೆ ಒಂದೇ ಮನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಲೆಮಾರಿನವರು ವಾಸಿಸುವುದನ್ನು ಅವಿಭಕ್ತ ಕುಟುಂಬ ಎನ್ನಲಾಗುತ್ತದೆ. ಭಾರತೀಯ ಪರಂಪರೆಯಲ್ಲಿ ಕುಟುಂಬಕ್ಕೆ ಅದರದ್ದೇ ಆದ ಪ್ರಾಮುಖ್ಯವಿದೆ. ಅವಿಭಕ್ತ ಕುಟುಂಬಗಳನ್ನು ಹೊಂದಿದ್ದ ಭಾರತೀಯ ಸಂಸ್ಕೃತಿಯೂ ಕೂಡಿ ಬಾಳುವುದನ್ನು ಕಲಿಸಿಕೊಡುತ್ತದೆ. ಇಲ್ಲಿ ಪ್ರೀತಿ, ಒಗ್ಗಟ್ಟುಗಳೇ ಮೂಲಮಂತ್ರ. ಒಂದು ಮಗು ಸಮಾಜದ ಉತ್ತಮ ಪ್ರಜೆಯಾಗಿ ರೂಪುಗೊಂಡರೆ ಅದರಲ್ಲಿ ಆ ಮಗುವಿನ ಶಕ್ತಿಗಿಂತ ಆತನನ್ನು ಆ ರೀತಿ ರೂಪಿಸಿದ ಕುಟುಂಬದ ಸಂಸ್ಕೃತಿಯನ್ನು ಹೊಗಳುವ ಒಂದು ಕಾಲಘಟ್ಟವಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜತೆಗೆ ಜಗತ್ತಿನಾದ್ಯಂತ ಕುಟುಂಬ ರೂಪೀಕರಣದ ಪದ್ಧತಿಯೂ ಬದಲಾಗಿದೆ. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬದಲಾಗಿವೆ. ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ,ದೊಡ್ಡಮ್ಮ, ಅಳಿಯ, ಮಾವ, ಅತ್ತೆ, ಸೊಸೆ, ಅಪ್ಪ, ಅಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತುಂಬಿತುಳುಕುತ್ತಿದ್ದ ಮನೆಗಳಲ್ಲಿ ಅಮ್ಮನ ಕೈ ತುತ್ತು, ಅಪ್ಪನ ಕಿವಿ ಮಾತು, ಅಜ್ಜಿಯ ಕಾಗೆ ಗುಬ್ಬಕ್ಕನ ಕತೆ, ಅಜ್ಜನ ಮನೆಯ ಜವಬ್ದಾರಿ. ಒಬ್ಬರಿಗೆ ಕಷ್ಟ ಬಂದರೆ ಸಾಕು ತಮಗೇ ಬಂದಿದ್ದೇನೋ ಎಂಬಂತೆ ಸಹಾಯಕ್ಕೆ ಬರುವ ಮನಸ್ಸುಗಳು. ಒಬ್ಬರನ್ನೊಬ್ಬರು ರ್ಥ ಮಾಡಿಕೊಂಡು ಜೀವನ ನಡೆಸುವುದು. ಅಲ್ಲಿ ಹಿರಿಯರ ಮಾತೇ ಅಂತಿಮ ನರ್ಣಯ. ಅವರ ಮಾತನ್ನು ಉಲ್ಲಂಘಿಸುವವರಿಲ್ಲ.ಅಲ್ಲಿ ಚಿಕ್ಕವರು ದೊಡ್ಡವರೆಂಬ ಕೀಳರಿಮೆಯಿಲ್ಲ ಎಲ್ಲರೂ ಒಂದೇ ಎನ್ನುವ ಭಾವನೆ ಅವಿಭಕ್ತ ಕುಟುಂಬದಲ್ಲಿ ಇರುತ್ತದೆ. ಆದರೆ ಈಗ ಕೇವಲ ಗಂಡ, ಹೆಂಡತಿ, ಮಕ್ಕಳು ಮಾತ್ರ ಕಾಣಸಿಗುತ್ತಾರೆ. ಕುಟುಂಬದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಾ ಹೋದಂತೆ ಅಲ್ಲಿ ಭಾವನೆಗಳೂ ಬೆಲೆ ಕಳೆದು ಕೊಳ್ಳಲಾರಂಭಿಸುತ್ತವೆ. ಹೆತ್ತವರ, ಮಕ್ಕಳ ತರಾತುರಿಯ ಜೀವನದ ನಡುವೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವಷ್ಟು ಸಮಯವಿಲ್ಲದೆ ಕೇವಲ ಯಂತ್ರಗಳಂತೆ ಬದುಕಬಹುದಾಗಿದೆ. ಆದರೆ ಇಂದಿನ ದಿನಗಳಲ್ಲಿ ಕುಟುಂಬದ ಮಾದರಿಯು ತುಂಬಾ ಬದಲಾಗಿದೆ. ಹಿಂದೆ ತುಂಬಾ ಜನರಿಂದ ಕೂಡಿದ ಅವಿಭಕ್ತ ಕುಟುಂಬವಿತ್ತು. ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.ಆದರೆ ಇಂದಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ. ಹೀಗಾಗಿ ಇಂದಿನ ದಿನಗಳಲ್ಲಿ ಹೆಚ್ಚಾಗಿ ವಿಭಕ್ತ ಕುಟುಂಬಗಳಿವೆ. ಅವಿಭಕ್ತ ಕುಟುಂಬಗಳು ಇಂದು ದೊಡ್ಡ ಹೊರೆ ಮತ್ತು ಹಲವರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿ ಕಾರಣವೋ ಅಥವಾ ಸಂಸ್ಕಾರದ ಕೊರತೆಯೋ ಅಥವಾ ಸ್ವರ್ಥವೋ? ಏನೆಂದು ಗೊತ್ತಾಗುತ್ತಿಲ್ಲ. ಆದ್ದರಿಂದ ಇಂದಿನ ವಿಭಕ್ತ ಕುಟುಂಬಕ್ಕೆ ಕುಟುಂಬದ ಮಹತ್ವವನ್ನು ತಿಳಿಸುವ ಸಲುವಾಗಿ ಅಂತರರಾಷ್ಟ್ರೀಯ ಕುಟುಂಬ ದಿನವನ್ನು ಜನೆವರಿ 01 ರಂದು ಆಚರಿಸಲಾಗುತ್ತದೆ.
ಕಳೆದ ವರ್ಷ ಕೊರೊನಾ ಸಂದಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನತಾರ್ಪ್ಯೂಗೆ ಕರೆ ನೀಡಿದಾಗ ಕೊರೊನಾ ವಾರಿರ್ಸ್ ಗಳಿಗೆ ದೀಪ ಬೆಳಗುವ ಮೂಲಕ ಗೌರವಿಸಿ, ದೇಶದ ಜನರೆಲ್ಲ ಅಭೂತಪರ್ವವಾಗಿ ಸ್ಪಂದಿಸಿದ್ದರು. ಇದು ನಮ್ಮಲ್ಲಿನ ಕೌಟುಂಬಿಕ ವ್ಯವಸ್ಥೆಯ ಸಂಕೇತವನ್ನು ತಿಳಿಸುತ್ತದೆ. ಕೊರೊನಾ ಸಮಯದಲ್ಲಿ ವಿದೇಶಗಳಲ್ಲಿ ಏನೇ ಕಳವಳವಾದರೂ, ಭಾರತದಲ್ಲಿ ಸಶಕ್ತವಾಗಿ ಎದುರಿಸಿದೆವು. ಇದಕ್ಕೆ ಕೌಟುಂಬಿಕ ವ್ಯವಸ್ಥೆಯೇ ಕಾರಣ ಎಂದು ಹೇಳಲಾಗುತ್ತದೆ. ಕೌಟುಂಬಿಕ ವ್ಯವಸ್ಥೆಯನ್ನು ಬಲಗೊಳಿಸಲು ನಾವು ಮುಂದಾಗಬೇಕಿದೆ. ವಾರಕ್ಕೆ ಒಂದು ಬಾರಿಯಾದರೂ ಜೊತೆಗೆ ಕುಳಿತು ಭಜನೆ ಹಾಗೂ ಭೋಜನಗಳಲ್ಲಿ ತೊಡಗುವುದು, ಹಬ್ಬ ಆಚರಣೆ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಕುಟುಂಬದ ಸದಸ್ಯರ ಒಡನಾಟ ಹೆಚ್ಚಾಗಿ ಕುಟುಂಬ ವ್ಯವಸ್ಥೆ ಇನ್ನೂ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಾಧ್ಯ ಹಾಗೂ ಹಬ್ಬ ಹರಿದಿನಗಳು ಬಂದರೆ ಸಾಕು ಮನೆಯಲ್ಲಾ ಸಂಪರ್ಣ ಅಲಂಕಾರ. ಬಗೆ ಬಗೆಯ ತಿಂಡಿ ತಿನಿಸುಗಳು, ಅಜ್ಜಿಯ ಚಕ್ಕುಲಿ, ನಿಪ್ಪಟ್ಟು ವಾಹ್! ಎಲ್ಲರೂ ಸಮಯಕ್ಕೆ ಸರಿಯಾಗಿ ಕೂತು ಒಟ್ಟಿಗೆ ಹರಟುತ್ತಾ, ಹಂಚಿ ಊಟ ಮಾಡುವುದರಲ್ಲಿ ಇರುವ ಸಂತೋಷವೇ ಬೇರೆ.
ಒಟ್ಟಾರೆಯಾಗಿ ಕುಟುಂಬದಲ್ಲಿನ ಮಕ್ಕಳ ಏಳಿಗೆಗಾಗಿ ಎಲ್ಲವನ್ನೂ ಸಹಿಸಿಕೊಂಡು ಸಂಸಾರ ತೂಗಿಸಿಕೊಂಡು ಹೋಗುವ ನಾರಿಯನ್ನು ಭಾರತದಲ್ಲಿ ಮಾತ್ರ ನೋಡಲು ಸಾಧ್ಯ. ವಿದೇಶಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೂ ವಿಚ್ಛೇದನಗಳಿಂದಾಗಿ ತಂದೆ ತಾಯಿಯ ಆರೈಕೆಯಿಲ್ಲದೆ ಬೀದಿಗೆ ಬೀಳುವ ಮಕ್ಕಳು ಸಮಾಜ ಕಂಟಕರಾಗುತ್ತಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ ಎಂದು ಹೇಳಲಾಗಿದೆ. ಮಹಿಳೆಯರಿಗೆ ಸಿಕ್ಕಿರುವ ಮೀಸಲಾತಿ ಅವಕಾಶ ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬಂದಾಗ ಮಾತ್ರ ನಮ್ಮ ಕುಟುಂಬದಲ್ಲಿನ ನೋವು ನಲಿವುಗಳೆರಡನ್ನೂ ಹಂಚಿಕೊಂಡು ಸೋಲು ಗೆಲುವುಗಳಿಗೆ ಜತೆಯಾಗುವಂತಹ ಕುಟುಂಬ ಇದ್ದಾಗ ಮಾತ್ರ ವ್ಯಕ್ತಿ ಪರಿಪರ್ಣನಾಗುತ್ತಾನೆ. ಇದ್ದ ಕುಟುಂಬವನ್ನು ದೂರ ಮಾಡಿಕೊಳ್ಳದೆ ದೂರ ಇರುವ ಕುಟುಂಬದ ಸದಸ್ಯರನ್ನು ಮತ್ತೆ ಜೋಡಿಸಿಕೊಂಡು, ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ನಮ್ಮ ಹಿರಿಯರ ಆಶಯದಂತೆ,ಕೂಡಿ ಬಾಳುವುದರಲ್ಲಿರುವ ಪ್ರೀತಿ, ಪ್ರೇಮ, ಭದ್ರತೆ, ಕೊಡುಕೊಳ್ಳುವಿಕೆಯಿಂದ ಈ ರ್ಷದ ಕುಟುಂಬ ದಿನವನ್ನು ರ್ಷ ಸಂಭ್ರಮದಿಂದ ಆಚರಿಸಬೇಕೆಂಬುವುದು ನಮ್ಮ ನಿಮ್ಮೆಲ್ಲರ ಆಶಯವಾಗಬೇಕಾಗಿದೆ.

ಹೋಳಿ ಪುರಾಣ ಕಾರಣ

ಪುರಾಣದಲ್ಲಿ ಉಲ್ಲೇಖವಿರುವ ಕಾಮದಹನದಲ್ಲಿ- ತಾರಕಾಸುರನೆಂಬ ರಾಕ್ಷಸ ರಾಜ ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣ. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಭೋಗಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವೆಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋದರು. ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದೂ, ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೆÇೀಭಂಗ ಮಾಡುತ್ತಾನೆ. ಕೆರಳಿ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ.
ಮತ್ತೊಂದು ಪಾಠಾಂತರದ ಪ್ರಕಾರ- ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ. ದುರಹಂಕಾರಿಯೂ ಕ್ರೂರಿಯೂ ಆದ ತಾರಕಾಸುರನು ಲೋಕಕಂಟಕನಾಗಿ ಮೆರೆಯುತ್ತಿದ್ದ. ತನಗೆ ಮರಣವು ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಅಂದು ಬ್ರಹ್ಮನಲ್ಲಿ ವರವನ್ನು ಬೇಡಿದ್ದ. ಭೋಗಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ದೇವತೆಗಳು ನಿರುಪಾಯರಾಗಿ ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು. ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸಲ್ಪಡುತ್ತದೆ.
ನಾರದ ಪುರಾಣದಲ್ಲಿ ಮತ್ತೊಂದು ಕಥೆ ಬರುತ್ತದೆ. ತಾನೇ ದೇವರು ಎಂದು ಒಪ್ಪಿಕೊಳ್ಳದೆ ಶ್ರೀಹರಿಯನ್ನೇ ಜಗನ್ನಿಯಾಮಕನೆಂದು ಪರಿಭಾವಿಸುವ ತನ್ನದೇ ಕರುಳ ಕುಡಿ ಪ್ರಹ್ಲಾದನನ್ನು ಕೊಲ್ಲಲು, ದೈತ್ಯರಾಜ ಹಿರಣ್ಯಕಶ್ಯಪು ನಾನಾ ವಿಧದ ಪ್ರಯತ್ನಗಳನ್ನು ಮಾಡಿಯೂ ವಿಫಲನಾಗಿ, ಕೊನೆಗೆ, ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ ಹೊಂದಿರುವ ತಂಗಿ ಹೋಳಿಕಾ (ಹೋಲಿಕಾ)ಳ ಮೊರೆ ಹೋಗುತ್ತಾನೆ. ಅಣ್ಣನ ಅನುಜ್ಞೆಯಂತೆ ಬಾಲ ಪ್ರಹ್ಲಾದನನ್ನು ಹೊತ್ತುಕೊಂಡ ಹೋಳಿಕಾ, ಅಗ್ನಿಕುಂಡ ಪ್ರವೇಶಿಸುತ್ತಾಳೆ. ಆಗ ವಸ್ತ್ರವು ಹಾರಿಹೋಗುತ್ತದೆ, ಹೋಳಿಕಾಳ ದಹನವಾಗುತ್ತದೆ. ವಿಷ್ಣು ಭಕ್ತಾಗ್ರೇಸರ ಪ್ರಹ್ಲಾದ ಬದುಕುಳಿಯುತ್ತಾನೆ.
ಮೇಲೆ ಹೇಳಿದ ಎರಡೂ ಪುರಾಣ ಕಥನಗಳ ಸಂದೇಶ ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಅಂದರೆ ಉತ್ಸವಾಗ್ನಿ ಹಾಕುವ ಪದ್ಧತಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಣೆಯಲ್ಲಿದೆ. ಇಂಥದ್ದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ.
ಆಚರಣೆ
ಈ ದಿನದಂದು ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿದ ಗುಲಾಲು ತಯಾರಿಸಿ, ಬಿದಿರಿನಿಂದ ಪಿಚಕಾರಿ ತಯಾರಿಸಿ ಬಣ್ಣದಾಟ ಆಡುವರು. onam in kannada story blodsky ರಂಗಿನಾಟದ ನಂತರ ಅಭ್ಯಂಜನ ಸ್ನಾನ ಮಾಡಿ ದೇವರಲ್ಲಿ ಪ್ರಾರ್ಥಿಸಿ ಮನೆಗಳಲ್ಲಿ ವಿಶೇಷ ಅಡಿಗೆಗಳನ್ನು ತಯಾರಿಸುವರು. ಈ ಪ್ರದೇಶದಲ್ಲಿ ಜೋಳದ ಹಿಟ್ಟಿನ ಗುಜಿಯಾ ಹಾಗೂ ಪಾಪ್ಡಿ ಜನಪ್ರಿಯವಾಗಿದೆ.

ದೆಹಲಿಯಲ್ಲಿ ಈ ದಿನದಂದು ಹತ್ತು ತಲೆಯ ರಾವಣನ ಮೂರ್ತಿಯನ್ನು ಬಿದಿರಿನಿಂದ ತಯಾರಿಸಿ, ಅದಕ್ಕೆ ಹಳೇ ಬಟ್ಟೆಗಳನ್ನೇಲ್ಲ ಧರಿಸಿ ಗಣ್ಯರನ್ನೇಲ್ಲ ಕರೆದು, ಅವರ ಸಮ್ಮುಖದಲ್ಲಿ ಲಂಕೇಶನನ್ನು ಸುಡುವುದು ವಾಡಿಕೆ.
ಗ್ರಾಮೀಣ ಪ್ರದೇಶಗಳಲ್ಲಿ ಆ ದಿನ ಊರಿನವರ ಮನೆಯಲ್ಲಿ ಸಿಗುವ ಬೇಡದ ವಸ್ತುಗಳನ್ನೆಲ್ಲ ತಂದು ಒಂದೆಡೆ ಗುಡ್ಡೆ ಮಾಡಿ, ರಾತ್ರಿ ಹುಡುಗನೊಬ್ಬನಿಗೆ ಶಿಖಂಡಿಯ ವೇಷ ಹಾಕಿಸಿ, ಅವನಿಂದ ಊರಿನ ಐದು ಮನೆಗಳಲ್ಲಿ ಭಿಕ್ಷೆ ಬೇಡಿಸಿ ಕರೆತಂದು ಅವನಿಂದ ಆ ಬೇಡದ ವಸ್ತುಗಳ ಗುಡ್ಡೆಗೆ ಬೆಂಕಿ ಇಡಿಸುತ್ತಾರೆ. ಅದೇ ಅವರ ಕಾಮದಹನದ ಹಬ್ಬ.

ಜಗದ ಯುಗದ ಕವಿ – ರಾಷ್ಟ್ರಕವಿ ಕುವೆಂಪು

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿನಿಮಿರುವುದು
ಕನ್ನಡ.. ಕನ್ನಡ.. ಆ..ಸವಿ ಕನ್ನಡ..

ಎಂದು ಕನ್ನಡಗರನ್ನು ಸಾಹಿತ್ಯದಲೆಗಳ ಮೇಲೆ ತೇಲುವಂತೆ ಮಾಡಿದ ಶ್ವಬ್ದಮಾಂತ್ರಿಕ.. ಕರುನಾಡಿಗೆ ‘ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕಮಾತೆ’ ಎಂಬ ನಾಡಿಗೀತೆಯ ಪದಪುಂಜಗಳಿಂದ ಕನ್ನಡಮಾತೆಗೆ ಶಬ್ಧಾರ್ಚನೆಮಾಡಿದ ಸಹ್ಯಾದ್ರಿ ಸಾಲ ಕವಿಕುಲೋತ್ತಮ ಕುವೆಂಪು ಕನ್ನಡ ಸಾಹಿತ್ಯ ಲೋಕದ ಅಪ್ಪಟ ಕವಿಕೋಗಿಲೆ.
ಕುವೆಂಪುರವರು ಕನ್ನಡ ನಾಡಿನ ಹೆಮ್ಮೆಯ ರಸಕವಿ, ಋಷಿಕವಿ, ರಾಷ್ಟ್ರಕವಿ ಕನ್ನಡದ ಮತ್ತೋರ್ವ ವರಕವಿಗಳಾದ ಬೇಂದ್ರೆಯವರಿಂದಲೇ ಯುಗದಕವಿ ಜಗದಕವಿ ಎಂದು ಕೀರ್ತಿತರಾಗಿದ್ದಂತಹವರು. ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ತರಗಳಲ್ಲಿ ಎತ್ತಿ ಹಿಡಿದ ಮಹಾನ್ ಚೇತನ.
ಕುವೆಂಪು ಒಬ್ಬ ದಾರ್ಶನಿಕ ಲೇಖಕರು. ವರ್ತಮಾನದ ನಿತ್ಯವನ್ನೂ, ತ್ರಿಕಾಲದ ಭವ್ಯವನ್ನೂ, ಭೂಮವನ್ನೂ, ಅಲ್ಪವನ್ನೂ ಒಂದು ಪೂರ್ಣ ದೃಷ್ಟಿಯಲ್ಲಿ ಒಳಗೊಳ್ಳಲು ಪ್ರಯತ್ನಿಸಿದ ತಪಸ್ವಿಗಳು ‘ಕಾಡಿನ ಕೊಳಲಿದು, ಕಾಡ ಕವಿಯು ನಾ, ನಾಡಿನ ಜನರೊಲಿದಾಲಿಪುದು’ ಎಂಬ ಭಿನ್ನಹದೊಂದಿಗೆ ಕಳೆದ ಶತಮಾನದ 3ನೆಯ ದಶಕದಲ್ಲಿ ಕನ್ನಡ ನವೋದಯವನ್ನು ಪ್ರವೇಶಿಸಿದ ಈ ಕಾಡಿನ ಕವಿ ಅನಂತರ ನಾಡಿನ ಕವಿಯಾಗಿ ಕುವೆಂಪು ಎಂಬ ಮೂರಕ್ಷರದಿಂದಲೇ ಕನ್ನಡಿಗರ ಮನೆ ಮಾತಾದ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ, ಹೊಸಗನ್ನಡ ಸಾಹಿತ್ಯದ ಹಿರಿಯ ಕವಿ. ಕನ್ನಡ ಸಾಹಿತ್ಯವನ್ನು ವಿಶ್ವ ಸಾಹಿತ್ಯ ವೇದಿಕೆಗೆ ಕೊಂಡೊಯ್ದ ವಿಶ್ವಮಾನವ, ಕನ್ನಡದ ಮಹಾನ್ ಚೇತನ.
ಬಾಲ್ಯ ಜೀವನದ ಕಂಪು :
ಕುವೆಂಪುರವರು ಹುಟ್ಟಿದ್ದು 29 ಡಿಸೆಂಬರ್ 1904, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ, ತಂದೆ ವೆಂಕಟಪ್ಪಗೌಡರು, ತಾಯಿ ಸೀತಮ್ಮ, ಆದರೆ ಕುವೆಂಪುರವರು ಹುಟ್ಟಿದ್ದು ತಾಯಿಯ ತವರಾದ ಚಿಕ್ಕಮಗಳೂರು ಜಿಲ್ಲೆಯ ಹಿರೇಕೊಡಗಿ ಗ್ರಾಮದಲ್ಲಿ. ಮಲೆನಾಡಿನ ಮಡಿಲಿನಲ್ಲಿ ಹುಟ್ಟಿ ಬೆಳೆದ ಕುವೆಂಪುರವರು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚಿನ ವಿಷಯವನ್ನು ಕಲಿಸಿದ್ದು ಮಲೆನಾಡಿನ ಪ್ರಕೃತಿ, ಹೀಗಾಗೆ ಅವರ ಎಲ್ಲಾ ಕೃತಿಗಳಲ್ಲಿ ಮಲೆನಾಡಿನ ಸೊಬಗು ಕಂಗೊಳಿಸುತ್ತದೆ.

ಓದುವಾಗಲೇ ಕವಿಹೃದಯ :
ಎಸ್.ಎಸ್.ಎಲ್.ಸಿ ಓದುವಾಗಲೇ ಕುವೆಂಪುರವರ ಬರೆದಿದ್ದ ‘ಬಿಗಿನರ್ಸ್ ಮ್ಯೂಸ್’ ಎಂಬ ಇಂಗ್ಲೀಷ್ ಕವನ ಸಂಕಲನ ಭಾರತ ಭೇಟಿಗೆ ಬಂದಿದ್ದ ಐರಿಷ್ ಕವಿ ಜೆ.ಹೆಚ್.ಕಸಿನ್ಸ್‍ರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಅವರ ಸಲಹೆಯಂತೆ ಕನ್ನಡದಲ್ಲಿ ಬರೆಯಲಾರಂಭಿಸಿದ ಕುವೆಂಪುರವರು ಬರೆದ ಮೊದಲ ಕನ್ನಡ ಕವನ ಸಂಕಲನ ‘ಅಮಲನ ಕಥೆ’ ಚಿಕ್ಕಂದಿನಿಂದಲೇ ಮಲೆನಾಡಿನ ಪರಿಸರದಲ್ಲಿ ಬೆಳೆದ ಕುವೆಂಪುರವರಿಗೆ ಅಪಾರವಾದ ಪರಿಸರ ಪ್ರೇಮ, ಅವರ ಪರಿಸರ ಪ್ರೀತಿಯೇ ಅವರ ಕಾವ್ಯದಲ್ಲಿ ಜೀವಂತವಾಗಿ ಮೇಳೈಸಿದೆ.
ಮಹಾಮಹಿಮರ ಮಾರ್ಗದರ್ಶನ :
ಜೊತೆಗೆ ನಾಡು ಕಂಡ ಧೀಮಂತರಾದ ಶ್ರೀ ಟಿ.ಎಸ್.ವೆಂಕಣ್ಣಯ್ಯ, ಬಿ.ಎಂ.ಶ್ರೀ, ಎ.ಆರ್.ಕೃಷ್ಣಶಾಸ್ತ್ರಿರವರ ಒಡನಾಟ, ಮಾರ್ಗದರ್ಶನಗಳು ಅವರ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು. 1925ರಲ್ಲಿ ಪ್ರಕಟವಾದ ಕುವೆಂಪುರವರ ‘ಬೊಮ್ಮನಹಳ್ಳಿ ಕಿಂದರಿ ಜೋಗಿ’ ನಾಡಿನಾದ್ಯಂತ ಮಕ್ಕಳ ಬಾಯಲ್ಲಿ ನಲಿದಾಡಿತು. ಸೆಂಟ್ರಲ್ ಕಾಲೇಜು ವಿದ್ಯಾರ್ಥಿಯಾಗಿದ್ದ ಕುವೆಂಪುರವರಿಗೆ ಕವಿ ಸಮ್ಮೇಳನದ ಅಧ್ಯಕ್ಷ ಪದವಿಯೂ ಇವರನ್ನು ಅರಸಿ ಬಂತು.
ವಿಶ್ವಮಾನವ ಸಂದೇಶ :
ಕುವೆಂಪು ತಮ್ಮ ಬದುಕಿನ ಸಂದೇಶವೆಂದು ‘ವಿಶ್ವಮಾನವನ’ ಪರಿಕಲ್ಪನೆಯೊಂದನ್ನು ಮಂಡಿಸಿದವರು ‘ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನ’ನ್ನಾಗಿ ಮಾಡುತ್ತೇವೆ. ಮತ್ತೇ ಅದನ್ನು ವಿಶ್ವಮಾನವನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಇದನ್ನು ಕಾರ್ಯಗತಗೊಳಿಸಲು ಅಗತ್ಯವಾದ ಸಪ್ತ ಸೂತ್ರಗಳನ್ನು ಮಂಡಿಸುತ್ತಾ ‘ಮನುಷ್ಯಜಾತಿ ತಾನೊಂದೇ ವಲಂ’ ಎಂಬ ಕವಿ ಪಂಪನ ಸೂತ್ರವನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು ಎನ್ನುತ್ತಾರೆ ಕುವೆಂಪು, ಆದರೆ ಮನುಷ್ಯ ಮನುಷ್ಯನಾಗಿ ಬದುಕುವುದೇ ಸಾಧ್ಯವಾಗದಂತಹ ವಿದ್ಯಮಾನಗಳು ಸಂಭವಿಸುತ್ತಿರುವ ಈ ಹೊತ್ತಿನಲ್ಲಿ ಅನೇಕ ವಿಚ್ಛಿದ್ರಕಾರಕ ಶಕ್ತಿಗಳಿಂದ ಮನುಷ್ಯತ್ವವೇ ಚೂರು ಚೂರಾಗುತ್ತಿರುವ ಸಂದರ್ಭದಲ್ಲಿ ಕುವೆಂಪು ಅವರ ವಿಶ್ವಮಾನವ ಕಲ್ಪನೆ ಒಂದು ದೂರದ, ಎತ್ತರದ ಬೆಳಕು ಮಾತ್ರ!.
ಕಾಡು ಕವಿ :
ಪಂಪನಿಗೆ ಧರ್ಮ ಮತ್ತು ಕಾವ್ಯಧರ್ಮ ಹೇಗೆ ಬೇರೆ ಬೇರೆಯಾಗಿರಲಿಲ್ಲವೋ ಹಾಗೆಯೇ ಕುವೆಂಪು ಅವರಿಗೆ ಪ್ರಕೃತಿ ಮತ್ತು ಕಾವ್ಯ ಪ್ರಕೃತಿ ಬೇರೆ ಬೇರೆಯಾಗಿರಲಿಲ್ಲ. ಕಣ್ಣಿಗೆ ಕಾಣುವ ಪ್ರಕೃತಿ ಹಾಗೂ ಕಣ್ಣಿಗೆ ಕಾಣದ ಪ್ರಕೃತಿಗಳ ಅಂತರ ಸಂಬಂಧವನ್ನು, ಅಂತರ ವಿರೋಧವನ್ನು ತಮ್ಮ ಕೃತಿಗಳಲ್ಲಿ ಅನುಸಂಧಾನ ಮಾಡುತ್ತಾರೆ. ಕಾಡಿನ ರುದ್ರ ಭೀಕರತೆಯನ್ನು ಸೌಮ್ಯ ಸೌಂಧರ್ಯವನ್ನು ತಮ್ಮ ಪಾತ್ರಗಳ ವ್ಯಕ್ತಿತ್ವಗಳ ಬೆಳವಣಿಗೆಗೆ ಭಿತ್ತಿಯಾಗಿ ಬೆಳೆಸುತ್ತಾರೆ. ಕಾಡಿನ ಮಹತ್ವ, ಪ್ರಕೃತಿಯ ಅನಂತತೆಯನ್ನು ಸಾರುತ್ತಾರೆ. ಪ್ರಕೃತಿ ತನಗೋಸ್ಕರ ಇದೆ ಎಂಬ ಯಜಮಾನ ಧೋರಣೆಯನ್ನು ಖಂಡಿಸಿ ತಾನು ಅದರ ಒಂದು ಭಾಗ ಮಾತ್ರ ಎಂಬುದನ್ನು ಮನದಟ್ಟಾಗಿಸಿ ಮನುಷ್ಯ ಸಾಧ್ಯತೆಗಳ ಮಿತಿಯನ್ನು ತೋರಿಸುವುದು ಕುವೆಂಪು ಅವರ ಉದ್ಧೇಶವಾಗಿದೆ.
ಕುವೆಂಪು ತಮ್ಮ ಎರಡು ಕಾದಂಬರಿಗಳಲ್ಲೂ ಮಲೆನಾಡಿನ ಬದುಕನ್ನು ಚಿತ್ರಿಸಿದ್ದಾರೆ, ಹೀಗೆ ಚಿತ್ರಿಸುವಾಗ ಇದು ಸೌಂದರ್ಯ ವರ್ಣನೆ, ಇದು ಕಾಡಿನ ವರ್ಣನೆ, ಇದು ಸಂಪ್ರದಾಯದ ವರ್ಣನೆ ಎಂದೇನು ವಿಭಾಗಿಸಿಲ್ಲ. ಕುವೆಂಪು ಸಾಹಿತ್ಯದಲ್ಲಿ ಪರಿಸರ ಎಂದ ಕೂಡಲೇ ನಮ್ಮ ಮನಸ್ಸಿನಲ್ಲಿ ಮೂಡುವುದು ಅಲ್ಲಿನ ಮರಗಿಡ ಬಳ್ಳಿಗಳು, ನದಿ ತೊರೆಗಳು, ಬೆಟ್ಟ ಗುಡ್ಡಗಳು, ಪ್ರಾಣಿಪಕ್ಷಿಗಳು, ಇನ್ನಿತರ ಸಂಗತಿಗಳನ್ನು ಹೇಗೆ ವರ್ಣಿಸಿದ್ದಾರೆ ಎಂಬುದು ಬೇರೆಲ್ಲಾ ಅವರ ಕೃತಿಗಳಿಗಿಂತ ಕಾದಂಬರಿಗಳಲ್ಲಿ ಇವೆಲ್ಲದರ ವರ್ಣನೆ ಹೆಚ್ಚಾಗಿಯು ಇದೆ.
ಕುವೆಂಪು ಅವರ ಎರಡು ಕಾದಂಬರಿಗಳಲ್ಲಿ ಬರುವ ಪರಿಸರ ಚಿತ್ರಣ, ಕಾಡು, ಗಿಡ, ಮರ, ಬೆಟ್ಟ ಗುಡ್ಡಕ್ಕೆ ಮೀಸಲಿಲ್ಲ, ಅಜ್ಞಾನ, ಮೂಢನಂಬಿಕೆ, ಶೋಷಣೆ ಇವೆಲ್ಲವುಗಳಿಂದ ಮುಕ್ತವಾಗಿ ಬದುಕಲಿಕ್ಕೆ ಬೇಕಾದ ಸಹನೀಯ ವಾತಾವರಣ ನಿರ್ಮಿಸುವುದಾಗಿದೆ. ಒಂದು ಜೀವ ಬದುಕಲಿಕ್ಕೆ ಸಾಧ್ಯವಾಗದಂತಹ ಪರಿಸರ ನಿರ್ಮಾಣವಾಗಿರುವುದನ್ನು ವಿರೋಧಿಸುವ ಮೂಲಕ ಸಮಾನತೆಯ ಕಾಳಜಿಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ.
ವಿಚಾರವಾದಿಯ ರೂಪ :
ಇಂಗ್ಲೀಷ್ ಶಿಕ್ಷಣ, ಪ್ರಾಚ್ಯ – ಪಾಶ್ಚಾತ್ಯ, ತತ್ತ್ವಜ್ಞಾನಗಳ ತಳಸ್ಪರ್ಶಿಯಾದ ತಿಳುವಳಿಕೆ ಆಧುನಿಕ ವಿಜ್ಞಾನ ಮತ್ತು ಜಾಗತಿಕ ಸಮಾಜವಾದಿ ಚಿಂತನೆಗಳೊಂದಿಗೆ ನಡೆಸಿದ ಸಂವಾದ, ಶ್ರೀ ರಾಮಕೃಷ್ಣ – ವಿವೇಕಾನಂದ – ಗಾಂಧಿ – ಅರವಿಂದ ಮತ್ತು ಲೋಹಿಯಾ ಇಂತಹ ವ್ಯಕ್ತಿತ್ವಗಳ ಚಿಂತನೆಯ ಪ್ರಭಾವ ಇತ್ಯಾದಿಗಳಿಂದ ರೂಪುಗೊಂಡ ಕುವೆಂಪು ಅವರ ವೈಚಾರಿಕತೆಯು ಮನುಷ್ಯ ಚೈತನ್ಯದ ಚಲನಶೀಲತೆಯನ್ನು ಸ್ತಗಿತಗೊಳಿಸುವ ಎಲ್ಲಾ ವಿಕೃತಿಗಳನ್ನು ವಿರೋಧಿಸುತ್ತಾ, ಮನುಷ್ಯರೆಲ್ಲರ ಘನತೆಯನ್ನು ಎತ್ತಿ ಹಿಡಿಯುವ ಸ್ವರೂಪದ್ದಾಗಿದೆ.
ಕನ್ನಡಕ್ಕೆ ಕುವೆಂಪು ಸಾಹಿತ್ಯ ಕಾಣಿಕೆ :
ಕುವೆಂಪು ಅವರು ಬರೆದ ಎರಡು ಕಾದಂಬರಿಗಳಾದ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮಧುಮಗಳು’ ಭಾರತೀಯ ಸಾಹಿತ್ಯ ಪ್ರಪಂಚದಲ್ಲೇ ಶ್ರೇಷ್ಠಕೃತಿಗಳೆಂಬ ಪ್ರಶಂಸೆಗೆ ಪಾತ್ರವಾಗಿವೆ. ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದು ಕೊಟ್ಟ ಹಿರಿಮೆಯನ್ನು ಹೊಂದಿದ ಇವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ ಸಂಸ್ಕøತ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿದೆ.
ಇವರು ‘ಬೆರಳ್ಗೆ ಕೊರಳ್, ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರಂ, ರಕ್ತಾಕ್ಷಿ, ಜಲಗಾರ’ ಮೊದಲಾದ ನಾಟಕಗಳನ್ನು ಬರೆದಿದ್ದಾರೆ. ಜೊತೆಗೆ ಕೊಳಲು, ಅಗ್ನಿಹಂಸ, ಅನಿಕೇತನ, ಅನುತ್ತರಾ, ಇಕ್ಷುಗಂಗೋತ್ರಿ ಕಥನ ಕವನಗಳು ಕಲಾ ಸುಂದರಿ, ಕಿಂಕಿಣಿ, ಕೃತ್ತಿಕೆ, ಜೇನಾಗುವೆ, ನವಿಲು, ಪಕ್ಷಿಕಾಶಿ, ಚಿತ್ರಾಂಗದಾ ಮೊದಲಾದ ಕವನ ಸಂಕನಗಳು ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಗಳನ್ನು ಇವರು ಬರೆದಿದ್ದಾರೆ. ‘ನೆನಪಿನ ದೋಣಿಯಲ್ಲಿ’ ಕುವೆಂಪುರವರ ಆತ್ಮ ಕಥೆ.
‘ಅನಿಕೇತನ’ ಪದ್ಯದ ಮೂಲಕ ವಿಶ್ವಮಾನವ ಸಂದೇಶವನ್ನು ಸಾರಿದ ಮಹಾಕವಿ ಕುವೆಂಪು, ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನ ತಾತ್ವಿಕತೆಯನ್ನು ವಿಸ್ತರಿಸಿದವರು ಕುವೆಂಪು. ನಮಗೆ ಬೇಕಾಗಿರುವುದು ಆ ಮತ ಈ ಮತ ಅಲ್ಲ, ಮನುಜ ಮತ. ಆ ಪಥ ಈ ಪಥ ಅಲ್ಲ, ಸರ್ವರ ಸರ್ವಸ್ತರರ ಬದುಕು ಎನ್ನುತ್ತಾರೆ ಕುವೆಂಪು ನಮ್ಮ ಹಳೆಯ ಶಾಸ್ತ್ರ ಪುರಾಣಗಳನ್ನು ಹೊಸ ಬೆಳಕಿನಲ್ಲಿಟ್ಟು ನೋಡಿ, ಅದರೊಳಗಿನ ಕಸ – ಕೊಳೆಗಳನ್ನು ತೆಗೆದೆಸೆದು ಅಲ್ಲಿ ಹೊಸ ದೃಷ್ಟಿಕೋನವನ್ನಿಟ್ಟು ಕಸಿ ಮಾಡಿದರು. ಜಾತಿ ವ್ಯವಸ್ಥೆ, ಅಸ್ಪøಶ್ಯತೆ ಮತ್ತು ಮೌಢ್ಯಗಳಿಂದ ಮುಕ್ತವಾದ ಸನಾತನ ಧರ್ಮ ಅವರ ಕನಸಾಗಿತ್ತು.
ಬೇಂದ್ರೆಯೂರಲ್ಲಿ ಅಧ್ಯಕ್ಷತೆ :
ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ಧಾರವಾಡದಲ್ಲಿ ನಡೆದ 1957ನೇ ವರ್ಷದಲ್ಲಿ ನಡೆದ 39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1956ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.
ಮೊದಲ ಜ್ಞಾನಪೀಠ :
ಇವರ ಶ್ರೀ ರಾಮಾಯಣ ದರ್ಶನಂ ಕೃತಿಯು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕøತಗೊಂಡ ಇವರು ‘ಜೈ ಭಾರತ ಜನನಿಯ ತನುಜಾತೆ’ ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರುಕವಿ. ರಾಷ್ಟ್ರಕವಿ ಬಿರುದು ಪಡೆದ ಮಹಾನ್ ಕವಿ.
ಸಾಹಿತ್ಯದ ಮೂಲಕವೇ ನಾಡಿನ ಜನ ಮಾನಸವನ್ನು ಅವರಷ್ಟು ಬಲವಾಗಿ ಪ್ರಭಾವಿಸಿದ ಮತ್ತೊಬ್ಬ ಬರಹಗಾರ ಇಲ್ಲ. ಕುವೆಂಪುರವರಿಗೆ ಕುವೆಂಪು ಅವರೇ ಸಾಟಿ!
ಕನ್ನಡ ಸಾಹಿತ್ಯದಲ್ಲಿ 20ನೇ ಶತಮಾನವನ್ನು ‘ಕುವೆಂಪು ಯುಗ’ ಎಂದು ಕರೆಯಲಾಗಿದೆ. ಸುಮಾರು ಮುಕ್ಕಾಲು ಶತಮಾನದ ಕಾಲ ಅವರು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕøತಿಕ ಕ್ಷೇತ್ರದಲ್ಲಿ ಅನಭಿಷಿಕ್ತ ಸಾಮ್ರಾಟರಾಗಿ ರಾರಾಜಿಸಿದರು. ಮಲೆನಾಡಿನ ಯಾವುದೋ ಒಂದು ಮೂಲೆಯಲ್ಲಿ ಹುಟ್ಟಿದ ಈ ಕವಿಚೇತನ ಅಸಾಧಾರಣ ಶ್ರದ್ಧಾಭಕ್ತಿಯಿಂದಲೂ, ತಮ್ಮ ಏಕಾಗ್ರತೆಯಿಂದಲೂ, ವ್ಯಾಸಂಗ ಅಭ್ಯಾಸಗಳನ್ನು ನಡೆಸಿ ಒಬ್ಬ ಮಹಾಕವಿಯಾಗಿ, ಚಿಂತನಶೀಲರಾಗಿ, ವಿಚಾರವಾದಿಯಾಗಿ, ವಿಫುಲ ಸಾಹಿತ್ಯ ರಚನೆ ಮಾಡಿ ಕನ್ನಡಿಗರ ಗೌರವಾಧರಗಳಿಗೆ ಪಾತ್ರರಾಗಿದ್ದಾರೆ.
ನಿಮಗೆ ನೀವೇ ಸರಿಸಾಟಿ :
ಕನ್ನಡ-ಕರ್ನಾಟಕದ ಬಗ್ಗೆ ಅವರು ಬರೆದಿರುವ ಭಾವಗೀತೆಗಳು ನಿತ್ಯನೂತನ, ಮನುಜ ಮತ ವಿಶ್ವಪಥವನ್ನು ಸಾರಿದ ಈ ಸಾಹಿತ್ಯ ಶ್ರೇಷ್ಠ ವಿಶ್ವಮಾನವರೆನಿಸಿದವರು. ಮಹಾಕಾವ್ಯ, ನಾಟಕ, ಖಂಡಕಾವ್ಯ, ಕಥನಕಾವ್ಯ, ಭಾವಗೀತೆಯೇ ಮೊದಲಾದ ಹಲವು ಪ್ರಕಾರಗಳಲ್ಲಿ ಅತ್ಯುತ್ತಮ ಕೃತಿಗಳನ್ನು ನೀಡಿದ ಅದ್ವೀತಿಯ. ಕುವೆಂಪು ಅವರಂತೆ ಸರ್ವ ಪ್ರಕಾರಗಳಲ್ಲೂ ಏಕ ಪ್ರಕಾರವಾದ ಸಿದ್ಧಿ ಪಡೆದ ಕವಿಗಳು ಅತಿ ವಿರಳ.
ಕುವೆಂಪು ಆ ಹೆಸರಲ್ಲೇ ಏನೋ ಒಂದು ವಿಧವಾದ ಕಂಪು. ಇದು ಕನ್ನಡದ ಕಂಪು. ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಏರುಗತಿಯಲ್ಲಿ ಸಾಗಲು ಕುವೆಂಪು ಕಾರಣಕರ್ತರು ಎಂದರೆ ತಪ್ಪಾಗಲಾರದು. ಕವನ, ಕಾವ್ಯ, ಸಣ್ಣಕಥೆಗಳು, ನಾಟಕ, ಕಾದಂಬರಿ, ಮಹಾಕಾವ್ಯ, ವಿಮರ್ಶೆ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಗೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮೂಲಕ ಅಜರಾಮರವಾಗಿ ಉಳಿದಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದ ಖ್ಯಾತಿಯನ್ನು ತಂದುಕೊಟ್ಟಿದ್ದಾರೆ.
ಸಂಸಾರ ನೌಕೆ :
1937 ಎಪ್ರಿಲ್ 30 ರಂದು ಹೇಮಾವತಿಯವರನ್ನು ಕೈ ಹಿಡಿದರು..ಪೂರ್ಣಚಂದ್ರ ತೇಜಸ್ವಿ ಮತ್ತು ಕೋಕಿಲೋದಯ ಚೈತ್ರ ಎಂಬ ಪುತ್ರರು, ಇಂದುಕಲಾ ಮತ್ತು ತರಿಣಿ ಎಂಬ ಇಬ್ಬ ಪುತ್ರಿಯರಿದ್ದಾರೆ. ರಾಮಕೃಷ್ಣ ಪರಮಹಂಸರ ಜೀವನದಿಂದ ಪ್ರಭಾವಿತರಾದ ಕುವೆಂಪುರವರು ಸ್ವಾಮಿ ಶಿವಾನಂದರಿಂದ ದೀಕ್ಷೆ ಪಡೆದಿದ್ದಾರೆ.

ಕುವೆಂಪು ರಾಷ್ಟೀಯ ಪ್ರತಿಷ್ಠಾನ ಇವರು ಜನಿಸಿದ ಮನೆಯನ್ನು ಕವಿಮನೆ ಹೆಸರಿನ ಮ್ಯೂಸಿಯಂ ಮಾಡಿದ್ದಾರೆ.1987 ರಲ್ಲಿ ಶಿವಮೊಗ್ಗದಲ್ಲಿ ಕುವೆಂಪುರವ ಗೌರವಾರ್ಥವಾಗಿ ಕುವೆಂಪು ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು.

ಇಂತಹ ಮಹಾನ್ ಚೇತನ ನ.11 1994 ರಲ್ಲಿ ಮೈಸೂರಿನಲ್ಲಿ ಕೊನೆಯುಸಿರೆಳದರು ಕನ್ನಡ ಮಾತೆಯ ಮಡಿಲು ಸೇರಿಕೊಂಡರು. ಕುಪ್ಪಳಿಯ ಕವಿಶೈಲದಲ್ಲಿ ಇಂದಿಗೂ ಅವರ ಸಮಾಧಿ ಇದೆ. ಅವರು ಹುಟ್ಟಿದ ಮನೆಯನ್ನು ಪ್ರವಾಸಿಗರಿಗೆ ಪ್ರವಾಸಿ ಕ್ಷೇತ್ರವನ್ನಾಗಿಸಿದ್ದಾರೆ.

ವಿಶ್ವ ಮಾನವ ದಿನ ;

ಕರ್ನಾಟಕ ಸರ್ಕಾರವು 2015ರ ಡಿಸೆಂಬರ್‍ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್ 29 ಅನ್ನು “ವಿಶ್ವ ಮಾನವ” ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಈ ಮೂಲಕ ವಿಶ್ವಮಾನವ ಸಂದೇಶ ಸಾರಿದ ಕವಿಗೆ ಮತ್ತೊಂದು ಗೌರವ ಸಂದಾಯವಾದಂತಾಯ್ತು.

  • ಡಾ.ಡಿ.ಸಿ.ರಾಮಚಂದ್ರ

ಅಕ್ಕಿಹೆಬ್ಬಾಳ ಕರ್ನಾಟಕದ ಲಂಡನ್

ಹೇಮಾವತಿ ನದಿ ತೀರದಲ್ಲಿರುವ ಅಕ್ಕಿಹೆಬ್ಬಾಳು ಗ್ರಾಮವು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಹೋಬಳಿ ಕೇಂದ್ರ, ಇದು ಭೇರ್ಯ ಮತ್ತು ಕೃಷ್ಣರಾಜಪೇಟೆ ನಡುವೆ ಬರುವ ಒಂದು ಸುಂದರ ಗ್ರಾಮ, ಅಕ್ಕಿಹೆಬ್ಬಾಳು ಕೃಷ್ಣರಾಜಪೇಟೆಯಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಭೌಗೋಳಿಕ ವಿಸ್ತೀರ್ಣ 152.46 ಹೆಕ್ಟೇರ್‍ಗಳು, ಅಕ್ಕಿಹೆಬ್ಬಾಳು ಗ್ರಾಮದ ಬಗ್ಗೆ ಬೆಳಕು ಚೆಲ್ಲುವ ಐತಿಹಾಸಿಕ ಆಧಾರಗಳು ಬಹಳಷ್ಟು ದೊರೆಯುವುದಿಲ್ಲ. ಹೊಯ್ಸಳರ ಕಾಲದ ಎರಡು ಶಾಸನಗಳು ಕೊಂಕಣೇಶ್ವರ ಶಿವಾಲಯದಲ್ಲಿ ದೊರೆತಿದೆ. ಈ ಶಾಸನವು ಅಕ್ಕಿಹೆಬ್ಬಾಳು ಗ್ರಾಮದ ಹಳೆಯ ಹೆಸರು ಮತ್ತು ಕೊಂಕಣೇಶ್ವರ ದೇವರ ಬಗ್ಗೆ ಮಾಹಿತಿ ನೀಡುತ್ತದೆ. ಹೇಮಾವತಿ ನದಿಯ ತೀರದಲ್ಲಿರುವ ಈ ಗ್ರಾಮದಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಾರೆ ಆ ಕಾರಣಕ್ಕೆ ಅಕ್ಕಿಹೆಬ್ಬಾಳು ಎಂದು ಹೆಸರು ಬಂತು ಎಂಬ ಹೇಳಲಾಗಿದೆ. ಗ್ರಾಮದ ಬಳಿ ಹರಿಯುತ್ತಿದ್ದ ಹೇಮಾವತಿ ನದಿಯನ್ನು ಹೊಯ್ಸಳರ ಕಾಲದಲ್ಲಿ ಹೆಬ್ಬಹಳ್ಳ ಎಂದು ಕರೆಯುತ್ತಿದ್ದರು. ಈ ಎರಡು ಹೆಸರು ಸೇರಿಸಿ ಅಕ್ಕಿಹೆಬ್ಬಾಳು ಎಂದು ನಮ್ಮ ಹಿರಿಯರು ನಾಮಕರಣ ಮಾಡಿದ್ದರು. ಆಗಿನ ಕಾಲದಲ್ಲಿ ಹೊಯ್ಸಳರು ಅಕ್ಕಿಹೆಬ್ಬಾಳನ್ನು “ಲಂಡನ್” ಎಂದು ಕರೆಯುತ್ತಿದರು. ಎ.ಎನ್.ಮೂರ್ತಿರಾವ್ ಅವರು ಬರೆದಿರುವ “ಸಂಜೆಗಣ್ಣಿನ ಹಿನ್ನೋಟ” ಪುಸ್ತಕದಲ್ಲಿ ಅಕ್ಕಿಹೆಬ್ಬಾಳಿನ ಹಳೆಯ ಹೆಸರು “ತಂಡಲಪುರ” ಎಂದು ಹೇಳಿದ್ದಾರೆ.
ಇಲ್ಲಿನ ಶಾಸನವೊಂದು ಈಶ್ವರ ದೇವರನ್ನು ಕೋಗಳೇಶ್ವರ ಎಂದು ಹೆಸರಿಸಿದೆ. ದೇವಾಲಯದ ಹೆಸರು ಅಳತೆಯ ಒಂದು ಪರಂಪರಾಗತ ಸಾಧನವಾದ ಕೊಳಗದ ಹೆಸರಿನಿಂದ ಬಂದಿರಬಹುದು. ಕೊಳಗದಲ್ಲಿ ಅಳತೆ ಮಾಡಿ ಸುಂಕವನ್ನು ಪಡೆಯಿತ್ತಿದ್ದ ಪ್ರದೇಶದಲ್ಲಿ ಇದ್ದುದರಿಂದ ಈ ದೇವಾಲಯವನ್ನು ಕೊಂಕಣೇಶ್ವರ ಎಂದು ಹೆಸರು ಬಂತ್ತು. ಈ ಗ್ರಾಮದಲ್ಲಿ ಸಿಕ್ಕಿರುವ ಆಧಾರದ ಮೇಲೆ ಈ ದೇವಾಲಯಗಳು 12ನೇ ಶತಮಾನದ ದೇವಾಲಯಗಳು ಎಂದು ಹೇಳುತ್ತಾರೆ.
ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಎರಡು ಪ್ರದೇಶಗಳು ಇದೆ. ಹಳೇ ಊರು ಮತ್ತು ಹೊಸ ಊರು ಎಂಬ ಎರಡು ಪ್ರದೇಶಗಳಿವೆ. ಹಳೇ ಊರಿನಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಶ್ರೀ ಕೊಂಕಣೇಶ್ವರ ದೇವಾಲಯ ಮತ್ತು ಇತ್ತೀಚೆಗೆ ನಿರ್ಮಿಸಿರುವ ಯಾತ್ರಿನಿವಾಸ್, ಸಮುದಾಯ ಭವನ ಹಾಗೂ ಮತ್ತು ಹೇಮಾವತಿ ನದಿ ಹರಿಯುವುದನ್ನು ಬಿಟ್ಟರೆ ಇನ್ನೇನು ಅಲ್ಲಿ ಉಳಿದಿಲ್ಲ. ಹಳೇ ಊರಿನಲ್ಲಿ ಈಗ ಜನರು ವಾಸಿಸುವುದಿಲ್ಲ. ಹಳೇ ಊರಿನಲ್ಲಿ ಹಸಿರಿನಿಂದ ಕೂಡಿದ ಗದ್ದೆಗಳು ಮತ್ತು ತೋಟಗಳಿವೆ. ಹಿಂದಿನ ಕಾಲದಲ್ಲಿ ಹಳೇ ಊರಿನಲ್ಲಿ ಜನರು ವಾಸಿಸುತ್ತಿದ್ದರು. ಮಲೇರಿಯಾ ರೋಗ ಬಂದ ಕಾರಣಕ್ಕೆ ಅಲ್ಲೇ 3 ಕಿ.ಮೀ ದೂರದಲ್ಲಿ ಹೊಸ ಊರನ್ನು ನಮ್ಮ ಹಿರಿಯರು ನಿರ್ಮಾಣ ಮಾಡಿದ್ದರು. ಈಗ ಅಕ್ಕಿಹೆಬ್ಬಾಳಿನ ಹೊಸ ಊರಿನಲ್ಲಿ ಜನರು ವಾಸ ಮಾಡುತ್ತಿದ್ದಾರೆ. ಹಳೇ ಊರಿನಲ್ಲಿ ಇದ್ದ ಕೆಲವು ದೇವರ ವಿಗ್ರಹಗಳನ್ನು ತೆಗೆದುಕೊಂಡು ಹೋಗಿ ಹೊಸ ಊರಿನಲ್ಲಿ ಅನೇಕ ದೇವಾಲಯಗಳನ್ನು ನಿರ್ಮಾಣ ಮಾಡಿಕೊಂಡರು ಎಂದು ನಮ್ಮ ಹಿರಿಯರು ಹೊಸ ಊರು ನಿರ್ಮಾಣದ ಇತಿಹಾಸವನ್ನು ಹೇಳುತ್ತಾರೆ.
ಕೃತಾಯುಗದಲ್ಲಿ ಗೌತಮ ಮಹರ್ಷಿಗಳು ಮುಂದೆ ಕಲಿಯುಗದಲ್ಲಿ ಜನರು ಕಷ್ಟಗಳನ್ನು ತಮ್ಮ ದಿವ್ಯದೃಷ್ಠಿಯಿಂದ ತಿಳಿದು ಆ ಕಷ್ಟಗಳನ್ನು ಪರಿಹರಿಸಬೇಕು ಎಂದು ಶ್ರೀಮನ್ನಾರಾಯಣನ ಅವತಾರವಾದ ಶ್ರೀಲಕ್ಷ್ಮೀನರಸಿಂಹ ಸ್ವಾಮಿಯನ್ನು ಕುರಿತು ಹಲವಾರು ವರ್ಷಗಳ ಕಾಲ ಇಲ್ಲಿನ ಬದರಿಕಾವೃಕ್ಷದ ಕೆಳಗೆ ಕುಳಿತು ತಪಸ್ಸು ಮಾಡಿದ್ದರು. ಮಹರ್ಷಿಗಳ ತಪಸ್ಸಿಗೆ ಪ್ರಸಾದ ಎಂಬ ಫಲಕ್ಕೆ ನರಸಿಂಹಸ್ವಾಮಿ ಲಕ್ಷ್ಮೀ ಸಮೇತವಾಗಿ ಅಕ್ಕಿಹೆಬ್ಬಾಳಿನಲ್ಲಿ ನೆಲೆಸಿದ್ದಾರೆ ಆ ಕಾರಣಕ್ಕೆ ಈ ಊರಿಗೆ “ದಕ್ಷಿಣ ಬದಾರೀಕಾಶ್ರಮ” ಎಂದು ಕರೆಯುತ್ತಾರೆ. ಎಂದು ಎ.ಎನ್.ಮೂರ್ತಿರಾವ್ ಅವರ ಪುಸ್ತಕದಲ್ಲಿ ನಮೂದಿಸಿದ್ದಾರೆ.


ಕಲಿಯುಗದಲ್ಲಿ ಜನರು ಹಲವಾರು ಸಂಕಷ್ಟಗಳಿಗೆ ಗುರಿಯಾಗುತ್ತದೆ. ಆ ಸಂಕಷ್ಟಗಳಿಂದ ನೀನು ಲಕ್ಷ್ಮಿ ಸಮೇತನಾಗಿ ಸ್ಥಿರವಾಗಿ ಭೂಮಿಯಲ್ಲಿ ನೆಲೆಸಿ, ನಿನ್ನನ್ನು ಪೂಜಿಸುವುದರಿಂದ ಸಂಕಷ್ಟಗಳನ್ನು ಪರಿಹರಿಸಬೇಕು ಎಂದುಕೇಳಿಕೊಂಡರು. ಲೋಕ ಕಲ್ಯಾಣಕಾರಕವಾದ ಮುನಿಯ ಬಯಕೆಯನ್ನು ಶ್ರೀ ಹರಿಯುಒಪ್ಪಿ ನರಸಿಂಹಾವತಾರದಲ್ಲಿ ಭಕ್ತರ ಸಂಕಷ್ಟ ಪರಿಹರಿಸಲು ಭೂಮಿಯ ಮೇಲೆ ನೆಲೆ ನಿಂತನು. ಅಂತಹ ಪುಣ್ಯಕ್ಷೇತ್ರವೇ ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯಿರುವ ಆ ಆಲಯವೇ ಗೌತಮಕ್ಷೇತ್ರ ಎಂದು ಹೇಳಿದ್ದರು.
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ವಾಸ್ತು:
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರನ್ನು ಹಳೆಯ ಊರಿನಲ್ಲಿರುವ ದೇವಸ್ಥಾನದಲ್ಲಿ ಪೂಜಿಸಲಾಗುತ್ತಿದೆ. ಇದು ಚೌಕಾಕೃತಿಯ ಪ್ರಾಕಾರದ ಒಳಗೆ ಇದೆ. ಸುತ್ತಲೂ ಕಲ್ಲಿನಿಂದ ನಿರ್ಮಿತವಾದ ಪ್ರಾಕಾರದ ಗೋಡೆಗಳನ್ನು ಹೊಂದಿದೆ. ಪ್ರಾಕಾರದ ಮಧ್ಯದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ವಿಗ್ರಹ ಇದೆ. ಈ ದೇವಾಲಯದ ಉತ್ತರಕ್ಕೆ ಏಕ ಕೊಠಡಿಯ ಲಕ್ಷ್ಮೀಗುಡಿ ಹಾಗೂ ಆಗ್ನೆಯ ಮೂಲೆಯಲ್ಲಿ ಯಜ್ಞ ಶಾಲೆ ಇದೆ. ದೇವಾಲಯವು ಪಶ್ಚಿಮ ದಿಕ್ಕಿನಲ್ಲಿ ಪ್ರವೇಶದ್ವಾರವನ್ನು ಹೊಂದಿದೆ. ಮೂರ್ತಿಯು ಸಹ ಪಶ್ಚಿಮಾಭಿಮುಖವಾಗಿದೆ. ದೇವಾಲಯವು ಗರ್ಭಗೃಹ, ಅಂತರಾಳ, ಮಹಾ ಮಂಟಪ ಮತ್ತು ಮುಖ ಮಂಟಪಗಳನ್ನು ಹೊಂದಿದೆ. ಈ ದೇವಾಲಯದ ರಚನಾ ಶೈಲಿಯು ವಿಜಯನಗರದ ನಂತರದ ಕಾಲದ್ದೆಂದು ತಿಳಿದು ಬರುತ್ತದೆ. ಆದರೆ ಗರ್ಭಗೃಹದಲ್ಲಿ ಇರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ವಿಗ್ರಹವು ಹೊಯ್ಸಳ ಶೈಲಿಗೆ ಸೇರುತ್ತದೆ. ದೇವಾಲಯದ ಕಂಬಗಳು ಅತ್ಯಂತ ಸರಳವಾಗಿ ನಿರ್ಮಿತವಾಗಿವೆ. ಕಂಬಗಳು ಕೆಳಗಿನ ಭಾಗದಲ್ಲಿ ಚೌಕಾಕಾರವಾಗಿದ್ದು, ಮಧ್ಯದಲ್ಲಿ ಅಳಭುಜಾಕೃತಿಯನ್ನು ಹೊಂದಿದ್ದು, ಮೇಲೆ ಪುನಃ ಉರುಳೆಯಾಕರವಾಗಿದೆ. ನವರಂಗದ ಪೂರ್ವದ ಗೋಡೆಯಲ್ಲಿ ಅಂದರೆ ಅಂತರಾಳದ ಪ್ರವೇಶದ್ವಾರದ ಬಲ ಮತ್ತು ಎಡ ಭಾಗಗಳಲ್ಲಿ ನಿರ್ಮಿತವಾದ ಅಲಂಕೃತ ಗೂಡುಗಳು ಮತ್ತು ಅದರಲ್ಲಿ ದೇವದೇವಿಯರ ವಿಗ್ರಹಗಳಿವೆ. ಇದಲ್ಲದೆ ಪ್ರಾಕಾರದ ಪಶ್ಚಿಮದ ಗೋಡೆಗೆ ಸೇರಿದಂತೆ, ಅಂದರೆ ಮುಖ್ಯದ್ವಾರದ ಎರಡು ಪಕ್ಕಗಳಲ್ಲಿ ಕೈಸಾಲೆಗಳಿವೆ, ಮುಖ್ಯದ್ವಾರದ ಮೇಲೆ ಇಟ್ಟಿಗೆ ಗಾರೆಯಿಂದ ನಿರ್ಮಿತವಾಗಿರುವ ಮೂರು ತಲಗಳನ್ನೂ ಮತ್ತು ಕಳಶಗಳನ್ನು ಹೊಂದಿದ ಗೋಪುರವಿದೆ. ಈ ಗೋಪುರದ ರಚನೆಯಲ್ಲಿ ಮೈಸೂರು ಒಡೆಯರ ಕಾಲದ ಕುಶಲ ಕರ್ಮಿಗಳ ಕಲೆಗಾರಿಕೆಯನ್ನು ಕಾಣುತ್ತೇವೆ. ಗರ್ಭಗೃಹದ ಮೇಲೆ ಅತ್ಯಂತ ಸುಂದರವಾಗಿ ನಿರ್ಮಿತವಾದ ವಿಮಾನಗೋಪುರವಿದೆ, ಇದು ಸಹ ಇಟ್ಟಿಗೆಗಾರೆಯಿಂದ ನಿರ್ಮಿತವಾಗಿದೆ. ಲಕ್ಷ್ಮೀನರಸಿಂಹಸ್ವಾಮಿ ವಿಗ್ರಹವು ಸುಖಾಸಿನ ಭಂಗಿಯಲ್ಲಿಗರುಡ ಪೀಠದ ಮೇಲೆ ಕುಳಿತಿದೆ. ಸ್ವಾಮಿಯ ಎಡತೊಡೆಯ ಮೇಲೆ ಮಹಾಲಕ್ಷ್ಮಿಯ ವಿಗ್ರಹವು ಸುಖಾಸನದಲ್ಲಿದೆ. ಮೂರ್ತಿಯು ನಾಲ್ಕು ಕೈಗಳನ್ನೂ ಹೊಂದಿದ್ದು, ಮೇಲಿನ ಎಡಗೈಯಲ್ಲಿ ಶಂಖವನ್ನು, ಬಲಗೈಯಲ್ಲಿ ಚಕ್ರವನ್ನು ಹಿಡಿದಿದೆ. ಲಕ್ಷ್ಮಿಯು ಕೇವಲ ಎರಡು ಕೈಗಳನ್ನು ಹೊಂದಿದ್ದು ಬಲಗೈಯಲ್ಲಿ ಸ್ವಾಮಿಯನ್ನು ಆಲಂಗಿಸಿರುವ ರೀತಿಯಲ್ಲಿ ರೂಪಿಸಲಾಗಿದೆ. ಎಡಗೈಯಲ್ಲಿ ಅಮೃತ ಕಳಶವಿದೆ. ದೇವತೆಯ ವಿಗ್ರಹವು ಅತ್ಯಂತ ಸುಂದರವಾಗಿದೆ. ಸಂಪೂರ್ಣ ಹೊಯ್ಸಳ ಶೈಲಿಗೆ ಸೇರುವ ಈ ವಿಗ್ರಹವನ್ನು ಬೇರೆಡೆಯಿಂದ ತಂದು ಸ್ಥಾಪಿಸಿರಬಹುದೆಂದು ಊಹಿಸಲಾಗಿದೆ. ಅಮ್ಮನವರ ವಿಗ್ರಹವು ವಿಜಯನಗರದ ಕಾಲಕ್ಕೆ ಸೇರುತ್ತದೆ. ಈದೇವಾಲಯದ ರಚನೆಯ ಕಾಲವನ್ನು ಸರಿಸುಮಾರು 17-18ನೆ ಶತಮಾನಕ್ಕೆ ಕೊಂಡೊಯ್ಯಬಹುದು.
ಗರುಡ ಬೃಂದಾವನ ಕಟ್ಟೆ : ಈ ಗರುಡ ಬೃಂದಾವನಕಟ್ಟೆಯು ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಮುಂದೆ ಇದೆ. ಬೃಂದಾವನಕಟ್ಟೆಯನ್ನು ಸುಮಾರು 600 ವರ್ಷಗಳ ಹಿಂದೆ ಚೋಳರು ನಿರ್ಮಾಣ ಮಾಡಿದ್ದಾರೆ. ಈ ಬೃಂದಾವನ ಕಟ್ಟೆಯಲ್ಲಿ ತುಳಸಿ ಸಸ್ಯವನ್ನು ನೆಟ್ಟಿ ಪೆÇೀಷಿಸುತ್ತಿದ್ದಾರೆ. ಅಕ್ಕಿಹೆಬ್ಬಾಳು ಕ್ಷೇತ್ರದಲ್ಲಿ ಧ್ವಜಸ್ತಂಭ ಇಲ್ಲದ ಕಾರಣೀಗರುಡ ಬೃಂದಾವನವನ್ನು ಹಿಂದಿನ ಕಾಲದಲ್ಲಿ ಚೋಳರು ನಿರ್ಮಾಣ ಮಾಡಿದ್ದಾರೆ. ದಿನಾಂಕ 13-02-1979ರಂದು ತಮಿಳುನಾಡಿನ ಮೂಲದ ಒಬ್ಬ ವ್ಯಕ್ತಿಯು ಅಕ್ಕಿಹೆಬ್ಬಾಳು ಕ್ಷೇತ್ರ ಬಂದವರು ಗರುಡ ಬೃಂದಾವನವನ್ನು ಪೂಜಿಸಿ ಸಂಖ್ಯಾಶಾಸ್ತ್ರವೂ ಸಹ ಇದಕ್ಕೆ ಪುಷ್ಟಿ ನೀಡುತ್ತದೆ. 256 ಸಲ ಪ್ರದಕ್ಷಣೆ ಮಾಡಿದರೆ ಮನಸ್ಸಿನಲ್ಲಿ ಇರುವ ಆಸೆಗಳು ಫಲಿಸುತ್ತದೆ ಎಂದು ಹೇಳಿದರು. ಈಗಲೂ ಈ ಗರುಡ ಬೃಂದಾವನಕಟ್ಟೆಯನ್ನು ಭಕ್ತರು ಪ್ರದಕ್ಷಣೆ ಮಾಡುತ್ತಾರೆ.

ಅಕ್ಕಿಹೆಬ್ಬಾಳಿನ ಜಾತ್ರೆ : ಭಾರತೀಯ ಸಂಸ್ಕøತಿಯಲ್ಲಿ ಐದು ದಿನದ ಜಾತ್ರೆ, ಏಳು ದಿನದ ಜಾತ್ರೆ ಮತ್ತು ಒಂಭತ್ತು ದಿನದಜಾತ್ರೆ ಎಂಬ ಮೂರು ವಿಧಗಳ ಜಾತ್ರೆಗಳಿವೆ. ನಮ್ಮ ಅಕ್ಕಿಹೆಬ್ಬಾಳಿನಲ್ಲಿ ಐದು ದಿನದ ಪಂಚಮಿ ರಥೋತ್ಸವ ಮಾಡುತ್ತಾರೆ. ಅಕ್ಕಿಹೆಬ್ಬಾಳು ಗ್ರಾಮದ ಗೌತಮಕ್ಷೇತ್ರದಲ್ಲಿ ಹೇಮಗಿರಿಯ ರಥೋತ್ಸವ ಕಳೆದ ಒಂದು ವಾರದ ನಂತರಜಾತ್ರೆ ನಡೆಸುತ್ತಾರೆ. ಈ ಜಾತ್ರೆಯು ಮಾಘ ಮಾಸದ ಕೃಷ್ಣಪಕ್ಷ, ಪ್ರತಿಪತ್ /ದ್ವಿತೀಯ ಮಹಾನಕ್ಷತ್ರದ ದಿನ ನಡೆಯುತ್ತದೆ. ಜಾತ್ರೆ ನಡೆಯುವ ಐದು ದಿನ ನಾನಾ ರೀತಿಯ ಪೂಜೆಗಳನ್ನು ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವರಿಗೆ ಸಲ್ಲಿಸುತ್ತಾರೆ. ಮೊದಲನೆಯ ದಿನ ಅಭಿμÉೀಕ, ಎರಡನೆಯ ದಿನ ಕಲ್ಯಾಣೋತ್ಸವ, ಮೂರನೆಯ ದಿನ ಪಲ್ಲಕಿ ಉತ್ಸವ, ನಾಲ್ಕನೆಯ ದಿನ ರಥೋತ್ಸವ ಮತ್ತು ಐದನೆ ದಿನ ತೆಪೆÇ್ಪೀತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಈ ಐದು ದಿನದಕಾರ್ಯಕ್ರಮ ನೋಡಲುದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ.
ಅಭಿμÉೀಕ : ಜಾತ್ರೆಯ ಮೊದಲನೆಯ ದಿನ ಮತ್ತು ವಿಶೇಷ ದಿನಗಳಲ್ಲಿ ಅಕ್ಕಿಹೆಬ್ಬಾಳು ಶ್ರೀಲಕ್ಷ್ಮೀನರಸಿಂಹಸ್ವಾಮಿಗೆ ಅಭಿμÉೀಕ ನಡೆಯುತ್ತದೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಸೇರಿಸಿ ದೇವರಿಗೆ ಪಂಚಾಮೃತಾ ಅಭಿμÉೀಕ ಮಾಡುತ್ತಾರೆ. ಈ ದೇವಾಲಯದಲ್ಲಿ ನಿತ್ಯ ಪಾನೀಯ ಅಭಿμÉೀಕ ನಡೆಯುತ್ತದೆ.
ಕಲ್ಯಾಣೋತ್ಸವ : ಜಾತ್ರೆಯಎರಡನೆಯ ದಿನ ನಡೆಯುವ ಕಾರ್ಯಕ್ರಮವೇ ಕಲ್ಯಾಣೋತ್ಸವ ಈ ದಿನ ವಿಷ್ಣು ಮತ್ತು ಲಕ್ಷ್ಮೀ ಅಮ್ಮನವರಿಗೆ ಕಲ್ಯಾಣ ಮಾಡಿಸುತ್ತಾರೆ. ಈ ಉತ್ಸವ ನೋಡಲು ದೇವತೆಗಳು ಬರುತ್ತಾರೆ. ಹಾಗೂ ಮಳಕಿತರಾಗುತ್ತಾರೆ ಎಂದು ಪ್ರತೀತಿ ಇದೆ. ಈ ದೃಶ್ಯವನ್ನು ನೋಡಿ ಕಣ್ಣು ತುಂಬಿಕೊಳ್ಳತ್ತಾರೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ.
ಪಲ್ಲಕಿ ಉತ್ಸವ : ಜಾತ್ರೆಯ ಮೂರನೆಯ ದಿನ ನಡೆಯುವ ಉತ್ಸವವೇ ಪಲ್ಲಕ್ಕಿ ಉತ್ಸವ. ಈ ಉತ್ಸವದಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿಯಲ್ಲಿ ಹೂಗಳಿಂದ ಸುಂದರವಾಗಿ ಅಲಂಕಾರ ಮಾಡುತ್ತಾರೆ. ಈ ಉತ್ಸವದಲ್ಲಿ ಮುಖ್ಯವಾದುದ್ದು ಎಂದರೆ ಹೂ ಅಲಂಕರವಾಗಿರು. ದೇವರನ್ನು ರಾತ್ರಿ ವೇಳೆಯಲ್ಲಿ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾರೆ. ಈ ದಿನ ವಿವಿಧ ಜನಪದ ಕಲಾ ತಂಡಗಳ ಜೊತೆಯಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿಯನ್ನು ಮೆರವಣಿಗೆ ಮಾಡುತ್ತಾರೆ. ದೇವರನ್ನು ಶ್ರೀಲಕ್ಷ್ಮೀನರಸಿಂಹಸ್ವಾಮಿಯ ದೇವಾಲಯದಿಂದ ಅಕ್ಕಿಹೆಬ್ಬಾಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮತ್ತೇ ದೇವಾಲಯಕ್ಕೆ ಮಧ್ಯರಾತ್ರಿ ಮೂರುಗಂಟೆ ಸುಮಾರಿಗೆ ತೆಗೆದುಕೊಂಡು ಹೋಗಿ ಗುಡಿ ದುಂಬಿಸಲಾಗುತ್ತದೆ.
ರಥೋತ್ಸವ : ಜಾತ್ರೆಯ ನಾಲ್ಕನೆಯ ದಿನ ನಡೆಯುವ ಸುಂದರ ಉತ್ಸವವೇ ಈ ರಥೋತ್ಸವ. ಈ ರಥೋತ್ಸವ ದಿನ ಪಲ್ಲಕ್ಕಿ ಉತ್ಸವ ಮುಗಿಸಿಕೊಂಡು ಬಂದಿರುವ ದೇವರನ್ನು ರಥದಲ್ಲಿ ಕೂರಿಸಿ ಜಾತ್ರೆ ನಡೆಸುತ್ತಾರೆ. ರಥೋತ್ಸವದ ದಿನ ವಿಷ್ಣುವಿನ ವಾಹನ ಗರುಡ ಆಜ್ಞೆ ನೀಡಿದರೆ ಮಾತ್ರ ಜಾತ್ರೆಯನ್ನು ನಡೆಸುತ್ತಾರೆ. ಜಾತ್ರೆಯ ದಿನ ಹಣ್ಣುಕಾಯಿ ಮತ್ತು ಇತರೆ ಪೂಜೆಗಳನ್ನು ಭಕ್ತರು ನಡೆಸುತ್ತಾರೆ. ಈ ಉತ್ಸವಕ್ಕೆ ಬಂದಿರುವ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡುತ್ತಾರೆ. ಈ ಉತ್ಸವ ನೋಡಲು ದೇಶ-ವಿದೇಶಗಳಿಂದ ಭಕ್ತರು ಬಂದು ದೇವರ ದರ್ಶನ ಮಾಡುತ್ತಾರೆ.
ತೆಪೆÇ್ಪೀತ್ಸವ : ಜಾತ್ರೆಯ ಐದನೆಯ ಮತ್ತು ಕೊನೆಯ ದಿನ ನಡೆಯವ ಉತ್ಸವವೇ ತೆಪೆÇ್ಪೀತ್ಸವ. ಈ ದಿನ ದೇವರಿಗೆ ಸ್ನಾನ ಮಾಡಿಸಿ ದೇವರು ಹೇಗೆ ಮೊದಲನೆಯ ದಿನ ಇರುತ್ತೋ ಹಾಗೆ ಇರಿಸುತ್ತಾರೆ. ರಥದ ಮೇಲೆ ಇರುವ ಹಾಗೆ ತೆಪ್ಪದ ಮೇಲೆ ದೇವರಿಗೆ ಜಲಕ್ರೀಡೆ ಆಡಿಸಿ ದೇವಾಲಯಕ್ಕೆ ಕರೆದುಕೊಂಡು ಹೋಗುತ್ತಾರೆ.
ಆಕಾಶದಲ್ಲಿ ಗರುಡ ಪಕ್ಷಿಯ ಪ್ರದಕ್ಷಿಣೆ ಮತ್ತು ರಥೋತ್ಸವ : ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವವು ಪ್ರತಿ ವರ್ಷವು ರಥಸಪ್ತಮಿಯಾದ ಒಂದು ವಾರದ ನಂತರ ನಡೆಯುತ್ತದೆ. ಈ ರಥೋತ್ಸವದ ವಿಶೇಷವೆಂದರೆ ಆಕಾಶದಲ್ಲಿ ಗರುಡ ಪಕ್ಷಿಗಳು ರಥದ ಮೇಲ್ಬಾಗದಲ್ಲಿ 50ರಿಂದ 60 ಅಡಿ ಅಂತರದಲ್ಲಿ ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವವನ್ನು ಮುನ್ನಡೆಸಲಾಗುತ್ತದೆ. ಈ ದೃಶ್ಯವಂತೂ ವೈಜ್ಞಾನಿಕ ಲೋಕಕ್ಕೆ ಸವಾಲೆಸೆಯುವಂತಾಗಿದೆ ಎಂಬ ಭಾವ ಪ್ರತಿಯೊಬ್ಬ ಪ್ರತ್ಯಕ್ಷದರ್ಶಿ ಭಕ್ತಾದಿಗಳಲ್ಲಿ ಮೂಡುಯತ್ತದೆ. ಇದು ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವರ ಮಹಿಮೆಗೆ ಸಾಕ್ಷಿಯಾಗಿದೆ.
ದಕ್ಷಿಣ ಬದರಿಕಾಶ್ರಮ : ಗೌತಮ ಮಹರ್ಷಿಗಳು ಅನೇಕ ಕಾಲ ಹೇಮಾವತಿ ನದಿ ಪಶ್ಚಿಮ ಮುಖನಾಗಿ ಹರಿಯುವ ದಿವ್ಯ ಸ್ಥಳದಲ್ಲಿ ಸ್ನಾನ ಆಹರ್ನಿಕಾದಿಗಳನ್ನು ಮಾಡುತ್ತಾ ಒಂದು ಬದರಿ ವೃಕ್ಷದ ಕೆಳಗೆ ಕೂತು ತಪಸ್ಸು ಮಾಡುತ್ತಾ ಇರಲು, ಭಕ್ತವತ್ಸಲನಾದ ಮಹಾವಿಷ್ಣವು ಗೌತಮ ಮಹರ್ಷಿಯನ್ನು ಹೆಚ್ಚು ಪರೀಕ್ಷೆ ಮಾಡಬಾರದೆಂಬ ಮನಸ್ಸಿನಿಂದ ಶ್ರೀ ಲಕ್ಷ್ಮೀ ಸಮೇತನಾಗಿ ನರಸಿಂಹ ರೂಪಿನಿಂದ ದರ್ಶನವನ್ನು ಕೊಡಲು ಗೌತಮ ಮಹರ್ಷಿ ಸಾμÁ್ಟಂಗ ಸಮಸ್ಕಾರಗಳನ್ನು ಮಾಡುತ್ತಾ ಅನೇಕ ವಿಧವಾದ ಸ್ತೋತ್ರಗಳನ್ನು ಮಾಡುತ್ತಾ ಕಣ್ಣಿನಿಂದ ಆನಂದಾಶ್ರುಗಳನ್ನು ಸುರಿಸುತ್ತಾ ನಿಂತಿರಲು ಭಗವಂತನು ಏತಕ್ಕೋಸ್ಕರ ನನ್ನನ್ನು ಕುರಿತು ತಪಸ್ಸು ಮಾಡಿದೆ ನಿನ್ನಕೋರಿಕೆ ಏನು ಹೇಳು ಎನ್ನಲು, ಗೌತಮನು ಆನಂದಪರವಶನಾಗಿ ‘ಹೇ ಭಗವಂತ, ಮುಂದೆ ಕಲಿಯುಗದಲ್ಲಿ ಮನುμÁ್ಯದಿಗಳು ಅನೇಕ ಕಷ್ಟಕಾರ್ಪಣ್ಯಕ್ಕೆ ಸಿಕ್ಕಿ ಸಂಕಟಪಡುತ್ತಾರೆ. ಅವರ ಕಷ್ಟಗಳು ಸುಲಭೋಪಾಯವಾಗಿ ಪರಿಹಾರವಾಗಲಿ ಎಂದು ನಿನ್ನನ್ನು ಕುರಿತು ತಪಸ್ಸು ಮಾಡಿದೆ. ರಾಮಾವತಾರವಾದರೋ ಅನೇಕ ಸಹಸವರ್ಷಗಳು, ಕೃμÁ್ಣವತಾರವೂ ಅμÉ್ಟ, ನಿನ್ನ ಅವತಾರಗಳು ಕೇವಲ ಘಳಿಗೆಗಳು ಮಾತ್ರವಾದ್ದರಿಂದ ಭಕ್ತರಿಗೆ ಬಲುಬೇಗ ನಿನ್ನ ಅನುಗ್ರಹ ಪ್ರಾಪ್ತಿಗಾಗಿಯೂ, ನೀನು ನನಗೆ ಪಶ್ಚಿಮ ಮೂಖನಾಗಿ ದರ್ಶನಕೊಟ್ಟಿದ್ದರಿಂದ, ಪಶ್ಚಿಮಮುಖನಾಗಿಯೇ ಶಿಲಾರೂಪ ಧರಿಸಿ ಶ್ರೀ ಲಕ್ಷ್ಮೀ ಸಮೇತನಾಗಿ ಇಲ್ಲೇ ನೆಲಸಬೇಕೆಂದು ಪ್ರಾರ್ಥಿಸಲು, ಸ್ವಾಮಿಯ ಅದೇರೀತಿ ನೆಲೆಸಿದನು.
ಸಂರಕ್ಷಣಕಾರ್ಯ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ನ್ಯಾಸ ಟ್ರಸ್ಟ್ ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಸಮಿತಿಯ ಸಹಯೋಗದೊಂದಿಗೆ ದೇವಾಲಯದ ಪುನರುಜೀವನ ಕಾರ್ಯವನ್ನು ನೆರವೇರಿಸಲಾಗಿದೆ. ಈ ಸಂರಕ್ಷಣಕಾರ್ಯದ ವೆಚ್ಚದ ಮೊತ್ತದಲ್ಲಿ ಶೇ 50 ಭಾಗವನ್ನು ಗ್ರಾಮಸ್ಥರನ್ನು ಒಳಗೊಂಡ ದೇವಾಲಯ ಸಮಿತಿ ಮತ್ತು ಉಳಿದ 50 ಭಾಗವನ್ನು ಮಂಜುನಾಥೇಶ್ವರ ಟ್ರಸ್ಟ್ ನೀಡಿದೆ. ಈ ದೇವಾಲಯ ಪ್ರಾಕೃತಿಕವಾಗಿತನ್ನ ಭದ್ರತೆಯನ್ನು ಕಳೆದುಕೊಂಡಿತ್ತು. ದೇವಾಲಯದ ಪ್ರಾಕಾರ ಮಣ್ಣಿನಿಂದ ಆವೃತವಾಗಿ ಅದಿμÁ್ಟನದ ಭಾಗ ಮಣ್ಣಿನಲ್ಲಿ ಹುದುಗಿಹೊಗಿತ್ತು. ಪ್ರಥಮ ಹಂತದಲ್ಲಿ ದೇವಾಲಯದ ಪ್ರಾಕಾರ ಮತ್ತು ಮಹಾದ್ವಾರದ ಮುಂದೆ ಆವರಿಸಿದ್ದ ಮಣ್ಣಿನ ಪದರಗಳನ್ನು ಉತ್ಕನನ ಮಾಡಿತೆಗೆಯಲಾಯಿತು. ದೇವಾಲಯದ ಗರ್ಭ ಗೃಹ ಅಂತರಾಳದ ಗೋಡೆಗಳು ಹಾಗು ತಳಪಾಯ ಕುಸಿದಿತ್ತು. ನಶಿಸಿದ್ದ ಗೋಡೆಗಳಿಗೆ ಆಧಾರ ಗೋಡೆಗಳನ್ನು ಕಟ್ಟಿ ಅವುಗಳನ್ನು ಕಾಪಾಡಿದ್ದರು. ದೇವಾಲಯದ ಗರ್ಭ ಗೃಹ ಅಂತರಾಳದ ಗೋಡೆಯ ಹೊರಕವಚಗಳನ್ನು ಬಿಚ್ಚಿದೇವಾಲಯದ ಸಂಪೂರ್ಣ ತಳಪಾಯವನ್ನು ಭದ್ರಗೊಳಿಸಿ ನಂತರ ಗೋಡೆಗಳನ್ನು ಪುನರ್ ನಿರ್ಮಿಸಲಾಯಿತು. ದೇವಾಲಯದ ಗರ್ಭಗೃಹದ ಮೇಲಿದ್ದ ವಿಮಾನ, ಸ್ವಾಮಿಯ ಆಲಯದ ಪಕ್ಕದಲ್ಲಿದ್ದ ಶ್ರೀ ಲಕ್ಷ್ಮೀ ಆಲಯದ ತಳಪಾಯ, ಗೋಡೆ ಹಾಗು ವಿಮಾನ ಮತ್ತು ಮಂಟಪಗಳು ಶಿಥಿಲವಾಗಿದ್ದು ಅವುಗಳನ್ನು ಪ್ರಾಚೀನ ಮಾದರಿಯಲ್ಲಿ ಪುನರ್ರಚಿಸಲಾಗಿದೆ. ದೇವಾಲಯದ ಸುತ್ತಲು ಹಾಸು ಕಲ್ಲುಗಲ್ಲುಗಳನ್ನು ಹಾಕಿಸಿ ದೇವಾಲಯದ ತಳಪಾಯಕ್ಕೆ ನೀರು ಸೇರದಂತೆ ಮಾಡಲಾಗಿದೆ. ಪ್ರಾಕಾರದ ಗೋಡೆಗಳಲ್ಲಿ ಇದ್ದಯ ಜ್ಞಶಾಲೆ ಮಂಟಪಗಳು ಸಂಪೂರ್ಣವಾಗಿ ನಾಶವಾಗಿದ್ದವು, ಅವುನ್ನು ಸಹ ಸಂರಕ್ಷಿಸಲಾಗಿದೆ. ಮಹಾದ್ವಾರದ ಮೇಲಿನ ಗೋಪುರದಲ್ಲಿ ಇದ್ದ ಗಾರೆಯಿಂದ ನಿರ್ಮಿತವಾದ ಶಿಲ್ಪಗಳು ಕೆಲವು ನಾಶವಾಗುವ ಹಂತವನ್ನು ತಲುಪಿದ್ದಾರೆ ಮತ್ತೆ ಕೆಲವು ಭಗ್ನವಾಗಿದ್ದವು. ಅಂತಹ ಮೂರ್ತಿಗಳನ್ನು ಸರಿಪಡಿಸಿ ಉಳಿದವುಗಳನ್ನು ಸಂರಕ್ಷಿಸುವ ಕಾರ್ಯಗಳನ್ನು ಮಾಡಲಾಗಿದೆ. ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿದೇವಾಲಯದಲ್ಲಿ ಬ್ರಹ್ಮರಥೋತ್ಸವ (ಮಾಘ ಮಾಸದಕಳ ಪಕ್ಷ, ಪ್ರತಿಪತ್-ದ್ವಿತೀಯ ಮಹಾ ನಕ್ಷತ್ರ), ಶ್ರೀ ನರಸಿಂಹ ಜಯಂತಿ, ಶಂಕರಜಯಂತಿ ಹಾಗು ರಾಮ ನವಮಿ, ಪ್ರತಿ ನಿತ್ಯ ಸ್ವಾಮಿಗೆ ನಿತ್ಯ ಪೂಜೆ ನಡೆಯುತ್ತದೆ.

ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ

ಅಪ್ಪ

ಅಪ್ಪ ಈ ಎರಡು ಅಕ್ಷರದಲ್ಲಿ ತುಂಬಾ ಅರ್ಥವಿದೆ. ಅಪ್ಪ “ಕಣ್ಣಿಗೆ ಕಾಣೋ ದೇವರು” ಎಂದರೆ ತಪ್ಪಾಗಲಾರದು, ಅಪ್ಪ ಅನ್ನೋ ಪದದ ಬದಲಾಗಿ ಇತ್ತೀಚೆಗೆ “ಪಪ್ಪಾ, ಡ್ಯಾಡಿ” ಎಂದೆಲ್ಲಾ ಕರೆಯುತ್ತೇವೆ. ಹೇಗೇ ಕರೆದರೂ ಅದರ ಅರ್ಥ ಒಂದೇ ಅಪ್ಪ. ಸಂಸಾರವೆಂಬ ನೌಕೆಯಲ್ಲಿ ಅಪ್ಪನದೇ ಮುಖ್ಯ ಪಾತ್ರ. ಏಕೆಂದರೆ, ಅಷ್ಟು ಜವಾಬ್ದಾರಿ ಅಪ್ಪನ ಮೇಲಿರುತ್ತದೆ. ಮಗು ಹುಟ್ಟಿದ ತಕ್ಷಣ ಕನಸು ಕಾಣುವ ಮನಸ್ಸು ಅಪ್ಪನದು. ಆ ಮಗುವಿಗೆ ಏನು ಹೆಸರಿಡಬೇಕು, ಏನು ಓದಿಸಬೇಕು, ಯಾವ ರೀತಿ ಅವರಿಗೆ ಸಮಾಜದಲ್ಲಿ ಬದುಕುವ ರೀತಿ ನೀತಿಗಳನ್ನು ಕಲಿಸಬೇಕು, ಎಂದು ಮನಸ್ಸಿನಲ್ಲಿಯೇ ಲೆಕ್ಕಚಾರ ಮಾಡುವವರು ಅಪ್ಪ. ಈ ಅಪ್ಪ ಅನ್ನೋ ಪಾತ್ರ ಬರೀ ಮಕ್ಕಳನ್ನು ಮಾತ್ರವಲ್ಲ, ಅವರ ತಂದೆ, ತಾಯಿ, ಹೆಂಡತಿ ಎಲ್ಲರನ್ನೂ ಸರಿ ಸಮನಾಗಿ ನೋಡಿಕೊಳ್ಳುವ ಮಹಾನ್ ವ್ಯಕ್ತಿ ಅಪ್ಪ. ತಾನು ಎಷ್ಟೇನೊಂದರು ತನ್ನ ಮಕ್ಕಳಿಗೆ ಕಷ್ಟವನ್ನು ತೋರಿಸದೆ ಅವರ ಬೆಳವಣಿಗೆ ನೋಡಿ ಖುಷಿಪಡುವ ಮನಸ್ಸು ಆತನದು.ಆದರೆ ತನ್ನ ಪ್ರೀತಿಯನ್ನು ಎದೆಯಲ್ಲಿ ಬಚ್ಚಿಟ್ಟು ತನ್ನ ಮಕ್ಕಳ ಎದುರಿಗೆ ಕೆಲವೊಮ್ಮೆ ನಿಷ್ಠುರವಾಗಿ ನಡೆದುಕೊಳ್ಳುತ್ತಾರೆ. ಏಕೆಂದರೆ ಮಕ್ಕಳು ಮಾಡಿದ ತಪ್ಪನ್ನೆಲ್ಲಾ ಸಂತೋಷವಾಗಿ ಒಪ್ಪಿಕೊಂಡರೆ ಅಥವಾ ಸಮಾಧಾನವಾಗಿ ತಿದ್ದಲು ಹೋದರೆ, ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗುವುದಿಲ್ಲ ಆದ್ದರಿಂದ ತಪ್ಪು ಮಾಡಿದಾಗ ಕಠಿಣ ಶಿಕ್ಷೆಯನ್ನು ಅಂದರೆ ಹೊಡೆಯುವುದು ಅಥವಾ ಕಠೋರವಾಗಿ ಬೈಯುವುದರ ಮುಖಾಂತರ ತಿದ್ದಲು ಪ್ರಯತ್ನಿಸುತ್ತಾರೆ. ಆದರೆ ಆ ವಯಸ್ಸಿನಲ್ಲಿ ಅದನ್ನು ಅರ್ಥ ಮಾಡಿಕೊಳ್ಳದೇ ಮಕ್ಕಳಾದ ನಾವು ಅವರನ್ನು ದ್ವೇಷಿಸುತ್ತೇವೆ, ನಿಂದಿಸುತ್ತೇವೆ. ಆಗ ಅದರ ಒಳ ಅರ್ಥ ನಮಗೆ ತಿಳಿದಿರುವುದಿಲ್ಲ. ತಾಯಿಯಾದವಳು ತನ್ನ ಮಕ್ಕಳನ್ನು ಸೆರಗಿನಲ್ಲಿ ಬಚ್ಚಿಟ್ಟುಕೊಂಡರೆ, ತಂದೆ ತನ್ನ ಎದೆಗೂಡಿನಲ್ಲಿ ಆ ಮಕ್ಕಳನ್ನು ಜೋಪಾನವಾಗಿಟ್ಟು ಕೊಂಡಿರುತ್ತಾನೆ.
“ರವಿ ಕಾಣದ್ದನ್ನು ಕವಿ ಕಂಡ” ಎಂಬ ನಾಣ್ಣುಡಿಯಂತೆ ತಂದೆ ತಾನು ಕಾಣದ ಪ್ರಪಂಚವನ್ನು ತನ್ನ ಮಕ್ಕಳು ನೋಡಲಿ ಎಂದು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಸುತ್ತಾಡಿಸುತ್ತಾರೆ. ತಾನು ಒಬ್ಬರ ಮನೆಯಲ್ಲಿ ಜೀತದಾಳಾಗಿ ದುಡಿದರೂ ನನ್ನ ಮಕ್ಕಳು ದೊಡ್ಡ ವ್ಯಕ್ತಿಗಳಾಗಲೀ ಎಂದು ಸದಾ ಹಂಬಲಿಸುತ್ತಿರುತ್ತಾರೆ. ತಾನು ಒಬ್ಬರ ಮುಂದೆ ಕೈ ಚಾಚಿದರೂ ಕೂಡ ತನ್ನ ಮಕ್ಕಳು ಕೈಚಾಚದಂತೆ ಸ್ವಾಭಿಮಾನಿಗಳನ್ನಾಗಿ ಬೆಳೆಸುತ್ತಾರೆ. ತನ್ನ ಕೊನೆಯ ಉಸಿರಿರುವವರೆಗೂ ತನ್ನ ಮಕ್ಕಳ ಶ್ರೇಯಸ್ಸನ್ನು ಬಯಸುತ್ತಾರೆ. ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಏನು ಮಾಡಬೇಕೆಂಬ ಪ್ರತಿ ವಿಷಯವನ್ನು ತಂದೆ ಮನಸ್ಸಿನಲ್ಲಿಯೇ ನಿರ್ಧರಿಸುತ್ತಾರೆ. ಮಕ್ಕಳಿಗೆ ಏನು ಬೇಕು ಏನು ಬೇಡ ಎಂಬ ಒಂದು ಚಿಕ್ಕ ವಿಷಯವೂ ಕೂಡ ತಂದೆಗೆ ತಿಳಿದಿರುತ್ತದೆ. ಮಕ್ಕಳ ಸಂತೋಷದಲ್ಲಿಯೇ ತನ್ನ ದುಃಖವನ್ನೆಲ್ಲಾ ಮರೆಯುವ ಏಕೈಕ ಜೀವಿ ಅಪ್ಪ.
ಆದರೆ ಮಕ್ಕಳಾದ ನಾವು ಮಾಡುತ್ತಿರುವುದೇನು? ಅಪ್ಪ ಬೈಯುತ್ತಾರೆಂದು ತಿಳಿದು ಅವರನ್ನು ಪ್ರೀತಿಸುವುದಿಲ್ಲ, ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ, ಸದಾ ನನಗೆ ನನ್ನ ತಂದೆಯನ್ನು ಕಂಡರೆ ಭಯವಾಗುತ್ತದೆ, ಎಂದು ದೂರ ಉಳಿದು ಬಿಡುತ್ತೇವೆ. ಆದರೆ ಅದರ ಒಳ ಅರ್ಥ ಏನೆಂದು ನಮಗೆ ಆಗ ತಿಳಿದಿರುವುದಿಲ್ಲ, ಮುಂದೆ ನಾವು ತಂದೆಯಾದಾಗ ಅವರ ಸ್ಥಾನದಲ್ಲಿ ನಾವು ನಿಂತಾಗ ಅವರ ಜವಾಬ್ದಾರಿ ತಿಳಿದು ಬರುತ್ತದೆ. ಆಗ ನಮ್ಮ ತಂದೆ ಮಾಡಿದ್ದು ಇದನ್ನೇ ಎಂದು ನಾವು ತಿಳಿಯುವ ಹೊತ್ತಿಗೆ ನಮ್ಮ ತಂದೆ ನಮ್ಮಿಂದ ತುಂಬಾ ದೂರ ಉಳಿದಿರುತ್ತಾರೆ. ಅಥವಾ ಅವರು ನಮ್ಮನ್ನು ಬಿಟ್ಟು ಹೋಗಿರುತ್ತಾರೆ. ಆಗ ನಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಲು ನಮ್ಮ ಮನಸ್ಸು ಒಪ್ಪುವುದಿಲ್ಲ. ಏಕೆಂದರೆ, ನಾವು ನಮ್ಮ ತಂದೆಯೊಡನೆ ನಡೆದುಕೊಂಡ ರೀತಿ.
ಅಪ್ಪನಾದವನು ತನ್ನ ಮಕ್ಕಳು ಒಂದು ವಯಸ್ಸಿಗೆ ಬಂದ ಮೇಲೆ ಅವರ ಜೊತೆ ಒಬ್ಬ ಒಳ್ಳೆಯ ಸ್ನೇಹಿತನಾಗಲು ಹಂಬಲಿಸುತ್ತಿರುತ್ತಾನೆ. ಏಕೆಂದರೆ, ಅವರ ಮಕ್ಕಳÀ ಆಗಿನ ಆಸೆ ಆಕಾಂಕ್ಷೆಗಳನ್ನು ತಿಳಿದು ಅವರ ಬೇಕು ಬೇಡಗಳನ್ನು ಅರ್ಥೈಸಿಕೊಂಡು ಅವರಿಗೆ ಒಂದು ಒಳ್ಳೆಯ ಮಾರ್ಗವನ್ನು ತೋರಿಸುತ್ತಾ, ತನ್ನ ಮಕ್ಕಳ ಏಳಿಗೆಯನ್ನು ನೋಡಿ ಸಂತಸ ಪಡುತ್ತಾನೆ. ತನ್ನ ಮಕ್ಕಳು ಇತರರಿಗೆ ಮಾದರಿಯಾಗ ಬೇಕೆಂದು ಆಶಿಸುತ್ತಾನೆ. ಹೀಗೆ ಮಗುವಾದಾಗಿನಿಂದಲೂ ತನ್ನ ಮಕ್ಕಳ ಯಶಸ್ಸು, ಶ್ರೇಯೋಭಿವೃದ್ಧಿಗಾಗಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟು ತನ್ನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಮಕ್ಕಳಲ್ಲಿಯೇ ನೋಡಿ ಆನಂದಿಸುವ ಒಂದೇ ಒಂದು ಮಹಾನ್ ಜೀವ ಅದೇ ಆ ದೈವ ಸೃಷ್ಠಿಸಿದ ಜೀವ ಅಪ್ಪ.
ಅಂತಹ ಎಲ್ಲಾ ಅಪ್ಪಂದಿರಿಗೆ ನನ್ನ ತುಂಬು ಹೃದÀಯದ ಸಾವಿರ ಸಾವಿರ ವಂದನೆಗಳು

ಹನುಮ ಜಯಂತಿ

ಚೈತ್ರಮಾಸದಲ್ಲಿ ಶ್ರೀರಾಮನವಮಿಯ ನಂತರ ಆಚರಿಸಲ್ಪಡುವ ಮುಖ್ಯ ಹಬ್ಬ ಹನುಮ ಜಯಂತಿ. ಅಂದು ಆರಾಧಿಸಲ್ಪಡುವ ದೇವರು ಹನುಮಂತ, ಆಚಿಜನೇಯ, ಮಾರುತಿ, ಪ್ರಾಣದೇವರು,ತಿರುವಡಿ ಮುಂತಾದ ಹೆಸರುಗಳಿಂದ ಜ್ಞಾನಿಗಳ ಮತ್ತು ಭಕ್ತರ ಸಾಹಿತ್ಯದಲ್ಲಿ ಪ್ರಸಿದ್ಧನಾಗಿರುವ ಮಹಾತ್ಮ. ರಾಮನವಮಿಯಂದು ಶ್ರೀರಾಮನನ್ನು ಪೂಜಿಸಿದ ನಂತರ ಅದಕ್ಕೆ ಹತ್ತಿರದಲ್ಲಿ ಬರುವ ಒಂದು ಪರ್ವದಲ್ಲಿ, ಭಕ್ತ ಜನಪ್ರಿಯನೂ,ಬಹುಜನಪ್ರಿಯನೂ ಆಗಿರುವ ಈ ದೇವನನ್ನು ಆರಾಧಿಸುವುದು ವಾಡಿಕೆಯಾಗಿದೆ.
ರಾಮಾಯಣ, ಮಹಾ ಭಾರತ,ಪುರಾಣ, ಧರ್ಮಶಾಸ್ತ್ರ, ಸಂಗೀತ, ಕಾವ್ಯ ಮುಂತಾದಗಳು ಮಾತ್ರವಲ್ಲದೆ, “ರಾಮನ ಬಂಟ ಹನುಮಂತ, ತಿರುಪತಿಯೆಂಬುದೆ ವೈಕುಂಠ” ಹನುಮನಿಲ್ಲದ ಹಳ್ಳಿಯೇ ? ಗಣಪನಿಲ್ಲದ ಗ್ರಾಮವೇ ?’
ಇವೇ ಮುಂತಾದ ಜನಪದ ಸಾಹಿತ್ಯದ ವಚನಗಳೂ, ಬಗೆಬಗೆಯ ಭಾವಭಂಗಿಗಳಿಂದ ಶೋಭಿಸುತ್ತಿರುವ ಅವನ ವಿಗ್ರಹಗಳೂ, ಚಿತ್ರಗಳೂ, ಗುಡಿಗೋಪುರಗಳೂ ನಮ್ಮ ಮನಸ್ಸಿನ ಮೇಲೆ ಬೀರಿರುವ ಪ್ರಭಾವವನ್ನು ಸಾರುತ್ತವೆ. ಆಚಿಜನೇಯನನ್ನು ಉಪಾಸನೆ ಮಾಡುವವರು ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.
ಹನುಮಂತ ಕೇಸರಿಪುತ್ರ; ಸಿಂಹದ ಮರಿ, ಶೌರ್ಯ ಧೈರ್ಯಗಳ ಮೂರ್ತಿ, ವೀರರ ಕಣ್ಮಣಿ, ಆದರ್ಶ ಭಕ್ತ, ಭಕ್ತಿ ಶಕ್ತಿಗಳ ಸಂಗಮ, ರುದ್ರಾಂಶ ಸಂಭೂತ, ನ್ಯಾಯ ನೀತಿಗಳ ನೆಲೆಗಟ್ಟು,ಬುದ್ಧಿವಂತರಲ್ಲಿ ಅಗ್ರೇಸರ ಜಿತೇಂದ್ರಿಯ. ಸುಗ್ರೀವ್ ರಾಜನ ಸೇನಾಪತಿ ಹಾಗೂ ಆಪ್ತಮಿತ್ರ ಮಾರುತಿಯ ಜನ್ಮದಿನ ಒಂದು ರೀತಿಯ ವೀರಪೂಜೆ. ನಿಸ್ವಾರ್ಥಸೇವೆಗೆ ಸಲ್ಲುವ ಗೌರವ, ವೀರ್ಯ ವಿನಯಗಳ ಪ್ರಯೋಗವನ್ನು ಆಚಿಜನೇಯನಲ್ಲಿ ಕಾಣಬೇಕು. ಅವನು ಒಂದೆಡೆ ಶೌರ್ಯದ ಸಿರಿಯಾದರೆ, ಇನ್ನೊಂದೆಡೆ ಭಕ್ತಿಯ ಝರಿ.
ಸೂರ್ಯೋದಯ ಕಾಲದಲ್ಲಿ ಜನಿಸಿದ ಹನುಮಂತ ಹುಟ್ಟುತ್ತಲೇ ಕೆಂಪಾದ ಸೂರ್ಯನನ್ನು ಆಗಸದಲ್ಲಿ ಕಂಡು, ಹಣ್ಣೆಂದು ಭ್ರಮಿಸಿ ಸೂರ್ಯಮಂಡಲಕ್ಕೇ ಜಿಗಿದು ಸೂರ್ಯನಿಂದ ಶಹಭಾಸ್ ಗಿರಿ ಪಡೆದು ವಜ್ರದೇಹಿಯಾದವ, ರಾಮಕಥೆಯಿರುವತನಕ ತಾನು ಬದುಕಿರಬೇಕೆಂದು ವರಪಡೆದ ಚಿರಂಜೀವಿ-ಹನುಮಂತ. ಸದಾ ರಾಮನಿದ್ದಲ್ಲಿ ಅವನಿರಬೇಕು.
ಹನುಮಂತನ ಪರಿಚಯವನ್ನು ನಮಗೆ ಮಾಡಿಕೊಡುವ ಪ್ರಾಚೀನತಮ ಸಾಹಿತ್ಯವಾದ ವಾಲ್ಮೀಕಿ ರಾಮಾಯಣದ ಪ್ರಕಾರ ಹೇಳುವುದಾದರೆ., ಅವನೊಬ್ಬ ವಾನರ ಜಾತಿಯ ಮುಖಂಡ, ಕಿಷ್ಕಿಂಧೆಯ ಅರಸನಾದ ಕಪಿರಾಜ ಸುಗ್ರೀವನ ಮನೀಷಿಯೂ ಹಿತೈಷಿಯೂ ಆದ ಸಚಿವ, ಕೇಸರಿಯೆಂಬ ವಾನರ ನಾಯಕನ ಪತ್ನಿ ಅಚಿಜನಾದೇವಿಯ ಪುತ್ರ.
ಸಮುದ್ರಲಂಘನ, ಸೀತಾನ್ವೇಷಣ, ರಾಕ್ಷಸ ನಿಗ್ರಹ, ಲಂಕಾದಹನ,ಪರ್ವತಾರೋಹಣವೇ ಮುಂತಾದ ಇವನ ಎಲ್ಲಾ ಸಾಹಸಗಳೂ ರೋಮಾಂಚನಕರವಾದವು, ಬ್ರಹ್ಮಾದಿ ದೇವಪ್ರಧಾನರ ಅಸಾಧಾರಣ ವರಬಲದಿಂದ ಸಂಪನ್ನನಾದವನು,ಇಷ್ಟಾದರೂ ಆತ ಅತ್ಯಂತ ವಿನೀತ, ರಾಮನ ದಾಸನೆಂದು ತನ್ನನ್ನು ಕರೆದುಕೊಳ್ಳುವುದರಲ್ಲಿ ಹೆಮ್ಮೆ ಪಡುವ ದಾಸಶ್ರೇಷ್ಠ.
ಕಪಿಯ ರೂಪ ಮತ್ತು ಸ್ವಭಾವಗಳನ್ನು ಹೊಂದಿದ್ದರೂ, ಅವನು ದೇವತಾಪುತ್ರನೇ. ಇತಿಹಾಸ ರತ್ನವಾದ ಮಹಾಭಾರತವೂ ಮಾರುತಿಯ ವಿಷಯದಲ್ಲಿ ರಾಮಾಯಣವು ಹೇಳುವ ಅಭಿಪ್ರಾಯವನ್ನೇ ಸಮರ್ಥಿಸಿ ಆತನು ಭೀಮಸೇನನಿಗೂ ಅರ್ಜುನನಿಗೂ ಮಾಡಿದ ಪರಮೋಪಕಾರವನ್ನು ಉಲ್ಲೇಖಿಸುತ್ತದೆ. ಶ್ರೀಮದ್ಭಾಗವತವು ಆತನು ಪರಮಭಾಗವತ,ಕಿಂಪುರುಷ ವರ್ಷದಲ್ಲಿ ಸದಾ ಸೀತಾರಾಮನ ಉಪಾಸನೆಯಲ್ಲಿ ಮಗ್ನನಾಗಿರುವವನು ಎನ್ನುತ್ತದೆ. ಶಿವಪುರಾಣವು ಅವನ ದಿವ್ಯಮಹಿಮೆಯನ್ನು ಕೊಂಡಾಡುತ್ತಾ ಅವನು ರುದ್ರದೇವರ ಅವತಾರ ಎಂದು ಉದ್ಘೋಷಿಸುತ್ತದೆ.
ನಮ್ಮ ಸಂಪ್ರದಾಯವೂ ಕೂಡ ಮೇಲ್ಕಂಡ ಗ್ರಂಥಗಳ ಅಭಿಪ್ರಾಯವನ್ನು ಎತ್ತಿಹಿಡಿದು ಅವನನ್ನು ದೇವರನ್ನಾಗಿ ಆರಾಧಿಸುತ್ತಾ ಬಂದಿದೆ. ಹನುಮಜಯಂತಿಯನ್ನು ಅನುಷ್ಠಾನ ಮಾಡುವ ದಿವಸದ ಬಗೆಗೆ ಮೂರು ಸಂಪ್ರದಾಯಗಳನ್ನು ನೋಡುತ್ತೇವೆ. 1) ಚೈತ್ರ ಶುಕ್ಲ ಪೂರ್ಣಿಮೆಯಂದು ಆಚರಿಸುವ ಪದ್ಧತಿ 2) ಕಾರ್ತೀಕ ಕೃಷ್ಣ ಚತುರ್ದಶಿಯಂದು ಆಚರಿಸುವ ಪದ್ಧತಿ 3) ಮಾರ್ಗಶಿರ ಶುಕ್ಲ ತ್ರಯೋದಶಿಯಂದು ಆಚರಿಸುವ ಪದ್ಧತಿ, ಇವುಗಳಲ್ಲಿ ಕೊನೆಯದು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ.
ಈ ದಿವಸ ವ್ರತವನ್ನು ಆಚರಿಸುವವರು ಉಪವಾಸ ಮಾಡಬೇಕು. ಉಪವಾಸ ಮಾಡಲು ಅಶಕ್ತರಾದವರು ದೇವರಿಗೆ ನಿವೇದನ ಮಾಡಿದ ಫಲಮೂಲ,ಕ್ಷೀರ ಮುಂತಾದ ಸಾತ್ವಿಕ ದ್ರವ್ಯಗಳನ್ನು ಸೇವಿಸಬಹುದು. ವ್ರತದ ಆಚರಣೆಯಿಲ್ಲದೆ ಪ್ರಾಣದೇವರ ಪೂಜೆಯನ್ನು ಮಾತ್ರ ಮಾಡುವವರು ಪೂಜಾಸಮಯದವರೆಗೂ ಉಪವಾಸವಿದ್ದು ಅನಂತರ ದೇವರ ಪ್ರಸಾದವನ್ನು ಸ್ವೀಕರಿಸಬೇಕು. ನೈವೇಧ್ಯಗಳಲ್ಲಿ ಪ್ರಶಸ್ತವಾದದು ಕಡಲೆ ಮತ್ತು ಬೆಲ್ಲಗಳಿಂದ ತಯಾರಾದ ಪ್ರಸಾದ. ದಾಸವರೇಣ್ಯನೂ ಭಗವಂತ ಭಗವತಿಯರಿಗೆ ಪ್ರಿಯತಮನೂ ಆಗಿರುವ ಶ್ರೀ ಹನುಮಂತನ ಜಯಂತಿಯ ಆಚರಣೆಯಿಂದ ಆದಿ-ವ್ಯಾಧಿ ಪರಿಹಾರಕ್ಕಾಗಿ ಭಗವತ್ ಪ್ರೀತಿ ಉಂಟಾಗುವುದರಿಂದ , ಶ್ರೇಯಸ್ಸನ್ನೂ, ಪ್ರೇಯಸ್ಸನ್ನೂ ಬಯಸುವ ಪ್ರತಿಯೊಬ್ಬನೂ ಆಚರಿಸಬೇಕಾದ ಮಂಗಳವ್ರತಗಳಲ್ಲಿ ಒಂದಾಗಿದೆ ಈ ಹಬ್ಬ.

ಸಂಧಿವಾತಕ್ಕೆ ಒಂದಿಷ್ಟು ಪರಿಹಾರ

ಸಂಧಿವಾತ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಾಡುತ್ತಿರುವ ಸಮಸ್ಯೆ ಆಗಿದೆ. ಸಂಧಿವಾತವು ಎಲ್ಲಾ ವಯಸ್ಸಿನವರಲ್ಲಿ ಕಂಡು ಬರುತ್ತದೆ. ಆದರೂ ಇದು ಮಹಿಳೆಯರಲ್ಲಿ ಹೆಚ್ಚು, ವಯಸ್ಸಿಗೆ ತಕ್ಕಂತೆ ಉಲ್ಬಣವಾಗುತ್ತದೆ. 100 ಕ್ಕೂ ಹೆಚ್ಚು ಬಗೆಯ ಸಂಧಿವಾತಗಳಿವೆ. ಈ ಸಮಸ್ಯೆಯಿಂದ ಮುಕ್ತರಾಗಲು ಚಿಕಿತ್ಸೆ ಜೊತೆ ನಮ್ಮ ಜೀವನ ಶೈಲಿಯು ಬದಲಾಗಬೇಕು ಹಾಗಾದರೇ ಬದಲಾವಣೆ ಏನು ?
ಒತ್ತಡ ಮುಕ್ತ ಜೀವನ: ಸಂಧಿವಾತದಲ್ಲಿ ನೋವನ್ನು ಉಂಟು ಮಾಡುವ ನಿಜವಾದ ಉರಿಯೂತವು ಒತ್ತಡದಿಂದಾಗಿರಬಹುದು ಎಂದು ಸಂಶೋಧನೆ ಸೂಚಿಸುತ್ತದೆ. ಒತ್ತಡವು ಸೈಟೊಕಿನ್ಗಳನ್ನು ಬಿಡುಗಡೆ ಮಾಡುತ್ತದೆ. ಅದು ಉರಿಯೂತ ಮತ್ತು ನೋವನ್ನು ಉಂಟುಮಾಡುತ್ತದೆ. ವಾಸ್ತವವಾಗಿ ನಿಮ್ಮ ನೋವಿನ ಗ್ರಹಿಕೆ ಒತ್ತಡದೊಂದಿಗೆ ಹೆಚ್ಚಾಗುತ್ತದೆ. ನೀವು ಒತ್ತಡಕ್ಕೆ ಒಳಗಾಗಿದ್ದರೆ ನಿಮ್ಮ ಸಂಧಿವಾತದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಆಹಾರದಲ್ಲಿ ಬದಲಾವಣೆ: ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು ಮತ್ತು ಧಾನ್ಯಗಳನ್ನು ಹೊಂದಿರುವ ಸಸ್ಯ ಆಧಾರಿತ ಆಹಾರವು ನೋವನ್ನು ಕಡಿಮೆ ಮಾಡುತ್ತದೆ. ಪ್ರೊಟೀನ್ ಸೇವನೆಯನ್ನು ನಿಯಂತ್ರಿಸುವುದರಿಂದ ಸಂಧಿವಾತದ ಲಕ್ಷಣಗಳು ಕಡಿಮೆಯಾಗಬಹುದು.

ವ್ಯಾಯಾಮ: ವ್ಯಾಯಾಮ ಮಾಡುವುದರಿಂದ ಸಂಧಿವಾತದ ನೋವು ಕಡಿಮೆ ಆಗುತ್ತದೆ. ತೂಕ ನಿಯಂತ್ರಣದಲ್ಲಿರುತ್ತದೆ. ವ್ಯಾಯಾಮದ ಕೊರತೆ ನಿಮ್ಮ ಕೀಲುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಏಕೆಂದರೆ ಅದು ಕೀಲುಗಳ ಸುತ್ತಲಿನ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.ನೀವು ಕೀಲು ನೋವು ಹೊಂದಿರುವಾಗ ಸಾಮಾನ್ಯ ವ್ಯಾಯಾಮವು ನಿಮ್ಮ ಕೀಲುಗಳ ಸುತ್ತಲಿನ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಮೂಳೆಯ ಬಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಶಕ್ತಿಯನ್ನು ನೀಡುತ್ತದೆ. ವ್ಯಾಯಾಮದೊಂದಿಗೆ ನಿದ್ರೆಯ ಮಾದರಿಗಳು ಸಹ ಸುಧಾರಿಸುತ್ತವೆ. ನೀವು ಮಾಡಬೇಕಾದ ವ್ಯಾಯಾಮದ ಪ್ರಕಾರವು ನಿಮ್ಮ ದೇಹ ಮತ್ತು ನೀವು ಹೊಂದಿರುವ ಸಂಧಿವಾತದ ಪ್ರಕಾರ ಮತ್ತು ಪರಿಣಾಮ ಬೀರುವ ಕೀಲುಗಳನ್ನು ಅವಲಂಬಿಸಿರುತ್ತದೆ. ಯೋಗ, ಸ್ಟ್ರೆಚಿಂಗ್, ವಾಕಿಂಗ್, ಸೈಕ್ಲಿಂಗ್ ಮತ್ತು ತೋಟಗಾರಿಕೆ ಕೆಲಸಗಳನ್ನು ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬಹುದು.
ತೂಕ ನಿಯಂತ್ರಣ : ತೂಕ ನಷ್ಟವು ನೋವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಉರಿಯೂತದ ಮಟ್ಟವನ್ನು ಕಡಿಮೆ ಮಾಡುತ್ತದೆ.ತೂಕ ನಷ್ಟವು ದೈಹಿಕ ಕಾರ್ಯಗಳನ್ನು ಸುಧಾರಿಸುತ್ತದೆ.ಕೈ ಅಸ್ಥಿಸಂಧಿ ವಾತವು ಹೃದ್ರೋಗಕ್ಕೂ ಸಂಬಂಧಿಸಿದೆ ಮತ್ತು ತೂಕ ನಿರ್ವಹಣೆ ಸಂಧಿವಾತವನ್ನು ನಿಯಂತ್ರಿಸುವುದಲ್ಲದೆ ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುತ್ತದೆ.
ವಿಟಮಿನ್ ಸಿ ಸೇವಿಸಿ: ನಮ್ಮ ಜೀವಕೋಶಗಳನ್ನು ರಕ್ಷಿಸುವ ಮತ್ತು ಕೊಲಾಜೆನ್ ಮತ್ತು ಅಂಗಾಂಶಗಳನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಉತ್ಕರ್ಷಣ ನಿರೋಧಕವಾದ ವಿಟಮಿನ್ ಸಿ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಉರಿಯೂತದ ಸಂಧಿವಾತವನ್ನು ತಡೆಗಟ್ಟಲು ವಿಟಮಿನ್ ಸಿ ಅತ್ಯಂತ ಉತ್ತಮ.

ಚಳಿಗಾಲದ ಸ್ವಾಸ್ಥ್ಯಕ್ಕೆ ಮನೆಮದ್ದು

ನವೆಂಬರ್ ಮೂರನೇ ವಾರದಿಂದ ಜನವರಿ ಮೂರನೇ ವಾರದವರೆಗೆ ಸುಮಾರು ಎರಡು ತಿಂಗಳು ಹೇಮಂತ ಋತುವಿನ ಸಮಯ. ಅದನ್ನೇ ನಾವು ಚಳಿಗಾಲ ಎನ್ನುತ್ತೇವೆ. ಹೇಮಂತ ಎಂದರೆ ಹಿಮವಂತ ಎಂದರ್ಥ. ಹಿಮ ಪ್ರಧಾನವಾದ ಈ ಋತುವಿನಲ್ಲಿ ಚಳಿ ಜಾಸ್ತಿ. ಚಳಿಯ ಪ್ರಭಾವದಿಂದ ವಾತಾವರಣದಲ್ಲಿ ಶೀತಗುಣ ಅಧಿಕಗೊಳ್ಳುತ್ತದೆ. ಶೀತದಿಂದ ಕಫ ಮತ್ತು ವಾತ ದೋಷಗಳು ಉಲ್ಬಣಗೊಳ್ಳುತ್ತವೆ.
ಚಳಿಗಾಲದಲ್ಲಿ ಕಾಡುವ ಹಾಗೂ ಉಲ್ಬಣಗೊಳ್ಳುವ ಕೆಲವು ಸಮಸ್ಯಗಳು
• ಮಂಡಿನೋವು ಹಾಗೂ ಸೊಂಟನೋವು.
• ಕೆಮ್ಮು ಮತ್ತು ಅಸ್ತಮ
• ಚರ್ಮ ವಿಕಾರಗಳಾದ ಶೀತ ಪಿತ್ತ (ಅರ್ಟಿಕೇರಿಯಾ ) ಮತ್ತು ಕಿಟಿಭ (ಸೋರಿಯಾಸಿಸ್)
• ಕೇಶ ವಿಕಾರಗಳು, ಓಣ ಚರ್ಮ ಇತ್ಯಾದಿ
ಚಳಿಗಾಲವನ್ನು ವಿಸರ್ಗಕಾಲವೆಂದು ಪರಿಗಣಿಸುವ ಕಾರಣ ಈ ಸಮಯದಲ್ಲಿ ಭೂಮಿಯಲ್ಲಿನ ಬಲ ಅಧಿಕಗೊಳ್ಳವುದರಿಂದ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಹಜವಾಗಿ ಬಲ ವೃದ್ಧಿ ಗೊಳ್ಳುವುದು. ಅಂದರೆ ಇತರೆ ಋತುಗಳಿಗೆ ಹೋಲಿಸಿದರೆ ಚಳಿಗಾಲದ ಉತ್ತಮ ವಾತಾವರಣ ಆರೋಗ್ಯವನ್ನು ಕಾಪಾಡುವುದರಲ್ಲಿ ಹೆಚ್ಚು ಲಾಭದಾಯಕವಾಗಿದೆ. ಆರೋಗ್ಯವಂತರಲ್ಲಿ ಸಹಜವಾಗಿ ಬಲ ಹುಮ್ಮಸ್ಸು ಮೊದಲಾದವುಗಳನ್ನು ಹೇಮಂತ ಋತುವಿನಲ್ಲಿ ನೋಡಗಬಹುದು. ಅದೇ ವಾತ ಹಾಗೂ ಕಫ ರೋಗಗಳಿಂದ ಬಳಲುತ್ತಿರುವ ಜನರಲ್ಲಿ ಸಹಜವಾಗಿ ಅನಾರೋಗ್ಯ ಉಲ್ಬಣಗೊಳ್ಳುವುದು ಸಾಮಾನ್ಯ.
ಸಂಧಿವಾತ, ಅನುವಾತ, ಸೊಂಟನೋವು , ಸಯಾಟಿಕಾ, ಕೆಮ್ಮು, ಅಸ್ತಮಾ (ಉಬ್ಬಸ), ಸೋರಿಯಾಸಿಸ್,ಒಣಚರ್ಮ, ಒರಟು ಕೂದಲು , ತಲೆಹೊಟ್ಟು, ಅರ್ಟಿಕೇರಿಯಾ ಇತ್ಯಾದಿ ಸಮಸ್ಯೆಗಳು ಉಧ್ಬವಗೊಳ್ಳಲು ಮತ್ತು ಉಲ್ಬಣಗೊಳ್‍ಳಲು ಈ ಹವಮನ ಕಾರಣ.
ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ?
• ಕಾಯಿಲೆ ಬರದಂತೆ ನೋಡಿಕೊಳ್ಳವುದು ಬುದ್ದಿವಂತಿಕೆ .ಬಂದಾಗ ಕೂಡಲೇ ಉಪಶಮನ ಮಾಡಿಕೊಳ್‍ಳುವುದರಿಂದ ಆರೋಗ್ಯ ವೃದ್ಧಿಸುತ್ತದೆ . ಚಳಿಗಾಲದಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಈ ಸೂತ್ರಗಳನ್ನು ಅನನುಸರಿಸಿದರೆ ಹೆಚ್ಚು ಲಾಭ.
• ಬಿಸಿ ನೀರಿನ ಸೇವನೆ
• ನಿತ್ಯ ಅಭ್ಯಂಗ ಅಥವಾ ವಾರಕ್ಕೆ ಮೂರುಬಾರಿ ಅಭ್ಯಂಗ
• ಈ ಋತುವಿನಲ್ಲಿ ಹಸಿವು ಹೆಚ್ಚಿರುವ ಕಾರಣ ಮಧುರವಾದ ಹಾಗೂ ಸ್ನಿಗ್ಧವಾದ ಬಿಸಿ ಆಹಾರವನ್ನು ಸೇವಿಸಿ.
• ಮೊಸರು, ಮಜ್ಜಿಗೆ, ಹಾಗೂ ಹಣ್ಣುಗಳನ್ನು ಸೇವಿಸುವಾಗ ಕಾಳುಮೆಣಸಿನ ಪುಡಿ ಮತ್ತು ಸೈಂಧವ ಉಪ್ಪನ್ನು ಬಳಸಿ.
• ಉಷ್ಣದಾಯಕ ಉಡುಗೆ ಮತ್ತು ಬಿಸಿಅಡುಗೆ ಅತಿ ಮುಖ್ಯ.
• ಮೆಣಸಿನ ಸಾರು, ಹುರುಳಿ ಕಟ್ಟಿನ ಸಾರು , ಬೇಯಿಸಿದ ತರಕಾರಿಗಳು, ಒಣಹಣ್ಣುಗಳು ಇತ್ಯಾದಿ ಆಹಾರ ಪದಾರ್ಥಗಳ ಸೇವನೆ ಉತ್ತಮ.
• ವ್ಯಾಯಾಮ ಹೆಚ್ಚು ಸೂಕ್ತ.
• ಬಿಸಿಲು ಬಂದಾಗ ವಾಕಿಂಗ್ ಒಳ್ಳೆಯದು.
• ಬಿಸಿನೀರಿನ ಸ್ನಾನ ಹೆಚ್ಚು ಉಪಯುಕ್ತ.

ಯಾವುದು ಬೇಡ

• ತಂಗಳು ಆಹಾರ ಹಾಗೂ ಥಂಡಿ ಪದಾರ್ಥಗಳ ಸೇವನೆ
• ಬೇಕರಿ ಮತ್ತು ಜಂಕ್ ಪದಾರ್ಥಗಳ ಸೇವನೆ
• ಶೀತ ಹಾಗೂ ವಾತ ಹೆಚ್ಚಿಸುವ ಆಹಾರ ಪದಾರ್ಥಗಳ ಸೇವನೆ
• ಆಲೂಗಡ್ಡೆ, ಹಲಸಿನಹಣ್ಣು, ಮೊಸರು, ಅಡಿಕೆ ಸೇವನೆ, ಕಹಿ ಮತ್ತು ಒಗರು ಪದಾರ್ಥಗಳು ಐಸ್ ಕ್ರೀಂ, ತಣ್ಣೀರು ಸೇವನೆ ಇತ್ಯಾದಿ
• ಹಗಲು ನಿದ್ದೆ, ಅಧಿಕ ನಿದ್ದೆ, ಜಾಗರಣೆ ಇತ್ಯಾದಿ.
• ತಣ್ಣೀರಿನ ಸ್ನಾನ, ಅಲಸ್ಯ ಬೇಡ
ಬಿಸಿ ನೀರಿನ ಮಹತ್ವ
ಸಾಮಾನ್ಯವಾಗಿ ಜನರಲ್ಲಿ ಒಂದು ತಪ್ಪು ಕಲ್ಪನೆ ಇದೆ. ನೀರನ್ನು ಶುದ್ಧೀಕರಿಸುವ ಯಂತ್ರಗಳಲ್ಲಿನ ನೀರನ್ನನು ಬಳಸಿದರೆ ಹೆಚ್ಚು ಸೂಕ್ತ ಹಾಗೂ ಅದು ಬಿಸಿನೀರಿಗೆ ಸಮ ಎಂದು ಭಾವಿಸುತ್ತಾರೆ. ಸಂಸ್ಕರಿಸಿದ ತಣ್ಣೀರು ಎಷ್ಟೇ ಶಿದ್ಧವಾಗಿದ್ದರೂ ಅದು ಬಿಸಿನೀರಿಗೆ ಸಮನಾಗಲು ಸಾಧ್ಯವಿಲ್ಲ. ತಣ್ಣೀರಿನಲ್ಲಿ ಶೀತಗುಣ ಪ್ರಧಾನವಾಗಿರುತ್ತದೆ. ಅಂತೆಯೇ ನೀರಿನ ಸಾಂಧ್ರತೆ ಬಿಸಿನೀರಿಗೆ ಹೋಲಿಸಿದಲ್ಲಿ ಹೆಚ್ಚಾಗಿರುತ್ತದೆ. ತಣ್ಣೀರಿನಲ್ಲಿ ಸಾಂಧ್ರತೆ ಹಾಗೂ ಶೀತಗುಣ ಹೆಚ್ಚಿರುವ ಕಾರಣ ಅದು ಕಫದೋಷವನ್ನು ವೃದ್ಧಿಸುತ್ತದೆ. ಹಾಗೂ ಉಲ್ಬನಗೊಳಿಸುತ್ತದೆ. ಆದ್ದರಿಂದ ಮೇಲೆ ತಿಳಿಸಿದ ಸಮಸ್ಯಗಳಲ್ಲಿ ತಣ್ಣೀರಿನ ಸೇವನೆ ಸಹಜವಾಗಿ ಅಪಥ್ಯವಾಗಿರುತ್ತದೆ.
ಜನಸಾಮಾನ್ಯರಲ್ಲಿ ಮತ್ತೊಂದು ತಪ್ಪುಗ್ರಹಿಕೆಯೆಂದರೆ ಬಿಸಿನೀರಿನ ಸೇವನೆಯಿಂದ ದೆಹಕ್ಕೆ ಬಲ ಸಿಗುವುದಿಲ್ಲ ಎಂದು, ಇದು ತಪ್ಪು ,ಬಿಸಿನೀರಿನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಅನೇಕ ರೋಗಗಳನ್ನು ಮಣಿಸಬಲ್ಲ ದಿವ್ಯ ಅಸ್ತ್ರ.
ಬಿಸಿನೀರಿನ ಬಳಕೆಯಲ್ಲಿ ಕಂಡು ಬರುವ ಮತ್ತೊಂದು ವ್ಯತ್ಯಯ ಎಂದರೆ ಬಿಸಿ ನೀರಿಗೆ ತಣ್ಣೀರು ಬೆರೆಸಿ ಕುಡಿಯುವುದು ಇಲ್ಲವೇ ಸ್ವಲ್ಪ ಬಿಸಿ ಮಾಡಿದ ನೀರನ್ನು ಬಿಸಿ ನೀರೆಂದು ಕುಡಿಯುವುದು ಹೀಗೆ ಮಾಡುವುದರದಿಂದ ಯಾವುದೇ ಪ್ರಯೋಜನವಿಲ್ಲ. ನೀರನ್ನು ಚೆನ್ನಾಗಿ ಕುದಿಸಿ (100 ಡಿ.ಸೆ.ವರೆಗೆ) ನೋತರ ಕುಡಿಯಲು ಹಿತಕರವಾಗುವಂತೆ ಆರಿಸಿ ಸೇವಿಸುವುದು ಹೆಚ್ಚು ಪರಿಣಾಮಕಾರಿ.
ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಯಲ್ಲಿ ಹೆಚ್ಚು ಉಪಯುಕ್ತವಾದದ್ದು ಅಭ್ಯಂಗ. ಬಿಸಿನೀರಿನ ಸೇವನೆ ಮತ್ತು ಮಧುರ, ಸ್ನಿಗ್ದ ಆಹಾರದ ಬಳಕೆ ಈ ಸಮಯದಲ್ಲಿ ಆರೋಗ್ಯವನ್ನು ರಕ್ಷಿಸುವಲ್ಲಿ ಹೆಚ್ಚು ಲಾಭದಾಯಕ.
ಬಿಸಿನೀರಿನ ಗುಣಗಳು
• ಕಫ, ವಾತ ರೋಗಗಳಲ್ಲಿ ಹಿತಕಾರಿ
• ನೆಗಡಿ, ಜ್ವರ ಅಸ್ತಮ, ಕೆಮ್ಮುಇತ್ಯಾದಿಗಳಲ್ಲಿ ಬಿಸಿ ನೀರಿನ ಸೇವನೆ ಕಡ್ಡಾಯ
• ಮೂತ್ರ ವಿಕಾರಗಳಲ್ಲಿ ಮೂತ್ರಕೋಶ ಹಾಗೂ ಕಿಡ್ನಿಗಳ ಶುದ್ಧಿಗಾಗಿ ಬಿಸಿನೀರು ಬಳಕೆ ಫಲಪ್ರದ
• ಅಗ್ನಿಮಂದ್ಯ, ಅಜೀರ್ಣ, ಹೊಟ್ಟೆಯುಬ್ಬರ ಇವುಗಳಿU ಬಿಸಿ ನೀರು ಸೇವಿಸಿ
• ಮಂಡಿನೋವು, ಸೊಂಟನೋವು, ಸರ್ವಾಂಗ ಸಂಧಿವಾತ, ಅಮವಾತ ಇತ್ಯಾದಿಗಳಲ್ಲಿ ಹೆಚ್ಚು ಲಾಭದಾಯಕ.
• ಕಿಟಿಭ, ಅರ್ಟಿಕೇರಿಯಾ ಇತ್ಯಾದಿಗಳಲ್ಲಿ ಬಿಸಿನೀರು ಸ್ನಾನಕ್ಕೂ, ಪಾನಕ್ಕೂ ಹಿತಕರ
• ನವ ಜ್ವರದಲ್ಲಿ, ಮಳೆಗಾಲ ಮತ್ತು ಚಳಿಗಾಲದಲ್ಲಿ ಬಿಸಿ ನೀರಿನ ಸೇವನೆ ಅಮೃತಕ್ಕೆ ಸಮ

ತಪ್ಪು ಸಂದೇಶಕ್ಕೆ ದೇಶ ಹೊತ್ತಿ ಉರಿದಿದ್ದು ಎಷ್ಟು ಸರಿ ?

ಪೌರತ್ವ ಕಾಯ್ದೆ-2019 ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕಾರ ಆಗುತ್ತಲ್ಲೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬಿದ ಹಲವು ಸುಳ್ಳು ಸುದ್ದಿಗಳಿಗೆ ದೇಶವೆ ಹೊತ್ತಿ ಉರಿಯುತ್ತಿದೆ ಏಕೆಂದರೆ ಈ ಮುಂಚೆ ಬಿಲ್ ಆಗಿದ್ದು ಈಗ ಕಾಯ್ದೆ ಆಗಿ ಬದಲಾಗಿದ್ದು ಹಳೆಯ ಬಿಲ್‍ನ ಕೇಲವು ಅಂಶಗಳನ್ನು ಇಲ್ಲಿ ಬದಲಾಗಿದೆ.ಈ ಕಾಯ್ದೆಯಿಂದ ಭಾರತ ಮೂಲ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆಯು ಇಲ್ಲ ಏಕೆಂದರೆ ಈ ಕಾಯ್ದೆಯ ಮೂಲ ಉದ್ದೇಶವು ಬೇರೆ ದೇಶದ ಅಲ್ಪಸಂಖ್ಯಾತರ ರಕ್ಷಣೆ ಅಂದರೆ ಅಂತರಾಷ್ಟ್ರೀಯ ನಿಯಮಗಳ ಪ್ರಕಾರ ಆಶ್ರಯ ನೀಡುವುದು ಮತ್ತು ನುಸುಳುಕೋರರನ್ನು ತಡೆಯುವುದು ಮತ್ತು ಬೇರೆ ದೇಶಗಳಿಂದ ಬಂದು ದೇಶದ ಭದ್ರತೆಯನ್ನು ಹಾಳು ಮಾಡುವುದು ಮೂಲನಿವಾಸಿಗಳ ಬದುಕಿಗೆ ತೊಂದರೆ ನೀಡುವುದು ತಡೆಯುವುದೇ ಆಗಿದೆ ಹೊರತು ಇಲ್ಲಿಯ ಮುಸ್ಲಿಂರನ್ನು ಹೊರಹಾಕುವ ಯಾವ ಉದ್ದೇಶವು ಇಲ್ಲ ಅದು ಅಲ್ಲದೇ ಸಿ.ಎ.ಎ ಸಂಪೂರ್ಣ ಓದಿ ಅಥೈಸಿಕೊಂಡು ಹೋರಾಟ ಮಾಡುವುದು ಒಳ್ಳೆಯದೇ ಹೊರತು ರಾಜಕೀಯ ಮತ್ತು ಧರ್ಮ ಹಾಗೂ ಜಾತಿ ಹೆಸರಿನಲ್ಲಿ ಬೆಂಕಿ ಹಚ್ಚಿ ಮೈಕಾಸಿಕೊಳ್ಳುವುದು ನ್ಯಾಯವಲ್ಲ. ಈ ಕಾಯ್ದೆಯ ಪ್ರಕಾರ ಪಾಕಿಸ್ತಾನ,ಬಾಂಗ್ಲಾ ಮತ್ತು ಅಪ್ಘನಿಸ್ತಾನ ದೇಶಗಳ ಮುಸ್ಲಿಂ ಧರ್ಮದವರನ್ನು ಹೊರತು ಪಡಿಸಿ ಸಿಕ್ಕ್,ಜೈನ್,ಬೌದ್ಧ ಪಾರಸಿ ಮತ್ತು ಹಿಂದೂ ಧರ್ಮದವರು ಬರುವ ನಿರಾಸಿತರು ಮತ್ತು ಅಳಿ ತುಳಿತ ಒಳಗಾದವರು ಬಂದರೆ ತಕ್ಷಣ ಅವರಿಗೆ ದೇಶದ ಆಶ್ರಯ ಮತ್ತು ಪೌರತ್ವ ದೊರೆಯುತ್ತದೆ, ಇದು ಮುಸ್ಲಿಂ ಧರ್ಮದವರಿಗೆ ಅನ್ವಯಿಸುವುದಿಲ್ಲ. ಬೇರೆ ಕಾಯ್ದೆ ಮತ್ತು ಅಂತರಾಷ್ಟ್ರೀಯ ನಿಯಮದ ಪ್ರಕಾರ ಈ ದೇಶಗಳ ಮುಸ್ಲಿಂ ಧರ್ಮದವರು ಭಾರತೀಯ ಪೌರತ್ವ ಪಡೆಯಬೇಕಾದರೆ 11 ವರ್ಷ ಕಾಯಬೇಕು ಏಕೆಂದರೆ ಈ ಮೂರು ದೇಶಗಳು ಮುಸ್ಲಿಂ ಧರ್ಮದವರೆ ಹೆಚ್ಚಿರುವ ದೇಶಗಳು ಅದರಲ್ಲೂ ಪಾಕಿಸ್ಥಾನ ಮತ್ತು ಅಪ್ಘನಿಸ್ತಾನ ದೇಶಗಳು ತಮ್ಮ ಸಂವಿಧಾನದಲ್ಲೆ ಇಸ್ಲಾಮಿಕ ದೇಶಗಳು ಅಂತ ಹೇಳಿಕೊಂಡಿವೆ ಮತ್ತು ಬಾಂಗ್ಲಾ ದೇಶವು ತಾನು ಇಸ್ಲಾಂ ದೇಶ ಅಂತ ಹೇಳಿಕೊಳ್ಳದಿದ್ದರೂ ಕೂಡ ಅಲ್ಲಿ ಆಡಳಿತ ಮತ್ತು ಕಾನೂನುಗಳು ಮುಸ್ಲಿಂ ಪರವಾಗಿದ್ದು ಈ ಗಡಿ ದೇಶಗಳಲ್ಲಿ ಮುಸ್ಲಿಂ ಧರ್ಮದವರು ಬಹುಸಂಖ್ಯಾತರಾಗಿದ್ದು, ಈ ದೇಶಗಳಲ್ಲಿ ಮುಸ್ಲಿಂ ಧರ್ಮದವರಿಗೆ ಯಾವುದೇ ರೀತಿಯ ತೊಂದರೆಯೂ ಇಲ್ಲ. ಮಯನ್ಮಾರ ಹಿಂದೂಗಳಿಗೆ ಮತ್ತು ಶ್ರೀಲಂಕಾದ ತಮಿಳಿನ್ನರಿಗೂ ಸಿ.ಎ.ಎ ಮೂಲಕ ತಕ್ಷಣ ಪೌರತ್ವ ದೊರೆಯುವುದಿಲ್ಲ ಏಕೆಂದರೆ ಮಯನ್ಮಾರದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದು, ಶ್ರೀಲಂಕಾದಲ್ಲಿ ತಮಿಳರ ಸಮಸ್ಯೆಗಳು ಪರಿಹಾರವಾಗಿದ್ದು ಮತ್ತು ಬಹುಸಂಖ್ಯಾತ ತಮಿಳರು ನೆಮ್ಮದಿಯಿಂದ ಬದುಕು ನಡೆಸುತ್ತಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಅಕ್ರಮ ವಲಸಿಗರ ಅಕ್ರಮ ಚಟುವಟಿಕೆಗಳನ್ನು ತಡೆಯಲು ದೇಶದ ಸುಕ್ಷರತೆ ಭದ್ರತೆ ಮತ್ತು ದೇಶದ ನಾಗರೀಕರ ಅಭಿವೃದ್ಧಿಗಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇದರಿಂದ ದೇಶವಾಸಿಗಳಿಗೆ ಅನುಕೂಲವಾಗಲಿದ್ದು ಆದರೆ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಚದುರಂಗ ಆಟಕ್ಕೆ ಅಮಾಯಕರ ಬಲಿಕೊಡುತ್ತಿವೆ. ದೇಶದಲ್ಲಿ ವಾಸ ಮಾಡುತ್ತಿರುವ ಯಾವುದೇ ಧರ್ಮದವರಿಗೂ ಇದರಿಂದ ತೊಂದರೆ ಆಗುವುದಿಲ್ಲ ಅಕ್ರಮವಾಗಿ ದೇಶದಲ್ಲಿ ಇರುವವರಿಗೆ ಮಾತ್ರ ತೊಂದರೆ ಕುಂಬಳ ಕಾಯಿ ಕಳ್ಳ ಅಂದರೆ ಏಕೆ ಕೇಲವರು ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೆ ಅನ್ನುದು ಯಕ್ಷ ಪ್ರಶ್ನೆಯಾಗಿದೆ.
ದೇಶದ ಬಡವರು ಮತ್ತು ಅಲ್ಪಸಂಖ್ಯಾತರು ಈಗ ಸರ್ಕಾರದ ಯೋಜನೆಗಳನ್ನು ಪಡೆಯಲು ಹಲವಾರು ಬಾರಿ ಹಲವಾರು ದಾಖಲೆಗಳನ್ನು ವಿವಿಧ ಸರ್ಕಾರಿ/ಅರೆ ಸರ್ಕಾರಿ ಕಛೇರಿಗಳಿಗೆ ಅಲೆದು ಸರ್ಕಾರಿ ಯೋಜನೆಗಳನ್ನು ಪಡೆಯುವಾಗ ಇರುವ ಆಸಕ್ತಿ ಮನೆ ಬಾಗಲಿಗೆ ಬಂದಾಗ ಕೇವಲ ಯಾವುದಾದರೂ ಎರಡು ದಾಖಲೆಗಳನ್ನು ತೋರಿಸಲು ಏನು ಸಮಸ್ಯೆ ? ದೇಶದ ಅಭಿವೃದ್ಧಿಗಾಗಿ ಅಕ್ರಮ ನುಸುಳುಕೋರರ ತೊಂದರೆಯನ್ನು ತಪ್ಪಿಸಲು ಮತ್ತು ದೇಶದ ಭದ್ರತೆಗಾಗಿ ಇಷ್ಟು ಮಾಡದಿದ್ದರೆ ಹೇಗೆ ? ಅಕ್ರಮವಾಗಿ ದೇಶದಲ್ಲಿ ವಾಸಿಸುವವರಿಂದ ಸ್ಥಳೀಯರಿಗೆ ಉದ್ಯೋಗದ ಕೊರತೆ, ದೇಶದಲ್ಲಿ ವಿನಾಕಾರಣ ಗಲಭೆ ಮತ್ತು ಡೊಂಬಿಗಳು ನಡೆಯುವುದು, ಇಂತಹ ಅಕ್ರಮ ವಲಸಿಗರು ತಮ್ಮ ದೇಶದ ಮೇಲಿನ ಅಭಿಮಾನಕ್ಕೆ ಇಲ್ಲಿ ಕೇಟ್ಟ ಕೆಲಸ ಮಾಡಿ ದೇಶದ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ಹಾಳು ಮಾಡುವುದು ಮತ್ತು ಎಲ್ಲಕ್ಕಿಂತಲ್ಲೂ ಮುಖ್ಯವಾಗಿ ಭಯೋತ್ಪಾದನೆ.
ಸಂವಿಧಾನ ಮೂಲ ಆಶೆಯನ್ನು ಈ ಕಾಯ್ದೆ ಹಾಳು ಮಾಡುತ್ತದೆ ಅಂತ ಕೇಲವರು ವಾದಿಸುತ್ತಾರೆ. ಸಂವಿಧಾನದಲ್ಲಿ ಹಲವಾರು ಬದಲಾವಣೆಗಳು ಆಗಿದ್ದು ಜೊತೆಗೆ ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ ಕೂಡ. ಬದಲಾವಣೆ ಜಗದ ನಿಯಮ ಅಲ್ಲವೇ? ಗಾಂಧಿ ಅಂಬೇಡ್ಕರ್ ಯಾರೂ ಮನೆಯವರನ್ನು ಉಪವಾಸ ಬಿಟ್ಟು ಕಂಡವರಿಗೆ ಮ್ರಷ್ಠಾನ್ನ ಭೋಜನೆ ನೀಡಿ ಅಂತ ಎಲ್ಲೂ ಹೇಳಿಲ್ಲ. ಈ ದೇಶದ ಅಲ್ಲ ವಿಶ್ವದ ಯಾವುದೇ ತತ್ವಜ್ಞಾನಿ ಕೂಡ ತಮ್ಮವರನ್ನು ಬೀದಿಯಲ್ಲಿ ಬಿಟ್ಟು ಬೇರೆಯವರನ್ನು ಉಪಚರಿಸಿ ಅಂತ ಹೇಳಿಲ್ಲ. ಈ ದೇಶದ ಅಲ್ಪಸಂಖ್ಯಾತರು ಮತ್ತು ಎಲ್ಲ ಧರ್ಮದ ಬಡವರನ್ನು ಮೊದಲು ಒಂದು ಹಂತಕ್ಕೆ ತರಬೇಕಾದ ಅತ್ಯಂತ ಮಹತ್ವದ ಜವಾಬ್ದಾರಿ ಆಡಳಿತ ಸರ್ಕಾರ ಮತ್ತು ಆಡಳಿತ ವಿಭಾಗದ ಮೇಲೆ ಇದ್ದು, ಕಾಟಾಚಾರಕ್ಕೆ ವಿಶ್ವಸಂಸ್ಥೆಯ ನಿಯಮಗಳನ್ನು ಪಾಲಿಸುತ್ತೇವೆ ಅಂತ ತೋರಿಸಲು ನಮ್ಮವರನ್ನು ನಿರ್ಗತಿಕರಾಗಿಸುವುದು ಯಾವ ನ್ಯಾಯ ? ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಇಂತಹ ಕಾಯ್ದೆಯ ಅವಶ್ಯಕತೆ ಇದ್ದು ದೇಶದ ಮೂಲ ನಿವಾಸಿಗಳು ಯಾವುದೇ ಗಾಳಿ ಸುದ್ದಿ ಅಥವಾ ದ್ರಶ್ಯ ಮಾಧ್ಯಮಗಳು ಟಿ. ಆರ್. ಪಿ ಗಾಗಿ ಕೇಲ ಬುದ್ಧಿ(ಲದ್ದಿ) ಜೀವಿಗಳ ಪಾನೇಲ್ ಚರ್ಚೆಯನ್ನು ನೋಡಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಬರುವ ಪೋಸ್ಟಗಲನ್ನು ನೋಡಿ ಭಾವೋದ್ರಕ್ಕೆ ಒಳಗಾಗಿ ಗಲಾಟೆ, ಬಂಧ ಮಾಡಬಾರದು ಇದರಿಂದ ಆಗುವ ಹಾನಿಗಳನ್ನು ಯಾವ ಧರ್ಮದ ದೇವರಾಗಲಿ, ಬುದ್ದಿಜೀವಿಯಾಗಲಿ ಮರಳಿ ಕೊಡಲಾರರು, ಮಂಗಳೂರಿನಲ್ಲಿ ಜೀವ ಬಲಿಗೆ ಈ ದೇಶದ ಬುದ್ದಿಜೀವಿಗಳು ಮತ್ತು ಹೋರಾಟ ಮಾಡಬೇಕು ಎಂಬ ಹುಚ್ಚು ಮನಸ್ಸುಗಳೆ ಕಾರಣ ಆದರೆ ಆ ಜೀವಗಳನ್ನು ಮರಳಿ ತರುವ ಶಕ್ತ ಈ ಲದ್ದಿಗಳಿಗೆ ಮತ್ತು ಯಾವುದೋ ನೆಲಕಚ್ಚುತ್ತಿರುವ ರಾಜಕೀಯ ಪಕ್ಷಗಳ ಮುಂಖಡರಿಗೆ ಅಥವಾ ಹೋರಾಟ ಆಯೋಜಿಸಿದವರಿಗೆ ಇದ್ದೇಯಾ ?

ಹೋರಾಟದ ಹೊರತಾಗಿಯೂ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಲು ಸಾಕಷ್ಟು ಮಾರ್ಗಗಳು ಇವೆ. ಒಂದು ವೇಳೆ ಈ ಕಾಯ್ದೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ ಅದರ ನಂತರವು ಈ ಕಾಯ್ದೆಯಲ್ಲಿ ಲೋಪ-ದೋಷಗಳು ಕಂಡು ಬಂದರೆ ಶಾಂತಿಯುತ ಮೆರವಣೆಗೆಯ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು, ಗಾಂಧಿ ಬಗ್ಗೆ ಮಾತನಾಡುವವರೇ ಬೆಂಕಿ ಹಚ್ಚುತ್ತಿರುವುದು ನೋಡಿದ್ದಾಗ ಗಾಂಧಿ ತತ್ವಗಳನ್ನು ಪಾಲಿಸುವವಲ್ಲಿ ಎಲ್ಲರೂ ಎಡವಿದ್ದಾರೆ ಅಂತ ಅನ್ನಿಸುತ್ತದೆ. ಗಾಂಧಿಯವರು ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ್ಯ ತಂದರು ಸತ್ಯಾಗ್ರಹದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದ ಗಾಂಧಿಯವರ ಭಾವಚಿತ್ರ ಬಳಸುವವರು ದೇಶದಲ್ಲಿ ಹೆಚ್ಚಾಗಿದ್ದಾರೇ ಹೊರತು ಅವರ ಆದರ್ಶ ಮತ್ತು ತತ್ವಗಳನ್ನು ಪಾಲಿಸುವವರ ಸಂಖ್ಯೆ ಅತ್ಯಂತ ಕಡಿಮೆ ಆಗಿದೆ.
ಅಂತೆ-ಕಂತೆ ಸುದ್ದಿಗಳಿಗೆ ದ್ವನಿಯಾಗಿ ದೇಶದ ಐಕ್ಯತೆ ದಕ್ಕೆ ತರುವ ಕೆಲಸ ಯಾರು ಮಾಡಬೇಡಿ ಏಕೆಂದರೆ ಭಾರತವು ಸ್ವಾತಂತ್ರ್ಯ ನಂತರದಲ್ಲಿ ಜಾತ್ಯಾತೀತವಾಗಿ ನೆಮ್ಮದಿಯಿಂದ ಬದುಕುತ್ತಿದೆ. ಈ ದೇಶದ ಅನ್ನ ತಿಂದು ದೇಶದ ವಿರುದ್ದ ಭಾಷಣ ಮಾಡುವವರನ್ನು ಬುದ್ದಿಜೀವಿಗಳು ಅನ್ನುವ ಈ ಕಾಲದಲ್ಲಿ ಇಂತಹ ಮನೆ ಹಾಳು ಮಾಡುವವರ ಮಾತು ಕಟ್ಟಿಕೊಂಡು ನಿಮ್ಮ ಅಮೂಲ್ಯ ಜೀವ ಮತ್ತು ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಶಾಂತಿ-ನೆಮ್ಮದಿಯಿಂದ ಬದುಕಿ, ನಾವೇಲ್ಲರೂ ಒಂದು ಭಾರತಾಂಭೆಯ ಮಕ್ಕಳು ಇಲ್ಲಿಯ ಮೂಲ ನಿವಾಸಿಗಳಿಗೆ ಯಾವುದೇ ತೊಂದರೆ ಇಲ್ಲ ಒಂದು ವೇಳೆ ಮುಂದೆ ತೊಂದರೆ ಬಂದರೆ ನಾವು ನಿಮ್ಮೊಂದಿಗೆ ಇದ್ದೇವೆ. ಹಿಂದೂ-ಮುಸ್ಲಿಂ ಅಣ್ಣ-ತಮ್ಮರಂತೆ ಬದುಕಿ ದೇಶವನ್ನು ಕಟ್ಟೋಣ. ಶಾಂತಿ ಹೆಸರಾದ ದೇಶದಲ್ಲಿ ಶಾಂತಿ ಕಾಪಾಡಿ. ಸಿ.ಎ.ಎ ಬಗ್ಗೆ ಸರಿಯಾಗಿ ತಿಳಿದು ಅಥೈಸಿಕೊಂಡು ಮಾತನಾಡಿ.

ಪಂಚ ಚುನಾವಣೆ ಲೋಕ ಸಭೆಯ ಮುನ್ಸೂಚನೆಯೇ?


ಇತ್ತೀಚೆಗೆ ನಡೆದ ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ, ಮಣಿಪುರ ಮತ್ತು ಪಂಜಾಬ್ ದಲ್ಲಿ ನಡೆದ ಚುನಾವಣೆಯು ಜಾಗತೀಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಚುನಾವಣೆಯಿಂದ ಮುಂದೆ ಬರುವ ಲೋಕಸಭೆಯ ಚುನಾವಣೆ ಮೇಲೆ ನೇರ ಪರಿಣಾಮ ಬೀರುತ್ತದೆ. ಹೇಗೆಂದರೆ ದೇಶದಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು ಲೋಕಸಭಾ ಚುನಾವಣೆಯನ್ನು ಹೊಂದಿದ ರಾಜ್ಯವಾಗಿದೆ. ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯನ್ನು ದೇಶದ ಮಿನಿ ಮಹಾ ಚುನಾವಣೆಯೆಂದೆ ಪರಿಗಣಿಸುವುದು ವಾಡಿಕೆ. 2024 ರಲ್ಲಿ ಲೋಕಸಭಾ ಚುನಾವಣೆ ಬರಲಿದ್ದು ಈ ಚುನಾವಣೆಯಲ್ಲಿ ಉತ್ತರ ಪ್ರದೇಶ ಒಂದರಿಂದಲೇ ಬಿಜೆಪಿ 50 ರಿಂದ 60 ಸೀಟುಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಈ ಪಂಚ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮತ್ತು ಉತ್ತರಖಂಡಾದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿ.ಜೆ.ಪಿ ಅಧಿಕಾರ ಹಿಡಿಯುತ್ತದೆ. ಗೋವಾ ಮತ್ತು ಮಣಿಪುರದಲ್ಲಿ ಒಂದಿಬ್ಬರ ಸಹಾಯದೊಂದಿಗೆ ಅಧಿಕಾರ ಹಿಡಿಯುವ ಬಲ ಬಿಜೆಪಿಗಿದೆ. ಇನ್ನು ಈ ಹಿಂದೆ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಮುಖ ಭಂಗವಾಗಿದ್ದು ಬಿ.ಜೆ.ಪಿಯ ರೈತ ವಿರೋಧಿ ನೀತಿಯನ್ನು ಅರವಿಂದ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷವು ಸರಳವಾಗಿ ಬಹುಮತ ಪಡೆದು ಪಂಜಾಬಿನಲ್ಲಿ ಅಧಿಕಾರವನ್ನು ಹಿಡಿದಿದೆ ಇದರ ಮಧ್ಯೆ ಕಾಂಗ್ರೆಸ್ ಇನ್ನೋಂದು ರಾಜ್ಯವನ್ನು ಕಳೆದುಕೊಂಡು ಮೌನವಾಗಿದೆ. 2023 ರಲ್ಲಿ ಕರ್ನಾಟಕ ಸೇರಿದಂತೆ ಹಲವಾರು ವಿಧಾನ ಸಭೆಗಳ ಚುನಾವಣೆಗಳಿದ್ದು ಈ ಪಂಚ ರಾಜ್ಯಗಳ ಚುನಾವಣೆಯು ಪ್ರಭಾವ ಬೀರುತ್ತದೆ. ಇತ್ತ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸೋಲಿನ ಭೀತಿ ಕಾಡುತ್ತಿದೆ. ರಾಹುಲ್ ಗಾಂಧಿ ಈ ಚುನಾವಣೆಯ ಸೋಲನ್ನು ಒಪ್ಪಿಕೊಂಡಿದ್ದು ಸೋನಿಯಾ ಗಾಂಧಿ ಪರಾಮರ್ಶೆ ಮಾಡಿ ಕೊಳ್ಳುತ್ತಿದ್ದಾರೆ. ಬಿಜೆಪಿ ಪಾಳೆಯದಲ್ಲಿ ಮೋದಿ ಯೋಗಿ, ಅಮಿತ್‍ಶಾ ನಡ್ಡ ಮುಂತಾದವರು ಗೆಲುವನ್ನು ಕಾರ್ಯಕರ್ತರ ಜೊತೆ ಹಂಚಿಕೊಳ್ಳುವುದರ ಜೊತೆಗೆ ಗೆಲುವಿಗಾಗಿ ಶ್ರಮಿಸಿದವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಚುನಾವಣೆಯಲ್ಲಿ ಹಲವಾರು ವಿಸ್ಮಯಗಳು ನಡೆದಿದ್ದು ಅದರಲ್ಲಿಯೂ ಉತ್ರರ ಪ್ರದೇಶದಲ್ಲಿ ಬಿಜೆಪಿಗೆ ಶೇ42% ರಷ್ಟು ಮತ ಪಡೆಯುವುದರೊಂದಿಗೆ ದಾಖಲೆ ಸೃಷ್ಟಿಯಾಗಿದೆ. ಇನ್ನೊಂದು ಆಶ್ಚರ್ಯಕರ ಬೆಳವಣಿಗೆಯೆಂದರೆ ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಕೂಡ ಸೋತಿದ್ದಾರೆ. ಪಂಜಾಬಿನ Pಅಅ ಅಧ್ಯಕ್ಷ ನವಜೋತ್ ಸಿಂಗ್ ಸಿದ್ದು ಕೂಡ ಸೋತಿದ್ದಾರೆ. ಉತ್ತರಖಂಡಾದ ಅಒ ಪುಷ್ಕಾರ್ ಸಿಂಗ್ ಧಾಮಿ ಕೂಡ ಸೋತು ಭಾರತ ಇತಿಹಾಸದಲ್ಲಿ ಚುನಾವಣಾ ವಿಷಯದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶವು ಬಿಜೆಪಿಯನ್ನು ಎಲ್ಲಾ ರೀತಿಯ ಜನ ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಬಿಜೆಪಿಯ ಧರ್ಮ ನೀತಿಗಳು ವಿದೇಶಾಂಗ ನೀತಿಗಳು ಮತ್ತು ರೈತ ವಿರೋಧಿ ಕಾನೂನುಗಳ ಮಧ್ಯೆಯೂ ದೇಶದ ಯುವ ಜನತೆ ಸೇರಿದಂತೆ ಪ್ರಬುದ್ದ ಮತದಾರ ಕೂಡ ಬಿಜೆಪಿ ಯತ್ತ ಒಲವು ತೋರಿಸುತ್ತಿರುವುದನ್ನು ನೋಡಿದರೆ ಬಿಜೆಪಿ ಲೋಕಸಭೆಯಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಖಚಿತವಾಗಿದೆ ಎನ್ನಬಹುದು. ಈ ಪಂಚ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿಯು ಶೇ%ವಾರು ಮತಗಳಿಕೆ ಯಲ್ಲಿಯೂ ಹೆಚ್ಚಾಗಿರುವುದನ್ನು ನೋಡಿದರೆ ಬಿಜೆಪಿಗೆ ಮತ್ತೊಂದು ಅವಕಾಶ ಇರುವುದು ಖಚಿತವಾಗಿರುತ್ತದೆ.