POST

ಭಗವಾನ್ ಮಹಾವೀರರ ಬೋಧನೆಗಳು

ಭಗವಾನ್ ಮಹಾವೀರರು ಈ ವರ್ತಮಾನ ಕಾಲದ ಭರತ ಕ್ಷೇತ್ರದ 24 ನೇಯ (ಅಂತಿಮ) ತೀರ್ಥಂಕರರು. ಈಗ ನಡೆಯುತ್ತಿರುವುದು ಅವರ ತೀರ್ಥಕಾಲ ಚೈತ್ರ ಶುಕ್ಲ ತ್ರಯೋದಶಿ ಶುಭಯೋಗ ಸ್ವಾತಿ ನಕ್ಷತ್ರದಲ್ಲಿ ಸುಮಾರು 5621 ವರ್ಷಗಳ ಹಿಂದೆ ಭಗವಾನ್ ಮಹಾವೀರರ ಜನನವಾಯಿತು. ಕುಂಡಲಪುರದ ಅರಸ ಸಿದ್ದಾರ್ಥ ರಾಜ ಮತ್ತು ತ್ರಿಶಲಾ ರ ಏಕಮಾತ್ರ ಸುಪುತ್ರ ಇವರು. ಇವರ ಜನನಕ್ಕೆ 6 ತಿಂಗಳು ಮುಂಚಿತವಾಗಿಯೇ ಸಿದ್ಧಾರ್ಥ ರಾಜನ ಅರಮನೆಯ ಅಂಗಳದಲ್ಲಿ ಪ್ರತಿದಿನ ಮೂರುಬಾರಿ ಮೂರುವರೆ ಕೋಟಿ ಮುತ್ತು ರತ್ನಗಳ ಸುರಿಮಳೆ ಆಗುವುದಕ್ಕೆ ಪ್ರಾರಂಭವಾಯಿತು. ಒಟ್ಟು ಹದಿನೈದು ತಿಂಗಳು ಈ ರತ್ನವೃಷ್ಟಿ ಮುಂದುವರೆದು ಧನ-ಧನ್ಯಾದಿಗಳಿಂದ ರಾಜ್ಯ ಸುಭೀಕ್ಷವಾಯಿತು. ಮಹಾಪುರುಷರೆಂದರೆ ಹೀಗೆ ಪುಣ್ಯದ ಹೊಳೆಯೇ ಹರಿಯುತ್ತದೆ.
ತೀರ್ಥಂಕರರು:- ತೀರ್ಥಂಕರರೆಂದರೆ ಧರ್ಮ ತೀರ್ಥ ಪ್ರವರ್ತಕರು ‘ತರಂತಿ ಸಂಸಾರ ಮಹಾರ್ಣವಂ ಏಸ ತತ್ ತೀರ್ಥಂ’
ಅರ್ಥ:- ಯಾರ ಉಪದೇಶದ ಮುಖಾಂತರವಾಗಿ ಈ ಸಂಸಾರ ಸಾಗರವನ್ನು ದಾಟಲು ಸಾಧ್ಯವಾಗುತ್ತದೆಯೋ ಅದೇ ತೀರ್ಥವಾಗಿದೆ.(ಕಲ್ಯಾಣಕಾರಿಯಾಗಿದೆ)
ಭಗವಾನ್ ಮಹಾವೀರರ ಜನ್ಮಕಲ್ಯಾಣೋತ್ಸವದಂದು ಅವರ ಉನ್ನತ ವಿಚಾರಗಳ , ತತ್ವಗಳ ಸಿದ್ದಾಂತಗಳನ್ನು ಅರಿತು ಅದರಂತೆ ನಡೆಯುವುದು ಕಲ್ಯಾಣಕರವಾಗಿದೆ.
ಮಹಾವೀರರ ಸಿದ್ಧಾಂತಗಳು:- ಜೈನ ತತ್ವಗಳಾದ ಅಹಿಂಸೆ, ಅಪರಿಗೃಹ ಮತ್ತು ಅನೇಕಾಂತವಾದಗಳು ಭಗವಾನ್ ಮಹಾವೀರರ ಕಾಲದಲ್ಲಿ ಪ್ರಚಾರವಾಗಿ ಪುನರ್ ಸ್ಥಾಪನೆಗೊಂಡವು. ಇವುಗಳ ಪ್ರಚಾರ ಮಾಡಿ ಭಗವಾನ್ ಮಹಾವೀರರು ತಾವು ಉತ್ತಮ ಸಮಾಜ ಶಾಸ್ತ್ರಜ್ಞರು ಮತ್ತು ಸಮಾಜ ಸುಧಾರಕರು ಎಂಬುದನ್ನು ನಿರೂಪಿಸಿದರು. ಈ ಸಿದ್ಧಾಂತಗಳನ್ನು ಪಾಲಿಸುವುದರಿಂದ ಹೇಗೆ ಜೀವನವನ್ನು ಸ್ವರ್ಗಸಮಾನವನ್ನಾಗಿ ಮಾಡಿಕೊಂಡು ಬಾಳಬಹುದು ಎಂದು ಭೋಧಿಸಿದರು. ಇಷ್ಟಲ್ಲದೇ ಶಾಶ್ವತ ಸುಖವನ್ನು ಪಡೆಯುವ ಮೋಕ್ಷಮಾರ್ಗ , ರತ್ನತ್ರಯ ಮಾರ್ಗವನ್ನೂ ಭೋಧಿಸಿದರು.
ಅಹಿಂಸೆ:- ಅಹಿಂಸಾ ಪರಮೋಧರ್ಮ: ಬಾಳು ಮತ್ತು ಬಾಳಗೊಡು ಐive ಚಿಟಿಜ ಐeಣ ಐive ಇವು ಮಹಾವೀರರ ವಿಚಾರ. ಈ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೆ ಬದುಕುವ ಹಕ್ಕಿದೆ . ಆ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಕೇವಲ ತಮ್ಮ ನಾಲಗೆಯ ರುಚಿಗಾಗಿ ಮತ್ತೊಂದು ಜೀವಿಯನ್ನು ಕೊಂದು ತಿನ್ನುವುದು ಮಹಾಪಾಪ ಎಂದು ಮಾನವರಿಗೆ ಭೋಧಿಸಿದರು. ನಮ್ಮ ಸುತ್ತಮುತ್ತಲು ಇರುವ ಏಕೇಂದ್ರಿಯದಿಂದ ಪಂಚೇದ್ರಿಯ ಜೀವಿಗಳ ವರೆಗೆ ಯಾವ ಜೀವಿಗೂ ಉದ್ದೇಶಪೂರ್ವಕವಾಗಿ ಹಿಂಸೆ ಮಾಡಬಾರದು ಎಂದರು. ಸಾವಿರರು ವರ್ಷಗಳ ಹಿಂದೆಯೇ ಭಗವಾನ್ ಮಹಾವೀರರು ಪರಿಸರ ಸಂರಕ್ಷಣೆಯ ವಿಚಾರವಾಗಿ ಒತ್ತುಕೊಟ್ಟರು. ಮನುಜ ಇಂದು ತನ್ನ ಸ್ವಾರ್ಥ ಮತ್ತು ದುರಾಸೆಯಿಂದ ಪ್ರಕೃತಿಯ ಮೇಲೆ, ಪರಿಸರದ ಮೇಲೆ ಪ್ರಹಾರ ಮಾಡುತ್ತಾ ದಬ್ಬಾಳಿಕೆ ನಡೆಸುತ್ತಿದ್ದಾನೆ. ಗುಡ್ಡ ಬೆಟ್ಟ , ನದಿ ಸಮುದ್ರ, ಗಿಡ ಮರ, ಅರಣ್ಯಗಳ ಸಂಪತ್ತನ್ನೆಲ್ಲಾ ಲೂಟಿ ಮಾಡಲು ಅವನ್ನು ನಾಶಮಾಡುತ್ತಿದ್ದಾನೆ, ಕಲುಷಿತಗೊಳಿಸುತ್ತಿದ್ದಾನೆ. ನಮ್ಮ ಪರಿಸರದಲ್ಲಿ ತುಂಬಿರುವ ಏಕೇಂದ್ರಿಯ ಜೀವಿಗಳಿಗೆ ಮತ್ತು ತ್ರಸ ಜೀವಿಗಳಿಗೂ ಇದರಿಂದ ಅಪಾರ ಹಿಂಸೆಯಗುತ್ತಿದೆ. ಈ ಹಿಂಸೆಯಿಂದಾಗಿಯೇ ಇಂದು ಮನುಕುಲ ಅನೇಕ ಪ್ರಾಕೃತಿಕ ವಿಕೋಪಗಳಿಗೆ ಗುರಿಯಾಗಿದೆ. ಮಾನವನ ದಬ್ಬಾಳಿಕೆಗೆ ಪ್ರಕೃತಿ ಈಗ ಸಿಡಿದೆದ್ದಿದೆ. ಗ್ಲೋಬಲ್ ವಾರ್ಮಿಂಗ್, ಸುನಾಮಿ, ಭೂಕಂಪ ,ಚಂಡಮಾರುತ ಬರ ಮುಂತಾದವುಗಳು ಹೆಚ್ಚಾಗುತ್ತಿವೆ. ಕೊರೋನಾ ಸಮಯದಲ್ಲಿ ಆಕ್ಸಿಜನ್‍ಗಾಗಿ ಮನುಷ್ಯರು ಪರದಾಡಿ ಪರಿಪಾಟಲು ಪಟ್ಟರು. ಪರಿಸರವನ್ನು ಸಂರಕ್ಷಿಸಿ ಆಗ ನೀವೂ ಸುರಕ್ಷಿತ ಎಂದೂ ಭಗವಾನ್ ಮಹಾವೀರರು ಆ ಕಾಲದಲ್ಲೇ ಬೋಧಿಸಿದ್ದರು.
ಪರಸ್ಪರೋಪಗೃಹೋ ಜೀವಾನಾಮ್- ಜೀವಿಗಳು ಬದುಕಿಗಾಗಿ ಪರಸ್ಪರ ಅವಲಂಭಿಸಿರುತ್ತವೆ. ಆದ್ದರಿಂದ ಸರ್ವಹಿತವನ್ನು ಬಯಸುವುದೇ ಧರ್ಮ ಎಂದು ಭಗವಾನ್ ಮಹಾವೀರರು ಭೋಧಿಸಿದರು.
ಧರ್ಮ:-

  1. ಯಾವುದನ್ನು ನೀನು ನಿನಗಾಗಿ ಬಯಸುತ್ತಿಯೋ ಅದನ್ನು ಬೇರೆಯವರಿಗೂ ಬಯಸಬೇಕು. ಯಾವುದನ್ನು ನೀನು ನಿನಗಾಗಿ ಬಯಸುವುದಿಲ್ಲವೋ ಅದನ್ನು ಬೇರೆಯವರಿಗೂ ಬಯಸಬಾರದು.
  2. ಧರ್ಮದ ಹೆಸರಿನಲ್ಲಿ ಹಿಂಸೆ ಮಾಡಿದರೆ ಅದು ಧರ್ಮವನ್ನೇ ಕೊಲೆ ಮಾಡಿದಂತೆ.
  3. ಧರ್ಮೋ ರಕ್ಷತಿ ರಕ್ಷಿತಃ:- ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವು ರಕ್ಷಿಸುತ್ತದೆ.

ಮುಪ್ಪು ನಮ್ಮನ್ನಾವರಿಸುವ ಮುನ್ನ, ಇಂದ್ರಿಯಾಗಳು ಶಿಥಿಲವಾಗುವ ಮುನ್ನ ಬೇನೆ ಬೇಸರಿಕೆಗಳು ಬೆಳೆಯುವ ಮುನ್ನ ಧರ್ಮವನ್ನಾಚರಿಸಬೇಕು ಎಂದು ಭಗವಾನ್ ಮಹಾವೀರರು ಭೋಧಿಸಿದರು.
ಸ್ವಹಿಂಸೆ, ಪರಹಿಂಸೆ ಎರಡನ್ನು ಮಾಡಬಾರದು ಕ್ರೋಧ, ಮಾನ, ಮಾಯಾ, ಲೋಭಗಳು ನಮ್ಮ ಆತ್ಮಘಾತವನ್ನು ಮಾಡಿ ನಮ್ಮನ್ನು ಅಧೋಗತಿಗೆ ದೂಡುತ್ತವೆ. ಆದ್ದರಿಂದ ನಾವು ಕಷಾಯಗಳನ್ನು ಕಡಿಮೆ ಮಾಡಿಕೊಳ್ಳುವ ನಿರಂತರ ಪ್ರಯತ್ನವನ್ನು ಮಾಡಬೇಕು.
ಅನೇಕಾಂತವಾದ:- ಯಾವುದೇ ವಸ್ತುವನ್ನಾಗಲೀ, ವಿಷಯವನ್ನಾಗಲೀ ವಿವಿಧ ದೃಷ್ಟಿಕೋನಗಳಿಂದ ವೀಕ್ಷಿಸಿದಾಗಲೇ ಸತ್ಯ ಗೋಚರಿಸುತ್ತದೆ. ಇನ್ನು ಸಮಾಜದಲ್ಲಿ ಸಹ ಅಸ್ತಿತ್ವ, ಹೋಂದಾಣಿಕೆ ಇರಬೇಕೆಂದರೆ ಅನೇಕಾಂತ ದೃಷ್ಟಿ ಇರಬೇಕು. ನಾನೇ ಸರಿ, ನನ್ನದು ಮಾತ್ರ ಸರಿ ಎಂದರೆ ಅದು ಏಕಾಂತವಾದ ಆಗುತ್ತದೆ. ಏಕಾಂತದಲ್ಲಿ ವಾದ, ವಿವಾದ, ಕಲಹವಿದೆ. ಅನೇಕಾಂತದಲ್ಲಿ ಸಂವಾದವಿದೆ, ಸ್ನೇಹವಿದೆ. ಅನೇಕಾಂತ ದೃಷ್ಟಿಕೋನವಿದ್ದರೆ ಈ ವಿಶ್ವದಲ್ಲಿ ಮಹಾಯುದ್ಧಗಳೇ ಸಂಭವಿಸುತ್ತಿರಲಿಲ್ಲ. ಸಾಮಾಜಿಕ ಸಂಘರ್ಷಣೆಗಳು ಕಡಿಮೆಯಾಗುತ್ತಿದ್ದವು. ಲೋಕ ಹಿತವಾಗುತ್ತಿತ್ತು.

ಅಪರಿಗೃಹ:-ಮಾನವನ ಪರಿಗ್ರಹ ಬುದ್ಧಿ, ಅತಿ ಆಸೆ, ಅತಿ ಸಂಗ್ರಹಣೆ ಮಾಡುವ ಬುದ್ಧಿಯೇ ಇದು ಇಡೀ ಸಮಾಜದ ಅಧಃಪತನಕ್ಕೆ ಕಾರಣ. ಧನಿಕ, ಬಡವ ಎನ್ನುವ ಅಂತರ ಹೆಚ್ಚಾದಷ್ಟು ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತದೆ. ಕಳ್ಳತನ, ಕೊಲೆ, ಸುಲಿಗೆ, ದರೋಡೆ, ಮುಂತಾದವು ಹೆಚ್ಚುತ್ತದೆ. ಆದ್ದರಿಂದ ಇವನ್ನೆಲ್ಲಾ ತಡೆಗಟ್ಟಲು ಇದ್ದವರು, ಇಲ್ಲದವರಿಗೆ ದಾನ ನೀಡಬೇಕು. ಸಾಮಾಜಿಕ ಸಮಾನತೆಗಾಗಿ ಪ್ರಯತ್ನಪಡಬೇಕು ಎಂದು ಚತುರ್ವಿಧ ದಾನಗಳನ್ನು ಭೋಧಿಸಿದರು. ಆಹಾರ ದಾನ, ಆಭಯದಾನ, ಔಷಧದಾನ ಮತ್ತು ಜ್ಞಾನದಾನ ಪ್ರತಿಯೊಬ್ಬ ಶ್ರಾವಕನೂ ಯಥಾಶಕ್ತಿ ದಾನ ನೀಡಿ ಸಮಾಜದ ಋಣವನ್ನು ತೀರಿಸಬೇಕು ಎಂದು ಭೋಧಿಸಿದರು.
ಭಗವಾನ್ ಮಹಾವೀರರ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ.

ಲೇಖಕಿ:-ಡಾ|| ನೀರಜಾ ನಾಗೇಂದ್ರ ಕುಮಾರ್
ಅಶ್ವಿನಿ ಕ್ಲಿನಿಕ್
ಬೆಂಗಳೂರು-75

ಬಸವಣ್ಣ ಮತ್ತು ಪ್ರಸ್ತುತತೆ

ದೃಷ್ಠಿಯಿಂದ ಸಮಷ್ಠಿಯವರೆಗೆ, ರಾಜ್ಯದಿಂದ ದೇಶದವರೆಗೆ, ರಾಷ್ಟ್ರದಿಂದ ಅಂತರ್ ರಾಷ್ಟ್ರದವರೆಗೆ, ಅಂತಿಮವಾಗಿ ಜಗತ್ತಿನ ಸರ್ವೋತ್ತಮ ಅಭಿವೃದ್ಧಿಯಾಗಬೇಕಾದರೆ ಕೆಲವೊಂದು ನೀತಿ, ನಿಯಮ, ತತ್ವ ಸಿದ್ಧಾಂತಗಳು ಅನಿವಾರ್ಯವಾಗುತ್ತವೆ. ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಸರ್ವ ಸಮನಾನತೆಯ ಸಂದೇಶವನ್ನು ಸಾರುವ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಹಿತ್ಯಿಕ ಹಾಗೂ ಆಧ್ಯಾತ್ಮಿಕ ತತ್ವ ಸಿದ್ಧಾಂತಗಳನ್ನು ಪರಿ ಪಾಲಿಸಿದ್ದೆಯಾದರೆ ಇವುಗಳೆಲ್ಲವುಗಳಲ್ಲಿ ಸ್ಥಿರತೆಯನ್ನು ತರಬಹುದು. ಪ್ರಜಾಪ್ರಭುತ್ವ ಸರ್ಕಾರಗಳಾಗಲಿ, ರಾಜ ತಾಂತ್ರಿಕ ಸರ್ಕಾರಗಳಾಗಲಿ ಅಥವಾ ನೌಕರಶಾಹಿ ವ್ಯವಸ್ಥೆಗಳಾಗಲಿ, ಮೂಲಭೂತವಾಗಿ ಕೆಲವು ಧ್ಯೇಯೋದ್ಧೇಶ ತತ್ವಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಜನತೆ ಶಾಂತಿ, ಸೌಖ್ಯ, ಸಾಮರಸ್ಯ, ಸೌಹಾರ್ದತೆಗಳಿಂದ ಬಾಳಲು ಸಾಧ್ಯವಾಗುತ್ತದೆ. ಇದನ್ನೇ ಕೆಲವು ಇತಿಹಾಸಕಾರರು, ಚಿಂತಕರು, ಮೇಧಾವಿಗಳು ಹೇಳುತ್ತಲೇ ಬಂದಿದ್ದಾರೆ. ಇದಕ್ಕಾಗಿ ಕೆಲವು ಉದ್ ಗ್ರಂಥಗಳು ರಚನೆಯಾಗಿವೆ. ಅವುಗಳ ಆಧಾರದಿಂದ ಜನ ಜೀವನ ಸುಖಮಯವಾಗಿಸಲು ಪ್ರಯತ್ನಗಳು ನಡೆದಿವೆ. ಅನೇಕ ದಾರ್ಶನಿಕರು , ಮಹಾತ್ಮರು ಇದಕ್ಕಾಗಿ ಅಹರ್ನಿಶಿ ದುಡಿದಿದ್ದಾರೆ.
ಭಾರತೀಯ ನೆಲೆಯಲ್ಲಿ ಅನೇಕ ಸಾಧು ಸಂತರು , ಧಾರ್ಮಿಕ ವ್ಯಕ್ತಿಗಳು, ರಾಜಕೀಯ ವ್ಯವಸ್ಥೆ, ಮುತ್ಸದಿಗಳು ಆಗಿ ಹೋಗಿದ್ದಾರೆ. ಕ್ರಿಸ್ತ ಪೂರ್ವದಲ್ಲೇ ಬುದ್ಧ ದೇವ ಸರ್ವಸಮಾನತೆಯನ್ನು ಶಾಂತಿ ಸೌಹಾರ್ದತೆಯನ್ನು ಭೋಧಿಸಿದರು. ಅವರ ನಂತರ ಹನ್ನೇರಡನೇ ಶತಮಾನದಲ್ಲಿ ಬಸವಾದಿ ಶರಣರು ಕರ್ನಾಟಕದಲ್ಲಿ ಉದಯಿಸಿ ಸಾಮಾಜಿಕ ಕ್ರಾಂತಿಯನ್ನೇ ಉಂಟುಮಾಡಿದರು. ಅವರ ಬಗ್ಗೆ ರಾಷ್ಟ್ರಪಿತ ಮಹಾತ್ಮಗಾಂಧಿಜಿಯವರು ಹೇಳುತ್ತಾರೆ ಬಸವಣ್ಣನವರು 800 ವರ್ಷಗಳ ಹಿಂದೆ ಮಾಡಿದಂತ ಸಾಮಾಜಿಕ ಸುಧಾರಣೆಯನ್ನು ಇನ್ನಾರು ಮಾಡಲು ಸಾಧ್ಯವಿಲ್ಲ. ಅವರು ನೀಡಿದ ತತ್ವಗಳನ್ನು ಸಿದ್ಧಾಂತಗಳನ್ನು ಪರಿಪೂರ್ಣವಾಗಿ ಕಾರ್ಯ ರೂಪಕ್ಕೆ ತಂದಿದ್ದೇಯಾದರೇ ಭಾರತವಷ್ಟೇ ಅಲ್ಲ ಇಡೀ ಜಗತ್ತನ್ನೇ ಸಂವೃದ್ಧಿ ಪಥದಲ್ಲಿ ಕೊಂಡೋಯ್ಯಬಹುದೆಂದು ಈ ವಿಚಾರಗಳನ್ನೇಲ್ಲಾ ಪರಿಭಾವಿಸಿ ವಿಶ್ವ ಸಂಸ್ಥೆಯು ಭಾರತೀಯ ಮೂಲದ ಸಾಮಾಜಿಕ ಸಾಂಸ್ಕøತಿಕ ಸಂದೇಶಗಳನ್ನು ಪರಿಪಾಲಿಸಿದ್ದೆ ಆದರೆ ಲೋಕ ಕಲ್ಯಾಣವಾಗುವುದರಲ್ಲಿ ಸಂಶಯವಿಲ್ಲ.
ಪ್ರಸ್ತುತ ಸಾಮಾಜಿಕ ಸಂಧರ್ಭ ಸಮಸ್ಯೆಗಳ ಸುಳಿಯಲ್ಲಿ ಮುಳುಗಿ ಹೋಗಿದೆ. ಜಾತಿಜಗಳ, ಅಸಮಾನತೆ, ಪ್ರತ್ಯೆಕತೆ, ಶೋಷಣೆಯಂತಹ ಜ್ವಲಂತ ಸಮಸ್ಯೆಗಳು ಈಗ ಮತ್ತಷ್ಟು ಉರಿಯುತ್ತದೆ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡ ಅನೇಕರು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಪರಿಸರ ದಿನಿತ್ಯ ಮಲೀನವಾಗುತ್ತಿದೆ. ನಿಸರ್ಗ ಸಮತೋಲನವನ್ನು ಕಳೆದುಕೊಂಡು ಜಾಗತೀಕರಣವು ತುಚ್ಚೀಕರಿಸುತ್ತಾ ಸಾಗುತ್ತಿದೆ. ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ಅನೇಕ ಚಿಂತಕರ ಚಿಂತನೆಗಳು ನಮಗೆ ಮಾರ್ಗದರ್ಶನವಾಗಬಲ್ಲವು. ಬುದ್ಧನ ಜೀವನ ಪ್ರೀತಿ, ಬಸವಣ್ಣನ ದಯೆ, ಅಂಬೇಡ್ಕರರ ಹೋರಾಟ, ಗಾಂಧೀಜಿಯ ಸರಳತೆ, ಮತ್ತೆಮತ್ತೆ ನಮ್ಮ ಚಿಂತನೆಯ ಮೊರೆಯಲ್ಲಿ ಮೂಡಿಬಂದಾಗ ಹೊಸ ಬೆಳಕನ್ನು ಕಾಣಬಹುದಾಗಿದೆ.
ಈಗಿನ ಜಗತ್ತು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದಾಗಿ ಹೊರಗಿನ ಶೃಂಗಾರ ಒಳಗಣ ರಣರಂಗದಂತಾಗಿ ಮಾನಸೀಕ ಸ್ಥಿರತೆಯನ್ನು ಕಳೆದುಕೊಂಡಿದೆ. ವಿಜ್ಞಾನ ತಂತ್ರಜಾÐನದ ಕಾರಣದಿಂದಾಗಿ ವಿವೇಕವನ್ನು ಕಳೆದುಕೊಂಡು ಅಮಾನುಷವಾಗಿ ವರ್ತಿಸುತ್ತಾ ಕಡಿವಾಣವಿಲ್ಲದ ಕುದುರೆಯಂತೆ ಎತ್ತೆತ್ತಲೋ ಓಡುತ್ತಿದೆ. ಅದನ್ನು ತಹಬದಿಗೆ ತರಬೇಕಾದರೆ, ಸಮಾಜಿಕ ಪರಿವರ್ತನೆಯಾಗಬೇಕಾದರೆ ಒಂದು ರೂಢಿ ಮೂಲವಾದ ಪರಂಪರೆ ಬೇಕಾಗುತ್ತದೆ. ನೀತಿ ನಿಯಮ ಸ್ಥಿರತೆಯ ಪ್ರಜ್ಞೆ ಆಳುವವರಲ್ಲಿ ಮೂಢ ಬೇಕಾಗುತ್ತದೆ.
ಪ್ರಸ್ತುತ ಸಮಾಜಿಕ ಸಂಧರ್ಭದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿಗೆ ಬಸವಣ್ಣನವರು , ಶರಣರ ವಚನಗಳಲ್ಲಿ ಉತ್ತರವಿದೆ. ಹನ್ನೇರಡನೆ ಶತಮಾನದಲ್ಲಿ ವಚನ ಚಳುವಳಿಯನ್ನು ಹುಟ್ಟುಹಾಕಿ ಸಹಸ್ರಾರು ನೊಂದ ಜೀವಿಗಳ ಧನಿಯಾಗಿ ನಿಂತ ಬಸವಾದಿ ಪ್ರಮಥರು ಅನೇಕ ನಿಷ್ಟುರತೆ ಪರಿಹಾರಗಳನ್ನು ಸೂಚಿಸಿದ್ದಾರೆ. ಅಲ್ಲಿಯ ಅನೇಕ ವಿಚಾರಗಳು ಇಂದಿಗೂ ಪ್ರಸ್ತುತವೆನಿಸಿವೆ. ಶರಣರ ಆದರ್ಶ ಜೀವನ ಮಾರ್ಗಗಳು ಅಂತರಂಗ ಬಹಿರಂಗ ಶುದ್ಧತೆಗೆ ಅಣಿ ಮಾಡಿದವುಗಳಾಗಿವೆ. ದಯೆ, ಕರುಣೆ, ಕಾಯಕ, ದಾಸೋಹ, ಸ್ತ್ರೀ ಸಮಾನತೆ, ಅಹಿಂಸೆಗಳನ್ನು ರೂಪಿಸಿ ವಚನಗಳಲ್ಲಿ ಬರೆದಂತೆ ಬದುಕಿ ತೋರಿಸಿದ್ದಾರೆ. ವೈಯಕ್ತಿಕ ವಿಕಾಸದೊಂದಿಗೆ ಸಾಮಾಜಿಕ ವಿಕಾಸವಾದವು ಹೇಗೆ ಪ್ರತಿಫಲಿತವಾಗಬಹುದೆಂಬುದನ್ನು ಸಾಕ್ಷ ಭೂತವಾಗಿ ತೋರಿಸಿಕೊಟ್ಟಿದ್ದಾರೆ.
ಶುದ್ಧ ಮನಸ್ಸಿನವರಾಗಿ ಕಾಯಕ ಜೀವಿಯಾಗಿ ಮಾನವೀಯ ಗುಣಗಳಿಂದ ಹೇಗೆ ಜೀವನ ನಡೆಸ ಬಹುದೆಂಬುದನ್ನು ಶರಣ ನುಲಿಯ ಚಂದಯ್ಯ ಈ ವಚನದಲ್ಲಿ ಹೇಳಿದ್ದಾರೆ.
ನೇಮದ ಕೂಲಿ ಅಂದಿನ ನಿತ್ಯ ನೇಮದಲ್ಲಿ ಸಂದಿರಬೇಕು
ನೇಮದ ಕೂಲಿಯ ಬಿಟ್ಟು ಹೇಮದಾಸೆಗೆ ಕಾಮಿಸಿ
ನಿನ್ನಾಸೆಯ ವೇಷದ ಪಾಶಕ್ಕೆ ನೀನೆ ಹೋಗುವೆ
ಚಂದೇಶ್ವರ ಲಿಂಗಕ್ಕೆ ದೂರಾಗುವೆ.
ಪ್ರತಿಯೊಬ್ಬನು ಆಸೆ ಆಮಿಷಕ್ಕೆ ಬಲಿಬೀಳದೆ ಸತ್ಯ ಪ್ರಮಾಣಿಕವಾಗಿ ಸ್ವ ದುಡಿಮೆ ಮಾಡಿದರೆ ಅವನ ಬದುಕಿನಲ್ಲಿ ಶ್ರೇಷ್ಟತೆ ಇರುತ್ತದೆ. ಅವನನ್ನು ದೇವರು ಮೆಚ್ಚುವನು. ಆಗಿಲ್ಲದಿದ್ದರೆ ವೇಷದ ಪಾಶಕ್ಕೆ ಹೋಗುವೆ ಎಂದು ಎಚ್ಚರಿಸುತ್ತಾರೆ. ವಚನಕಾರರು ಭ್ರಷ್ಟರನ್ನು ಅನಾಚಾರಿಗಳನ್ನು ಮತ್ತು ವೇಷಾಧಾರಿಗಳನ್ನು ಕಟುವಾಗಿ ಟೀಕಿಸಿದ್ದಾರೆ. ಶಿವಶರಣೆ ಅಕ್ಕಮ್ಮ ವಚನವೊಂದರಲ್ಲಿ ಹೀಗೆ ಹೇಳುತ್ತಾಳೆ.
ಗುರುವಾದಡೂ ಆಚಾರ ಭ್ರಷ್ಟನಾದಡೆ ಅನುಸರಿಸಲಾಗದು
ಜಂಗಮವಾದಡೂ ಆಚಾರ ದೋಷವಾದಲ್ಲಿ ಪೂಜಿಸಲಾಗದು.
ಲಿಂಗವಾದಡೂ ಆಚಾರ ಅನುಸರಣೆಯಾಗದಿದ್ದರೆ ಕೂಡಲಾಗದು
ಆಚಾರವೇ ವ್ರತ, ಪ್ರಾಣ ಕ್ರಿಯೆ, ಜ್ಞಾನ ಆಚಾರವೇ ಪ್ರಾಣವಾಗಿಪ್ಪ
ರಾಮೇಶ್ವರ ಲಿಂಗವು
ಇಂತಹ ಮೌಲ್ಯಯುತವಾದ ಸಾಮಾಜಿಕ ಅನಿವಾರ್ಯತೆಗಳಾದ ತತ್ವ ಸಿದ್ಧಾಂತಗಳನ್ನು ಬೆಳೆಸುವುದರ ಮೂಲಕ ಅಧಿಕಾರ ಅಂತಸ್ತು ಸಾಂಸ್ಕøತಿಕ ಸಮಾನತೆಯ ಅರಿವನ್ನುಂಟುಮಾಡಿ ಅದನ್ನು ಪಾಲಿಸುವುದರ ಮೂಲಕ ಏಕತೆಯಲ್ಲಿ ಐಕ್ಯತೆಯನ್ನು ಕಾಣಬಹುದಾಗಿದೆ. ಭಯೋತ್ಪಾದನೆ, ಕೋಮುಗಲಭೆ, ಜಾತಿ ವೈಷಮ್ಯ, ಲಿಂಗಭೇದಗಳಿಗೆ ಸಿದ್ಧೌಷಧವನ್ನು ಶರಣರು ತಮ್ಮ ವಚನಗಳಲ್ಲಿ ಪ್ರತಿಪಾದಿಸಸಿದ್ದಾರೆ. ಮೇಲು-ಕೀಳು ಭಾವನೆಗಳನ್ನು ತೊಡೆದು ಹಾಕುವುದು, ರಾಜಕೀಯ ವೈಷಮ್ಯಗಳನ್ನು ನಿಲ್ಲಿಸಿ ಏಕೋಭಾವನೆಯಿಂದ ರಾಷ್ಟ್ರಾಭಿವೃದ್ಧಿಗೆ ಶ್ರಮಿಸುವುದು, ಅಹಂಕಾರ ಮಮಕಾರಗಳನ್ನು ತೊರೆದು ಸಮಷ್ಠಿ ಪ್ರಜ್ಞೆಯನ್ನು ತಾಳುವುದು ಈಗಿನ ಸಂಧರ್ಭದಲ್ಲಿ ಪ್ರಸ್ತುತವೆನಿಸಿದೆ. ಇದಲ್ಲದೆ ಈ ಕೆಳಕಂಡ ಕೆಲವಂಶಗಳನ್ನು ತಮ್ಮ ವಚನಗಳಲ್ಲಿ ಪ್ರತಿಬಿಂಬಿಸಿದ್ದಾರೆ.ಅವುಗಳೆಂದರೆ

  1. ಧರ್ಮದ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ತಪ್ಪಿಸಿ ಸಾಮಾಜಿಕ ಭಯ ಭೀತಿಗಳನ್ನು ದೂರಿಕರಿಸುವುದು.
  2. ಜಾತಿ ವ್ಯವಸ್ಥೆಯನ್ನು ತಡೆದು ಎಲ್ಲರೂ ನಮ್ಮವರೆಂದು ಅಪ್ಪಿಕೊಳ್ಳುವುದು. ಅದನ್ನೇ ಬಸವಣ್ಣ “ಇವನಾರವ ಎನಿಸದಿರಯ್ಯ ಇವ ನಮ್ಮವನೆನಿಸಯ್ಯ” ಎಂದು ಹಾಡಿದ್ದಾರೆ.
  3. ಮೂಢನಂಬಿಕೆಗಳನ್ನು , ಅಂಧಸಂಪ್ರಾದಾಯಗಳನ್ನು ತಡೆದು ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವುದು.
  4. ಕಾಯಕ-ದುಡಿಮೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು. ಯಾವ ಕಾಯಕವಾದರೂ ಶ್ರೇಷ್ಠವೇ ಅದರಿಂದ ಪ್ರಮಾಣಿಕವಾದ ಆರ್ಥಿಕ ಸಮಾನತೆಯನ್ನು ತರುವುದು.
  5. ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿ ಅವರು ಸಾಂಸ್ಕøತಿಕವಾಗಿ ಸಾಮಾಜಿಕವಾಗಿ ಬೆಳೆಯಲು ಕಾರಣವಾಗುವುದು.
  6. ಅಹಿಂಸೆಯನ್ನು ಪ್ರತಿಪಾದಿಸುವುದು, ಸಕಲ ಜೀವಾತ್ಮರಿಗೆ ಲೇಸನೆ ಬಯುಸುವುದು ಅದನ್ನೇ ಬಸÀವಣ್ಣನವರು “ಕಳಬೇಡ ಕೊಲಬೇಡ ಹುಸಿಯನುಡಿಯಲು ಬೆಡ ತನ್ನ ಬಣ್ಣಿಸಬೇಡ ಇದಿರ ಅಳಿಯಲು ಬೇಡ” ಎಂಬ ಸಪ್ತ ಸೂತ್ರಗಳಲ್ಲಿ ಹೇಳಿದ್ದಾರೆ.
  7. ಅಸ್ಪøಶ್ಯತೆಯನ್ನು ಹೋಗಲಾಡಿಸಿ ಗುರು ಹಿರಿಯರಲ್ಲಿ ಭಕ್ತಿಭಾವದಿಂದ ವರ್ತಿಸುವುದು.
  8. ಸಾಂಘೀಕ ಜೀವನಕ್ಕೆ ಮಹತ್ವ ನೀಡುವುದು. ಅನುಭವ ಮಂಟಪವನ್ನು ಸ್ಥಾಪಿಸಿ, ನಿರಕ್ಷರ ಕುಕ್ಷಿಗಳಿಗೆ ಶಿಕ್ಷಣ ನೀಡಿದ್ದು ಮತ್ತು ವಚನ ಸಾಹಿತ್ಯವನ್ನು ರಚಿಸಿ ಜ್ಞಾನ ಪ್ರಸಾರ ಮಾಡಿದ್ದು ಶರಣರ ಹೆಗ್ಗಳಿಕೆ.
  9. ಧಾರ್ಮಿಕ ಕ್ಷೇತ್ರಗಳಲ್ಲಿ ಸರಳತೆ ನೈಜತೆಯಿಂದ ಏಕೋದೇವೋಪಾಸನೆಯನ್ನು ತರುವುದು.
  10. ಪರಿಸರ ಸಂರಕ್ಷಣೆ “ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರೆರೆದರೆ ಮೇಲೆ ಫಲ್ಲವಿಸಿತ್ತು ನೋಡಾ”
  11. ಆತ್ಮ ನಿರೀಕ್ಷಣೆ ಪ್ರತಿಯೊಬ್ಬನು ತನ್ನನ್ನು ತಾನು ಪ್ರಶ್ನಸಿಕೊಳ್ಳುವುದು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದು.
  12. ಅಪರಿಗ್ರಹ “ಬಯಸಿ ಬಂದುದು ಲಿಂಗಭೋಗ, ಬಯಸದೇ ಬಂದುದು ಅಂಗ ಭೋಗ” ಆಸೆ ಅಮಿಷಗಳನ್ನು ತೊರೆದು ಸಹಜವಾಗಿ ಬದುಕುವುದು.
  13. ಸ್ವಾಭಿಮಾನದಿಂದ ಬದುಕುವುದು, ಅರಸೊತ್ತಿಗೆಯ ಪರಿಸರದಲ್ಲಿದ್ದರೂ “ಆಸು ಓಲಿದಂತೆ ಹಾಡುವೆ ಎನ್ನುವಂತೆ’ “ಶರಣರಿಗೂ ಅಂಜುವವನಲ್ಲ” ಎಂಬ ಸ್ವಾಭಿಮಾನಿಯಾಗುವುದು.
  14. ಮಾನವೀಯತೆಯನ್ನು ಬೆಳೆಸಿಕೊಳ್ಳುವುದು, ಇಂತಹ ಅನೇಕ ಸಂಗತಿಗಳನ್ನು ಶರಣರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಅದರಂತೆ ಅನುಸರಿಸಿದರೆ ಮಾನವನ ಬಾಳು ಬಂಗಾರವಾಗದಿರದು.
    ಇಂತಹ ವಿಷಯಗಳನ್ನು ಅನೇಕ ವಚನಗಳಲ್ಲಿ ಹೇಳಿರುವ ಸಂಗತಿಗಳು ಇಂದಿನ ಸಾಮಾಜಿಕ ಸಂದರ್ಭಕ್ಕೆ ತೀರಾ ಅಗತ್ಯವಗಿದೆ. ಬದುಕಿನ ಅದಮ್ಯತೆಯನ್ನು ಹೇಳಿದ ಬಸವಾದಿ ಪ್ರಮಾಥರು ಜೀವನೋತ್ಸವದ ಜತೆಗೆ ಜೀವದ ಪ್ರೀತಿಯನ್ನು ಕಲಿಸಿದವರು ಮಾನವೀಯ ಮೌಲ್ಯಗಳು ಬೆಳೆದಾಗ ಮನುಷ್ಯ ಬೆಳೆಯಬಲ್ಲನು. ಕೇವಲ ಆರ್ಥಿಕ , ಸಾಮಾಜಿಕ, ಸಮಾನತೆ ಬಂದಾಕ್ಷಣ ಮನುಷ್ಯ ಎತ್ತರಕ್ಕೆ ಹೇರಲಾರ ಮಾನವೀಯತೆ ಬೆಳೆದಾಗ ಮಾತ್ರ ಇದು ಸಾಧ್ಯ. ಇಂತಹ ಮಾನವೀಯ ಮೌಲ್ಯಗಳನ್ನು ಕೊಟ್ಟ ಬಸವಾದಿ ಪ್ರಮಥರ ವಿಚಾರಗಳು ಇಂದಿಗೂ ಸ್ವಾಗತಾರ್ಹವಾಗಿವೆ. ಎಂಟುನೂರು ವರ್ಷಗಳ ಹಿಂದೆ ಆಲೋಚಿಸಿದ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ.
    ಕೆ.ಎಂ ರೇವಣ್ಣ
    ನಿವೃತ್ತ ತಹಸೀಲ್ದಾರರು
    ಬೆಂಗಳೂರು

ಅಕ್ಷಯ ತೃತೀಯಾ

ವೈಶಾಖ ಮಾಸದಲ್ಲಿ ಬರುವ ಅತಿ ಮುಖ್ಯವಾದ ವ್ರತ, ಪರ್ವಗಳಲ್ಲಿ ಅಕ್ಷಯ ತೃತೀಯಾ ಮುಖ್ಯವಾದದ್ದು. ಗಂಗಾಸ್ನಾನಕ್ಕೆ ಮತ್ತು ಶ್ರೀ ಕೃಷ್ಣನನ್ನು ಧೂಪ, ದೀಪ ಹೂವು ಮತ್ತು ವಿಶೇಷವಾಗಿ ಚಂದನ ಲೇಪದಿಂದ ಅರ್ಚನೆ ಮಾಡುವುದಕ್ಕೆ ಈ ದಿವನ್ನು ಅತಿ ಪ್ರಶಸ್ತವನ್ನಾಗಿ ಹೇಳಿದೆ.
‘ಬೆನ್ನು ಗೂನಾಗಿ ಕೋಲೂರಿ ನಡೆಯುತ್ತಾ ಕೆಮ್ಮುತ್ತಿರುವ ಸ್ಥಿತಿಯು ಬರುವುದಕ್ಕೆ ಮೊದಲೇ ಬದರೀ ತೀರ್ಥಯಾತ್ರೆ ಮಾಡು, ಅದು ಮುಕ್ತಿದ್ವಾರ’ ಎಂದು ಭಕ್ತ ಶ್ರೇಷ್ಠರಾದ ತಿರುಮಂಗೈ ಆಳ್ವಾರ್ ಅವರು ಘೋಷಿಸುತ್ತಾರೆ. ಇಂತಹ ಪವಿತ್ರವಾದ ಬದರೀ ನಾರಾಯಣ ಮಂದಿರದ ದ್ವಾರವನ್ನು ತೆರೆಯುವುದು ಅಕ್ಷಯ ತೃತೀಯೆಯಂದು. ಅದು ಮುಕ್ತಿ ದ್ವಾರವನ್ನು ತೆರೆಯುವ ತಿಥಿ ಎಂದು ಪರ್ಯಾಯವಾಗಿ ಹೇಳಬಹುದು.
ಭಗವಂತನ ದಶಾವತಾರಗಳಲ್ಲಿ ಆರನೇಯದಾಗಿ ‘ಬ್ರಹ್ಮ-ಕ್ಷತ್ರ ಅವತಾರ’ ಎನಿಸಿರುವ ಪರಶುರಾಮದೇವರ ಶ್ರೀ ಜಯಂತಿಯೂ ಈ ದಿನದಲ್ಲಿ ಕೂಡಿಬರುತ್ತದೆ.
ದೇವತೆಗಳ ಪೂಜೆಗೆ ಮಾತ್ರವಲ್ಲದೇ ಪಿತ್ರಗಳ ಪೂಜೆಗೂ ಪ್ರಶಸ್ತವೆನಿಸಿರುವ ತಿಥಿ ಅಕ್ಷಯ ತೃತೀಯಾ ಪರ್ವ.
ಎಲ್ಲಾ ಯುಗಗಳಿಗೂ ಆಧ್ಯವಾಗಿರುವ ಸತ್ಯಯುಗಕ್ಕೆ ಆದಿ ದಿನವಾದ ‘ಕೃತಯುಗಾದಿ’ ಎಂದೂ ಇದು ಪರಿಗಣಿತವಾಗಿದೆ. ಕ್ಷೇತ್ರಗಳಲ್ಲಿ ಬೀಜವನ್ನು ಬಿತ್ತುವುದಕ್ಕೂ, ಇದನ್ನು ಪ್ರಶಸ್ತ ದಿನವನ್ನಾಗಿ ಲೆಕ್ಕಿಸುತ್ತಾರೆ. ಈ ಹಬ್ಬದಲ್ಲಿ ಆಚರಿಸುವ ಸ್ನಾನ, ಜಪ, ತಪಸ್ಸು, ಅಧ್ಯಯನ, ತರ್ಪಣ, ದಾನಾದಿಗಳೆರಲ್ಲವೂ ಅಕ್ಷಯವಾದ ಫಲವನ್ನು ನೀಡುವ ಉದರಿಂದ ಇದನ್ನು ಅಕ್ಷಯ ತೃತೀಯಾ ( ಅಕ್ಷಯ ಫಲ ತೃತೀಯಾ) ಎಂದು ಕರೆಯಲಾಗಿದೆ. ಅಕ್ಷಯವಾದ ಮೋಕ್ಷಕ್ಕೆ ಕಾರಣವಾಗಿರುವುದರಿಂದಲೂ ಇದಕ್ಕೆ ಆ ಹೆಸರು ಹೊಂದಿಕೆಯಾಗುತ್ತದೆ. ಕನ್ನಡ ಭಾಷೆಯಲ್ಲಿರುವ ‘ಅಕ್ಷಯ ತದಿಗೆ’ ಎಂಬುದು ಈ ಅಕ್ಷಯ ತೃತೀಯೆಯ ದೇಶೀಯರೂಪ. ಈ ದಿವಸದಲ್ಲಿಸೋಮವಾರ ಅಥವಾ ಬುಧವಾರ ಮತ್ತು ರೋಹಿಣಿ ನಕ್ಷತ್ರಗಳು ಕೂಡಿ ಬಂದರೆ ಅದು ಅಕ್ಷಯವಾದ ಸುಕೃತದ ಫಲವಾದ ಯೋಗವೆಂದು ಯೊಗಿಗಳು ಹೇಳುತ್ತಾರೆ. ಏಕೆಂದರೆ ಆ ವಾರ ಮತ್ತು ನಕ್ಷತ್ರಗಳು ಶ್ರೀ ಕೃಷ್ಣನ ಪೂಜೆಗೆ ಅತ್ಯಂತ ಪ್ರಶಸ್ತವಾದವು. ಈ ದಿನ ಬೆಳಗ್ಗೆ ಸಂಕಲ್ಪ ಸಹಿತ ಗಂಗಾನದಿಯಲ್ಲಿ ಸ್ನಾನ ಮಾಡಬೇಕು. ಸಾಕ್ಷಾತ್ ಗಂಗಾನದಿಯಲ್ಲಿ ಸ್ನಾನ ಮಾಡುವ ಅವಕಾಶವಿಲ್ಲದವರು ತಾವು ಸ್ನಾನ ಮಾಡುವ ನೀರಿನಲ್ಲಿಯೇ ಗಂಗೆಯನ್ನು ಆವಾಹನೆ ಮಾಡಿ, ಆರಾಧಿಸಿ, ಅದರಲ್ಲಿ ಅವಗಾಹನೆ ಮಾಡಬೇಕು. ಗಂಗಾ ಶಬ್ದಕ್ಕೆ ಸದ್ಗತಿಯನ್ನು ಹೊಂದಿಸುವುದು. (‘ಸದ್ಗತಿಂ ಗಮಯತೀತಿ ಗಂಗಾ’) ಎಂದು ಅರ್ಥ. ಈ ಶಬ್ದವು ಒಂದು ದೇವತೆಗೂ ಮತ್ತು ಅದರಿಂದ ಅಧಿಷ್ಠಿತವಾಗಿರುವ ಒಂದು ನದಿಗೂ ಅನ್ವಯಿಸುತ್ತದೆ. ಗಂಗೆಯೂ ಭಗವಂತನ ಜಲರೂಪವಾದ ‘ಮೂರ್ತಿ’ಯೇ ಆಗಿದೆ. ಆಕೆಯನ್ನು ಪೂಜಿಸಿದರೆ ಎಲ್ಲಾ ದೇವತೆಗಳನ್ನೂ ಪೂಜಿಸಿದಂತೆ. ಪರಮಾತ್ಮ ದರ್ಶನದಿಂದ ಯಾವ ಫಲವೋ ಅದೇ ಫಲವು ಅದರ ದರ್ಶನದಿಂದ ಉಂಟಾಗುತ್ತದೆ. ಗಂಗಾನದಿಯ ಆರೋಗ್ಯಕರ ಗುಣಗಳಿಗೆ ಸನಾತನ ಧರ್ಮಿಯರು ಮಾತ್ರವಲ್ಲ, ಇತರ ಮತದವರೂ ಕುಡ ಆಕರ್ಷಿತರಾದರು. ಉದಾಹರಣೆಗೆ ಸುಲ್ತಾನ್ ತುಘಲಕ್‍ನು ದೌಲತಾಬಾದನಿಂದ ನಿರಂತರವಾಗಿ ಗಂಗಾ ಜಲವನ್ನು ತರಿಸಿಕೊಳ್ಳುತ್ತಿದ್ದನು. ಇದು ಅವನ ಬಳೀಗೆ ತಲುಪಲು ನಲವತ್ತು ದಿನಗಳು ಹಿಡಿಸುತ್ತಿದ್ದವೆಂದು ಇಬ್ನಾ ಬೂತಾತ್ ಎಂಬ ಆ ಕಾಲದ ಯಾತ್ರಿಕ ಲೇಖಕ ಹೇಳುತ್ತಾನೆ. ಅಡುಗೆ ಮಾಡಲು ಮಳೆಯನೀರನ್ನು ಅಥವಾ ಯಮುನಾಜಲವನ್ನು ಉಪಯೋಗಿಸಿದರೂ ಅದಕ್ಕೆ ಸ್ವಲ್ಪ ಗಂಗಾಜಲವನ್ನೂ ಸೇರಿಸಲಾಗುತ್ತದೆ.’ ಇದು ಅಕ್ಬರನ ವಿಷಯದಲ್ಲಿ ‘ಆಯಿನೇ ಅಕ್ಬರಿ’ ಎಂಬ ಗ್ರಂಥವಿ ತಿಳಿಸುತ್ತದೆ. ಇಂತಹ ಇನ್ನೂ ಅನೇಕ ಉದಾಹರಣೆಗಳ ದಾಖಲೆಗಳು ಇವೆ. ‘ತೃತೀಯೆಯಂದು ಶ್ರೀ ಕ್ರಷ್ಣನನ್ನು ಗಂಧದಿಂದ ಅಲಂಕರಿಸಿ ಅವನಿಗೆ ಧಾನ್ಯರಾಜನಾದ ಯವೆ(ಜವೆಗೋಧಿ)ಯನ್ನು ಸಮರ್ಪಿಸುವವನು ವೈಕುಂಠವನ್ನು ಹೊದುತ್ತಾನೆ’, ಎಂಬುದು ಈ ಹಬ್ಬದ ಮಹತ್ವ.
ಜೈನಧರ್ಮೀಯರೂ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಆದಿ ತೀರ್ಥಕರನಾದ ವೃಷಭನಾಥ ತಪಸ್ವಿಯಾಗಿದ್ದ ಸಮಯದಲ್ಲಿ ಮೊದಲನೆಯ ಆಹಾರದಾನ ಪಡೆದ ನಿಮಿತ್ತದ ಪರ್ವದಿನ. ಮಹಾರಾಜ ಶ್ರೇಯಾಂಸ ತನ್ನ ಅಣ್ಣನೊಡನೆ ಬಂದು ವೃಷಭನಿಗೆ ಕಬ್ಬಿನ ಹಾಲಿ ರೂಪದಲ್ಲಿ ಆಹಾರವನ್ನು ಕೊಟ್ಟನೆಂದು ಅದರಿಂದ ಅವನ ದೇಶದಲ್ಲಿ ಆಹಾರ ಅಕ್ಷಯವಾಯಿತೆಂದೂ ಪ್ರತೀತಿ. ವೃಷಭ ತೀರ್ಥಂಕರನಿಗೆ ಅಂದು ನಡೆದ ಅಭಿಷೇಕದಲ್ಲಿ ಕಬ್ಬಿನ ಹಾಲು ವಿಶೇಷ ವಸ್ತು. ಮಿಕ್ಕಂತೆ ಗೃಹಸ್ಥರ ಮನೆಗಳಲ್ಲಿ ದಾನ ಧರ್ಮ ವೃಷಭ ಚರಿತ್ರೆಯ ಪಠಣ , ಉತ್ಸವ ನಡೆಯುತ್ತವೆ. ವೈಶಾಖ ಶುಕ್ಲ ತೃತೀಯಾ ಕೃತಯುಗದ ಪ್ರಾರಂಭದ ದಿನ. ಈ ದಿನದಿಂದ ಜಗತ್ತಿನಲ್ಲಿ ಸೃಷ್ಟಿ ಆರಂಭವಾಯಿತು ಎಂಬುದು ನಂಬಿಕೆ. ವರ್ಷದ ಅತ್ಯಂತ ಪವಿತ್ರವಾದ ಮೂರುವರೆ ದಿಗಳಲ್ಲಿ ಇದನ್ನು ಅರ್ಧದಿನ ಎಂದು ಕರೆಯುತ್ತಾರೆ.

ಏನಿದು ಎಣ್ಣೆಹೊಳೆ…?

ಹೇಮಾವತಿ ನದಿ ಕಾವೇರಿ ನದಿಯ ಮುಖ್ಯ ಉಪನದಿ. ಈ ನದಿಯನ್ನು ಶಾಸನವು ‘ಚಂಡಿಹೊಳೆ’ ಎಂದು ಹೆಸರಿಸುತ್ತದೆ. ಪ್ರಾದೇಶಿಕವಾಗಿ ಈ ನದಿಯನ್ನು ‘ಎಣ್ಣೆಹೊಳೆ’ ಎಂದು ಕರೆಯುತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟದ ಶ್ರೇಣಿಯ ಮೇಲಬಂಗಾಡಿಯ ಜಾವಳಿಯಲ್ಲಿ ಉಗಮಿಸುವ ಈ ನದಿ, ಮಂಡ್ಯ ಜಿಲ್ಲೆಯ ಪಶ್ಚಿಮದ ಅಂಚಿನಲ್ಲಿ ಸ್ವಲ್ಪದೂರ ಹಾಸನ ಮಂಡ್ಯ ಜಿಲ್ಲೆಗಳ ಗಡಿಯಾಗಿ ದಕ್ಷಿಣಾಭಿಮುಖವಾಗಿ ಹರಿಯುತ್ತದೆ. ಅನಂತರ ಕೃಷ್ಣರಾಜಪೇಟೆ ತಾಲ್ಲೂಕಿನ ಗುಡ್ಡೇಹೊಸಹಳ್ಳಿ ಬಳಿ ಮಂಡ್ಯಜಿಲ್ಲೆಯನ್ನು ಪ್ರವೇಶಿಸುತ್ತದೆ. ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೃಷ್ಣರಾಜಸಾಗರದ ಹಿಂದಿನ ನೀರಿನಲ್ಲಿಕಾವೇರಿ ನದಿಯನ್ನು ಸೇರುತ್ತದೆ. ಹಿನ್ನೀರಿನ ಪ್ರದೇಶಕುಗ್ಗಿದಂತೆ ಬೇಸಿಗೆಯ ಕಾಲದಲ್ಲಿಕೃಷ್ಣರಾಜಪೇಟೆತಾಲ್ಲೂಕಿನ ಅಂಬಿಗರಹಳ್ಳಿ ಬಳಿಯ ಸಂಗಮದಲ್ಲಿಕಾವೇರಿ ನದಿಗೆ ಹೇಮಾವತಿ ನದಿಯು ಸೇರುವುದನ್ನು ಇಂದಿಗೂ ಕಾಣಬಹುದು. ಹಾಸನ ಜಿಲ್ಲೆಯಗೊರೊರಿನಲ್ಲಿ ಹೇಮಾವತಿ ನದಿಯಅಡ್ಡವಾಗಿಅಣೆಕಟ್ಟೆಯನ್ನುಕಟ್ಟಲಾಗಿದೆ. ಈ ನದಿಯು ಸುಮಾರು 245 ಕಿಲೋ ಮೀಟರ್‍ಉದ್ದ ಹಾಗೂ 5410 ಕಿಲೋ ಮೀಟರ್ ನೀರಾವರಿ ಪ್ರದೇಶವನ್ನು ಒಳಗೊಂಡಿದೆ. ಇದು ಸುಮಾರು 5410 ಚದರ ಕಿಲೋ ಮೀಟರ್‍ಜಲಾ ಪ್ರದೇಶವನ್ನು ಹೊಂದಿದೆ.

ಹೇಮಾವತಿ ನದಿ ಜಾಬಾಲಿ ಸತ್ಯಕಾಮರ ವರಪ್ರಸಾದ
ಹೇಮಾವತಿ ನದಿಯ ಉಗಮ ಸ್ಥಳದಲ್ಲಿರುವ ಗಣೇಶನದೇವಾಲಯದಲ್ಲಿ ಹೇಮಾವತಿ ನದಿಯಉಗಮದ ಪುರಾಣಕಥೆ ಪ್ರಚಲಿತದಲ್ಲಿದೆ. ಬಹಳ ಹಿಂದೆಗೌತಮ ಮಹರ್ಷಿಗಳು ದಂಡಕಾರಣ್ಯ ಪ್ರದೇಶದಲ್ಲಿಆಶ್ರಮ ಮಾಡಿಕೊಂಡು ಸಂಚಾರ ಮಾಡುತ್ತಿದ್ದಕಾಲದಲ್ಲಿ ಸತ್ಯಕಾಮನೆಂಬ ಬಾಲಕನು ಗೌತಮರನ್ನುಕಂಡುತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಶಿಕ್ಷಣ ನೀಡುವಂತೆ ವಿನಂತಿಸಿದನು. ಆಗ ಗೌತಮರು ನಾನು ಬ್ರಾಹ್ಮಣ ವಟುಗಳಿಗೆ ಮಾತ್ರ ಶಿಕ್ಷಣ ನ ಡುವ ಸಂಕಲ್ಪದವನಾಗಿದ್ದೇನೆ, ನಿನ್ನಗೋತ್ರ ಪ್ರವರಗಳನ್ನು ತಿಳಿಸು ಎಂದು ಸತ್ಯಕಾಮನನ್ನು ಕೇಳಿದರು. ಅದಕ್ಕೆಉತ್ತರವಾಗಿ ಸತ್ಯಕಾಮನು ನನಗೆ ನನ್ನತಾಯಿಗೊತ್ತೇ ವಿನಾ ಗೋತ್ರ, ಸೂತ್ರ, ಪ್ರವರಾದಿಗಳು ತಿಳಿದಿಲ್ಲ, ನಾನು ನನ್ನತಾಯಿಯನ್ನು ಕೇಳಿ ಆಕೆಯಿಂದು ತಿಳಿದು ನಿಮಗೆ ನನ್ನಗೋತ್ರ ಪ್ರವರಗಳನ್ನು ತಿಳಿಸುತ್ತೇನೆಂದು ಹೇಳಿ ಮನೆಗೆ ಬಂದನು. ಮನೆಗೆ ಬಂದ ಸತ್ಯಕಾಮನುತಾಯಿಯಲ್ಲಿತನ್ನಗೋತ್ರ, ಸೂತ್ರ, ಪ್ರವರಾದಿಗಳ ಬಗ್ಗೆ ಗೌತಮರು ಪ್ರಶ್ನಿಸಿದ್ದನ್ನು ತಿಳಿಸಿ, ನನ್ನಜನ್ಮಕಾರಣವನ್ನು ತಿಳಿಸುವಂತೆ ಕೇಳಿಕೊಂಡನು. ಅದಕ್ಕೆ ಸತ್ಯಕಾಮನತಾಯಿಜಾಬಾಲಿಯು, ‘ಮಗನೇ ನಾನು ಬ್ರಾಹ್ಮಣನೋರ್ವನ ಮನೆಯಲ್ಲಿ ದಸಿಯಾಗಿ ಸೇವೆಸಲ್ಲಿಸುತ್ತಿದ್ದ ವೇಳೆಯಲ್ಲಿ ನಾನು ಹಲವಾರು ಅತಿಥಿಗಳನ್ನು ಸತ್ಕರಿಸಿದ ಸಮಯದಲ್ಲಿ ನಿನ್ನಜನನವಾಗಿದೆ. ಹಾಗಾಗಿ ನಿನಗೆ ಪಿತೃಸ್ಥಾನವನ್ನು ನೀಡಿದ ವ್ಯಕ್ತಿಯನ್ನು ನಾನು ಗುರುತಿಸಲು ಸಾಧ್ಯವಿಲ್ಲ. ಹಾಗಾಗಿ ನನ್ನ ಹೆಸರನ್ನೇ ನಿನ್ನ ಹೆಸರಿನೊಂದಿಗೆ ಬಳಸಿ ಇನ್ನು ಮುಂದೆಜಾಬಾಲಿ ಸತ್ಯಕಾಮನೆಂದು ನಿನ್ನ ನಾಮಾಂಕಿತವನ್ನು ಹೇಳು’ ಎಂದು ತಿಳಿಸಿದಳು. ಸತ್ಯಕಾಮನುತಾಯಿಯಿಂದ ವಿಷಯವರಿತುಗೌತಮರಲ್ಲಿ ಮತ್ತೆ ಬಂದುತಾಯಿ ಹೇಳಿದ ಎಲ್ಲವನ್ನೂಅವರಿಗೆ ಹೇಳಿ ತನ್ನನ್ನು ಶಿಷ್ಯನಾಗುವಂತೆ ಕೇಳಿಕೊಂಡನು. ತ್ರಿಲೋಕ ಜ್ಞಾನಿಗಳಾದ ಗೌತಮ ಮಹರ್ಷಿಗಳು ಜಾಬಾಲಿಯಜನನದ ಮರ್ಮವನ್ನರಿತು ಅವನ ಸತ್ಯವಾಕ್ಯಕ್ಕೆ ಮೆಚ್ಚಿಆತನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಅವನಿಗೆ ಉಪನಯನವನ್ನು ನೆರವೇರಿಸಿದರು. ಕೆಲವು ಕಾಲಾನಂತರಆತನಿಗೆ ನಾಲ್ಕು ನೂರು ಗೋವುಗಳನ್ನು ಕೊಟ್ಟು, ಅವುಗಳನ್ನು ಸಾವಿರವಾಗಿ ಪರಿವರ್ತಿಸಿಕೊಂಡು ಬರುವಂತೆ ತಿಳಿಸಿದರು.
ಸತ್ಯಕಾಮನುತನಗೆಗೌತಮ ಮಹರ್ಷಿಗಳು ನೀಡಿದ ಹಸುಗಳ ಸಹಿತಕಾಡಿಗೆ ಬಂದು ನೆಲೆ ನಿಂತನು. ಕಾಡಿನಲ್ಲಿ ಪಂಚಭೂತಗಳು ಜಾಬಾಲಿ ಸತ್ಯಕಾಮನಿಗೆ ಬ್ರಹ್ಮಜ್ಞಾನದ ಮತ್ತು ಆದಿಶಕ್ತಿಯ ಪರಿಚಯ ಮಾಡಿಕೊಟ್ಟವು, ಸತ್ಯಕಾಮನುತಪಸ್ಸಗೆ ಕುಳಿತುಕೊಳ್ಳಲು ನಿರ್ಧರಿಸಿದ ಸ್ಥಳದಲ್ಲಿ ನೀರಿನಆಸರೆಇರಲಿಲ್ಲ. ಅದನ್ನು ಮನಗಂಡ ಸತ್ಯಕಾಮನು ಆದಿಶಕ್ತಿಯನ್ನು ಕುರಿತು ಅತಿಶಯ ಭಕ್ತಯಿಂದ ತಪಸ್ಸನ್ನಾಚರಿಸಿ ಶಿವನ ಜಟೆಯಿ/ ಮದ ಧುಮುಕುವ ಗಂಗೆಯನ್ನು ಕರುಣಿಸಲು ಉಧ್ಯುಕ್ತ ನಾಮನು ತಪಸ್ಸಿಗೆ ಕುಳಿತ ಸ್ಥಳವೇ ಜಾವಳಿಯ ಸಮೀಪವಿರುವ ಹೇಮಾವತಿ ಗುಡ್ಡವೆಂದು ಇಲ್ಲಿನ ಸ್ಥಳೀಯರು ನಂಬಿದ್ದಾರೆ. ಆತನು ನಿರ್ಮಿಸಿದ ಆಶ್ರಮದ ಬಳಿ ಇಂದು ಹೇಮಾವತಿ ನದಿಯ ಮೂಲಸ್ಥಾನವಿದೆ. ಸತ್ಯಕಾಮನ ತಪಸ್ಸಿಗೆ ಪಾರ್ವತಿದೇವಿಯು ಪ್ರತ್ಯಕ್ಷಳಾಗಿ ಸತ್ಯಕಾಮನಿಗೆ ವರವಿತ್ತಳು. ಹಿಮಾಲಯದ ಹಿಮ ಕರಗಿದಂಡಕಾರಣ್ಯದ ಈ ಪ್ರದೇಶದಲ್ಲಿ ನದಿಯಾಗಿ ಪ್ರವಹಿಸುವಂತೆ ವರ ನೀಡಿದಳು. ದಂಡಕಾರಣ್ಯದಲ್ಲಿ ಗುಪ್ತವಾಗಿ ಹರಿದುಕೊಟ್ಟಿಗೆ ಹಾರದಿಂದ ಹೊರನಾಡಿಗೆ ಹೋಗುವ ಮಧ್ಯೆ ಬರುವ ಜಾವಳಿಯ ಸಮೀಪವಿರುವ ಹೇಮಾವತಿಗುಡ್ಡವೇ ಈ ಹೇಮಾವತಿ ನದಿಯ ಉಗಮಸ್ಥಾನ. ಇದರಿಂದ ಹಾಸನ ಜಿಲ್ಲೆ ಸಮೃದ್ಧವಾಯಿತು. ಆ ನದಿಯನ್ನು ಹಿಂದೆ ಹೇಮವಾಹಿನಿ ಎಂದೂ ಅನಂತರ ಹೇಮಾವತಿಯೆಂದೂ ಕರೆಯಲಾಯಿತು. ಇಂದು ಹೇಮಾವತಿ ನದಿ ಹಾಸನ, ಮಂಡ್ಯಜಿಲ್ಲೆಗೆ ವರಪ್ರಸಾದವಾಗಿ ಜನರ ಜೀವನಾಡಿಯಾಗಿ ಪರಿವರ್ತಿತವಾಗಿದೆ.

ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ

ಸಿದ್ದಗಂಗೆಯ ಸಿದ್ಧಿಪುರುಷ

ಉದ್ದಾನ ಶ್ರೀಗಳ ಅನುಗ್ರಹ ಪಡೆದು
ಉದ್ದರಿಸಿ ಸಲಹಿದೆ ಹಗಲಿರುಳು ದುಡಿದು
ಸಿದ್ದಗಂಗೆಯ ಕ್ಷೇತ್ರ ಪಾವನ ತೀರ್ಥ
ಮಾಡಿದ ಗುರುವೆ ನಿಮಗೆ ನನ್ನ ನಮನ||

ಹಸಿದವರಿಗೆ ಅನ್ನ, ನೊಂದವರಿಗೆ ಅಭಯ
ಬಡಮಕ್ಕಳಿಗೆ ವಿದ್ಯೆ ಇದು ನಿಮ್ಮ ಶ್ರದ್ಧೆ
ತ್ರಿವಿಧ ದಾಸೋಹ ನಿಮ್ಮಯ ಉಸಿರು
ಅಳಿಯದೇ ಉಳಿಸಿದೆ ನಿಮ್ಮ ಹೆಸರು||

ಬಂಜರು ನೆಲದಲ್ಲಿ ಹೊನ್ನಬೆಳೆಗೆ ಟೊಂಕಕಟ್ಟಿ
ಭಕ್ತರಿಗೆ ಸಮತೆಯ ಸಾರುವ ಮಠಕಟ್ಟಿ
ಪಾಠಶಾಲೆಯಲ್ಲಿ ಬೆಳಗಿದ ಜ್ಯೋತಿ ನಂದಲೇ ಇಲ್ಲ
ಪಾಕಶಾಲೆಯಲ್ಲಿ ಹಚ್ಚಿದ ಒಲೆ ಆರಲೇ ಇಲ್ಲ
ಇದು ನಿಮ್ಮ ಶ್ರಮದ ಕುರುಹಲ್ಲವೇ ?

ಒಂದೆರಡು ಮಕ್ಕಳಿಂದು ಸಾಕುವುದೇ ಕಷ್ಟ
ಸಾವಿರಾರು ಮಕ್ಕಳ ಸಾಕುವುದೇ ನಿಮಗಿಷ್ಟ
ಹಡೆದ ತಾಯಂದಿರು ಹಾಕಿದರು ನಿಮ್ಮ ಉಡಿಗೆ
ಪಡೆದ ತಾಯಾಗಿ ಸಾಕಿದ ನೀ ಮಾತೃ ಹೃದಯಿ||

ಬಂಧುಗಳಿಗೆ ಮಠಕಟ್ಟಿ, ಬಲಿತವರ ಬೆನ್ನುತಟ್ಟಿ
ಬದುಕುವ ಕಾವಿಗಳೇ ಇಂದು ಹೆಚ್ಚು
ಆದರೆ . . . ನಿಮಗೆ
ಬಡವರಿಗೆ ಮಠಕಟ್ಟಿ, ಬಂದವರ ಬೆನ್ನುಟ್ಟಿ
ನೊಂದವರ ಮೊಗದಲ್ಲಿ ನಗುವ ನೋಡುವ ಹುಚ್ಚು ||

ಸ್ಥಾವರಕೆ ಅಳಿವುಂಟು, ಜಂಗಮಕೆ ಅಳಿವಿಲ್ಲ
ಎಂದು ಸಾರಿದರು ಕಲ್ಯಾಣದಲಿ ಬಸವ
ಅನ್ನದಾಸೋಹಕೆ ಜೋಳಿಗೆ ಹಿಡಿದು
ದಣಿವರಿಯದೇ ನೀವು ನಾಡಲ್ಲಿ ನಡೆದು
ಅಳಿಯದೇ ಜಂಗಮನಾಗಿ ಉಳಿದೆ||

ಸಿದ್ದಗಂಗೆಯ ಕ್ಷೇತ್ರ ಕಲ್ಯಾಣ ಮಾಡಿ,
ಜ್ಞಾನ ಮಂಟಪಕಟ್ಟಿ ಬಸವಣ್ಣನಾಗಿ
ಬಸವತತ್ವವ ಬರೀ ಬೋಧಿಸದೇ ನೀವು
ಸಾಧಿಸಿ ತೋರಿದಿರಿ ಬರುವವರೆಗೆ ಸಾವು||

ಸನ್ಮಾನಗಳ ಹುಡುಕಿ ಹೋಗಲಿಲ್ಲ
ಕಾಯಕವ ಮಾಡುವುದ ಮರೆಯಲಿಲ್ಲ
ಆದರೂ ನಿಮಗೆ ಬರಲಿಲ್ಲ “ಭಾರತ ರತ್ನ”
ಅದೇಕೆ? ನೀವೆ ಇರುವಾಗ “ಅನಘ್ರ್ಯರತ್ನ” ||

ಕ್ರಮಿಸಿದಿರಿ ಬಾಳ ಪಯಣದಿ 111 ವರುಷ
ಶ್ರಮಿಸಿದ ನಿಮ್ಮ ನಿಲುವು ಇನ್ನೊಂದು ಹರುಷ
ಬಾರದ ಲೋಕಕ್ಕೆ ನಿಮ್ಮ ಕರೆದೊಯ್ದಿದೆ ಸಾವು
ಮಾಡಿದ ನಿಮ್ಮ ಸೇವೆಯ ಮರೆವೆವೇ ನಾವು||

ಆಧುನಿಕ ಬಸವಣ್ಣನಾಗಿ ಜನಿಸಿ ಬಂದೆ
ಸಮತೆಯ ಸಂದೇಶ ಹೊತ್ತು ತಂದೆ
ಉಳಿದಿರುವುದೀಗ ನಿಮ್ಮ ನೆನವೊಂದೆ
ಮತ್ತೊಮ್ಮೆ ಹುಟ್ಟಿಬಾ ಬೆಳಕಾಗಿ ತಂದೆ.

-ಸಿ.ಮ.ಗುರುಬಸವರಾಜ
ಹವ್ಯಾಸಿ ಬರಹಗಾರರು

ಹೆಣ್ಣು” ಎಂಬ ಎರಡಕ್ಷರದ ಪದಕ್ಕೆ ಈ ಜಗತ್ತಿನಲ್ಲಿ ಎಷ್ಟು ಪ್ರಾಮುಖ್ಯತೆ ಇದೆಯಲ್ಲವೆ.

ಈ ಭೂಮಿಯನ್ನು ನಾವು ತಾಯಿಯೆಂದು ಕರೆಯುತ್ತೇವೆ. ಪ್ರಕೃತಿಯನ್ನು ಮಾತೆಯೆಂದು ಗುಣಗಾನ ಮಾಡುತ್ತೇವೆ ಅಂದರೆ ಯಾವುದು ಒಂದು ಜೀವಿಯ ಬದುಕಿಗೆ ಬೇಕಾಗುವ ಆಸರೆ, ಅಕ್ಕರೆ, ನೆರಳು ಮತ್ತು ಹಸಿವನ್ನು ನೀಗಿಸುತ್ತವೆಯೊ ಅವೆಲ್ಲವನ್ನು ಹೆಣ್ಣಿನ ರೂಪಕ್ಕೆ ಹೋಲಿಸುವುದು ಈ ಸಮಾಜದಲ್ಲಿ ನಡೆದುಕೊಂಡು ಬಂದಿರುವ ಪದ್ಧತಿ ಅಂದರೆ ಹೆಣ್ಣು ಯಾವತ್ತೂ ಸ್ವಾರ್ಥಿಯಲ್ಲ ಅವಳ ಬದುಕು ಪೂರ್ತಿ ತ್ಯಾಗದಿಂದ ಕೂಡಿರುವುದು. ಒಂದು ಜೀವಿಯು ಭೂಮಿಗೆ ಬರುವ ಮುನ್ನ ತಾಯಿಯ ರೂಪದಲ್ಲಿ ಒಂದು ಹೆಣ್ಣು ನವಮಾಸ ಹೊತ್ತು ಮಾಂಸದ ಮುದ್ದೆಯಾಗಿರುವ ನಮಗೆ ಆಶ್ರಯ ಕೊಟ್ಟು ಸಹಿಸಲಾಗದ ನೋವಿನಲ್ಲೂ ಖುಷಿಯ ಕಂಬನಿ ಹರಿಸಿ ಈ ಜಗಕ್ಕೆ ನಮ್ಮನ್ನು ಪರಿಚಯಿಸುವಳು. ನಂತರ ಒಬ್ಬಳು ಅಕ್ಕನಾಗಿ, ತಂಗಿಯಾಗಿ, ಸ್ನೇಹಿತೆಯಾಗಿ ಬಾಳಿನ ಪ್ರತಿ ಹಂತದಲ್ಲೂ ಗಂಡು ಮಕ್ಕಳ ಮೇಲೆ ಪ್ರಭಾವವನ್ನು ಬೀರುತ್ತಾಳೆ. ಮನೆಯ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು ಎನ್ನುವ ಸುಂದರ ಮಾತಿದೆ. ಮಾತು ನೂರಕ್ಕೆ ನೂರು ಪ್ರತಿಶತ ಸತ್ಯ ಏಕೆಂದರೆ ಒಂದು ಮಗು ಹುಟ್ಟಿದಾಗ ಪ್ರಪಂಚ ಎಂದರೆ ಏನು ಎಂದು ಅರಿಯಲು ಸಾಧ್ಯವಿರುವುದಿಲ್ಲ. ಅಂತಹ ಪರಿಸ್ಥಿತಿಯಿಂದ ಸಮಾಜದಲ್ಲಿ ಒಬ್ಬ ಸಜ್ಜನ ವ್ಯಕ್ತಿಯಾಗಿ ರೂಪುಗೊಳ್ಳಲು ತಾಯಿ ನೀಡುವ ಕೊಡುಗೆ ಅಸಾಮಾನ್ಯವಾದದ್ದು.
ಅಕ್ಕ-ತಂಗಿಯರು ಸಂಬಂಧಗಳ ಮೌಲ್ಯವನ್ನು ತಿಳಿಸಿದರೆ ಸ್ನೇಹಿತೆಯಾಗಿ ರಕ್ತ ಸಂಬಂಧಕ್ಕು ಮೀರಿದ ಭಾಂದವ್ಯಗಳನ್ನು ಧಾರೆ ಎರೆಯುತ್ತಾಳೆ. ಹೆಂಡತಿಯ ರೂಪದಲ್ಲಿ ಎರಡನೇಯ ತಾಯಿಯಾಗುತ್ತಾಳೆ. ಮಗಳ ರೂಪದಲ್ಲಿ ಹೃದಯಕ್ಕೆ ಮುದ್ದು ಮಾಡುತ್ತಾಳೆ. ಹೀಗೆ ಒಂದಲ್ಲ, ಎರಡಲ್ಲ ಒಂದು ಹೆಣ್ಣು ನೂರಾರು ಮುಖಗಳಲ್ಲಿ ಗಂಡಿನ ಬದುಕಿನ ಹಾದಿಯಲ್ಲಿ ಬಂದು ಹೋಗುತ್ತಾಳೆ. ತಾಯಿಯಾಗಿ ಅವಳು ಮಾಡುವ ನಿಸ್ವಾರ್ಥ ಸೇವೆ ಹಾಗೂ ಪ್ರೀತಿಯ ಋಣ ತೀರಿಸಲು ನಾವು ಎಷ್ಟು ಜನ್ಮ ಎತ್ತಿ ಬಂದರು ಕಷ್ಟವೇ ಹೆಂಡತಿಯ ರೂಪದಲ್ಲಿ ಅವಳ ಜೀವನದ ಅರ್ಧ ಆಯುಷ್ಯವನ್ನು ಗುರುತು ಪರಿಚಯವಿರದ ವ್ಯಕ್ತಿಗೆ ನೀಡುವ ಅವಳ ಕೊಡುಗೆ ಕಡಿಮೆಯೇ…? ಒಂದು ಹೆಣ್ಣು ಮನೆಯಲ್ಲಿ ದೃಢವಾಗಿ ಬೆಳೆಯಲು ಅವಕಾಶ ಕೊಟ್ಟರೆ ಅಂತಹ ಹೆಣ್ಣು ತನ್ನ ಮನೆ ಮತ್ತು ಇಡೀ ಸಮಾಜವನ್ನೇ ಶಾಂತಿಯಿಂದ ಬದುಕುವಂತೆ ಮಾಡುವ ಸಾಮಥ್ರ್ಯ ಹೊಂದಿರುತ್ತಾಳೆ.
ಇಂತಹ ಹೆಣ್ಣಿನ ಬಗೆಗೆ ಬರೆಯಲು ಪದಪುಂಜಗಳು ಸಿಗದು ಬದುಕುವ ಪ್ರತಿ ಘಳಿಗೆಯು ಒಂದಲ್ಲ ಒಂದು ರೂಪದಲ್ಲಿ ನಮ್ಮೊಳಗೆ ಭರವಸೆ ತುಂಬುವ, ಪ್ರೀತಿ ನೀಡುವ, ಅಕ್ಕರೆ ಕೊಡುವ, ಗೆದ್ದಾಗ ಖುಷಿ ಪಡುವ ಸೋತಾಗ ಕೈ ಹಿಡಿದು ನಡೆಸುವ ಆ ದೈವರೂಪಕ್ಕೆ ನಾವು ಧನ್ಯತಾ ಭಾವದಿಂದ ಋಣಿಯಾಗಿದ್ದರೆ ಅದೇ ಹೆಣ್ಣಿಗೆ ನಾವು ನೀಡುವ ಅತಿ ದೊಡ್ಡ ಗೌರವ…

ಕನಸಿನ ಭಾರತ ಪತ್ರಿಕೆಯ ಪತ್ರಕರ್ತರು
ಜ್ಯೋತಿ ಬೆಟಗೇರಿ
ಬಾಗಲಕೋಟೆ

ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ 12, 1863 – ಜುಲೈ 4, 1902) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12 ರಂದು ರಾಷ್ಟ್ರೀಯ “ಯುವದಿನ”ವೆಂದು ಆಚರಿಸಲಾಗುತ್ತದೆ.
ಜನನ
ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು 1863, ಜನವರಿ 12ರಂದು ಕೊಲ್ಕತ್ತದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ‘ವಿವೇಕಾನಂದ’ ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿμï ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ರಾಮಕೃಷ್ಣರ ಒಡನಾಟ :
ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಹೆಸ್ಟಿಯವರು ವಿಲಿಯಮ್ ವಡ್ಸ್ರ್ವವರ್ತ್ ಅವರ “ದ ಎಕ್ಸ್ಸಕರ್ಶನ್” ಎಂಬ ಕವಿತೆಯಲ್ಲಿನ “ಸಮಾಧಿ” ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು. ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೋಡಲು ಉತ್ಸುಕರಾದರು. ಆವರಲ್ಲಿ ನರೇಂದ್ರರೂ ಒಬ್ಬರು.
1881ನೇ ಇಸವಿ ನವೆಂಬರದಲ್ಲಿ ಎಫ್.ಎ (ಲಲಿತಕಲೆ) ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾಗ, ರಾಮಚಂದ್ರದತ್ತರು ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು ಸುರೇಂದ್ರನಾಥ ಮಿತ್ರರ ಮನೆಗೆ ಕರೆದರು. ಅಲ್ಲಿ ರಾಮಕೃಷ್ಣರು ನರೇಂದ್ರನಿಗೆ ಹಾಡಲು ಕೇಳಿಕೊಂಡರು. ಅವರ ಗಾಯನ ಪ್ರತಿಭೆಯನ್ನು ಮೆಚ್ಚಿ ರಾಮಕೃಷ್ಣರು ನರೆಂದ್ರನನ್ನು ದಕ್ಷಿಣೇಶ್ವರಕ್ಕೆ ಬರಲು ಆಮಂತ್ರಿಸಿದರು. ಆದರೆ ನರೇಂದ್ರರು ಅದರ ಬಗ್ಗೆ ಉತ್ಸಾಹ ತೊರಿಸಲಿಲ್ಲ.
1882 ರಲ್ಲಿ ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ ಅವರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳ್ಳಲಿಲ್ಲ. ರಾಮಕೃಷ್ಣರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಗುವಿನಂಥ ವ್ಯಕ್ತಿತ್ವ ಅವರನ್ನು ಪದೇ ಪದೇ ದಕ್ಷಿಣೀಶ್ವರಕ್ಕೆ ಭೇಟಿ ನೀಡಲು ಪ್ರೇರೇಪಿಸಿತು.
ಮೊದಮೊದಲಿಗೆ ರಾಮಕೃಷ್ಣರ ಭಾವಪರವಶತೆಯ ಮತ್ತು ದೂರದೃಷ್ಟಿಯನ್ನು ಕೇವಲ ಕಾಲ್ಪನಿಕ ಬರಿ ಭ್ರಮೆ ಎಂದು ಭಾವಿಸಿದ್ದರು. 1884 ಇಸವಿಯಲ್ಲಿ ಅನಿರೀಕ್ಷಿತವಾಗಿ ನರೇಂದ್ರರ ತಂದೆಯವರು ಇಹಲೋಕ ತ್ಯಜಿಸಿದರು. ಅವರ ಮರಣಾ ನಂತರ ಕುಟುಂಬ ದಿವಾಳಿಯಾಯಿತು, ಸಾಲಗಾರರ ಬಾಧೆ ಶುರುವಾಯಿತು.ಅವರ ಕುಟುಂಬದವರು ಪೂರ್ವಜರ ಮನೆಯಿಂದ ಹೊರಗೆ ಹಾಕಿದರು.
ಅವರು ಕೆಲಸ ಹುಡುಕುವುದರಲ್ಲಿ ವಿಫಲರಾದಾಗ, ದೇವರ ಅಸ್ತಿತ್ವದ ಬಗ್ಗೆಯೇ ಸಂದೇಹಪಟ್ಟರು. ಆದರೆ ರಾಮಕೃಷ್ಣರ ಸಾನಿಧ್ಯ ಅವರಿಗೆ ಸಾಂತ್ವನ ನೀಡುತಿತ್ತು. ಒಂದು ದಿನ ನರೇಂದ್ರರು ಅವರ ಕುಟುಂಬದ ಅಭ್ಯುದಯಕ್ಕೋಸ್ಕರ ಕಾಳಿ ದೇವಿಯನ್ನು ಪ್ರಾರ್ಥಿಸುವಂತೆ ರಾಮಕೃಷ್ಣರನ್ನು ಕೇಳಿಕೊಂಡರು. ಅದಕ್ಕೆ ಅವರು ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಎರಡು, ಮೂರು ಸಲ ದೇವಸ್ಥಾನಕ್ಕೆ ಹೋದರು.
ಆದರೆ ಅವರು ಯಾವುದೇ ರೀತಿಯ ಲೌಕಿಕ ಅವಶ್ಯಕತೆಗಳನ್ನು ಪೂರೈಸಲು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದರಲ್ಲಿ ವಿಫಲರಾದರು. ಆದರೆ ಪ್ರತಿ ಬಾರಿಯು ಮುಕ್ತಿಗಾಗಿ ಕೇಳಿಕೊಳ್ಳಲμÉ್ಟೀ ಶಕ್ತರಾದರು. ಕೊನೆಗೆ ಅವರು ಸರ್ವಸಂಗ ಪರಿತ್ಯಾಗ ಮಾಡಿ ರಾಮಕೃಷ್ಣರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಿದರು. 1885 ರಲ್ಲಿ ರಾಮಕೃಷ್ಣರು ಕಲ್ಕತ್ತಾದ ಕೊಸ್ಸಿಪುರದಲ್ಲಿ ಇರುವ ಅವರ ತೋಟದ ಮನೆಯಲ್ಲಿ ಗಂಟಲಿನ ಹುಣ್ಣಿನಿಂದ ಬಳಲುತಿದ್ದರು.
ನರೇಂದ್ರರು ತಮ್ಮ ಆಧ್ಯಾತ್ಮಿಕ ವಿಧ್ಯಾಭ್ಯಾಸವನ್ನು ಮುಂದುವರಿಸಿದರು. ಅವರು ಕೊಸ್ಸಿಪುರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಅನುಭವಿಸಿದರು. ನರೇಂದ್ರ ಮತ್ತು ರಾಮಕೃಷ್ಣರ ಇತರ ಶಿಷ್ಯರು ಗುರುಗಳ ಅದೇಶದಂತೆ ಅವರಂತೆ ನಿಲುವಂಗಿ ಮತ್ತು ಕಾವಿ ತೊಟ್ಟುಕೊಂಡರು. ಜನ ಸೇವೆಯೇ ಜನಾರ್ದನನ ಸೇವೆ ಎಂದರು. ರಾಮಕೃಷ್ಣರು ನರೇಂದ್ರರನ್ನು ತಮ್ಮ ಶಿಷ್ಯವೃಂದದ ನಾಯಕರನ್ನಾಗಿ ನೇಮಿಸಿದರು. ರಾಮಕೃಷ್ಣರು 1886, ಆಗಸ್ಟ 16 ರಂದು ನಿಧನ ಹೊಂದಿದರು.
ರಾಮಕೃಷ್ಣ ಮಠದ ಸ್ಥಾಪನೆ
ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯವು ಕಡಿಮೆಯಾಯಿತು. ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು. ಬಾರನಗರದಲ್ಲಿ ನರೇಂದ್ರರು ಶಿಥಿಲವಾದ ಮನೆಯನ್ನು ಖರೀದಿಸಿ, ಆ ಮನೆಯನ್ನು ಅವರು ಮಠವನ್ನಾಗಿ ಪರಿವರ್ತಿಸಲು ಆಲೋಚಿಸಿದರು. ಆ ಮನೆಯ ಬಾಡಿಗೆಯನ್ನು ಭಿಕ್ಷಾಟನೆ ಮೂಲಕ ತುಂಬುತಿದ್ದರು.
ಈ ಮನೆಯೆ ರಾಮಕೃಷ್ಣರ ಮಠದ ಮೊದಲ ಶಾಖೆಯಾಯಿತು. ಅಲ್ಲಿ ನರೇಂದ್ರ ಮತ್ತು ಅವರ ಶಿಷ್ಶರು ಹೆಚ್ಚಿನ ಸಮಯವನ್ನು ಧ್ಯಾನ ಮತ್ತು ಧಾರ್ಮಿಕ ವಿಷಯಗಳನ್ನು ಅಭ್ಯಾಸ ಮಾಡುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಮುಂದಿನ ಆ ದಿನಗಳನ್ನು ನೆನೆಸುತ್ತಾ “ಪ್ರತಿದಿನ ಬೆಳಿಗ್ಗೆ 3 ರಿಂದ ರಾತ್ರಿಯವರೆಗು ನಾವು ಧ್ಯಾನದಲ್ಲೆ ಕಳೆಯುತ್ತಿದ್ದೆವು.
ಜಗತ್ತಿನ ಪರಿವೆಯೆ ಇಲ್ಲದೆ, ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು” 1881 ನೇ ಇಸವಿಯಲ್ಲಿ ನರೇಂದ್ರರು ವೈಷ್ಣವ ಚರಣ್ ಬಾಸ್ಕರವರ ಜೊತೆ ಬಂಗಾಳಿ ಭಾμÉಯ ಕವಿತೆಗಳನ್ನೊಳಗೊಂಡ “ಸಂಗೀತ ಕಲ್ಪತರು “ಎಂಬ ಪುಸ್ತಕವನ್ನು ಸಂಗ್ರಹಿಸಿದರು. ಆದರೆ ಹಲವು ಸಮಸ್ಯೆಗಳಿಂದ ಅದನ್ನು ಪ್ರಕಟಿಸಲಾಗಲಿಲ್ಲ..
ವಿವೇಕಾನಂದರ ಭಾರತ ಪರ್ಯಟನೆ
1888 ನರೇಂದ್ರರು ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆ ಹಾಗೂ “ದಿ ಇಮಿಟೆಶ್ನ್ ಆಫ್ ಕ್ರೈಸ್ತ್” ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು.
ಉತ್ತರ ಭಾರತ
1888 ರಲ್ಲಿ ಗೌತಮ ಬುದ್ಧ ಮತ್ತು ಆದಿ ಶಂಕರಾಚಾರ್ಯರು ಧರ್ಮ ಪ್ರಚಾರ ಮಾಡಿದ ವಾರಣಾಸಿಗೆ ಭೇಟಿ ನೀಡಿದರು. ಅಲ್ಲಿ ಅವರು ಬಂಗಾಳಿ ಬರಹಗಾರ ಭೂದೇವ ಮುಖ್ಯೋಪಾಧ್ಯಾಯ ಮತ್ತು ಹಿಂದು ಸಂತ ತ್ರ್ಯೆಲಂಗರನ್ನು ಭೇಟಿ ಮಾಡಿದರು. ಭೂದೇವ ಮುಖ್ಯೋಪಾಧ್ಯಾಯರು “ಇಂತಹ ದೂರದೃಷ್ಟಿ ಮತ್ತು ವಿಚಾರವಾದವನ್ನು ಇಷ್ಟು ಕಿರಿಯ ಪ್ರಾಯದಲ್ಲಿ ಪಡೆದುಕೊಂಡ ನೀನು ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುವೆ” ಎಂದು ಪ್ರಶಂಸಿಸಿದರು. ನಂತರ ಸಂಸ್ಕ್ರತ ಮತ್ತು ವ್ಯೆದಿಕ ವಿದ್ವಾಂಸರಾದ ಬಾಬು ಪರಮದಾಸ್ ಮಿತ್ರ ಅವರನ್ನು ಭೇಟಿ ಮಾಡಿದರು. ನಂತರ ಅವರು ಅಯೋಧ್ಯಾ, ಲಕ್ನೋ ವೃಂದಾವನ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದರು.
ಅದ್ವೈತ ಸಿದ್ಧಾಂತದ ಉಪಯುಕ್ತತೆ
ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು.
ಇದೇ ಅವರ ಮಂತ್ರವಾಯಿತು ಮತ್ತು ಅವರ “ದರಿದ್ರ ನಾರಾಯಣ ಸೇವೆ’ ಎಂಬ ತತ್ತ್ವಕ್ಕೆ ದಾರಿ ಮಾಡಿ ಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು.
ಅವರ ಅಂತಿಮವಾದ ತೀರ್ಮಾನವೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ.
ವಿವೇಕಾನಂದರ ವಿಶ್ವಪರ್ಯಟನೆ
ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ ಪ್ರಚಾರ ಮಾಡಿದರು. ಅವರು ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು. ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದರು. ಗುರು ರಾಮಕೃಷ್ಣರ ಮರಣಾ ನಂತರ ವಿವೇಕಾನಂದರು ಭಾರತ ಪ್ರವಾಸ ಕೈಗೊಂಡರು.
ಭಾರತದ ಉಪಖಂಡದಲ್ಲಿ ಬ್ರಿಟೀಷರ ಷರತ್ತುಗಳನ್ನು ಆಧ್ಯಯನ ಮಾಡಿದರು. ನಂತರ ಅವರು ಅಮೇರಿಕಾ ಪ್ರವಾಸ ಕೈಗೊಂಡರು. 1893ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು. ವಿವೇಕಾನಂದರು ನೂರಕ್ಕು ಹೆಚ್ಚು ಖಾಸಗಿ ಹಿಂದೂಸಂಸ್ಥೆಗಳಲ್ಲಿ ತಮ್ಮ ವಿಚಾರಧಾರೆಯನ್ನು ಹರಿಸಿದರು. ದೇಶ ವಿದೇಶಗಳಲ್ಲಿ ಹಿಂದೂಧರ್ಮದ ತತ್ವವನ್ನು ಭೋಧಿಸಿದರು.
ಅವರು ಪ್ರಪಂಚದಾದ್ಯಂತ ಪ್ರಯಾಣ ಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯ ಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ. *ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು.
ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ. ವಿವೇಕಾನಂದರು, ಧರ್ಮ ಮತ್ತು ಸರ್ಕಾರ ದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು.
ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕøತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ. ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ.
ಸರ್ವಧರ್ಮಸಮ್ಮೇಳನದಲ್ಲಿ ಮಾಡಿದ ಭಾಷಣ
ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು1893 ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ “ಅಮೆರಿಕದ ಸಹೋದರ ಸಹೋದರಿಯರೇ” ಎಂಬ ವಾಕ್ಯ ಚಿರಸ್ಮರಣೀಯವಾಗಿದೆ.
‘ವಿಶ್ವದ ಧರ್ಮಗಳ ಸಂಸತ್ತು’ ಸೆಪ್ಟೆಂಬರ್ 11, 1893 ರಂದು ವಿಶ್ವದ ಕೊಲಂಬಿಯನ್ ಪ್ರದರ್ಶನದ ಭಾಗವಾಗಿ ಈಗ ಚಿಕಾಗೋದ, “ಆರ್ಟ್ ಇನ್ಸ್ಟಿಟ್ಯೂಟ್ನ ಶಾಶ್ವತ ಸ್ಮಾರಕ ಕಲಾ ಭವನ” ದಲ್ಲಿ (ವಿಶ್ವದ ಕಾಂಗ್ರೆಸ್ ಸಹಾಯಕ ಕಟ್ಟಡ ಎಂದೂ ಗುರುತಿಸಲ್ಪಟ್ಟಿದೆ) ಪ್ರಾರಂಭವಾಯಿತು. ವಿವೇಕಾನಂದರು ಆ ದಿನ ತಮ್ಮ ಮೊದಲ ಉಪನ್ಯಾಸವನ್ನು ನೀಡಿದರು. ಇವರ ಸರದಿಯನ್ನು ತುಂಬಾ ಮುಂದೂಡುವಿಕೆಯ ನಂತರ ಮಧ್ಯಾಹ್ನದ ಹೊತ್ತಿಗೆ ಇವರ ಸರದಿ ಬಂದಿತು. ಆರಂಭದಲ್ಲಿ ಅವರು ಆತಂಕಕ್ಕೊಳಗಾಗಿದ್ದರೂ, ಅವರು ಹಿಂದೂ ವಿದ್ಯಾ ದೇವತೆಯಾದ ಸರಸ್ವತಿಗೆ ನಮಸ್ಕರಿಸಿದರು, ಮತ್ತು ಅವರು ತಮ್ಮ ದೇಹದಲ್ಲಿ ಹೊಸ ಶಕ್ತಿಯನ್ನು ಪಡೆದುಕೊಂಡಿರವುದಾಗಿ ಭಾವಿಸಿದರು; ಯಾರೋ ಅಥವಾ ಇನ್ನೊಬ್ಬರು ತಮ್ಮ ದೇಹವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಅವರು ಭಾವಿಸಿದರು- (ಅದು”ದಿ ಸೋಲ್ ಆಫ್ ಇಂಡಿಯಾ, ಋಷಿಯ ಪ್ರತಿಧ್ವನಿ, ರಾಮಕೃಷ್ಣರ ಧ್ವನಿ, ಪುನರುತ್ಥಾನಗೊಂಡ ಸಮಯದ ಚೈತನ್ಯದ ಮುಖವಾಣಿ”) ನಂತರ “ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ!” ಎಂದು ಸಂಬೋಧಿಸಿ ಮಾತು ಆರಂಭಿಸಿದರು. ಈ ಮಾತುಗಳಿಗೆ ಅವರು ಅಲ್ಲಿದ್ದ ಏಳು ಸಾವಿರ ಜನಸಮೂಹದಿಂದ ‘ನಿಂತು ಚಪ್ಪಾಳೆಯ ಮೆಚ್ಚಗೆ ಸೂಚಿಸಿಸ ಗೌರವ’ ಪಡೆದರು, ಅದು ಎರಡು ನಿಮಿಷಗಳ ಕಾಲ ನಡೆಯಿತು. ಮೌನವನ್ನು ಪುನಃಸ್ಥಾಪಿಸಿದಾಗ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. “ವಿಶ್ವದ ಅತ್ಯಂತ ಪ್ರಾಚೀನ ವೈದಿಕ ಕ್ರಮ ಅನುಸರಿಸಿದ ಸನ್ಯಾಸಿಗಳ, ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮದ ಪರವಾಗಿ ಅವರು ಯುವ ರಾಷ್ಟ್ರಗಳನ್ನು ಅಭಿನಂದಿಸಿದರು.!” (ಭಾರತಕ್ಕಿಂತ ಅವು ಕಿರಿಯ/ ಯುವ ರಾಷ್ಟ್ಟ್ರಗಳು)
ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. ‘ಪೂರ್ವ ದೇಶದ ವಿಚಿತ್ರ ಧರ್ಮ’ ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು, ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ ‘ನ್ಯೂಯಾರ್ಕ್’ ಮತ್ತು ‘ಲಂಡನ್’ ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು.
ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಹಾಗೆಯೇ “ಆತ್ಮನೋ ಮೋಕ್ಷಾಥರ್ಂ ಜಗದ್ ಹಿತಾಯ ಚ” (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ@ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ.
‘ಸ್ವಾಮಿ ವಿವೇಕಾನಂದ’ರು ದಿವಂಗತರಾದಾಗ ಕೇವಲ 39 ವರ್ಷದವರಾಗಿದ್ದರು. ಯುವಕರಿಗೆ ದಾರಿ ದೀಪವಾಗಿದ್ದರು. ಸ್ವಾಮಿ ಅವರ ಭಾಷಣದ ಆಯ್ದ ಭಾಗ ಹೀಗಿದೆ:-“ನಾನು ಮಾಡಿರುವ ಅಲ್ಪ ಕಾರ್ಯ ಕೇವಲ ನನ್ನಲ್ಲಿರುವ ಶಕ್ತಿಯಿಂದಲ್ಲ. ನನ್ನ ಪರಮಮಿತ್ರ ಪ್ರಿಯತಮ ಮಾತೃಭೂಮಿಯಿಂದ ಹೊರಟ ಉತ್ತೇಜನ ಶುಭಾಶಯ ಆಶೀರ್ವಾದಗಳು”.
ಸ್ವದೇಶ ಮಂತ್ರ
ಹೋ ಜಂಬೂದ್ವೀಪದ ಮೂಲ ನಿವಾಸಿಗಳೇ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ!
ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು. *ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು – ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು.
ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‍ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ “ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ”. ಸಹೋದರರೆ, ಹೀಗೆ ಸಾರಿ “ಭಾರತ ಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ.” ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, “ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ಹೋಗಲಾಡಿಸಿ, ನಮ್ಮಲ್ಲಿ ವೀರತ್ವವನ್ನು ತುಂಬು.
ಚಿಕಾಗೋದಲ್ಲಿ ಒಬ್ಬ ಕ್ರಿಶ್ಚನ್ನ ಯುವಕರು ತಮ್ಮಗ್ರಂಥವನ್ನು ಭಗವದ್ಗೀತೆಯ ಕೆಳಗಿಟ್ಟು ತಮ್ಮಧರ್ಮ ಶ್ರೇಷ್ಠ ಎಂಬ ಮಂಡುವಾದ ಮಾಡಿದರು. ಆ ಪುಸ್ತಕ ಸರಿಸಿದ ವಿವೇಕಾನಂದರು ಕೆಳಗಿದ್ದ ಪುಸ್ತಕ ವನ್ನು ಕುರಿತು ಎಲ್ಲಾಧರ್ಮಗಳಿಗಿಂತ ಮೂಲ ಧರ್ಮ ನಮ್ಮಧರ್ಮ.ಎಲ್ಲಾ ಧರ್ಮವು ಒಂದೇ ಎಂದು ಹೇಳಿದರು.

ಗಣರಾಜ್ಯೋತ್ಸವ (ಭಾರತ)

ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ 26 ಭಾರತದಾದ್ಯಂತ ಸರ್ಕಾರಿ ರಜಾದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದುಂಟು. ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ. ದೇಶದೆಲ್ಲೆಡೆ ಜನರು ಹೆಮ್ಮೆಯ ಜೊತೆಗೆ ಈ ದಿನವನ್ನು ಆಚರಿಸಲಾಗುತ್ತದೆ.
ಆಗಸ್ಟ್ 15 1947ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ 29ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ 4 1947ರಂದು ಶಾಸನಸಭೆಯಲ್ಲಿ ಮಂಡಿಸಿತು. ನವೆಂಬರ್ 26, 1949 ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ 26 1950ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಜನವರಿ 26, 1929 ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊಂಡಿತ್ತು. ಲಾಹೋರ್ನಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತಂತ್ರ್ಯಾನಂತರ ಭಾರತದ ಸಂವಿಧಾನವನ್ನು ಈ ದಿನದಂದೇ ಜಾರಿಗೆ ತರಲಾಯಿತು.
ಮುಖ್ಯ ಗಣರಾಜ್ಯೋತ್ಸವವನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್‍ಪಾತ್‍ನಲ್ಲಿ ಭಾರತದ ರಾಷ್ಟ್ರಪತಿಗಳ ಮುಂದೆ ನಡೆಸಲಾಗುತ್ತದೆ. ಈ ದಿನ, ರಾಜ್‍ಪಾತ್‍ನಲ್ಲಿ ವಿಧ್ಯುಕ್ತ ಮೆರವಣಿಗೆಗಳು ನಡೆಯುತ್ತವೆ, ಇದನ್ನು ಭಾರತಕ್ಕೆ ಗೌರವವಾಗಿ ನಡೆಸಲಾಗುತ್ತದೆ. ವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕøತಿಕ ಪರಂಪರೆಯಲ್ಲಿ ಅದರ ಏಕತೆ.
ದೆಹಲಿ ಗಣರಾಜ್ಯೋತ್ಸವ ಮೆರವಣಿಗೆ ದೆಹಲಿ ಗಣರಾಜ್ಯೋತ್ಸವ ಮೆರವಣಿಗೆಯನ್ನು ರಾಜಧಾನಿ ನವದೆಹಲಿಯಲ್ಲಿ ರಕ್ಷಣಾ ಸಚಿವಾಲಯ ಆಯೋಜಿಸಿದೆ. ಭಾರತ ಗೇಟ್‍ನ ಹಿಂದೆ ರಾಜ್‍ಪಾತ್‍ನಲ್ಲಿರುವ ರಾಷ್ಟ್ರಪತಿ ಭವನ (ಅಧ್ಯಕ್ಷರ ನಿವಾಸ) ದ್ವಾರಗಳಿಂದ ಪ್ರಾರಂಭವಾದ ಈ ಘಟನೆಯು ಮೂರು ದಿನಗಳ ಕಾಲ ನಡೆಯುವ ಭಾರತದ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಮೆರವಣಿಗೆ ಭಾರತದ ರಕ್ಷಣಾ ಸಾಮಥ್ರ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ.
ನೌಕಾಪಡೆಗೆ ಹೆಚ್ಚುವರಿಯಾಗಿ ಭಾರತೀಯ ಸೇನೆಯ ಒಂಬತ್ತರಿಂದ ಹನ್ನೆರಡು ವಿಭಿನ್ನ ರೆಜಿಮೆಂಟ್‍ಗಳು ಮತ್ತು ವಾಯುಪಡೆಯು ತಮ್ಮ ಬ್ಯಾಂಡ್‍ಗಳೊಂದಿಗೆ ತಮ್ಮ ಎಲ್ಲಾ ಉತ್ಕೃಷ್ಟ ಮತ್ತು ಅಧಿಕೃತ ಅಲಂಕಾರಗಳಲ್ಲಿ ಕಳೆದವು. ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿರುವ ಭಾರತದ ರಾಷ್ಟ್ರಪತಿಗಳು ವಂದನೆ ಸಲ್ಲಿಸುತ್ತಾರೆ. ಭಾರತದ ವಿವಿಧ ಪ್ಯಾರಾ-ಮಿಲಿಟರಿ ಪಡೆಗಳು ಮತ್ತು ಇತರ ನಾಗರಿಕ ಪಡೆಗಳ ಹನ್ನೆರಡು ತುಕಡಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತವೆ.
ಹಿಮ್ಮೆಟ್ಟುವಿಕೆಯನ್ನು ಸೋಲಿಸುವುದು ಗಣರಾಜ್ಯೋತ್ಸವದ ಅಂತ್ಯವನ್ನು ಅಧಿಕೃತವಾಗಿ ಸೂಚಿಸಿದ ನಂತರ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ನಡೆಸಲಾಗುತ್ತದೆ. ಗಣರಾಜ್ಯೋತ್ಸವದ ನಂತರದ ಮೂರನೇ ದಿನವಾದ ಜನವರಿ 29ರ ಸಂಜೆ ಇದನ್ನು ನಡೆಸಲಾಗುತ್ತದೆ. ಇದನ್ನು ಮಿಲಿಟರಿ, ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಮೂರು ರೆಕ್ಕೆಗಳ ತಂಡಗಳು ನಿರ್ವಹಿಸುತ್ತವೆ. ಈ ಸ್ಥಳವು ರೈಸಿನಾ ಬೆಟ್ಟ ಮತ್ತು ಪಕ್ಕದ ಚೌಕ, ವಿಜಯ್ ಚೌಕ್, ರಾಷ್ಟ್ರಪತಿ ಭವನದ (ಅಧ್ಯಕ್ಷರ ಅರಮನೆ) ಉತ್ತರ ಮತ್ತು ದಕ್ಷಿಣ ಭಾಗದಿಂದ ರಾಜ್‍ಪಾತ್‍ನ ಕೊನೆಯಲ್ಲಿ ಇದೆ.
ಈ ಸಮಾರಂಭದ ಮುಖ್ಯ ಅತಿಥಿಯಾಗಿ ಭಾರತದ ರಾಷ್ಟ್ರಪತಿಗಳು ಅಶ್ವದಳದ ಘಟಕವಾದ (ಪಿಬಿಜಿ) ಬೆಂಗಾವಲು ಆಗಮಿಸುತ್ತಾರೆ. ಅಧ್ಯಕ್ಷರು ಬಂದಾಗ, ಪಿಬಿಜಿ ಕಮಾಂಡರ್ ಅವರು ರಾಷ್ಟ್ರೀಯ ವಂದನೆ ನೀಡುವಂತೆ ಘಟಕವನ್ನು ಕೇಳುತ್ತಾರೆ. ಅದರ ನಂತರ ಸೇನೆಯು ಭಾರತೀಯ ರಾಷ್ಟ್ರಗೀತೆ ಜನ ಗಣ ಮನವನ್ನು ನುಡಿಸುತ್ತದೆ. ಸೈನ್ಯವು ಸಾಮೂಹಿಕ ಬ್ಯಾಂಡ್‍ಗಳಿಂದ ಪ್ರದರ್ಶನ ಸಮಾರಂಭವನ್ನು ಅಭಿವೃದ್ಧಿಪಡಿಸುತ್ತದೆ, ಇದರಲ್ಲಿ ಮಿಲಿಟರಿ ಬ್ಯಾಂಡ್‍ಗಳು, ಪೈಪ್ ಮತ್ತು ಡ್ರಮ್ ಬ್ಯಾಂಡ್‍ಗಳು, ವಿವಿಧ ಸೇನಾ ರೆಜಿಮೆಂಟ್‍ಗಳ ಬಗ್ಲರ್‍ಗಳು ಮತ್ತು ಟ್ರಂಪೆಟರ್‍ಗಳು ಮತ್ತು ನೌಕಾಪಡೆ ಮತ್ತು ವಾಯುಪಡೆಯ ಬ್ಯಾಂಡ್‍ಗಳು ಭಾಗವಹಿಸುತ್ತವೆ, ಇದು ಮಹಾತ್ಮ ಗಾಂಧಿಯವರ ನೆಚ್ಚಿನ ಅಬೈಡ್ ವಿಥ್ ಮಿ ನಂತಹ ಜನಪ್ರಿಯ ರಾಗಗಳನ್ನು ನುಡಿಸುತ್ತದೆ. ಸ್ತುತಿಗೀತೆ, ಮತ್ತು ಕೊನೆಯಲ್ಲಿ ಸಾರೇ ಜಹಾನ್ ಸೆ ಅಚ್ಚಾ.
ಗಣರಾಜ್ಯೋತ್ಸವದ ಮುನ್ನಾದಿನದಂದು ಭಾರತದ ಅಧ್ಯಕ್ಷರು ಪ್ರತಿವರ್ಷ ಭಾರತದ ನಾಗರಿಕರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ವಿತರಿಸುತ್ತಾರೆ. ಇದು ಭಾರತದ ರತ್ನ ನಂತರದ ಪ್ರಮುಖ ಪ್ರಶಸ್ತಿ, ಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ನೀಡಲಗುತ್ತದೆ. ಅಂದರೆ, ಪ್ರಾಮುಖ್ಯತೆಯ ಕ್ಷೀಣಿಸುತ್ತಿರುವ ಕ್ರಮದಲ್ಲಿ ಪದ್ಮವಿಭೂಷಣ, ಪದ್ಮಭೂಷಣ್ ಮತ್ತು ಪದ್ಮಶ್ರೀ.
ಅಸಾಧಾರಣ ಮತ್ತು ವಿಶಿಷ್ಟ ಸೇವೆ”ಗಾಗಿ ಪದ್ಮವಿಭೂಷಣ್. ಪದ್ಮವಿಭೂಷಣ್ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. “ಉನ್ನತ ಕ್ರಮಾಂಕದ ವಿಶಿಷ್ಟ ಸೇವೆ” ಗಾಗಿ ಪದ್ಮಭೂಷಣ್. ಪದ್ಮಭೂಷಣ್ ಭಾರತದ ಮೂರನೇ ಅತಿ ಹೆಚ್ಚು ನಾಗರಿಕ ಪ್ರಶಸ್ತಿ. “ವಿಶೇಷ ಸೇವೆ” ಗಾಗಿ ಪದ್ಮಶ್ರೀ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪದ್ಮಶ್ರೀ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ರಾಷ್ಟ್ರೀಯ ಗೌರವಗಳಾಗಿದ್ದರೂ, ಪದ್ಮಾ ಪ್ರಶಸ್ತಿಗಳು ನಗದು ಭತ್ಯೆಗಳು, ಪ್ರಯೋಜನಗಳು ಅಥವಾ ರೈಲು / ವಿಮಾನ ಪ್ರಯಾಣದಲ್ಲಿ ವಿಶೇಷ ರಿಯಾಯಿತಿಗಳನ್ನು ಒಳಗೊಂಡಿಲ್ಲ. ಭಾರತದ ಸುಪ್ರೀಂ ಕೋರ್ಟ್‍ನ 1995 ರ ಡಿಸೆಂಬರ್ ತೀರ್ಪಿನ ಪ್ರಕಾರ, ಯಾವುದೇ ಶೀರ್ಷಿಕೆಗಳು ಅಥವಾ ಗೌರವಗಳು ಭಾರತ್ ರತ್ನ ಅಥವಾ ಯಾವುದೇ ಪದ್ಮ ಪ್ರಶಸ್ತಿಗಳೊಂದಿಗೆ ಸಂಬಂಧ ಹೊಂದಿಲ್ಲ; ಗೌರವಿಸುವವರು ಅವುಗಳನ್ನು ಅಥವಾ ಅವರ ಮೊದಲಕ್ಷರಗಳನ್ನು ಪ್ರತ್ಯಯಗಳು, ಪೂರ್ವಪ್ರತ್ಯಯಗಳು ಅಥವಾ ಪ್ರಶಸ್ತಿ ಪುರಸ್ಕೃತರ ಹೆಸರಿಗೆ ಲಗತ್ತಿಸಲಾದ ಪೂರ್ವ ಮತ್ತು ನಂತರದ ನಾಮನಿರ್ದೇಶನಗಳಾಗಿ ಬಳಸಲಾಗುವುದಿಲ್ಲ. ಲೆಟರ್‍ಹೆಡ್‍ಗಳು, ಆಮಂತ್ರಣ ಪತ್ರಗಳು, ಪೆÇೀಸ್ಟರ್‍ಗಳು, ಪುಸ್ತಕಗಳು ಇತ್ಯಾದಿಗಳಲ್ಲಿ ಇದು ಅಂತಹ ಯಾವುದೇ ಬಳಕೆಯನ್ನು ಒಳಗೊಂಡಿದೆ. ಯಾವುದೇ ದುರುಪಯೋಗದ ಸಂದರ್ಭದಲ್ಲಿ, ಪ್ರಶಸ್ತಿ ಪುರಸ್ಕೃತನು ಪ್ರಶಸ್ತಿಯನ್ನು ಕಳೆದುಕೊಳ್ಳುತ್ತಾನೆ, ಮತ್ತು ಗೌರವವನ್ನು ಪಡೆದ ನಂತರ ಅಂತಹ ಯಾವುದೇ ದುರುಪಯೋಗದ ವಿರುದ್ಧ ಅವನು ಅಥವಾ ಅವಳು ಎಚ್ಚರಿಕೆ ವಹಿಸುತ್ತಾರೆ.
ಅಲಂಕಾರವು ಅಧ್ಯಕ್ಷರ ಕೈ ಮತ್ತು ಮುದ್ರೆಯಡಿಯಲ್ಲಿ ನೀಡಲಾದ ಸನಾದ್ (ಪ್ರಮಾಣಪತ್ರ) ಮತ್ತು ಮೆಡಾಲಿಯನ್ ಅನ್ನು ಒಳಗೊಂಡಿದೆ. ಸ್ವೀಕರಿಸುವವರಿಗೆ ಪದಕದ ಪ್ರತಿಕೃತಿಯನ್ನು ಸಹ ನೀಡಲಾಗುತ್ತದೆ, ಅವರು ಬಯಸಿದರೆ ಯಾವುದೇ ವಿಧ್ಯುಕ್ತ / ರಾಜ್ಯ ಕಾರ್ಯಗಳು ಇತ್ಯಾದಿಗಳಲ್ಲಿ ಧರಿಸಬಹುದು. ಪ್ರತಿ ಪ್ರಶಸ್ತಿ ವಿಜೇತರಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ವಿವರಗಳನ್ನು ನೀಡುವ ಸ್ಮರಣಾರ್ಥ ಕರಪತ್ರವನ್ನು ಹೂಡಿಕೆ ಸಮಾರಂಭದ ದಿನದಂದು ಬಿಡುಗಡೆ ಮಾಡಲಾಗುತ್ತದೆ.

ಮುಖ್ಯ ಅತಿಥಿ
ಈ ದಿನದಂದು ಭಾರತವು ಇತರ ದೇಶಗಳ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತದೆ.
ವರ್ಷ ಮುಖ್ಯ ಅತಿಥಿ ದೇಶ
1950 ಅಧ್ಯಕ್ಷರು ಸುಕಾರ್ನೊ ಇಂಡೋನೇμÁ್ಯ
1954 ಕಿಂಗ್ ಜಿಗಮೆ ದೊರ್ಜಿ ವಾಂಗಚಕ್ ಭೂತಾನ್
1955 ಗವರ್ನರ್ ಜನರಲ್ ಮಲ್ಲಿಕ್ ಗುಲಾಮ್ ಮೊಹಮ್ಮದ್ ಪಾಕಿಸ್ತಾನ
1958 ಮಾರ್ಷಲ್‍ಯೆ ಜಿನ್‍ಯಿಂಗ್ ಚೀನಾ
1960 ಪ್ರಧಾನ ಮಂತ್ರಿ ಕ್ಲೈಮಂಟ್ ವೊರೊಸಿಲ್ವೊ ಸೊವಿಯತ್ ಯುನಿಯನ್
1961 ರಾಣಿ ಎಲಿಜಾಬೆತ್ ಯುನ್ಯಟೆಡ್ ಕಿಂಗಡಮ್
1963 ಕಿಂಗ್ ನೊರೊಡೊಮ್ ಸಿನೌಕ್ ಕಾಂಬೊಡಿಯಾ
1976 ಪ್ರಧಾನ ಮಂತ್ರಿ ಜಾಕ್ಸ್ ಚಿರಾಕ್ ಫ್ರಾನ್ಸ್
1978 ರಾಷ್ಟ್ರಪತಿ ಡಾ. ಪ್ಯಾಟ್ರಿಕ್ ಹಿಲ್ಲರಿ ಐಲ್ಯಾರ್ಂಡ್
1986 ಪ್ರಧಾನ ಮಂತ್ರಿ ಆಂಡ್ರಿಯಾಸ್ ಪಪನ್ಡರ್ಯೂ ಗ್ರೀಸ್ ಗ್ರೀಸ್
1992 ರಾಷ್ಟ್ರಪತಿ ಮಾರಿಯೊ ಸೋರೆಸ್ ಪೆÇೀರ್ಚುಗಲ್ ಪೆÇೀರ್ಚುಗಲ್
1995 ರಾಷ್ಟ್ರಪತಿ ನೆಲ್ಸನ್ ಮಂಡೇಲ ದಕ್ಷಿಣ ಆಫ್ರಿಕ
1996 ರಾಷ್ಟ್ರಪತಿ ಡಾ. ಫನ್ರ್ಯಾನ್ಡೋ ಹೆನ್ರಿಕ್ ಕಾರ್ದೊಸೊ ಬ್ರೆಜಿಲ್
1997 ಪ್ರಧಾನ ಮಂತ್ರಿ ಬಸ್ದಿಯೊ ಪಾಂಡೆ ಟ್ರಿನಿಡಾಡ್ ಮತ್ತು ಟೊಬೆಗೊ
1998 ರಾಷ್ಟ್ರಪತಿ ಜಾಕ್ಸ್ ಚಿರಾಕ್ ಫ್ರಾನ್ಸ್
1999 ರಾಜ ಬೀರೇದ್ರ ಬೀರ್ ಬಿಕ್ರಮ್ ಶಾಹ್ ದೇವ್ ನೇಪಾಳ
2000 ರಾಷ್ಟ್ರಪತಿ ಒಲೆಸುಗುನ್ ಒಬಸಾಂಜೊ ನೈಜೀರಿಯ
2001 ರಾಷ್ಟ್ರಪತಿ ಅಬ್ದೆಲ್‍ಅಜೀಜ್ ಬೌತೆಫ್ಲಿಕ ಅಲ್ಜೀರಿಯ
2002 ರಾಷ್ಟ್ರಪತಿ ಕಸ್ಸಮ್ ಉತೀಮ್ ಮಾರಿಷಸ್
2003 ರಾಷ್ಟ್ರಪತಿ ಮೊಹಮ್ಮದ್ ಖಾತಾಮಿ ಇರನ್
2004 ರಾಷ್ಟ್ರಪತಿ ಲುಯಿಜ್ ಇನಾಸಿಒ ಲುಲ ಡ ಸಿಲ್ವ ಬ್ರೆಜಿಲ್
2005 ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಭೂತಾನ್ ಭೂತಾನ್
2006 ರಾಜ ಅಬ್ದುಲ್ಲಹ್ ಬಿನ್ ಅಬ್ದುಲ್‍ಅಜೀಜ್ ಅಲ್-ಸೌದ್ ಸೌದಿ ಅರೇಬಿಯ
2007 ರಾಷ್ಟ್ರಪತಿ ವ್ಲಾದಿಮಿರ್ ಪುತಿನ್ ರಷ್ಯಾ
2008 ರಾಷ್ಟ್ರಪತಿ ನಿಕೊಲಸ್ ಸಾರ್ಕೋಜಿ ಫ್ರಾನ್ಸ್
2009 ರಾಷ್ಟ್ರಪತಿ ನೂರ್ಸುಲ್ತಾನ್ ನಜರ್ಬಯೇವ್ ಕಜಾಕಸ್ಥಾನ್
2010 ರಾಷ್ಟ್ರಪತಿ ಲೀ ಮ್ಯೂಂಗ್ ಬಕ್ ದಕ್ಷಿಣ ಕೊರಿಯ
2011 ರಾಷ್ಟ್ರಪತಿ ಸುಸಿಲೊ ಬಂಬಾಂಗ್ ಯುಧೊಯೊನೊ ಇಂಡೋನೇμÁ್ಯ
2012 ರಾಷ್ಟ್ರಪತಿ ಯಿಂಗ್ಲುಕ್ ಶಿನಾವತ್ರ ಥೈಲ್ಯಾಂಡ್
2013 ರಾಜ ಜಿಗ್ಮೆ ವಾಂಗ್‍ಚುಕ್ ಭೂತಾನ್
2014 ಪ್ರಧಾನ ಮಂತ್ರಿ ಶಿಂಜೊ ಅಬೆ ಜಪಾನ್
2015 ರಾμÁ್ಟ್ರಧ್ಯಕ್ಷ ಬರಾಕ್ ಒಬಾಮ ಅಮೆರಿಕ
2016 ರಾμÁ್ಟ್ರಧ್ಯಕ್ಷ. ಪ್ರಾನ್ಸಿಸ್ಕೊ ಹೊಲೆಂಡ್ ಫ್ರಾನ್ಸ್
2017 ಯುವರಾಜ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅರಬ್
2018 ಸುಲ್ತಾನ್ ಹಾಸನಲ್ ಬೋಲ್ಕಯ್ಯ ಬ್ರುನೈ
ಪ್ರಧಾನ ಮಂತ್ರಿ ಹುನ್ ಸೇನ್ ಕಾಂಬೋಡಿಯ
ಅಧ್ಯಕ್ಷ ಜೋಕೊ ವಿಡೊಡೊ ಇಂಡೋನೇμÁ್ಯ
ಪ್ರಧಾನ ಮಂತ್ರಿ ಥೊಂಗ್ಲೋನ್ ಸಿಸೌಲಿತ್ ಲಾವೋಸ್ಲಾವೋಸ್
ಪ್ರಧಾನ ಮಂತ್ರಿ ನಜೀಬ್ ರಝಕ್ ಮಲೇಶಿಯ
ರಾಜ್ಯ ಕೌನ್ಸಿಲರ್ ಡಾವ್ ಆಂಗ್ ಸಾನ್ ಸ್ಸುಕಿ ಬರ್ಮಾಮಯನ್ಮಾರ್
ಅಧ್ಯಕ್ಷ ರೊಡ್ರಿಗೊ ರೊ ಡೂಟರ್ಟೇ ಫಿಲಿಪ್ಪೀನ್ಸ್ಫಿ
ಪ್ರಧಾನ ಮಂತ್ರಿ ಲೀ ಸಿಯನ್ ಲಂಗ್ ಸಿಂಗಾಪುರ
ಪ್ರಧಾನ ಮಂತ್ರಿ ಪ್ರಯತ್ ಚಾನ್-ಒಚಾ ಥೈಲ್ಯಾಂಡ್
ಪ್ರಧಾನ ಮಂತ್ರಿ ನ್ಗುಯಿನ್ ಕ್ಸುಯಾನ್ ಫುಕ್ ವಿಯೆಟ್ನಾಮ್
2019 ಅಧ್ಯಕ್ಷ ಸಿರಿಲ್ ರಾಮಾಫೆÇೀಸಾ ದಕ್ಷಿಣ ಆಫ್ರಿಕಾ
2018 ಸಿರಿಲ್ ರಾಮಾಫೆÇಸಾ ದಕ್ಷಿಣ ಆಫ್ರಿಕಾ
2019
2020 ಬ್ರೆಜಿಲ್

ಮಕರ ಸಂಕ್ರಾಂತಿ

ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.
ಜ್ಯೋತಿಷ್ಯದ ತಳಹದಿ
ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷ್ಯವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದದಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ.
ಈ ಶಾಸ್ತ್ರದಂತೆ, ಸೂರ್ಯನು ನಿರ್ಯಾಣ ಮಕರರಾಶಿಯನ್ನು ಪ್ರವೇಶಿಸಿದಾಗ, “ಮಕರ ಸಂಕ್ರಾಂತಿ” ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ 14ರ ಸುಮಾರಿಗೆ ಬೀಳುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು.
ಈಗ ಉತ್ತರಾಯಣ ಡಿಸೆಂಬರ್ 22ಕ್ಕೇ ಆದರೂ, ಹಿಂದಿನಂತೆಯೇ ಜನವರಿ 14 ರಂದು ನಡೆಯುವ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ. ಮಹಾಭಾರತದ ಕತೆಯಲ್ಲಿ ಇಚ್ಚಾ ಮರಣಿಯಾದ. ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೆಖವಿದೆ. ಸಂಪರ್ಕದ ಹೆಸರು
ಖಗೋಳ ಶಾಸ್ತ್ರದ ಪ್ರಕಾರ
ಸೂರ್ಯೋದಯ ಪೂರ್ವದಲ್ಲಿ ಮತ್ತು ಸೂರ್ಯಾಸ್ತಮಾನ ಪಶ್ಚಿಮದಲ್ಲಿ ಎಂದು ಹೇಳುವುದಾದರೂ, ಯಾವುದೇ ಸ್ಥಳದಲ್ಲಿ ಕರಾರುವಾಕ್ಕಾಗಿ ಪೂರ್ವದಲ್ಲೇ ಸೂರ್ಯೋದಯವಾಗುವುದು ಮತ್ತು ಪಶ್ಚಿಮದಲ್ಲೇ ಸೂರ್ಯಾಸ್ತಮಾನವಾಗುವುದು ವರ್ಷದಲ್ಲಿ ಎರಡೇ ದಿನಗಳಂದು. ಆ ದಿನಗಳನ್ನು ಈಕ್ವಿನಾಕ್ಸ್ (equiಟಿox)ಎಂದು ಕರೆಯುತ್ತಾರೆ. ಅಂದು ಹಗಲಿರುಳುಗಳು ದಿನವನ್ನು ಸಮಪಾಲಾಗಿ, ಅಂದರೆ 12ಗಂಟೆಗಳಾಗಿ ಹಂಚಿಕೊಳ್ಳುತ್ತವೆ. ವರ್ಷದ ಉಳಿದ ದಿನಗಳಲ್ಲಿ ಹಗಲಿರುಳುಗಳ ಪಾಲು ಸಮವಾಗಿರುವುದಿಲ್ಲ.
ಬೇಸಗೆಯಲ್ಲಿ ಹಗಲು ಹೆಚ್ಚು, ಇರುಳು ಕಮ್ಮಿ. ಚಳಿಗಾಲದಲ್ಲಿ ಹಗಲು ಕಮ್ಮಿ, ಇರುಳು ಹೆಚ್ಚು. ಈಕ್ವಿನಾಕ್ಸ್ ದಿವಸಗಳ ಹೊರತಾಗಿ ಸೂರ್ಯನ ಉದಯ ಪೂರ್ವದ ಬಲಕ್ಕೆ (ಅಂದರೆ ಉತ್ತರಕ್ಕೆ) ಅಥವಾ ಎಡಕ್ಕೆ (ಅಂದರೆ ದಕ್ಷಿಣಕ್ಕೆ) ಆಗುತ್ತದೆ. ಚಳಿಗಾಲ (ಅಂದರೆ ಇರುಳಿನ ಪ್ರಮಾಣ) ಹೆಚ್ಚಾದಂತೆ ಸೂರ್ಯನ ಉದಯ ಹೆಚ್ಚು ದಕ್ಷಿಣ ದಿಕ್ಕಿಗೆ ಚಲಿಸುವುದು ಗೋಚರಿಸುತ್ತದೆ. ಕೊನೆಗೆ ಒಂದು ದಿನ ದಕ್ಷಿಣದ ತುತ್ತ ತುದಿಯ ಹಂತವನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುಧ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ. ಅಂದರೆ ಸೂರ್ಯ ಇನ್ನು ದಕ್ಷಿಣ ದಿಕ್ಕಿನತ್ತದ ತನ್ನ ಚಲನವನ್ನು ನಿಲ್ಲಿಸಿ ಉತ್ತರಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನ ಉತ್ತರಾಯಣದ ದಿನ. ಇದು ಚಳಿಗಾಲ ಮುಗಿದು ಮುಂಬರುವ ಬೇಸಗೆಯ ಮುನ್ಸೂಚನೆ. ತಿiಟಿಣeಡಿ soಟsಣiಛಿe ಎಂದೂ ಕರೆಯಲ್ಪಡುತ್ತದೆ. ಸುಮಾರು ಡಿಸೆಂಬರ್ 22 ಈ ದಿನ. ಈ ದಿನವನ್ನು ಮಕರ ಸಂಕ್ರಾಂತಿಯೆಂದು ಗುರುತಿಸಬೇಕಾಗಿದ್ದರೂ ಸಾಂಪ್ರದಾಯಿಕವಾಗಿ ಜನವರಿ ತಿಂಗಳ ನಡುವಿನಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ.
ಇಲ್ಲಿಂದ ಸೂರ್ಯೋದಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತಾ ನಡುವೆ ಮತ್ತೆ ಈಕ್ವಿನಾಕ್ಸ್ದಿ ನವನ್ನೂ ತಲುಪಿ, ಇನ್ನೂ ಅದೇ ದಿಕ್ಕಿನಲ್ಲಿ (ಉತ್ತರಕ್ಕೆ)ಚಲಿಸುತ್ತಾ ಹೋಗುತ್ತದೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ ಇರುಳು ಕಮ್ಮಿಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಗೆಯನ್ನು ಅನುಭವಿಸುತ್ತೇವೆ. ಕೊನೆಗೆ ಒಂದು ದಿನ ಉತ್ತರದ ತುತ್ತ ತುದಿಯನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುದ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ.
ಅಂದರೆ ಸೂರ್ಯ ಇನ್ನು ಉತ್ತರ ದಿಕ್ಕಿನತ್ತದ ತನ್ನ ಚಲನೆಯನ್ನು ನಿಲ್ಲಿಸಿ ದಕ್ಷಿಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಇದು ದಕ್ಷಣಯಾನದ ದಿನ. ಬೇಸಗೆ ಮುಗಿದು ಮುಂಬರುವ ಚಳಿಗಾಲದ ಮುನ್ಸೂಚನೆ. ಈ ದಿನವನ್ನು ಕರ್ಕಾಟಕ ಸಂಕ್ರಾಂತಿ ಎಂದು ಗುರುತಿಸುತ್ತಾರೆ. summeಡಿ soಟsಣiಛಿe ಎಂದೂ ಕರೆಯಲ್ಪಡುತ್ತದೆ. ಸುಮಾರು ಜೂನ್ 21 ಈ ದಿನ. ಇμÉ್ಟಲ್ಲಾ ವಿವರಣೆ ಅನ್ವಯಿಸುವುದು ಭೂಮಂಡಲದ ಭೂಮಧ್ಯರೇಖೆಯ ಉತ್ತರಾರ್ತ. ಇದೇ ರೀತಿಯ ಆದರೆ ತದ್ವಿರುದ್ಧವಾದ ವಿವರಣೆ ದಕ್ಷಿಣಾರ್ಧಕ್ಕೆ ಅನ್ವಯಿಸುತ್ತದೆ.
ಹೀಗೆ ಕಾಣುವ ಸೂರ್ಯನ ಚಲನೆಗೆ ಭೂಮಿಯ ಅಕ್ಷರೇಖೆ (ಚಿxis) ಸುಮಾರು 22 1/2 ಜegಡಿee ವಾಲಿರುವುದು ಕಾರಣ. ಯಾವುದಾದರೂ ಒಂದು ನಿಗದಿತ ಜಾಗದಲ್ಲಿ ದಿನಾಲು ನಿಂತು, ದಿನದ ಒಂದೇ ನಿಗದಿತ ಸಮಯದಲ್ಲಿ, ಆಗಸದಲ್ಲಿ ಸೂರ್ಯನ ಸ್ಥಾನವನ್ನು ಗುರುತು ಹಾಕಿಕೊಂಡು, ಈ ರೀತಿ ವರ್ಷವಿಡೀ ಮಾಡಿದರೆ, ಗುರುತು ಹಾಕಿಕೊಂಡ ಆ ಬಿಂದುಗಳೆಲ್ಲಾ ಸುಮಾರು ‘8’ರ ಆಕೃತಿಯಲ್ಲಿ ಕಾಣುತ್ತವೆ.
ಈ ವಿನ್ಯಾಸವನ್ನು ಚಿಟಿಚಿಟemmಚಿ ಎನ್ನುತ್ತಾರೆ. ‘8’ರ ಆಕೃತಿಯ ನೆತ್ತಿಯ ಬಿಂದು summeಡಿ soಟsಣiಛಿe ದಿನದಂದು ಆಗುತ್ತದೆ. ಆ ಆಕೃತಿಯ ಅಡಿಯ ಬಿಂದು ತಿiಟಿಣeಡಿ soಟsಣiಛಿe, ಅಂದರೆ ಮಕರ ಸಂಕ್ರಾಂತಿಯ ದಿನದಂದು ಆಗುತ್ತದೆ. ನಡುವೆ ರೇಖೆಗಳು ಪರಸ್ಪರ ಹಾದು ಹೋಗುವ ಬಿಂದು equiಟಿox ದಿನಗಳು. 8 ರ ಆಕೃತಿಯ ನೆತ್ತಿಯಿಂದ ಅದರ ಅಡಿಯ ಬಿಂದುವಿನ ತನಕದ ದಿನಗಳು ವರ್ಷದ ದಕ್ಷಿಣಾಯನದ ದಿನಗಳು. ಆ ಆಕೃತಿಯ ಅಡಿಯಿಂದ ಅದರ ನೆತ್ತಿಯ ಬಿಂದುವಿನ ತನಕದ ದಿನಗಳು ಉತ್ತರಾಯಣದ ದಿನಗಳು.
ಇದೆ ಕಾಲಕ್ಕೆ ಚಳಿಗಾಲ ಮುಗಿದು ಹೋಗುತ್ತದೆ ಮನುಷ್ಯ ದೇಹದಲ್ಲಿ ಚಳಿಯಿಂದ ಚರ್ಮ ಎಣ್ಣೆ ಅಂಶ ಕಡಿಮೆಯಾಗುತ್ತದೆ ಅದಕ್ಕೆ ಏಣ್ಣಿನ ಅಂಶ ಇರುವ ಎಳ್ಳು ತಿನ್ನಿ ಅನ್ನೋವುದು ವಾಡಿಕೆ ಇರಬಹುದು ಆದರೆ ವೈಜ್ಞಾನಿಕವಾಗಿ ಅದು ಸಾಭೀತಾಗಿದೆ
ಆಚರಣೆ
ಕರ್ನಾಟಕ
ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು “ಎಳ್ಳು ಬೆಲ್ಲ”. ಮನೆಯಲ್ಲಿ ಎಳ್ಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ “ಎಳ್ಳುಹಂಚುವುದು” ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳು ಬೆಲ್ಲ” ತಯಾರಿಸಲಾಗುತ್ತದೆ.
ಕರ್ನಾಟಕದ ರೈತರಿಗೆ ಸುಗ್ಗಿ ಅಥವಾ ಸುಗ್ಗಿಯ ಹಬ್ಬ. ಈ ಮಂಗಳಕರ ದಿನದಂದು, ಯುವ ಹೆಣ್ಣುಮಕ್ಕಳು ಮಕ್ಕಳು ಮತ್ತು ಹದಿಹರೆಯದವರು ಹೊಸ ಬಟ್ಟೆಗಳನ್ನು ಧರಿಸಿ ಒಂದು ತಟ್ಟೆಯಲ್ಲಿ ಎಳ್ಳುಬೆಲ್ಲದೊಂದಿಗೆ ಹತ್ತಿರದ ಜನರನ್ನು ಮತ್ತು ಸಂಬಂಧಿಗಳನ್ನು ಭೇಟಿಯಾಗಿ ಎಳ್ಳುಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ” ಎಂದು ಹೇಳಿಕೊಳ್ಳುತ್ತಾರೆ. ಪ್ಲೇಟ್ ಸಹ ಕಬ್ಬಿನ ತುಂಡು ವಿವಿಧ ಆಕಾರಗಳನ್ನು ಸಕ್ಕರೆ ಅಚ್ಚುಗಳನ್ನು ಹೊಂದಿರುತ್ತದೆ.
ಕಬ್ಬು (ಈ ಭಾಗಗಳಲ್ಲಿ ಪ್ರಧಾನ ಏಕೆಂದರೆ ಹಬ್ಬದ ಋತುವಿನ ಸುಗ್ಗಿಯ ಸೂಚಿಸುತ್ತದೆ) ಕರ್ನಾಟಕದ ಕೆಲವು ಭಾಗಗಳಲ್ಲಿ, ಹೊಸದಾಗಿ ಮದುವೆಯಾದ ಮಹಿಳೆ ಯರು ತನ್ನ ಮದುವೆಯ ಮೊದಲ ವರ್ಷದಿಂದ ಐದು ವರ್ಷಗಳ ಕಾಲ ಬಾಳೆಹಣ್ಣುಗಳನ್ನು ಮುತ್ತೈದೆಯರಿಗೆ ಕೊಡುವ ಸಂಪ್ರದಾಯ ಇದೆ. ಬಾಳೆಹಣ್ಣುಗಳ ಸಂಖ್ಯೆಯನ್ನು ಪ್ರತಿವರ್ಷ ಐದರಿಂದ ಹೆಚ್ಚಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ, ಸಮುದಾಯದ ಸದಸ್ಯರೊಂದಿಗೆ ಗಾಳಿಪಟ ಹಾರಿಸುವ ಸಂಪ್ರದಾಯವಿದೆ.
ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಸಮಯದ ಮತ್ತೊಂದು ಜನಪ್ರಿಯ ಘಟನೆಯಾಗಿದೆ. (ದನಕರುಗಳನ್ನು ಸಿಂಗರಿಸುವುದು ಮತ್ತು ಮೆರವಣಿಗೆ ಮಾಡುವುದು ಇನ್ನೊಂದು ಧಾರ್ಮಿಕ ಪದ್ಧತಿಯಾಗಿದೆ. ಅವುಗಳನ್ನು “ಕಿಚ್ಚು ಹಾಯಿಸುವುದು” ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ.)
ತಮಿಳುನಾಡು
ತಮಿಳುನಾಡಿನಲ್ಲಿ ಈ ಹಬ್ಬವನ್ನು “ಪೆÇಂಗಲ್” ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ – ಈ ನಾಲ್ಕು ದಿನಗಳು ಮತ್ತು ಆ ದಿನಗಳಲ್ಲಿನ ಆಚರಣೆಗಳು ಹೀಗಿವೆ:
ಭೋಗಿ : ಹೊಸ ಬಟ್ಟೆಗಳು, ಪೆÇಂಗಲ್: ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಗುತ್ತದೆ ಮಾಟ್ಟು ಪೆÇಂಗಲ್: ಗೋಪ್ರಜೆ, ಕೆಲವು ಕಡೆಗಳಲ್ಲಿ “ಜಲ್ಲಿಕಟ್ಟು” ಎಂಬ ಗೂಳಿಯನ್ನು ಪಳಗಿಸುವ ಆಟ ನಡೆಯುತ್ತದೆ

ಕೇರಳದ ಶಬರಿಮಲೆ
ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆ ಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವಷರ್ಂಪ್ರತಿ ಶಬರಿಮಲೆ ಸನ್ನಿಧಾನಕ್ಕಾಗಮಿಸುತ್ತಾರೆ. “ಮಕರ ವಿಳಕ್ಕು”ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ.
ಅಂತೂ ಇದು ವೈಜ್ಞಾನಿಕವಾಗಿ ಸಾಬೀತಾಗಿ ಲ್ಲವಾದರೂ, ಪ್ರಸ್ತುತ ಕಾಲದಲ್ಲಿಯೂ ಆಧ್ಯಾತ್ಮಿಕತೆಯ ಕುರುಹನ್ನು ತೋರಿಸುತ್ತದೆ ಎನ್ನುತ್ತಾರೆ ಭಕ್ತರು. ಒಟ್ಟಿನಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ಲೋಕದ ಕಾರಿರುಳನ್ನು ಹೋಗಲಾಡಿಸುವಂತೆ ಜನರು ಈ ಕಾಲದಲ್ಲಿ ಪುಣ್ಯ ಕಾರ್ಯಗಳಲ್ಲಿಯೂ ಆಧ್ಯಾತ್ಮಿಕ ಚಿಂತೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗುವಂತೆ ಈ ಆಚರಣೆಯು ಪ್ರೇರಣೆಯನ್ನು ನೀಡುತ್ತದೆ.
ಇತರ ಸ್ಥಳಗಳು
ಮುಖ್ಯವಾಗಿ ದಕ್ಷಿಣ ಭಾರತದ ಹಬ್ಬವಾದರೂ, ಇತರ ಸ್ಥಳಗಳಲ್ಲಿ ಸಹ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.
ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವುಂಟು. ಮಹಾರಾಷ್ಟ್ರದಲ್ಲಿಯೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ. ಪ್ರಮುಖವಾಗಿ ಅವರು, ಎಳ್ಳಿನ ಉಂಡೆ ಗಳನ್ನು ಹಂಚುತ್ತಾರೆ. ಅದಕ್ಕೆ ಅವರು ಲಡ್ಡು ಎನ್ನುತ್ತಾರೆ. ಕರ್ನಾಟಕದ ಸಂಪ್ರದಾಯದ ತರಹ ಬಿಡಿ ಕಾಳುಗಳನ್ನು ಹಂಚುವ ಪದ್ಧತಿಯಿಲ್ಲ. ಎಳ್ಳುಂಡೆಕೊಡುವಾಗ ತಪ್ಪದೆ, ” ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ” (ಅಂದರೆ ಎಳ್ಳು ಬೆಲ್ಲ ತೆಗೆದುಕೊಂಡು ಒಳ್ಳೊಳ್ಳೆಯ ಮಾತಾಡಿ) ಎನ್ನುವ ಮಾತು ಹೇಳುವುದನ್ನು ಮರೆಯುವುದಿಲ್ಲ !
ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಗೆ “ಲೋಹರಿ,” ಎಂದು ಹೆಸರು.
ಉತ್ತರಾಯಣ ಆರಂಭದ ದಿನ
ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ. ಇದನ್ನು ಪೆÇಂಗಲ್ ಎಂದು ಕರೆಯಲಾಗುತ್ತದೆ. ಪೆÇಂಗಲ್ ಎಂದರೆ ಅಕ್ಕಿ ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯಮಾಡಲಾಗುವುದು.
ಕರ್ನಾಟಕದಲ್ಲಿ ಎಳ್ಳು, ಸಕ್ಕರೆ – ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ ಈ ಹಬ್ಬದ ಒಂದು ವಿಶೇಷ. ದನಕರುಗಳಿಗೆ ಮೈ ತೊಳೆದು – ಭೂತಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ – ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ನೆಗೆದು ದಾಟಿಸುವುದು ಉಂಟು.
ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು ಸೌರಮಾನದ ಪ್ರಕಾರ ಸೂರ್ಯನು ಮೇμÁದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ, ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ. ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯಾರಾಧನೆ. ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ ಸೂರ್ಯದೇವ ವಿಶ್ವದ ಆತ್ಮ; ಜಗತ್ತಿನ ಕಣ್ಣು; ಮಳೆ ಬೀಳಲು, ಬೆಳೆ-ಬೆಳೆಯಲು, ಇಳೆ ಬೆಳಗಲು ಸೂರ್ಯನೇ ಕಾರಣ ಆ ಸವಿತೃ ದೇವನ ದಿವ್ಯ ತೇಜಸ್ಸು ನಮಗೆ ಸಿದ್ದಿ ಬುದ್ದಿ ಸಮೃದ್ದಿಗಳನ್ನು ನೀಡಬಲ್ಲದು.
ಉತ್ತರಾಯಣ ಪುಣ್ಯ ಕಾಲ : ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ (ಜನವರಿ 13 ಅಥವಾ 14 ರಂದು) ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.
ಸೂರ್ಯನು ಇದೇ ಜನವರಿ 13 ರಂದು ರಾತ್ರಿ 12 ಗಂಟೆ 57 ನಿಮಿಷಕ್ಕೆ ನಿರಯಣ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ವೇಳೆಗೆ ರಾತ್ರಿಯಾಗಿದ್ದರಿಂದ ಜನವರಿ 14ರಂದು ಮಕರ ಸಂಕ್ರಾತಿಯನ್ನು ಆಚರಿಸಲಾಗುತ್ತದೆ. 14ರಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನ, ಜನ್ಮ ಜನ್ಮದಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು – ಬೆಲ್ಲ ಹಂಚುವುದು.
ಜನವರಿ 14ರಂದು ಎಳ್ಳು – ಬೆಲ್ಲವನ್ನು ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ, ಮಕರ ಸಂಕ್ರಾಂತಿಯ ಒಂದು ವಿಶೇಷ. ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಾಂತಿ ಎಂದು ಹೆಸರು. ಈ ಸಂಕ್ರಾಂತಿಯ ಕಾಲ, ಪುಣ್ಯ ಕಾಲವಾಗಿರುತ್ತದೆ. ಮೇಷ ಸಂಕ್ರಾಂತಿ – ವಿಷುವತ್ ಪುಣ್ಯಕಾಲ, ವೃಷಭ ಸಂಕ್ರಾಂತಿ – ವಿಷ್ಣುಪದ ಪುಣ್ಯಕಾಲ, ಮಿಥುನ ಸಂಕ್ರಾಂತಿ – ಷಡಶೀತಿ ಪುಣ್ಯಕಾಲ, ಕಟಕ ಸಂಕ್ರಾಂತಿ – ದಕ್ಷಿಣಾಯನ ಪುಣ್ಯಕಾಲ, ಸಿಂಹ ಸಂಕ್ರಾಂತಿ ವಿಷ್ಣುಪದ ಪುಣ್ಯಕಾಲ, ಕನ್ಯಾ ಸಂಕ್ರಾಂತಿ – ಷಡಶೀತಿ ಪುಣ್ಯಕಾಲ, ತುಲಾ ಸಂಕ್ರಾಂತಿ – ವಿಷುವತ್ ಪುಣ್ಯಕಾಲ, ವೃಶ್ಚಿಕ ಸಂಕ್ರಾಂತಿ – ವಿಷ್ಣುಪದ ಪುಣ್ಯಕಾಲ, ಧನಸ್ಸು ಸಂಕ್ರಾಂತಿ – ಷಡಶೀತಿ ಪುಣ್ಯಕಾಲ, ಮಕರ ಸಂಕ್ರಾಂತಿ – ಉತ್ತರಾಯಣ ಪುಣ್ಯಕಾಲ, ಕುಂಭ ಸಂಕ್ರಾಂತಿ – ವಿಷ್ಣುಪದ ಪುಣ್ಯಕಾಲ, ಮೀನ ಸಂಕ್ರಾಂತಿ – ಷಡಶೀತಿ ಪುಣ್ಯಕಾಲವೆಂದು ಪ್ರಸಿದ್ದಿಯಾಗಿದೆ.
ವಿಷ್ಣುಪದ ಪುಣ್ಯಕಾಲಕ್ಕಿಂತಲೂ, ಷಡಶೀತಿ ಪುಣ್ಯಕಾಲ ಶ್ರೇಷ್ಠವಾಗಿದೆ. ಷಡಶೀತಿ ಪುಣ್ಯ ಕಾಲಕ್ಕಿಂತಲೂ, ವಿಷ್ಣುವತ್ ಪುಣ್ಯಕಾಲ ಶ್ರೇಷ್ಠವಾಗಿದೆ. ವಿಷ್ಣುವತ್ ಪುಣ್ಯಕಾಲಕ್ಕಿಂತಲೂ ಆಯನ ಪುಣ್ಯ ಕಾಲ ಅತ್ಯಂತ ಶ್ರೇಷ್ಠವಾಗಿದೆ. ದಕ್ಷಿಣಾಯನ ಕಾಲಕ್ಕಿಂತಲೂ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.
ಸಂಕ್ರಾಂತಿ ಪುಣ್ಯ ಕಾಲದಲ್ಲಿ, ನದಿ ಸ್ನಾನ, ದೇವತೆಗಳಿಗೆ, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ಪ್ರಶಸ್ತವೆನಿಸಿದ್ದು, ವಿದ್ಯುಕ್ತವಾಗಿ ನಡೆಸಬೇಕಾದ ಕಾರ್ಯಗಳು.
ಆಯನವೆಂದರೆ ಸೂರ್ಯನು ಚಲಿಸುವಮಾರ್ಗ, ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ವಾಲಿ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ.
ಈ ದಿನ ಶ್ರೀರಾಮ ರಾವಣನನ್ನು ಸಂಹರಿಸಿ ಸೀತೆಯನ್ನು ತಂದ ದಿನವೆಂದು ಹೇಳುತ್ತಾರೆ. ಅಲ್ಲದೆ ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ಈ ದಿನ ತಮ್ಮ-ತಮ್ಮ ಮನೆಯಂಗಳಕ್ಕೆ ಬರುತ್ತಾರೆಂದು ಹೇಳಲಾಗುತ್ತದೆ.
ಶಾಸ್ತ್ತ್ರ ದೃಷ್ಟಿಯಲ್ಲಿ ಸಂಕ್ರಾಂತಿ ನಿರ್ಣಯಸಿಂಧುವಿನಲ್ಲಿ ಈ ಹಬ್ಬದ ವಿಚಾರವಾಗಿ ಹೀಗೆ ಹೇಳಿದೆ
ಶಿತಸ್ಯಾಂ ಕೃಷ್ಣತೈಲೈಃ ಸ್ನಾನ ಕಾಯರ್ಂ ಚೋದ್ವರ್ತನಂ ಶುಭೈಃ, ತಿಲಾ ದೇಯಾಶ್ಚ ವಿಪ್ರೇಭ್ಯೌ ಸರ್ವದೇವೋತ್ತರಾಯಣೇ, ತಿಲ ತೈಲೇನ ದೀಪಾಶ್ಚ ದೇಯಾಃ ದೇವಗೃಹೇ ಶುಭಾಃಷಿ, ಸಂಕ್ರಾಂತಿಯಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಬ್ರಾಹ್ಮಣರಿಗೆ ಎಳ್ಳು ದಾನ ಕೊಡಬೇಕು. ದೇವಾಲಯಗಳಲ್ಲಿ ಎಳ್ಳೆಣ್ಣೆಯ ದೀಪ ಬೆಳಗಬೇಕು.
ಧರ್ಮ ಸಿಂಧುವಿನಲ್ಲಿ ಹೀಗೆ ಹೇಳಿದೆ
ಶಿಸಂಕ್ರಾಂತೌ ಯಾನಿ ದತ್ತಾನಿ ಹವ್ಯ – ಕವ್ಯಾನಿ ದಾತೃಭಿಃ, ತಾನಿ ನಿತ್ಯಂ ದದಾತ್ಯಕರ್ಃ ಪುನರ್ಜನ್ಮನಿ ಜನ್ಮನಿ|, ತಿಲಾ ದೇಯಾಶ್ಚ ಹೋತವ್ಯಾ ಭಕ್ಷಾಶ್ಚೈವೋತ್ತರಾಯಣೇಷಿ ಅಂದರೆ ಉತ್ತರಾಯಣದ ಪುಣ್ಯಕಾಲದಂದು ನಾವು ಮಾಡಿದ ದಾನ ಧರ್ಮಗಳು ಜನ್ಮ ಜನ್ಮದಲ್ಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಈ ಶುಭದಿನ ತಿಲದಾನ, ತಿಲಹೋಮ, ತಿಲಭಕ್ಷಣಗಳಿಗೆ ವಿಶೇಷ ಪ್ರಾಶಸ್ತ್ಯವಿದೆ.
ಈ ಹಬ್ಬಕ್ಕೂ ಎಳ್ಳಿಗೂ ನಿಕಟ ಸಂಬಂಧವಿದೆ. ಎಳ್ಳು-ಚಿಗಳಿ ಸಂಕ್ರಾಂತಿ ಎಳ್ಳು, ಎಳ್ಳು ಬೀಸಿ ಬೆಲ್ಲ ಹಾಕಿ ಮಾಡಿದ ಎಳ್ಳು ನೀರು ಅಪ್ಯಾಯಮಾನವಾಗಿರುತ್ತದೆ. ಶೀತ-ವಾತ ಜನ್ಯವಾದ ಜಡ್ಡು ಅಲಸ್ಯಗಳನ್ನು ದೂರ ಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವೆನೆ, ದಾನ-ಧರ್ಮ ಈ ಹಬ್ಬದ ವೈಶಿಷ್ಟ್ಯ. ಯುಗಾದಿಯಂದು ಬೇವು-ಬೆಲ್ಲ ಹಂಚುವಂತೆ, ಇಲ್ಲಿ ಎಳ್ಳು-ಬೆಲ್ಲ ಹಂಚುವುದು, ಮನಸ್ಸಿನ ಕಹಿ ಭಾವನೆ ಮರೆತು ಸಿಹಿ ಭಾವ ತುಂಬಿ ಅಮೃತ ಪುತ್ರರಾಗೋಣ ಎಂಬುದರ ದ್ಯೌತಕವಾಗಿದೆ. ಗಣೇಶಚತುರ್ಥಿ, ದೀಪಾವಳಿಗಳಂದು ಕಂಡುಬರುವ ಬಾಹ್ಯಾಡಂಬರ, ಬಾಣ ಬಿರುಸುಗಳೇ ಮುಂತಾದ ವ್ಯರ್ಥವಾದ ಖರ್ಚು-ವೆಚ್ಚಗಳು ಇಲ್ಲದಿರುವುದು ಈ ಹಬ್ಬದ ಅಗ್ಗಳಿಕೆಯೆನ್ನಬಹುದು.
ಎಳ್ಳು – ಬೆಲ್ಲ, ಶೀತ – ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ ಈ ಸಂಕ್ರಾಂತಿಯ ವೈಶಿಷ್ಟ. ಶಿಎಳ್ಳು – ಬೆಲ್ಲ ತಿಂದು ಒಳ್ಳೆ ಮಾತಾಡುಷಿ ಎನ್ನುವುದೇ ಮಕರ ಸಂಕ್ರಾಂತಿಯ ಸಂದೇಶವಾಗಿದೆ.

ಲಾಲ್ ಬಹಾದುರ್ ಶಾಸ್ತ್ರಿ

ಲಾಲ್ ಬಹಾದುರ್ ಶಾಸ್ತ್ರಿ (ಅಕ್ಟೋಬರ್ 02, 1904 – ಜನವರಿ 11, 1966) ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು.
ಜೀವನ
ಲಾಲ್ ಬಹಾದುರ್ ಮೊಘಲ್ ಸಾರಾಯ್‍ನಲ್ಲಿ ಜನಿಸಿದ್ದು. 1921ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. 1926 ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಒಟ್ಟು 9 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ 1946 ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.

ಗಾಂಧೀಜಿಯವರ ಜನ್ಮದಿನದಂದೇ ಜನ್ಮದಿನ
ಭಾರತ ಸರಕಾರಕ್ಕೆ ಸಲ್ಲಿಸಿದ ಸೇವೆ
ಸ್ವಾತಂತ್ರ ದೊರಕಿದ ಬಳಿಕ ಇವರು ಗೋವಿ0ದ ವಲ್ಲಭ ಪ0ತ್ ಅವರ ಸರಕಾರದಲ್ಲಿ ಪೆÇೀಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. 1951ರಲ್ಲಿ ಇವರು ಲೋಕ ಸಭೆಗೆ ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು. ಇದರ ಪರ್ಯಾಯ ಇವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದೂ ಉಂಟು.
ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ಖಾತೆಗೆ ರಾಜೀನಾಮೆ ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್‍ಗೆ ಮರಳಿದರು. ಮೊದಲು ಸಾರಿಗೆ ಮಂತ್ರಿ ಯಾಗಿ, ಬಳಿಕ 1961ರಲ್ಲಿ ಗೃಹ ಮಂತ್ರಿಯಾಗಿದ್ದರು. ಮೇ 27, 1964ರಂದು ಜವಾಹರ್‍ಲಾಲ್ ನೆಹರು ತಮ್ಮ ಕಾರ್ಯಕಾಲದಲ್ಲಿ ಸಾವನ್ನಪ್ಪಿದರು.
ಸ್ವಲ್ಪ ಮಟ್ಟಿಗೆ ಖಾಲಿ ಖಾಲಿಯಾದ ರಾಜಕೀಯ ರಂಗವನ್ನು ಬಿಟ್ಟು ಅಗಲಿದ್ದರು. ಕಾಂಗ್ರೆಸ್‍ನ ಕೆಲವು ಪ್ರಮುಖ ಆಸ್ತಿಗಳಿಗೆ ತಮಗೆ ಬೇಕಾದ ಬೆಂಬಲ ಸಿಗದ ಕಾರಣ ತುಂಬಾ ಸರಳ ಅಧಿಕಾರ ದಾಹಿಯೇ ಅಲ್ಲದ ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ ಜೂನ್ 9 ರಂದು ಭಾರತದ ಪ್ರಧಾನಿಯಾದರು.
ಪ್ರಧಾನಿಯಾಗಿ ಲಾಲ್ ಬಹಾದುರ್ ಶಾಸ್ತ್ರಿಗಳು
ಆಗಿನ ಪ್ರಮುಖ ಸಮಸ್ಯೆ ಪಾಕಿಸ್ತಾನವಾಗಿತ್ತು. ಕಚ್ ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-bಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾರತದ ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿ ಕೊಳ್ಳಲಾಯಿತು.
ಜನವರಿ 1966ರಲ್ಲಿ ಶಾಸ್ತ್ರಿ ಮತ್ತು ಮಹಮ್ಮದ್ ಆಯೂಬ್ ಖಾನ್ ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್ ಅವರಿಂದ ಆಯೋಜಿಸಲಾದ ಟಾμÉ್ಕಂಟ್‍ನಲ್ಲಿ ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ 10 ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಅದೇ ಟಾಶ್ಕೆಂಟ್ ಡಿಕ್ಲೆರೇಶನ್.
ಮರುದಿನವೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು; ಆದರೆ ಪಾಕಿಸ್ತಾನದವರೇ ಅವರ ಊಟದಲ್ಲಿ ವಿಷವನ್ನು ಹಾಕಿ ಕೊಂದರು ಎಂಬ ಊಹೆ ಇದೆ. ಆದರೆ ಅದನ್ನು ಅಲ್ಲಿಯ ವೈದ್ಯರು ದೃಡಪಡಿಸಿಲ್ಲ.
ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರಧಾನ ಮಂತ್ರಿ ಹಾಗು ಈ ತರಹದ ದುರಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು.

ಪ್ರಾಮಾಣಿಕ, ಸ್ವಾಭಿಮಾನಿ
ಇವರು ಬಹುಶಃ ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು.

ಶಾಸ್ತ್ರಿ ಸೋಮವಾರ
ಇವರು ಭಾರತವನ್ನು ಸ್ವಾಭಿಮಾನಿ ದೇಶವಾಗಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರ ದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲ ಭಾರ ಅಧಿಕವಾಯಿತು.
ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹ ವಾಗುವುದೆಂದು ಲೆಕ್ಕಾಚಾರಹಾಕಿ, ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯದಂತಿದೆ.
ಪ್ರಶಸ್ತಿಗಳು
ಇವರಿಗೆ ಮರಣಾನಂತರ ಭಾರತ ರತ್ನವನ್ನು ಪ್ರಧಾನ ಮಾಡಲಾಯಿತು. ಇವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಇವರ ಜನಪ್ರಿಯ ವಾಕ್ಯ ಜೈ ಜವಾನ್, ಜೈ ಕಿಸಾನ್ ಇಂದಿಗೂ ಚಿರವಾಗಿ ಉಳಿದಿದೆ.

ಸಾವು
1965 ರ ಇಂಡೋ-ಪಾಕಿಸ್ತಾನ ಯುದ್ಧವನ್ನು ಕೊನೆಗೊಳಿಸಲು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಒಂದು ದಿನದ ನಂತರ 11 ಜನವರಿ 1966 ರಂದು ಶಾಸ್ತ್ರಿ ತಾμÉ್ಕಂಟ್, ಉಜ್ಬೇಕಿಸ್ತಾನ್ (ಆಗಿನ ಸೋವಿಯತ್ ಒಕ್ಕೂಟ) ನಲ್ಲಿ ನಿಧನರಾದರು. ಶಾಸ್ತ್ರಿಯವರ ಬೆಂಬಲಿಗರು ಮತ್ತು ನಿಕಟ ಸಂಬಂಧಿಗಳಲ್ಲಿ ಅನೇಕರು, ಆ ಸಮಯದಲ್ಲಿ ನಿರಾಕರಿಸಿದರು ಮತ್ತು ಅವರ ಸಾವಿನ ಸಂದರ್ಭಗಳನ್ನು ನಂಬಲು ನಿರಾಕರಿಸಿದ್ದಾರೆ ಮತ್ತು ನಿಷ್ಪ್ರಯೋಜಕತೆಯನ್ನು ಆರೋಪಿಸಿದ್ದಾರೆ. ಅವರ ಸಾವಿನ ಕೆಲವೇ ಗಂಟೆಗಳಲ್ಲಿ ಪಿತೂರಿ ಸಿದ್ಧಾಂತಗಳು ಕಾಣಿಸಿಕೊಂಡವು ಮತ್ತು ನಂತರವೂ ಮುಂದುವರೆದಿದೆ. ಅವರನ್ನು ರಾಷ್ಟ್ರೀಯ ನಾಯಕ ಎಂದು ಸ್ತುತಿಸಲಾಯಿತು ಮತ್ತು ಅವರ ನೆನಪಿಗಾಗಿ ವಿಜಯ್ ಘಾಟ್ ಸ್ಮಾರಕವನ್ನು ಸ್ಥಾಪಿಸಲಾಯಿತು. ಅವರ ಮರಣದ ನಂತರ, ಗುಲ್ಜಾರಿಲಾಲ್ ನಂದಾ ಮತ್ತೊಮ್ಮೆ ಹಂಗಾಮಿ ಪ್ರಧಾನ ಮಂತ್ರಿಯ ಪಾತ್ರವನ್ನು ವಹಿಸಿಕೊಂಡರು, ಅಲ್ಲಿಯವರೆಗೆ ಕಾಂಗ್ರೆಸ್ ಸಂಸದೀಯ ಪಕ್ಷವು ಮೊರಾರ್ಜಿ ದೇಸಾಯಿಯವರ ಬದಲಿಗೆ ಇಂದಿರಾ ಗಾಂಧಿಯನ್ನು ಅಧಿಕೃತವಾಗಿ ಶಾಸ್ತ್ರಿಯ ಉತ್ತರಾಧಿಕಾರಿಯಾಗಿ ಆಯ್ಕೆಮಾಡುತ್ತದೆ.

ಶಾಸ್ತ್ರಿ ಅವರ ಸಾವಿನ ನಂತರ, ಅವರ ಪತ್ನಿ ಲಲಿತಾ ಶಾಸ್ತ್ರಿ ಅವರು ವಿಷ ಸೇವಿಸಿದ್ದಾರೆ ಎಂದು ಆರೋಪಿಸಿದರು. ಕ್ರಾಂತ್ ಒ. ಐ. ವರ್ಮಾ ಅವರು ಬರೆದ ಲಲಿತಾ ಕೆ ಅನ್ಸೂ ಎಂಬ ಶೀರ್ಷಿಕೆಯ ಹಿಂದಿಯಲ್ಲಿ ಒಂದು ಮಹಾಕಾವ್ಯ ಪುಸ್ತಕವನ್ನು 1978 ರಲ್ಲಿ ಪ್ರಕಟಿಸಲಾಯಿತು. ಈ ಪುಸ್ತಕದಲ್ಲಿ, ಶಾಸ್ತ್ರಿಯವರ ಸಾವಿನ ದುರಂತ ಕಥೆಯನ್ನು ಅವರ ಪತ್ನಿ ಲಲಿತಾ ಅವರು ವಿವರಿಸಿದ್ದಾರೆ.

ಅವರ ಸಾವಿನ ಬಗ್ಗೆ ಭಾರತ ಸರ್ಕಾರ ಯಾವುದೇ ಮಾಹಿತಿಯನ್ನು ನೀಡಲಿಲ್ಲ ಮತ್ತು ಮಾಧ್ಯಮಗಳು ಮೌನವಾಗಿದ್ದವು. ಪಿತೂರಿಯ ಸಂಭವನೀಯ ಅಸ್ತಿತ್ವವನ್ನು ‘ಔಟ್‍ಲುಕ್’ ನಿಯತಕಾಲಿಕೆಯು ಭಾರತದಲ್ಲಿ ಆವರಿಸಿದೆ. ಶಾಸ್ತ್ರಿಯವರ ಸಾವಿಗೆ ಸಂಬಂಧಿಸಿದ ದಾಖಲೆಯನ್ನು ಬಹಿರಂಗಪಡಿಸಲು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಅIಂ’s ಇಥಿe oಟಿ Souಣh ಂsiಚಿ ನ ಲೇಖಕ ಅನುಜ್ ಧರ್ ನಂತರ ಪ್ರಶ್ನೆಯನ್ನು ಕೇಳಿದರು, ಆದರೆ ಇದು ಹಾನಿಗೆ ಕಾರಣವಾಗಬಹುದು ಎಂದು ಉಲ್ಲೇಖಿಸಿ ಪ್ರಧಾನಿ ಕಾರ್ಯಾಲಯವು ಹೊಣೆಗಾರಿಕೆಯನ್ನು ನಿರಾಕರಿಸಿತು. ವಿದೇಶಿ ಸಂಬಂಧಗಳು, ದೇಶದಲ್ಲಿ ಅಡ್ಡಿ ಉಂಟುಮಾಡುತ್ತವೆ ಮತ್ತು ಸಂಸದೀಯ ಸವಲತ್ತುಗಳ ಉಲ್ಲಂಘನೆಯನ್ನು ಉಂಟುಮಾಡುತ್ತವೆ. ಕುಲದೀಪ್ ನಾಯರ್ ಅವರ ಮತ್ತೊಂದು ಆರ್‍ಟಿಐ ಮನವಿಯನ್ನು ತಿರಸ್ಕರಿಸಲಾಗಿದೆ, ಏಕೆಂದರೆ ಪಿಎಂಒ ಮನವಿಯ ಮೇಲಿನ ಬಹಿರಂಗಪಡಿಸುವಿಕೆಯಿಂದ ವಿನಾಯಿತಿಯನ್ನು ಉಲ್ಲೇಖಿಸಿದೆ. ಭಾರತವು ಶಾಸ್ತ್ರಿ ಅವರ ಮರಣೋತ್ತರ ಪರೀಕ್ಷೆಯನ್ನು ನಡೆಸಿದೆಯೇ ಮತ್ತು ಸರ್ಕಾರವು ಫೌಲ್ ಪ್ಲೇಯ ಆರೋಪಗಳನ್ನು ತನಿಖೆ ಮಾಡಿದ್ದರೆ ಎಂಬ ಪ್ರಶ್ನೆಗಳಿಗೆ ಗೃಹ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ. ದೆಹಲಿ ಪೆÇಲೀಸರು ಆರ್‍ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಶಾಸ್ತ್ರಿ ಸಾವಿನ ಬಗ್ಗೆ ತಮ್ಮ ಬಳಿ ಯಾವುದೇ ದಾಖಲೆ ಇಲ್ಲ ಎಂದು ಹೇಳಿದ್ದಾರೆ. ಯಾವುದೇ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈಗಾಗಲೇ ಹೇಳಿದೆ. ದೆಹಲಿ ಪೆÇಲೀಸ್‍ನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ದಿನಾಂಕ 29 ಜುಲೈ 2009 ಅವರ ಉತ್ತರದಲ್ಲಿ, “ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದ ಯಾವುದೇ ದಾಖಲೆಯು ಈ ಜಿಲ್ಲೆಯಲ್ಲಿ ಲಭ್ಯವಿಲ್ಲ. ಆದ್ದರಿಂದ ಅಗತ್ಯವಿರುವ ಮಾಹಿತಿಯು ಸಂಬಂಧಿಸಿದೆ ನವ ದೆಹಲಿ ಜಿಲ್ಲೆಯನ್ನು ದಯವಿಟ್ಟು ಶೂನ್ಯ ಎಂದು ಪರಿಗಣಿಸಬಹುದು.” ಇದು ಹೆಚ್ಚಿನ ಅನುಮಾನಗಳನ್ನು ಸೃಷ್ಟಿಸಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವು ಭಾರತೀಯ ರಾಜಕೀಯದ ಅತ್ಯಂತ ದೊಡ್ಡ ಬಿಡಿಸಲಾಗದ ರಹಸ್ಯಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

ಆರ್‍ಟಿಐ ಅರ್ಜಿಯ ಎರಡು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ ಪಿಎಂಒ, ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದ ಒಂದೇ ಒಂದು ವರ್ಗೀಕೃತ ದಾಖಲೆಯನ್ನು ಹೊಂದಿದೆ, ಇದನ್ನು ಆರ್‍ಟಿಐ ಕಾಯ್ದೆಯಡಿ ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಲಾಗಿದೆ. ಇದು ಉಳಿದ ಪ್ರಶ್ನೆಗಳಿಗೆ ಉತ್ತರಿಸಲು ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ಕಳುಹಿಸಿದೆ. ಹಿಂದಿನ ಸೋವಿಯತ್ ಸರ್ಕಾರದ ಏಕೈಕ ದಾಖಲೆ ಎಂದರೆ “ಆರ್‍ಎನ್ ಚುಗ್, ಡಾಕ್ಟರ್ ಇನ್-ಪ್ರಧಾನಿ ಮತ್ತು ರμÁ್ಯದ ಕೆಲವು ವೈದ್ಯರನ್ನು ಒಳಗೊಂಡ ತಂಡವು ನಡೆಸಿದ ಜಂಟಿ ವೈದ್ಯಕೀಯ ತನಿಖೆಯ ವರದಿ” ಎಂದು ಎಂಇಎ ಹೇಳಿದೆ ಮತ್ತು ಯಾವುದೇ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿಲ್ಲ. ಯುಎಸ್ಎಸ್ಆರ್ ಭಾರತದಲ್ಲಿ ಶಾಸ್ತ್ರಿಯವರ ಮೃತದೇಹದ ಯಾವುದೇ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಗಾಗಿ ಗೃಹ ಸಚಿವಾಲಯವು ದೆಹಲಿ ಪೆÇೀಲೀಸ್ ಮತ್ತು ನ್ಯಾಷನಲ್ ಆರ್ಕೈವ್ಸ್‍ಗೆ ವಿಷಯವನ್ನು ಉಲ್ಲೇಖಿಸಿದೆ.

ನಂತರ, 4 ವರ್ಷಗಳ ಅವಧಿಯಲ್ಲಿ ಮಾಜಿ ಅIಂ ಆಪರೇಟಿವ್ ರಾಬರ್ಟ್ ಕ್ರೌಲಿಯನ್ನು ಸಂದರ್ಶಿಸಿದ ಪತ್ರಕರ್ತ ಗ್ರೆಗೊರಿ ಡೌಗ್ಲಾಸ್ ಅವರ ದೂರವಾಣಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿದರು ಮತ್ತು ಕಾಗೆಯೊಂದಿಗೆ ಸಂವಾದಗಳು ಎಂಬ ಶೀರ್ಷಿಕೆಯ ಪುಸ್ತಕದಲ್ಲಿ ಪ್ರತಿಲೇಖನವನ್ನು ಪ್ರಕಟಿಸಿದರು. ಪುಸ್ತಕದಲ್ಲಿ, ಕ್ರೌಲಿ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ವಿಯೆನ್ನಾದಲ್ಲಿ ಸಮ್ಮೇಳನದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಆಲ್ಪ್ಸ್‍ನಲ್ಲಿ ವಿಮಾನ ಪತನಗೊಂಡ ಭಾರತೀಯ ಪರಮಾಣು ವಿಜ್ಞಾನಿ ಹೋಮಿ ಭಾಭಾ ಅವರನ್ನು ತೊಡೆದುಹಾಕಲು ಅIಂ ಕಾರಣವಾಗಿದೆ ಎಂದು ಹೇಳಿದ್ದಾರೆ. ಪರಮಾಣು ರೀತಿಯಲ್ಲಿ ಭಾರತದ ಕಟ್ಟುನಿಟ್ಟಿನ ನಿಲುವು ಮತ್ತು ಪರಮಾಣು ಪರೀಕ್ಷೆಗಳೊಂದಿಗೆ ಮುಂದುವರಿಯಲು ಬಯಸಿದ್ದ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಯುಎಸ್‍ಎ ಜಾಗರೂಕವಾಗಿದೆ ಎಂದು ಕ್ರೌಲಿ ಹೇಳಿದರು. ಈ ಪ್ರದೇಶದ ಮೇಲೆ ಭಾರತ ಮತ್ತು ರμÁ್ಯಗಳ ಸಾಮೂಹಿಕ ಪ್ರಾಭಲ್ಯದ ಬಗ್ಗೆ ಏಜೆನ್ಸಿಯು ಚಿಂತಿಸುತ್ತಿದೆ ಎಂದು ಅವರು ಹೇಳಿದರು, ಇದಕ್ಕಾಗಿ ಬಲವಾದ ಪ್ರತಿಬಂಧಕ ಅಗತ್ಯವಿದೆ.