ಮೈಸೂರು: ನಂಜನಗೂಡು ದೇಶದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದಾದ ನಂಜನಗೂಡು ತಾಂಡುಪುರ ಎಂಐಟಿ ಕಾಲೇಜಿನಲ್ಲಿ ಮಾರ್ಚ್ 23ರಿಂದ ಎರಡು ವಾರಗಳ ಕಾಲ ಉಚಿತ ಸಿಇಟಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಎಂದು ಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ವೈ ಟಿ ಕೃಷ್ಣೇಗೌಡ ತಿಳಿಸಿದರು. ಕನಸಿನ ಭಾರತ ಪತ್ರಿಕೆಯೊಂದಿಗೆ ಮಾತನಾಡಿದ ಅವರು ನಂಜನಗೂಡಿನ ನಮ್ಮ ಕಾಲೇಜಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ 23 ರಿಂದ ತರಬೇತಿ ಶಿಬಿರ ಆರಂಭವಾಗಲಿದೆ. ಶಿಬಿರದಲ್ಲಿ ಅನುಭವವೇ ನುರಿ ಉಪನ್ಯಾಸಕರಗಳು ಹಾಗೂ ಸರಕಾರಿ ನೋಡಲ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ನರಸೀಪುರ ಎಚ್ ಡಿ ಕೋಟೆ ಗುಂಡ್ಲುಪೇಟೆ ಕೆ ಆರ್ ನಗರ ಕೆಆರ್ ಪೇಟೆ, ಹುಣಸೂರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದ್ದು, ಶಿಬಿರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ ಹಾಗೂ ಕಲಿಕೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳಿಗೆ ಉತ್ತಮ ರಚನಾತ್ಮಕ ಮತ್ತು ಪ್ರಯೋಜನಕಾರಿ ಅಧ್ಯಯನ ಸಾಮಗ್ರಿ ಒದಗಿಸುವ ಕಾರಣಕ್ಕೆ 999 ರೂ ನೊಂದಣಿ ಶುಲ್ಕವನ್ನು ನಿಗದಿ ಮಾಡಲಾಗಿದೆ ಇದರ ಹೆಚ್ಚಿನ ಮಾಹಿತಿಗಾಗಿ ಮಹಮದ್ ಸಲಾಮತ್, ಪ್ರದೀಪ್9980832371 ಮತ್ತು8310854887, ಇವರನ್ನು ಸಂಪರ್ಕಿಸಬಹುದು ಎಂದು ಎಂಐಟಿ ಪ್ರಾಂಶುಪಾಲರು ಕನಸಿನ ಭಾರತ ಪತ್ರಿಕೆಯ ಮೂಲಕ ಕೋರಿದ್ದಾರೆ
