ಸೃಷ್ಟಿಕರ್ತನಾದ ಪರಮೇಶ್ವರ ನಾನಾ ರೂಪದಲ್ಲಿ ಗೋಚರಿಸುತ್ತಾನೆ. ಒಂದು ಹುಲ್ಲು ಕಡ್ಡಿಯು ಅಲುಗಾಡಲು ಶಿವನ ಅನುಮತಿ ಬೇಕು ಎಂಬುದು ಭಕ್ತರ ನಂಬಿಕೆ. ಆದ್ದರಿಂದ ಪ್ರಕೃತಿಯೇ ಮಹದೇವ ಎಂಬ ನಂಬಿಕೆ ರಲ್ಲಿ ಆಳವಾಗಿ ಬೇರೂರಿದೆ. ಪಂಚಮಹಾಭೂತ ಗಳಿಂದ ಈ ಜೀವಲೋಕ ಸೃಷ್ಟಿಯಾಯಿತು ಎಂದು ಮಾತಿದೆ ಸೃಷ್ಟಿ, ಸ್ಥಿತಿ, ಲಯ, ಗಳಿಗೆ ಬ್ರಹ್ಮ, ವಿಷ್ಣು, ಪರಮೇಶ್ವರರು ಕಾರಣ ಎಂಬುದು ನಮಗೆ ತಿಳಿದಿದೆ, ಕವಿ ಕುಲ ಗುರು ಎನಿಸಿಕೊಂಡಿರುವ ಮಹಾಕವಿ ಕಾಳಿದಾಸರು”ಪಾರ್ವತಿ ಪರಮೇಶ್ವರರು” ಜಗತ್ತಿಗೆ ತಂದೆ ತಾಯಿಗಳಾದ ದಂಪತಿಗಳು ಎಂದು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಭಾರತ ಪುಣ್ಯ ಸ್ತನಗಳ ನಾಡು ಎಲ್ಲಿ ಅನೇಕ ದೇವದೇವತೆಗಳ ಆವಾಸಸ್ಥಾನವಾಗಿದೆ. ಮಠ ಮಂದಿರಗಳು ಸ್ಥಾಪಿತವಾಗಿದೆ. ಅವುಗಳಿಗೆ ಅದರದ್ದೇ ಆದ ಇತಿಹಾಸ ಇದೆ, ಇದೇ ರೀತಿ ನಮ್ಮ ಗರಳಪುರಿ ಅಂದರೆ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ಮಂದಿರಕ್ಕೂ ಒಂದು ದಂತಕಥೆ, ಇತಿಹಾಸ ಹಾಗೂ ಸ್ಕಂದ ಪುರಾಣ ಗಳಲ್ಲಿ ಉಲ್ಲೇಖ ವಾಗಿದೆ.
ಒಂದು ಕಾಲದಲ್ಲಿ ಗರುಳಾಪುರಿ ಎಂಬ ಹೆಸರು ಪಡೆದಿದ್ದ, ಈ ನಂಜನಗೂಡಿನ ಕ್ಷೇತ್ರದ ಮಹಿಮೆ ಯನ್ನು ಸೂತರು ಶೌನಕಾದಿ ಮುನಿಗಳಿಗೆ ವಿವರವಾಗಿ ಪುರಾಣ ರೂಪದಲ್ಲಿ ತಿಳಿಸಿದರು. ಸ್ಕಂದ ಪುರಾಣದಲ್ಲಿರುವ ಸಂಸ್ಕೃತ ಸಾಹಿತ್ಯವೇ ಇದರ ಆಧಾರವಾಗಿದೆ. ಕೈಲಾಸ ಅಧಿಪತಿ ಯಾದ ಮಹದೇವ ಶಂಕರನೊಂದಿಗೆ ಆತನ ಅರ್ಧಾಂಗಿನಿ ಯಾದ ಪಾರ್ವತಿ ಮಾತೆಯು ಲೋಕದ ಹಿತಕ್ಕಾಗಿ ಪ್ರಭು ಮಾನವನ ಜೀವನದಲ್ಲಿ ಆವರಿಸಿರುವ ಕಾಮ, ಕ್ರೋಧ, ಮದ, ಮಾತ್ಸರ್ಯ ರಾಧಿ ಪ್ರಕಾರದ ವಿಷದ ನಂಜನ್ನು ಪರಿಹರಿಸಿಕೊಳ್ಳಲು ಯಾವುದಾದರೂ ಒಂದು ಪುಣ್ಯಸ್ಥಳ ಭೂಲೋಕದಲ್ಲಿ ಇದೆಯೇ? ಎಂದು ತಾಯಿ ಜಗನ್ಮಾತೆ ಭಗವಾನ್ ಶಂಕರನನ್ನು ಪ್ರಶ್ನೆ ಮಾಡಿದಳು. ಜಗತ್ತಿಗೆ ತಂದೆ ತಾಯಿಗಳು ಶಿವ ಪಾರ್ವತಿ ಯರಿಗೆ ನಡೆದ ಈ ಸಂವಾದ ಕುರಿತು ಶಿವನು ಆ ಪುಣ್ಯ ಸ್ಥಳದ ಉಲ್ಲೇಖ ಇದೆ ಅದೇ “ಗರಳಾಪುರಿ ಮಹಾತ್ಮೆ”ಎಂಬ ಹೆಸರಿನಿಂದ ಸ್ಕಂದ ಪುರಾಣ ಭಾಗದಲ್ಲಿ ನೋಡಬಹುದಾಗಿದೆ. ಗರುಳಪುರಿ ಮಹಾತ್ಮೆಯನ್ನು ಕೈಲಾಸ ಅಧಿಪತಿಯಾದ ಶಂಕರನು ತುಂಬಾ ಸ್ವಾರಸ್ಯಕರವಾಗಿ ಹೀಗೆ ವಿವರಿಸಿದೆನು.
ಒಂದು ಕಾಲದಲ್ಲಿ ದೇವಾ ದಾನವರು ಇಬ್ಬರು ಮಂದಾರ ಪರ್ವತವನ್ನು ಕಡಗೋಲನ್ನಾಗಿ ಮಾಡಿ ಶಿವನ ಕೊರಳ ಹಾರವಾದ ವಾಸುಕಿ ನಾಗನನ್ನು ಅದಕ್ಕೆ ಸುತ್ತಿ ಹಾಕಿ, ಒಂದು ಭಾಗ ದೇವತೆಗಳು ಮತ್ತೊಂದು ಭಾಗ ದಾನವರಿಗೆ ಹೀಗೆ ವಾಸಕಿಯ ಮುಖದ ಭಾಗ ಒಬ್ಬರು ಬಾಲದ ಭಾಗ ಒಬ್ಬರು ಹೀಗೆ ವಿಭಾಗ ಮಾಡಿಕೊಂಡು ಸಮುದ್ರಮಂತನ ಮಾಡಲು ನಿರತರಾದರು. ದೇವ ದಾನವರು ನಡೆಸುತ್ತಿದ್ದ ಈ ಮಂಥನದಿಂದ ಅಮೂಲ್ಯವಾದ ರತ್ನಗಳು ಹೊರಬಂದವು ಅವುಗಳನ್ನು ದೇವ ದಾನವರು ಹಂಚಿಕೊಂಡರು. ಹೀಗೆ ಮಂಥನವನ್ನು ಮುಂದುವರಿಸುತ್ತಾ ಮುಂದುವರಿಸುತ್ತಾ ಕಾರ್ಕೋಟಕ ವಾದ ವಿಷ ಹೊರಬಂದಿತು ಅದರ ಪ್ರಭಾವದಿಂದ ಮೂರು ಲೋಕಗಳು ತಲ್ಲಣಿಸಿ ಹೋದವು. ದೇವತೆಗಳು ರಕ್ಕಸರು ನಡುಗಿ ಹೋದರು. ಆಗ ಲೋಕದ ರಕ್ಷಣೆಗಾಗಿ ದಾವಿಸಿ ಬಂದ ದೇವಾದಿ ದೇಮಹಾದೇವ ಕಾರ್ಕೋಕೋ ವಿಷಯವನ್ನು ತಾನೇ ಕುಡಿದ. ಹೀಗೆ ಕುಡಿಯುವ ಸಂದರ್ಭದಲ್ಲಿ ಈ ವಿಷದ ಕೆಲವು ಹನಿಗಳು ಕೆಳಗಡೆ ಬಿದ್ದವು ಆ ಬಿದ್ದ ಸ್ಥಳವೇ ಗರಳಪುರಿ ಆಗ ಅಲ್ಲಿ ಕೇಶಿ ಎಂಬ ದಾನವ ಆ ವಿಷದ ಹನಿಗಳನ್ನು ತನ್ನ ಬಳಿ ಇಟ್ಟುಕೊಂಡ ವಿಷವನ್ನು ಕುಡಿದ ಶಿವ ನೀಲಕಂಠನಾದ ಹೀಗೆ ಭಗವಾನ್ ಶಿವನು ತ್ರಿಲೋಕವನ್ನ ರಕ್ಷಿಸಿದ ನಂತರ ಸಮುದ್ರ ಮಂಥನ ಮುಂದುವರೆಯಿತು ಸಮುದ್ರ ಮಂಥನದಿಂದ ಅತ್ಯಂತ ಅಮೂಲ್ಯ ವಸ್ತುಗಳು ಹೊರಬಂದವು ಹೀಗೆ ಮಂಥನ ಮುಂದು ವರದಂತೆ ಸಮುದ್ರದ ಆಳದಿಂದ ಧನ್ವಂತರಿ ದೇವ ಅಮೃತದ ಕಳಸದೊಂದಿಗೆ ಕಾಣಿಸಿಕೊಂಡನು. ಆಗ ಅತ್ಯಂತ ಅಮೂಲ್ಯವಾದ ಅಮೃತಕ್ಕಾಗಿ ದೇವಾ ದಾನವರ ನಡುವೆ ಕಲಹ ಗಳು ನಡೆಯಿತು ಆಗ ಭಗವಾನ್ ಮಹಾವಿಷ್ಣು ಮೋಹಿನಿ ಅವತಾರಕ್ಕೆ ಬಂದು ಎಲ್ಲರಿಗೂ ಸರಿಯಾಗಿ ಅಮೃತವನ್ನು ಹಂಚುವುದಾಗಿ ಹೇಳಿ ಮೊದಲು ದೇವತೆಗಳಿಗೆ ಅಮೃತವನ್ನು ಹಂಚುವುದಕ್ಕೆ ಮೋಹಿನಿ ಯು ಆರಂಭಿಸಿದರು ಹೀಗೆ ಅಮೃತವನ್ನು ಹಂಚುವಾಗ ಅಮೃತದ ಒಂದು ಹನಿ ಗರಳ ಪುರಿಗೆ ಬಂದು ಬಿದ್ದಿತು ಆಗ ಗರಳಪುರಿಯಲ್ಲಿ ಇದ್ದ ದಾನವ ಕೇಶಿಗೆ ಆ ಅಮೃತ ಹನಿ ಸಿಕ್ಕಿತು ಮೊದಲು ಸಿಕ್ಕ ವಿಷದ ಹನಿ ಹಾಗೂ ಈಗ ಸಿಕ್ಕ ಅಮೃತದ ಹನಿ ಎರಡು ಸೇರಿ ಪ್ರಾಶನ ಮಾಡಿದನು ಇದರಿಂದ ವಿಷದ ಜೊತೆ ಅಮೃತ ಅವನ ದೇಹ ಸೇರಿತು. ಕೇಶಿ ಇದರಿಂದ ಅಹಂಕಾರದ ಮದ ಅವನ ಮನ ಸೇರಿತು ಇದರಿಂದ ಭೂಲೋಕದಲ್ಲಿ ಋಷಿಮುನಿಗಳಿಗೆ ಉಪಟಳ ಕೊಡಲು ಆರಂಭಿಸಿದರು ಯಜ್ಞ ಯಾಗಾದಿಗಳನ್ನು ದ್ವಂಸ ಮಾಡಲು ಆರಂಭಿಸಿದನು. ಇವನ ಉಪಟಳವನ್ನು ಸಹಿಸಲಾಗದೆ ಅನೇಕ ಋಷಿಮುನಿಗಳು ದೇವತೆ ಗಳಾದ ಬ್ರಹ್ಮ ಮತ್ತು ವಿಷ್ಣು ಪರಮಾತ್ಮರ ಮೊರೆ ಹೊಕ್ಕರು. ಆಗ ಬ್ರಹ್ಮ ಮತ್ತು ವಿಷ್ಣು ಪರಮಾತ್ಮರು ಋಷಿಗಳಿಗೆ ನೀವು ಭೂಲೋಕದಲ್ಲಿ ಗರಳಾಪುರಿಗೆ ಹೋಗಿ ಅಲ್ಲಿ ರುದ್ರದೇವನ ಕುರಿತು ಹೋಮವನ್ನು ಆಚರಿಸಿ ಆಗ ಕೇಶಿ ರಕ್ಕಸ ಯಜ್ಞವನ್ನು ಹಾಳು ಮಾಡಲು ಬರುತ್ತಾನೆ. ಆ ಸಮಯ ದಲ್ಲಿ ಗಂಗಾಧರನು ತನ್ನ ತ್ರಿನೇತ್ರದಿಂದ ಆ ಕೇಶಿ ದೈತ್ಯ ನನ್ನು ಯಜ್ಞ ಕುಂಡಕ್ಕೆ ಆಹುತಿ ಯಾಗುವಂತೆ ಮಾಡುತ್ತಾನೆ ನಿಮಗೆಲ್ಲಾ ಆ ರುದ್ರದೇವ ಅನುಗ್ರಹಿಸುತ್ತಾನೆ ಚಿಂತಿಸದಿರಿ ಮೊದಲು ಯಾಗವನ್ನು ಮಾಡಿ ಎಂದು ವಿಷ್ಣು ಭಗವಂತ ತಿಳಿಸಿದ ಅದೇ ರೀತಿ ಋಷಿಗಳು ಕಪಿಲ ಮತ್ತು ಕೌಂಡಿಣ್ಯ ನದಿಗಳ ದಂಡೆ ಮೇಲೆ ಹೋಮ ಹವನ ಕಾರ್ಯ ಆಯಿತು ಇದನ್ನು ಕಂಡು ಕೇಶಿ ದೈತ್ಯ ಅದನ್ನ ನಾಶ ಮಾಡಲು ಬಂದ ಆಗ ಪ್ರತ್ಯಕ್ಷನಾದ ರುದ್ರದೇವನ ತನ್ನ ತ್ರಿನೇತ್ರದ ಜ್ವಾಲೆಯಿಂದ ಕೆಶಿ ಯನ್ನು ಸಂಹರಿಸಿದನು. ತದನಂತರ ದೇವತೆಗಳು ಋಷಿಮುನಿಗಳ ಕೋರಿಕೆಯ ವಿನಂತಿಯ ಮೇರೆಗೆ ಭಗವಾನ್ ಶಂಕರ ತಾನು ಗರಳ ಪುರಿ ಎಲ್ಲೇ ನೆಲೆಯಾಗಿ ನಿಲ್ಲುವುದಾಗಿ ಅಭಯ ವನ್ನು ನೀಡಿ ನೆಲೆ ನಿಂತನು ಶಿವನು ನೆಲೆ ನಿಂತ ಸ್ಥಳ ವೇ ಗರುಳಪುರಿ ಎಂದು ಪ್ರಸಿದ್ಧಿಯಾಯಿತು. ಗರಳ ಪುರಿ ಮಹಾತ್ಮೆಯ ಕಥೆಯನ್ನು ತಿಳಿದ ನಂತರ ಪಾರ್ವತಿಯ ಪ್ರಭುವೇ ತಾವು ಕೃಪೆ ಮಾಡಿ ಕಪಿಲ ಹಾಗೂ ಕೌಂಡಿಣ್ಯ ನದಿಗಳ ವಿಚಾರ ತಿಳಿಸಿ ಎಂದು ಕೇಳಿದಾಗ ಭಗವಾನ್ ಶಂಕರನು ಹೀಗೆ ತಿಳಿಸಿದರು ಮಹಾಮುನಿ ಗಳಾದ ಕಪಿಲ ಮಹಾ ಋಷಿಗಳು ತಪಸನ್ನು ಆಚರಿಸುವಾಗ ಅನೇಕ ಅಡೆತಡೆಗಳು ಉಂಟಾದ್ದರಿಂದ ಅವರು ದಕ್ಷಿಣ ಪ್ರದೇಶಕ್ಕೆ ಬಂದು ನೀಲಾಚಲ ವೆಂಬ ಸ್ಥಳದಲ್ಲಿ ಒಂದು ಆಶ್ರಮ ನಿರ್ಮಿಸಿ ತಪೋನಿರತರಾದರು ಅವರ ಕಠೋರ ತಪಸ್ಸನ್ನು ಮೆಚ್ಚಿದ ಶಿವನು ಕಪಿಲ ಮಹಾ ಋಷಿಗೆ ಒಂದು ಆಶೀರ್ವಾದ ನೀಡಿದರು ಏನೆಂದರೆ ಕಪಿಲ ಮಹಾ ಮುನಿಗಳೇ ನಿಮ್ಮ ಬ್ರಹ್ಮ ರಂಧ್ರ ಅಂದರೆ ತಲೆಯ ನೆತ್ತಿ ಯ ಮೇಲ್ಬಾಗದಿಂದ ತಪೋಶಕ್ತಿ ನದಿಯ ರೂಪದಲ್ಲಿ ಧಾರಾಕಾರವಾಗಿ ಹರಿಯಲಿ ಎಂದು ಆಶೀರ್ವದಿಸಿದರು. ನಿಮ್ಮ ಕಪಿಲ ನದಿ ಎಲ್ಲಿ ಯಾರು ಸ್ನಾನವನ್ನು ಮಾಡಿ ನನ್ನ ದರ್ಶನ ಪಡೆಯಲು ಬರುತ್ತಾರೋ ಅವರಿಗೆ ಕೈಲಾಸ ಲೋಕ ದಯಪಾಲಿಸುವೆ ಎಂದು ವರ ಪ್ರಧಾನ ಮಾಡಿದರು. ಅಂದಿನಿಂದ ಕಪಿಲಾ ನದಿ ಈ ಸ್ಥಳದಲ್ಲಿ ಹರಿಯುತ್ತಿದೆ. ಇದು ಕಪಿಲಾ ನದಿಯ ಕಥೆಯಾದರೆ ಕೌಂಡಿಣ್ಯ ನದಿಯ ಬಗ್ಗೆ ತಿಳಿಸಿ ಎಂದು ಶ್ರೀಮಾತೆ ಯು ಪ್ರಭು ಶಂಕರನಲ್ಲಿ ಕೇಳಿದಳು ಆಗ ಶಂಕರನ್ನು ಒಂದು ಕಾಲದಲ್ಲಿ ಕೌಂಡಿಣ್ಯ ಮುನಿ ತಮ್ಮ ಪತ್ನಿ ಸುಶೀಲೆ ಯೊಂದಿಗೆ ಸುಖ ವಾಗಿದ್ದರು ದಂಪತಿಗಳು ಧರ್ಮ ಶ್ರದ್ಧೆ ಭಕ್ತಿಯಿಂದ ಜೀವನ ಸಾಗಿಸುತ್ತಿದ್ದರು. ಕೌಂಡಿಣ್ಯ ದಂಪತಿಗಳು ಮಾಡಿದ ಒಂದು ಸಣ್ಣ ತಪ್ಪಿನಿಂದ ಅವರ ಆಶ್ರಮದಲ್ಲಿ ಕಳ್ಳ ಕಾಕರು ಆಶ್ರಮವನ್ನು ಸಂಪೂರ್ಣವಾಗಿ ದೋಚಿದರು ಹಾಗೂ ಗೋಸ ಸಂಪತ್ತು ನಾಶವಾಯಿತು. ದಂಪತಿಗಳಿಬ್ಬರು ನಿರ್ಗತಿಕರಾದರು ತಾವು ಮಾಡಿದ ಪಾಪ ನಿವಾರಣೆಗಾಗಿ ತೀರ್ಥಕ್ಷೇತ್ರಗಳನ್ನು ಸುತ್ತಿದರು ಹೀಗೆ ನೊಂದ ದಂಪತಿಗಳ ಸ್ವಪ್ನದಲ್ಲಿ ಬಂದ ಭಗವಾನ್ ಶಂಕರನು ನೀವಿಬ್ಬರು ಗೋವರ್ಧನ ಪರ್ವತ ದಲ್ಲಿ ವಾಸಿಸಿ ತಪವನ್ನು ಆಚರಿಸಿ ಒಂದು ಪರ್ವಕಾಲದಲ್ಲಿ ಭಕ್ತಿಯಿಂದ ಅನಂತಪದ್ಮನಾಭ ವ್ರತವನ್ನು ಆಚರಿಸಿ ಇದರಿಂದ ನಿಮ್ಮ ಪಾಪ ನಾಶವಾಗುವುದು ನಂತರ ನೀವು ನದಿಯಾಗಿ ತೊರೆಯಾಗಿ ಹರಿದು ಕೌಂಡಿಣ್ಯ ನದಿಯಾಗಿ ಲೋಕ ಪ್ರಸಿದ್ಧಿ ಆಗುವಿರಿ ನದಿಯಾಗಿ ಹರಿಯುತ್ತಾ ಕಪಿಲ ನದಿಯನ್ನು ಸೇರುವಿರಿ ನೀವು ಹರಿಯುವ ಸ್ಥಳದ ಸಮೀಪದಲ್ಲೇ ನಾನು ಸ್ಥಾಪಿತನಾಗಿರುವೆ ಎಂದು ಆ ದಂಪತಿಗಳಿಗೆ ಭಗವಾನ್ ಶಂಕರನ್ನು ವರವನ್ನು ಕೊಟ್ಟನು.

ಭಗವಾನ್ ಪರಶುರಾಮರು ಮಾತೃ ಹತ್ಯೆ ದೋಷ ಪರಿಹಾರಕ್ಕಾಗಿ ಎಲ್ಲಾ ತೀರ್ಥಕ್ಷೇತ್ರಗಳಿಗೂ ಭೇಟಿ ಕೊಟ್ಟರು ಆದರೆ ಅವರ ಮಾತೃ ಹತ್ಯ ದೋಷ ಪರಿಹಾರ ವಾಗಿದ್ದು ಈ ಗರಳ ಪುರಿ ಕ್ಷೇತ್ರದಲ್ಲೇ ಆದರಿಂದ ಇದನ್ನು ಪರಶುರಾಮ ಕ್ಷೇತ್ರ ಎಂತಲೂ ಕರೆಯಲಾಗುತ್ತದೆ. ದೇವೇಂದ್ರ ನಿಗೂ ಹಾಗೂ ಅಹಲ್ಯಗೂ ಗೌತಮ ಋಷಿಗಳು ಶಾಪವನ್ನು ಕೊಟ್ಟರು. ಇದರಿಂದ ದಿಕ್ಕು ಕಾಣದೆ ಇಂದ್ರನು ಗರುಳ ಪುರಿ ಬಂದು ಕಪಿಲಾ ನದಿಯಲ್ಲಿ ಮಿಂದು ನಂಜುಂಡೇಶ್ವರನ ದರ್ಶನವನ್ನ ಮಾಡಿ ಭಕ್ತಿಯಿಂದ ಬೇಡಿದರು ಇದರ ಫಲವಾಗಿ ಇಂದ್ರನ ಶಾಪ ವಿಮೋಚನೆ ಆಯಿತು. ಮಹಾಮನಿ ಗೌತಮರು ಈ ಕ್ಷೇತ್ರಕ್ಕೆ ಬಂದು ಕಠಿಣ ದೀರ್ಘ ತಪಸ್ಸನ್ನು ಆಚರಿಸಿ ಶಿವನ ಕೃಪೆಗೆ ಪಾತ್ರರಾಗಿ ಶಿವನನ್ನು ಪ್ರಸನ್ನ ಗೊಳಿ ಸಿದರು ಪ್ರತ್ಯಕ್ಷನಾದ ಪರಮಾತ್ಮನು ಗೌತಮರನ್ನು ಆಶೀರ್ವದಿಸಿ ಈ ಕ್ಷೇತ್ರ ಗೌತಮ ಕ್ಷೇತ್ರ ಎಂದು ಹೆಸರಾಗಲಿ ಎಂದು ವರ ನೀಡಿದರು ಗೌತಮರು ಪರಶುರಾಮರು ನಿರ್ಮಿಸಿದ್ದ ನಂಜುಂಡೇಶ್ವರ ಗುಡಿ ಯನ್ನು ವಿಸ್ತರಿಸಿ ಅಂದಿನಿಂದ ಗೌತಮ ಮುನಿಗಳು ರಥೋತ್ಸವವನ್ನು ಏರ್ಪಾಡು ಮಾಡಿದರು ಅವರು ಪ್ರಾರಂಭಿಸಿದ ರಥೋತ್ಸವ ಪ್ರತಿ ವರ್ಷ ಈಗಲೂ ಕೂಡ ಗೌತಮರ ಹೆಸರಿನಿಂದ ಪಂಚ ರಥೋತ್ಸವ ನಡೆಯುತ್ತಿದೆ ರಥದಲ್ಲಿ ಕೂರಿಸುವ ಉತ್ಸವ ನಂಜುಂಡೇಶ್ವರನ ಮೂರ್ತಿಯು ಗೌತಮ ಋಷಿಗಳ ಕಾಲದಿಂದ ಪೂಜಿತ ವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ನಂಜುಂಡೇಶ್ವರನ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ ರಥದಲ್ಲಿ ಕೂತು ಬರುವ ನಂಜುಂಡೇಶ್ವರ ನನ್ನು ಕಣ್ಣಲ್ಲಿ ನೋಡುತ್ತಾ. ಕುಂತವ್ನೆ ರಥಾವ ಏರಿ ದೇವ ನಂಜುಂಡ ಎಂದು ಬಾಯಲ್ಲಿ ಹಾಡುತ್ತಾ ಮನಸಲ್ಲಿ ಆ ಶ್ರೀಕಂಠೇಶ್ವರ ನಂಜುಂಡೇಶ್ವರನನ್ನು ನಮಸ್ಕರಿಸೋಣ
ಸುನಿಲ್ ಕುಮಾರ ಎಸ್.ಲೇಖಕರು ಮತ್ತು ಶಿಕ್ಷಕರು.ನಂಜನಗೂಡು
