ಮೈಸೂರು: ನಂಜನಗೂಡು ಐಟಿಸಿ ಪ್ರಥಮ್ ಸಂಸ್ಥೆ ಇವರ ವತಿಯಿಂದ ತಾಲೂಕು ಮಟ್ಟದ ಗಣಿತ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲೂಕು ಸಾಕ್ಷರ ಹಾಗೂ ಶಿಕ್ಷಣಾಧಿಕಾರಿ ಮಹೇಶ್ ಅವರು ಮಾತನಾಡಿ ತಾಲೂಕು ಎಲ್ಲಾ ಶಾಲೆಗಳ ವತಿಯಿಂದ 70 ಮಕ್ಕಳು ಭಾಗವಹಿಸಿರುವುದು ಖುಷಿಯಾದ ವಿಚಾರವಾಗಿದೆ. ಪ್ರಥಮ್ ಸಂಸ್ಥೆಯು ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯಾದ ವಿಚಾರವಾಗಿದೆ ಈ ರಸಪ್ರಶ್ನೆ ಕಾರ್ಯಕ್ರಮಗಳು ಮಕ್ಕಳಲ್ಲಿ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಸಹಾಯಕವಾಗಿದೆ. ಗಣಿತದ ಬಗ್ಗೆ ಹೆಚ್ಚು ಹೆಚ್ಚು ತಿಳಿಯಬೇಕು ಜ್ಞಾನ ಭಂಡಾರವನ್ನು ಮಕ್ಕಳು ಬೆಳೆಸಿ ಕೊಳ್ಳಬೇಕೆಂದರು. ಪ್ರಥಮ್ ಸಂಸ್ಥೆ ತಾಲೂಕಿನ ಎಲ್ಲಾ ಶಾಲೆಗಳ ಸೇವೆಯಲ್ಲಿ ತೊಡಗಿರುವುದು ಹಾಗೂ ತಾಲೂಕು ಮಟ್ಟದಲ್ಲಿ ಈ ಕ್ವಿಜ್ ಕಾರ್ಯಕ್ರಮವನ್ನು ಏರ್ಪಡಿಸಿರುವುದು ತುಂಬಾ ಹೆಮ್ಮೆಯಾಗಿದೆ ಎಂದರು. ಈ ಸಮಾರಂಭದಲ್ಲಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಧರ್ಮ ರತ್ನಾಕರ, ಸಂಪನ್ಮೂಲ ವ್ಯಕ್ತಿ ಮಹಾದೇವಸ್ವಾಮಿ, ಶಿವಮೂರ್ತಿ, ರಾಚಯ್ಯ, ಬಸವಣ್ಣ, ರಾಜು, ನಾರಾಯಣ ಮತ್ತು ಶಾಲಾ ವಿದ್ಯಾರ್ಥಿಗಳು, ಪೋಷಕರು, ಪ್ರಥಮ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.
