ಚಳಿಗಾಲದ ಸ್ವಾಸ್ಥ್ಯಕ್ಕೆ ಮನೆಮದ್ದು

ಚಳಿಗಾಲದ ಸ್ವಾಸ್ಥ್ಯಕ್ಕೆ ಮನೆಮದ್ದು

Share

ನವೆಂಬರ್ ಮೂರನೇ ವಾರದಿಂದ ಜನವರಿ ಮೂರನೇ ವಾರದವರೆಗೆ ಸುಮಾರು ಎರಡು ತಿಂಗಳು ಹೇಮಂತ ಋತುವಿನ ಸಮಯ. ಅದನ್ನೇ ನಾವು ಚಳಿಗಾಲ ಎನ್ನುತ್ತೇವೆ. ಹೇಮಂತ ಎಂದರೆ ಹಿಮವಂತ ಎಂದರ್ಥ. ಹಿಮ ಪ್ರಧಾನವಾದ ಈ ಋತುವಿನಲ್ಲಿ ಚಳಿ ಜಾಸ್ತಿ. ಚಳಿಯ ಪ್ರಭಾವದಿಂದ ವಾತಾವರಣದಲ್ಲಿ ಶೀತಗುಣ ಅಧಿಕಗೊಳ್ಳುತ್ತದೆ. ಶೀತದಿಂದ ಕಫ ಮತ್ತು ವಾತ ದೋಷಗಳು ಉಲ್ಬಣಗೊಳ್ಳುತ್ತವೆ.
ಚಳಿಗಾಲದಲ್ಲಿ ಕಾಡುವ ಹಾಗೂ ಉಲ್ಬಣಗೊಳ್ಳುವ ಕೆಲವು ಸಮಸ್ಯಗಳು
• ಮಂಡಿನೋವು ಹಾಗೂ ಸೊಂಟನೋವು.
• ಕೆಮ್ಮು ಮತ್ತು ಅಸ್ತಮ
• ಚರ್ಮ ವಿಕಾರಗಳಾದ ಶೀತ ಪಿತ್ತ (ಅರ್ಟಿಕೇರಿಯಾ ) ಮತ್ತು ಕಿಟಿಭ (ಸೋರಿಯಾಸಿಸ್)
• ಕೇಶ ವಿಕಾರಗಳು, ಓಣ ಚರ್ಮ ಇತ್ಯಾದಿ
ಚಳಿಗಾಲವನ್ನು ವಿಸರ್ಗಕಾಲವೆಂದು ಪರಿಗಣಿಸುವ ಕಾರಣ ಈ ಸಮಯದಲ್ಲಿ ಭೂಮಿಯಲ್ಲಿನ ಬಲ ಅಧಿಕಗೊಳ್ಳವುದರಿಂದ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಹಜವಾಗಿ ಬಲ ವೃದ್ಧಿ ಗೊಳ್ಳುವುದು. ಅಂದರೆ ಇತರೆ ಋತುಗಳಿಗೆ ಹೋಲಿಸಿದರೆ ಚಳಿಗಾಲದ ಉತ್ತಮ ವಾತಾವರಣ ಆರೋಗ್ಯವನ್ನು ಕಾಪಾಡುವುದರಲ್ಲಿ ಹೆಚ್ಚು ಲಾಭದಾಯಕವಾಗಿದೆ. ಆರೋಗ್ಯವಂತರಲ್ಲಿ ಸಹಜವಾಗಿ ಬಲ ಹುಮ್ಮಸ್ಸು ಮೊದಲಾದವುಗಳನ್ನು ಹೇಮಂತ ಋತುವಿನಲ್ಲಿ ನೋಡಗಬಹುದು. ಅದೇ ವಾತ ಹಾಗೂ ಕಫ ರೋಗಗಳಿಂದ ಬಳಲುತ್ತಿರುವ ಜನರಲ್ಲಿ ಸಹಜವಾಗಿ ಅನಾರೋಗ್ಯ ಉಲ್ಬಣಗೊಳ್ಳುವುದು ಸಾಮಾನ್ಯ.
ಸಂಧಿವಾತ, ಅನುವಾತ, ಸೊಂಟನೋವು , ಸಯಾಟಿಕಾ, ಕೆಮ್ಮು, ಅಸ್ತಮಾ (ಉಬ್ಬಸ), ಸೋರಿಯಾಸಿಸ್,ಒಣಚರ್ಮ, ಒರಟು ಕೂದಲು , ತಲೆಹೊಟ್ಟು, ಅರ್ಟಿಕೇರಿಯಾ ಇತ್ಯಾದಿ ಸಮಸ್ಯೆಗಳು ಉಧ್ಬವಗೊಳ್ಳಲು ಮತ್ತು ಉಲ್ಬಣಗೊಳ್‍ಳಲು ಈ ಹವಮನ ಕಾರಣ.
ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ?
• ಕಾಯಿಲೆ ಬರದಂತೆ ನೋಡಿಕೊಳ್ಳವುದು ಬುದ್ದಿವಂತಿಕೆ .ಬಂದಾಗ ಕೂಡಲೇ ಉಪಶಮನ ಮಾಡಿಕೊಳ್‍ಳುವುದರಿಂದ ಆರೋಗ್ಯ ವೃದ್ಧಿಸುತ್ತದೆ . ಚಳಿಗಾಲದಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಈ ಸೂತ್ರಗಳನ್ನು ಅನನುಸರಿಸಿದರೆ ಹೆಚ್ಚು ಲಾಭ.
• ಬಿಸಿ ನೀರಿನ ಸೇವನೆ
• ನಿತ್ಯ ಅಭ್ಯಂಗ ಅಥವಾ ವಾರಕ್ಕೆ ಮೂರುಬಾರಿ ಅಭ್ಯಂಗ
• ಈ ಋತುವಿನಲ್ಲಿ ಹಸಿವು ಹೆಚ್ಚಿರುವ ಕಾರಣ ಮಧುರವಾದ ಹಾಗೂ ಸ್ನಿಗ್ಧವಾದ ಬಿಸಿ ಆಹಾರವನ್ನು ಸೇವಿಸಿ.
• ಮೊಸರು, ಮಜ್ಜಿಗೆ, ಹಾಗೂ ಹಣ್ಣುಗಳನ್ನು ಸೇವಿಸುವಾಗ ಕಾಳುಮೆಣಸಿನ ಪುಡಿ ಮತ್ತು ಸೈಂಧವ ಉಪ್ಪನ್ನು ಬಳಸಿ.
• ಉಷ್ಣದಾಯಕ ಉಡುಗೆ ಮತ್ತು ಬಿಸಿಅಡುಗೆ ಅತಿ ಮುಖ್ಯ.
• ಮೆಣಸಿನ ಸಾರು, ಹುರುಳಿ ಕಟ್ಟಿನ ಸಾರು , ಬೇಯಿಸಿದ ತರಕಾರಿಗಳು, ಒಣಹಣ್ಣುಗಳು ಇತ್ಯಾದಿ ಆಹಾರ ಪದಾರ್ಥಗಳ ಸೇವನೆ ಉತ್ತಮ.
• ವ್ಯಾಯಾಮ ಹೆಚ್ಚು ಸೂಕ್ತ.
• ಬಿಸಿಲು ಬಂದಾಗ ವಾಕಿಂಗ್ ಒಳ್ಳೆಯದು.
• ಬಿಸಿನೀರಿನ ಸ್ನಾನ ಹೆಚ್ಚು ಉಪಯುಕ್ತ.

ಯಾವುದು ಬೇಡ

• ತಂಗಳು ಆಹಾರ ಹಾಗೂ ಥಂಡಿ ಪದಾರ್ಥಗಳ ಸೇವನೆ
• ಬೇಕರಿ ಮತ್ತು ಜಂಕ್ ಪದಾರ್ಥಗಳ ಸೇವನೆ
• ಶೀತ ಹಾಗೂ ವಾತ ಹೆಚ್ಚಿಸುವ ಆಹಾರ ಪದಾರ್ಥಗಳ ಸೇವನೆ
• ಆಲೂಗಡ್ಡೆ, ಹಲಸಿನಹಣ್ಣು, ಮೊಸರು, ಅಡಿಕೆ ಸೇವನೆ, ಕಹಿ ಮತ್ತು ಒಗರು ಪದಾರ್ಥಗಳು ಐಸ್ ಕ್ರೀಂ, ತಣ್ಣೀರು ಸೇವನೆ ಇತ್ಯಾದಿ
• ಹಗಲು ನಿದ್ದೆ, ಅಧಿಕ ನಿದ್ದೆ, ಜಾಗರಣೆ ಇತ್ಯಾದಿ.
• ತಣ್ಣೀರಿನ ಸ್ನಾನ, ಅಲಸ್ಯ ಬೇಡ
ಬಿಸಿ ನೀರಿನ ಮಹತ್ವ
ಸಾಮಾನ್ಯವಾಗಿ ಜನರಲ್ಲಿ ಒಂದು ತಪ್ಪು ಕಲ್ಪನೆ ಇದೆ. ನೀರನ್ನು ಶುದ್ಧೀಕರಿಸುವ ಯಂತ್ರಗಳಲ್ಲಿನ ನೀರನ್ನನು ಬಳಸಿದರೆ ಹೆಚ್ಚು ಸೂಕ್ತ ಹಾಗೂ ಅದು ಬಿಸಿನೀರಿಗೆ ಸಮ ಎಂದು ಭಾವಿಸುತ್ತಾರೆ. ಸಂಸ್ಕರಿಸಿದ ತಣ್ಣೀರು ಎಷ್ಟೇ ಶಿದ್ಧವಾಗಿದ್ದರೂ ಅದು ಬಿಸಿನೀರಿಗೆ ಸಮನಾಗಲು ಸಾಧ್ಯವಿಲ್ಲ. ತಣ್ಣೀರಿನಲ್ಲಿ ಶೀತಗುಣ ಪ್ರಧಾನವಾಗಿರುತ್ತದೆ. ಅಂತೆಯೇ ನೀರಿನ ಸಾಂಧ್ರತೆ ಬಿಸಿನೀರಿಗೆ ಹೋಲಿಸಿದಲ್ಲಿ ಹೆಚ್ಚಾಗಿರುತ್ತದೆ. ತಣ್ಣೀರಿನಲ್ಲಿ ಸಾಂಧ್ರತೆ ಹಾಗೂ ಶೀತಗುಣ ಹೆಚ್ಚಿರುವ ಕಾರಣ ಅದು ಕಫದೋಷವನ್ನು ವೃದ್ಧಿಸುತ್ತದೆ. ಹಾಗೂ ಉಲ್ಬನಗೊಳಿಸುತ್ತದೆ. ಆದ್ದರಿಂದ ಮೇಲೆ ತಿಳಿಸಿದ ಸಮಸ್ಯಗಳಲ್ಲಿ ತಣ್ಣೀರಿನ ಸೇವನೆ ಸಹಜವಾಗಿ ಅಪಥ್ಯವಾಗಿರುತ್ತದೆ.
ಜನಸಾಮಾನ್ಯರಲ್ಲಿ ಮತ್ತೊಂದು ತಪ್ಪುಗ್ರಹಿಕೆಯೆಂದರೆ ಬಿಸಿನೀರಿನ ಸೇವನೆಯಿಂದ ದೆಹಕ್ಕೆ ಬಲ ಸಿಗುವುದಿಲ್ಲ ಎಂದು, ಇದು ತಪ್ಪು ,ಬಿಸಿನೀರಿನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಅನೇಕ ರೋಗಗಳನ್ನು ಮಣಿಸಬಲ್ಲ ದಿವ್ಯ ಅಸ್ತ್ರ.
ಬಿಸಿನೀರಿನ ಬಳಕೆಯಲ್ಲಿ ಕಂಡು ಬರುವ ಮತ್ತೊಂದು ವ್ಯತ್ಯಯ ಎಂದರೆ ಬಿಸಿ ನೀರಿಗೆ ತಣ್ಣೀರು ಬೆರೆಸಿ ಕುಡಿಯುವುದು ಇಲ್ಲವೇ ಸ್ವಲ್ಪ ಬಿಸಿ ಮಾಡಿದ ನೀರನ್ನು ಬಿಸಿ ನೀರೆಂದು ಕುಡಿಯುವುದು ಹೀಗೆ ಮಾಡುವುದರದಿಂದ ಯಾವುದೇ ಪ್ರಯೋಜನವಿಲ್ಲ. ನೀರನ್ನು ಚೆನ್ನಾಗಿ ಕುದಿಸಿ (100 ಡಿ.ಸೆ.ವರೆಗೆ) ನೋತರ ಕುಡಿಯಲು ಹಿತಕರವಾಗುವಂತೆ ಆರಿಸಿ ಸೇವಿಸುವುದು ಹೆಚ್ಚು ಪರಿಣಾಮಕಾರಿ.
ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಯಲ್ಲಿ ಹೆಚ್ಚು ಉಪಯುಕ್ತವಾದದ್ದು ಅಭ್ಯಂಗ. ಬಿಸಿನೀರಿನ ಸೇವನೆ ಮತ್ತು ಮಧುರ, ಸ್ನಿಗ್ದ ಆಹಾರದ ಬಳಕೆ ಈ ಸಮಯದಲ್ಲಿ ಆರೋಗ್ಯವನ್ನು ರಕ್ಷಿಸುವಲ್ಲಿ ಹೆಚ್ಚು ಲಾಭದಾಯಕ.
ಬಿಸಿನೀರಿನ ಗುಣಗಳು
• ಕಫ, ವಾತ ರೋಗಗಳಲ್ಲಿ ಹಿತಕಾರಿ
• ನೆಗಡಿ, ಜ್ವರ ಅಸ್ತಮ, ಕೆಮ್ಮುಇತ್ಯಾದಿಗಳಲ್ಲಿ ಬಿಸಿ ನೀರಿನ ಸೇವನೆ ಕಡ್ಡಾಯ
• ಮೂತ್ರ ವಿಕಾರಗಳಲ್ಲಿ ಮೂತ್ರಕೋಶ ಹಾಗೂ ಕಿಡ್ನಿಗಳ ಶುದ್ಧಿಗಾಗಿ ಬಿಸಿನೀರು ಬಳಕೆ ಫಲಪ್ರದ
• ಅಗ್ನಿಮಂದ್ಯ, ಅಜೀರ್ಣ, ಹೊಟ್ಟೆಯುಬ್ಬರ ಇವುಗಳಿU ಬಿಸಿ ನೀರು ಸೇವಿಸಿ
• ಮಂಡಿನೋವು, ಸೊಂಟನೋವು, ಸರ್ವಾಂಗ ಸಂಧಿವಾತ, ಅಮವಾತ ಇತ್ಯಾದಿಗಳಲ್ಲಿ ಹೆಚ್ಚು ಲಾಭದಾಯಕ.
• ಕಿಟಿಭ, ಅರ್ಟಿಕೇರಿಯಾ ಇತ್ಯಾದಿಗಳಲ್ಲಿ ಬಿಸಿನೀರು ಸ್ನಾನಕ್ಕೂ, ಪಾನಕ್ಕೂ ಹಿತಕರ
• ನವ ಜ್ವರದಲ್ಲಿ, ಮಳೆಗಾಲ ಮತ್ತು ಚಳಿಗಾಲದಲ್ಲಿ ಬಿಸಿ ನೀರಿನ ಸೇವನೆ ಅಮೃತಕ್ಕೆ ಸಮ


Share