POST

ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಒತ್ತಾಯ -ಬಸವರಾಜ ಮ್ಯಾಗಳಮನಿ

ಗಂಗಾವತಿ: ಗಂಗಾವತಿ ನಗರಸಭೆ ವ್ಯಾಪ್ತಿಯ ಹೊಸಳ್ಳಿ ರಸ್ತೆಯಲ್ಲಿ ಸುಮಾರು ೧೬ ಎಕರೆ ಭೂಮಿಯಲ್ಲಿ ೫೧೪ ನಿವೇಶನಗಳನ್ನು ನಿವೇಶನ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡಲು ಅರ್ಜಿ ಕರೆದಿದ್ದು, ಅರ್ಜಿ ಸಲ್ಲಿಸಲು ಇದೇ ತಿಂಗಳ ೩೦ನೇ ತಾರೀಖು ಕೊನೆಯದಿನವೆಂದು ನಿಗದಿಪಡಿಸಿರುತ್ತೀರಿ. ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು ಪಡೆಯಲು ಸಾಕಷ್ಟು ಸಮಯ ಬೇಕಾಗಿರುವುದರಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಇಂದು ನಗರಸಭೆಯ ಪೌರಾಯುಕ್ತರಾದ ಅರವಿಂದ ಜಮಖಂಡಿಯವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಮಾತನಾಡಿದರು, ಅಲ್ಲದೇ ವಾರ್ಡ್ ನಂ: ೨೭ (ಹೊಸದು) ರ ಸಮದ್ ಸಾಬ್ ಲೇಔಟ್ ನ ಪಾರ್ಕ್ನ ಜಾಗೆಯಲ್ಲಿ ಅನೇಕ ವರ್ಷಗಳಿಂದ ವಾಸವಿದ್ದ ಬಡ ಕುಟುಂಬಗಳಿಗೆ ನಿವೇಶನ ನೀಡುವುದಾಗಿ ಭರವಸೆ ನೀಡಿ ನಗರಸಭೆಯವರು ತೆರವುಗೊಳಿಸಿರುತ್ತಾರೆ. ಆ ಬಡ ಕುಟುಂಬಗಳು ಬೀದಿಪಾಲಾಗಿದ್ದು, ಸಂಕಷ್ಟದಲ್ಲಿರುತ್ತಾರೆ. ಆದ್ದರಿಂದ ಆ ನಿವೇಶನ ರಹಿತ ಕುಟುಂಬಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಸದರಿ ನಿವೇಶನಗಳನ್ನು ಯಾವುದೇ ಒತ್ತಡ, ಆಮೀಷಗಳಿಗೆ ಮಣಿಯದೇ ನಿಯಮದ ಪ್ರಕಾರ ಅರ್ಹ ಬಡ ನಿವೇಶನರಹಿತ ಕುಟುಂಬಗಳಿಗೆ ಪಾರದರ್ಶಕವಾಗಿ ಹಂಚಿಕೆ ಮಾಡಬೇಕು. ಅನ್ಯಾಯವಾದಲ್ಲಿ ಕೋರ್ಟ್ ಮೊರೆ ಹೋಗಲಾಗುವುದು. ಇದಕ್ಕೆ ಅವಕಾಶ ಮಾಡಿಕೊಡದೇ ಪಾರದರ್ಶಕವಾಗಿ ನಿವೇಶಹ ಹಂಚಿಕೆ ಮಾಡಬೇಕೆಂದು ನಗರಸಭೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೆಚ್.ಎನ್. ಹಂಚಿನಾಳ, ರಗಡಪ್ಪ ಹೊಸಳ್ಳಿ, ದುರುಗಪ್ಪ ಹೊಸಳ್ಳಿ, ಜಡೆಪ್ಪ ಹಂಚಿನಾಳ, ಮಲ್ಲು ಪಾರಿವಾಳ, ಕನಕಪ್ಪ, ಹನುಮೇಶ ಹೊಸಳ್ಳಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ರೂರಲ್ ಐಟಿ ಕ್ವಿಜ್‌ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ

ಪಾಂಡವಪುರ : ತಾಲೂಕಿನ ಎಸ್‌ಟಿಜಿ ಪಬ್ಲಿಕ್ ಶಾಲೆಯಲ್ಲಿ ೧೦ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಎಂ.ಜಯAತ್ ಅವರು ಟಿಸಿಎಸ್ ಕಂಪನಿಯವರು ನಡೆಸುವ ರೂರಲ್ ಐಟಿ ಕ್ವಿಜ್‌ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಮೈಸೂರು ವಿಭಾಗದಿಂದ ವಿಭಾಗೀಯ ಮಟ್ಟದ ಐಟಿ ಕ್ವಿಜ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಕ್ವಿಜ್‌ನಲ್ಲಿ ಒಟ್ಟು ೯ ಜಿಲ್ಲೆಗಳಿಂದ ಭಾಗವಹಿಸಿದ ಒಟ್ಟು ೧೩೫ ವಿದ್ಯಾರ್ಥಿಗಳಿಂದ ೬ ವಿದ್ಯಾರ್ಥಿಗಳಲ್ಲಿ ಮಂಡ್ಯ ಜಿಲ್ಲೆಯಿಂದ ಪ್ರಥಮ ಸ್ಥಾನದಲ್ಲಿ ಎಂ.ಜಯAತ್ ಆಯ್ಕೆಯಾಗಿದ್ದಾರೆ. ಕ್ವಿಜ್‌ನಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಎಂ.ಜಯAತ್ ಅವರನ್ನು ಎಸ್‌ಟಿಜಿ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವರ್ಗ, ಆಡಳಿತ ಮಂಡಳಿ, ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ಲೋಕೇಶ್, ವಿದ್ಯಾರ್ಥಿ ತಂದೆ ಕೆ.ಆರ್.ಮೋಹನ, ಐಸಿಟಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಮತ್ತು ಸಂಪನ್ಮೂಲ ವ್ಯಕ್ತಿ ಕೆ.ಆರ್.ಪೇಟೆ ಹಾಗೂ ತಾಯಿ ಎಸ್.ವೈ.ಅನಿತಾ, ಶಿಕ್ಷಣ ಸಂಯೋಜಕರು ಪಾಂಡವಪುರ ಅವರುಗಳು ಅಭಿನಂದಿಸಿದ್ದಾರೆ.

ಮಂಡ್ಯ ಟು ಇಸ್ರೇಲ್

ಪಾಂಡವಪುರ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಿದ್ದ `ಮಂಡ್ಯ ಟು ಇಸ್ರೇಲ್’ ವೈಜ್ಞಾನಿಕ ಕೃಷಿಯ ಸುತ್ತ ಪಕ್ಷಿನೋಟ ಸಂವಾದ ಕಾರ್ಯಕ್ರಮದಲ್ಲಿ ಪ್ರಗತಿಪರ ರೇಷ್ಮೆ ಕೃಷಿಕ ನವೀನ್ ಸಂಗಾಪುರ ಮಾತನಾಡಿದರು. ಮತ್ತೊಂದು ಚಿತ್ರದಲ್ಲಿ ಇಸ್ರೆಲ್ ಕೃಷಿಯ ವಿಡಿಯೋ ಚಿತ್ರೀಕರಣದೊಂದಿಗೆ ರೈತರಿಗೆ ನವೀನ್ ಸಂಗಾಪುರ ತಿಳಿಸಿಕೊಟ್ಟ ದೃಶ್ಯ.

ಪಾಂಡವಪುರ : ಇಸ್ರೇಲ್ ದೇಶದ ಕೃಷಿ ಬಹಳ ಅದ್ಭುತವಾಗಿದೆ. ಸಂಪೂರ್ಣವಾಗಿ ವೈಜ್ಞಾನಿಕ ಕೃಷಿಯಿಂದ ಅವರು ಜಗತ್ತಿನ ಬಹುಪಾಲು ರಾಷ್ಟçಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಗಳಿಸುತ್ತಾರೆ ಎಂದು ಪ್ರಗತಿಪರ ರೇಷ್ಮೆ ಕೃಷಿಕ ನವೀನ್ ಸಂಗಾಪುರ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಿದ್ದ `ಮಂಡ್ಯ ಟು ಇಸ್ರೇಲ್’ ವೈಜ್ಞಾನಿಕ ಕೃಷಿಯ ಸುತ್ತ ಪಕ್ಷಿನೋಟ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದಕ್ಕೆ ಪೂರಕವಾಗಿ ಅಲ್ಲಿನ ಸರ್ಕಾರ ರೈತರಿಗೆ ಅಗತ್ಯವಾದ ವಿದ್ಯುತ್, ನೀರು ಇತರೆ ಸೌಲಭ್ಯಗಳನ್ನು ವ್ಯತ್ಯಾಸವಿಲ್ಲದೆ ಒದಗಿಸುತ್ತದೆ. ಇದರಿಂದ ರೈತರು ಯಾವುದೇ ಆತಂಕವಿಲ್ಲದೆ ಕೃಷಿಯಲ್ಲಿ ಲಾಭಗಳಿಸುತ್ತಿದ್ದಾರೆ ಎಂದರು.
ಹನಿ ನೀರಾವರಿ ಯೋಜನೆ ಇಸ್ರೇಲ್ ಕೃಷಿಯ ಯಶಸ್ಸಿನ ಗುಟ್ಟಾಗಿದೆ. ಭತ್ತ, ಗೋದಿಯ ಜತೆ ವಿವಿಧ ಹಣ್ಣುಗಳನ್ನು ಅಂತಾರಾಷ್ಟಿçÃಯ ಗುಣಮಟ್ಟದಲ್ಲಿ ಬೆಳೆಯಲಾಗುತ್ತದೆ. ಅಲ್ಲದೇ ಇಲ್ಲಿನ ಮೀನು ಸಾಕಾಣಿಕೆ ಪದ್ಧತಿಯೂ ಅಮೋಘವಾಗಿದೆ. ಹೈನುಗಾರಿಕೆಯಲ್ಲೂ ಇಸ್ರೇಲ್ ಅದ್ಭುತ ಸಾಧನೆ ಮಾಡಿದೆ ಎಂದು ತಿಳಿಸಿದರು.
ನಮ್ಮ ರೈತರು ತಮ್ಮ ಬೆಳೆಗಳನ್ನು ಅಂತಾರಾಷ್ಟಿçÃಯ ಗುಣಮಟ್ಟದಲ್ಲಿ ಬೆಳೆದಾಗ ಮಾತ್ರ ಲಾಭ ಗಳಿಸಲು ಸಾಧ್ಯ. ಭಾರತದ ಕೃಷಿ ವಿಧಾನದಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕು. ಜನರು ಇಲ್ಲಿನ ಪಾರಂಪರಿಕ ಕೃಷಿ ಪದ್ಧತಿಯ ಜತೆಗೆ ಕಾಲಾನುಕಾಲಕ್ಕೆ ಬದಲಾಗುವ ವೈಜ್ಞಾನಿಕ ಕೃಷಿಗೆ ತಮ್ಮನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಹಸಿಲ್ದಾರ್ ಪ್ರಮೋದ್ ಎಲ್.ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿ ಪ್ರಧಾನವಾದ ಪಾಂಡವಪುರ ತಾಲೂಕಿನಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡುವವರ ಸಂಖ್ಯೆ ತೀರಾ ಕಡಿಮೆ. ನವೀನ್ ಸಂಗಾಪುರ ಅವರಂತಹ ಪ್ರಗತಿಪರ ರೈತರು ಸಂವಾದ, ಚರ್ಚೆ, ಗೋಷ್ಠಿಗಳ ಮೂಲಕ ರೈತರನ್ನು ವೈಜ್ಞಾನಿಕ ಪದ್ಧತಿಗೆ ಆಕರ್ಷಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಪ್ರಗತಿಪರ ರೈತರಾದ ಬೆಳ್ಳಾಳೆ ಮಲ್ಲೇಶ್, ಎಚ್.ಎಲ್.ನಂಜೇಗೌಡ, ಎಚ್.ಆರ್.ಧನ್ಯಕುಮಾರ್, ಸಾಹಿತಿ ಚಂದ್ರಶೇಖರಯ್ಯ, ಶಿಕ್ಷಕರಾದ ಪ.ಮ.ನಂಜುAಡಸ್ವಾಮಿ, ಪ್ರಕಾಶ್ ಮೇನಾಗರ, ಅಮಿತ್ ಕ್ಯಾತನಹಳ್ಳಿ ಇತರರಿದ್ದರು.
ಸಂವಾದದಲ್ಲಿ ನವೀನ್ ಸಂಗಾಪುರ ಅವರು ಕೃಷಿಯನ್ನು ವೈಜ್ಞಾನಿಕವಾಗಿ ಅನುಸರಿಸುವÀ ಮೂಲಕ ಸರಳ ಹಾಗೂ ಲಾಭಕರವಾಗಿ ಮಾಡಿಕೊಳ್ಳಬಹುದು ಎಂದು ನವೀನ್ ಸಂಗಾಪುರ ಅವರು ಸುದೀರ್ಘವಾಗಿ ರೈತರಿಗೆ ಮಾರ್ಗದರ್ಶನ ಮಾಡುವ ಮೂಲಕ ತಮ್ಮ ಇಸ್ರೇಲ್ ಪ್ರವಾಸದ ಕೃಷಿ ಅನುಭವಗಳನ್ನು ಹಂಚಿಕೊAಡರು. ರೇಷ್ಮೆ ಸಹಾಯಕ ನಿರ್ದೇಶಕ ರವಿಕುಮಾರ್, ರೈತ ಬೋಳಾರಿಗೌಡ, ಡಾ.ಕೆ.ವೈ.ಶ್ರೀನಿವಾಸ್ ಇತರರು ಸಂವಾದದಲ್ಲಿ ಪ್ರಶ್ನೆಗಳನ್ನು ಕೇಳಿದರು.

ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರವೊಂದಾದ ಬೇವೂರು ಶ್ರೀ ವೆಂಕಟರಮಣ (ತಿಮ್ಮಪ್ಪ ) ಸ್ವಾಮಿ ಜಾತ್ರಾ ಮಹೋತ್ಸವ

ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರವೊಂದಾದ ಬೇವೂರು ಶ್ರೀ ವೆಂಕಟರಮಣ (ತಿಮ್ಮಪ್ಪ ) ಸ್ವಾಮಿ ಜಾತ್ರಾ ಮಹೋತ್ಸವ ದಿನಾಂಕ ೧೬ ೧೦ ೨೦೨೧ ರ ಶನಿವಾರದಂದು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.
ತಾಲೂಕು ತಹಶೀಲ್ದಾರ್ ಅವರ ನೇತೃತ್ವದಲ್ಲಿ
ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆ ಸಂಖ್ಯೆ ಎಡಿಎಂ ೧೧ / ಸಿ ಆರ್/೨೮೪/೨೦೧೯_೨೦ ದಿನಾಂಕ ೧೬ ೧೦ ,೨೦೨೧ರಂದು ಶನಿವಾರ ರಂದು ನಡೆಯಬೇಕಿದ್ದ ಬ್ರಹ್ಮರಥೋತ್ಸವ ಮತ್ತು ಅನ್ನದಾಸೋಹ ಇರುವುದಿಲ್ಲ ಎಂದು ಸೂಚಿಯನ್ನು ಪ್ರಕಟಿಸಿದ್ದು, ಸುತ್ತೋಲೆ ಮತ್ತು ಸರ್ಕಾರದ ನಿರ್ದೇಶನದಂತೆ ನಿಯಮಗಳನ್ನು ಕಡ್ಡಾಯವಾಗಿ ಗಮನವಿಟ್ಟುಕೊಂಡ ಈ ಬಾರಿಯೂ ಸಹ ಬೇವೂರು ಬೆಟ್ಟದ ತಿಮ್ಮಪ್ಪನ ನೇರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡುವುದಾಗಿ ತೀರ್ಮಾನಿಸಿರುವುದಾಗಿ ತಿಳಿಸಿದರು.
ದೇವಸ್ಥಾನಕ್ಕೆ ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ವ್ಯವಸ್ಥೆ ಮಾಡಲಾಗುತ್ತದೆ. ವಿಶೇಷ ಪೂಜೆ ಹೊರತುಪಡಿಸಿ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯಲಿದೆ ಎಂದು ತಹಸಿಲ್ದಾರ್ ನಾಗೇಶ್ ತಿಳಿಸಿದರು.

ಬೆಟ್ಟದ ಮೇಲೆ ಸಾರ್ವಜನಿಕರಿಗೆ ಅನುಕೂಲವಾದ ರೀತಿಯಲ್ಲಿ ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರಗಳು, ಬರುವ ಭಕ್ತಾದಿಗಳಿಗೆ ದೇವರ ದರ್ಶನ ಮತ್ತು ೧೨ ಗಂಟೆಗೆ ಸಂಪ್ರದಾಯದAತೆ ಗಜೋತ್ಸವ ಗರುಡೋತ್ಸವ, ದೇವಾಲಯದ ಸಿಬ್ಬಂದಿಗಳು ಸಂಪ್ರದಾಯದAತೆ ಸಾಂಕೇತಿಕವಾಗಿ ಆಚರಣೆ ಮಾಡುವುದು ಮತ್ತು ದೇವರ ದರ್ಶನವನ್ನು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ಹಾಗೂ ಬೆಟ್ಟದ ಮೇಲ್ಗಡೆ ಯಾವುದೇ ಅಂಗಡಿ-ಮುAಗಟ್ಟುಗಳನ್ನು ಹಾಕುವಂತಿಲ್ಲ, ವಿಜಯದಶಮಿಯಂದು ಹಾರೋಹಳ್ಳಿದೊಡ್ಡಿ ಗ್ರಾಮದಲ್ಲಿ ಪ್ರತಿವರ್ಷದಂತೆ ಧಾರ್ಮಿಕವಾಗಿ ಶ್ರೀ ಬೆಟ್ಟದ ತಿಮ್ಮಪ್ಪ ಸ್ವಾಮಿ, ಕಣಿವೆ ಆಂಜನೇಯಸ್ವಾಮಿ ಸಿದ್ದರಾಮೇಶ್ವರ, ಬೀರದೇವರು ಕೆಲಗೆರೆ ಆಂಜನೇಯಸ್ವಾಮಿ
ಉತ್ಸವ, ಬನ್ನಿ ಕಡಿಯುವುದು ಪೂಜೆ ವಿಧಿ ವಿಧಾನಗಳು ನೆರವೇರಲಿವೆ ಎಂದು ದೇವಸ್ಥಾನದ ಮೇಲ್ವಿಚಾರಕರಾದ ಬಿ.ಸಿ ಪುಟ್ಟಸ್ವಾಮಿಯವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮುಜರಾಯಿ ಗುಮಾಸ್ತೆ ಬಿಂಧುಶ್ರೀ ಗ್ರಾಮ ಲೆಕ್ಕಾಧಿಕಾರಿ ಸಿದ್ದರಾಜು ಅರ್ಚಕರಾದ ಶ್ರೀನಿವಾಸಯ್ಯ ಹಾಜರಿದ್ದರು
ಇಂದು ಮುಂಜಾಗೃತ ಕ್ರಮವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸ್ಥಳಕ್ಕಾಗಮಿಸಿದ ಉಪ ತಹಶೀಲ್ದಾರ್ ಲೋಕೇಶ್ ಮತ್ತು ರಾಜಸ್ವ ನಿರೀಕ್ಷಕರಾದ ರಮೇಶ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದ ಸಿದ್ದರಾಜು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.

ದೇಶದ್ರೋಹ- ರಾಜಕೀಯ ಅಪರಾಧ -ಸುಪ್ರೀಂ ಚಾಟಿ

ಭಾರತದ ಸಂವಿಧಾನವು ಅತ್ಯಂತ ಅರ್ಥಪೂರ್ಣವಾಗಿದ್ದು, ದೇಶದ ಅಭಿವೃದ್ಧಿ, ಸಮಾನತೆ, ಏಕತೆ, ಐಕ್ಯತೆ, ಜಾತ್ಯಾತೀತತೆಗೆ ಒತ್ತು ನೀಡಿದೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗವು ಒಂದು ಇನ್ನೊಂದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಹಲವಾರು ಸಂದರ್ಭದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ಜನರು ನಂಬಿಕೆ ಕಳೆದುಕೊಂಡಾಗಲೂ ನ್ಯಾಯಾಂಗವು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ತನ್ನ ಘನತೆಯನ್ನು ಎತ್ತಿ ಹಿಡಿದಿದೆ. ಇಂದಿಗೂ ನ್ಯಾಯಾಂಗದ ಮೇಲೆ ಜನತೆಗೆ ಅಪಾರವಾದ ನಂಬಿಕೆ ಇದ್ದು, ಈ ನಂಬಿಕೆಗಳಿಗೆ ಪೂರಕವಾಗಿ ಇತ್ತೀಚಿನ 2 ತೀರ್ಪುಗಳನ್ನು ಉಲ್ಲೇಖಿಸಬಹುದು. 1 ಬ್ರಿಟೀಷರ ಕಾಲದ ‘ದೇಶದ್ರೋಹ’ ಕಾಯ್ದೆಯ ಇನ್ನು ಏಕೆ ? 2 ಕ್ರಿಮಿನಲ್ ಹಿನ್ನಲೆ ಹೊಂದಿದವರು ಕಾನೂನು ಮಾಡುವುದು ತಪ್ಪು ದೇಶದ್ರೋಹ ಕಾಯ್ದೆ IPಅ 124 ಎ ಅತ್ಯಂತ ಹಳೆಯದು ಮತ್ತು ಇದು ಬ್ರಿಟೀಷರು ಆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಭಾರತೀಯರು
ವಿರೋಧಿಸದಂತೆ ನಿಯಂತ್ರಿಸಲು ರಚನೆ ಆಗಿದ್ದು, ಸಂವಿಧಾನ 377 ಸೆಕ್ಷನ್ ಅನ್ನು ರದ್ದು ಪಡಿಸಿದಂತೆ 124ಎ ಅನ್ನು ರದ್ದುಪಡಿಸಬಹುದಲ್ಲವೆ ? ಎಂದು ಮಾಜಿ ಎ.ಜಿ. ಮುಕುಲ್ ರೋಹಟಗಿ ವಿವರಣೆ ನೀಡುವ ಮೂಲಕ ಸುಪ್ರೀಂ ಕೋರ್ಟ್‍ನ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ. ಒಂದು ಕೇಸಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‍ವು ದೇಶದಲ್ಲಿ ‘ದೇಶದ್ರೋಹ’ ಕಾಯ್ದೆಯನ್ನು ಆಡಳಿತ ವರ್ಗ ದುರುಪಯೋಗಪಡಿಸಿಕೊಳ್ಳುತ್ತಿದೆ. ದೇಶಕ್ಕೆ ಸ್ವತಂತ್ರ್ಯ ಬಂದು 75 ವರ್ಷದ ಇಲ್ಲಿಯವರೆಗೂ ‘ದೇಶದ್ರೋಹ’ ಕಾಯ್ದೆ ಬಳಸುವಂತಹ ಯಾವುದೇ ಪ್ರಕರಣವು ನಡೆದಿಲ್ಲ. ದೇಶದ ವಿರುದ್ಧ ಮಾತನಾಡುವವರಿಗೆ ವಿರೋಧಿಸುವವರಿಗೆ ಬೇರೆ ರೀತಿಯ ಕಾಯ್ದೆಗಳು ಇವೆ. ಅಥವಾ ಕೇಂದ್ರ ಸರಕಾರವು ಅದಕ್ಕಾಗಿ ಪ್ರತ್ಯೇಕ ಕಾಯ್ದೆ ರೂಪಿಸಲಿ. ಆದರೆ ಪುರಾತನವಾದ ಈ ಕಾಯ್ದೆಯನ್ನು ರದ್ದುಪಡಿಸಲು ಕೇಂದ್ರ ಸರಕಾರ ಸಲಹೆ ನೀಡಿದೆ. ಇನ್ನು ಎರಡನೆಯ ವಿಚಾರ ಕಾನೂನು ರಚಿಸುವಲ್ಲಿ ಅಪರಾಧ ಹಿನ್ನೆಲೆಯವರು ಇರಬಾರದು. ಬಿಹಾರ ವಿಧಾನಸಭಾ ಚುನಾವಣೆಯ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರಕಾರಕ್ಕೆ ಸಾಕಷ್ಟು ಬಾರಿ ಹೇಳಿದರೂ ಅಪರಾಧ ಹಿನ್ನೆಲೆಯವರು ರಾಜಕಾರಣಿಗಳು ಆಗದಂತೆ ನೋಡಿಕೊಳ್ಳಬೇಕು.
ಕಾನೂನು ರಚಿಸಬೇಕೆಂದು ಹೇಳಿದಾಗಲೂ ಮೌನ ವಹಿಸುತ್ತಿದೆ. ಎಲ್ಲ ರಾಜಕೀಯ ಪಕ್ಷಗಳಿಗೂ ಕಾನೂನು ಮಾಡುವ ಇಚ್ಚೆ ಇಲ್ಲ. ಅಪರಾಧ ಹಿನ್ನೆಲೆಯವರು ದೇಶದ ಕಾನೂನುಗಳನ್ನು ರಚನೆ ಮಾಡುತ್ತಿರುವುದು ಜನತೆಯ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಈಗಾಗಲೇ ಜನರು ರೊಚ್ಚಿಗೆದ್ದಿದ್ದಾರೆ. ಈಗಲಾದರೂ ಅಪರಾಧ ಹಿನ್ನೆಲೆಯ ರಾಜಕಾರಣಿಗಳನ್ನು ಚುನಾವಣೆಯ ಸ್ಪರ್ಧೆ ಮಾಡದಂತೆ ತಡೆಯಲು ಸೂಕ್ತ ಕಾನೂನು ರೂಪಿಸಬೇಕೆಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಖಡಕ್ ಎಚ್ಚರಿಕೆ ನೀಡಿದೆ. ಈ ಎರಡು ವಿಚಾರಗಳು ಭಾರತದ ಜನತೆಯಲ್ಲಿ ನ್ಯಾಯಾಲಯದ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ. ಏಕೆಂದರೆ ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಈ ಎರಡು ವಿಚಾರಗಳು ಅತ್ಯಂತ ಮುಖ್ಯವಾಗಿದ್ದು, ದೇಶದ್ರೋಹ ಕಾಯ್ದೆಯನ್ನು ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟವರೆ ಬಳಸುತ್ತಿದ್ದರೂ ಹಾಗೇ ಇಂದು ರಾಜಕೀಯವು ಅತ್ಯಂತ ಅಪರಾಧ ಹಿನ್ನೆಲೆಯುಳ್ಳವರಿಂದ ತುಂಬಿದೆ. ರಾಜಕೀಯ ಬದಲಾದರೆ ಸರಕಾರ ಅಂದರೆ ಶಾಸಕಾಂಗ ವ್ಯವಸ್ಥೆ ಬದಲಾಗುತ್ತದೆ. ದೇಶದ ಅಭಿವೃದ್ಧಿ ಜೊತೆಗೆ ಪ್ರಕಾಶಮಾನವಾಗಿ ಬೆಳಗುತ್ತದೆ.

ಗ್ಯಾಂಡಿ-ಗಾಂಧಿ ಆಗಿರುವ ರೋಚಕ ಸತ್ಯ.

ಸೋನಿಯಾಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇಂದಿರಾ ಮಕ್ಕಳಿಗೆ ‘ಗಾಂಧಿ’ ಅಡ್ಡ ಹೆಸರು ಬರಲು ಕಾರಣವೇನು ? ಇದರ ಸುತ್ತ ಅಂತೆ-ಕಂತೆಗಳ ಕಥೆಗಳು ಸಾಕಷ್ಟು ಹೊರಬಂದಿದೆ. ಕೆಲವರು ಹೇಳುವ ಫಿರೋಜ್‍ನನ್ನು ಮಹಾತ್ಮ ಗಾಂಧಿ ದತ್ತು ಪಡೆದಿದ್ದರು. ನೆಹರು ಮಗಳು ಇಂದಿರಾ ಗಾಂಧಿಯನ್ನು ಪ್ರೀತಿಸಿ ಮದುವೆ ಆಗಿದ್ದರಿಂದ ನೆಹರು ಕುಟುಂಬಕ್ಕೆ ‘ಗಾಂಧಿ’ ಅಡ್ಡ ಹೆಸರು ಬಂದಿದೆ ಅಂತ ವಾದಿಸುವವರ ಸಂಖ್ಯೆಯೂ ಬಹಳ ಇದೆ. ಆದರೆ 2ನೇ ಅಕ್ಟೋಬರ್ 1869 ರಲ್ಲಿ ಹುಟ್ಟಿ ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿ ಮತ್ತು ಹೋರಾಟ ನಂತರದ ಭಾರತಕ್ಕೆ ಆಗಮಿಸಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶಾಂತಿಯುತ ಹೋರಾಟದಿಂದ ಹೆಸರುವಾಸಿಯಾದ ಗಾಂಧಿ ಕುಟುಂಬಕ್ಕೂ ನೆಹರೂ ಆಗಲಿ, ಫಿರೋಜ್ ಕುಟುಂಬಕ್ಕಾಗಿ ಸಂಬಂಧವಿಲ್ಲ. ಗಾಂಧೀಜಿಯವರಿಗೆ ಮಕ್ಕಳು ಇದ್ದು ತಮ್ಮ 36ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದ ನಂತರ ಯಾರನ್ನು ದತ್ತು ಪಡೆಯಲಿಲ್ಲ. ಹಾಗಾದರೆ ಫಿರೋಜ್ ಮುಂದೆ ಅಡ್ಡ ಹೆಸರಾಗಿ ಗಾಂಧಿ ಸೇರಿದ್ದು ಹೇಗೆ ತಿಳಿಯಬೇಕಾದರೆ ಫಿರೋಜ್‍ನ ಇತಿಹಾಸ ತಿಳಿಯಬೇಕು. 12ನೇ ಸೆಪ್ಟೆಂಬರ್ 1912 ರಲ್ಲಿ ಮುಂಬೈನಲ್ಲಿ ಜನಿಸಿದ ಫಿರೋಜ್ ಗುಜರಾತ್ ಮೂಲದ ಪಾರ್ಸಿ ಕುಟುಂಬಕ್ಕೆ ಸೇರಿದವರು. ಈ ಪಾರ್ಸಿಗಳು ಮುಸ್ಲಿಮರಲ್ಲ ಇವರದೊಂದು ಜೋರಾಸ್ಟ್ರಿಯನ್ ಧರ್ಮ ಪರ್ಷಿಯಾ ದೇಶ ಇಸ್ಲಾಂನ ಆಕ್ರಮಣಕ್ಕೆ ಒಳಗಾದಾಗ ಬದುಕು ಕಟ್ಟಿಕೊಳ್ಳುವುದರ ಸಲುವಾಗಿ ಭಾರತಕ್ಕೆ ಬಂದು ಇಲ್ಲಿಯೇ ನೆಲೆ ನಿಂತು ಭಾರತೀಯರಿಗಿಂತ ಹೆಚ್ಚು ಭಾರತೀಯರಾದರು. ಪರ್ಷಿಯಾದಿಂದ ಬಂದಿದ್ದರಿಂದ ‘ಪಾರ್ಸಿ’ಗಳು ಅಂತ ಕರೆಯುತ್ತಿದ್ದರು. ಪಾರ್ಸಿ ಕುಟುಂಬದ ಜೆಹಾಂಗೀರ್ ಫೆರಾಜೋನ್ ಗ್ಯಾಂಡಿ ಮತ್ತು ರತಿಮಾಯಿಯ ಮಗ ಫಿರೋಜ್ ಜೆಹಾಂಗೀರ್ ಗ್ಯಾಂಡಿ ಫಿರೋಜ್ ತಂದೆ ಇಂಜಿನೀಯರ್ ಆಗಿದ್ದರೂ ಈ ಕಾರಣದಿಂದ ಕೆಲಸದ ನಿಮಿತ್ತ ಗುಜರಾತಿನಿಂದ ಮುಂಬೈಗೆ ಬಂದು ನೆಲೆಸಿದರು. 1930 ರಲ್ಲಿ ಫಿರೋಜ್ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಕಾಂಗ್ರೆಸ್ಸಿನ ಯುವ ದಳವಾದ ‘ವಾನರ ಸೇನೆ’ಯ ಸದಸ್ಯರಾದರು. ಇದು ಕೂಡ ತಂದೆಯ ಮರಣಾ ನಂತರ ಉತ್ತರ ಪ್ರದೇಶದ ಅಲಹಾಬಾದ್ ತಾಯಿಯ ಜೊತೆಗೆ ನೆಲೆಸಿದಾಗ ನಡೆದ ಘಟನೆ. ಈ ‘ವಾನರ್ ಸೇನೆ’ ಸಕ್ರಿಯ ನಾಯಕಿ ಇಂದಿರಾ ಅಥವಾ ಜವಾಹರಲಾಲ ನೆಹರೂ ಅವರ ಪ್ರೀತಿಯ ಪ್ರಿಯದರ್ಶಿನಿ ಇಬ್ಬರ ಮಧ್ಯ ಪರಿಚಯವಾಗಿ ಆತ್ಮೀಯತೆ ಬೆಳೆಯುತ್ತದೆ. ಫಿರೋಜ್ ಇಂದಿರಾ ಪ್ರಿಯದರ್ಶಿನಿ ನೆಹರು ಅವರಿಗೆ 16 ವರ್ಷ ಇರುವಾಗಲೇ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಸರಳ ಆಕರ್ಷಕ ಫಿರೋಜ್‍ನ ಪ್ರೇಮದಲ್ಲಿ ಇಂದಿರಾ ಸಿನಿಮೀಯ ರೀತಿಯಲ್ಲಿ ತೇಲುತ್ತಾರೆ. ಇತ್ತ ನೆಹರೂಗೆ ಈ ವಿಷಯದಲ್ಲಿ ಬಾರಿ ವಿರೋಧ ಇರುತ್ತದೆ. ಇವರ ಪ್ರೀತಿಯನ್ನು ಒಪ್ಪುವುದಿಲ್ಲ.

ಈ ಮಧ್ಯ ಭಾರತ ಸ್ವಾತಂತ್ರ್ಯ ಹೋರಾಟವು ತೀವ್ರಗೊಳ್ಳುತ್ತದೆ. ಗಾಂಧಿ, ನೆಹರೂ ಸೇರಿದಂತೆ ಹಲವರು ಹೋರಾಟ ಜೈಲು ಅಂತ ಕುಟುಂಬಗಳಿಂದ ದೂರ ಉಳಿಯುತ್ತಾರೆ. ಇಂದಿರಾನ ಮೇಲಿನ ಪ್ರೀತಿಯಿಂದ ಫಿರೋಜ್ ಮನೆಗೆ ಬರಲು ಪ್ರಾರಂಭಿಸುತ್ತಾನೆ. ಆರೋಗ್ಯದ ಸಮಸ್ಯೆ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇಂದಿರಾ ಅವರ ತಾಯಿ ಕಮಲಾ ನೆಹರು ಅವರ ಆತ್ಮೀಯತೆ ಬೆಳೆಸಿಕೊಂಡು ಅವರ ಸೇವೆ ಮಾಡುತ್ತಾ ಫಿರೋಜ್ ಬಹುಕಾಲ ಮನೆಯಲ್ಲೇ ಕಳೆಯುತ್ತಾರೆ. ನೆಹರು ಅವರ ಮನವಿಯ ಮೇರೆಗೆ ಗಾಂಧೀಜಿಯವರು ಕೂಡ ಫಿರೋಜ್‍ನನ್ನು ಕರೆದು ಬುದ್ಧಿ ಹೇಳುತ್ತಾರೆ. ಆದರೂ ಇಂದಿರಾ ಮತ್ತು ಫಿರೋಜ್ ಅವರ ಮಾತನ್ನು ಒಪ್ಪುವುದಿಲ್ಲ. ಜೊತೆಗೆ 26 ಮಾರ್ಚ್ 1942 ರಲ್ಲಿ ಮದುವೆ ಆಗುತ್ತಾರೆ. ಫಿರೋಜ್ ಗ್ಯಾಂಡಿ ಅವರಿಗೆ ಎಂ.ಕೆ. ಗಾಂಧಿಯವರ ಅಪರಾಧವಾದ ಅಭಿಮಾನ, ಭಕ್ತಿ ಇರುತ್ತದೆ. ಈ ಅಭಿಮಾನ ಮತ್ತು ಭಕ್ತಿ ಸೂಚಕವಾಗಿ ಫಿರೋಜ್ ತನ್ನ ಹೆಸರಿನ ಮುಂದೆ ‘ಗಾಂಧಿ’ ಅಂತ ಸೇರಿಸಿಕೊಳ್ಳುತ್ತಾರೆ. ಇದರಲ್ಲಿ ಒಪ್ಪಿಗೆ ಅಥವಾ ಕಾನೂನಿನ ಮಾನ್ಯತೆ ಇಲ್ಲದಿದ್ದಾಗಲೂ ಭವಿಷ್ಯದಲ್ಲಿ ಫಿರೋಜ್ ಗಾಂಧಿ ಅಂತ ಪ್ರಸಿದ್ಧಿ ಪಡೆಯುತ್ತಾರೆ. ಇವರನ್ನು ನೆಹರು ತಮ್ಮ ಕೊನೆಯ ಕ್ಷಣದವರೆಗೂ ವಿರೋಧಿಸುತ್ತಾ ಬಂದಿದ್ದಾರೆ. ಹಾಗೇ ಫಿರೋಜ್ ಕೂಡಾ ಮೊದಲ ಹಣಕಾಸು ಹಗರಣವನ್ನು ಬೆಳಕಿಗೆ ತಂದ ಕೀರ್ತಿಗೆ ಪಾತ್ರರಾಗಿದ್ದಾರೆ.
ಕಮಲ ನೆಹರೂ ಸಂಬಂಧದ ಬಗ್ಗೆ ಅನುಮಾನಗಳು ನೆಹರೂ ವಿರುದ್ಧ ಹಗರಣಗಳನ್ನು ಬೆಳಕಿಗೆ ತರಲು ಪ್ರಯತ್ನ. ಈ ಎಲ್ಲಾ ಕಾರಣಗಳಿಂದ ಇಂದಿರಾ ಮತ್ತು ಫಿರೋಜ್ ಗಾಂಧಿಯ ಸಂಬಂಧಗಳು ಹಳಸುತ್ತವೆ. ಸಮಾಜವಾದಿ ವಿಚಾರಗಳು ಸ್ವಾತಂತ್ರ್ಯ ಹೋರಾಟದ ಪ್ರಯತ್ನಗಳಲ್ಲೇ ಅಂದರೆ 1930 ರಲ್ಲೇ ‘ಗಾಂಧಿ’ ಹೆಸರನ್ನು ಫಿರೋಜ್ ತನ್ನ ಹೆಸರಿನೊಂದಿಗೆ ಬಳಸಿಕೊಂಡಿರುತ್ತಾನೆ. ಫಿರೋಜ್‍ನನ್ನು ಒಪ್ಪಂದ ನೆಹರೂ ಕುಟುಂಬ ‘ಗಾಂಧಿ’ ಅಡ್ಡ ಹೆಸರನ್ನು ಬಳಸಿಕೊಂಡು ಇಷ್ಟು ವರ್ಷ ರಾಜಕೀಯ ಮಾಡುತ್ತಿದ್ದಾರೆ. ನೆಹರೂ ಕುಟುಂಬ ಬ್ರಾಹ್ಮಣ ಕುಟುಂಬವಾದರೂ ಕೂಡಾ ಫಿರೋಜ್ ಪಾರ್ಸಿ ಆಗಿದ್ದರಿಂದ ಇವತ್ತಿನ ಗಾಂಧಿ ಕುಡಿಗಳು ‘ಪಾರ್ಸಿ’ಗಳೇ ಹೊರತು ಬ್ರಾಹ್ಮಣರಲ್ಲ. ಫಿರೋಜ್ ಉತ್ತಮ ಸಮಾಜವಾದಿ ಚಿಂತಕ, ಭ್ರಷ್ಟಾಚಾರದ ವಿರೋಧಿ 1960ರಲ್ಲಿ ಹೃದಯಾಘಾತದಿಂದ ನಿಧನರಾದರು. ಈಗ ಗಾಂಧಿ ಕುಟುಂಬಕ್ಕೆ ಸಂಬಂಧವಿಲ್ಲದವರು ‘ಗಾಂಧಿ’ ಬಳಸುತ್ತಾರೆ. ಇಂದಿರಾ ಗಾಂಧಿ ಇತಿಹಾಸ ಎಲ್ಲರಿಗೂ ಗೊತ್ತು ಹಾಗಾದರೆ ‘ಗಾಂಧಿ’ ಬಳಸುವುದು ಎಷ್ಟು ಸರಿ ?

ಕರ್ನಾಟಕದ ಅಮ್ಮ-ಸುಧಾಮೂರ್ತಿ

ಸುಧಾಮೂರ್ತಿಯವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಗ್ರಾಮದಲ್ಲಿ ರಾಮಚಂದ್ರ ಕುಲಕರ್ಣಿ ಹಾಗೂ ವಿಮಲಾ ಕುಲಕರ್ಣಿ ಯವರ ಪುತ್ರಿಯಾಗಿ ಆಗಸ್ಟ್ 19 1950 ಅಲ್ಲಿ ಕುಲಕರ್ಣಿ ಮನೆತನದಲ್ಲಿ ಜನಿಸಿದರು. ಹಾವೇರಿ ಜಿಲ್ಲೆಯ ಶಿಗ್ಗಾಂವ್ ಗ್ರಾಮದಲ್ಲಿ ಇವರ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನಡೆಯಿತು. ನಂತರ 1966ರಲ್ಲಿ ಹುಬ್ಬಳ್ಳಿಯ ಎಜುಕೇಶನ್ ಸೊಸೈಟಿ ಗಲ್ರ್ಸ್ ಇಂಗ್ಲೀμï ಸ್ಕೂಲ್ ನಿಂದ ಎಸೆಸೆಲ್ಸಿ ಎಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದರು. 1972 ರಲ್ಲಿ ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. 1974 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. ಇವರು ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ನಲ್ಲಿ ಎಂ.ಇ. ಕಂಪ್ಯೂಟರ್ ಸೈನ್ಸನಲ್ಲಿ ಪದವಿಗಳಿಸಿದರು. ಚಿನ್ನದ ಪದಕಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ. ಸುಧಾಮೂರ್ತಿಯವರು ಟೆಲ್ಕೋದ ಪುಣೆ ಮುಂಬೈ ಜಮ್‍ಶೆಡ್ ಪುರ ಶಾಲೆಗಳಲ್ಲಿ ಡೆವಲಪ್ಮೆಂಟ್ ಇಂಜಿನಿಯರ್ ಆಗಿ ದುಡಿದಿದ್ದಾರೆ. ಟೆಲ್ಕೋ ಗೆ ಪ್ರವೇಶ ಪಡೆದ ಪ್ರಥಮ ಮಹಿಳಾ ಎಂಜಿನಿಯರ್ ಎನ್ನುವ ಹೆಗ್ಗಳಿಕೆಗೆ ಇವರದು. 1996 ರಲ್ಲಿ ತಮ್ಮ ಪತಿ ಶ್ರೀ ನಾರಾಯಣ ಮೂರ್ತಿ ಅವರ ಜೊತೆಗೂಡಿ ಇನ್ಫೋಸಿಸ್ ಫೌಂಡೇಶನ್ ಪ್ರಾರಂಭಿಸಿದರು. ಸುಧಾಮೂರ್ತಿಯವರು ಹಲವು ಕೃತಿಗಳನ್ನು ಸಹ ಪ್ರಕಟಿಸಿದ್ದಾರೆ. ಅವುಗಳೆಂದರೆ “ಹಕ್ಕಿಯ ತೆರದಲಿ, ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್, ಕಾವೇರಿಯಿಂದ ಮೇಕಾಂಗಿಗೆ, ಡಾಲರ್ ಸೊಸೆ, ಮಹಾಶ್ವೇತೆ, ಅತಿರಿಕ್ತೆ, ಪರಿದಿ, ಮನದಮಾತು, ಗುಟ್ಟೊಂದು ಹೇಳುವೆ, ಸಾಮಾನ್ಯರಲ್ಲಿ ಅಸಾಮಾನ್ಯರು, ದಿ ಸಪೆರ್ಂಟ್ಸ್ ರಿವೆಂಜ್, ತುಮುಲ ಋಣ, ಯಶಸ್ವಿ ಸಾಫ್ಟ್ ಮ್ಯಾನ್, ಏರಿಳಿತದ ದಾರಿಯಲಿ,್ಲ ನೊನಿಯ ಸಾಹಸಗಳು ಮುಂತಾದವು. ಇವರು ಕನ್ನಡದಲ್ಲಿ ಮಾತ್ರವಲ್ಲದೆ ಇಂಗ್ಲಿμï ನಲ್ಲಿ ಸುಮಾರು 17 ಪುಸ್ತಕಗಳನ್ನು ಸಹ ಬರೆದಿದ್ದಾರೆ. ಇವರಿಗೆ ಸಂದ ಪುರಸ್ಕಾರಗಳು ಹಲವಾರು ಅವುಗಳೆಂದರೆ

1. ಬಿ.ಇ ಯಲ್ಲಿ ಪ್ರಥಮ ಸ್ಥಾನಗಳಿಸಿದಾಗ ಕರ್ನಾಟಕದ ಮುಖ್ಯಮಂತ್ರಿಗಳಿಂದ ಬೆಳ್ಳಿಯಪದಕ ಲಭಿಸಿತು.
2. ಎಂ.ಟೆಕ್. ಪರೀಕ್ಷಯಲ್ಲಿ ಪ್ರಥಮಸ್ಥಾನ ಗಳಿಸಿದಾಗ ಇಂಡಿಯನ್ ಇನ್ಸ್ಟುಟ್ಯೂಟ್ ಆಫ್ ಇಂಜಿನಿಯರ್ಸ್ ದಿಂದ ಬಂಗಾರದ ಪದಕ ದೊರಕಿತು.
3. 1995 ರಲ್ಲಿ ಬೆಂಗೂಳಿರಿನ ರೋಟರಿ ಕ್ಲಬ್ ನಿಂದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿದೆ.
4. ಪಬ್ಲಿಕ್ ರಿಲೇಶನ್ಸ್ ಸೊಸೈಟಿ ಆಫ್ ಇಂಡಿಯಾದವರಿಂದ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.
5. ಸಮಾಜ ಸೇವೆಗಾಗಿ ಹುಬ್ಬಳ್ಳಿ ದಕ್ಷಿಣ ಭಾಗದ ರೋಟರಿ ಕ್ಲಬ್ ನಿಂದ ಪುರಸ್ಕಾರ ದೊರೆತಿದೆ.
6. 2000ದ ಸಾಲಿನ ಕರ್ನಾಟಕದ ರಾಜ್ಯೋತ್ಸವ ಪುರಸ್ಕಾರ ಲಭಿಸಿದೆ.
7. ಸಮಾಜಸೇವೆಗಾಗಿ 2000ದ ಸಾಲಿನ ಓಜಸ್ವಿನಿ ಪ್ರಶಸ್ತಿ ಲಭಿಸಿದೆ.
8. ಮಿಲೇನಿಯಮ್ ಮಹಿಳಾ ಶಿರೋಮಣಿ ಪ್ರಶಸ್ತಿ ಲಭಿಸಿದೆ.
9.ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಪ್ರಶಸ್ತಿ
10. ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್ ಈ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಶ್ರೀಮತಿ ಸುಧಾಮೂರ್ತಿಯವರು ಇನ್ ಫೋಸಿಸ್ ಫೌಂಡೇಶನ್ ಮೂಲಕ ದೇವದಾಸಿಯರಿಗೆ, ಪುರ್ನವಸತಿ, ಬಡಮಕ್ಕಳಿಗೆ ಶಿಕ್ಷಣ, ಇತ್ತಿಚಿನ ಉತ್ತರ ಕರ್ನಾಟಕದ ನೆರೆಯಲ್ಲಿ ಸಿಲುಕಿದವರಿಗೆ ಹಲವಾರು ರೀತಿಯ ಸಹಕಾರ ಮಾಡಿರುತ್ತಾರೆ. ಈಗ ಸದ್ಯ ಕೊರೋನ ಪೀಡಿತರಿಗಾಗಿ ಬೆಂಗಳೂರಿನಲ್ಲಿ ಆಸ್ಪತ್ರೆ ನಿರ್ಮಿಸುತ್ತಿದ್ದು ಹೀಗೆ ಕಷ್ಟದ ಸಮಯದಲ್ಲಿ ಜನತೆಗೆ ಸಹಾಯ ಮಾಡುವ ಕರ್ನಾಟಕದ ಅಮ್ಮನಾಗಿದ್ದಾರೆ.

ಬಡ ಜನರ ಕಷ್ಟಕ್ಕೆ ಸ್ಪಂದಿಸುವ ಯುವನಾಯಕ, ಕೆಲವೇ ತಿಂಗಳಲ್ಲಿ ಸೇಡಂ ಜನರ ಮನಗೆದ್ದ ಬಾಲರಾಜ್ ಗುತ್ತೇದಾರ್.

ಸೇಡಂ : ಮಾಹಾಮರಿ ಕರೋನ ಎರಡನೇ ಅಲೆಯಿಂದ ದೇಶ ರಾಜ್ಯ ಜಿಲ್ಲೆ ತಾಲೂಕು ಸೇರಿದಂತೆ ಸಾವು -ನೋವುಗಳ ಅರಿತುಕೊಂಡ ಸರ್ಕಾರವು ಲಾಕ್ ಡೌನ್ ಜಾರಿಗೊಳಿಸಿ ಆದೇಶಿಸಿದಾಗ, ಬಡ ಜನರ ಸೇವೆಗಾಗಿ, ಖಾಸಗಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿವರ್ಗದವರಿಗೆ, ಅನಾಥ ನಿರ್ಗತಿಕರಿಗೆ,

ಕಡುಬಡವರಿಗೆ ಆಹಾರ ಧಾನ್ಯ ಕಿಟ್, ತಾಲೂಕ ಸೇರಿದಂತೆ ಎಲ್ಲಾ ಹಳ್ಳಿಗಳಲ್ಲಿ ಸ್ಯಾನಿಟೈಸರ್ ಸಿಂಪರಣೆ, ಉಚಿತ ಆಂಬುಲೆನ್ಸ್ ಸೇವೆ, ಬಡಮಕ್ಕಳ ಕೆಎಎಸ್, ಐಎಎಸ್, ಉನ್ನತಮಟ್ಟದ ಉಚಿತ ತರಬೇತಿ ಶಿಬಿರದ ಜವಾಬ್ದಾರಿ, ಉಚಿತ ವ್ಯಾಕ್ಸಿನೇಷನ್ ಅಭಿಮಾನದ ಮೂಲಕ ಯುವಕರ ಕಣ್ಮಣಿ ಯಾಗಿ, ಕೆಲವೇ ತಿಂಗಳಲ್ಲಿ ಜನರ ಅಚ್ಚುಮೆಚ್ಚಿನ ನಾಯಕರಾಗಿ , ಸರ್ಕಾರಿ ಅಧಿಕಾರಿಗಳು ಮೆಚ್ಚುವಂತಹ ಕೆಲಸ ಮಾಡುವುದರ ಜೊತೆಗೆ ಸೇಡಂ ಜನರ ಮನಗೆದ್ದ ಜೆಡಿಎಸ್ ಪಕ್ಷದ ಯುವ ನಾಯಕರೇ ಬಾಲರಾಜ್ ಅಶೋಕ್ ಗುತ್ತೇದಾರ್. ತಾಲೂಕಿಗೆ ಕೆಲವು ತಿಂಗಳುಗಳ ಹಿಂದೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಜನರಿಗೆ ಮಾಡಿರುವಂತ ಸೇವೆಗಳು ಈ ಕೆಳಗಿನಂತಿವೆ.

1) ಪಟ್ಟಣದ ಹಮಾಲರಿಗೆ, ಆಟೋ ಚಾಲಕರಿಗೆ, ತಾಲೂಕಿನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿನ ಕಡುಬಡವರಿಗೆ 50 ಸಾವಿರ ಆಹಾರ ಧಾನ್ಯ ಕಿಟ್ ವಿತರಣೆ ಮಾಡುವ ಮೂಲಕ ಎರಡು ತಿಂಗಳಿಗೆ ಸಹಾಯ ಮಾಡಿದರು.2) ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಹಳ್ಳಿಯಲ್ಲಿ ಉಚಿತ ಸ್ಯಾನಿಟೈಸರ್ ಮಾಡಿಸುವ ಮೂಲಕ ಕರೋನ ಮುಕ್ತ ಗ್ರಾಮ ಮಾಡಲು ಮುಂದಾದರು.3) ರಂಜಾನ್ ಸಂದರ್ಭದಲ್ಲಿ 3000 ಆಹಾರ ಧಾನ್ಯ ಕಿಟ್ ವಿತರಿಸಿದರು.4) ಕರೋನ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕರೋನ ಸೇನಾನಿಗಳಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಪೆÇೀಲಿಸ್ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಸ್ಯಾನಿಟೈಸರ್ ಮಾಸ್ಕ್, ವಿತರಿಸಿದರು.5) ಬಾಲರಾಜ ಬ್ರಿಗೇಡ್ ಫೌಂಡೇಶನ್, ಹಾಗೂ ಶಾರದಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಕ್ಸಿಜನ್ ಸೌಲಭ್ಯವಿರುವ ಎರಡು ಅಂಬುಲೆನ್ಸ್ 24 ಗಂಟೆ ಉಚಿತವಾಗಿ, ಕೋವಿಡ್ ರೋಗಿಗಳಿಗೆ, ಬಾಣತಿಯರಿಗೆ ಬಡಜನರಿಗಾಗಿ ನೀಡಿದರು. 6) 45 ಪಟ್ಟಣ ಹಳ್ಳಿಯ ಬಡಮಕ್ಕಳ ಕೆಎಎಸ್, ಐಎಎಸ್, ಉನ್ನತಮಟ್ಟದ ಉಚಿತ ತರಬೇತಿ ಶಿಬಿರದ ಜವಾಬ್ದಾರಿಯನ್ನು ಹೊತ್ತಿದ್ದಾರೆ. 7) ಕೋವಿಡ್ ಲಸಿಕಾ ಅಭಿಯಾನ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮೂರನೇ ಅಲಿಯ ತಡೆಗಟ್ಟುವಲ್ಲಿ ಮುಂದಾಳತ್ವ ವಹಿಸಿದ್ದರು. 8) ಪಟ್ಟಣ ಹಾಗೂ ಹಳ್ಳಿಯ ಸಮಸ್ಯೆಗಳನ್ನು ನಮ್ಮ ಜೊತೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಿ…. ಬಾಲರಾಜ್ ಬ್ರಿಗೇಡ್ ಸದಸ್ಯರಾಗಿ ನಮ್ಮ ಯುವ ನಾಯಕ ಬಾಲರಾಜ್ ಅಶೋಕ್ ಗುತ್ತೆದಾರ ಅವರೊಂದಿಗೆ ಸಮಾಜ ಮುಖಿ ಕಾರ್ಯಗಳಲ್ಲಿ ಕೈ ಜೋಡಿಸಿ

ಸದಸ್ಯರಾಗಲು https://balrajguttedarjds.com ವೆಬ್ ಸೈಟ್ ಪ್ರಾರಂಭಿಸುವ ಮೂಲಕ ಜನರ ಸೇವೆಗೆ ಮುಂದಾಗಿರುವುದು ಮೆಚ್ಚುವಂತದ್ದು.9) ಜುಲೈ ತಿಂಗಳಿನಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ ಸಂಗವಿ ಎಂ ಗ್ರಾಮದ ಮಹಿಳೆ ಹಾಗೂ ಪೆÇತಂಗಲ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ನೀಡಿ ವೈಯಕ್ತಿಕ ಸಹಾಯಧನ ನೀಡುವುದರ ಜೊತೆಗೆ ಮಕ್ಕಳ ಉನ್ನತ ದರ್ಜೆಯ ಶಿಕ್ಷಣವು ಉಚಿತವಾಗಿ ನೀಡುವುದಾಗಿ ಜವಾಬ್ದಾರಿ

ಹೊತ್ತುಕೊಂಡಿದ್ದಾರೆ.10 ) ರೈತರ ಜಮೀನಿಗೆ ಭೇಟಿ ನೀಡಿ ಪ್ರತಿ ಎಕರೆಗೆ 20 ಸಾವಿರ ವಿಶೇಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬಾಲರಾಜ್ ಗುತ್ತೇದಾರ್ ಆಗ್ರಹಿಸಿದರು. ಂ) ಅನಾಥ ಆಶ್ರಮದ ವೃದ್ದರಿಗೆ ಆಹಾರ ಬಡಿಸುತ್ತಿರುವ ಬಾಲರಾಜ್ ಗುತ್ತೇದಾರ್,ಃ) ಉಚಿತ ಕೋವಿಡ ಲಸಿಕೆ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ. ಅ) ಪಟ್ಟಣ ಸೇರಿದಂತೆ ಎಲ್ಲಾ ಹಳ್ಳಿಗಳಿಗೂ ಉಚಿತ ಸ್ಯಾನಿಟೈಸರ್ ಸಿಂಪರಣೆ ಮಾಡುವ ಕಾರ್ಯಕ್ರಮಕ್ಕೆ ಶ್ರೀ ಪರಮಪೂಜ್ಯ ಸದಾಶಿವ ಮಹಾಸ್ವಾಮೀಜಿ, ಹಾಲಪ್ಪಯ್ಯ ವಿರಕ್ತಮಠದ ಪರಮಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮಿಗಳು ಚಾಲನೆ ನೀಡಿದರು.ಆ) ಮುಧೋಳ್ ನಲ್ಲಿ ನಟಿ ರಾಗಿಣಿ ಭುವನ್ ನೇತೃತದಲ್ಲಿ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಣೆ ಸಂದರ್ಭ.ಊ)ಖಾಸಗಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ಆಹಾರ ಧಾನ್ಯ ಕಿಟ್ ವಿತರಣೆ. ಎ) ಆಕ್ಸಿಜನ್ ಸೌಲಭ್ಯವಿರುವ ಎರಡು ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿರುವ ಸಂದರ್ಭದಲ್ಲಿ.ಏ) ಲಾಕ್ ಡೌನ್ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣು ಮಾರಾಟವಾಗದೆ ಕಷ್ಟ ಅನುಭವಿಸುತ್ತಿರುವ ರೈತರ ಜಮೀನಿಗೆ ಭೇಟಿ ನೀಡಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿದರು. ಐ) ಸುಲೇಪೇಟ್ ವ್ಯಾಪ್ತಿಯಲ್ಲಿ, ಆಹಾರ ಧಾನ್ಯ ಕಿಟ್ ವಿತರಣೆ ಸಂದರ್ಭದಲ್ಲಿ.ಒ)

ವಿಶೇಷ ವರದಿ: ಬಿಜನಳ್ಳಿ ಸುರೇಶ್ ಉಪಸಂಪಾದಕರು ಕಲ್ಬುರ್ಗಿ

ಹೃದಯವಂತ ಮಹೇಂದ್ರ ಮುಣೋತ್

ಎಲ್ಲೆಲ್ಲೂ ಕರೋನ ಲಾಕ್‍ಡೌನ್ ಸಂದರ್ಭ ಬಡವರಿಗೆ, ನಿರಾಶ್ರಿತರಿಗೆ, ಕಾರ್ಮಿಕ ವರ್ಗಕ್ಕೆ ದಿಕ್ಕು ಕಾಣದೆ ಕಾಂಗಾಲಾದ ಸಂದರ್ಭ ಸಮಸ್ಯೆ ಮುಗಿದಿಲ್ಲ. ಒಂದು ಕಡೆ ಸಾವು ನೋವುಗಳ ಭೀಕರ ದೃಶ್ಯಗಳು. ಸಂಬಂಧಗಳನ್ನೇ ಮರೆತು ಮಾನವೀಯತೆಯ ಮೇಲೆ ಬಿದ್ದ ದೊಡ್ಡ ಪೆಟ್ಟು. ಇಡೀ ಪ್ರಪಂಚವೇ ಎಂದೂ ಕೇಳರಿಯದ ಕಷ್ಟದ ಕಾಲವನ್ನು ಈ ಎರಡು ವರ್ಷಗಳಲ್ಲಿ ನೋಡಲಾಯಿತು. ಇಡೀ ಪ್ರಪಂಚವು ಕರೋನ ಕಪಿಮುಷ್ಠಿಯಲ್ಲಿ ತತ್ತರಿಸಿ ಹೋದಾಗ ಸರ್ಕಾರ ಸೇರಿದಂತೆ ಆಡಳಿತ ವರ್ಗವೂ ಕೂಡಾ ಸಹಾಯ ಮಾಡಲು ಆಗದ ಸಂದರ್ಭ ಹಲವಾರು ದೇಶಗಳಿಗೆ ಬಂದೊದಗಿತು. ಇಂತಹ ಸಂದರ್ಭದಲ್ಲಿ ಮಾನವೀಯ ಹೃದಯವಂತ ಹಲವಾರು ಸಮಾಜ ಸೇವಕರು ಜನತೆಯ ನೆರಳಿಗೆ ನಿಂತರು. ಅಂತಹ ಸಾಲಿನಲ್ಲಿ ಸೂರ್ಯನಂತೆ ಬೆಳಗಿದ ಕರುನಾಡಿನ ಹೆಮ್ಮೆಯ ಪುತ್ರ ಮಾರುತಿ ಮೆಡಿಕಲ್‍ನ ಮಾಲೀಕರಾದ ಶ್ರೀ ಮಹೇಂದ್ರ ಮುಣೋತ್ ಮುಂಚೂಣಿಯಲ್ಲಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅದರಲ್ಲೂ ಬೆಂಗಳೂರಿನ ಸುತ್ತಮುತ್ತ ನಿರಾಶ್ರಿತರು, ಬಡವರು, ಕೂಲಿ ಕಾರ್ಮಿಕರಿಗೆ ಸಹಾಯದ ಮಹಾಪೂರವನ್ನೇ ಹರಿಸಿದರು. ಪ್ರತಿನಿತ್ಯವು ಲಕ್ಷಾಂತರ ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿ ಅನ್ನದಾಸೋಹಿ ಎನ್ನಿಸಿಕೊಂಡಿದ್ದಾರೆ. ಇನ್ನು ಕೆಲ ಮಧ್ಯಮ ವರ್ಗಗಳಿಗೆ ಮತ್ತು ಕಾರ್ಮಿಕ ವರ್ಗಗಳಿಗೆ ಆಹಾರ ಕಿಟ್‍ಗಳನ್ನು ನೀಡುವ ಮೂಲಕ ನೊಂದು ದಿಕ್ಕು ಕಾಣದ ಜನತೆಯಲ್ಲಿ ನಿಮ್ಮೊಂದಿಗೆ ನಾವು ಮಾನವೀಯ ಮೌಲ್ಯಗಳೊಂದಿಗೆ ಸಹಾಯ ನೀಡುತ್ತೇವೆ ಧೈರ್ಯದಿಂದ ಈ ಸಮಯವನ್ನು ಕಳೆಯೋಣ ಎಂದು ಧೈರ್ಯ ತುಂಬಿದರು. “ಈ ಸಮಯವು ಕಳೆದು ಹೋಗುತ್ತದೆ” ಎಂಬ ಶೀ ಕೃಷ್ಣನ ಹೇಳಿಕೆಯಂತೆ ಕಷ್ಟವಾಗಲಿ ಸುಖವಾಗಲಿ ಸ್ವಲ್ಪ ಸಮಯದವರೆಗೆ ಇರುತ್ತದೆ. ಈ ಸಮಯ ಕಳೆದ ನಂತರ ಒಳ್ಳೆಯ ದಿನಗಳು ಬರುತ್ತವೆ ಎಂಬ ಅಚಲವಾದ ನಂಬಿಕೆಯೊಂದಿಗೆ ಬದುಕು ಕಟ್ಟಿಕೊಳ್ಳಲು ಎಲ್ಲಾ ರೀತಿಯ ಸಹಾಯವನ್ನು ಮಾಡಿರುತ್ತಾರೆ.
ಶ್ರೀ ಮಹೇಂದ್ರ ಮುಣೋತ್ ಅವರು ಮೂಲತಃ ಔಷಧಿ ವ್ಯಾಪಾರಿಗಳಾಗಿದ್ದರೂ ಕೂಡಾ ಕನ್ನಡ ನಾಡಿನ ಬಗ್ಗೆ ಅಪಾರವಾದ ಅಭಿಮಾನ ಕಲೆ, ಸಂಸ್ಕøತಿಗೆ ಸಹಾಯ, ಬಡವರಿಗೆ ಮತ್ತು ನಿರಾಶ್ರಿತರಿಗೆ ಸಹಾಯ ಹೊಸ ಪ್ರತಿಭೆಗಳಿಗೆ, ಹೊಸ ಯೋಜನೆಗಳಿಗೆ ಮುಕ್ತ ಮನಸ್ಸಿನಿಂದ ಸಹಾಯ ಸಹಕಾರ ನೀಡುತ್ತಾರೆ. ಲಕ್ಷಾಂತರ ಜನರಿಗೆ ಜೀವನ ರೂಪಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಕರೋನ ಸಂದರ್ಭವನ್ನು ಹೊರತುಪಡಿಸಿಯೂ ಕೂಡಾ ಸಹಾಯ ಮಾಡುವ ಕಾಯಕವು ಸದಾ ನಡೆಯುತ್ತಿರುತ್ತದೆ. ಸಹಾಯ ಕೇಳಿಕೊಂಡು ಬರುವ ಯಾರೇ ವ್ಯಕ್ತಿಗೂ ಬರಿಗೈಯಲ್ಲಿ ಮರಳಿ ಕಳುಹಿಸಿದ ಉದಾಹರಣೆಗಳೇ ಇಲ್ಲ. ಇಂತಹ ಮಾನವೀಯ ಮೌಲ್ಯಗಳನ್ನು ಹೊಂದಿರುವ ಶ್ರೀಯುತರು ಕರೋನ ಕುರಿತು ಅನೇಕ ಕಿರುಚಿತ್ರ ಹಾಡಿನ ಮೂಲಕ ಜಾಗೃತಿಯನ್ನು ಕೂಡ ಮೂಡಿಸಿದ್ದಾರೆ. ಕರ್ನಾಟಕ ಪ್ರೆಸ್ ಕ್ಲಬ್ ಸೇರಿದಂತೆ ಬೆಂಗಳೂರಿನ ಹಲವಾರು ಎನ್.ಜಿ.ಓ.ಗಳ ಸಹಕಾರದೊಂದಿಗೆ ಬೆಂಗಳೂರಿನ ನಾಗರೀಕರಿಗೆ ಆಹಾರ ಕಿಟ್ ವಿತರಣೆ, ಮಧ್ಯಾಹ್ನದ ಊಟದ ವ್ಯವಸ್ಥೆ, ವೈದ್ಯಕೀಯ ನೆರವು ಮತ್ತು ನೀರು ಸೇರಿದಂತೆ ಹಲವಾರು ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ. ವಿವಿಧ ಕಾರ್ಮಿಕ ವರ್ಗಗಳಿಗೆ ಒಂದು ಲಕ್ಷಕ್ಕೂ ಅಧಿಕ ಆಹಾರ ಕಿಟ್‍ಗಳನ್ನು ನೀಡಿರುತ್ತಾರೆ. ಕರ್ನಾಟಕ ಪ್ರೆಸ್ ಕ್ಲಬ್ ಸಹಕಾರದೊಂದಿಗೆ ಮಾಧ್ಯಮ ವರ್ಗದವರಿಗೆ ಸುಮಾರು 2 ಸಾವಿರಕ್ಕಿಂತ ಅಧಿಕ ಆಹಾರ ಕಿಟ್‍ಗಳನ್ನು ನೀಡಿ ಮಾಧ್ಯಮ ವರ್ಗವನ್ನೂ ಸೇರಿದಂತೆ ಎಲ್ಲಾ ಕಾರ್ಮಿಕ ವರ್ಗದವರಿಗೆ ನಿಮ್ಮೊಂದಿಗೆ ನಾವು ಇದ್ದೇವೆ ಎಂಬ ಧೈರ್ಯವನ್ನು ನೀಡಿದ್ದಾರೆ. ಆರೋಗ್ಯದ ತುರ್ತು ಸೇವೆಗಳಾದ ಆಂಬುಲೆನ್ಸ್ ಮತ್ತು ಔಷಧ ವಿತರಣೆ ಮೂಲಕವು ಕರೋನ ರೋಗಿಗಳಿಗೆ ಸಹಾಯ ನೀಡುತ್ತಾ ಹೃದಯ ವೈಶಾಲ್ಯತೆಯನ್ನು ತೋರಿದ್ದಾರೆ.

ನನ್ನ ದೇಶ ನನ್ನ ಹೆಮ್ಮೆ

ಭಾರತವು ವಿಶ್ವದ ಒಂದು ಭಾಗದಲ್ಲಿ ವಿಶ್ವವೇ ಭಾರತ. ಉಳಿದ ದೇಶಗಳು ಇದರ ಅಂಗಗಳು ಅನ್ನಬಹುದು. ಮಾನವ ಜನಾಂಗದ ಉಗಮವು ಆಫ್ರಿಕಾದ ಭಾಗದಲ್ಲಿ ಆಗಿರಬಹುದು ಎಂಬ ನಂಬಿಕೆ ಇದೆ. ಈ ಆಫ್ರಿಕಾದ ನಾಗರೀಕತೆಯ ಕವಲುದಾರಿಯಲ್ಲಿ ಈಜಿಪ್ಟ್ ಬ್ಯಾಬಿಲೋನಿಯಾ, ರಷ್ಯಾ, ಮಂಗೋಲಿಯನ್ , ಇಂಡೋ ಜನಾಂಗ ಸೇರಿದಂತೆ ಹಲವಾರು ಜನಾಂಗಗಳು ಪ್ರವರ್ಥ ಮಾನಕ್ಕೆ ಬಂದಾಗ ನಮ್ಮ ಸಿಂಧೂ ಬಯಲಿನ ನಾಗರೀಕತೆಯು ವಿಜ್ಞಾನ, ಆಧ್ಯಾತ್ಮ, ತತ್ವ, ಸಿದ್ದಾಂತಗಳ ಮೇಲೆ ಅಗಾದ ಪ್ರಮಾಣದಲ್ಲಿ ಬೆಳೆದಿತ್ತು. ಮೂಲ ನಿವಾಸಿಗಳಾದ ದ್ರಾವಿಡರ ಮೇಲೆ ಆರ್ಯರ ಆಕ್ರಮಣವು ಪ್ರಭಾವ ಬೀರಿದರೂ ಕೂಡ ಮೂಲ ದ್ರಾವಿಡ ಸಂಸ್ಕøತಿಯು ಉಳಿಯಿತು. ಮುಂದೆ ಹಲವಾರು ಕಾಲ ಘಟ್ಟದಲ್ಲಿ ದಾಳಿಯಿಂದಲೂ ಭಾರತದ ಸಂಸ್ಕøತಿಗೆ ಧÀಕ್ಕೆ ಆಯಿತೆ ಹೊರತು ಅಳಿಸಲು ಆಗಲಿಲ್ಲ. ಇಂತಹ ಹಲವಾರು ವಿಚಾರಗಳನ್ನು ನಾವು ನೋಡಿದಾಗ ನಮಗೆ ಹೆಮ್ಮೆ ಅನಿಸುತ್ತದೆ.

1. ಶ್ರೀ ರಾಮನಿಂದ ನಿರ್ಮಿತ ಭಾರತದಿಂದ ಶ್ರೀಲಂಕಾಗೆ ಇರುವ “ರಾಮ ಸೇತುವೆ” ಪ್ರಪಂಚದ ಮೊದಲನೇ ಸೇತುವೆ. ಇದನ್ನು ನಾಸಾ ತನ್ನ ಉಪಗ್ರಹ ಚಿತ್ರದ ಮೂಲಕ ಒಪ್ಪಿಕೊಂಡಿದೆ.
2. ವಿಶ್ವದ ಅತ್ಯಂತ ಹಳೆಯ ಸಂಸ್ಕøತಿ ಅದರಲ್ಲೂ ಉಳಿದಿರುವ ಸಂಸ್ಕøತಿ ಎಂದರೆ “ಭಾರತೀಯ ಸಂಸ್ಕøತಿ” ಆಗಿದೆ. ಗ್ರೀಕ್ ಸಂಸ್ಕøತಿಗಿಂತ ಶ್ರೇಷ್ಠ ಸಂಸ್ಕøತಿ “ಭಾರತೀಯ ಸಂಸ್ಕøತಿ” ಆಗಿದೆ.
3. ವಿಶ್ವಕ್ಕೆ ಧರ್ಮದ ತಿರುಳನ್ನು ಬೀರಿದ್ದು ಭಾರತ.
4. ಭಾರತವನ್ನು “ವಿಶ್ವದ ಧರ್ಮಗಳ ತೊಟ್ಟಿಲು” ಎನ್ನಬಹುದು.
5. ವಿಶ್ವಕ್ಕೆ ವಿಮಾನದ ಪರಿಕಲ್ಪನೆ ನೀಡಿದ್ದು “ಪುಷ್ಪಕ ವಿಮಾನ” ಮೂಲಕ.
6. “testtube baby” ಪರಿಕಲ್ಪನೆಯನ್ನು ಗಾಂಧಾರಿಯ ಮೂಲಕ ಋಷಿ ಮುನಿಯವರು ಜಗತ್ತಿಗೆ ಪರಿಚಯಿಸಿದ್ದು ಪ್ರಪಂಚದಲ್ಲಿ ಕೌರವ-101 ಮಕ್ಕಳನ್ನು “test tubebaby” ಎನ್ನಬಹುದು.
7. ಪ್ಲಾಸ್ಟಿಕ್ ಸರ್ಜರಿ ಪಿತಾಮಹಾ ಎಂದು ಭಾರತದ ‘ಸುಶೃತ’ ನನ್ನು ಕರೆಯಬಹುದು.
8. ವಿಶ್ವದಲ್ಲೆ ಪ್ರಕೃತಿಯನ್ನು ದೇವರೆಂದು ಪೂಜಿಸಿದ್ದು ಭಾರತೀಯ ಸಂಸ್ಕøತಿ.
9. ‘ಭಾರತ’ ಎಂಬ ಹೆಸರು ‘ಭರತ ವರ್ಷ’ ಎಂಬ ಹೆಸರಿನಿಂದ ಉಗಮವಾಗಿದೆ.’ಇಂಡಿಯಾ’ ಸಿಂಧೂ ನದಿಯ ಇದರ ಪರ್ಷಿಯನ್ ರೂಪಾಂತರ “ಇಂಡೀಸ್” ಎಂಬುದರಿಂದ ಬಂದಿದೆ. ಹಿಂದೂಗಳ ವಾಸ ಹೆಚ್ಚಾಗಿರುವುದರಿಂದ “ಹಿಂದೂಸ್ಥಾನ” ಎಂದು ಕರೆಯುತ್ತಾರೆ.
10. ವಿಶ್ವದ ಮೊದಲ ಅರ್ಥತಜ್ಞನೆಂದು –“ಚಾಣಾಕ್ಯ”ನನ್ನು ಕರೆಯಬಹುದು.
11. ಬೌದ್ಧ ಧರ್ಮವು ಭಾರತದಲ್ಲಿ ಜನ್ಮತಾಳಿ ಚೀನಾ ಸೇರಿದಂತೆ ಮಧ್ಯ ಪ್ರಾಚ್ಯದಲ್ಲಿ ಇಂದಿಗೂ ಸಕ್ರಿಂiÀiವಾಗಿದೆ.
12. ಆರ್ಯುವೇದವನ್ನು ಜಗತ್ತಿಗೆ ಪರಿಚಯಿಸಿದ ಹೆಮ್ಮೆ ನಮ್ಮ ಭಾರತ.
13. ಭಾರತವು ವಿಶ್ವ ಗುರು.
14. ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಹೆಮ್ಮೆ ನಮ್ಮ ಪೂರ್ವಜರದ್ದು.
15. ವಿಶ್ವದ ಮೊದಲ ವಿಶ್ವವಿದ್ಯಾಲಯ ತಕ್ಷಶಿಲೆಯಲ್ಲಿತ್ತು.
16. 1498 ರಲ್ಲಿ ವಾಸ್ಕೋಡಗಾಮ ಭಾರತಕ್ಕೆ ಮಾರ್ಗ ಕಂಡುಹಿಡಿದಿದ್ದಕ್ಕೆ ಇಲ್ಲಿನ ಮಸಾಲೆ ಪದಾರ್ಥಗಳು ವಿಶ್ವದ ಆಹಾರಕ್ಕೆ ರುಚಿ ಕೊಟ್ಟವರು ಭಾರತೀಯರು.
17. ಕೃಷ್ಣದೇವರಾಯನ ಕಾಲದಲ್ಲಿ ಬಂಗಾರವನ್ನು ಬೀದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರು.
18. ವಿಶ್ವದ ಅತ್ಯಂತ ಬೆಲೆಬಾಳುವ ‘ಕೊಹಿನೂರ ವಜ್ರ’ ಭಾರತದ ಆಸ್ತಿ.
19. ಅಂಬಿ ಮತ್ತು ಪೊರಸ್‍ನ ಆಡಳಿತದಿಂದ 1947 ರ ಸ್ವಾತಂತ್ರ್ಯದವರೆಗೂ ಹಲವು ರಾಜರ ಕಥೆಗಳು ರೋಚಕವಾಗಿದೆ.
20. ಗ್ರೀಕ್ ನ ಅಟ್ಲಾಸ್ ಹೀರೊಡೆಟಾಸ್‍ಕ್ಕಿಂತ ನಮ್ಮ ‘ರಾಮಾಯಣ’ ಮತ್ತು ‘ಮಹಾಭಾರತ’ ಶ್ರೇಷ್ಠವಾಗಿದೆ.
21. ಅಲೆಗ್ಸಾಂಡರ್ ಭಾರತದ ಮೇಲೆ ದಾಳಿ ಮಾಡಿದರೂ ಸಂಪೂರ್ಣ ಭಾರತವನ್ನು ಗೆಲ್ಲಲು ಆಗದೇ ಸತ್ತು ಹೋದ ವಿಶ್ವ ಗೆಲ್ಲುವ ಆಸೆಯು ಭಾರತದಿಂದ ಮಣ್ಣಾಯಿತು.
22. ಭಾರತವನ್ನು ‘ದ್ವೀಪ’ ತ್ರಿಕೋನ ದ್ವೀಪ ರಾಷ್ಟ್ರ ಎನ್ನಬಹುದು.
23. ಗ್ರೀಕರು ಪರ್ಷಿಯನ್ನರು, ಹೂಣರು, ಇಸ್ಲಾಮಿನ ಬ್ರಿಟೀಷ್ ದಾಳಿ ಮಾಧ್ಯಮವು ಭಾರತವು ಏಕತೆಯ ಜೊತೆಗೆ ಮೂಲ ಸಂಸ್ಕøತಿಯನ್ನು ಉಳಿಸಿಕೊಂಡು ಬಂದಿದೆ.
24. ಸುಮಾರು 100 ದಶಲಕ್ಷ ವರ್ಷಗಳ ಹಿಂದೆ ಭಾರತ ಖಂಡದ ಭೂ ಬಾಗ ಏಷ್ಯಾದ ಭೂ ಭಾಗಕ್ಕೂ ಡಿಕ್ಕಿ ಹೊಡೆದು ಹಿಮಾಲಯವನ್ನು ಹುಟ್ಟು ಹಾಕಿತು. ಆಗ ಭಾರತ ಏಷ್ಯಾದ ಭಾಗವಾಯಿತು. ಈಗ ಕೂಡ ಈ ಪ್ಲೇಟ್ ಉತ್ತರ ದಿಕ್ಕಿನತ್ತ ಚಲಿಸುತ್ತಿದ್ದು ಮೌಂಟ್ ಎವರೆಸ್ಟ ಪ್ರತಿ ವರ್ಷ ಬೆಳೆಯುತ್ತಿರಲು ಇದೇ ಕಾರಣ.
25. ಭಾರತ ಭೂಭಾಗವು 3 ಕಡೆ ಸಮುದ್ರದಿಂದ ಒಂದು ಕಡೆ ಹಿಮಾಲಯ ಪರ್ವತ ಶ್ರೇಣಿಯಿಂದ ರಕ್ಷಣೆ ಪಡೆದಿದೆ.
26. ವಿಶ್ವದ ಅತ್ಯಂತ ಎತ್ತರವಾದ ಮೌಂಟ್ ಎವರೆಸ್ಟ್ ಭಾರತ ದೇಶದ ಪರ್ವತ ಶ್ರೇಣಿಯಾಗಿದೆ.
27. ಜಗತ್ತಿನ ಎರಡನೇಯ ಅತಿದೊಡ್ಡ ಮೆಗಾಸಿಟಿ ದೆಹಲಿ. ಭಾರತದಲ್ಲಿ ಮೂರು ಮೆಗಾಸಿಟಿಗಳಿವೆ ಚೀನಾಗಿಂತ ಹೆಚ್ಚು ಮೆಗಾಸಿಟಿಗಳು ಇರುವುದು ಭಾರತದಲ್ಲಿ ಇದು ನಮ್ಮೆಲ್ಲರ ಹೆಮ್ಮೆ.
28. ಜಗತ್ತಿನಲ್ಲಿರುವ ಒಟ್ಟು ಮಸಾಲೆಯ ಶೇ 70 ರಷ್ಟು ಭಾಗ ಭಾರತದಲ್ಲೇ ಉತ್ಪಾದನೆ ಆಗುತ್ತದೆ. ಮಸಾಲೆ ಸಲುವಾಗಿ ಬ್ರಿಟಿಷರು ನಮ್ಮ ದೇಶಕ್ಕೆ ಬಂದಿದ್ದು.
29. ಜಗತ್ತಿನಲ್ಲಿ ಉದ್ಯೋಗ ನೀಡಿದ ದೊಡ್ಡ ಸರಕಾರಿ ಸ್ವಾಮ್ಯದ ಸಂಸ್ಥೆ ಅಂದರೆ – ಭಾರತೀಯ ರೈಲ್ವೆ
30. ವಿಶ್ವದ ಅತ್ಯಂತ ದೊಡ್ಡ ಮಾರುಕಟ್ಟೆ ಭಾರತವಾಗಿದೆ. ವಿಶ್ವದ ಎಲ್ಲಾ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ.
31) ದೇಶದ ಅಭಿವೃದ್ದಿ ಮತ್ತು ಶಕ್ತಿಯಲ್ಲಿ ವಿಶ್ವದಲ್ಲೇ ಜನಸಂಖ್ಯೆಯಲ್ಲಿ ಎರಡನೆಯ ಸ್ಥಾನದಲ್ಲಿದೆ.
32) ಜಗತ್ತಿನ ದೊಡ್ಡ ದೇಶಗಳ ವಿಸ್ತೀರ್ಣದ ಆಧಾರದ ಮೇಲೆ 7ನೇ ಸ್ಥಾನ ಪಡೆದಿದೆ.
33) ವಿಶ್ವಬ್ಯಾಂಕ್ ಸೂಚ್ಯಾಂಕದ ಆಧಾರದ ಮೇಲೆ 179 ದೇಶಗಳಲ್ಲಿ 37ನೇ ಸ್ಥಾನವನ್ನು ಜಿಡಿಪಿ ವಿಷಯದಲ್ಲಿ ಪಡೆದಿದೆ.
34) ವಿಶ್ವದ 71 ಬಿಲೆನಿಯರ್‍ಗಳಲ್ಲಿ 3 ಜನ ಭಾರತೀಯರು ಇರುತ್ತಾರೆ.
35) ವಿಶ್ವದ ಅತ್ಯಂತ ಹಳೆಯ ಮತ್ತು ಮಾನವ ಅಂಗಶಾಸ್ತ್ರಕ್ಕೆ ಹೊಂದಿಕೆ ಆಗುವ ಭಾಷೆಗಳಲ್ಲಿ ‘ಸಂಸ್ಕøತ’ವು ಮೊದಲ ಸ್ಥಾನದಲ್ಲಿ ಇದೆ.
36) ಕಬ್ಬಿಣ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿ ಇದೆ.
37) ವಿಶ್ವದ ಮೊಬೈಲ್ ಬಳಕೆದಾರರ ಸೂಚ್ಯಾಂಕದಲ್ಲಿ 2ನೇ ಸ್ಥಾನದಲ್ಲಿದೆ.
38) ‘ಹಾಕಿ’ ರಾಷ್ಟ್ರೀಯ ಆಟ ವಿಶ್ವದ 4ನೇ ಸ್ಥಾನದಲ್ಲಿದೆ. ಕ್ರಿಕೇಟ್‍ನಲ್ಲಿ ಮೊದಲ ಸ್ಥಾನದಲ್ಲಿದೆ. ಕ್ರಿಕೆಟ್‍ನಲ್ಲಿ ಮೊದಲ ಸ್ಥಾನದಲ್ಲಿದೆ.
39) ಜಗತ್ತಿನಲ್ಲಿ ಅತೀ ಹೆಚ್ಚು ಚಲನಚಿತ್ರಗಳು ಸಿದ್ದವಾಗುವುದು ಭಾರತದಲ್ಲೇ ಕಲೆಗೆ ಇಲ್ಲಿ ಅತ್ಯಂತ ಪ್ರೋತ್ಸಾಹ ಇದೆ.
40) ಜಗತ್ತಿನಲ್ಲೇ ಸೈನ್ಯಕ್ಕಾಗಿ ಖರ್ಚು ಮಾಡುವ ದೇಶಗಳ ಸಾಲಿನಲ್ಲಿ 3ನೇ ಸ್ಥಾನದಲ್ಲಿದ್ದು ಸೈನ್ಯ ಶಕ್ತಿಯಲ್ಲಿ 4ನೇ ಸ್ಥಾನದಲ್ಲಿ ಸಕ್ರಿಯ ಟ್ರೂಪ್ಸ್‍ಗಳಲ್ಲಿ ಮೊದಲ ಸ್ಥಾನದಲ್ಲಿದೆ.
41) ಭಾರತದ 100000 ವರ್ಷಗಳ ಇತಿಹಾಸದಲ್ಲಿ ಅದು ಒಮ್ಮೆಯೂ ಬೇರೆ ದೇಶವನ್ನು ಆಕ್ರಮಿಸಿಕೊಂಡ ಉದಾಹರಣೆಯಿಲ್ಲ. ಜಗತ್ತಿನ ಅತಿ ಶಾಂತಿಯುತ ದೇಶ.
42) ಜಗತ್ತಿನ ಅತಿ ದೊಡ್ಡ ಸಸ್ಯಹಾರಿ ದೇಶ ಭಾರತವಾಗಿದೆ. ಇಲ್ಲಿದೆ 20 ರಿಂದ 40 ರಷ್ಟು ಸಂಪೂರ್ಣ ಸಸ್ಯಾಹಾರಿಗಳಾಗಿದ್ದಾರೆ.
43) ಭಾರತದ ಪ್ರತಿ ಹಳ್ಳಿ ಪಟ್ಟಣ ನಗರಗಳಲ್ಲೂ ಪೋಸ್ಟ್ ಆಫೀಸ್ ಇವೆ. ಒಟ್ಟು 1.55.015 ಅಂಚೆ ಕಛೇರಿಗಳು ಇವೆ. ಕಾಶ್ಮೀರದ ದಾಲ್ ಲೆಕ್ಕದಲ್ಲಿ ತೇಲುವ ಅಂಚೆ ಕಛೇರಿ ಕೂಡ ಇದೆ. ಈ ಮೂಲಕ ಜಗತ್ತಿನ ಅತ್ಯಂತ ದೊಡ್ಡ ಅಂಚೆ ವ್ಯವಸ್ಥೆ ಹೊಂದಿದೆ.
44) 12 ವರ್ಷಗಳಿಗೊಮ್ಮೆ ನಾಲ್ಕು ಪವಿತ್ರ ನದಿಗಳ ದಡದಲ್ಲಿ ನಡೆಯುವ ಕುಂಭ ಮೇಳಕ್ಕೆ ಭಾರತವಷ್ಟೇ ಅಲ್ಲದೆ ವಿಶ್ವದ ಎಲ್ಲಾ ಕಡೆಯಿಂದಲೂ ಜನಸಾಗರವೇ ಹರಿದು ಬರುತ್ತಿದೆ. ಇಲ್ಲಿ ಸುಮಾರು 100 ದಶಲಕ್ಷ ಜನರು ಸೇರಿರುತ್ತಾರೆ. ಇದನ್ನು ಅಂತರಿಕ್ಷದಿಂದ ಕೂಡ ನೋಡಬಹುದು. ಜಗತ್ತಿನಲ್ಲೇ ಅತೀ ಹೆಚ್ಚು ಜನ ಸೇರುವ ಮೇಳವಾಗಿದೆ.
45) ವಿಶ್ವದ ಆಮದು ಸೂಚ್ಯಾಂಕದಲ್ಲಿ 11ನೇ ಸ್ಥಾನ ಮತ್ತು ರಫ್ತು ಸೂಚ್ಯಾಂಕದಲ್ಲಿ 18ನೇ ಸ್ಥಾನದಲ್ಲಿ ಇದ್ದೇವೆ.
46) ಭಾರತದಲ್ಲಿ ಸಂಸ್ಕøತ, ಕನ್ನಡ, ತಮಿಳು, ತೆಲುಗು, ಗುಜರಾತಿ, ಕೊಂಕಣಿ ಸೇರಿದಂತೆ 600 ಭಾಷೆಗಳು ಇದ್ದಾಗಲೂ ವಿಶ್ವದೆಲ್ಲೆಡೆ ಇಂಗ್ಲೀಷ್ ಮಾತನಾಡುವವರ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿ ಇದ್ದೇವೆ.
47) ವಿಶ್ವದ ತಂತ್ರಜ್ಞಾನದಕ್ಕೆ ಹೊಂದಾಣಿಕೆ ಆಗುವ ಭಾಷೆಗಳ ಸಂಖ್ಯೆಯಲ್ಲೂ 2ನೇ ಸ್ಥಾನದಲ್ಲಿ ಇದ್ದೇವೆ.
48) ಜಗತ್ತಿನಲ್ಲೇ ಉಕ್ಕು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದ್ದೇವೆ. ಉಕ್ಕಿನ ಮಹತ್ವ ಹೇಳಿದೆ ಭಾರತ.
49) ಬಾಳೆಹಣ್ಣು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
50) ಜಗತ್ತಿನಲ್ಲೆ ಅತೀಹೆಚ್ಚು ಬೀನ್ಸ್ ಉತ್ಪಾದನೆಯ ದೇಶ ಭಾರತ ಮೊದಲ ಸ್ಥಾನದಲ್ಲಿದೆ.
51) ವಿಶ್ವದಲ್ಲಿ ಅತಿ ಹೆಚ್ಚು ಎಮ್ಮೆಗಳು ಇರುವ ದೇಶ ನಮ್ಮದು.
52) ಜಗತ್ತಿನಲ್ಲಿ ಅತೀ ಹೆಚ್ಚು ಹಸುಗಳು ಇರುವ ದೇಶ ಭಾರತ.
53) ವಿಶ್ವದಲ್ಲಿ ಅತ್ಯಂತ ಧಾರ್ಮಿಕ ಭಾವನೆ ಇರುವ ದೇಶ ಭಾರತ.
54) “ವಸುದೈವ ಕುಟುಂಬ” ವಿಶ್ವಕ್ಕೆ ಬಳುವಳಿಯಾಗಿ ಕೊಟ್ಟಿರುವುದು ಭಾರತ.
55) ಜಗತ್ತಿಗೆ ಜ್ಯೋತಿಷ್ಯ ವಿಜ್ಞಾನವನ್ನು ಉಡುಗೊರೆಯಾಗಿ ನೀಡಿದ್ದು ನಮ್ಮ ದೇಶ.
56) ಜಗತ್ತಿನಲ್ಲೇ ‘ಅಬ್ರಕ’ ಉತ್ಪಾದನೆ ಏಕೈಕ ದೇಶ.
57) ಅಣುಬಾಂಬಿನ ಪರಿಕಲ್ಪನೆಯು ಭಾರತ ಇತಿಹಾಸದ ‘ಬ್ರಹ್ಮಾಸ್ತ್ರ’ ಅವಲಂಬಿತವಾಗಿದೆ.
58) ಶ್ರೀಕೃಷ್ಣ ಈ ಭೂಮಿಯ ಮೊದಲ ರಾಜಕಾರಣಿ ಅನ್ನಬಹುದು.
59) ಮಾನವನ ಕಾಮಕ್ಕೂ ರೀತಿ ನೀತಿಗಳ ಕ್ರಮಗಳಿವೆ ಎಂದು ತಿಳಿಸಿದ್ದು ವಾತ್ಸಾಯನ ‘ಕಾಮಸೂತ್ರ’
60) 11ರ ವಯಸ್ಸಿನಲ್ಲೇ ವಿಮಾನ ಚಾಲನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದ ಶ್ರೇಯಾ ದಿನಕರ್ ಅಪ್ರತಿಮ
ಸಾಧಕಿ ನಮ್ಮ ಕನ್ನಡತಿ.
61) ಚಂದ್ರನಲ್ಲಿ ನೀರನ್ನು ಕಂಡುಹಿಡಿದದ್ದು ಭಾರತ-2009 ಸೆಪ್ಟೆಂಬರ್‍ನಲ್ಲಿ ಭಾರತವು ಇಸ್ರೋ ಚಂದ್ರಯಾನ-1 ಎಂಬ ಉಪಗ್ರಹದಲ್ಲಿ ಕಳುಹಿಸಲಾದ ಚಂದ್ರ ಗಣಿಗಾರಿಕೆ ಬಳಸಿಕೊಂಡು ಚಂದ್ರನ ಮೇಲೆ ನೀರು ಇರುವುದನ್ನು ಮೊದಲ ಬಾರಿಗೆ ಪತ್ತೆ ಹಚ್ಚಿತು.
62) ಸ್ವಿಟ್ಜಲ್ರ್ಯಾಂಡ್‍ನಲ್ಲಿ ವಿಜ್ಞಾನ ದಿನಾಚರಣೆಯನ್ನು ಭಾರತದ ಮಾಜಿ ರಾಷ್ಟ್ರಪತಿ ಕ್ಷಿಪಣಿ ತಜ್ಞ ಎ.ಪಿ.ಜೆ. ಅಬ್ದುಲ್ ಕಲಾಂರವರ ನೆನಪಿನಲ್ಲಿ ಆಚರಿಸುತ್ತಾರೆ. ಇವರು 2006 ಮೇ 6 ರಂದು ಸ್ವಿಟ್ಜಲ್ರ್ಯಾಂಡಿಗೆ ಭೇಟಿ ನೀಡಿದ್ದರು. ಈ ನೆನಪಿಗಾಗಿ ಪ್ರತಿ ವರ್ಷ ಮೇ 6 ವಿಜ್ಞಾನ ದಿನವಾಗಿ ಆಚರಿಸುತ್ತಾರೆ.
63) ಜಗತ್ತಿನಲ್ಲೆ ‘ಮೌಸಿನ್‍ರಾಂ’ ಅತೀ ಹೆಚ್ಚು ಮಳೆ ಬೀಳುವ ಜನವಸತಿ ಪ್ರದೇಶ 1861 ರಲ್ಲಿ ಚಿರಾಪುಂಜಿಯಲ್ಲಿ ಅತೀ ಹೆಚ್ಚು ಮಳೆಯಾಗಿ ದಾಖಲೆ ಸೃಷ್ಟಿ ಆಗಿತ್ತು.
64) ಭರತನಾಟ್ಯ ಯಕ್ಷಗಾನ ಮತ್ತು ನಾಟಕಗಳ ಪರಿಚಯಿಸಿದ ಹೆಮ್ಮೆ ನಮ್ಮ ದೇಶವಾಗಿದೆ.
65) ಲಿಂಬೆಹಣ್ಣು ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಪ್ರಥಮ ಸ್ಥಾನದಲ್ಲಿ ನಮ್ಮ ದೇಶವಿದೆ.
66) ಮಾವಿನಹಣ್ಣು ಮತ್ತು ಹಲಸಿನ ಹಣ್ಣು ಉತ್ಪಾದನೆಯಲ್ಲಿ ವಿಶ್ವದ ಮೊದಲ ಸ್ಥಾನದಲ್ಲಿದೆ.
67) ತೆಂಗಿನ ಕಾಯಿ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಪ್ರಥಮ ಸ್ಥಾನದಲ್ಲಿದೆ.
68) ಆಡುಗಳ ಹಾಲುಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ.
69) ಪ್ರಪಂಚದ ಏಳು ಅದ್ಭುತಗಳಲ್ಲಿ ‘ತಾಜ್ ಮಹಲ್’ ಕೂಡ ಒಂದು.
70) ಪ್ರಪಂಚದ ಅತ್ಯಂತ ದೊಡ್ಡ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇರುವ ದೇಸ.
71) ವಿಶ್ವದ ಶೇ. 70ರಷ್ಟು ಹುಲಿಗಳನ್ನು ಹೊಂದಿರುವ ದೇಶ ನಮ್ಮದು.
72) ಭಾರತವು ವಿಶ್ವದ ಸೊನ್ನೆಯನ್ನು ಕೊಡುಗೆ ನೀಡಿದೆ. ಈ ಸೊನ್ನೆ ಇಲ್ಲದಿದ್ದರೆ ವಿಶ್ವವೇ ಸೊನ್ನೆ ಆಗುತ್ತಿತ್ತು. ಬ್ರಹ್ಮಗುಪ್ತ ಸೊನ್ನೆಯ ಕಲ್ಪನೆಯನ್ನು ಪರಿಚಯಿಸಿದ ಗಣಿತ ತಜ್ಞ.
73) ಅತೀ ಹೆಚ್ಚು ಇಂಜಿನೀಯರ್ಸ್ ಡಾಕ್ಟರ್ ತಯಾರಿಸುವ ದೇಶವಾಗಿದೆ. ನಾಸಾದಲ್ಲಿ ಶೇ. 30% ರಷ್ಟು ಭಾರತೀಯರೇ ಇದ್ದಾರೆ.
74) ಕಾಮನ್‍ವೆಲ್ತ್ ಗೇಮ್ಸ್ ಏಷ್ಯನ್ ಗೇಮ್ಸ್ ಓಲಂಪಿಕ್ಸ್ ಸೇರಿದಂತೆ ವಿಶ್ವದ ಎಲ್ಲಾ ರೀತಿಯ ಆಟಗಳಲ್ಲಿ ಭಾಗವಹಿಸುವುದು. ಜೊತೆಗೆ ಪದಕಗಳನ್ನು ಗೆದ್ದಿರುವುದು ಭಾರತ.
75) ವಿಶ್ವದ ಸಿಲಿಕಾನ್ ಸಿಟಿ ಸಿಲಿಕಾನ್ ವ್ಯಾಲಿ ನಮ್ಮ ಬೆಂಗಳೂರು ಕಂಪ್ಯೂಟರ್ ಮುಖ್ಯ ಭಾಗ ಮದರ್ ಬೋರ್ಡ್ ಸಿಲಿಕಾನ್ ಉತ್ಪಾದಿಸುವ ಏಕೈಕ ದೇಶ.

ಹೇಳಿದ್ದು ಅಲ್ಲ, ಇರುವುದು ಲಕ್ಷ ಲಕ್ಷ ಬರೆದರೆ ಪುಟಗಳೇ ಸಾಲದಷ್ಟು ಭಾರತದ ಸಾಧನೆ. ಗತವೈಭವ ಸಂಸ್ಕøತಿ, ಆಚಾರ
ವಿಚಾರಗಳನ್ನು ಹೊಂದಿದೆ. 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ 75 ನೆನಪಿಸುವ ಪುಟ್ಟ ಪ್ರಯತ್ನ ಮಾಡಿದ್ದೇನೆ.
ಸಂಮೋಹನ ವಿದ್ಯೆಯನ್ನು ಭಾರತವು ವಿಶ್ವಕ್ಕೆ ಕೊಟ್ಟಿದೆ. ಏಕಾಗ್ರತೆ ಮನಸ್ಸಿನ ನಿಯಂತ್ರಣ ಹೋಮಿಯೋಪತಿ ಕೊಡುಗೆಗಳು
ಅಪಾರ. ವಿಶ್ವದ ಶ್ರೇಷ್ಠ ಪ್ರಶಸ್ತಿಯಾದ ನೋಬೆಲ್ ಅನ್ನು 12 ಪಡೆಯುವ ಮೂಲಕ ಭಾರತವು ಯಾರಿಗೂ ಕಮ್ಮಿ ಇಲ್ಲ
ಎಂದು ತೋರಿಸಿದೆ. ಈಗ ನಡೆಯುತ್ತಿರುವ ಒಲಂಪಿಕ್ಸ್‍ನಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ನಮ್ಮ ಶಕ್ತಿಯನ್ನು ವಿಶ್ವದ
ಮುಂದೆ ಇಟ್ಟಿದ್ದೇವೆ. ಅಲಿಪ್ತ ನೀತಿಯ ಹರಿಕಾರರು ಶಾಂತಿಪ್ರಿಯ ದೇಶ. ಬಹು ಸಂಸ್ಕøತಿಯಲ್ಲಿ ಏಕತೆ ಮೆರೆದ ನನ್ನ
ಭಾರತ ನನ್ನ ಹೆಮ್ಮೆ ಅಲ್ಲವೆ !

1 3 4 5 6 7 11