ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಒತ್ತಾಯ -ಬಸವರಾಜ ಮ್ಯಾಗಳಮನಿ

ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಒತ್ತಾಯ -ಬಸವರಾಜ ಮ್ಯಾಗಳಮನಿ

Share

ಗಂಗಾವತಿ: ಗಂಗಾವತಿ ನಗರಸಭೆ ವ್ಯಾಪ್ತಿಯ ಹೊಸಳ್ಳಿ ರಸ್ತೆಯಲ್ಲಿ ಸುಮಾರು ೧೬ ಎಕರೆ ಭೂಮಿಯಲ್ಲಿ ೫೧೪ ನಿವೇಶನಗಳನ್ನು ನಿವೇಶನ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡಲು ಅರ್ಜಿ ಕರೆದಿದ್ದು, ಅರ್ಜಿ ಸಲ್ಲಿಸಲು ಇದೇ ತಿಂಗಳ ೩೦ನೇ ತಾರೀಖು ಕೊನೆಯದಿನವೆಂದು ನಿಗದಿಪಡಿಸಿರುತ್ತೀರಿ. ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು ಪಡೆಯಲು ಸಾಕಷ್ಟು ಸಮಯ ಬೇಕಾಗಿರುವುದರಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಇಂದು ನಗರಸಭೆಯ ಪೌರಾಯುಕ್ತರಾದ ಅರವಿಂದ ಜಮಖಂಡಿಯವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಮಾತನಾಡಿದರು, ಅಲ್ಲದೇ ವಾರ್ಡ್ ನಂ: ೨೭ (ಹೊಸದು) ರ ಸಮದ್ ಸಾಬ್ ಲೇಔಟ್ ನ ಪಾರ್ಕ್ನ ಜಾಗೆಯಲ್ಲಿ ಅನೇಕ ವರ್ಷಗಳಿಂದ ವಾಸವಿದ್ದ ಬಡ ಕುಟುಂಬಗಳಿಗೆ ನಿವೇಶನ ನೀಡುವುದಾಗಿ ಭರವಸೆ ನೀಡಿ ನಗರಸಭೆಯವರು ತೆರವುಗೊಳಿಸಿರುತ್ತಾರೆ. ಆ ಬಡ ಕುಟುಂಬಗಳು ಬೀದಿಪಾಲಾಗಿದ್ದು, ಸಂಕಷ್ಟದಲ್ಲಿರುತ್ತಾರೆ. ಆದ್ದರಿಂದ ಆ ನಿವೇಶನ ರಹಿತ ಕುಟುಂಬಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಸದರಿ ನಿವೇಶನಗಳನ್ನು ಯಾವುದೇ ಒತ್ತಡ, ಆಮೀಷಗಳಿಗೆ ಮಣಿಯದೇ ನಿಯಮದ ಪ್ರಕಾರ ಅರ್ಹ ಬಡ ನಿವೇಶನರಹಿತ ಕುಟುಂಬಗಳಿಗೆ ಪಾರದರ್ಶಕವಾಗಿ ಹಂಚಿಕೆ ಮಾಡಬೇಕು. ಅನ್ಯಾಯವಾದಲ್ಲಿ ಕೋರ್ಟ್ ಮೊರೆ ಹೋಗಲಾಗುವುದು. ಇದಕ್ಕೆ ಅವಕಾಶ ಮಾಡಿಕೊಡದೇ ಪಾರದರ್ಶಕವಾಗಿ ನಿವೇಶಹ ಹಂಚಿಕೆ ಮಾಡಬೇಕೆಂದು ನಗರಸಭೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೆಚ್.ಎನ್. ಹಂಚಿನಾಳ, ರಗಡಪ್ಪ ಹೊಸಳ್ಳಿ, ದುರುಗಪ್ಪ ಹೊಸಳ್ಳಿ, ಜಡೆಪ್ಪ ಹಂಚಿನಾಳ, ಮಲ್ಲು ಪಾರಿವಾಳ, ಕನಕಪ್ಪ, ಹನುಮೇಶ ಹೊಸಳ್ಳಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


Share