ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರವೊಂದಾದ ಬೇವೂರು ಶ್ರೀ ವೆಂಕಟರಮಣ (ತಿಮ್ಮಪ್ಪ ) ಸ್ವಾಮಿ ಜಾತ್ರಾ ಮಹೋತ್ಸವ

ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರವೊಂದಾದ ಬೇವೂರು ಶ್ರೀ ವೆಂಕಟರಮಣ (ತಿಮ್ಮಪ್ಪ ) ಸ್ವಾಮಿ ಜಾತ್ರಾ ಮಹೋತ್ಸವ

Share

ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರವೊಂದಾದ ಬೇವೂರು ಶ್ರೀ ವೆಂಕಟರಮಣ (ತಿಮ್ಮಪ್ಪ ) ಸ್ವಾಮಿ ಜಾತ್ರಾ ಮಹೋತ್ಸವ ದಿನಾಂಕ ೧೬ ೧೦ ೨೦೨೧ ರ ಶನಿವಾರದಂದು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.
ತಾಲೂಕು ತಹಶೀಲ್ದಾರ್ ಅವರ ನೇತೃತ್ವದಲ್ಲಿ
ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆ ಸಂಖ್ಯೆ ಎಡಿಎಂ ೧೧ / ಸಿ ಆರ್/೨೮೪/೨೦೧೯_೨೦ ದಿನಾಂಕ ೧೬ ೧೦ ,೨೦೨೧ರಂದು ಶನಿವಾರ ರಂದು ನಡೆಯಬೇಕಿದ್ದ ಬ್ರಹ್ಮರಥೋತ್ಸವ ಮತ್ತು ಅನ್ನದಾಸೋಹ ಇರುವುದಿಲ್ಲ ಎಂದು ಸೂಚಿಯನ್ನು ಪ್ರಕಟಿಸಿದ್ದು, ಸುತ್ತೋಲೆ ಮತ್ತು ಸರ್ಕಾರದ ನಿರ್ದೇಶನದಂತೆ ನಿಯಮಗಳನ್ನು ಕಡ್ಡಾಯವಾಗಿ ಗಮನವಿಟ್ಟುಕೊಂಡ ಈ ಬಾರಿಯೂ ಸಹ ಬೇವೂರು ಬೆಟ್ಟದ ತಿಮ್ಮಪ್ಪನ ನೇರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡುವುದಾಗಿ ತೀರ್ಮಾನಿಸಿರುವುದಾಗಿ ತಿಳಿಸಿದರು.
ದೇವಸ್ಥಾನಕ್ಕೆ ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ವ್ಯವಸ್ಥೆ ಮಾಡಲಾಗುತ್ತದೆ. ವಿಶೇಷ ಪೂಜೆ ಹೊರತುಪಡಿಸಿ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯಲಿದೆ ಎಂದು ತಹಸಿಲ್ದಾರ್ ನಾಗೇಶ್ ತಿಳಿಸಿದರು.

ಬೆಟ್ಟದ ಮೇಲೆ ಸಾರ್ವಜನಿಕರಿಗೆ ಅನುಕೂಲವಾದ ರೀತಿಯಲ್ಲಿ ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರಗಳು, ಬರುವ ಭಕ್ತಾದಿಗಳಿಗೆ ದೇವರ ದರ್ಶನ ಮತ್ತು ೧೨ ಗಂಟೆಗೆ ಸಂಪ್ರದಾಯದAತೆ ಗಜೋತ್ಸವ ಗರುಡೋತ್ಸವ, ದೇವಾಲಯದ ಸಿಬ್ಬಂದಿಗಳು ಸಂಪ್ರದಾಯದAತೆ ಸಾಂಕೇತಿಕವಾಗಿ ಆಚರಣೆ ಮಾಡುವುದು ಮತ್ತು ದೇವರ ದರ್ಶನವನ್ನು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ಹಾಗೂ ಬೆಟ್ಟದ ಮೇಲ್ಗಡೆ ಯಾವುದೇ ಅಂಗಡಿ-ಮುAಗಟ್ಟುಗಳನ್ನು ಹಾಕುವಂತಿಲ್ಲ, ವಿಜಯದಶಮಿಯಂದು ಹಾರೋಹಳ್ಳಿದೊಡ್ಡಿ ಗ್ರಾಮದಲ್ಲಿ ಪ್ರತಿವರ್ಷದಂತೆ ಧಾರ್ಮಿಕವಾಗಿ ಶ್ರೀ ಬೆಟ್ಟದ ತಿಮ್ಮಪ್ಪ ಸ್ವಾಮಿ, ಕಣಿವೆ ಆಂಜನೇಯಸ್ವಾಮಿ ಸಿದ್ದರಾಮೇಶ್ವರ, ಬೀರದೇವರು ಕೆಲಗೆರೆ ಆಂಜನೇಯಸ್ವಾಮಿ
ಉತ್ಸವ, ಬನ್ನಿ ಕಡಿಯುವುದು ಪೂಜೆ ವಿಧಿ ವಿಧಾನಗಳು ನೆರವೇರಲಿವೆ ಎಂದು ದೇವಸ್ಥಾನದ ಮೇಲ್ವಿಚಾರಕರಾದ ಬಿ.ಸಿ ಪುಟ್ಟಸ್ವಾಮಿಯವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮುಜರಾಯಿ ಗುಮಾಸ್ತೆ ಬಿಂಧುಶ್ರೀ ಗ್ರಾಮ ಲೆಕ್ಕಾಧಿಕಾರಿ ಸಿದ್ದರಾಜು ಅರ್ಚಕರಾದ ಶ್ರೀನಿವಾಸಯ್ಯ ಹಾಜರಿದ್ದರು
ಇಂದು ಮುಂಜಾಗೃತ ಕ್ರಮವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸ್ಥಳಕ್ಕಾಗಮಿಸಿದ ಉಪ ತಹಶೀಲ್ದಾರ್ ಲೋಕೇಶ್ ಮತ್ತು ರಾಜಸ್ವ ನಿರೀಕ್ಷಕರಾದ ರಮೇಶ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದ ಸಿದ್ದರಾಜು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.


Share