ಕರ್ನಾಟಕದ ಅಮ್ಮ-ಸುಧಾಮೂರ್ತಿ

ಕರ್ನಾಟಕದ ಅಮ್ಮ-ಸುಧಾಮೂರ್ತಿ

Share

ಸುಧಾಮೂರ್ತಿಯವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಗ್ರಾಮದಲ್ಲಿ ರಾಮಚಂದ್ರ ಕುಲಕರ್ಣಿ ಹಾಗೂ ವಿಮಲಾ ಕುಲಕರ್ಣಿ ಯವರ ಪುತ್ರಿಯಾಗಿ ಆಗಸ್ಟ್ 19 1950 ಅಲ್ಲಿ ಕುಲಕರ್ಣಿ ಮನೆತನದಲ್ಲಿ ಜನಿಸಿದರು. ಹಾವೇರಿ ಜಿಲ್ಲೆಯ ಶಿಗ್ಗಾಂವ್ ಗ್ರಾಮದಲ್ಲಿ ಇವರ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನಡೆಯಿತು. ನಂತರ 1966ರಲ್ಲಿ ಹುಬ್ಬಳ್ಳಿಯ ಎಜುಕೇಶನ್ ಸೊಸೈಟಿ ಗಲ್ರ್ಸ್ ಇಂಗ್ಲೀμï ಸ್ಕೂಲ್ ನಿಂದ ಎಸೆಸೆಲ್ಸಿ ಎಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದರು. 1972 ರಲ್ಲಿ ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. 1974 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. ಇವರು ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ನಲ್ಲಿ ಎಂ.ಇ. ಕಂಪ್ಯೂಟರ್ ಸೈನ್ಸನಲ್ಲಿ ಪದವಿಗಳಿಸಿದರು. ಚಿನ್ನದ ಪದಕಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ. ಸುಧಾಮೂರ್ತಿಯವರು ಟೆಲ್ಕೋದ ಪುಣೆ ಮುಂಬೈ ಜಮ್‍ಶೆಡ್ ಪುರ ಶಾಲೆಗಳಲ್ಲಿ ಡೆವಲಪ್ಮೆಂಟ್ ಇಂಜಿನಿಯರ್ ಆಗಿ ದುಡಿದಿದ್ದಾರೆ. ಟೆಲ್ಕೋ ಗೆ ಪ್ರವೇಶ ಪಡೆದ ಪ್ರಥಮ ಮಹಿಳಾ ಎಂಜಿನಿಯರ್ ಎನ್ನುವ ಹೆಗ್ಗಳಿಕೆಗೆ ಇವರದು. 1996 ರಲ್ಲಿ ತಮ್ಮ ಪತಿ ಶ್ರೀ ನಾರಾಯಣ ಮೂರ್ತಿ ಅವರ ಜೊತೆಗೂಡಿ ಇನ್ಫೋಸಿಸ್ ಫೌಂಡೇಶನ್ ಪ್ರಾರಂಭಿಸಿದರು. ಸುಧಾಮೂರ್ತಿಯವರು ಹಲವು ಕೃತಿಗಳನ್ನು ಸಹ ಪ್ರಕಟಿಸಿದ್ದಾರೆ. ಅವುಗಳೆಂದರೆ “ಹಕ್ಕಿಯ ತೆರದಲಿ, ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್, ಕಾವೇರಿಯಿಂದ ಮೇಕಾಂಗಿಗೆ, ಡಾಲರ್ ಸೊಸೆ, ಮಹಾಶ್ವೇತೆ, ಅತಿರಿಕ್ತೆ, ಪರಿದಿ, ಮನದಮಾತು, ಗುಟ್ಟೊಂದು ಹೇಳುವೆ, ಸಾಮಾನ್ಯರಲ್ಲಿ ಅಸಾಮಾನ್ಯರು, ದಿ ಸಪೆರ್ಂಟ್ಸ್ ರಿವೆಂಜ್, ತುಮುಲ ಋಣ, ಯಶಸ್ವಿ ಸಾಫ್ಟ್ ಮ್ಯಾನ್, ಏರಿಳಿತದ ದಾರಿಯಲಿ,್ಲ ನೊನಿಯ ಸಾಹಸಗಳು ಮುಂತಾದವು. ಇವರು ಕನ್ನಡದಲ್ಲಿ ಮಾತ್ರವಲ್ಲದೆ ಇಂಗ್ಲಿμï ನಲ್ಲಿ ಸುಮಾರು 17 ಪುಸ್ತಕಗಳನ್ನು ಸಹ ಬರೆದಿದ್ದಾರೆ. ಇವರಿಗೆ ಸಂದ ಪುರಸ್ಕಾರಗಳು ಹಲವಾರು ಅವುಗಳೆಂದರೆ

1. ಬಿ.ಇ ಯಲ್ಲಿ ಪ್ರಥಮ ಸ್ಥಾನಗಳಿಸಿದಾಗ ಕರ್ನಾಟಕದ ಮುಖ್ಯಮಂತ್ರಿಗಳಿಂದ ಬೆಳ್ಳಿಯಪದಕ ಲಭಿಸಿತು.
2. ಎಂ.ಟೆಕ್. ಪರೀಕ್ಷಯಲ್ಲಿ ಪ್ರಥಮಸ್ಥಾನ ಗಳಿಸಿದಾಗ ಇಂಡಿಯನ್ ಇನ್ಸ್ಟುಟ್ಯೂಟ್ ಆಫ್ ಇಂಜಿನಿಯರ್ಸ್ ದಿಂದ ಬಂಗಾರದ ಪದಕ ದೊರಕಿತು.
3. 1995 ರಲ್ಲಿ ಬೆಂಗೂಳಿರಿನ ರೋಟರಿ ಕ್ಲಬ್ ನಿಂದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿದೆ.
4. ಪಬ್ಲಿಕ್ ರಿಲೇಶನ್ಸ್ ಸೊಸೈಟಿ ಆಫ್ ಇಂಡಿಯಾದವರಿಂದ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.
5. ಸಮಾಜ ಸೇವೆಗಾಗಿ ಹುಬ್ಬಳ್ಳಿ ದಕ್ಷಿಣ ಭಾಗದ ರೋಟರಿ ಕ್ಲಬ್ ನಿಂದ ಪುರಸ್ಕಾರ ದೊರೆತಿದೆ.
6. 2000ದ ಸಾಲಿನ ಕರ್ನಾಟಕದ ರಾಜ್ಯೋತ್ಸವ ಪುರಸ್ಕಾರ ಲಭಿಸಿದೆ.
7. ಸಮಾಜಸೇವೆಗಾಗಿ 2000ದ ಸಾಲಿನ ಓಜಸ್ವಿನಿ ಪ್ರಶಸ್ತಿ ಲಭಿಸಿದೆ.
8. ಮಿಲೇನಿಯಮ್ ಮಹಿಳಾ ಶಿರೋಮಣಿ ಪ್ರಶಸ್ತಿ ಲಭಿಸಿದೆ.
9.ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಪ್ರಶಸ್ತಿ
10. ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್ ಈ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಶ್ರೀಮತಿ ಸುಧಾಮೂರ್ತಿಯವರು ಇನ್ ಫೋಸಿಸ್ ಫೌಂಡೇಶನ್ ಮೂಲಕ ದೇವದಾಸಿಯರಿಗೆ, ಪುರ್ನವಸತಿ, ಬಡಮಕ್ಕಳಿಗೆ ಶಿಕ್ಷಣ, ಇತ್ತಿಚಿನ ಉತ್ತರ ಕರ್ನಾಟಕದ ನೆರೆಯಲ್ಲಿ ಸಿಲುಕಿದವರಿಗೆ ಹಲವಾರು ರೀತಿಯ ಸಹಕಾರ ಮಾಡಿರುತ್ತಾರೆ. ಈಗ ಸದ್ಯ ಕೊರೋನ ಪೀಡಿತರಿಗಾಗಿ ಬೆಂಗಳೂರಿನಲ್ಲಿ ಆಸ್ಪತ್ರೆ ನಿರ್ಮಿಸುತ್ತಿದ್ದು ಹೀಗೆ ಕಷ್ಟದ ಸಮಯದಲ್ಲಿ ಜನತೆಗೆ ಸಹಾಯ ಮಾಡುವ ಕರ್ನಾಟಕದ ಅಮ್ಮನಾಗಿದ್ದಾರೆ.


Share