ನನ್ನ ದೇಶ  ನನ್ನ ಹೆಮ್ಮೆ

ನನ್ನ ದೇಶ ನನ್ನ ಹೆಮ್ಮೆ

Share

ಭಾರತವು ವಿಶ್ವದ ಒಂದು ಭಾಗದಲ್ಲಿ ವಿಶ್ವವೇ ಭಾರತ. ಉಳಿದ ದೇಶಗಳು ಇದರ ಅಂಗಗಳು ಅನ್ನಬಹುದು. ಮಾನವ ಜನಾಂಗದ ಉಗಮವು ಆಫ್ರಿಕಾದ ಭಾಗದಲ್ಲಿ ಆಗಿರಬಹುದು ಎಂಬ ನಂಬಿಕೆ ಇದೆ. ಈ ಆಫ್ರಿಕಾದ ನಾಗರೀಕತೆಯ ಕವಲುದಾರಿಯಲ್ಲಿ ಈಜಿಪ್ಟ್ ಬ್ಯಾಬಿಲೋನಿಯಾ, ರಷ್ಯಾ, ಮಂಗೋಲಿಯನ್ , ಇಂಡೋ ಜನಾಂಗ ಸೇರಿದಂತೆ ಹಲವಾರು ಜನಾಂಗಗಳು ಪ್ರವರ್ಥ ಮಾನಕ್ಕೆ ಬಂದಾಗ ನಮ್ಮ ಸಿಂಧೂ ಬಯಲಿನ ನಾಗರೀಕತೆಯು ವಿಜ್ಞಾನ, ಆಧ್ಯಾತ್ಮ, ತತ್ವ, ಸಿದ್ದಾಂತಗಳ ಮೇಲೆ ಅಗಾದ ಪ್ರಮಾಣದಲ್ಲಿ ಬೆಳೆದಿತ್ತು. ಮೂಲ ನಿವಾಸಿಗಳಾದ ದ್ರಾವಿಡರ ಮೇಲೆ ಆರ್ಯರ ಆಕ್ರಮಣವು ಪ್ರಭಾವ ಬೀರಿದರೂ ಕೂಡ ಮೂಲ ದ್ರಾವಿಡ ಸಂಸ್ಕøತಿಯು ಉಳಿಯಿತು. ಮುಂದೆ ಹಲವಾರು ಕಾಲ ಘಟ್ಟದಲ್ಲಿ ದಾಳಿಯಿಂದಲೂ ಭಾರತದ ಸಂಸ್ಕøತಿಗೆ ಧÀಕ್ಕೆ ಆಯಿತೆ ಹೊರತು ಅಳಿಸಲು ಆಗಲಿಲ್ಲ. ಇಂತಹ ಹಲವಾರು ವಿಚಾರಗಳನ್ನು ನಾವು ನೋಡಿದಾಗ ನಮಗೆ ಹೆಮ್ಮೆ ಅನಿಸುತ್ತದೆ.

1. ಶ್ರೀ ರಾಮನಿಂದ ನಿರ್ಮಿತ ಭಾರತದಿಂದ ಶ್ರೀಲಂಕಾಗೆ ಇರುವ “ರಾಮ ಸೇತುವೆ” ಪ್ರಪಂಚದ ಮೊದಲನೇ ಸೇತುವೆ. ಇದನ್ನು ನಾಸಾ ತನ್ನ ಉಪಗ್ರಹ ಚಿತ್ರದ ಮೂಲಕ ಒಪ್ಪಿಕೊಂಡಿದೆ.
2. ವಿಶ್ವದ ಅತ್ಯಂತ ಹಳೆಯ ಸಂಸ್ಕøತಿ ಅದರಲ್ಲೂ ಉಳಿದಿರುವ ಸಂಸ್ಕøತಿ ಎಂದರೆ “ಭಾರತೀಯ ಸಂಸ್ಕøತಿ” ಆಗಿದೆ. ಗ್ರೀಕ್ ಸಂಸ್ಕøತಿಗಿಂತ ಶ್ರೇಷ್ಠ ಸಂಸ್ಕøತಿ “ಭಾರತೀಯ ಸಂಸ್ಕøತಿ” ಆಗಿದೆ.
3. ವಿಶ್ವಕ್ಕೆ ಧರ್ಮದ ತಿರುಳನ್ನು ಬೀರಿದ್ದು ಭಾರತ.
4. ಭಾರತವನ್ನು “ವಿಶ್ವದ ಧರ್ಮಗಳ ತೊಟ್ಟಿಲು” ಎನ್ನಬಹುದು.
5. ವಿಶ್ವಕ್ಕೆ ವಿಮಾನದ ಪರಿಕಲ್ಪನೆ ನೀಡಿದ್ದು “ಪುಷ್ಪಕ ವಿಮಾನ” ಮೂಲಕ.
6. “testtube baby” ಪರಿಕಲ್ಪನೆಯನ್ನು ಗಾಂಧಾರಿಯ ಮೂಲಕ ಋಷಿ ಮುನಿಯವರು ಜಗತ್ತಿಗೆ ಪರಿಚಯಿಸಿದ್ದು ಪ್ರಪಂಚದಲ್ಲಿ ಕೌರವ-101 ಮಕ್ಕಳನ್ನು “test tubebaby” ಎನ್ನಬಹುದು.
7. ಪ್ಲಾಸ್ಟಿಕ್ ಸರ್ಜರಿ ಪಿತಾಮಹಾ ಎಂದು ಭಾರತದ ‘ಸುಶೃತ’ ನನ್ನು ಕರೆಯಬಹುದು.
8. ವಿಶ್ವದಲ್ಲೆ ಪ್ರಕೃತಿಯನ್ನು ದೇವರೆಂದು ಪೂಜಿಸಿದ್ದು ಭಾರತೀಯ ಸಂಸ್ಕøತಿ.
9. ‘ಭಾರತ’ ಎಂಬ ಹೆಸರು ‘ಭರತ ವರ್ಷ’ ಎಂಬ ಹೆಸರಿನಿಂದ ಉಗಮವಾಗಿದೆ.’ಇಂಡಿಯಾ’ ಸಿಂಧೂ ನದಿಯ ಇದರ ಪರ್ಷಿಯನ್ ರೂಪಾಂತರ “ಇಂಡೀಸ್” ಎಂಬುದರಿಂದ ಬಂದಿದೆ. ಹಿಂದೂಗಳ ವಾಸ ಹೆಚ್ಚಾಗಿರುವುದರಿಂದ “ಹಿಂದೂಸ್ಥಾನ” ಎಂದು ಕರೆಯುತ್ತಾರೆ.
10. ವಿಶ್ವದ ಮೊದಲ ಅರ್ಥತಜ್ಞನೆಂದು –“ಚಾಣಾಕ್ಯ”ನನ್ನು ಕರೆಯಬಹುದು.
11. ಬೌದ್ಧ ಧರ್ಮವು ಭಾರತದಲ್ಲಿ ಜನ್ಮತಾಳಿ ಚೀನಾ ಸೇರಿದಂತೆ ಮಧ್ಯ ಪ್ರಾಚ್ಯದಲ್ಲಿ ಇಂದಿಗೂ ಸಕ್ರಿಂiÀiವಾಗಿದೆ.
12. ಆರ್ಯುವೇದವನ್ನು ಜಗತ್ತಿಗೆ ಪರಿಚಯಿಸಿದ ಹೆಮ್ಮೆ ನಮ್ಮ ಭಾರತ.
13. ಭಾರತವು ವಿಶ್ವ ಗುರು.
14. ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಹೆಮ್ಮೆ ನಮ್ಮ ಪೂರ್ವಜರದ್ದು.
15. ವಿಶ್ವದ ಮೊದಲ ವಿಶ್ವವಿದ್ಯಾಲಯ ತಕ್ಷಶಿಲೆಯಲ್ಲಿತ್ತು.
16. 1498 ರಲ್ಲಿ ವಾಸ್ಕೋಡಗಾಮ ಭಾರತಕ್ಕೆ ಮಾರ್ಗ ಕಂಡುಹಿಡಿದಿದ್ದಕ್ಕೆ ಇಲ್ಲಿನ ಮಸಾಲೆ ಪದಾರ್ಥಗಳು ವಿಶ್ವದ ಆಹಾರಕ್ಕೆ ರುಚಿ ಕೊಟ್ಟವರು ಭಾರತೀಯರು.
17. ಕೃಷ್ಣದೇವರಾಯನ ಕಾಲದಲ್ಲಿ ಬಂಗಾರವನ್ನು ಬೀದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರು.
18. ವಿಶ್ವದ ಅತ್ಯಂತ ಬೆಲೆಬಾಳುವ ‘ಕೊಹಿನೂರ ವಜ್ರ’ ಭಾರತದ ಆಸ್ತಿ.
19. ಅಂಬಿ ಮತ್ತು ಪೊರಸ್‍ನ ಆಡಳಿತದಿಂದ 1947 ರ ಸ್ವಾತಂತ್ರ್ಯದವರೆಗೂ ಹಲವು ರಾಜರ ಕಥೆಗಳು ರೋಚಕವಾಗಿದೆ.
20. ಗ್ರೀಕ್ ನ ಅಟ್ಲಾಸ್ ಹೀರೊಡೆಟಾಸ್‍ಕ್ಕಿಂತ ನಮ್ಮ ‘ರಾಮಾಯಣ’ ಮತ್ತು ‘ಮಹಾಭಾರತ’ ಶ್ರೇಷ್ಠವಾಗಿದೆ.
21. ಅಲೆಗ್ಸಾಂಡರ್ ಭಾರತದ ಮೇಲೆ ದಾಳಿ ಮಾಡಿದರೂ ಸಂಪೂರ್ಣ ಭಾರತವನ್ನು ಗೆಲ್ಲಲು ಆಗದೇ ಸತ್ತು ಹೋದ ವಿಶ್ವ ಗೆಲ್ಲುವ ಆಸೆಯು ಭಾರತದಿಂದ ಮಣ್ಣಾಯಿತು.
22. ಭಾರತವನ್ನು ‘ದ್ವೀಪ’ ತ್ರಿಕೋನ ದ್ವೀಪ ರಾಷ್ಟ್ರ ಎನ್ನಬಹುದು.
23. ಗ್ರೀಕರು ಪರ್ಷಿಯನ್ನರು, ಹೂಣರು, ಇಸ್ಲಾಮಿನ ಬ್ರಿಟೀಷ್ ದಾಳಿ ಮಾಧ್ಯಮವು ಭಾರತವು ಏಕತೆಯ ಜೊತೆಗೆ ಮೂಲ ಸಂಸ್ಕøತಿಯನ್ನು ಉಳಿಸಿಕೊಂಡು ಬಂದಿದೆ.
24. ಸುಮಾರು 100 ದಶಲಕ್ಷ ವರ್ಷಗಳ ಹಿಂದೆ ಭಾರತ ಖಂಡದ ಭೂ ಬಾಗ ಏಷ್ಯಾದ ಭೂ ಭಾಗಕ್ಕೂ ಡಿಕ್ಕಿ ಹೊಡೆದು ಹಿಮಾಲಯವನ್ನು ಹುಟ್ಟು ಹಾಕಿತು. ಆಗ ಭಾರತ ಏಷ್ಯಾದ ಭಾಗವಾಯಿತು. ಈಗ ಕೂಡ ಈ ಪ್ಲೇಟ್ ಉತ್ತರ ದಿಕ್ಕಿನತ್ತ ಚಲಿಸುತ್ತಿದ್ದು ಮೌಂಟ್ ಎವರೆಸ್ಟ ಪ್ರತಿ ವರ್ಷ ಬೆಳೆಯುತ್ತಿರಲು ಇದೇ ಕಾರಣ.
25. ಭಾರತ ಭೂಭಾಗವು 3 ಕಡೆ ಸಮುದ್ರದಿಂದ ಒಂದು ಕಡೆ ಹಿಮಾಲಯ ಪರ್ವತ ಶ್ರೇಣಿಯಿಂದ ರಕ್ಷಣೆ ಪಡೆದಿದೆ.
26. ವಿಶ್ವದ ಅತ್ಯಂತ ಎತ್ತರವಾದ ಮೌಂಟ್ ಎವರೆಸ್ಟ್ ಭಾರತ ದೇಶದ ಪರ್ವತ ಶ್ರೇಣಿಯಾಗಿದೆ.
27. ಜಗತ್ತಿನ ಎರಡನೇಯ ಅತಿದೊಡ್ಡ ಮೆಗಾಸಿಟಿ ದೆಹಲಿ. ಭಾರತದಲ್ಲಿ ಮೂರು ಮೆಗಾಸಿಟಿಗಳಿವೆ ಚೀನಾಗಿಂತ ಹೆಚ್ಚು ಮೆಗಾಸಿಟಿಗಳು ಇರುವುದು ಭಾರತದಲ್ಲಿ ಇದು ನಮ್ಮೆಲ್ಲರ ಹೆಮ್ಮೆ.
28. ಜಗತ್ತಿನಲ್ಲಿರುವ ಒಟ್ಟು ಮಸಾಲೆಯ ಶೇ 70 ರಷ್ಟು ಭಾಗ ಭಾರತದಲ್ಲೇ ಉತ್ಪಾದನೆ ಆಗುತ್ತದೆ. ಮಸಾಲೆ ಸಲುವಾಗಿ ಬ್ರಿಟಿಷರು ನಮ್ಮ ದೇಶಕ್ಕೆ ಬಂದಿದ್ದು.
29. ಜಗತ್ತಿನಲ್ಲಿ ಉದ್ಯೋಗ ನೀಡಿದ ದೊಡ್ಡ ಸರಕಾರಿ ಸ್ವಾಮ್ಯದ ಸಂಸ್ಥೆ ಅಂದರೆ – ಭಾರತೀಯ ರೈಲ್ವೆ
30. ವಿಶ್ವದ ಅತ್ಯಂತ ದೊಡ್ಡ ಮಾರುಕಟ್ಟೆ ಭಾರತವಾಗಿದೆ. ವಿಶ್ವದ ಎಲ್ಲಾ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ.
31) ದೇಶದ ಅಭಿವೃದ್ದಿ ಮತ್ತು ಶಕ್ತಿಯಲ್ಲಿ ವಿಶ್ವದಲ್ಲೇ ಜನಸಂಖ್ಯೆಯಲ್ಲಿ ಎರಡನೆಯ ಸ್ಥಾನದಲ್ಲಿದೆ.
32) ಜಗತ್ತಿನ ದೊಡ್ಡ ದೇಶಗಳ ವಿಸ್ತೀರ್ಣದ ಆಧಾರದ ಮೇಲೆ 7ನೇ ಸ್ಥಾನ ಪಡೆದಿದೆ.
33) ವಿಶ್ವಬ್ಯಾಂಕ್ ಸೂಚ್ಯಾಂಕದ ಆಧಾರದ ಮೇಲೆ 179 ದೇಶಗಳಲ್ಲಿ 37ನೇ ಸ್ಥಾನವನ್ನು ಜಿಡಿಪಿ ವಿಷಯದಲ್ಲಿ ಪಡೆದಿದೆ.
34) ವಿಶ್ವದ 71 ಬಿಲೆನಿಯರ್‍ಗಳಲ್ಲಿ 3 ಜನ ಭಾರತೀಯರು ಇರುತ್ತಾರೆ.
35) ವಿಶ್ವದ ಅತ್ಯಂತ ಹಳೆಯ ಮತ್ತು ಮಾನವ ಅಂಗಶಾಸ್ತ್ರಕ್ಕೆ ಹೊಂದಿಕೆ ಆಗುವ ಭಾಷೆಗಳಲ್ಲಿ ‘ಸಂಸ್ಕøತ’ವು ಮೊದಲ ಸ್ಥಾನದಲ್ಲಿ ಇದೆ.
36) ಕಬ್ಬಿಣ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿ ಇದೆ.
37) ವಿಶ್ವದ ಮೊಬೈಲ್ ಬಳಕೆದಾರರ ಸೂಚ್ಯಾಂಕದಲ್ಲಿ 2ನೇ ಸ್ಥಾನದಲ್ಲಿದೆ.
38) ‘ಹಾಕಿ’ ರಾಷ್ಟ್ರೀಯ ಆಟ ವಿಶ್ವದ 4ನೇ ಸ್ಥಾನದಲ್ಲಿದೆ. ಕ್ರಿಕೇಟ್‍ನಲ್ಲಿ ಮೊದಲ ಸ್ಥಾನದಲ್ಲಿದೆ. ಕ್ರಿಕೆಟ್‍ನಲ್ಲಿ ಮೊದಲ ಸ್ಥಾನದಲ್ಲಿದೆ.
39) ಜಗತ್ತಿನಲ್ಲಿ ಅತೀ ಹೆಚ್ಚು ಚಲನಚಿತ್ರಗಳು ಸಿದ್ದವಾಗುವುದು ಭಾರತದಲ್ಲೇ ಕಲೆಗೆ ಇಲ್ಲಿ ಅತ್ಯಂತ ಪ್ರೋತ್ಸಾಹ ಇದೆ.
40) ಜಗತ್ತಿನಲ್ಲೇ ಸೈನ್ಯಕ್ಕಾಗಿ ಖರ್ಚು ಮಾಡುವ ದೇಶಗಳ ಸಾಲಿನಲ್ಲಿ 3ನೇ ಸ್ಥಾನದಲ್ಲಿದ್ದು ಸೈನ್ಯ ಶಕ್ತಿಯಲ್ಲಿ 4ನೇ ಸ್ಥಾನದಲ್ಲಿ ಸಕ್ರಿಯ ಟ್ರೂಪ್ಸ್‍ಗಳಲ್ಲಿ ಮೊದಲ ಸ್ಥಾನದಲ್ಲಿದೆ.
41) ಭಾರತದ 100000 ವರ್ಷಗಳ ಇತಿಹಾಸದಲ್ಲಿ ಅದು ಒಮ್ಮೆಯೂ ಬೇರೆ ದೇಶವನ್ನು ಆಕ್ರಮಿಸಿಕೊಂಡ ಉದಾಹರಣೆಯಿಲ್ಲ. ಜಗತ್ತಿನ ಅತಿ ಶಾಂತಿಯುತ ದೇಶ.
42) ಜಗತ್ತಿನ ಅತಿ ದೊಡ್ಡ ಸಸ್ಯಹಾರಿ ದೇಶ ಭಾರತವಾಗಿದೆ. ಇಲ್ಲಿದೆ 20 ರಿಂದ 40 ರಷ್ಟು ಸಂಪೂರ್ಣ ಸಸ್ಯಾಹಾರಿಗಳಾಗಿದ್ದಾರೆ.
43) ಭಾರತದ ಪ್ರತಿ ಹಳ್ಳಿ ಪಟ್ಟಣ ನಗರಗಳಲ್ಲೂ ಪೋಸ್ಟ್ ಆಫೀಸ್ ಇವೆ. ಒಟ್ಟು 1.55.015 ಅಂಚೆ ಕಛೇರಿಗಳು ಇವೆ. ಕಾಶ್ಮೀರದ ದಾಲ್ ಲೆಕ್ಕದಲ್ಲಿ ತೇಲುವ ಅಂಚೆ ಕಛೇರಿ ಕೂಡ ಇದೆ. ಈ ಮೂಲಕ ಜಗತ್ತಿನ ಅತ್ಯಂತ ದೊಡ್ಡ ಅಂಚೆ ವ್ಯವಸ್ಥೆ ಹೊಂದಿದೆ.
44) 12 ವರ್ಷಗಳಿಗೊಮ್ಮೆ ನಾಲ್ಕು ಪವಿತ್ರ ನದಿಗಳ ದಡದಲ್ಲಿ ನಡೆಯುವ ಕುಂಭ ಮೇಳಕ್ಕೆ ಭಾರತವಷ್ಟೇ ಅಲ್ಲದೆ ವಿಶ್ವದ ಎಲ್ಲಾ ಕಡೆಯಿಂದಲೂ ಜನಸಾಗರವೇ ಹರಿದು ಬರುತ್ತಿದೆ. ಇಲ್ಲಿ ಸುಮಾರು 100 ದಶಲಕ್ಷ ಜನರು ಸೇರಿರುತ್ತಾರೆ. ಇದನ್ನು ಅಂತರಿಕ್ಷದಿಂದ ಕೂಡ ನೋಡಬಹುದು. ಜಗತ್ತಿನಲ್ಲೇ ಅತೀ ಹೆಚ್ಚು ಜನ ಸೇರುವ ಮೇಳವಾಗಿದೆ.
45) ವಿಶ್ವದ ಆಮದು ಸೂಚ್ಯಾಂಕದಲ್ಲಿ 11ನೇ ಸ್ಥಾನ ಮತ್ತು ರಫ್ತು ಸೂಚ್ಯಾಂಕದಲ್ಲಿ 18ನೇ ಸ್ಥಾನದಲ್ಲಿ ಇದ್ದೇವೆ.
46) ಭಾರತದಲ್ಲಿ ಸಂಸ್ಕøತ, ಕನ್ನಡ, ತಮಿಳು, ತೆಲುಗು, ಗುಜರಾತಿ, ಕೊಂಕಣಿ ಸೇರಿದಂತೆ 600 ಭಾಷೆಗಳು ಇದ್ದಾಗಲೂ ವಿಶ್ವದೆಲ್ಲೆಡೆ ಇಂಗ್ಲೀಷ್ ಮಾತನಾಡುವವರ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿ ಇದ್ದೇವೆ.
47) ವಿಶ್ವದ ತಂತ್ರಜ್ಞಾನದಕ್ಕೆ ಹೊಂದಾಣಿಕೆ ಆಗುವ ಭಾಷೆಗಳ ಸಂಖ್ಯೆಯಲ್ಲೂ 2ನೇ ಸ್ಥಾನದಲ್ಲಿ ಇದ್ದೇವೆ.
48) ಜಗತ್ತಿನಲ್ಲೇ ಉಕ್ಕು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದ್ದೇವೆ. ಉಕ್ಕಿನ ಮಹತ್ವ ಹೇಳಿದೆ ಭಾರತ.
49) ಬಾಳೆಹಣ್ಣು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
50) ಜಗತ್ತಿನಲ್ಲೆ ಅತೀಹೆಚ್ಚು ಬೀನ್ಸ್ ಉತ್ಪಾದನೆಯ ದೇಶ ಭಾರತ ಮೊದಲ ಸ್ಥಾನದಲ್ಲಿದೆ.
51) ವಿಶ್ವದಲ್ಲಿ ಅತಿ ಹೆಚ್ಚು ಎಮ್ಮೆಗಳು ಇರುವ ದೇಶ ನಮ್ಮದು.
52) ಜಗತ್ತಿನಲ್ಲಿ ಅತೀ ಹೆಚ್ಚು ಹಸುಗಳು ಇರುವ ದೇಶ ಭಾರತ.
53) ವಿಶ್ವದಲ್ಲಿ ಅತ್ಯಂತ ಧಾರ್ಮಿಕ ಭಾವನೆ ಇರುವ ದೇಶ ಭಾರತ.
54) “ವಸುದೈವ ಕುಟುಂಬ” ವಿಶ್ವಕ್ಕೆ ಬಳುವಳಿಯಾಗಿ ಕೊಟ್ಟಿರುವುದು ಭಾರತ.
55) ಜಗತ್ತಿಗೆ ಜ್ಯೋತಿಷ್ಯ ವಿಜ್ಞಾನವನ್ನು ಉಡುಗೊರೆಯಾಗಿ ನೀಡಿದ್ದು ನಮ್ಮ ದೇಶ.
56) ಜಗತ್ತಿನಲ್ಲೇ ‘ಅಬ್ರಕ’ ಉತ್ಪಾದನೆ ಏಕೈಕ ದೇಶ.
57) ಅಣುಬಾಂಬಿನ ಪರಿಕಲ್ಪನೆಯು ಭಾರತ ಇತಿಹಾಸದ ‘ಬ್ರಹ್ಮಾಸ್ತ್ರ’ ಅವಲಂಬಿತವಾಗಿದೆ.
58) ಶ್ರೀಕೃಷ್ಣ ಈ ಭೂಮಿಯ ಮೊದಲ ರಾಜಕಾರಣಿ ಅನ್ನಬಹುದು.
59) ಮಾನವನ ಕಾಮಕ್ಕೂ ರೀತಿ ನೀತಿಗಳ ಕ್ರಮಗಳಿವೆ ಎಂದು ತಿಳಿಸಿದ್ದು ವಾತ್ಸಾಯನ ‘ಕಾಮಸೂತ್ರ’
60) 11ರ ವಯಸ್ಸಿನಲ್ಲೇ ವಿಮಾನ ಚಾಲನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದ ಶ್ರೇಯಾ ದಿನಕರ್ ಅಪ್ರತಿಮ
ಸಾಧಕಿ ನಮ್ಮ ಕನ್ನಡತಿ.
61) ಚಂದ್ರನಲ್ಲಿ ನೀರನ್ನು ಕಂಡುಹಿಡಿದದ್ದು ಭಾರತ-2009 ಸೆಪ್ಟೆಂಬರ್‍ನಲ್ಲಿ ಭಾರತವು ಇಸ್ರೋ ಚಂದ್ರಯಾನ-1 ಎಂಬ ಉಪಗ್ರಹದಲ್ಲಿ ಕಳುಹಿಸಲಾದ ಚಂದ್ರ ಗಣಿಗಾರಿಕೆ ಬಳಸಿಕೊಂಡು ಚಂದ್ರನ ಮೇಲೆ ನೀರು ಇರುವುದನ್ನು ಮೊದಲ ಬಾರಿಗೆ ಪತ್ತೆ ಹಚ್ಚಿತು.
62) ಸ್ವಿಟ್ಜಲ್ರ್ಯಾಂಡ್‍ನಲ್ಲಿ ವಿಜ್ಞಾನ ದಿನಾಚರಣೆಯನ್ನು ಭಾರತದ ಮಾಜಿ ರಾಷ್ಟ್ರಪತಿ ಕ್ಷಿಪಣಿ ತಜ್ಞ ಎ.ಪಿ.ಜೆ. ಅಬ್ದುಲ್ ಕಲಾಂರವರ ನೆನಪಿನಲ್ಲಿ ಆಚರಿಸುತ್ತಾರೆ. ಇವರು 2006 ಮೇ 6 ರಂದು ಸ್ವಿಟ್ಜಲ್ರ್ಯಾಂಡಿಗೆ ಭೇಟಿ ನೀಡಿದ್ದರು. ಈ ನೆನಪಿಗಾಗಿ ಪ್ರತಿ ವರ್ಷ ಮೇ 6 ವಿಜ್ಞಾನ ದಿನವಾಗಿ ಆಚರಿಸುತ್ತಾರೆ.
63) ಜಗತ್ತಿನಲ್ಲೆ ‘ಮೌಸಿನ್‍ರಾಂ’ ಅತೀ ಹೆಚ್ಚು ಮಳೆ ಬೀಳುವ ಜನವಸತಿ ಪ್ರದೇಶ 1861 ರಲ್ಲಿ ಚಿರಾಪುಂಜಿಯಲ್ಲಿ ಅತೀ ಹೆಚ್ಚು ಮಳೆಯಾಗಿ ದಾಖಲೆ ಸೃಷ್ಟಿ ಆಗಿತ್ತು.
64) ಭರತನಾಟ್ಯ ಯಕ್ಷಗಾನ ಮತ್ತು ನಾಟಕಗಳ ಪರಿಚಯಿಸಿದ ಹೆಮ್ಮೆ ನಮ್ಮ ದೇಶವಾಗಿದೆ.
65) ಲಿಂಬೆಹಣ್ಣು ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಪ್ರಥಮ ಸ್ಥಾನದಲ್ಲಿ ನಮ್ಮ ದೇಶವಿದೆ.
66) ಮಾವಿನಹಣ್ಣು ಮತ್ತು ಹಲಸಿನ ಹಣ್ಣು ಉತ್ಪಾದನೆಯಲ್ಲಿ ವಿಶ್ವದ ಮೊದಲ ಸ್ಥಾನದಲ್ಲಿದೆ.
67) ತೆಂಗಿನ ಕಾಯಿ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಪ್ರಥಮ ಸ್ಥಾನದಲ್ಲಿದೆ.
68) ಆಡುಗಳ ಹಾಲುಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ.
69) ಪ್ರಪಂಚದ ಏಳು ಅದ್ಭುತಗಳಲ್ಲಿ ‘ತಾಜ್ ಮಹಲ್’ ಕೂಡ ಒಂದು.
70) ಪ್ರಪಂಚದ ಅತ್ಯಂತ ದೊಡ್ಡ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇರುವ ದೇಸ.
71) ವಿಶ್ವದ ಶೇ. 70ರಷ್ಟು ಹುಲಿಗಳನ್ನು ಹೊಂದಿರುವ ದೇಶ ನಮ್ಮದು.
72) ಭಾರತವು ವಿಶ್ವದ ಸೊನ್ನೆಯನ್ನು ಕೊಡುಗೆ ನೀಡಿದೆ. ಈ ಸೊನ್ನೆ ಇಲ್ಲದಿದ್ದರೆ ವಿಶ್ವವೇ ಸೊನ್ನೆ ಆಗುತ್ತಿತ್ತು. ಬ್ರಹ್ಮಗುಪ್ತ ಸೊನ್ನೆಯ ಕಲ್ಪನೆಯನ್ನು ಪರಿಚಯಿಸಿದ ಗಣಿತ ತಜ್ಞ.
73) ಅತೀ ಹೆಚ್ಚು ಇಂಜಿನೀಯರ್ಸ್ ಡಾಕ್ಟರ್ ತಯಾರಿಸುವ ದೇಶವಾಗಿದೆ. ನಾಸಾದಲ್ಲಿ ಶೇ. 30% ರಷ್ಟು ಭಾರತೀಯರೇ ಇದ್ದಾರೆ.
74) ಕಾಮನ್‍ವೆಲ್ತ್ ಗೇಮ್ಸ್ ಏಷ್ಯನ್ ಗೇಮ್ಸ್ ಓಲಂಪಿಕ್ಸ್ ಸೇರಿದಂತೆ ವಿಶ್ವದ ಎಲ್ಲಾ ರೀತಿಯ ಆಟಗಳಲ್ಲಿ ಭಾಗವಹಿಸುವುದು. ಜೊತೆಗೆ ಪದಕಗಳನ್ನು ಗೆದ್ದಿರುವುದು ಭಾರತ.
75) ವಿಶ್ವದ ಸಿಲಿಕಾನ್ ಸಿಟಿ ಸಿಲಿಕಾನ್ ವ್ಯಾಲಿ ನಮ್ಮ ಬೆಂಗಳೂರು ಕಂಪ್ಯೂಟರ್ ಮುಖ್ಯ ಭಾಗ ಮದರ್ ಬೋರ್ಡ್ ಸಿಲಿಕಾನ್ ಉತ್ಪಾದಿಸುವ ಏಕೈಕ ದೇಶ.

ಹೇಳಿದ್ದು ಅಲ್ಲ, ಇರುವುದು ಲಕ್ಷ ಲಕ್ಷ ಬರೆದರೆ ಪುಟಗಳೇ ಸಾಲದಷ್ಟು ಭಾರತದ ಸಾಧನೆ. ಗತವೈಭವ ಸಂಸ್ಕøತಿ, ಆಚಾರ
ವಿಚಾರಗಳನ್ನು ಹೊಂದಿದೆ. 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ 75 ನೆನಪಿಸುವ ಪುಟ್ಟ ಪ್ರಯತ್ನ ಮಾಡಿದ್ದೇನೆ.
ಸಂಮೋಹನ ವಿದ್ಯೆಯನ್ನು ಭಾರತವು ವಿಶ್ವಕ್ಕೆ ಕೊಟ್ಟಿದೆ. ಏಕಾಗ್ರತೆ ಮನಸ್ಸಿನ ನಿಯಂತ್ರಣ ಹೋಮಿಯೋಪತಿ ಕೊಡುಗೆಗಳು
ಅಪಾರ. ವಿಶ್ವದ ಶ್ರೇಷ್ಠ ಪ್ರಶಸ್ತಿಯಾದ ನೋಬೆಲ್ ಅನ್ನು 12 ಪಡೆಯುವ ಮೂಲಕ ಭಾರತವು ಯಾರಿಗೂ ಕಮ್ಮಿ ಇಲ್ಲ
ಎಂದು ತೋರಿಸಿದೆ. ಈಗ ನಡೆಯುತ್ತಿರುವ ಒಲಂಪಿಕ್ಸ್‍ನಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ನಮ್ಮ ಶಕ್ತಿಯನ್ನು ವಿಶ್ವದ
ಮುಂದೆ ಇಟ್ಟಿದ್ದೇವೆ. ಅಲಿಪ್ತ ನೀತಿಯ ಹರಿಕಾರರು ಶಾಂತಿಪ್ರಿಯ ದೇಶ. ಬಹು ಸಂಸ್ಕøತಿಯಲ್ಲಿ ಏಕತೆ ಮೆರೆದ ನನ್ನ
ಭಾರತ ನನ್ನ ಹೆಮ್ಮೆ ಅಲ್ಲವೆ !


Share