POST

ದೈವತ್ವ ಪುರುಷೊತ್ತಮ ಶ್ರೀ ಎನ್.ಎಂ.ಆಂಜನೇಯ ಗುರೂಜಿ

ಶ್ರೀಯೂತ ಆಂಜಿನೇಯ ವಕೀಲರು ಆಗು ಆಂಜಿನೇಯ ಆರಾಧ್ಯ ದೈವ ಆಂಜಿನೇಯ ಆರಾಧಕರಾದ ಆಂಜಿನೇಯ ಜ್ಯೋತಿಷ್ಯ ಗುರುಗಳಾದ, ನೆಡುದು ಬಂದ ಆಗು ಎಲ್ಲಾ ರಂಗದಲ್ಲೂ ಅವಕಾಶ ವಂಚಿತರಾದ . ನೆಡೆದಾಡುವಾ ದೇವ್ರು..

ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (೨) ವಿಶ್ವ ವೀರಶೈವ ಸಂಸ್ಕೃತಿ ಪ್ರತಿಷ್ಠಾನ () ಪುರಸ್ಕೃತರು

ಆ೦: ಆಂಗೀರಸರಂತೆ
ಜ : ಜನಾನುರಾಗಿಯಾಗಿ
ಗು : ಗುಣಸಂಪನ್ನರಾಗಿ ಹಲವಾರು
ರೂ : ರೂಪರೇಷಗಳಿಂದ ಜನರನ್ನು
ಜಿ :ಜಿಷ್ಟು (ವಿಷ್ಣು )ವಿನಂತೆ ಪರಿಪಾಲಸಿತ್ತ ತಮಗೆ
ಆರಾಧ್ಯ ದೈವ
ನೇ :ನೇರ ದಿಟ್ಟ ನಿರಂತರ ನುಡಿಗಳಿಂದ
ಯ :ಯೊಥೋಚಿತ ಜನಸೇವೆ ಮಾಡುತ್ತಾ

ಅಂಗೀರಸ (ಬೃಹಸ್ಪತಿ) ರಂತೆ ಜನಾನುರಾಗಿಯಾಗಿ ನೇರ-ದಿಟ್ಟ-ನುಡಿಗಳಿಂದ ಯಥೋಚಿತ ಜನಸೇವೆ ಮಾಡುತ್ತಾ ಗುಣಸಂಪನ್ನರಾಗಿ ಹಲವಾರು ರೂಪರೇಷೆಗಳಿಂದ ಜನರನ್ನು ಅಷ್ಟು (ವಿಷ್ಣು) ಏನಂತೆ ಪರಿಪಾಲಿಸುತ್ತಿರುವ

ಶ್ರೀ ಗುರುಜ್ಞಾನಪೀಠ ಪ್ರಶಸ್ತಿ ಪಡಿದಿದ್ದರೆ
ಗೌರವ ಪೂರ್ವಕವಾಗಿ ಅಭಿನಂದನಾ ಪೂರ್ವಕವಾಗಿ ಸಲ್ಲಿಸಿದ್ದರೆ

ಗುರು ವಿಷ್ಣು ಗುರು ದೇವೋ ಮಹೇಶ್ವರಃ |

ಗುರು ಸಾಕ್ಷಾತ್ ಪರಬ್ರಹ್ಮ ತಸ್ಕೃ ಶ್ರೀ ಗುರವೇ ನಮಃ || ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ನಮ್ಮ ಭಾರತ ಸಂಸ್ಕೃತಿಯು ವೇದ ಉಪನಿಷತ್ತುಗಳ ತವರೂರು, ಸನಾತನ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಿರುವ ನಾಡು ನದ್ದು ಕನ್ನಡ ನಾಡು, ಅಲ್ಲಮಪ್ರಭು, ಕ್ರಾಂತಿಯೋಗಿ ಬಸವಣ್ಣನವರು, ಅಕ್ಕಮಹಾದೇವಿ ಮುಂತಾದ ಶಿವ ಶರಣೆಯರು ತಮ್ಮ ವಚನಗಳ ಮೂಲಕ ನಮ್ಮನ್ನು ಸುಸಂಸ್ಕೃತರನ್ನಾಗಿಸಿರುತ್ತಾರೆ. ಕನ್ನಡ ನಾಡಿನ ಸುಸಂಸ್ಕೃತ ಜಿಲ್ಲೆಯಲ್ಲಿ ಒಂದಾದ ದಾವಣಗೆರೆಯ ವ್ಯಾಪ್ತಿಯಲ್ಲಿ ಬರುವ ನೀಲಾನಹಳ್ಳಿ ಎಂಬ ಪುಟ್ಟ ಗ್ರಾಮದ ಪುಣ್ಯ ಭೂಮಿಯಲ್ಲಿ ಶ್ರೀಮತಿ ಕೆಂಚಮ್ಮ ಮತ್ತು ಶ್ರೀಯುತ ಮೂರ್ತಪ್ಪ ನವರ ಹೆಮ್ಮೆಯ ಪುತ್ರನಾಗಿ ದಿನಾಂಕ 10-05-1950 ರ ಅಕ್ಷಯ ತೃತೀಯ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿಯಂದು ಶ್ರೀಯುತ ಎನ್.ಎಂ.ಆಂಜನೇಯ ಎಂಬ ನಾಮಧೇಯದಿಂದ ಜನಿಸಿದ ಮಹಾನ್ ಸಾಧಕರು ತಾವು

ತದ್ದು ಬಾಲ್ಯದಿಂದಲೂ ದೈವತ್ವದ ಕಡೆ ಒಲವನ್ನು ತೋರುತ್ತಾ ಬಂದವರು ನೀವು, ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಕಾನೂನು ಪದವಿಯನ್ನು ಪಡೆದು – ಜಯಸೀಲರಾಗಿ, “ಜಯಾ ಸೇವೆಯ ಜನಾರ್ದನ ಸೇವೆ” ಎಂದು ತಿಳಿದು, ಬಸವಣ್ಣನವರ ವಚನದಂತ “ಕಾಯಕವೇ ಕೈಲಾಸ” ಎಂಬುದನ್ನು ಸಾರ್ಥಕ ಮಾಡುವ ಸಲುವಾಗಿ, ತಾವು ಆಂಜನೇಯ ಸ್ವಾಮಿಯ ಆರಾಧಕರಾಗಿ ಜ್ಯೋತಿಷ್ಯ ಸಲಹೆಗಳನ್ನು ನೀಡುತ್ತಾ ಜನಸದೆ ಮಾಡುತ್ತಾ ಬಂದಿರುವಿರಿ, ತದ್ದು ಜನಪರ ಕಾಳಜಿಯನ್ನು ಪ್ರತ್ಯಕ್ಷ ಕಂಡ ಚಿತ್ರದುರ್ಗದ ಬೃಹನ್ಮಠದ ಹಿರಿಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಯವರು ತದುಗೆ ಸಿದಲಿಂಗ ದೀಕ್ಷೆಯನ್ನು ನೀಡಿ ಹರಸಿರುತ್ತಾರೆ.

ಶ್ರೀಯುತರಾದ ತಾವು ಜನಪರ ಕಾಳಜಿಗೆ ಸಂಬಂಧಿಸಿದ ಎಲ್ಲಾ ರಂಗಗಳಲ್ಲಿಯೂ ಪ್ರಾವೀಣ್ಯತೆಯನ್ನು ಪಡೆದು, ಅಪಾರವಾದ ಅನುಭವವನ್ನು ಗಳಿಸಿ ನಾಡಿನ ಉದ್ದಗಲಕ್ಕೂ ಸಂಚಾರ ಮಾಡಿ, ಅಪಾರವಾದ ಕೀರ್ತಿ, ಗೌರವವನ್ನು ಸಂಪಾದಿಸಿರುತ್ತೀರಿ, ಜ್ಯೋತಿಷ್ಯ ಕ್ಷೇತ್ರದಲ್ಲಿ ಉತ್ತದು ಹೆಸರು ಸಂಪಾದಿಸಿ ಜನ ಸಾಮಾನ್ಯರಿಗೆ ಉಚಿತವಾಗಿ ಜ್ಯೋತಿಷ್ಯ ಸಲಹೆಗಳನ್ನು ನೀಡುವ ಸಲುವಾಗಿ ಹಾಗೂ ನಮ್ಮ ಯುವ ಪೀಳಿಗೆಯು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದನ್ನು ಗಮನಕ್ಕೆ ತಂದುಕೊಂಡ ತಾವು ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ರೂಪಿಸಿ ಆದ್ರಗಳನ್ನು ಕಾರ್ಯಗತ ಮಾಡುವ ಸಲುವಾಗಿ “ಶ್ರೀ ಆಶಿರ್ ಗುರು ಪೀರ” ವನ್ನು ಸ್ಥಾಪನೆ ಮಾಡಿರುತ್ತೀರಿ 1987ರ ಬಸವಜಯಂತಿಯ ದಿನದಂದು ಭಾಗ್ಯಲಕ್ಷ್ಮಿ ಎಂಬುವವರನ್ನ ವಿವಾಹವಾಗಿ, ಆದರ್ಶ, ಆಕಾಶ್, ಆರೀಫ್ ಎಂಬ ತ್ರಿಮೂರ್ತಿ ಪುತ್ರರನ್ನು ಪಡೆದಿರುತ್ತಾರೆ

ಶ್ರೀಯುತರು ತಮ್ಮ ಗುರುಪೀಠದಲ್ಲಿ ಜ್ಯೋತಿಷ್ಯ ಹಾಗೂ ದೈವ ಚಿಂತನೆಯ ಮೂಲಕ ಜನ ಸಾಮಾನ್ಯರ ಕುಂದುಕೊರತೆಗಳನ್ನು ನಿವಾರಿಸುವ ಸಲುವಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಪೀಠದ ಧರ್ಮಾಧಿಕಾರಿಗಳಾಗಿ ಅಪಾರ ಭಕ್ತವೃಂದವನ್ನು ನಾಡಿನಾದ್ಯಂತವಲ್ಲದೇ ದೇಶ ಹಾಗೂ ವಿದೇಶಗಳಲ್ಲಿಯೂ ಹೊಂದಿರುತ್ತಾರೆ. ಆದರ ಸಲಹೆ, ಮಾರ್ಗದರ್ಶನ ಪಡೆದ ಅನೇಕರು ಇಂದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುತ್ತಾರೆ. ಭಕ್ತವೃಂದದಿಂದ ಅವರಿಗೆ ಜ್ಯೋತಿರ್ವಿಜ್ಞಾ ಎಂಬ ಬಿರುದು ಬಂದಿದೆ. ಅಲ್ಲದೆ ಅನೇಕ ಸಂಘ ಸಂಸ್ಥೆಗಳು ತದುಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿರುತ್ತಾರೆ. ಭಾರತಾಂಬೆಯ ಮಡಿಲಿನಲ್ಲಿ ಜನಿಸಿ ರಾಷ್ಟ್ರಕ್ಕೆ ಹಾಗೂ ರಾಜ್ಯಕ್ಕೆ ಅಮೋಘವಾದ ಸೇವೆ ಸಲ್ಲಿಸುತ್ತಿರುವ ನಿಮಗೆ ನಮ್ಮ ಸಂಸ್ಥೆಯ – ಪಿರಿ: ಜಿದ ಹಾಗೂ ಭಕ್ತ ವೃಂದದ ಪರವಾಗಿ ಲೇಪಿತ ಕಿರೀಟವನ್ನು ಆರ್ಷಿಸುತ್ತಿದ್ದರೆ, ಆ ದಾವ; ಎತ: ನಾದ ಭಗವಂತನು ತದುಗೆ ಆಯುರಾರೋಗ್ಯ ಐಶ್ವರ್ಯಾದಿಗಳನ್ನು ದಯಪಾಲಿಸಿ ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇವೆ.

ಇವರು ಹಲವಾರು ಉಚಿತವಾಗಿ ಕಾರ್ಯಕ್ರಮ ಮಾಡುತ್ತಾ ಭಾಷಣಕಾರರಾಗಿ.
ಇವರು ಸ್ವಯಂ ವಕೀಲ ವೃತ್ತಿ ನಿರ್ವಹಿಸುತ್ತ,
ವಿರಾಮ ವೇಳೆಯೆಲ್ಲಿ ಇವರು ನೈಜವಾದ ಜೋತಿಷ್ಯ ನುಡಿಯುತ್ತಾ ಜನ ಸಾಮಾನ್ಯರಿಗೋಸ್ಕರ. ಇವರ ವೃತ್ತಿ ಮುಡಿಪಾಗಿಟ್ಟು.
ಒಳ್ಳೆಯ ಕಲೆ ಸಂಸ್ಕೃತಿ ತಿಳುಸುತ್ತ.
ಮಹಾನ್ ವ್ಯಕ್ತಿ ಕೂಡ ಹೌದು
ಇವರು ಕೂಡ ಡಾಕ್ಟರ್ಟ್ ಪದವಿ ಕೂಡ ದೊರಕಿದೆ.( ಶಾಂತಿ )ಎಂಬ ಪದವಿಗೆ.
ಇಂತಹ ಮಹಾನ್ ವ್ಯಕ್ತಿ ನಮ್ಮ ರಾಷ್ಟ್ರಕ್ಕೆ ಬೇಕು.
ಇವರು ಯಾವುದೇ ಜಾತಿ ಭೇದ ಭಾವವಿಲ್ಲದೆ ಇವರು ರಾಜ್ಯ್ದಂತ ಜನರ ಸೇವೆ ಮಾಡುತ್ತಾ ಸಾಗ್ತಾಇದ್ದರೆ ಇಂತಹ ದಿನಗಳಲ್ಲಿ
.. ಭವಿಷ್ಯ ಇವರು ಅಪಾರವಾದ ನಂಬಿಕೆ ವಕೀಲರು ಹಾಗೂ ಜ್ಯೋತಿಷ್ಯ ಸ್ವಾಮೀಜಿಯವರು..
ವರದಿ ಭರ್ಮಪ್ಪ ಮಾಗಳದ

ಕರ್ನಾಟಕದಲ್ಲಿ ತಗ್ಗಿದ ಮಳೆ; ಈ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ವರುಣನ ಆರ್ಭಟ

ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದ್ದು, ಪ್ರವಾಹ ಮಟ್ಟವೂ ಇಳಿಕೆಯಾಗುತ್ತಿದೆ. ಹೀಗಾಗಿ ನದಿ ತೀರದ ಜನರು ನಿಟ್ಟುಸಿರು ಬಿಡುವಂತಾಗಿದೆ. ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧರಣ ಮಳೆ, ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.

ಇಂದು ರಾಜಧಾನಿ ಬೆಂಗಳೂರಿನಲ್ಲಿಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು, ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾದರೆ, ಮಲೆನಾಡು ಭಾಗದ ಜಿಲ್ಲೆಗಳಲ್ಲೂ ಮಳೆ ಸುರಿಯಲಿದೆ. ಜೊತೆಗೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.ರಾಜ್ಯದ ಮಲೆನಾಡು ಭಾಗದಲ್ಲಿ ಇಂದು ಕೊಂಚ ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಉಡುಪಿ ಜಿಲ್ಲೆಯಾದ್ಯಂತ ಅಧಿಕ ಮಳೆಯಾದರೆ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆ, ದಾವಣಗೆರೆ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ.

ಇನ್ನು, ಉತ್ತರ ಒಳನಾಡಿನಲ್ಲೂ ಸಹ ಸಾಧಾರಣ ಮಳೆಯಾಗಲಿದೆ. ಬೀದರ್, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ವಿಜಯನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ನಿರೀಕ್ಷೆ ಇದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮುಂದಿನ ಕೆಲ ದಿನಗಳ ಕಾಲ ದೇಶದ ಕೆಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಯಥೇಚ್ಛ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ದಕ್ಷಿಣ ಗುಜರಾತ್​ ಕರಾವಳಿ ಮತ್ತು ಉತ್ತರ ಕೇರಳ ಕರಾವಳಿಯಲ್ಲಿ ಅಧಿಕ ಮಳೆಯಾಗಲಿದೆ. ಈ ಚಂಡಮಾರುತದ ಪ್ರಭಾವ ಉತ್ತರ ಪಾಕಿಸ್ತಾನ ಮತ್ತು ಪಂಜಾಬ್​ಗೂ ತಟ್ಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಜುಲೈ 30 ರವರೆಗೆ ಭಾರೀ ಮಳೆ ಮುಂದುವರೆಯಲಿದೆ.ಇನ್ನು, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲೂ ಜುಲೈ 30ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ಜುಲೈ 31ರವರೆಗೆ ವರುಣನ ಆರ್ಭಟ ಇರಲಿದೆ. ಪಶ್ಚಿಮ ಬಂಗಾಳದಲ್ಲಿ ಜುಲೈ 29ರಂದು, ಜಾರ್ಖಂಡ್​​ನಲ್ಲಿ ಜುಲೈ 30ರಂದು, ಛತ್ತೀಸ್​ಗಢದಲ್ಲಿ ಜುಲೈ 30ರಂದು ಮತ್ತು ಪೂರ್ವ ಮಧ್ಯ ಪ್ರದೇಶದಲ್ಲಿ ಜುಲೈ 31ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶ ರಾಜ್ಯಗಳಲ್ಲಿ ಆಗಸ್ಟ್​ 1ರವರೆಗೆ ಯಥೇಚ್ಛವಾಗಿ ಮಳೆ ಸುರಿಯಲಿದೆ. ಜುಲೈ 30ರಿಂದ ಮಳೆಯ ಪ್ರಮಾಣ ಅಧಿಕವಾಗಲಿದೆ. ಪಶ್ಚಿಮ ಮಧ್ಯಪ್ರದೇಶದಲ್ಲಿ ಆಗಸ್ಟ್​ 1ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಜೊತೆಗೆ ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಆಗಸ್ಟ್​ 1ರವರೆಗೆ ಮಳೆರಾಯನ ಅಬ್ಬರ ಇರಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್​ ಘೋಷಿಸಲಾಗಿದೆ

ಸಿಎಂ ಬಸವರಾಜ ಬೊಮ್ಮಾಯಿ ಬದುಕಿನ ಪಯಣ

ಬಸವರಾಜ ಬೊಮ್ಮಾಯಿ ಕರ್ನಾಟಕದ ಒಬ್ಬರು ರಾಜಕಾರಣಿ. ಭಾರತೀಯ ಜನತಾ ಪಕ್ಷದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ. ಜುಲೈ 28, 2021 ರಂದು ಬಿ.ಎಸ್. ಯಡಿಯೂರಪ್ಪರವರ ನಂತರ ಬೊಮ್ಮಾಯಿ ಕರ್ನಾಟಕದ ೨೩ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಸವರಾಜ ಸೋಮಪ್ಪ ಬೊಮ್ಮಾಯಿ ಕರ್ನಾಟಕದ ಮಾಜಿ ಸಿಎಂ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್. ಆರ್. ಬೊಮ್ಮಾಯಿ-ಗಂಗಮ್ಮ ಅವರ ಪುತ್ರ. 1960 ರ ಜ.28 ರಂದು ಜನಿಸಿದ ಬೊಮ್ಮಾಯಿ ಬಿ.ವಿ ಬೊಮ್ಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದ ಬೊಮ್ಮಾಯಿ ಮೂಲತಃ ವೃತ್ತಿಯಲ್ಲಿ ಕೃಷಿಕ ಮತ್ತು ಕೈಗಾರಿಕೋದ್ಯಮಿ.

ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುವ ಅವರು, ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಭಾರತದಲ್ಲೇ ಮೊದಲ ಶೇ.100 ರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ರಾಯಕೀಯ ಜೀವನ

ಅವರು ಜನತಾದಳದಿಂದ ತಮ್ಮ ರಾಜಕೀಯವನ್ನು ಪ್ರಾರಂಭಿಸಿದರು.
1998 ಹಾಗೂ 2004 ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು.
2008 ರಲ್ಲಿ ಜನತಾದಳವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
2008 ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು. ಬೊಮ್ಮಾಯಿ ಅವರು ಈ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಜೆ. ಹೆಚ್. ಪಟೇಲ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವವನ್ನು ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ.
ಯಡಿಯೂರಪ್ಪ ಅವರ ಸಂಪುಟದಲ್ಲಿ ಗೃಹ ಖಾತೆಯನ್ನು ನಿರ್ವಹಿಸಿ ಅನುಭವ ಹೊಂದಿರುವ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೇರಿದರು.
ಜನತಾದಳದಿಂದ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್ ಆರ್ ಬೊಮ್ಮಾಯಿ) ಅವರು ಮುಖ್ಯಮಂತ್ರಿಯಾಗಿದ್ದ (1988-89) 32-33 ವರ್ಷಗಳ ನಂತರ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದಾರೆ.

ಕನ್ನಡ ಚಿತ್ರರಂಗದ ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ!

ಅನಾರೋಗ್ಯದಿಂದ ಬಳಲುತ್ತಿದ್ದ  ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ(76) ನಿಧನರಾಗಿದ್ದಾರೆ.

ಕಳೆದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟಿ ಜಯಂತಿ ಎರಡು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ರಾತ್ರಿ ಈ ಸಮಸ್ಯೆ ಉಲ್ಭಣಗೊಂಡು ಅವರು ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

1945ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಜಯಂತಿಯವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ. ಮನೆಯಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಇವರ ತಂದೆ- ತಾಯಿಗಳು ವಿಚ್ಚೇದನ ಪಡೆದ ಕಾರಣ ಜಯಂತಿ ತಮ್ಮ ತಾಯಿಯ ಜೊತೆ ಮದ್ರಾಸ್‍ನಲ್ಲಿ ಬೆಳೆದರು.

1968ರಲ್ಲಿ ‘ಜೇನುಗೂಡು’ ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಪ್ರವೇಶಿಸಿದ್ದ ನಟಿ ಜಯಂತಿ ಕನ್ನಡದ ಒಟ್ಟು 190 ಸಿನಿಮಾ ಸೇರಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿನಯ ಶಾರದೆ ಎನಿಸಿಕೊಂಡಿದ್ದರು. ಇವರು ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಹೀಗೆ ಆರು ಭಾಷೆ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತಿ ಹೊಂದಿದ್ದರು.

ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತ್ತು, ಮಸಣದ ಹೂವು, ಆನಂದ್, ಟುವಿ ಟುವಿ ಟುವಿ ಚಿತ್ರಗಳಿಗೆ ಜಯಂತಿ ರಾಜ್ಯ ಪ್ರಶಸ್ತಿ ಪಡೆದಿದ್ದ ನಟಿ ಜಯಂತಿ, ‘ಮಿಸ್ ಲೀಲಾವತಿ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.

ಜಯಂತಿ ನಿಧನದಿಂದ ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿದೆ. ಅಭಿನಯ ಶಾರದೆ ಕಳೆದುಕೊಂಡ ಸ್ಯಾಂಡಲ್‌ವುಡ್‌ನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೆಷನ್ ಹಾವಳಿ ತಡೆಯುವಂತೆ ಒತ್ತಾಯಿಸಿ ಎ ಐ ಎಸ್ ಎಫ್ ಪ್ರತಿಭಟನೆ

ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಹಡಗಲಿ ತಾಲೂಕ ಸಮಿತಿಯಿಂದ ಇಂದು ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನಿಯಮಾನುಸಾರ ಶುಲ್ಕ ಪಡೆಯದೆ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದು ಈ ಕೂಡಲೇ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಯಾವ ಯಾವ ತರಗತಿಗೆ ಎಷ್ಟೇಷ್ಟು ಶುಲ್ಕ ಪಡೆಯಬೇಕೆಂದು ಪತ್ರಿಕಾ ಪ್ರಕಟಣೆ ಹೊರಡಿಸಬೇಕಂದು ಒತ್ತಾಯಿಸಿ ತಹಸೀಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಇಲ್ಲದೇ ಹೋದರೆ ಶೀಘ್ರದಲ್ಲೇ ಮತ್ತೆ ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ವಿರೂಪಾಕ್ಷ ಅಂಕ್ಲಿ ಕಾರ್ಯದರ್ಶಿ ವೆಂಕಟೇಶ ನಾಯ್ಕ ಉಪಾಧ್ಯಕ್ಷ ಪ್ರಭು ಹಿರೇಬನ್ನಿಮಟ್ಟಿ, ಸಂತೋಷ, ಪ್ರಶಾಂತ ಸಿಪಿಐ ಮುಖಂಡ ಸುರೇಶ ಹಲಗಿ ಎಐಟಿಯುಸಿ ಶಾಂತರಾಜ ಜೈನ ಎಐವೈಎಫ್ ಸಂಚಾಲಕ ಬಸವರಾಜ ಸಂಶಿ ತೋಂಟದಾರ್ಯ ಹಾಗೂ ವಿದ್ಯಾರ್ಥಿ ಪೋಷಕರು ಇದ್ದರು ವರದಿ : ಟಿ.ಶಿವಕುಮಾರ್ವ

ಶೌಚಾಲಯ ನಿರ್ಮಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋರಾಟ

 

ಯಾದಗಿರಿ ಜಿಲ್ಲೆಯ ಶಹಪುರ್ ತಾಲೂಕಿನ ಸಗರ ಗ್ರಾಮದ ಹೆಣ್ಣು ಮಕ್ಕಳು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಮಹಿಳೆಯರಿಗೆ ಶೌಚಾಲಯ ಸುಮಾರು ವರ್ಷಗಳಿಂದ ಸಮಸ್ಯೆ ಇದ್ದು ಗ್ರಾಮ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಶಹಪುರ್ ತಶೀಲ್ದಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋರಾಟ ಮಾಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಮಹೇಶಗೌಡ ಸುಬೇದಾರ್ ಕಾರ್ಯಧ್ಯಕ್ಷರು ಅನೀಫ್ ಹತ್ತಿಕುಣಿ ಚಂದಪ್ಪ ಗಾಯಿ ಶರಣು ಉಳ್ಳಿ ಕಲ್ಲಪ್ಪ ಸತ್ಯಮಪೇಟ ಸಗರ್ ಗ್ರಾಮದ ಮಹಿಳೆಯರು ಭಾಗವಹಿಸಿ ಧರಣಿ. ವರದಿ : ಶಂಕರ ಗೌಡ ಯಾದಗಿರಿ

Zomato IPO: ಝೊಮ್ಯಾಟೋ ಐಪಿಒಗೆ ಭರ್ಜರಿ ಬೇಡಿಕೆ; ಶೇ 60ರಷ್ಟು ಅರ್ಜಿದಾರರು 30 ವರ್ಷದ ಒಳಗಿನವರು

ಆನ್​ಲೈನ್ ಫುಡ್​ ಡೆಲಿವರಿ ಕಂಪೆನಿ ಝೊಮ್ಯಾಟೋದಿಂದ ಜುಲೈ 14ನೇ ತಾರೀಕು ಐಪಿಒ (Zomato IPO) ಬಿಡುಗಡೆ ಮಾಡಲಾಗಿದ್ದು, ಜುಲೈ 16ನೇ ತಾರೀಕು ಸಬ್​ಸ್ಕ್ರಿಪ್ಷನ್ ಕೊನೆಯಾಗಲಿದೆ. ಈ ಐಪಿಒಗೆ ಯುವ ತಲೆಮಾರು, ಮೊದಲ ಬಾರಿಗೆ ಹೂಡಿಕೆ ಮಾಡುತ್ತಿರುವವರು ಭಾರೀ ಆಸಕ್ತಿ ತೋರುತ್ತಿದ್ದಾರೆ ಎಂದು ಪೇಟಿಎಂ ಮನಿ ತಿಳಿಸಿದೆ. ಗಮನಾರ್ಹ ಸಂಗತಿ ಏನೆಂದರೆ, ಪೇಟಿಎಂ ಮನಿ ಮೂಲಕ ಝೊಮ್ಯಾಟೋ ಐಪಿಒಗೆ ಅರ್ಜಿ ಹಾಕಿರುವವರ ಪೈಕಿ ಶೇ 55ರಷ್ಟು ಮಂದಿ 30 ವರ್ಷ ವಯಸ್ಸಿನ ಒಳಗಿನವರು. ಮೊದಲ ದಿನದ ಲೆಕ್ಕಾಚಾರವನ್ನು ಮುಂದಿಟ್ಟಿರುವ ಪೇಟಿಎಂ ಮನಿ, ಶೇ 60ರಷ್ಟು ಮಂದಿ 30 ವರ್ಷದೊಳಗಿನವರು. ಇದನ್ನು ಇನ್ನೂ ಕೂದಲು ಸೀಳುವಂತೆ ಹೇಳುವುದಾದರೆ, ಶೇ 27ರಷ್ಟು ಮಂದಿ 25 ವರ್ಷ ವಯಸ್ಸಿನೊಳಗಿವರು. ಇನ್ನೂ ಒಂದು ಪ್ರಮುಖ ಸಂಗತಿ ಏನೆಂದರೆ, ಮೊದಲ ದಿನ ಅರ್ಜಿ ಹಾಕಿಕೊಂಡವರ ಪೈಕಿ ಶೇ 10ರಷ್ಟು ಮಹಿಳೆಯರಿದ್ದಾರೆ. ಪೇಟಿಎಂ ಮನಿ ಪ್ಲಾಟ್​ಫಾರ್ಮ್​ನಲ್ಲಿ ಈ ಹಿಂದಿನ ಐಪಿಒಗಳಿಗೆ ಮೊದಲ ದಿನ ಬರುತ್ತಿದ್ದ ಅರ್ಜಿಯ ಸಂಖ್ಯೆಗಿಂತ ಝೊಮ್ಯಾಟೋಗೆ ಶೇ 20ರಷ್ಟು ಜಾಸ್ತಿ ಬಂದಿದೆ ಎಂದು ತಿಳಿಸಲಾಗಿದೆ.

ಪೇಟಿಎಂ ಮನಿ ಎಂಬುದು ಫಿನ್​ಟೆಕ್​ ಆದ ಪೇಟಿಎಂನ ವೆಲ್ತ್​ ಮ್ಯಾನೇಜ್​ಮೆಂಟ್ ವಿಭಾಗದ. ಐಪಿಒ ಸಬ್​ಸ್ಕ್ರಿಪ್ಷನ್ ಆರಂಭವಾಗುವ ಕೆಲ ದಿನಗಳ ಮುಂಚೆಯೇ ಬಳಕೆದಾರರು ಅದಕ್ಕೆ ಅಪ್ಲೈ ಮಾಡುವ ಫೀಚರ್​ ಅನ್ನು ಘೋಷಣೆ ಮಾಡಿದೆ. ಈ ಫೀಚರ್ ಅನ್ನು ಪ್ರೀ ಓಪನ್ ಐಪಿಒ ಅಪ್ಲಿಕೇಷನ್ ಎಂದು ಕರೆಯಲಾಗುತ್ತದೆ. ಐಪಿಒಗಳಲ್ಲಿ ರೀಟೇಲ್ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಕಾರಣಕ್ಕೆ ಈ ಫೀಚರ್ ಪರಿಚಯಿಸಲಾಗಿದೆ. ಝೊಮ್ಯಾಟೋ ಐಪಿಒ ಈ ಫೀಚರ್​ ಅನ್ನು ಬಳಸಿಕೊಂಡ ಮೊದಲ ಕಂಪೆನಿಯಾಗಿದೆ. ಬಳಕೆದಾರರು ಇನ್ನೂ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಒನ್-ಕ್ಲಿಕ್ ಐಪಿಒ ಅಪ್ಲಿಕೇಷನ್, ಷೇರುದಾರರ ವಿಭಾಗದ ಅಡಿಯಲ್ಲಿ ಐಪಿಒ ಅಪ್ಲಿಕೇಷನ್ ಮತ್ತು ಲೈವ್ ಐಪಿಒ ಸಬ್​ಸ್ಕ್ರಿಪ್ಷನ್ ಸಂಖ್ಯೆಯ ಟ್ರ್ಯಾಕಿಂಗ್ ಇವೆಲ್ಲ ಫೀಚರ್ಸ್ ತಂದಿದೆ.

ಝೊಮ್ಯಾಟೋ ಐಪಿಒಗೆ ಈ ಪರಿಯ ಪ್ರತಿಕ್ರಿಯೆ ಬರುವುದಕ್ಕೆ ಕಾರಣ ಆಗಿರುವುದು ಸಣ್ಣ ಮತ್ತು ಪಟ್ಟಣಗಳ ಹೂಡಿಕೆದಾರರ ಭಾಗವಹಿಸುವಿಕೆ. ಸಾಮಾನ್ಯವಾಗಿ ಮುಂಬೈ, ದೆಹಲಿಯಂಥ ಮೆಟ್ರೋ ನಗರಗಳ ಹೂಡಿಕೆದಾರರು ಸಿದ್ಧವಾಗಿ ಐಪಿಒಗಳಲ್ಲಿ ಭಾಗಿ ಆಗಿದ್ದಾರೆ. ಜತೆಗೆ ಸಣ್ಣ ಪ್ರದೇಶಗಳವರೂ ಪಾಲ್ಗೊಂಡಿದ್ದಾರೆ. ಗುಜರಾತ್​ನ ಕೊಡಿನರ್, ನಾಗಾಲ್ಯಾಂಡ್​ನ ತ್ಯುನ್​ಸಂಗ್ ಮತ್ತು ಅಸ್ಸಾಂನ ರಂಗಾಪುರದಂಥ ಸ್ಥಳಗಳಿಂದಲೂ ಈ ಐಪಿಒನಲ್ಲಿ ಭಾಗವಹಿಸಿದ್ದಾರೆ. ಐಪಿಒ ಸಬ್​ಸ್ಕ್ರಿಪ್ಷನ್​ನ ಆರಂಭದ ದಿನವೇ ಹೆಚ್ಚು ಬೇಡಿಕೆ ಪಡೆದಿದೆ. ರೀಟೇಲ್ ಹೂಡಿಕೆದಾರರಿಗೆ ಮೀಸಲಿರುವ ಷೇರುಗಳಿಗಿಂತ 2.7 ಪಟ್ಟು ಹೆಚ್ಚು ಬೇಡಿಕೆ ಸಲ್ಲಿಸಿದ್ದಾರೆ. ಇನ್ನು ಪಿಟಿಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಝೊಮ್ಯಾಟೋದ ಐಪಿಒ ಗಾತ್ರ ರೂ. 71.92 ಕೋಟಿಯಾದರೆ, ಮೊದಲ ದಿನವೇ ರೂ. 75.60 ಕೋಟಿ ರೂಪಾಯಿಯ ಈಕ್ವಿಟಿ ಷೇರಿಗೆ ಬಿಡ್ಡಿಂಗ್ ಬಂದಿದೆ. ಇನ್ನು ಉದ್ಯೋಗಿಗಳಿಗಾಗಿ ಮೀಸಲಿಟ್ಟಿರುವ ಪ್ರಮಾಣದಲ್ಲಿ ಶೇ 18ರಷ್ಟು ಸಬ್​ಸ್ಕ್ರೈಬ್ ಆಗಿದೆ.

ಇಲ್ಲಿಯ ತನಕದ ಲೆಕ್ಕ ನೋಡಿದರೆ, ಮಾರುಕಟ್ಟೆಯಲ್ಲಿ ಈ ವರ್ಷದ ಅತಿ ದೊಡ್ಡ ಐಪಿಒ ಇದು. ಶುಕ್ರವಾರದ ತನಕ ಇರುತ್ತದೆ. ಪ್ರತಿ ಷೇರಿಗೆ 72 ರೂ.ನಿಂದ 76 ರೂಪಾಯಿ ದರದ ಬ್ಯಾಂಡ್ ನಿಗದಿ ಆಗಿದೆ. ಆರಂಭದಲ್ಲಿ ಐಪಿಒ ಗಾತ್ರ 9,375 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಆದರೆ ನಂತರದಲ್ಲಿ ಅದನ್ನು 5178 ಕೋಟಿ ರೂಪಾಯಿಗೆ ಇಳಿಸಲಾಯಿತು. ಜುಲೈ 13ನೇ ತಾರೀಕಿನಂದೇ ಝೊಮ್ಯಾಟೋ 186 ಆಂಕರ್ ಹೂಡಿಕೆದಾರರಿಂದ 4,196.51 ಕೋಟಿ ರೂಪಾಯಿ ಸಂಗ್ರಹಿಸಿಯಾಗಿದೆ.

Xiaomi: ಆಪಲ್ ಕಂಪೆನಿಯನ್ನು ಪಕ್ಕಕ್ಕೆ ಸರಿಸಿ ವಿಶ್ವದ ಎರಡನೇ ಅತಿ ದೊಡ್ಡ ಸ್ವಾರ್ಟ್​ಫೋನ್ ತಯಾರಕ ಆದ ಶಿಯೋಮಿ

ಆಪಲ್ ಕಂಪೆನಿಯನ್ನು ಹಿಂದಿಕ್ಕಿರುವ ಶಿಯೋಮಿ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್​ಫೋನ್ ತಯಾರಕ ಆಗಿದೆ. ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಯು ಸ್ಥಳೀಯ ಪ್ರತಿಸ್ಪರ್ಧಿ ಹುವೈ ಅಂತ್ಯದೊಂದಿಗೆ ಲಾಭ ಪಡೆದಿದೆ. ಮತ್ತು ಈಗ ಸ್ಯಾಮ್‌ಸಂಗ್‌ನ ಅಗ್ರ ಸ್ಥಾನದಲ್ಲಿದೆ. ಕ್ಯಾನಲಿಸ್ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2021ರ ಎರಡನೇ ತ್ರೈಮಾಸಿಕದಲ್ಲಿ, ಶಿಯೋಮಿ ಮಾರಾಟದ ದೃಷ್ಟಿಯಿಂದ ಜಾಗತಿಕವಾಗಿ ಎರಡನೇ ಅತಿದೊಡ್ಡ ಸ್ಮಾರ್ಟ್​ಫೋನ್ ತಯಾರಕ ಸಂಸ್ಥೆಯಾಗಿದೆ. ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ತಯಾರಕ ಸ್ಯಾಮ್ಸಂಗ್ ಶೇಕಡಾ 19 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಶಿಯೋಮಿಯು ಸ್ಪರ್ಧೆಯ ಅಂತರವನ್ನು ಸಾಕಷ್ಟು ಕಡಿಮೆ ಮಾಡಿದ್ದು, ಶೇಕಡಾ 17ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಶಿಯೋಮಿಯ ಶಿಪ್​ಮೆಂಟ್ ಲ್ಯಾಟಿನ್ ಅಮೆರಿಕಾದಲ್ಲಿ ಶೇಕಡಾ 300ಕ್ಕಿಂತಲೂ ಹೆಚ್ಚಾಗಿದ್ದು, ಆಫ್ರಿಕಾದಲ್ಲಿ ಶೇ 150 ಮತ್ತು ಪಶ್ಚಿಮ ಯುರೋಪಿನಲ್ಲಿ ಶೇ 50ರಷ್ಟು ಹೆಚ್ಚಾಗಿದೆ. ಎಂಐ 11 ಅಲ್ಟ್ರಾನಂತಹ ಫೋನ್‌ಗಳ ಮಾರಾಟವನ್ನು ಹೆಚ್ಚಿಸುವುದು ಶಿಯೋಮಿಯ ಉದ್ದೇಶವಾಗಿರಬೇಕು ಎಂದು ಕ್ಯಾನಲಿಸ್ ಹೇಳಿದೆ. ಆದರೆ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಯಾದ ಶಿಯೋಮಿಗೆ ಚೀನಾದ ಇತರ ಬ್ರಾಂಡ್‌ಗಳಾದ ಒಪ್ಪೊ ಮತ್ತು ವಿವೊಗಳಿಂದ ಸವಾಲು ಎದುರಿಸಬೇಕಾಗಿದೆ.

ಆದರೂ ಶಿಯೋಮಿ ಕಂಪೆನಿಯು ಸ್ಯಾಮ್ಸಂಗ್ ಅನ್ನು ಹಿಂದಿಕ್ಕಲು ಉತ್ತಮ ಅವಕಾಶವನ್ನು ಹೊಂದಿದೆ. ಮತ್ತು ಈ ವೇಗದಲ್ಲಿ ಮಾರಾಟ ಸಾಗಿದರೆ ವಿಶ್ವದ ನಂಬರ್ 1 ಸ್ಮಾರ್ಟ್‌ಫೋನ್ ಬ್ರಾಂಡ್ ಆಗಬಹುದು ಎಂದು ಸಂಖ್ಯೆಗಳು ಸೂಚಿಸುತ್ತವೆ. ಇದೇ ಮೊದಲ ಬಾರಿಗೆ ಸ್ಯಾಮ್ಸಂಗ್ ಮತ್ತು ಆಪಲ್ ಕಂಪೆನಿಯನ್ನು ಮೊದಲ ಎರಡು ಸ್ಥಾನದಿಂದ ಬದಿಗೆ ಸರಿಸುವಂತಹ ಸಾಮರ್ಥ್ಯವನ್ನು ಶಿಯೋಮಿ ತೋರುತ್ತಿದೆ. ಇದಕ್ಕೆ ಪ್ರಮುಖ ಕಾರಣವಾಗಿ ಕಂಡುಬರುವುದು ಮಿಡ್​ ಪ್ರೀಮಿಯಂ ವಿಭಾಗ, ನೋಟ್ 10 ಅನಾವರಣ ಮತ್ತು ಎಂಐ ಸರಣಿಯ ಸ್ಮಾರ್ಟ್‌ಫೋನ್‌ಗಳು.

ಆಪಲ್ ಈಗ ಶೇಕಡಾ 14 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಆದರೆ ಒಪ್ಪೋ ಮತ್ತು ವಿವೊ ತಲಾ ಶೇ 10 ರಷ್ಟು ದೊಡ್ಡ ಬೆಳವಣಿಗೆಯನ್ನು ಹೊಂದಿವೆ. ಆದರೂ 2020ರ ಎರಡನೇ ತ್ರೈಮಾಸಿಕದಲ್ಲಿ ಶಿಯೋಮಿಯ ಶೇಕಡಾ 83ರ ಬೆಳವಣಿಗೆಗೆ ಹೋಲಿಸಿದರೆ ಇದು ಏನೂ ಇಲ್ಲ. ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಿಂದ ಹುವೈ ನಿರ್ಗಮಿಸಿದ್ದರಿಂದ ಖಾಲಿಯಾದ ಸ್ಥಳವನ್ನು ತುಂಬಲು ಹೆಚ್ಚಿನ ಬ್ರ್ಯಾಂಡ್‌ಗಳು ಯತ್ನಿಸುತ್ತಿವೆ. ಬಹಳ ಹಿಂದೆಯೇ ಹುವೈ ಕಂಪೆನಿಯು ಆಪಲ್ ಅನ್ನು ಪಕ್ಕಕ್ಕೆ ಸರಿಸುವಲ್ಲಿ ಯಶಸ್ವಿಯಾಗಿತ್ತು ಮತ್ತು ಸ್ಮಾರ್ಟ್​ಫೋನ್ ತಯಾರಕರಲ್ಲಿ ಎರಡನೇ ಸ್ಥಾನವನ್ನು ಗಳಿಸಿತ್ತು. ಆದರೂ ಶೀಘ್ರದಲ್ಲೇ ಅದರ ಮೇಲೆ ನಿರ್ಬಂಧಗಳನ್ನು ವಿಧಿಸಲಾಯಿತು ಮತ್ತು ಕಂಪೆನಿಯು ಅಂತಿಮವಾಗಿ ಹೈ ಎಂಡ್ ಪ್ರೀಮಿಯಂ ಫೋನ್ ಮಾರುಕಟ್ಟೆಯಿಂದ ಹಿಂದೆ ಸರಿಯಿತು.

ಆ ನಂತರ ಶಿಯೋಮಿ, ಒನ್‌ಪ್ಲಸ್ ಮತ್ತು ಇತರ ಕಂಪೆನಿಗಳು ಹುವೈನಿಂದ ಖಾಲಿಯಾದ ಸ್ಥಳವನ್ನು ತುಂಬಲು ಪ್ರಯತ್ನಿಸುತ್ತಲೇ ಇವೆ. ಬೆಳೆಯುತ್ತಿರುವ ಸ್ಪರ್ಧೆಯ ಮಧ್ಯೆ ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಶಿಯೋಮಿ ಸ್ಥಾನವನ್ನು ಉಳಿಸಿಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

Investor Success Story: 25 ವರ್ಷಕ್ಕೇ ಕೋಟ್ಯಧಿಪತಿಯಾದ ಈ ಯುವಕನ ಬಳಿ ಸ್ವಂತ ಕಾರಿಲ್ಲ; ಅರುಣ್ ಹೇಳಿದ ಹೂಡಿಕೆ ಸೂತ್ರ

“ಇಂಗ್ಲಿಷ್ ಹಾಗೂ ಗಣಿತದ ಮೇಲೆ ಗಮನ ಕೊಡು. ಯಾವುದೇ ಕಾರಣಕ್ಕೂ ಷೇರು ಮಾರ್ಕೆಟ್​ ಕಡೆ ತಲೆ ಕೂಡ ಹಾಕಬೇಡ,” – ಈ ಎರಡು ಸಲಹೆಗಳನ್ನು ಬಂಗಾಲಿಗಳು ತಮಗಿಂತ ಕಿರಿಯರಿಗೆ ನೀಡುತ್ತಾರೆ. ಮಕ್ಕಳು ಶಾಲೆಯಲ್ಲಿ ಇರುವಾಗಲೇ ಅವರನ್ನು ಹೀಗೆ ಬೆಳೆಸಲಾಗುತ್ತದೆ. ಈ ಕಾರಣಕ್ಕೆ ಷೇರು ಮಾರ್ಕೆಟ್​ ಅಂದರೆ ಬಂಗಾಲಿಗಳಲ್ಲಿ ಒಂದು ಭಯ ಹಾಗೇ ಉಳಿದುಹೋಗುತ್ತದೆ. ಆದರೆ 32 ವರ್ಷದ ಅರುಣ್ ಮುಖರ್ಜಿ ಮಾತ್ರ ಬೇರೆಯದೇ ದಾರಿಯನ್ನು ಆರಿಸಿಕೊಂಡು, ಇವತ್ತಿಗೆ ಯಶಸ್ವಿಯಾಗಿ ಕಣ್ಣೆದುರು ನಿಂತಿದ್ದಾರೆ. ತಮ್ಮ ಮಗನಿಗೆ ಒಳ್ಳೆ ಇಂಗ್ಲಿಷ್ ಕಲಿಸಬೇಕು ಅನ್ನೋ ಕಾರಣಕ್ಕೆ ಅರುಣ್ ಪೋಷಕರು ಪ್ರತಿ ನಿತ್ಯ ಇಂಗ್ಲಿಷ್ ಪತ್ರಿಕೆ ಓದಿಸುತ್ತಿದ್ದರು. ಈ ಮೂಲಕವೇ ಷೇರು ಮಾರುಕಟ್ಟೆಗೆ ಪರಿಚಯವಾದರು. ತಮಗೆ ಎಲ್ಲರೂ ಹೇಳುತ್ತಾ ಬಂದಿದ್ದ ಸಲಹೆಗಳನ್ನೆಲ್ಲ ಮೀರಿ ಆ ಕಡೆಗೆ ಆಕರ್ಷಿತರಾದರು.

“ಬೇರೆಲ್ಲರಂತೆ ನನ್ನ ತಂದೆ ಕೂಡ ತಮ್ಮ ಹಿರಿಯ ಮಗನಿಗೆ ಅಸ್ಖಲಿತ ಇಂಗ್ಲಿಷ್ ಬರುವಂತೆಯೇ ಯೋಚಿಸಿದವರು. ಮನೆಗೆ ತರಿಸುತ್ತಿದ್ದ ಬಿಜಿನೆಸ್ ನ್ಯೂಸ್ ಪೇಪರ್​ಗಳನ್ನು ಓದುವಂತೆ ಹೇಳುತ್ತಿದ್ದರು. ಒಂದು ದಿನ ದಿನಪತ್ರಿಕೆ ಓದುತ್ತಾ ಇದ್ದೆ. Excel sheetನಂಥದ್ದನ್ನು ನೋಡುವಾಗ ಅಲ್ಲಿ ನಿಂತುಬಿಟ್ಟೆ. ಅದೇನು ಅಂತ ಕೇಳಿದಾಗ, ಸ್ಟಾಕ್ ಬೆಲೆಗಳು ಅಂತ ಹೇಳಲಾಯಿತು,” ಎನ್ನುವುದನ್ನು ನೆನಪಿಸಿಕೊಳ್ಳುತ್ತಾರೆ ಮುಖರ್ಜಿ. ಆದರೆ ಅರುಣ್ ಅವರ ತಂದೆ ಸಲಹೆ ಏನಾಗಿತ್ತೆಂದರೆ, ಷೇರು ಮಾರ್ಕೆಟ್​ನಲ್ಲಿ ಶೇ 90ರಷ್ಟು ಹೂಡಿಕೆದಾರರು ಹಣ ಕಳೆದುಕೊಳ್ಳುತ್ತಾರೆ ಎನ್ನುವುದಾಗಿತ್ತು. “ನನ್ನಲ್ಲೊಂದು ಕ್ರಾಂತಿಕಾರಿ ಆಲೋಚನೆ ಇತ್ತು. ಬಹುತೇಕರು ದೊಡ್ಡ ಸಮಯವನ್ನು ಎಲ್ಲಿ ಕಳೆದುಕೊಳ್ಳುತ್ತಾರೋ ಅಲ್ಲಿ ಗೆಲುವು ಸಾಧಿಸಬೇಕು ಎಂಬುದೇ ನನ್ನ ಪಾಲಿಗೆ ಸ್ಫೂರ್ತಿಯಾಯಿತು,” ಎನ್ನುತ್ತಾರೆ ಅರುಣ್ ಮುಖರ್ಜಿ.

16ನೇ ವಯಸ್ಸಿಗೇ ಸಿದ್ಧತೆ
ಇತರ ಗೆಳೆಯರು ಲವ್ ಅಂದುಕೊಂಡು ಹುಡುಗಿಯರ ಕಡೆಗೊಂದು ಬೆರಗಿನ ನೋಟ ಬೀರುತ್ತಾ ಇರುವಾಗಲೇ, ಅಂದರೆ 16 ವರ್ಷಗಳ ಹಿಂದೆ ಅರುಣ್ ಮುಖರ್ಜಿ ಮಾತ್ರ ಪ್ರತಿ ನಿತ್ಯ ವಾಣಿಜ್ಯ ನಿಯತಕಾಲಿಕೆಗಳನ್ನು ಓದುತ್ತಿದ್ದರು ಹಾಗೂ ಸ್ಟಾಕ್, ಷೇರು ಮಾರುಕಟ್ಟೆ ಹೇಗೆ ಕೆಲಸ ಮಾಡುತ್ತದೆ ಎಂದು ಕಲಿಯಲು ಆರಂಭಿಸಿದ್ದರು. ಈ ಪರಿಶ್ರಮದಿಂದಲೇ ಅರುಣ್​ಗೆ ಕ್ಯಾಪ್ಲಿನ್ ಪಾಯಿಂಟ್, ಅವಂತಿ ಫೀಡ್ಸ್, ಸಿಂಫೋನಿ, ಸೆರಾ ಸ್ಯಾನಿಟಿವೇರ್, ಮಿಂಡಾ ಇಂಡಸ್ಟ್ರೀಸ್ ಹಾಗೂ ಹೆಸ್ಟರ್ ಬಯೋದಂಥ ಸ್ಟಾಕ್​ಗಳನ್ನು ಗುರುತಿಸಲು ನೆರವಾಯಿತು ಮತ್ತು ಅರುಣ್​ಗೆ 25 ವರ್ಷದೊಳಗೆ ಕೋಟ್ಯಧಿಪತಿ ಆಗಲು ಕಾರಣವಾಯಿತು. ಸದ್ಯಕ್ಕೆ ಅವರು ಲಿಸ್ಟೆಡ್ ಕಂಪೆನಿಗಳು ಮತ್ತು ಸ್ಟಾರ್ಟ್​ ಅಪ್​ಗಳ ಕಂಪೆನಿಗಳಲ್ಲಿ ಹೂಡಿಕೆ ಮಾಡುತ್ತಾರೆ. ದೇಶದಾದ್ಯಂತ ಹಾಗೂ ಹೊರದೇಶಗಳಲ್ಲೂ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.

ಹೂಡಿಕೆ ಮಾಡುವಾಗ ಅನುಸರಿಸುವ ಪದ್ಧತಿ ಏನು?
ನಾನು ವಿಶ್ವದಾದ್ಯಂತ ಪ್ರಯಾಣ ಮಾಡ್ತೀನಿ, ಬುದ್ಧಿವಂತ ಜನರನ್ನು ಭೇಟಿ ಆಗ್ತೀನಿ. ಅವರೊಂದಿಗೆ ಚರ್ಚೆ ಮಾಡ್ತಿರ್ತೀನಿ. ನನ್ನ ಸಂಶೋಧನೆಯಲ್ಲಿ ಸೂಕ್ತ ಎಂದು ಕಂಡುಬರುತ್ತದೋ ಅದನ್ನು ಸೇರ್ಪಡೆ ಮಾಡುತ್ತೇನೆ. ಈ ರೀತಿಯ ವಿಚಾರ ವಿನಿಮಯ ನನ್ನ ಪಾಲಿಗೆ ಅದ್ಭುತಗಳನ್ನು ಮಾಡಿವೆ ಎನ್ನುತ್ತಾರೆ ಮುಖರ್ಜಿ. ಆದರೆ ಕೆಲವು ಮ್ಯಾನೇಜ್​ಮೆಂಟ್​ನವರು ಉತ್ಪ್ರೇಕ್ಷೆ ಮಾಡಿ ಹೇಳುವಂಥ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಹ ಸೇರಿಸುತ್ತಾರೆ.

ಮುಖರ್ಜಿ ತಮ್ಮದೇ ಸ್ವಂತದ್ದನ್ನು ಮಾಡಲು ಬಯಸುತ್ತಾರೆ. ಹೂಡಿಕೆದಾರರ ಮಧ್ಯೆ ಅರುಣ್​ಗೆ ಭಾರೀ ಫಾಲೋಯಿಂಗ್ ಇದೆ. ಟ್ವಿಟ್ಟರ್​ನಲ್ಲಿ 80 ಸಾವಿರಕ್ಕೂ ಹೆಚ್ಚು ಫಾಲೋವರ್ ಇದ್ದಾರೆ. ಈಗ ಬಂಗಾಲಿಗಳು, ಯಾರು ತಮ್ಮ ಕುಟುಂಬದವರಿಂದ ಉತ್ತೇಜನ ಸಿಕ್ಕಿರಲ್ಲವೋ ಅಂಥವರು ತಮ್ಮ ಪೋರ್ಟ್​ಫೋಲಿಯೋ ವಿಚಾರದಲ್ಲಿ ಗೊಂದಲಗಳಿದ್ದಲ್ಲಿ ಅರುಣ್ ಅವರ ಸಲಹೆ ಕೇಳುತ್ತಾರೆ.

ಅಮದಹಾಗೆ, ವಯಸ್ಸು ಮುಖರ್ಜಿ ಅವರ ಪರವಾಗಿದೆ. ಆದ್ದರಿಂದ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೆದರುವುದಿಲ್ಲ. ಉತ್ತಮ ತಂಡ ಹಾಗೂ ದೃಷ್ಟಿಕೋನ ಇರುವ ತಂಡ ಇರುವ ಸಂಸ್ಥೆಗಳ ಹುಡುಕಾಟ ನಡೆಸುತ್ತಾರೆ. ಸ್ಟಾರ್ಟ್ ಅಪ್ಸ್ ಮತ್ತು ಅನ್​ಲಿಸ್ಟೆಡ್ ಕಂಪೆನಿಗಳಲ್ಲಿ ಸಿಕ್ಕಾಪಟ್ಟೆ ಹೂಡಿಕೆ ಮಾಡುತ್ತಾರೆ. ಲಿಸ್ಟೆಡ್ ಕಂಪೆನಿಗಳಿಗಿಂತ ಹೆಚ್ಚಾಗಿ ಅನ್​ಲಿಸ್ಟೆಡ್​ನಲ್ಲೇ ಮುಖರ್ಜಿ ಅವರ ಹೂಡಿಕೆ ಹೆಚ್ಚಾಗಿದೆ. ಇನ್ನು ಅರುಣ್ ಹೇಳುವಂತೆ, ಆರಂಭದ ತಪ್ಪುಗಳಿಂದ ಪಾಠ ಕಲಿಯುತ್ತೇವೆ. ಅದನ್ನು ಪುನರಾವರ್ತನೆ ಮಾಡಬಹುದು, ಅಷ್ಟೇ ಎನ್ನುತ್ತಾರೆ. ಬುದ್ಧಿವಂತ ಹೂಡಿಕೆದಾರ ಯಾವಾಗಲೂ ಏರಿಕೆ ಆಗುವ ಆಸ್ತಿಗಳ ಮೇಲೆ ಹೂಡಿಕೆ ಮಾಡುತ್ತಾನೆ ಹೊರತು ಇಳಿಕೆ ಆಗುವುದರ ಮೇಲಲ್ಲ ಎನ್ನುತ್ತಾರೆ.

ಈಗಲೂ ಅರುಣ್ ಬಳಿ ಸ್ವಂತ ಕಾರಿಲ್ಲ
ಆ ಕಾರಣಕ್ಕೆ ಇಂದಿಗೂ ನನ್ನ ಬಳಿ ಸ್ವಂತ ಕಾರಿಲ್ಲ. ಮನೆ ಎಂಬುದು ಅಗತ್ಯ. ನನ್ನ ಬಳಿ ಹೆಚ್ಚು ಮನೆಗಳಿವೆ. ಹೊಸ ಮನೆ ನನಗೆ ಹೆಚ್ಚು ಸ್ಥಳಾವಕಾಶ ಹಾಗೂ ವಿಶ್ರಾಂತಿ ನೀಡುತ್ತದೆ. ಆದ್ದರಿಂದ ನನ್ನ ಗುರಿಯು ಬೆಲೆ ಹೆಚ್ಚಳ ಆಗುವ ಆಸ್ತಿಗಳ ಕಡೆಗೆ ಇರುತ್ತದೆ ಎನ್ನುತ್ತಾರೆ.

ಆರಂಭದ ಹೂಡಿಕೆದಾರರಿಗೆ ಸಲಹೆ ಏನು?
ಈಗಿನ ತಲೆಮಾರು ನೋಟು ನಿಷೇಧದ ನಂತರ ಬ್ಯಾಂಕಿನ ಎಫ್​ಡಿಯಲ್ಲಿ ಹಣ ಹಾಕುತ್ತಿಲ್ಲ. ಒಂದು ಕಂಪ್ಯೂಟರ್ ಇಟ್ಟುಕೊಂಡು ಮಾಡುವ ಬಿಜಿನೆಸ್​ ಕೂಡ ಆಕರ್ಷಕವಾಗಿದೆ. ಆ ಲಕ್ಷಣಗಳು ಕಾಣುತ್ತಿವೆ. ಯಾಕೆ ನಿವೃತ್ತಿ ಆಗುವುಕ್ಕೆ 60ರ ತನಕ ಕಾಯಬೇಕು, 40ನೇ ವಯಸ್ಸಿನಲ್ಲೇ ಆಗಬಹುದಲ್ಲಾ? ಶ್ರೀಮಂತರಾಗಿ ನಿವೃತ್ತರಾಗಲು ಈಕ್ಷಿಟಿ ಷೇರು ಸರಿಯಾದ ದಾರಿ, ಬೇಗ ರಿಟೈರ್ ಆಗಿ ಎನ್ನುವುದು ಅರುಣ್ ಮಾತು.

ಈಕ್ವಿಟಿಯೇ ಊಟ, ನಿದ್ರೆ ಎಲ್ಲವೂ
“ದೀರ್ಘಾವಧಿಯ ಬಂಡವಾಳ ಲಾಭದ ಪ್ರಮಾಣ ಕೇವಲ ಶೇ 10ರಷ್ಟು ಮಾತ್ರ. 26 ಪರ್ಸೆಂಟ್​ನ ಕಾಂಪೌಂಡ್​ ಬೆಳವಣಿಗೆಯು ನಿಮ್ಮ ಸಂಪತ್ತನ್ನು 10 ವರ್ಷಗಳಲ್ಲಿ 10 ಪಟ್ಟು ಹೆಚ್ಚಿಸುತ್ತದೆ ಮತ್ತು ಇದು ಹಣದುಬ್ಬರವನ್ನು ಮೀರಿ ಬೆಳೆದಿರುತ್ತದೆ. ನೀವು ಸರಿಯಾಗಿ ಹೂಡಿಕೆ ಮಾಡಲು ಸಾಧ್ಯವಾದರೆ 30 ವರ್ಷಗಳಲ್ಲಿ 1000 ಪಟ್ಟು ಗಳಿಸುವುದೂ ದೊಡ್ಡ ವಿಷಯವಲ್ಲ. ವಿಶ್ವದ ಯಾವುದೇ ಆಸ್ತಿ ಕ್ಲಾಸ್ ಆ ಪ್ರಮಾಣದ ಸಂಪತ್ತನ್ನು ಸೃಷ್ಟಿಸಲು ಸಾಧ್ಯವಿಲ್ಲ. ನೀವು ಮಾಸಿಕ ಸ್ಟಾಕ್ ಎಸ್‌ಐಪಿ ಮಾಡುತ್ತೀರಿ ಅಥವಾ ಲಾಭಾಂಶವನ್ನು ಮತ್ತೆ ಹೂಡಿಕೆ ಮಾಡುತ್ತೀರಿ ಅಂತಾದರೆ ಇದೆಲ್ಲವೂ ನಿಮ್ಮ ಪೋರ್ಟ್​ ಫೋಲಿಯೊವನ್ನು ಅಂತಹ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಅದು ನೀವು ಸಹ ಅರಿಯಬಹುದು,” ಎಂದು ಅರುನ್ ಹೇಳುತ್ತಾರೆ.

ಅಂದಹಾಗೆ, ಈ ಲೆಕ್ಕಾಚಾರಗಳನ್ನೆಲ್ಲ ಬಾಲ್ಯದ ಗಣಿತಶಾಸ್ತ್ರದ ಪಾಠಗಳಲ್ಲಿ ಕಲಿತಿರುತ್ತೀರಿ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.

“ಕುಷ್ಟಗಿ: ೪ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭ”

ತಾಲೂಕಿನ ನಾಲ್ಕು ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಷ್ರರಂಭವಾಗಲಿದ್ದು ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ವರದಾನವಾಗಿದೆ ದೋಟಿಹಾಳ ಗ್ರಾಮಸ್ಥರಲ್ಲಿ ಸಂತಸ ಇಮ್ಮಡಿಗೊಳಿಸಿದೆ. ಆಂಗ್ಲ ವ್ಯಾಮೋಹ ಅನೇಕರಲ್ಲಿ ಹೆಚ್ಚಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬೇಡಿಕೆ ಬಂದಿದ್ದರೆ ಅನೇಕ ಸರಕಾರಿ ಶಾಲೆಗಳು ಮುಚ್ಚುವ ಬಿತಿಯನ್ನು ಎದುರಿಸುತ್ತಿದ್ದು. ಇದನ್ನು ಹೋಗಲಾಡಸಲು ಶಿಕ್ಷಣ ಇಲಾಖೆ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗವನ್ನು ತೆರೆದಿದೆ. ಕುಷ್ಟಗಿ ತಾಲೂಕಿನಲ್ಲಿ ದೋಟಿಹಾಳ, ಚಳಗೇರಾ, ಹನಮನಾಳ, ನೆಲೋಗಲ್ ಗಳಲ್ಲಿ ೨೦೨೧-೨೦೨೨ಸಾಲಿಗೆ ೧ನೇ ತರಗತಿಯನ್ನು ಆರಂಭಸಲಾಗುತ್ತಿದೆ. ಇದಕ್ಕಾಗಿ ಪ್ರತಿ ಶಾಲೆಗೆ ಇಬ್ಬರು ಶಿಕ್ಷಕರನ್ನು ಆಯ್ಕೆ ಮಾಡಿ ವಿಶೇಷ ತರಬೇತಿ ನೀಡಲಾಗುತ್ತಿದೆ. ರಾಷ್ಟ್ರೀಯ ಪಠ್ಯ ಕ್ರಮದಂತೆ ಆಂಗ್ಲ ಮಾಧ್ಯಮದ ಬೋಧನೆ ಇರಲಿದ್ದು, ಇಂಗ್ಲಿಷ್, ಗಣಿತ ವಿಷಯಗಳಿಗೆ ಕೇಂದ್ರ ಸರ್ಕಾರದ (ಎನ್ ಸಿ ಇ ಆರ್ ಟಿ )ಪಠ್ಯ ಪುಸ್ತಕ ಹಾಗೂ ಪರಿಸರ ಅಧ್ಯಯನದ ಕನ್ನಡ ವಿಷಯಗಳಿಗೆ (ಕೆ.ಟಿ.ಬಿ.ಎಸ್) ಪುಸ್ತಕಗಳನ್ನು ಅನುಸರಿಸಿಲಾಗುವದು. ಈ ವಿಭಾಗಗಳನ್ನು ಪರಿಸರ, ಗಣಿತ ವಿಶೇಷಯಗಳಿಗೆ ದ್ವಿಬಾಷಯಲ್ಲಿ (ಬೈಲಿಂಗ್ವಾಲ್ ಉಭಯ ಪಠ್ಯ ಪುಸ್ತಕ) ಗಳನ್ನು ಅಳವಡಿಸಲಾಗಿದೆ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿ ಮಗುವಿಗೆ ಯಾವ ರಿತಿ ಶಿಕ್ಷಣ ನೀಡಲಾಗುತ್ತದೆಯೋ ಅದೇ ಮಾದರಿಯ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ. ಮೂವತ್ತು ಮಕ್ಕಳು ಮಾತ್ರ ಪ್ರವೇಶ ಇದ್ದು ಹೆಚ್ಚಿಗೆ ಬಂದರೆ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ದೋಟಿಹಾಳ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕ ಶಿದ್ರಾಮಪ್ಪ ಅಮರಾವತಿ ವಿವರಿಸಿದರು. ಜಾಗೃತಿ ಕೊರತೆ:- ಸರ್ಕಾರಿ ಶಾಲೆಗಳಲ್ಲಿ ಈ ವಷ೯ವೇ ಆಂಗ್ಲ ಮಾಧ್ಯಮ ಆರಂಭವಾಗುತ್ತಿರುವುದರಿಂದ ಪಾಲಕರು, ಶಿಕ್ಷಣ ಪ್ರೇಮಿಗಳನ್ನು ಶಾಲೆಯಲ್ಲಿ ಸಭೆ ಕರೆದು ಮಾಹಿತಿ ನೀಡಲಾಗುತ್ತಿದೆ. ಆದರೂ ಸಹ ಜಾಗೃತಿ ಕೊರತೆ ಎದ್ದು ಕಾಣುತ್ತಿದೆ. ಶಾಲೆಯಲ್ಲಿ ದೊರೆಯುವ ಸೌಲಭ್ಯ ಶಿಕ್ಷಣ ಗುಣಮಟ್ಟ ಸೇರಿ ವಿಶೇಷತಗಳ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸುವ ಕಾಯ೯ವಾಗಬೇಕಿದೆ. ಎಲ್ಲದಕ್ಕಿಂತ ಮಿಗಿಲಾಗಿ ಸರಕಾರಿ ನೌಕರರ ಮಕ್ಕಳೂ ಸರಕಾರಿ ಶಾಲೆಗೆ ಬರುವಂತಾಗುಬೇಕು. ಪುಸ್ತಕ ಸರಬರಾಜು ಇಲ್ಲಾ:- ಜೂಲೈ ಮತ್ತು ಆಗಸ್ಟ್ ತಿಂಗಳ ದಾಖಲಾತಿಗಳು ಪೂರ್ಣಗೊಂಡ ನಂತರ ತರಗತಿ ಪ್ರಾರಂಭ ಮಾಡಲಾಗುತ್ತದೆ. ಹೀಗಾಗಿ ಸರಕಾರ ತ್ವರೀತವಾಗಿ ಸರಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದರಿಂದ ೧,೨ ನೇ ವಗ೯ದ ವಿಧ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಸಮವಸ್ತ್ರ ಮದ್ಯಾಹ್ನದ ಉಪಹಾರ,ಶೂ ಮತ್ತು ಸಾಕ್ಷಗಳನು ಉಚಿತವಾಗಿ ನೀಡಲಾಗುವುದು ಎಂದು ಸರಕಾರಿ ಘೋಷಣೆ ಮಾಡಿದೆ. ಆದರೂ ಇನ್ನು ಕೂಡಾ ಆಯಾ ಶಾಲೆಗಳಿಗೆ ಪುಸ್ತಕ ಮತ್ತು ಸಮವಸ್ತ್ರಗಳು ಬಂದಿಲ್ಲ. ತಾಲೂಕಿನ ನಾಲ್ಕು ಕಡೆಗಳಲ್ಲಿ ಆಂಗ್ಲ ಶಾಲೆ ತೆರೆಯಲಾಗಿದ್ದು ಉತ್ತಮವಾಗಿದೆ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಶಾಲೆಗಳನ್ನು ಪ್ರಾರಂಭಿಸಿರುವುದು ಮಕ್ಕಳು ಕಲಿಕಾ ವಿಧಾನ ಬದಲಾವಣೆಯಾಗಲಿದೆ. ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಪುಸ್ತಕ ಮತ್ತು ಸಮವಸ್ತ್ರಗಳು ಬಂದಿಲ್ಲ. ▪️ಚನ್ನಬಸಪ್ಪ ಮಗ್ಗದ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಷ್ಟಗಿ.

✍️ವರದಿ ಶರಣಬಸಪ್ಪ ಬಾಲಪ್ಪ ಗೋಜ೯ನಾಳ ದೋಟಿಹಾಳ

1 4 5 6 7 8 11