ದೇಶದ್ರೋಹ- ರಾಜಕೀಯ ಅಪರಾಧ -ಸುಪ್ರೀಂ ಚಾಟಿ

ದೇಶದ್ರೋಹ- ರಾಜಕೀಯ ಅಪರಾಧ -ಸುಪ್ರೀಂ ಚಾಟಿ

Share

ಭಾರತದ ಸಂವಿಧಾನವು ಅತ್ಯಂತ ಅರ್ಥಪೂರ್ಣವಾಗಿದ್ದು, ದೇಶದ ಅಭಿವೃದ್ಧಿ, ಸಮಾನತೆ, ಏಕತೆ, ಐಕ್ಯತೆ, ಜಾತ್ಯಾತೀತತೆಗೆ ಒತ್ತು ನೀಡಿದೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗವು ಒಂದು ಇನ್ನೊಂದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಹಲವಾರು ಸಂದರ್ಭದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ಜನರು ನಂಬಿಕೆ ಕಳೆದುಕೊಂಡಾಗಲೂ ನ್ಯಾಯಾಂಗವು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ತನ್ನ ಘನತೆಯನ್ನು ಎತ್ತಿ ಹಿಡಿದಿದೆ. ಇಂದಿಗೂ ನ್ಯಾಯಾಂಗದ ಮೇಲೆ ಜನತೆಗೆ ಅಪಾರವಾದ ನಂಬಿಕೆ ಇದ್ದು, ಈ ನಂಬಿಕೆಗಳಿಗೆ ಪೂರಕವಾಗಿ ಇತ್ತೀಚಿನ 2 ತೀರ್ಪುಗಳನ್ನು ಉಲ್ಲೇಖಿಸಬಹುದು. 1 ಬ್ರಿಟೀಷರ ಕಾಲದ ‘ದೇಶದ್ರೋಹ’ ಕಾಯ್ದೆಯ ಇನ್ನು ಏಕೆ ? 2 ಕ್ರಿಮಿನಲ್ ಹಿನ್ನಲೆ ಹೊಂದಿದವರು ಕಾನೂನು ಮಾಡುವುದು ತಪ್ಪು ದೇಶದ್ರೋಹ ಕಾಯ್ದೆ IPಅ 124 ಎ ಅತ್ಯಂತ ಹಳೆಯದು ಮತ್ತು ಇದು ಬ್ರಿಟೀಷರು ಆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಭಾರತೀಯರು
ವಿರೋಧಿಸದಂತೆ ನಿಯಂತ್ರಿಸಲು ರಚನೆ ಆಗಿದ್ದು, ಸಂವಿಧಾನ 377 ಸೆಕ್ಷನ್ ಅನ್ನು ರದ್ದು ಪಡಿಸಿದಂತೆ 124ಎ ಅನ್ನು ರದ್ದುಪಡಿಸಬಹುದಲ್ಲವೆ ? ಎಂದು ಮಾಜಿ ಎ.ಜಿ. ಮುಕುಲ್ ರೋಹಟಗಿ ವಿವರಣೆ ನೀಡುವ ಮೂಲಕ ಸುಪ್ರೀಂ ಕೋರ್ಟ್‍ನ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ. ಒಂದು ಕೇಸಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‍ವು ದೇಶದಲ್ಲಿ ‘ದೇಶದ್ರೋಹ’ ಕಾಯ್ದೆಯನ್ನು ಆಡಳಿತ ವರ್ಗ ದುರುಪಯೋಗಪಡಿಸಿಕೊಳ್ಳುತ್ತಿದೆ. ದೇಶಕ್ಕೆ ಸ್ವತಂತ್ರ್ಯ ಬಂದು 75 ವರ್ಷದ ಇಲ್ಲಿಯವರೆಗೂ ‘ದೇಶದ್ರೋಹ’ ಕಾಯ್ದೆ ಬಳಸುವಂತಹ ಯಾವುದೇ ಪ್ರಕರಣವು ನಡೆದಿಲ್ಲ. ದೇಶದ ವಿರುದ್ಧ ಮಾತನಾಡುವವರಿಗೆ ವಿರೋಧಿಸುವವರಿಗೆ ಬೇರೆ ರೀತಿಯ ಕಾಯ್ದೆಗಳು ಇವೆ. ಅಥವಾ ಕೇಂದ್ರ ಸರಕಾರವು ಅದಕ್ಕಾಗಿ ಪ್ರತ್ಯೇಕ ಕಾಯ್ದೆ ರೂಪಿಸಲಿ. ಆದರೆ ಪುರಾತನವಾದ ಈ ಕಾಯ್ದೆಯನ್ನು ರದ್ದುಪಡಿಸಲು ಕೇಂದ್ರ ಸರಕಾರ ಸಲಹೆ ನೀಡಿದೆ. ಇನ್ನು ಎರಡನೆಯ ವಿಚಾರ ಕಾನೂನು ರಚಿಸುವಲ್ಲಿ ಅಪರಾಧ ಹಿನ್ನೆಲೆಯವರು ಇರಬಾರದು. ಬಿಹಾರ ವಿಧಾನಸಭಾ ಚುನಾವಣೆಯ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರಕಾರಕ್ಕೆ ಸಾಕಷ್ಟು ಬಾರಿ ಹೇಳಿದರೂ ಅಪರಾಧ ಹಿನ್ನೆಲೆಯವರು ರಾಜಕಾರಣಿಗಳು ಆಗದಂತೆ ನೋಡಿಕೊಳ್ಳಬೇಕು.
ಕಾನೂನು ರಚಿಸಬೇಕೆಂದು ಹೇಳಿದಾಗಲೂ ಮೌನ ವಹಿಸುತ್ತಿದೆ. ಎಲ್ಲ ರಾಜಕೀಯ ಪಕ್ಷಗಳಿಗೂ ಕಾನೂನು ಮಾಡುವ ಇಚ್ಚೆ ಇಲ್ಲ. ಅಪರಾಧ ಹಿನ್ನೆಲೆಯವರು ದೇಶದ ಕಾನೂನುಗಳನ್ನು ರಚನೆ ಮಾಡುತ್ತಿರುವುದು ಜನತೆಯ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಈಗಾಗಲೇ ಜನರು ರೊಚ್ಚಿಗೆದ್ದಿದ್ದಾರೆ. ಈಗಲಾದರೂ ಅಪರಾಧ ಹಿನ್ನೆಲೆಯ ರಾಜಕಾರಣಿಗಳನ್ನು ಚುನಾವಣೆಯ ಸ್ಪರ್ಧೆ ಮಾಡದಂತೆ ತಡೆಯಲು ಸೂಕ್ತ ಕಾನೂನು ರೂಪಿಸಬೇಕೆಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಖಡಕ್ ಎಚ್ಚರಿಕೆ ನೀಡಿದೆ. ಈ ಎರಡು ವಿಚಾರಗಳು ಭಾರತದ ಜನತೆಯಲ್ಲಿ ನ್ಯಾಯಾಲಯದ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ. ಏಕೆಂದರೆ ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಈ ಎರಡು ವಿಚಾರಗಳು ಅತ್ಯಂತ ಮುಖ್ಯವಾಗಿದ್ದು, ದೇಶದ್ರೋಹ ಕಾಯ್ದೆಯನ್ನು ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟವರೆ ಬಳಸುತ್ತಿದ್ದರೂ ಹಾಗೇ ಇಂದು ರಾಜಕೀಯವು ಅತ್ಯಂತ ಅಪರಾಧ ಹಿನ್ನೆಲೆಯುಳ್ಳವರಿಂದ ತುಂಬಿದೆ. ರಾಜಕೀಯ ಬದಲಾದರೆ ಸರಕಾರ ಅಂದರೆ ಶಾಸಕಾಂಗ ವ್ಯವಸ್ಥೆ ಬದಲಾಗುತ್ತದೆ. ದೇಶದ ಅಭಿವೃದ್ಧಿ ಜೊತೆಗೆ ಪ್ರಕಾಶಮಾನವಾಗಿ ಬೆಳಗುತ್ತದೆ.


Share