ವಿಶ್ವ ಕುಟುಂಬ ದಿನದ (Global Family Day)ಪ್ರಯುಕ್ತ ವಿಶೇಷ ಲೇಖನ

ವಿಶ್ವ ಕುಟುಂಬ ದಿನದ (Global Family Day)ಪ್ರಯುಕ್ತ ವಿಶೇಷ ಲೇಖನ

Share

ಕುಟುಂಬವು ಸಮಾಜದ ಬಹು ಮುಖ್ಯ ಅಂಗವಾಗಿದೆ.ಉತ್ತಮ ಕುಟುಂಬದಿಂದಲೇ ಅತ್ಯುತ್ತಮ ಸಮಾಜ ನರ್ಮಾಣ ಸಾಧ್ಯ.”ವಸುದೈವ ಕುಟುಂಬಕಂ” ಎಂಬೊಂದು ನುಡಿಯಿದೆ.ಇದರ ರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಇದು ಕುಟುಂಬವೊಂದರ ಮಹತ್ವವನ್ನು ಸಾರುತ್ತದೆ. ಈ ಕುಟುಂಬ ಎಂಬ ಪರಿಕಲ್ಪನೆ ತುಂಬಾ ಪವಿತ್ರ ಮತ್ತು ಮಹತ್ವವಾದದ್ದು. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಆಧುನಿಕ ಜೀವನಕ್ಕೆ ಹೊಂದಿಕೊಂಡಂತೆ ಕುಟುಂಬಗಳು ಸಣ್ಣದಾಗತೊಡಗಿವೆ. ಬಾಲ್ಯದಲ್ಲಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ತಂದೆ-ತಾಯಿಯನ್ನು ವೃದ್ಧಾಪ್ಯದಲ್ಲಿ ಆಶ್ರಮಕ್ಕೆ ದೂಡುವ ಮಕ್ಕಳಿಗೆ ಕುಟುಂಬದ ಮಹತ್ವವನ್ನು ತಿಳಿಸಿಕೊಡುವ ಕಾರ್ಯವಾಗಬೇಕು. ಪ್ರತಿಯೋರ್ವ ವ್ಯಕ್ತಿ ಮತ್ತು ಸಮಾಜವನ್ನು ಒಂದೆಡೆ ಕೇಂದ್ರಿಕರಿಸುವ ಈ ವ್ಯವಸ್ಥೆ ನಮ್ಮ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಹುಶಃ ಕುಟುಂಬವೆಂಬ ಪರಿಕಲ್ಪನೆ ಇಲ್ಲದಿದ್ದರೆ. ಇಡೀ ಜಗತ್ತನ್ನು ಊಹಿಸಲು ಅಸಾಧ್ಯವಾಗುತ್ತಿತ್ತು. ಅಷ್ಟರ ಮಟ್ಟಿಗೆ ಕುಟುಂಬದ ಅಗತ್ಯ ನಮ್ಮ ವಿಶ್ವಕ್ಕೆ ಇದೆ.ಮುಂದೆ ಕೂಡಾ ಜಗತ್ತು ಶಾಂತಿ, ಸಂಯಮದ ಹಾದಿಯಲ್ಲಿ ಸಾಗಬೇಕಿದ್ದರೆ ಅದಕ್ಕೆ ಕುಟುಂಬದ ತಳಪಾಯ ಅತಿ ಅಗತ್ಯ.ಅದು ನಮ್ಮ ದೇಶವಾಗಿರಲಿ ಅಥವಾ ವಿದೇಶವಾಗಿರಲಿ ಎಲ್ಲಾ ಕಡೆಯೂ ಕುಟುಂಬವೆಂಬ ಭದ್ರ ಬುನಾದಿ ಇದ್ದೇ ಇದೆ. ಆದ್ದರಿಂದಲೇ ನಮ್ಮ ವಿಶ್ವ ಇಂದು ಉಳಿದುಕೊಂಡು ಮುಂದಕ್ಕೆ ಬೆಳೆಯುತ್ತಿದೆ.
ಭಾರತದ ಇತಿಹಾಸ ಹಾಗೂ ಸಂಸ್ಕøತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗಿಕರಿಸಬಹುದು. ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿಗೆ ಏಕ ಪೆÇೀಷಕ ಕುಟುಂಬವೊಂದು ನಿರ್ಮಾಣವಾಗಿದೆ ಅದುವೇ ವಿಭಕ್ತ ಕುಟುಂಬ.
ಅವಿಭಕ್ತ ಕುಟುಂಬ ಅಥವಾ ಕೂಡು ಕುಟುಂಬ ಇದ್ದಾಗ ಮಾತ್ರ ಸಮಾಜದ ನಿರ್ಮಾಣಕ್ಕೆ ನಾಂದಿ ಎನ್ನುವ ಮಾತಿದೆ. ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ. ಅವಿಭಕ್ತ ಕುಟುಂಬ ಎಂದರೆ ಒಂದೇ ಮನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಲೆಮಾರಿನವರು ವಾಸಿಸುವುದನ್ನು ಅವಿಭಕ್ತ ಕುಟುಂಬ ಎನ್ನಲಾಗುತ್ತದೆ. ಭಾರತೀಯ ಪರಂಪರೆಯಲ್ಲಿ ಕುಟುಂಬಕ್ಕೆ ಅದರದ್ದೇ ಆದ ಪ್ರಾಮುಖ್ಯವಿದೆ. ಅವಿಭಕ್ತ ಕುಟುಂಬಗಳನ್ನು ಹೊಂದಿದ್ದ ಭಾರತೀಯ ಸಂಸ್ಕೃತಿಯೂ ಕೂಡಿ ಬಾಳುವುದನ್ನು ಕಲಿಸಿಕೊಡುತ್ತದೆ. ಇಲ್ಲಿ ಪ್ರೀತಿ, ಒಗ್ಗಟ್ಟುಗಳೇ ಮೂಲಮಂತ್ರ. ಒಂದು ಮಗು ಸಮಾಜದ ಉತ್ತಮ ಪ್ರಜೆಯಾಗಿ ರೂಪುಗೊಂಡರೆ ಅದರಲ್ಲಿ ಆ ಮಗುವಿನ ಶಕ್ತಿಗಿಂತ ಆತನನ್ನು ಆ ರೀತಿ ರೂಪಿಸಿದ ಕುಟುಂಬದ ಸಂಸ್ಕೃತಿಯನ್ನು ಹೊಗಳುವ ಒಂದು ಕಾಲಘಟ್ಟವಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜತೆಗೆ ಜಗತ್ತಿನಾದ್ಯಂತ ಕುಟುಂಬ ರೂಪೀಕರಣದ ಪದ್ಧತಿಯೂ ಬದಲಾಗಿದೆ. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬದಲಾಗಿವೆ. ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ,ದೊಡ್ಡಮ್ಮ, ಅಳಿಯ, ಮಾವ, ಅತ್ತೆ, ಸೊಸೆ, ಅಪ್ಪ, ಅಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತುಂಬಿತುಳುಕುತ್ತಿದ್ದ ಮನೆಗಳಲ್ಲಿ ಅಮ್ಮನ ಕೈ ತುತ್ತು, ಅಪ್ಪನ ಕಿವಿ ಮಾತು, ಅಜ್ಜಿಯ ಕಾಗೆ ಗುಬ್ಬಕ್ಕನ ಕತೆ, ಅಜ್ಜನ ಮನೆಯ ಜವಬ್ದಾರಿ. ಒಬ್ಬರಿಗೆ ಕಷ್ಟ ಬಂದರೆ ಸಾಕು ತಮಗೇ ಬಂದಿದ್ದೇನೋ ಎಂಬಂತೆ ಸಹಾಯಕ್ಕೆ ಬರುವ ಮನಸ್ಸುಗಳು. ಒಬ್ಬರನ್ನೊಬ್ಬರು ರ್ಥ ಮಾಡಿಕೊಂಡು ಜೀವನ ನಡೆಸುವುದು. ಅಲ್ಲಿ ಹಿರಿಯರ ಮಾತೇ ಅಂತಿಮ ನರ್ಣಯ. ಅವರ ಮಾತನ್ನು ಉಲ್ಲಂಘಿಸುವವರಿಲ್ಲ.ಅಲ್ಲಿ ಚಿಕ್ಕವರು ದೊಡ್ಡವರೆಂಬ ಕೀಳರಿಮೆಯಿಲ್ಲ ಎಲ್ಲರೂ ಒಂದೇ ಎನ್ನುವ ಭಾವನೆ ಅವಿಭಕ್ತ ಕುಟುಂಬದಲ್ಲಿ ಇರುತ್ತದೆ. ಆದರೆ ಈಗ ಕೇವಲ ಗಂಡ, ಹೆಂಡತಿ, ಮಕ್ಕಳು ಮಾತ್ರ ಕಾಣಸಿಗುತ್ತಾರೆ. ಕುಟುಂಬದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಾ ಹೋದಂತೆ ಅಲ್ಲಿ ಭಾವನೆಗಳೂ ಬೆಲೆ ಕಳೆದು ಕೊಳ್ಳಲಾರಂಭಿಸುತ್ತವೆ. ಹೆತ್ತವರ, ಮಕ್ಕಳ ತರಾತುರಿಯ ಜೀವನದ ನಡುವೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವಷ್ಟು ಸಮಯವಿಲ್ಲದೆ ಕೇವಲ ಯಂತ್ರಗಳಂತೆ ಬದುಕಬಹುದಾಗಿದೆ. ಆದರೆ ಇಂದಿನ ದಿನಗಳಲ್ಲಿ ಕುಟುಂಬದ ಮಾದರಿಯು ತುಂಬಾ ಬದಲಾಗಿದೆ. ಹಿಂದೆ ತುಂಬಾ ಜನರಿಂದ ಕೂಡಿದ ಅವಿಭಕ್ತ ಕುಟುಂಬವಿತ್ತು. ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.ಆದರೆ ಇಂದಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ. ಹೀಗಾಗಿ ಇಂದಿನ ದಿನಗಳಲ್ಲಿ ಹೆಚ್ಚಾಗಿ ವಿಭಕ್ತ ಕುಟುಂಬಗಳಿವೆ. ಅವಿಭಕ್ತ ಕುಟುಂಬಗಳು ಇಂದು ದೊಡ್ಡ ಹೊರೆ ಮತ್ತು ಹಲವರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿ ಕಾರಣವೋ ಅಥವಾ ಸಂಸ್ಕಾರದ ಕೊರತೆಯೋ ಅಥವಾ ಸ್ವರ್ಥವೋ? ಏನೆಂದು ಗೊತ್ತಾಗುತ್ತಿಲ್ಲ. ಆದ್ದರಿಂದ ಇಂದಿನ ವಿಭಕ್ತ ಕುಟುಂಬಕ್ಕೆ ಕುಟುಂಬದ ಮಹತ್ವವನ್ನು ತಿಳಿಸುವ ಸಲುವಾಗಿ ಅಂತರರಾಷ್ಟ್ರೀಯ ಕುಟುಂಬ ದಿನವನ್ನು ಜನೆವರಿ 01 ರಂದು ಆಚರಿಸಲಾಗುತ್ತದೆ.
ಕಳೆದ ವರ್ಷ ಕೊರೊನಾ ಸಂದಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನತಾರ್ಪ್ಯೂಗೆ ಕರೆ ನೀಡಿದಾಗ ಕೊರೊನಾ ವಾರಿರ್ಸ್ ಗಳಿಗೆ ದೀಪ ಬೆಳಗುವ ಮೂಲಕ ಗೌರವಿಸಿ, ದೇಶದ ಜನರೆಲ್ಲ ಅಭೂತಪರ್ವವಾಗಿ ಸ್ಪಂದಿಸಿದ್ದರು. ಇದು ನಮ್ಮಲ್ಲಿನ ಕೌಟುಂಬಿಕ ವ್ಯವಸ್ಥೆಯ ಸಂಕೇತವನ್ನು ತಿಳಿಸುತ್ತದೆ. ಕೊರೊನಾ ಸಮಯದಲ್ಲಿ ವಿದೇಶಗಳಲ್ಲಿ ಏನೇ ಕಳವಳವಾದರೂ, ಭಾರತದಲ್ಲಿ ಸಶಕ್ತವಾಗಿ ಎದುರಿಸಿದೆವು. ಇದಕ್ಕೆ ಕೌಟುಂಬಿಕ ವ್ಯವಸ್ಥೆಯೇ ಕಾರಣ ಎಂದು ಹೇಳಲಾಗುತ್ತದೆ. ಕೌಟುಂಬಿಕ ವ್ಯವಸ್ಥೆಯನ್ನು ಬಲಗೊಳಿಸಲು ನಾವು ಮುಂದಾಗಬೇಕಿದೆ. ವಾರಕ್ಕೆ ಒಂದು ಬಾರಿಯಾದರೂ ಜೊತೆಗೆ ಕುಳಿತು ಭಜನೆ ಹಾಗೂ ಭೋಜನಗಳಲ್ಲಿ ತೊಡಗುವುದು, ಹಬ್ಬ ಆಚರಣೆ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಕುಟುಂಬದ ಸದಸ್ಯರ ಒಡನಾಟ ಹೆಚ್ಚಾಗಿ ಕುಟುಂಬ ವ್ಯವಸ್ಥೆ ಇನ್ನೂ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಾಧ್ಯ ಹಾಗೂ ಹಬ್ಬ ಹರಿದಿನಗಳು ಬಂದರೆ ಸಾಕು ಮನೆಯಲ್ಲಾ ಸಂಪರ್ಣ ಅಲಂಕಾರ. ಬಗೆ ಬಗೆಯ ತಿಂಡಿ ತಿನಿಸುಗಳು, ಅಜ್ಜಿಯ ಚಕ್ಕುಲಿ, ನಿಪ್ಪಟ್ಟು ವಾಹ್! ಎಲ್ಲರೂ ಸಮಯಕ್ಕೆ ಸರಿಯಾಗಿ ಕೂತು ಒಟ್ಟಿಗೆ ಹರಟುತ್ತಾ, ಹಂಚಿ ಊಟ ಮಾಡುವುದರಲ್ಲಿ ಇರುವ ಸಂತೋಷವೇ ಬೇರೆ.
ಒಟ್ಟಾರೆಯಾಗಿ ಕುಟುಂಬದಲ್ಲಿನ ಮಕ್ಕಳ ಏಳಿಗೆಗಾಗಿ ಎಲ್ಲವನ್ನೂ ಸಹಿಸಿಕೊಂಡು ಸಂಸಾರ ತೂಗಿಸಿಕೊಂಡು ಹೋಗುವ ನಾರಿಯನ್ನು ಭಾರತದಲ್ಲಿ ಮಾತ್ರ ನೋಡಲು ಸಾಧ್ಯ. ವಿದೇಶಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೂ ವಿಚ್ಛೇದನಗಳಿಂದಾಗಿ ತಂದೆ ತಾಯಿಯ ಆರೈಕೆಯಿಲ್ಲದೆ ಬೀದಿಗೆ ಬೀಳುವ ಮಕ್ಕಳು ಸಮಾಜ ಕಂಟಕರಾಗುತ್ತಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ ಎಂದು ಹೇಳಲಾಗಿದೆ. ಮಹಿಳೆಯರಿಗೆ ಸಿಕ್ಕಿರುವ ಮೀಸಲಾತಿ ಅವಕಾಶ ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬಂದಾಗ ಮಾತ್ರ ನಮ್ಮ ಕುಟುಂಬದಲ್ಲಿನ ನೋವು ನಲಿವುಗಳೆರಡನ್ನೂ ಹಂಚಿಕೊಂಡು ಸೋಲು ಗೆಲುವುಗಳಿಗೆ ಜತೆಯಾಗುವಂತಹ ಕುಟುಂಬ ಇದ್ದಾಗ ಮಾತ್ರ ವ್ಯಕ್ತಿ ಪರಿಪರ್ಣನಾಗುತ್ತಾನೆ. ಇದ್ದ ಕುಟುಂಬವನ್ನು ದೂರ ಮಾಡಿಕೊಳ್ಳದೆ ದೂರ ಇರುವ ಕುಟುಂಬದ ಸದಸ್ಯರನ್ನು ಮತ್ತೆ ಜೋಡಿಸಿಕೊಂಡು, ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ನಮ್ಮ ಹಿರಿಯರ ಆಶಯದಂತೆ,ಕೂಡಿ ಬಾಳುವುದರಲ್ಲಿರುವ ಪ್ರೀತಿ, ಪ್ರೇಮ, ಭದ್ರತೆ, ಕೊಡುಕೊಳ್ಳುವಿಕೆಯಿಂದ ಈ ರ್ಷದ ಕುಟುಂಬ ದಿನವನ್ನು ರ್ಷ ಸಂಭ್ರಮದಿಂದ ಆಚರಿಸಬೇಕೆಂಬುವುದು ನಮ್ಮ ನಿಮ್ಮೆಲ್ಲರ ಆಶಯವಾಗಬೇಕಾಗಿದೆ.


Share