ಕರ್ನಾಟಕ ಮತ್ತು ತಮಿಳುನಾಡು ಎನ್ನುತ್ತಲೇ ಪ್ರತಿಯೊಬ್ಬರಿಗೂ ನೆನಪಾಗುವುದು ಕಾವೇರಿ ನದಿ ಸಮಸ್ಯೆ. ಇದಕ್ಕೆ ಪ್ರಮುಖ ಕಾರಣ ಹಲವು ವರ್ಷಗಳಿಂದ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಕಾವೇರಿಯ ವಿಚಾರವಾಗಿ ಗಲಾಟೆಗಳು ಹೋರಾಟಗಳು ನಡೆಯುತ್ತಲೇ ಬಂದಿವೆ. ಇದರ ಮಧ್ಯೆ ಕರ್ನಾಟಕ ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆಯು ಗಮನ ಸೆಳೆಯಿತು. ಏಕೆಂದರೆ ಕರ್ನಾಟಕ ಸರ್ಕಾರ ಕುಡಿಯುವ ನೀರಿಗಾಗಿ ರಾಮನಗರದ ಮೇಕೆದಾಟು ಎಂಬಲ್ಲಿ ಕಿರು ಅಣೆಕಟ್ಟು ಕಟ್ಟಿ ಬೆಂಗಳೂರಿಗೆ ಕುಡಿಯುವ ನೀರು ಮತ್ತು ಜಲವಿದ್ಯುತ್ ಉತ್ಪಾದಿಸಲು ಯೋಜನೆಯೊಂದನ್ನು ರೂಪಿಸಿಕೊಂಡು ಕೇಂದ್ರ ಜ¯ಸಂಪನ್ಮೂಲ ಇಲಾಖೆಯ ಒಪ್ಪಿಗೆಯನ್ನು ಪಡೆದಾಗ ತಮಿಳುನಾಡಿನ ರಾಜಕಾರಣಿಗಳಿಗೆ ಉರಿ ಹತ್ತಿಕೊಂಡಿತು. ಇದುವರೆಗೆ ತಮಿಳುನಾಡು ಕಾವೇರಿ ನೀರನ್ನು ಬಳಸಿಕೊಂಡಿರುವುದಕ್ಕಿಂತ ರಾಜಕೀಯ ಲಾಭವನ್ನು ಪಡೆದಿದೆ ಎನ್ನಬಹುದು. ಜಯಲಲಿತ ತನ್ನ ರಾಜಕೀಯ ಜೀವನದುದ್ದಕ್ಕೂ ಕಾವೇರಿಯ ಹೆಸರಲ್ಲೇ ರಾಜಕೀಯ ಮಾಡಿ ಕಾವೇರಿ ನದಿಯ ಪ್ರದೇಶಗಳಲ್ಲಿ ಗೆದ್ದಿದ್ದಾಳೆ ಎನ್ನಬಹುದು. ಇದರ ಹಿಂದೆ ರಾಜಕೀಯ ಹುನ್ನಾರಗಳಿವೆಯೇ ಹೊರತು ಕನ್ನಡ ಮತ್ತು ತಮಿಳು ರೈತರ ಹಿತಾಸಕ್ತಿ ಹೊಂದಿಲ್ಲ. ಕಾವೇರಿ ನದಿಯ ಹಂಚಿಕೆ ಪ್ರಾಧಿಕಾರ ಹೇಳುವಂತೆ ತಮಿಳುನಾಡಿಗೆ 404 ಖಿಒಅ ಕರ್ನಾಟಕಕ್ಕೆ 284 ಖಿಒಅ ಕೇರಳಕ್ಕೆ 30 ಖಿಒಅ ಪಾಂಡಿಚೇರಿಗೆ 7 ಖಿಒಅ ಪರಿಸರ ರಕ್ಷಣೆಗಾಗಿ 10 ಖಿಒಅ ಮೀಸಲಿಟ್ಟು ಆದೇಶ ಹೊರಡಿಸಿರುವುದನ್ನು ನೋಡಿದರೆ ಪ್ರತಿಯೊಂದು ರಾಜ್ಯಗಳಿಗೂ ನ್ಯಾಯವನ್ನು ನೀಡಿ ಕಾವೇರಿಯನ್ನು ಸದುಪಯೋಗ ಪಡಿಸಲು ಆದೇಶವಾಗಿರುತ್ತದೆ. ಈಗ ಕರ್ನಾಟಕವು ಮೇಕೆದಾಟು ಯೋಜನೆಯನ್ನು ಪ್ರಾರಂಭಿಸುವುದರಿಂದ 65 ರಿಂದ 66 ಖಿಒಅ ಹೆಚ್ಚುವರಿಯ ನೀರನ್ನು ಬಳಸಿಕೊಳ್ಳುವ ಉದ್ದೇಶ ಇದಾಗಿದೆ. ಏಕೆಂದರೆ ಪ್ರಸ್ತುತ ಬೆಂಗಳೂರು ನಗರಕ್ಕೆ 1350 ಮಿಲಿಯನ್ ಲೀಟರ್ ಕಾವೇರಿ ನೀರು ಹರಿಯುತ್ತಿದ್ದು 2030ರ ವೇಳೆಗೆ 2285 ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ. ತಮಿಳುನಾಡಿನ ಈಗಿನ ಪಾಲಿನ 177 ಖಿಒಅ ನೀರನ್ನು ಬಿಟ್ಟು ಅನವಶ್ಯಕವಾಗಿ ಪೋಲಾಗುವ 65 ಖಿಒಅ ನೀರನ್ನು ಬಳಸಿಕೊಂಡು ಈ ಯೋಜನೆಯನ್ನು 5912 ಕೋಟಿ ವೆಚ್ಚ ಮಾಡಿ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಿಂದ 64 ಖಿಒಅ ನೀರನ್ನು ಸಂಗ್ರಹಿಸಬಹುದು. ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಇದರಿಂದ ತಮಿಳುನಾಡಿಗೆ ಯಾವ ಧಕ್ಕೆಯು ಆಗುವುದಿಲ್ಲ. ಆದರೂ ಕೂಡ ತಮಿಳುನಾಡು ಖ್ಯಾತೆ ತೆಗೆದಿದೆ. 1892 ರಿಂದ ನಡೆದ ಘಟನೆಗಳು ಕರ್ನಾಟಕದ ಮೈಸೂರು ಸಂಸ್ಥಾನಕ್ಕೂ ಮದ್ರಾಸ್ ಸಂಸ್ಥಾನಕ್ಕೂ ನಡೆಯುತ್ತಲೇ ಬಂದಿದ್ದು ಮೈಸೂರಿನ ರಾಜಮನೆತನಗಳು ಕಾವೇರಿ ನೀರನ್ನು ಸಂಗ್ರಹಿಸಲು ಈ ಭಾಗದ ಜನರಿಗೆ ನೀರು ಕುಡಿಯಲು ಮತ್ತು ಕೃಷಿ ಬಳಕೆಗಾಗಿ ಉಪಯೋಗವಾಗಲೆಂದು ಅಣೆಕಟ್ಟನ್ನು ಕಟ್ಟಿ 1924ರಲ್ಲಿ ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಸಂಸ್ಥಾನಗಳ ಮಧ್ಯೆ 50 ವರ್ಷಗಳ ಒಪ್ಪಂದವಾಗಿತ್ತು. ಕಾವೇರಿ ಹುಟ್ಟಿದ್ದು ಕರ್ನಾಟಕದಲ್ಲಿ ಏ.ಖ.S ಅನ್ನು ಕಟ್ಟಿರುವುದು ಕನ್ನಡದ ರಾಜರು, ಸರ್.ಎಂ.ವಿಶ್ವೇಶ್ವರಯ್ಯನವರ ಪ್ಲ್ಯಾನ್ ಪ್ರಕಾರ ಅಣೆಕಟ್ಟು ಕಟ್ಟಲು ಕನ್ನಡಿಗರು ಬೆವರು ಹರಿಸಿದ್ದಾರೆ. ಈ ಅಣೆಕಟ್ಟು ಕಟ್ಟಲು ಮೈಸೂರಿನ ರಾಜಮನೆತನದವರು ತಮ್ಮ ಹೆಣ್ಣುಮಕ್ಕಳ ಬಂಗಾರದ ಒಡವೆ ಜೊತೆಗೆ ಆಸ್ತಿಪಾಸ್ತಿಗಳನ್ನು ದಾನ ಮಾಡಿದ್ದಾರೆ. ಜೊತೆಗೆ ಈ ಅಣೆಕಟ್ಟಿನ ಹಿನ್ನೀರಿನಿಂದ 13,923 ಎಕ್ಕರೆ ಖುಷ್ಕಿ ಭೂಮಿ, 9,520 ಎಕ್ಕರೆ ತರಿ ಭೂಮಿ, 8500 ಸರ್ಕಾರಿ ಭೂಮಿ, 25 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿವೆ. 15,000 ದಷ್ಟು ಜನರು ವಸತಿ ಕಳೆದುಕೊಂಡಿದ್ದರು. ಈ ಎಲ್ಲಾ ಸಮಸ್ಯೆಗಳಿಗೆ ಮೈಸೂರಿನ ರಾಜ ಮನೆತನ ಮತ್ತು ಕರ್ನಾಟಕ ಸರ್ಕಾರದಿಂದ ಪರಿಹಾರ ಸಿಕ್ಕಿದೆಯೇ ಹೊರತು ತಮಿಳುನಾಡಿನಿಂದಲ್ಲ. ಕಾವೇರಿ ಉಗಮ ಸ್ಥಾನವು ಕರ್ನಾಟಕದಲ್ಲಿ ಆಗಿದ್ದರೂ ಕೂಡ ತಮಿಳುನಾಡಿನಲ್ಲಿ ಅತಿ ಹೆಚ್ಚು ಉದ್ದಕ್ಕೂ ಹರಿದು, ಕೇರಳ, ಪಾಂಡಿಚೇರಿಯಲ್ಲಿಯೂ ಹರಿದು ಸಮುದ್ರ ಸೇರುತ್ತದೆ. ಏ.ಖ.S ಇಲ್ಲದಿದ್ದರೆ ಇಂದು ತಮಿಳುನಾಡು ನೀರು ಕೇಳುವ ಪರಿಸ್ಥಿತಿಯಿರಲಿಲ್ಲ ಏಕೆಂದರೆ ಮಳೆಗಾಲದಲ್ಲಿ ಏ.ಖ.S ನಲ್ಲಿ ನೀರು ಸಂಗ್ರಹಿಸದಿದ್ದರೆ ಬೇಸಿಗೆಯಲ್ಲಿ ತಮಿಳುನಾಡು ಸೇರಿದಾಗ ಕಾವೇರಿ ಬತ್ತುತ್ತಾಳೆ. ನ್ಯಾಯ ಸಮ್ಮತವಾಗಿ ತಮಿಳುನಾಡಿಗೆ ನೀರು ಕೊಡಬಹುದು ಆದರೆ ಪದೇಪದೇ ಖ್ಯಾತೆ ತೆಗೆಯುವುದು ಅನವಶ್ಯಕವಾಗಿ ಕರ್ನಾಟಕದ ವಿಷಯದಲ್ಲಿ ತಲೆತೂರುವುದು ಮತ್ತು ತನಗೆ ಸಂಬಂಧವಿಲ್ಲದ ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡದಂತೆ ಸರ್ಕಾರವು ನಿರ್ಣಯ ಮಂಡಿಸಿ ಕೇಂದ್ರಕ್ಕೆ ಮನವಿ ಮಾಡುವುದು ಹೀಗೆ ಹಲವಾರು ಸಣ್ಣ ವಿಷಯಗಳಿಗೆ ಖ್ಯಾತೆ ತೆಗೆಯುವುದು ತಮಿಳುನಾಡಿನ ವ್ಯವಸ್ಥೆಗೆ ಶೋಭೆ ತರುತ್ತದೆಯೇ. ಕಾವೇರಿಯನ್ನು ಹೊರತು ಪಡಿಸಿ ತಮಿಳುನಾಡಿನಲ್ಲಿ ಸಾಕಷ್ಟು ನದಿಗಳು ಇದ್ದು ಜೊತೆಗೆ ಕಾವೇರಿಯ ಪ್ರಸ್ತುತ ಜಲಾನಯನ ಪ್ರದೇಶದಲ್ಲಿ ಯಾವುದೇ ಅಭಿವೃದ್ದಿ ಮಾಡದೆ ಬೇರೆಯವರೊಂದಿಗೆ ಜಗಳ ತೆಗೆಯುವುದೇ ತಮಿಳುನಾಡಿನ ಉದ್ದೇಶವೇ? ತಮಿಳುನಾಡು ಕೆಲವು ತಮಿಳು ಸ್ಥಳೀಯ ಪತ್ರಿಕೆಗಳ 6-7 ಕಿಲೋ ಮೀಟರ್ ವ್ಯಾಪ್ತಿಯ ಜನವಸತಿಗೆ ಮತ್ತು ಧಾರ್ಮಿಕ ಸ್ಥಳಗಳಿಗೆ ಅಪಾರ ಪ್ರಮಾಣದ ಕಾಡು ನಾಶವಾಗುತ್ತದೆ. ಅದರಲ್ಲಿಯೂ 4996 ಹೆಕ್ಟರ್ ಅರಣ್ಯ ಭೂಮಿಯೂ ಮುಳುಗಡೆಯಾಗುತ್ತದೆ. ಇದರಲ್ಲಿ ಶೇ 90% ರಷ್ಟು ಅರಣ್ಯ ಭೂಮಿ ಮತ್ತು ಶೇ 10% ರಷ್ಟು ಕಂದಾಯ ಭೂಮಿ ಸೇರಿದೆ ಇದರಿಂದ ಆನೆ, ಜಿಂಕೆ ಸೇರಿದಂತೆ ವನ್ಯ ಸಂಕುಲಗಳಿಗೆ ತೊಂದರೆಯಾಗುತ್ತದೆ. ಸಂಗಮ ಅರಣ್ಯ ಪ್ರದೇಶದಲ್ಲಿನ ಆನೇಕಾರಿಡಾರ ತೊಂದರೆಯಾಗುತ್ತದೆ ಎಂದು ಪತ್ರಿಕೆಗಳ ವರದಿಗಳ ಆಧಾರದ ಮೇಲೆ ತಮಿಳುನಾಡು ಸರ್ಕಾರವು ಕೇಂದ್ರ ಪರಿಸರ ಖಾತೆಗೆ ಈ ಯೋಜನೆಯನ್ನು ತಡೆಯುವಂತೆ ಮನವಿ ಮಾಡಿದೆ. ಪತ್ರಿಕೆಗಳ ವರದಿಗಳನ್ನು ಒಪ್ಪಿಕೊಳ್ಳೋಣ ಪರಿಸರದ ಬಗ್ಗೆ ಅಷ್ಟು ಕಾಳಜಿ ತಮಿಳುನಾಡಿಗಿದ್ದರೆ ತನ್ನ ನೆರಳಲ್ಲಿ ಅರಣ್ಯ ಬೆಳೆಸಬಹುದಿತ್ತು. ರಾಜಕೀಯ ಲಾಭಕ್ಕಾಗಿ ಬಿಟ್ಟಿ ಯೋಜನೆಗಳನ್ನು ಕೊಟ್ಟು ರೈತರು ಹೊಲದ ಕಡೇನೆ ಹೋಗದಂತೆ ಮಾಡಿದ್ದು ಇದೇ ತಮಿಳುನಾಡು ಆಳಿದ ರಾಜಕಾರಣಿಗಳ ಸಾಧನೆ ಎನ್ನಬಹುದು. ಕರ್ನಾಟಕದಲ್ಲಾಗುವ ಅರಣ್ಯದ ಹಾನಿ ಮತ್ತು ಜನವಸತಿಯ ಪ್ರದೇಶಗಳಿಗಾಗುವ ಹಾನಿಯನ್ನು ಸರಿದೂಗಿಸುವ ಪ್ರಯತ್ನವನ್ನು ಇಲ್ಲಿಯ ಸರ್ಕಾರ ಮಾಡುತ್ತದೆ. ತನ್ನದಲ್ಲದ ವಿಚಾರವನ್ನು ಖ್ಯಾತೆ ತೆಗೆಯುತ್ತಾ ತನ್ನ ಗಣತಿಯನ್ನೇ ಕಳೆದುಕೊಳ್ಳುತ್ತಿದೆ. ಕರ್ನಾಟಕದ ಬಸವರಾಜ್ ಬೊಮ್ಮಯಿ ಸರ್ಕಾರವು ವಿಧಾನ ಸಭೆಯಲ್ಲಿ ಸರ್ವಾನು ಮತದಿಂದ ಪಕ್ಷ ಬೇಧ ಮರೆತು ತಮಿಳುನಾಡಿನ ನಿರ್ಣಯವನ್ನು ಖಂಡಿಸಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ ಇದರಿಂದಾದರೂ ಕನ್ನಡ ಭಾಷೆ, ನೆಲ, ಜಲಕ್ಕಾಗಿ ನಾವು ಒಂದಾಗುತ್ತೇವೆ. ನಿದ್ದೆಯಿಂದ ಎದ್ದ ರಾಜಕಾರಣಿಗಳು ಒಪ್ಪಿಕೊಂಡಿದ್ದಾರೆ. ತಮಿಳುನಾಡು ಮತ್ತು ಕರ್ನಾಟಕ ತಮ್ಮ ರಾಜಕೀಯ ಲಾಭವನ್ನು ಬದಿಗಿಟ್ಟು ಏ.ಖ.S ಹೂಳೆತ್ತುವ ಪ್ರಯತ್ನ ಮಾಡಿದರೆ ನೀರಿನ ಸಮಸ್ಯೆಯೇ ಬರುವುದಿಲ್ಲ. ತಮಿಳುನಾಡಿಗೆ ಅದರಲ್ಲಿಯೂ ಜಯಲಲಿತ ಮತ್ತು ಆಕೆಯ ಸರ್ಕಾರಕ್ಕೆ ಸಾಕಷ್ಟು ಬಾರಿ ನ್ಯಾಯಾಲಯ, ಕೇಂದ್ರ ಮತ್ತು ಪ್ರಾಧಿಕಾರಗಳ ಮುಂದೆ ಅವಮಾನವಾದರೂ ಕೂಡ ಕೇವಲ ಓಟಿಗಾಗಿ ಕಾವೇರಿ ಸಮಸ್ಯೆಯನ್ನು ಜೀವಂತವಾಗಿಟ್ಟಿದ್ದಾರೆ. ಅದೆಷ್ಟೋ ಬಾರಿ ತಮ್ಮ ಪಾಲನ್ನು ಕೇಳಿ ಪಡೆದು ಸಮುದ್ರಕ್ಕೆ ಹರಿಸಿದ್ದಾರೆ. ಈ ಮೊಂಡುತನದ ಜಲಧಾಹವು ತಮಿಳುನಾಡಿಗೆ ತೀರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯವು ಇನ್ನೊಂದು ರಾಜ್ಯದೊಂದಿಗೆ ಸೌಹರ್ದಯುತವಾಗಿ ನಡೆದುಕೊಳ್ಳುವುದು ಮತ್ತು ಸಮಸ್ಯೆಗಳನ್ನು ತಮ್ಮ ತಮ್ಮಲೇ ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳುವುದು ಯೋಗ್ಯವಾಗಿರುತ್ತದೆ.