ಹಿಜಾಬ್ ಕೇಸರಿ ಕದನ : ಶಿಕ್ಷಣ ಪಥನ

ಹಿಜಾಬ್ ಕೇಸರಿ ಕದನ : ಶಿಕ್ಷಣ ಪಥನ

Share

ಉಡುಪಿಯ ಕಾಲೇಜ್ ಒಂದರಲ್ಲಿ ನಡೆದ ಘಟನೆಯಿಂದ ಕರಾವಳಿ ಕರ್ನಾಟಕ ಸೇರಿದಂತೆ ಕರ್ನಾಟಕದ ತುಂಬಾ ವ್ಯಾಪಿಸಿದೆ. 9 ಮತ್ತು 10ನೇ ತರಗತಿಯವರೆಗೆ ಫೆಬ್ರವರಿ 14 ರವರೆಗೆ ಮತ್ತು ಪಿಯು, ಡಿಗ್ರಿ ಸೇರಿದಂತೆ ಕಾಲೇಜ್‍ಗಳ ಶಿಕ್ಷಣವನ್ನು ಅನಿರ್ಧಿಷ್ಟ ಅವಧಿಗೆ ನಿಲ್ಲಿಸಲಾಗಿದೆ. ಹಿಜಾಬ್ ಮತ್ತು ಕೇಸರಿ ಶಾಲಿನ ಪ್ರಕರಣವು ರಾಜಕೀಯ ಬಣ್ಣವನ್ನು ತಳಿಯುತ್ತಾ ಜಾತಿ ಮತ್ತು ಧರ್ಮಗಳ ಭಾವನೆಗಳೊಂದಿಗೆ ಆಟವಾಡುತ್ತಾ ಈಗ ಶಾಲಾ ಕಾಲೇಜುಗಳ ಆವರಣದಿಂದ ಹೊರ ಬಂದಿದೆ . ಈ ಹಿಜಾಬ್ ಕೇಸರಿ ಕದನವು ವೈಯಕ್ತಿಕ ಮತ್ತು ರಾಜಕೀಯ ಪ್ರೇರಣೆಯಿಂದ ಕೂಡಿದ್ದು ಕಾಣದ ಕೈಗಳ ಮತ್ತು ದುಷ್ಟ ಮನಸ್ಥಿತಿಯ ರಾಜಕಾರಣಿಗಳಿಂದ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಒಂದು ಸಾರಿ ಹಿಜಾಬ್‍ನ ಹಿನ್ನಲೆಯನ್ನು ತಿಳಿಯುತ್ತಾ ಹೋದರೆ ಈ ಆಧುನಿಕತೆಯ ದೇಶದಲ್ಲಿ ಬಳಸುವುದು ಅಪ್ರಸ್ತುತ ಅನಿಸುತ್ತದೆ. ಇಸ್ಲಾಂ ಧರ್ಮದ ಹುಟ್ಟು ಖುರಾನ್ ಬರೆದ ಸಂಧರ್ಭದಲ್ಲಿ ಮೆಕ್ಕಾ ಮದೀನಾ ಸೇರಿದಂತೆ ಗುಡ್ಡ ಗಾಡು ಪ್ರದೇಶಗಳ ಮೇಲೆ ಯಹೂದಿ , ಹಳೆಯ ಕ್ರಿಶ್ಚಿಯನ್ ಧರ್ಮ ಸೇರಿದಂತೆ ಹಲವಾರು ಅನ್ಯ ಧರ್ಮಿಯರ ಆಕ್ರಮಣವನ್ನು ಅರೇಬಿಯನ್ ಪ್ರದೇಶಗಳು ಎದುರಿಸ ಬೇಕಾಯಿತು. ಈ ಹೋರಾಟದಲ್ಲಿ ಮಾನವನ ಕ್ರೂರತೆ ಬೇರೆ ಧರ್ಮಗಳ ಮೇಲಿದ್ದ ಆಕ್ರೋಶ ಮತ್ತು ಹಿಂಸೆಗಳಿಂದ ಇಸ್ಲಾಂ ಧರ್ಮವು ತನ್ನ ಹೆಣ್ಣುಮಕÀ್ಕಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಖುರಾನ್‍ನ ಪ್ರಕಾರ ಮಕ್ಕಳು, ವೃದ್ಧರು ಮತ್ತು ಹೆಣ್ಣು ಮಕ್ಕಳನ್ನು ಮುಸ್ಲಿಂ ಓರ್ವ ವ್ಯಕ್ತಿ ರಕ್ಷಣೆ ಮಾಡುವುದು ಕಡ್ಡಾಯವಾಗಿರುತ್ತದೆ. ಆ ಸಂಧರ್ಭದಲ್ಲಿ ಆಗಾಗ ನಡೆಯುತ್ತಿರುವ ದಾಳಿಗಳು ಯುದ್ಧ ನೀತಿಯನ್ನೇ ಅನುಸರಿಸದ ಅನಾಗರೀಕ ದಾಳಿ ಕೋರರಿಂದ ರಕ್ಷಣೆ ಮಾಡಲು ಈ ಹಿಜಾಬ್ ಅಥವಾ ಬುರ್ಕಾವನ್ನು ಧರಿಸುತ್ತಿದ್ದರು. ಇದೇ ರೀತಿಯ ಪದ್ಧತಿಗಳು ಭಾರತೀಯ ರಜಪೂತ್ ಮನೆತನದಲ್ಲಿ ಸೇರಿದಂತೆ ಹಲವಾರು ರಾಜಮನೆತನದಲ್ಲಿ ಪರದಾ ಪದ್ದತಿಯನ್ನು ಅನುಸರಿಸಲಾಗುತ್ತಿತ್ತು. ಈ ಪರದಾ ಪದ್ದತಿ ಅಥವಾ ಹಿಜಾಬ್ ಒಂದು ರೀತಿ ಕಾಲಕ್ಕೆ ತಕ್ಕ ಪದ್ದತಿಗಳೇ ಆಗಿದ್ದವೇ ಹೊರತು ಧಾರ್ಮಿಕ ಆಚರಣೆಗೆ ಹೋಲಿಸುವಷ್ಟು ಶ್ರೇಷ್ಠವಾಗಿಲ್ಲ. ಅಕ್ರಮಣಕಾರಿ ಜನರಿಂದ ಹೆಣ್ಣು ಮಕ್ಕಳ ರಕ್ಷಣೆ ಮಾನ ಮತ್ತು ಪ್ರಾಣ ರಕ್ಷಣೆಗಾಗಿ ಇಂತಹ ಪದ್ದತಿಗಳು ಜಾರಿಯಲ್ಲಿದ್ದವು. ಇಂದು ಆಧುನಿಕತೆಯ ಮತ್ತು ಪ್ರಜಾಪ್ರಭುತ್ವವು ಬಲಿಷ್ಠವಾಗಿರುವ ಸಂಧರ್ಭದಲ್ಲಿ ಇಂತಹ ಪದ್ದತಿಗಳನ್ನು ಆಚರಿಸುವುದು ಎಷ್ಟು ಸೂಕ್ತ ? ಹಿಜಾಬ್ ಪದ್ದತಿಯಿಂದ ಮುಸ್ಲಿಂ ಮಹಿಳೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ. ಜೊತೆಗೆ ಭಾರತೀಯ ಮೂಲ ಸ್ವಾತಂತ್ರ್ಯಗಳ ಜಾರಿಗೆ ಅಡ್ಡಿಯಾಗುತ್ತದೆ. ವೈಜ್ಞಾನಿಕ ನೆಲೆಘಟ್ಟಿನಲ್ಲಿ ಹೇಳುವುದಾದರೆ ಮಾನವರಿಗೆ ವಿಟಮಿನ್ ಡಿ, ವಿಟಮಿನ್ ಬಿ ಸೂರ್ಯನ ಬೆಳಕಿನಿಂದ ದೊರೆಯುತ್ತದೆ. ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಹೊರ ಸುತ್ತುವುದರಿಂದ ವಿಟಮಿನ್ ಡಿ ದೊರೆಯುವುದಿಲ್ಲ. ಇದೇ ರೀತಿ ಇಡೀ ದೇಹವನ್ನು ಬಟ್ಟೆಯಲ್ಲಿ ಮುಚ್ಚಿಕೊಂಡು ಬದುಕುವುದರಿಂದ ಮಾನಸಿಕ, ದೈಹಿಕ ಸ್ವಾತಂತ್ರ್ಯ ಕಳೆದುಕೊಂಡಂತೆ ಭಾಸವಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ದೈಹಿಕ ನ್ಯೂನ್ಯತೆಗಳು ಮತ್ತು ಕೆಲವು ಕಾಯಿಲೆಗಳು ಕಾಣಿಸಿಕೊಳ್ಳಬಹುದು ಮಾನಸಿಕವಾಗಿ ಹೆಣ್ಣು ಮಕ್ಕಳು ಕುಗ್ಗಿ ಹೋಗುವುದರ ಜೊತೆಗೆ ಬುದ್ದಿವಂತಿಕೆ ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಸರಿಯಾಗಿ ಭಾಗವಹಿಸದೇ ಭವಿಷ್ಯದ ಕನಸುಗಳನ್ನು ಕಾಣದೇ ಹತಾಶೆ ಮತ್ತು ಜಿಗುಪ್ಸೆಯಲ್ಲಿ ಬದುಕ ಬೇಕಾಗುತ್ತದೆ. ಕುಟುಂಬ ವ್ಯವಸ್ಥೆಯನ್ನು ಸೇರಿದಂತೆ ಸಮಾಜವನ್ನು ಅನುಮಾನಿಸುವ ಜೊತೆಗೆ ದ್ವೇಷದ ಭಾವನೆಯೊಂದಿಗೆ ಬದುಕಬೇಕಾಗುತ್ತದೆ. ಈ ರೀತಿಯ ಮಾನಸಿಕ ಅಲ್ಲೋಲ ಕಲ್ಲೋಲ ಹೊಂದಿರುವ ತಾಯಿಯಿಂದ ಹುಟ್ಟುವ ಮಗು ಮಾನಸಿಕ ಮತ್ತು ದೈಹಿಕವಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮ ಸೇರಿದಂತೆ ಹಲವಾರು ಧರ್ಮದಲ್ಲಿ ಆ ಧರ್ಮಗಳು ಹುಟ್ಟಿದ ಕಾಲಘಟ್ಟಕ್ಕೆ ಹೊಂದಿದಂತೆ ರೀತಿ ನೀತಿ ನಿಯಮ ಆಚರಣೆಗಳನ್ನು ಜಾರಿಗೆ ತಂದಿವೆ. ಆದರೆ ಕೆಲವು ಮತಾಂದರರು ಮೂಢ ನಂಬಿಕೆಗಳನ್ನು ಬಲವಂತವಾಗಿ ಜನರ ಮೇಲೆ ಹಾಕುತ್ತಿದ್ದಾರೆ. ಧರ್ಮಗಳ ಉಳಿವಿಗಾಗಿ ಒತ್ತಾಯ ಪೂರ್ವಕವಾಗಿ ವಿಧಿಸುವ ಆಚರಣೆಗಳಿಂದ ಮಾನವ ಧರ್ಮದ ನಾಶ ಮತ್ತು ಮನುಷ್ಯನ ವಿಕಾಸದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಭಾರತೀಯ ಸಂವಿಧಾನದ ಪ್ರಕಾರ ಸಮಾನತೆ ಅತ್ಯಂತ ಮಹತ್ವ ಪೂರ್ಣವಾಗಿದೆ. ಕಲಿಯುವ ಹಂತದಲ್ಲೇ ಸಮಾನತೆಯನ್ನು ತರಬೇಕಾದರೆ ಬಟ್ಟೆ ಮತ್ತು ಓದುವ ಪಾಠಗಳಲ್ಲಿ ಸಾಮರಸ್ಯ ಕೂಡಿದ ಸಮಾನತೆ ಇರಬೇಕು. ಕರೋನದಿಂದ 2 ವಷರ್ದದಿಂದ ಸತತವಾಗಿ ಶಿಕ್ಷಣ ವಂಚಿತ ವಿದ್ಯಾರ್ಥಿಗಳಲ್ಲಿ ಕೇಸರಿ ಮತ್ತು ಹಿಜಾಬ್‍ನ ಬೆಂಕಿ ಹಚ್ಚಿದರು ರಾಜಕಾರಣಿಗಳು ಅಂಧ ಮತಾಂದರರು ಆಗಿದ್ದಾರೆ. ಹಲವಾರು ವರ್ಷಗಳಿಂದ ಶಿಕ್ಷಣ ಪದ್ಧತಿಯಲ್ಲಿ ಹಿಜಾಬ್ ಹಾಕಿ ಬರುವವರು ಇದ್ದರೂ ಕೂಡ ಈಗಿನ ಪ್ರಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನಾರ್ಟಕ ಮತ್ತು ಭಾರತವನ್ನು ತಲೆತಗ್ಗಿಸುವಂತೆ ಮಾಡುತ್ತಿದೆ. ಕರ್ನಾಟಕ ಹೈ ಕೋರ್ಟಿನ ಮಧ್ಯಂತರ ಆದೇಶದ ಪ್ರಕಾರ ವಿದ್ಯಾರ್ಥಿಗಳು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಕೇಸರಿ ಶಾಲು ಮತ್ತು ಸ್ಕಾರ್ಪ್ ಹಿಜಾಬ್ ಧಾರ್ಮಿಕ ಧ್ವಜಗಳು ಅಥವಾ ಸಂಕೇತಗಳನ್ನು ಧರಿಸಿ ಶಾಲಾ ಕಾಲೇಜಿಗೆ ಬರುವುದನ್ನು ಮುಂದಿನ ಆದೇಶದವರೆಗೂ ನಿರ್ಬಂಧಿಸಲಾಗಿದೆ. ಈ ತೀರ್ಪಿನ ವಿರುದ್ಧ ಕೆಲವರು ಸುಪ್ರೀಂ ಕೋರ್ಟಿಗೆ ಹೋದಾಗಲೂ ಕೂಡ ಪ್ರಯೋಜನವಾಗಿಲ್ಲ. ಈ ಕರ್ನಾಟಕದ ಹಿಜಾಬ್ ಪ್ರಕರಣವು ಮಹಾರಾಷ್ಟ್ರ, ಪಶ್ಚಿಮಬಂಗಾಳ, ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಿಗೆ ವ್ಯಾಪಿಸಿದೆ. ಇನ್ನೂ ಕೆಲವು ದಲಿತಪರ ಸಂಘಟನೆಗಳು ಹಿಜಾಬ್ ಅನ್ನು ಬೆಂಬಲಿಸಿ ಹೋರಾಟ ನಡೆಸುತ್ತಿವೆ. ಸಂವಿಧಾನದ ಮೂಲ ಆಸೆಯ ಪ್ರಕಾರ ಮತ್ತು ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಆಧಾರದ ಮೇಲೆ ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡಬಾರದು ಮತ್ತು ಯಾವುದೇ ಧಾರ್ಮಿದ ಬಟ್ಟೆ ಅಥವಾ ಪದ್ಧತಿ ಅಂದರೆ ಹಿಜಾಬ್ ಧರಿಸುವುದು, ಪರದಾ ಹಾಕಿಕೊಳ್ಳುವುದು ಮತ್ತು ಕೇಸರಿ ಶಾಲುಗಳನ್ನು ಹಾಕಿಕೊಳ್ಳುವುದನ್ನು ನಿಷೇಧಿಸುವುದು ಉತ್ತಮ. ಇದರಿಂದ ಮಕ್ಕಳಲ್ಲಿ ಸಮಾನತೆ ಬೆಳೆಯುವುದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಕೆಟ್ಟ ಘಟನೆಗಳು ನಡೆಯುವುದಿಲ್ಲ ಹೇಗೆಂದರೆ ಹಿಜಾಬ್ ಹಾಕಿಕೊಂಡು ಓರ್ವ ಹುಡುಗಿಯ ಹೆಸರಿನಲ್ಲಿ ಉಗ್ರಗಾಮಿಯೋ, ಡ್ರಕ್ಸ್ ಮಾರುವವನೋ ಅಥವಾ ಇನ್ಯಾರೋ ಬರುವುದನ್ನು ತಪ್ಪಿಸಬಹುದು. ಮಾನವ ಧರ್ಮ, ಭಾರತೀಯ ಸಂವಿಧಾನ ಮತ್ತು ಮಕ್ಕಳಿಗೆ ಸಮಾನತೆಯ ಪಾಠ, ಭವಿಷ್ಯದ ದೃಷ್ಠಿಯಿಂದ ಶಿಕ್ಷಣದಲ್ಲಿ ಜಾತಿ ಧರ್ಮ ಆಚರಣೆಗಳನ್ನು ತರುವುದು ಬೇಡ.


Share