ಕರ್ನಾಟಕ ಮೂಲದ ನವೀನ ಶೇಖರಪ್ಪ ಗ್ಯಾನಗೌಡರ ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಿಗೇರಿಯ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ರಷ್ಯಾ ಉಕ್ರೇನ್ ಯುದ್ದದ ಸಂಧÀರ್ಭದಲ್ಲಿ ಹತ್ಯೆಯಾಗಿರುವ ಈತ ಅತ್ಯಂತ ಬುದ್ದಿವಂತ 10ನೇ ವಯಸ್ಸಿನಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆದರ್ಶ ಶಾಲೆ ಸೇರಿದ. ನವೀನನ ತಂದೆ ಶೇಕರಪ್ಪ ಸೌತ್ ಇಂಡಿಯಾ ಪೇಪರ್ ಮಿಲ್‍ನ ವೆಹಿಕಲ್ ಮೆಂಟೇನೆನ್ಸ್ ವಿಭಾಗದಲ್ಲಿ ನಂಜನಗೂಡಿನಲ್ಲಿ ಕೆಲಸ ಮಾಡುತ್ತಿದ್ದರು. ಈ ಕಾರಣ ಮತ್ತು ಮಗನ ಬುದ್ದಿವಂತಿಕೆಯಿಂದ ನಂಜನಗೂಡಿನ ಆದರ್ಶ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯ ವರೆಗೆ ವ್ಯಾಸಂಗ ಮಾಡಿದ್ದಾನೆ. ಎಸ್.ಎಸ್.ಎಲ್.ಸಿ ಯಲ್ಲಿ 625 ಅಂಕಗಳಿಗೆ 604 ಅಂಕಗಳನ್ನು ಪಡೆದು ಆದರ್ಶ ಶಾಲೆಗೆ ಮೊದಲಿಗರಾಗಿ ಉತ್ತೀರ್ಣರಾಗಿದ್ದಾರೆ. ನಂತರ ಮೈಸೂರಿನ ಯೂನಿಟಿ ಕಾಲೇಜಿಗೆ ಸೇರಿ ಪಿ.ಯು.ಸಿ ವಿಜಾÐನ ವಿಭಾಗದಲ್ಲಿ ಶೇ.92.2% ರಷ್ಟು ಪ್ರತಿಶತ ಪಡೆದರೂ ಸಹ ಕರ್ನಾಟಕ ಸೇರಿದಂತೆ ಭಾರತದಲ್ಲಿ ಮೆಡಿಕಲ್ ಸೀಟ್ ಸಿಗಲಿಲ್ಲ ಬುದ್ದಿವಂತ ಮಗನ ಕನಸು ನನಸಾಗಿಸುವ ಪ್ರಯತ್ನದಲ್ಲಿ ತಂದೆ ಕಷ್ಟಪಟ್ಟು ಉಕ್ರೆನ್ ದೇಶದಲ್ಲಿ ವೈದ್ಯಕೀಯ ಕೋರ್ಸನ್ನು ಓದಿಸುತ್ತಿದ್ದರು. ಉಕ್ರೆನ್ ಮೆಡಿಕಲ್ ಕಾಲೇಜಿನಲ್ಲೂ ನವೀನ ತುಂಬಾ ಕ್ರಿಯಾಶೀಲವಾಗಿ ಓದುತ್ತಿದ್ದು ಕನ್ನಡದ ಅಭಿಮಾನವನ್ನು ಮೆರೆದಿದ್ದ. ಆದರೆ ಮೊನ್ನೆ ರಷ್ಯಾದ ಶೆಲ್ ದಾಳಿಗೆ ಬಲಿಯಾಗಿದ್ದಾನೆ. ತನಗೆ ಮತ್ತು ತನ್ನ ಗೆಳೆಯರಿಗಾಗಿ ಊಟ ಮತ್ತು ದಿನಸಿ ತರಲು ಹೋಗಿ ರಷ್ಯಾದ ಸೈನ್ಯಕ್ಕೆ ಬಲಿಯಾಗಿದ್ದಾನೆ. ನವೀನ್ ಮತ್ತು ಚಂದನ್ ಜಿಂದಾಲ್ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ವಿದೇಶಿಯ ಅದೆಷ್ಟೋ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಸಾವು ನೋವುಗಳ ಮಧ್ಯೆ ಆ ಎಲ್ಲಾ ಸಾವುಗಳಿಗೆ ಯಾರು ಹೊಣೆಯೆಂದು ಕೇಳಿದರೆ ತಕ್ಷಣ ಉತ್ತರಿಸುತ್ತೇವೆ. ರಷ್ಯಾ ಮತ್ತು ಉಕ್ರೇನ್ ಎಂದು ಇಂದಿನ ಭಾರತ ವಿದೇಶಾಂಗ ನೀತಿಗಳ ಮತ್ತು ಭಾರತವು ಈಗ ವಿಶ್ವದ ಗುರು ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಧ್ವಜ ಒಂದು ಉಕ್ರೆನ್‍ನಲ್ಲಿ ವಾಸವಿರುವ ಭಾರತೀಯರ ಜೀವ ಉಳಿಸುವುದರ ಜೊತೆಗೆ ವಿದೇಶಿಯರ ಜೀವ ಉಳಿಸಿರುವ ಹೆಮ್ಮೆ ನಮಗಿದೆ. ಉಕ್ರೆನ್‍ನಿಂದ ಮರುಳುತ್ತಿರುವ ಹಲವಾರು ವಿದ್ಯಾರ್ಥಿಗಳು ಮತ್ತು ನಾಗರೀಕರು ಆಫ್ರೆಷನ್ ಗಂಗಾ ಕಾರ್ಯಕ್ರಮವನ್ನು ಹಾಡಿ ಹೊಗಳುತ್ತಿದ್ದಾರೆ. ಏರ್ ಇಂಡಿಯಾ ವಿಮಾನಗಳ ಜೊತೆಗೆ ಸ್ಪೈಸ್ ಜೆಟ್ ಕೂಡ ಕೈ ಜೋಡಿಸಿ ನಮ್ಮ ವಾಯು ಸೇನೆಯ ಬಲವನ್ನು ಹೆಚ್ಚಿಸಿವೆ. ಹಲವಾರು ಪ್ರಯತ್ನಗಳಿಂದ ಭಾರತೀಯರನ್ನು ರಕ್ಷಿಸುವ ಪ್ರಯತ್ನವನ್ನು ಭಾರತ ಸರ್ಕಾರವು ಪ್ರಮಾಣಿಕವಾಗಿ ಮಾಡುತ್ತಿವೆ. ಆದರೆ ಕೆಲವು ವಿರೋದಿಗಳು ಜ್ಞಾನವಿಲ್ಲದೆ ಉಕ್ರೆನಿಗೆ ಹೋದ ವಿದ್ಯಾರ್ಥಿಗಳು ಬಾಯಿಗೆ ಬಂದಂತೆ ದೇಶದ ವ್ಯವಸ್ಥೆಯನ್ನು ಬೈಯುತ್ತಿದ್ದಾರೆ. ಹಣದ ಮದದಿಂದ ಮತ್ತು ಎನ್.ಇ.ಇ.ಟಿ ಪರೀಕ್ಷೆಯನ್ನು ಪಾಸಾಗದ ಅಯೋಗ್ಯರಿಂದ ಅಂತಹ ಮಾತುಗಳು ಕೇಳಿ ಬರುವುದು ಸಾಮಾನ್ಯ ಯುದ್ಧದ ಸಂಧರ್ಭದಲ್ಲಿ ವಿದೇಶಾಂಗ ನೀತಿಗಳು 2 ಬೇರೆ ಬೇರೆ ದೇಶಗಳ ನಡುವೆ ನಡೆಯುವ ಯುದ್ಧದ ಸಂಧರ್ಭದಲ್ಲಿ ಇನ್ನೊಂದು ದೇಶದ ನಾಗರೀಕರ ರಕ್ಷಣೆಯ ಹೊಣೆ ಮತ್ತು ಅಂತರ ರಾಷ್ರ್ಟೀಯ ನಿಯಮ ನಿಭಂದನೆಗಳು ಗೊತ್ತಿಲ್ಲದ ಶಿಕ್ಷಣ ಪಡೆದ ಅಜ್ಞಾನಿಗಳಿಂದ ಇಂತಹ ಕೀಳು ಮಟ್ಟದ ಮಾತುಗಳು ಕೇಳಿ ಬರುವುದು ಸಾಮಾನ್ಯ ಅದರಲ್ಲಿ ಒಬ್ಬ ವಿದ್ಯಾರ್ಥಿ ಹೇಳುತ್ತಾನೆ ತಿನ್ನಲು ಅನ್ನ, ನೀರು ಸಿಗಲಿಲ್ಲ ಎಂದು ಯುದ್ಧದ ಸಂಧರ್ಭದಲ್ಲಿ ಸೈನಿಕರು ಸೇರಿದಂತೆ ನಾಗರೀಕರಿಗೆ ಅದೆಷ್ಟೋ ತೊಂದರೆಗಳಾಗಿರುತ್ತವೆ. ಆತ ಮುಂದುವರೆದು ಹೇಳುತ್ತಾನೆ ಭಾರತೀಯ ಸೈನ್ಯವು ನಮ್ಮನ್ನು ರಕ್ಷಿಸಲು ದೇಶದ ಒಳಗಡೆ ಬರಲಿಲ್ಲ ನಾವೇ ಗಡಿವರೆಗೆ ಬರಬೇಕಾಯಿತು ಎರಡು ದೇಶಗಳ ಯುದ್ಧದ ಮಧ್ಯೆ ಇನ್ನೊಂದು ದೇಶದ ಸೈನಿಕರು ಬರುವುದು ಅತಿಕ್ರಮಣವಾಗುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲ ಇಂತಹ ಹಲವಾರು ದೇಶ ಬಿಟ್ಟು ಓದಲು ಹೋದ ವಿದ್ಯಾರ್ಥಿಗಳ ಮಧ್ಯೆಯೇ ಕನ್ನಡ ಮತ್ತು ದೇಶದ ಅಭಿಮಾನ ಹೊಂದಿದ ನವೀನನ ವಿಚಾರವೇ ಬೇರೆ ನವೀನನ ತಂದೆಗೆ ಪ್ರಧಾನಿ ಮೋದಿಯವರೇ ಕರೆ ಮಾಡಿ ಸಾಂತ್ವಾನ ಹೇಳಿದರೂ ಕೂಡ ನವೀನನ ಆತ್ಮಕ್ಕೆ ಮುಕ್ತಿ ಸಿಗುವುದೇ ಡೌಟ್ ! ಏಕೆಂದರೆ ನವೀನನ ತಂದೆಯ ಒಂದು ಹೇಳಿಕೆಯು ದೇಶದ ವ್ಯವಸ್ಥೆಯನ್ನು ಮುಟ್ಟಿ ನೋಡಿಕೊಳ್ಳುವಂತಿದೆ “ಮಗ ನವೀನ್‍ಗೆ ಮೀಸಲಾತಿಯಿಂದ ಇಲ್ಲಿ ಸೀಟ್ ಸಿಗಲಿಲ್ಲ. ಇದು ಅತ್ಯಂತ ಬೇಸರದ ವಿಷಯ ಪ್ರತಿಭೆಯಿರುವ ಬಡ ವಿದ್ಯಾರ್ಥಿಗಳಿಗೆ ದೇಶದ ಅವಕಾಶಗಳಲ್ಲಿ ಅಷ್ಟು ಅಂಕ ಪಡೆದರು ಸರ್ಕಾರದ ಮೀಸಲಾತಿ ಮತ್ತು ನಿಯಮಗಳಿಂದ ನನ್ನ ಮಗನಿಗೆ ಮೆಡಿಕಲ್ ಸೀಟ್ ಸಿಗಲಿಲ್ಲ ಮತ್ತು ದೇಶದಲ್ಲಿ ಖಾಸಗಿಯಾಗಿ ಮೆಡಿಕಲ್ ಓದ ಬೇಕಾದರೆ 1.5 ಕೋಟಿ ಯಿಂದ 2 ಕೋಟಿ ಹಣ ಬೇಕಾಗುತ್ತದೆ. ಅಭಿವೃದ್ಧಿ ಶೀ¯ ದೇಶದಲ್ಲಿ ಇಷ್ಟು ಖರ್ಚಾದರೆ ನಮ್ಮಂತಹ ಬಡವರು ಓದಿಸುವುದು ಹೇಗೆ? ಉಕ್ರೆನ್ ನಂತಹ ಸಣ್ಣ ರಾಷ್ರ್ಟಗಳಲ್ಲಿ 25ರಿಂದ 30 ಲಕ್ಷಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಬಹುದು. ನಮ್ಮ ದೇಶದ ಸರ್ಕಾರ ಮತ್ತು ವ್ಯವಸ್ಥೆ ಮೊದಲು ಬದಲಾಗಬೇಕು.” ಎಂಬ ಹೇಳಿಕೆಯು ಭಾರತದ ವ್ಯವಸ್ಥೆಯನ್ನು ಮತ್ತೊಮ್ಮೆ ಮುಟ್ಟಿ ನೋಡಿಕೊಳ್ಳಬೇಕಾದ ಹಂತಕ್ಕೆ ಬಂದು ನಿಂತಿದೆ. ನವೀನನ ಸಾವಿನಲ್ಲಿಯೂ ರಾಜಕೀಯ ಮಾಡುತ್ತಿರುವ ದೇಶದ ರಾಜಕೀಯ ವ್ಯವಸ್ಥೆಯು ಒಂದು ಸಾರಿ ತಲೆ ತಗ್ಗಿಸಿ ನಿಲ್ಲಬೇಕು. ಸಿದ್ದರಾಮಯ್ಯ ಹೇಳುವಂತೆ ನವೀನನ ಸಾವಿಗೆ ಕೇಂದ್ರ ಸರ್ಕಾರವೇ ಕಾರಣ. ಇತ್ತ ಯು.ಟಿ ಖಾದರ ಹೇಳುತ್ತಾರೆ ನವೀನ ಶಿಕ್ಷಣದ ಖರ್ಚನ್ನು ಮರಳಿ ಕೊಡಬೇಕು. ಡಿ.ಕೆ.ಶಿವಕುಮಾರ ಹೇಳುತ್ತಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷದಿಂದ ನೂರಾರು ಕನ್ನಡಿಗರು ಸಂಕಷ್ಟದಲ್ಲಿದ್ದಾರೆ. ಬಿ.ಜೆ.ಪಿ ಯ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಪ್ರಕಾರ ಭಾರತೀಯರನ್ನು ಉಕ್ರೆನ್‍ನಿಂದ ಕರೆತರುವಲ್ಲಿ ಮೋದಿ ಸರ್ಕಾರವು ಯಶಸ್ವಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬನವರಾಜ್ ಬೊಮ್ಮಾಯಿಯವರು ಹೇಳುತ್ತಾರೆ ಮೃತ ದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮಾಡಲಾಗುತ್ತಿದೆ. ಇತ್ತ ಹೆಚ್.ಡಿ.ಕುಮಾರಸ್ವಾಮಿಯವರ ಒಂದು ವಿಚಾರವು ಗಮನಾರ್ಹ ಚರ್ಚೆಗೆ ಒಳಗಾಗಿದೆ. ಕೇಂದ್ರ ಸರ್ಕಾರವನ್ನು ಆಪಾಧನೆ ಮಾಡುತ್ತಾ ಉಕ್ರೆನ್ ಭಾರತೀಯ ರಾಯಭಾರಿ ಕಛೇರಿ ಸೂಕ್ತವಾಗಿ ಸ್ಪಂಧಿಸುತ್ತಿಲ್ಲ ಎಂಬ ಆಪಾಧನೆಯನ್ನು ಕೂಡ ಮಾಡುತ್ತಾರೆ. ಜೊತೆಗೆ ಹೆಚ್.ಡಿ.ಕುಮಾರಸ್ವಾಮಿಯವರು ಎನ್.ಇ.ಇ.ಟಿ ಪರೀಕ್ಷೆಯಿಂದ ನವೀನ್‍ಗೆ ರಾಜ್ಯದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗದೆ ಪ್ರತಿಭಾವಂತನನ್ನು ಕಳೆದು ಕೊಂಡಿದ್ದೇವೆ.
“ಅಭ್ಯರ್ಥಿಯು ಜಿ.ಎಮ್.ಎ.ಟಿ ಅಥವಾ ಜಿ.ಆರ್.ಇ ನಲ್ಲಿ 97% ಸ್ಕೋರ್ ಮಾಡಬೇಕಾದರೆ ಅವನು ಬೇರೆ ಯಾವುದಾದರೂ ದೇಶದಲ್ಲಿದ್ದರೆ ಅವನು ಹಾವರ್ಡ್ ಅಥವಾ ಸ್ಕ್ಯಾನ್ ಪೋರ್ಡ್‍ನಲ್ಲಿ ಸಂಪೂರ್ಣ ಅನುದಾನಿತ ವಿದ್ಯಾರ್ಥಿ ವೇತನದಲ್ಲಿ ಓದಬಹುದು ಆದರೆ ದುಃಖದ ಸಂಗತಿಯೆಂದರೆ ನವೀನ್ ಮೆರಿಟ್‍ನಲ್ಲಿ ಭಾರತದಲ್ಲಿ ವೈದ್ಯಕೀಯ ಸೀಟು ಪಡೆಯಲು ಸಾಧ್ಯವಾಗಲಿಲ್ಲ” ಐ.ಪಿ.ಎಸ್ ಅಧಿಕಾರಿ ಕಾರ್ತೀಕೇಯ.ಜಿ. ಟ್ವಿಟ್ ಮಾಡುವ ಮೂಲಕ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇನ್ನು ಉಕ್ರೆನ್‍ನಿಂದ ಜೀವಂತ ಇರುವವರನ್ನೆ ಕರೆತರುವುದು ಕಷ್ಟ ಇಂತಹದರಲ್ಲಿ ಮೃತ ದೇಹವನ್ನು ತರುವುದು ಇನ್ನೂ ಕಷ್ಟ ನವೀನ್ ಮೃತ ದೇಹ ತರುವ ಜಾಗದಲ್ಲಿ 10 ಮಂದಿಯನ್ನು ಕರೆತರಬಹುದು ಎಂದು ಶಾಸಕ ಅರವಿಂದ್ ಬೆಲ್ಲದ್ ಬೇಜಾವಾಬ್ದಾರಿ ಹೇಳಿಕೆಯಿಂದ ರಾಜಕಾರಣಿಗಳ ಬುದ್ದಿ ಪ್ರಬುದ್ದತೆ ಪಡೆದಿಲ್ಲ ಎಂಬ ವಿಚಾರವಾದವನ್ನು ಮತ್ತೊಮ್ಮೆ ಸಾಬೀತು ಪಡೆಸಿದ್ದಾರೆ. ಬೇರೆಯವರಿಗಿಂತ ನವೀನನ ವಿಚಾರವನ್ನಿಟ್ಟುಕೊಂಡು ಇಷ್ಟೊಂದು ವಿಶ್ಲೇಷಣೆ ಮಾಡಲು ಕಾರಣ ನವೀನನ ದೇಹವನ್ನು ರಷ್ಯಾ ಸೈನಿಕರು ಉಕ್ರೆನ್‍ನಲ್ಲಿ ಹತ್ಯೆ ಮಾಡಿರಬಹುದು ಆದರೆ ನವೀನ ನಂತಹ ಮೆಲ್ವರ್ಗದ ಪ್ರತಿಭಾವಂತನ ಕನಸುಗಳನ್ನು ಈ ದೇಶದ ವ್ಯವಸ್ಥೆ ಹತ್ಯೆ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಾಗಲೂ ಜಾತಿ, ಧರ್ಮ, ಭಾಷೆಯ ಆಧಾರದಲ್ಲಿ ಮೀಸಲಾತಿ ನೀಡುವುದು ಎಷ್ಟು ಸರಿ? ಈ ದೇಶದ ಪಾರ್ಲಿಮೆಂಟ್ ಇತಿಹಾಸದಲ್ಲಿ ಜನ ಪ್ರತಿನಿಧಿಯ ಕಾಯ್ದೆಗಳು ಸಂಬಳ ಹೆಚ್ಚಳ ಮತ್ತು ಜಾತಿ ಮೀಸಲಾತಿಯ ಕಾಯ್ದೆಗಳು ಯಾವುದೇ ವಿರೋಧವಿಲ್ಲದೆ ಅಂಗೀಕಾರ ಗೊಳ್ಳುತ್ತಿರುವುದೇ ದುರಂತ ಒಂದು ದೇಶದ ಸ್ವಾತಂತ್ರ್ಯ ಅಥವಾ ಹುಟ್ಟು ಅಥವಾ ಸ್ವಂತ ವ್ಯವಸ್ಥೆಯಲ್ಲಿ ಆಡಳಿತ ಮಾಡಿ 75 ವರ್ಷಗಳು ಕಳೆದರೂ ಹಿಂದುಳಿದವರನ್ನು ಅಲ್ಪಸಂಖ್ಯಾತರನ್ನು ಮತ್ತು ಹಿಂದುಳಿದ ಜಾತಿಯನ್ನು ಸುಧಾರಿಸಲು ಆಗಿಲ್ಲ ಅಂದರೆ ನಾಚಿಕೆಯಾಗಬೇಕು. ಒಬ್ಬ ಮನುಷ್ಯನ ಸಾಮಾನ್ಯ ಆಯುಷ್ಯವೇ 60 ವರ್ಷ ಆಗಿರುವುದರಿಂದ ಆದರೆ 75 ವರ್ಷ ಕಳೆದ ಬಾರತದಲ್ಲಿ ಮೀಸಲಾತಿ ಪದ್ದತಿಗಳು ಇನ್ನೂ ಜೀವಂತವಾಗಿಟ್ಟಿದ್ದೇವೆ ಎಂದರೆ 5-6 ದಶಕಗಳ ವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಆತ್ಮ ಸಾಕ್ಷಿ ಅನ್ನುವುದೇ ಇಲ್ಲವೇ. ಕಾಂಗ್ರೆಸ್ ಮತ್ತು ಬಿ.ಜೆ.ಪಿ ಸೇರಿದಂತೆ ಈ ದೇಶವನ್ನಾಳುತ್ತಿರುವ ಪಕ್ಷಗಳು ಮತ್ತು ರಾಜಕಾರಣೀಗಳು ಆತ್ಮ ಸಾಕ್ಷಿಯನ್ನೊಮ್ಮೆ ಮುಟ್ಟಿ ನೋಡಿಕೊಳ್ಳಬೇಕು. ಹಿಂದುಳಿದವರ ಮತ್ತು ಅಲ್ಪ ಸಂಖ್ಯಾತರ ಹೆಸರಿನಲ್ಲಿ ಪ್ರತಿಭಾವಂತರಿಗೆ ಮೋಸ ಮಾಡುತ್ತಿದ್ದೀರಿ ಜೊತೆಗೆ ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೂ ಮೋಸ ಮಾಡುತ್ತಿದ್ದೀರಿ ಏಕೆಂದರೆ ಸ್ಪರ್ಧೆಯಿದ್ದರೆ ಮಾತ್ರ ಗೆಲುವು ಮತ್ತು ಸಂತೋಷ ಸಾಧ್ಯ ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರನ್ನು ಮಾನಸಿಕವಾಗಿ ತುಳಿಯುತ್ತಿದ್ದೀರಿ. ಮತ್ತು ಪ್ರತಿಭಾವಂತರನ್ನ ಹತ್ಯೆ ಮಾಡುತ್ತಿದ್ದೀರಿ. ಹಾಗಾದರೇ ಇದೇ ಸತ್ಯವಲ್ಲವೇ ನವೀನನ ಸಾವಿಗೆ ನಾವೇ ಅಂದರೆ ನಮ್ಮ ವ್ಯವಸ್ಥೆಯೇ ಕಾರಣ ಆತನನ್ನು ರಷ್ಯಾ ಸೈನಿಕರು ದೈಹಿಕವಾಗಿ ಕೊಂದರೆ ನಾವು ಮಾನಸಿಕವಾಗಿ ಕನಸುಗಳನ್ನು ಕೊಂದಿಲ್ಲವೇ ಇಂತಹ ಅನಿಷ್ಟ ಪದ್ಧತಿಗಳನ್ನು ನೀರು ಗೊಬ್ಬರ ಹಾಕಿ ಬೆಳೆಸುತ್ತಿರುವ ರಾಜಕಾರಣಿಗಳನ್ನು ಮತ್ತು ರಾಜಕೀಯ ವ್ಯವಸ್ತೆಯನ್ನು ಬೆಂಬಲಿಸಿವುದೂ ಕೂಡ ಅಪರಾಧವಲ್ಲವೇ? ನವೀನನ ಕನಸುಗಳ ಹತ್ಯೆಯೊಂದಿಗೆ ನಮ್ಮ ವ್ಯವಸ್ಥೆಯ ದುರಂತವು ಕಣ್ಣು ಮುಂದೆ ಬರುತ್ತದೆ. ಇನ್ನು ಎಷ್ಟು ದಿನ ಸಹಿಸಿಕೊಳ್ಳುತ್ತೀರಿ?

ಕ್ಷಮಿಸು ಬಿಡು ನವೀನಾ ! ನಿನ್ನ ಸಾವಿಗೆ ನಾವೇ ಕಾರಣ !
Share
Share