ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಸಾರ್ವಜನಿಕರಿಂದ ಅವಹಾಲುಗಳ ಸುರಿಮಳೆ

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಸಾರ್ವಜನಿಕರಿಂದ ಅವಹಾಲುಗಳ ಸುರಿಮಳೆ

Share

ಹೊಳಲು: ಸರ್, ನಮ್ಮೂರಿಗೆ ಬರೋದು ಒಂದೆ ಒಂದು ಬಸ್ಸು ಸರ್, ಅದು ಕೂಡಾ ಸರಿಯಾಗಿ ಬಾರದ ಕಾರಣ ಮಕ್ಕಳಿಗೆ ಶಾಲೆಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ. ಸರ್, ಸಮಯಕ್ಕೆ ಸರಿಯಾಗಿ ರಸಗೊಬ್ಬರ ಪೂರೈಕೆ ಮಾಡಿ ಹಾಗಾದರೆ ರೈತರು ಸರಿಯಾಗಿ ಬೆಳೆ ತೆಗೆಯಲು ಸಾಧ್ಯವಾಗುತ್ತದೆ. ಸರ್, ಈ ಸ್ವತ್ತು ಎನ್ನುವುದು ಸಾರ್ವಜನಿಕರಿಗೆ ಕುತ್ತಾಗಿ ಪರಿಣಮಿಸಿದೆ. ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಕಾಯಬೇಕಾಗಿದೆ ಬಹಳಷ್ಟು ವಿಳಂಬವಾಗುತ್ತಿರುವ ಈಸ್ವತ್ತು ಪ್ರಕ್ರಿಯೆಯನ್ನು ಆದಷ್ಟು ಕಡಿಮೆ ಕಾಲಮಿತಿಯಲ್ಲಿ ಕಾರ್ಯನಿರ್ವಹಿಸಿಕೊಡಿ. ಇಂತಹ ನೂರಾರು ಅವಹಾಲುಗಳು ಕಂಡುಬAದದ್ದು ಸಮೀಪದ ದಾಸನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮದಲ್ಲಿ.
ಹೌದು ಶನಿವಾರ ಹೂವಿನಹಡಗಲಿ ತಾಲೂಕು ದಾಸನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ತಹಶೀಲ್ದಾರ ಮಹೇಂದ್ರ ಮಾತನಾಡಿ ಸ್ಥಳೀಯ ಸಮಸ್ಯೆ ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಉದ್ದೇಶದಿಂದ ಸರಕಾರ ಪ್ರತಿ ತಿಂಗಳ ಮೂರನೇ ಶನಿವಾರ ಒಂದೊAದು ಗ್ರಾಮ ಪಂಚಾಯತಿಯಲ್ಲಿ ತಾಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ಇಂತಹ ಒಂದು ಮಹತ್ವಪೂರ್ಣ ಕಾರ್ಯಕ್ರಮವನ್ನು ಕೈಗೊಂಡಿದ್ದು ಅರ್ಥಪೂರ್ಣವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ನAತರ ನರೇಗಾ ಇಒ ಯು.ಹೆಚ್ ಸೋಮಶೇಖರ ಮಾತನಾಡಿ ಆರೋಗ್ಯ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳ ಪರಿಶ್ರಮದಿಂದ ದಾಸನಹಳ್ಳಿ ಗ್ರಾಮ ತಾಲೂಕಿನಲ್ಲಿಯೇ ಶೇ ೧೦೦ರಷ್ಟು ಕೊರೋನಾ ಲಸಿಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಹಾಗೂ ರೈತ ಬಂಧು ಯೋಜನೆ ಅತಿಹೆಚ್ಚು ಫಲಾನುಭವಿಗಳಿಗೆ ತಲುಪಿರುವುದು ಅಧಿಕಾರಿಗಳ ಕಾರ್ಯ ದಕ್ಷತೆಗೆ ಹಿಡಿದ ಕಯಗನ್ನಡಿಯಾಗಿದೆ ಎಂದು ತಿಳಿಸಿದ ಅವರು ಗ್ರಾಮ ನೈರ್ಮಲ್ಯ, ಬದು ನಿರ್ಮಾಣ ಸೇರಿದಂತೆ ನರೇಗಾ ಯೋಜನೆ ಅಡಿಯಲ್ಲಿ ಬರುವ ಉದ್ಯೋಗಾವಕಾಶಗಳಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಾರಿ ಬಸವರಾಜ, ಎ.ಡಿ ಜಯಪ್ರಕಾಶ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂದ್ಯಾ ಸುರಕ್ಷಾ ಯೋಜನೆ, ವಿದವಾ ವೇತನಾ ಸೇರಿದಂತೆ ಕೆಲ ಫಲಾನುಬವಿಗಳಿಗೆ ಸ್ಥಳದಲ್ಲಿ ಆದೇಶ ಪ್ರತಿ ನೀಡಲಾಯಿತು.
ಈವೇಳೆ ಕಂದಾಯ ೬೯, ತಾ.ಪಂ ೧೮೦, ಕೃಷಿ, ಭೂಮಾನ, ಸಾರಿಗೆ ಸೇರಿದಂತೆ ಒಟ್ಟು ೨೮೭ ಅರ್ಜಿಗಳು ಸ್ವೀಕೃತಿಯಾಗಿದ್ದವು. ಅದರಲ್ಲಿ ಮಾತ್ರ ಬಗೆಹಿದಿದ್ದು, ಉಳಿದ ಅರ್ಜಿದಾರರ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಕೆಲವೇ ದಿನಗಳಲ್ಲಿ ಬಗೆಹರಿಸುಉದಾಗಿ ತಹಶೀಲ್ದಾರ ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಹೆಚ್.ಮಂಜವ್ವ ಅಧ್ಯಕ್ಷತೆ ವಹಿಸಿದ್ದರು, ತಾ.ಪಂ ಇಒ ಪ್ರಭುರೆಡ್ಡಿ, ಗ್ರಾ.ಪಂ ಉಪಾಧ್ಯಕ್ಷೆ ಬೂದನೂರು ಹುಲಿಗೆಮ್ಮ ಹಾಗೂ ಪಿಡಿಒ ರವೀಂದ್ರ ಸೇರಿದಂತೆ ಸರ್ವ ಸದಸ್ಯರು ಹಾಗೂ ತಾಲೂಕಿನ ವಿವಿಧ ಇಲಾಖೆಗಳಿಂದ ಆಗಮಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು. ಉಪ ತಹಶೀಲ್ದಾರ ಮಲ್ಲಿಕಾರ್ಜುನ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕ ಪ್ರಕಾಶ ವಂದಿಸಿದರು.


Share