2022ರ ಬಜೆಟ್

Share


ವಿತ್ತ ಸಚಿವೆ ನಿರ್ಮಲಾ ಸೀತರಾಮ್‍ನ್ ರವರು ಈ ಬಾರಿ ಮಂಡಿಸುವ ಬಜೆಟ್ ಪ್ರಗತಿಯ ವೇಗವನ್ನು ಹೆಚ್ಚಿಸುವ ಭವಿಷ್ಯದ ಗುರಿಯೊಂದಿಗಿನ ಈ ಬಜೆಟ್ ನೇರವಾಗಿ ಯುವಕರು, ಮಹಿಳೆಯರು, ರೈತರು ಮತ್ತು ಹಿಂದುಳಿದವರಿಗೆ ಅನುಕೂಲ ಒದಗಿಸಲಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ 25000 ಕಿ.ಮೀ ಹೆದ್ದಾರಿ ಅಭಿವೃದ್ಧಿಗಾಗಿ 3.8 ಕೋಟಿ ರೂ, 80 ಲಕ್ಷ ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ 48000 ಕೋಟಿ ರೂ, ನರೇಗಾ ಯೋಜನೆಗೆ 73,000 ಕೋಟಿ ರೂ, ಎಂ ಎಸ್ ಪಿ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ 2.37 ಲಕ್ಷ ಕೋಟಿ ರೂ, ಷೇರು ವಿಕ್ರಯಗುರಿಗೆ 65,000 ಕೋಟಿ ರೂ, ಮೆಟ್ರೋ ಯೋಜನೆಗಳಿಗೆ 19,130 ಕೋಟಿ ರೂ, ಬಿಟ್ ಕಾಯಿನ್ ನಂತಹ ಡಿಜಿಟಲ್ ಆಸ್ತಿಗಳ ಮೇಲಿನ ಆದಾಯಕ್ಕೆ 30% ರಷ್ಟು ತೆರಿಗೆ ವರ್ಗಾವಣೆ ಮೊತ್ತದ ಮೇಲೆ 1% ಟಿಡಿಎಸ್, ಷೇರು ಈಕ್ವೀಟಿಯಂತಹ ದೀರ್ಘಕಾಲೀನ ಹೂಡಿಕೆಗಳಿಂದ ಆದಾಯದ ಮೇಲಿನ ಸರ್ಚಾಜ್ ಗೆ ಗರಿಷ್ಠ 15% ರಷ್ಟು ಮಿತಿ, ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಡಿಜಿಟಲ್ ಕರೆನ್ಸಿಗೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಉದ್ದೇಶಿಸಿಲ್ಲ ಎಂದು ಸ್ಪಷ್ಟಪಡಿಸಿದ ಸೀತಾರಾಮನ್ ರವರು 30% ರಷ್ಟು ತೆರಿಗೆಯನ್ನು ಕ್ರಿಪ್ಟೋ ಕರೆನ್ಸಿಗಳ ಮೇಲೆ ವಿಧಿಸಲಾಗುವುದು ಎಂದು ಹೇಳಿದ್ದಾರೆ. 400 “ವಂದೇ ಭಾರತ್ ರೈಲು” ಘೋಷಣೆ. ಇಂಧನ ದಕ್ಷÀತೆ ಮತ್ತು ಪ್ರಯಾಣಿಕ ಸ್ನೇಹಿ ತಂತ್ರಜ್ಞಾನದ ರೈಲು, ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಯಡಿ 100 ಸರಕು ಟರ್ಮಿನಲ್ ನಿರ್ಮಾಣ ಗುರಿ, ಸ್ಟಾರ್ಟ್ ಅಫ್ ಕಂಪನಿಗಳಿಗೆ ತೆರಿಗೆ ರಿಯಾಯಿತಿ, ಒನ್ ಕ್ಲಾಸ್ ಮತ್ತು ಒನ್ ಚಾನಲ್, ಕೃಷಿಗೆ ಉತ್ತೇಜನ, ರಫ್ತು ಉತ್ತೇಜನಕ್ಕೆ ಕ್ರಮ, ಕಿಸಾನ್ ಡ್ರೋನ್ ಯೋಜನೆಯಡಿ ಕೃಷಿ ಭೂಮಿ ಸಮೀಕ್ಷೆ, ದಾಖಲೆಗಳ ಡಿಜಿಟಲೀಕರಣ, ಕೃಷಿ ಆಧಾರಿತ ಸ್ಟಾರ್ಟ್ ಅಫ್‍ಗಳ ನೆರವಿಗೆ ನಬಾರ್ಡ ಸಾಲ, ಗ್ರಾಮೀಣರ ಮನೆಗೆ ನಲ್ಲಿ ನೀರಿನ ಸಂಪರ್ಕ ಯೋಜನೆ “ಹರ್ ಘರ್ ನಲ್ ಸೇ ಜಲ್” ಗೆ 60,000 ಕೋಟಿ ರೂ, ಕ್ರೀಡೆಗೆ 3.062 ಕೋಟಿ ರೂ ಮಂಡಿಸಿದ್ದಲ್ಲದೇ, ಇ-ಪಾಸ್ ಪೋರ್ಟ್ ಜಾರಿ, ತೆರಿಗೆದಾರರು 2 ವರ್ಷಗಳ ಅವಧಿಯಲ್ಲಿ ಪರಿಷ್ಕøತ ರಿಟನ್ರ್À ಸಲ್ಲಿಸಲು ಅವಕಾಶ, ನದಿ ಜೋಡಣೆಗೆ ಸಮ್ಮತಿ, ಜಲಶಕ್ತಿಗೆ ಅನುದಾನ ಹೆಚ್ಚಳ, ಗ್ರಾಮ ರಸ್ತೆ ನಿರ್ಮಾಣಕ್ಕೆ ಒತ್ತು, ಪಂಚ ನದಿ ಜೋಡಣೆ ಗುರಿ, ಪರಿಸರ ಅರಣ್ಯ ಇಲಾಖೆಗೆ 3,030ಕೋಟಿ ರೂ ಅನುದಾನ, ಭೂ ವಿಜ್ಞಾನಕ್ಕೆ 1,897 ಕೋಟಿ ರೂ ಅನುದಾನ ನೀಡಿದೆ. ಅಲ್ಲದೇ ಸಿರಿಧಾನ್ಯಗಳ ಮಾರುಕಟ್ಟೆ ವಿಸ್ತರಣೆ ಮಾಡುವುದರ ಜೊತೆಗೆ 2023 ಅನ್ನು “ಅಂತರ್ ರಾಷ್ಟ್ರೀಯ ಸಿರಿಧಾನ್ಯಗಳ” ವರ್ಷವೆಂದು ಘೋಷಣೆ ಮಾಡಿದೆ.
ಈ ಬಾರಿಯ ಬಜೆಟ್ ಅನ್ನು ಹಣಕಾಸು ಸಚಿವರು ಮುಂದಿನ 2 ವರ್ಷಗಳಲ್ಲಿ ಬರುವ ಲೋಕಸಭಾ ಚುನಾವಣೆ ಮತ್ತು ಭಾರತದ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಳ್ಳುವುದರ ಜೊತೆಗೆ ಕೊರೋನಾದ 3 ಅಲೆಗಳ ಮಧ್ಯೆ ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ್ದು ಇದು “ವರ್ಚುವಲ್ ಬಜೆಟ್” ಆಗಿ ಗಮನಸೆಳೆದಿದೆ.
ಏರಿಕೆ
ವಿಮಾನಯಾನ, ಛತ್ರಿಗಳು
ಇಮಿಟೇಶನ್ ಜ್ಯುವೆಲರಿ,
ಸ್ಮಾರ್ಟ್ ಮೀಟರ್, ಸ್ಪೀಕರ್
ಸೋಲಾರ್ ಸೆಲ್, ಮಾಡ್ಯೂಲ್
ಎಕ್ಸರೇ ಮೆಷಿನ್
ಹೆಡ್ ಫೋನ್ ಮತ್ತು ಇಯರ್ ಫೋನ್
ಎಲ್ಲಾ ಆದಾಯದ ಉತ್ಪನ್ನಗಳು
ಇಳಿಕೆ
ಎಲೆಕ್ಡ್ರಾನಿಕ್ ಬಿಡಿ ಭಾಗಗಳು
ಮುತ್ತುಗಳು, ಪಾಲೀಷ್ ಮಾಡಿದ ವಜ್ರ
ಮೊಬೈಲ್, ಮೊಬೈಲ್ ಕ್ಯಾಮೆರಾ ಲೆನ್ಸ್,
ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನಗಳು
ಮೀಥೈಲ್, ಆಲ್ಕೋಹಾಲ್, ಮೆಂಥಾಲ್,
ಅಟಿಟಿಕ್ ಆಸಿಡ್, ಕೋಕಾ ಬೀನ್ಸ್,
ಪೆಟ್ರೋಲಿಯಂ ಉತ್ಪನ್ನಗಳಿಗೆ ಬಳಸುವ ರಾಸಾಯನಿಕ
ಶೀತಲೀಕರಿಸಿದ ಚಿಪ್ಪು ಜೀವಿಗಳು, ಸ್ಕ್ವೀಡ್
ಕೃಷಿ ಸಲಕರಣೆಗಳು, ಇಂಗು


Share

ಕ್ಷಮಿಸು ಬಿಡು ನವೀನಾ ! ನಿನ್ನ ಸಾವಿಗೆ ನಾವೇ ಕಾರಣ !

Share

ಕರ್ನಾಟಕ ಮೂಲದ ನವೀನ ಶೇಖರಪ್ಪ ಗ್ಯಾನಗೌಡರ ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಿಗೇರಿಯ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ರಷ್ಯಾ ಉಕ್ರೇನ್ ಯುದ್ದದ ಸಂಧÀರ್ಭದಲ್ಲಿ ಹತ್ಯೆಯಾಗಿರುವ ಈತ ಅತ್ಯಂತ ಬುದ್ದಿವಂತ 10ನೇ ವಯಸ್ಸಿನಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆದರ್ಶ ಶಾಲೆ ಸೇರಿದ. ನವೀನನ ತಂದೆ ಶೇಕರಪ್ಪ ಸೌತ್ ಇಂಡಿಯಾ ಪೇಪರ್ ಮಿಲ್‍ನ ವೆಹಿಕಲ್ ಮೆಂಟೇನೆನ್ಸ್ ವಿಭಾಗದಲ್ಲಿ ನಂಜನಗೂಡಿನಲ್ಲಿ ಕೆಲಸ ಮಾಡುತ್ತಿದ್ದರು. ಈ ಕಾರಣ ಮತ್ತು ಮಗನ ಬುದ್ದಿವಂತಿಕೆಯಿಂದ ನಂಜನಗೂಡಿನ ಆದರ್ಶ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯ ವರೆಗೆ ವ್ಯಾಸಂಗ ಮಾಡಿದ್ದಾನೆ. ಎಸ್.ಎಸ್.ಎಲ್.ಸಿ ಯಲ್ಲಿ 625 ಅಂಕಗಳಿಗೆ 604 ಅಂಕಗಳನ್ನು ಪಡೆದು ಆದರ್ಶ ಶಾಲೆಗೆ ಮೊದಲಿಗರಾಗಿ ಉತ್ತೀರ್ಣರಾಗಿದ್ದಾರೆ. ನಂತರ ಮೈಸೂರಿನ ಯೂನಿಟಿ ಕಾಲೇಜಿಗೆ ಸೇರಿ ಪಿ.ಯು.ಸಿ ವಿಜಾÐನ ವಿಭಾಗದಲ್ಲಿ ಶೇ.92.2% ರಷ್ಟು ಪ್ರತಿಶತ ಪಡೆದರೂ ಸಹ ಕರ್ನಾಟಕ ಸೇರಿದಂತೆ ಭಾರತದಲ್ಲಿ ಮೆಡಿಕಲ್ ಸೀಟ್ ಸಿಗಲಿಲ್ಲ ಬುದ್ದಿವಂತ ಮಗನ ಕನಸು ನನಸಾಗಿಸುವ ಪ್ರಯತ್ನದಲ್ಲಿ ತಂದೆ ಕಷ್ಟಪಟ್ಟು ಉಕ್ರೆನ್ ದೇಶದಲ್ಲಿ ವೈದ್ಯಕೀಯ ಕೋರ್ಸನ್ನು ಓದಿಸುತ್ತಿದ್ದರು. ಉಕ್ರೆನ್ ಮೆಡಿಕಲ್ ಕಾಲೇಜಿನಲ್ಲೂ ನವೀನ ತುಂಬಾ ಕ್ರಿಯಾಶೀಲವಾಗಿ ಓದುತ್ತಿದ್ದು ಕನ್ನಡದ ಅಭಿಮಾನವನ್ನು ಮೆರೆದಿದ್ದ. ಆದರೆ ಮೊನ್ನೆ ರಷ್ಯಾದ ಶೆಲ್ ದಾಳಿಗೆ ಬಲಿಯಾಗಿದ್ದಾನೆ. ತನಗೆ ಮತ್ತು ತನ್ನ ಗೆಳೆಯರಿಗಾಗಿ ಊಟ ಮತ್ತು ದಿನಸಿ ತರಲು ಹೋಗಿ ರಷ್ಯಾದ ಸೈನ್ಯಕ್ಕೆ ಬಲಿಯಾಗಿದ್ದಾನೆ. ನವೀನ್ ಮತ್ತು ಚಂದನ್ ಜಿಂದಾಲ್ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ವಿದೇಶಿಯ ಅದೆಷ್ಟೋ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಸಾವು ನೋವುಗಳ ಮಧ್ಯೆ ಆ ಎಲ್ಲಾ ಸಾವುಗಳಿಗೆ ಯಾರು ಹೊಣೆಯೆಂದು ಕೇಳಿದರೆ ತಕ್ಷಣ ಉತ್ತರಿಸುತ್ತೇವೆ. ರಷ್ಯಾ ಮತ್ತು ಉಕ್ರೇನ್ ಎಂದು ಇಂದಿನ ಭಾರತ ವಿದೇಶಾಂಗ ನೀತಿಗಳ ಮತ್ತು ಭಾರತವು ಈಗ ವಿಶ್ವದ ಗುರು ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಧ್ವಜ ಒಂದು ಉಕ್ರೆನ್‍ನಲ್ಲಿ ವಾಸವಿರುವ ಭಾರತೀಯರ ಜೀವ ಉಳಿಸುವುದರ ಜೊತೆಗೆ ವಿದೇಶಿಯರ ಜೀವ ಉಳಿಸಿರುವ ಹೆಮ್ಮೆ ನಮಗಿದೆ. ಉಕ್ರೆನ್‍ನಿಂದ ಮರುಳುತ್ತಿರುವ ಹಲವಾರು ವಿದ್ಯಾರ್ಥಿಗಳು ಮತ್ತು ನಾಗರೀಕರು ಆಫ್ರೆಷನ್ ಗಂಗಾ ಕಾರ್ಯಕ್ರಮವನ್ನು ಹಾಡಿ ಹೊಗಳುತ್ತಿದ್ದಾರೆ. ಏರ್ ಇಂಡಿಯಾ ವಿಮಾನಗಳ ಜೊತೆಗೆ ಸ್ಪೈಸ್ ಜೆಟ್ ಕೂಡ ಕೈ ಜೋಡಿಸಿ ನಮ್ಮ ವಾಯು ಸೇನೆಯ ಬಲವನ್ನು ಹೆಚ್ಚಿಸಿವೆ. ಹಲವಾರು ಪ್ರಯತ್ನಗಳಿಂದ ಭಾರತೀಯರನ್ನು ರಕ್ಷಿಸುವ ಪ್ರಯತ್ನವನ್ನು ಭಾರತ ಸರ್ಕಾರವು ಪ್ರಮಾಣಿಕವಾಗಿ ಮಾಡುತ್ತಿವೆ. ಆದರೆ ಕೆಲವು ವಿರೋದಿಗಳು ಜ್ಞಾನವಿಲ್ಲದೆ ಉಕ್ರೆನಿಗೆ ಹೋದ ವಿದ್ಯಾರ್ಥಿಗಳು ಬಾಯಿಗೆ ಬಂದಂತೆ ದೇಶದ ವ್ಯವಸ್ಥೆಯನ್ನು ಬೈಯುತ್ತಿದ್ದಾರೆ. ಹಣದ ಮದದಿಂದ ಮತ್ತು ಎನ್.ಇ.ಇ.ಟಿ ಪರೀಕ್ಷೆಯನ್ನು ಪಾಸಾಗದ ಅಯೋಗ್ಯರಿಂದ ಅಂತಹ ಮಾತುಗಳು ಕೇಳಿ ಬರುವುದು ಸಾಮಾನ್ಯ ಯುದ್ಧದ ಸಂಧರ್ಭದಲ್ಲಿ ವಿದೇಶಾಂಗ ನೀತಿಗಳು 2 ಬೇರೆ ಬೇರೆ ದೇಶಗಳ ನಡುವೆ ನಡೆಯುವ ಯುದ್ಧದ ಸಂಧರ್ಭದಲ್ಲಿ ಇನ್ನೊಂದು ದೇಶದ ನಾಗರೀಕರ ರಕ್ಷಣೆಯ ಹೊಣೆ ಮತ್ತು ಅಂತರ ರಾಷ್ರ್ಟೀಯ ನಿಯಮ ನಿಭಂದನೆಗಳು ಗೊತ್ತಿಲ್ಲದ ಶಿಕ್ಷಣ ಪಡೆದ ಅಜ್ಞಾನಿಗಳಿಂದ ಇಂತಹ ಕೀಳು ಮಟ್ಟದ ಮಾತುಗಳು ಕೇಳಿ ಬರುವುದು ಸಾಮಾನ್ಯ ಅದರಲ್ಲಿ ಒಬ್ಬ ವಿದ್ಯಾರ್ಥಿ ಹೇಳುತ್ತಾನೆ ತಿನ್ನಲು ಅನ್ನ, ನೀರು ಸಿಗಲಿಲ್ಲ ಎಂದು ಯುದ್ಧದ ಸಂಧರ್ಭದಲ್ಲಿ ಸೈನಿಕರು ಸೇರಿದಂತೆ ನಾಗರೀಕರಿಗೆ ಅದೆಷ್ಟೋ ತೊಂದರೆಗಳಾಗಿರುತ್ತವೆ. ಆತ ಮುಂದುವರೆದು ಹೇಳುತ್ತಾನೆ ಭಾರತೀಯ ಸೈನ್ಯವು ನಮ್ಮನ್ನು ರಕ್ಷಿಸಲು ದೇಶದ ಒಳಗಡೆ ಬರಲಿಲ್ಲ ನಾವೇ ಗಡಿವರೆಗೆ ಬರಬೇಕಾಯಿತು ಎರಡು ದೇಶಗಳ ಯುದ್ಧದ ಮಧ್ಯೆ ಇನ್ನೊಂದು ದೇಶದ ಸೈನಿಕರು ಬರುವುದು ಅತಿಕ್ರಮಣವಾಗುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲ ಇಂತಹ ಹಲವಾರು ದೇಶ ಬಿಟ್ಟು ಓದಲು ಹೋದ ವಿದ್ಯಾರ್ಥಿಗಳ ಮಧ್ಯೆಯೇ ಕನ್ನಡ ಮತ್ತು ದೇಶದ ಅಭಿಮಾನ ಹೊಂದಿದ ನವೀನನ ವಿಚಾರವೇ ಬೇರೆ ನವೀನನ ತಂದೆಗೆ ಪ್ರಧಾನಿ ಮೋದಿಯವರೇ ಕರೆ ಮಾಡಿ ಸಾಂತ್ವಾನ ಹೇಳಿದರೂ ಕೂಡ ನವೀನನ ಆತ್ಮಕ್ಕೆ ಮುಕ್ತಿ ಸಿಗುವುದೇ ಡೌಟ್ ! ಏಕೆಂದರೆ ನವೀನನ ತಂದೆಯ ಒಂದು ಹೇಳಿಕೆಯು ದೇಶದ ವ್ಯವಸ್ಥೆಯನ್ನು ಮುಟ್ಟಿ ನೋಡಿಕೊಳ್ಳುವಂತಿದೆ “ಮಗ ನವೀನ್‍ಗೆ ಮೀಸಲಾತಿಯಿಂದ ಇಲ್ಲಿ ಸೀಟ್ ಸಿಗಲಿಲ್ಲ. ಇದು ಅತ್ಯಂತ ಬೇಸರದ ವಿಷಯ ಪ್ರತಿಭೆಯಿರುವ ಬಡ ವಿದ್ಯಾರ್ಥಿಗಳಿಗೆ ದೇಶದ ಅವಕಾಶಗಳಲ್ಲಿ ಅಷ್ಟು ಅಂಕ ಪಡೆದರು ಸರ್ಕಾರದ ಮೀಸಲಾತಿ ಮತ್ತು ನಿಯಮಗಳಿಂದ ನನ್ನ ಮಗನಿಗೆ ಮೆಡಿಕಲ್ ಸೀಟ್ ಸಿಗಲಿಲ್ಲ ಮತ್ತು ದೇಶದಲ್ಲಿ ಖಾಸಗಿಯಾಗಿ ಮೆಡಿಕಲ್ ಓದ ಬೇಕಾದರೆ 1.5 ಕೋಟಿ ಯಿಂದ 2 ಕೋಟಿ ಹಣ ಬೇಕಾಗುತ್ತದೆ. ಅಭಿವೃದ್ಧಿ ಶೀ¯ ದೇಶದಲ್ಲಿ ಇಷ್ಟು ಖರ್ಚಾದರೆ ನಮ್ಮಂತಹ ಬಡವರು ಓದಿಸುವುದು ಹೇಗೆ? ಉಕ್ರೆನ್ ನಂತಹ ಸಣ್ಣ ರಾಷ್ರ್ಟಗಳಲ್ಲಿ 25ರಿಂದ 30 ಲಕ್ಷಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಬಹುದು. ನಮ್ಮ ದೇಶದ ಸರ್ಕಾರ ಮತ್ತು ವ್ಯವಸ್ಥೆ ಮೊದಲು ಬದಲಾಗಬೇಕು.” ಎಂಬ ಹೇಳಿಕೆಯು ಭಾರತದ ವ್ಯವಸ್ಥೆಯನ್ನು ಮತ್ತೊಮ್ಮೆ ಮುಟ್ಟಿ ನೋಡಿಕೊಳ್ಳಬೇಕಾದ ಹಂತಕ್ಕೆ ಬಂದು ನಿಂತಿದೆ. ನವೀನನ ಸಾವಿನಲ್ಲಿಯೂ ರಾಜಕೀಯ ಮಾಡುತ್ತಿರುವ ದೇಶದ ರಾಜಕೀಯ ವ್ಯವಸ್ಥೆಯು ಒಂದು ಸಾರಿ ತಲೆ ತಗ್ಗಿಸಿ ನಿಲ್ಲಬೇಕು. ಸಿದ್ದರಾಮಯ್ಯ ಹೇಳುವಂತೆ ನವೀನನ ಸಾವಿಗೆ ಕೇಂದ್ರ ಸರ್ಕಾರವೇ ಕಾರಣ. ಇತ್ತ ಯು.ಟಿ ಖಾದರ ಹೇಳುತ್ತಾರೆ ನವೀನ ಶಿಕ್ಷಣದ ಖರ್ಚನ್ನು ಮರಳಿ ಕೊಡಬೇಕು. ಡಿ.ಕೆ.ಶಿವಕುಮಾರ ಹೇಳುತ್ತಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷದಿಂದ ನೂರಾರು ಕನ್ನಡಿಗರು ಸಂಕಷ್ಟದಲ್ಲಿದ್ದಾರೆ. ಬಿ.ಜೆ.ಪಿ ಯ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಪ್ರಕಾರ ಭಾರತೀಯರನ್ನು ಉಕ್ರೆನ್‍ನಿಂದ ಕರೆತರುವಲ್ಲಿ ಮೋದಿ ಸರ್ಕಾರವು ಯಶಸ್ವಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬನವರಾಜ್ ಬೊಮ್ಮಾಯಿಯವರು ಹೇಳುತ್ತಾರೆ ಮೃತ ದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮಾಡಲಾಗುತ್ತಿದೆ. ಇತ್ತ ಹೆಚ್.ಡಿ.ಕುಮಾರಸ್ವಾಮಿಯವರ ಒಂದು ವಿಚಾರವು ಗಮನಾರ್ಹ ಚರ್ಚೆಗೆ ಒಳಗಾಗಿದೆ. ಕೇಂದ್ರ ಸರ್ಕಾರವನ್ನು ಆಪಾಧನೆ ಮಾಡುತ್ತಾ ಉಕ್ರೆನ್ ಭಾರತೀಯ ರಾಯಭಾರಿ ಕಛೇರಿ ಸೂಕ್ತವಾಗಿ ಸ್ಪಂಧಿಸುತ್ತಿಲ್ಲ ಎಂಬ ಆಪಾಧನೆಯನ್ನು ಕೂಡ ಮಾಡುತ್ತಾರೆ. ಜೊತೆಗೆ ಹೆಚ್.ಡಿ.ಕುಮಾರಸ್ವಾಮಿಯವರು ಎನ್.ಇ.ಇ.ಟಿ ಪರೀಕ್ಷೆಯಿಂದ ನವೀನ್‍ಗೆ ರಾಜ್ಯದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗದೆ ಪ್ರತಿಭಾವಂತನನ್ನು ಕಳೆದು ಕೊಂಡಿದ್ದೇವೆ.
“ಅಭ್ಯರ್ಥಿಯು ಜಿ.ಎಮ್.ಎ.ಟಿ ಅಥವಾ ಜಿ.ಆರ್.ಇ ನಲ್ಲಿ 97% ಸ್ಕೋರ್ ಮಾಡಬೇಕಾದರೆ ಅವನು ಬೇರೆ ಯಾವುದಾದರೂ ದೇಶದಲ್ಲಿದ್ದರೆ ಅವನು ಹಾವರ್ಡ್ ಅಥವಾ ಸ್ಕ್ಯಾನ್ ಪೋರ್ಡ್‍ನಲ್ಲಿ ಸಂಪೂರ್ಣ ಅನುದಾನಿತ ವಿದ್ಯಾರ್ಥಿ ವೇತನದಲ್ಲಿ ಓದಬಹುದು ಆದರೆ ದುಃಖದ ಸಂಗತಿಯೆಂದರೆ ನವೀನ್ ಮೆರಿಟ್‍ನಲ್ಲಿ ಭಾರತದಲ್ಲಿ ವೈದ್ಯಕೀಯ ಸೀಟು ಪಡೆಯಲು ಸಾಧ್ಯವಾಗಲಿಲ್ಲ” ಐ.ಪಿ.ಎಸ್ ಅಧಿಕಾರಿ ಕಾರ್ತೀಕೇಯ.ಜಿ. ಟ್ವಿಟ್ ಮಾಡುವ ಮೂಲಕ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇನ್ನು ಉಕ್ರೆನ್‍ನಿಂದ ಜೀವಂತ ಇರುವವರನ್ನೆ ಕರೆತರುವುದು ಕಷ್ಟ ಇಂತಹದರಲ್ಲಿ ಮೃತ ದೇಹವನ್ನು ತರುವುದು ಇನ್ನೂ ಕಷ್ಟ ನವೀನ್ ಮೃತ ದೇಹ ತರುವ ಜಾಗದಲ್ಲಿ 10 ಮಂದಿಯನ್ನು ಕರೆತರಬಹುದು ಎಂದು ಶಾಸಕ ಅರವಿಂದ್ ಬೆಲ್ಲದ್ ಬೇಜಾವಾಬ್ದಾರಿ ಹೇಳಿಕೆಯಿಂದ ರಾಜಕಾರಣಿಗಳ ಬುದ್ದಿ ಪ್ರಬುದ್ದತೆ ಪಡೆದಿಲ್ಲ ಎಂಬ ವಿಚಾರವಾದವನ್ನು ಮತ್ತೊಮ್ಮೆ ಸಾಬೀತು ಪಡೆಸಿದ್ದಾರೆ. ಬೇರೆಯವರಿಗಿಂತ ನವೀನನ ವಿಚಾರವನ್ನಿಟ್ಟುಕೊಂಡು ಇಷ್ಟೊಂದು ವಿಶ್ಲೇಷಣೆ ಮಾಡಲು ಕಾರಣ ನವೀನನ ದೇಹವನ್ನು ರಷ್ಯಾ ಸೈನಿಕರು ಉಕ್ರೆನ್‍ನಲ್ಲಿ ಹತ್ಯೆ ಮಾಡಿರಬಹುದು ಆದರೆ ನವೀನ ನಂತಹ ಮೆಲ್ವರ್ಗದ ಪ್ರತಿಭಾವಂತನ ಕನಸುಗಳನ್ನು ಈ ದೇಶದ ವ್ಯವಸ್ಥೆ ಹತ್ಯೆ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಾಗಲೂ ಜಾತಿ, ಧರ್ಮ, ಭಾಷೆಯ ಆಧಾರದಲ್ಲಿ ಮೀಸಲಾತಿ ನೀಡುವುದು ಎಷ್ಟು ಸರಿ? ಈ ದೇಶದ ಪಾರ್ಲಿಮೆಂಟ್ ಇತಿಹಾಸದಲ್ಲಿ ಜನ ಪ್ರತಿನಿಧಿಯ ಕಾಯ್ದೆಗಳು ಸಂಬಳ ಹೆಚ್ಚಳ ಮತ್ತು ಜಾತಿ ಮೀಸಲಾತಿಯ ಕಾಯ್ದೆಗಳು ಯಾವುದೇ ವಿರೋಧವಿಲ್ಲದೆ ಅಂಗೀಕಾರ ಗೊಳ್ಳುತ್ತಿರುವುದೇ ದುರಂತ ಒಂದು ದೇಶದ ಸ್ವಾತಂತ್ರ್ಯ ಅಥವಾ ಹುಟ್ಟು ಅಥವಾ ಸ್ವಂತ ವ್ಯವಸ್ಥೆಯಲ್ಲಿ ಆಡಳಿತ ಮಾಡಿ 75 ವರ್ಷಗಳು ಕಳೆದರೂ ಹಿಂದುಳಿದವರನ್ನು ಅಲ್ಪಸಂಖ್ಯಾತರನ್ನು ಮತ್ತು ಹಿಂದುಳಿದ ಜಾತಿಯನ್ನು ಸುಧಾರಿಸಲು ಆಗಿಲ್ಲ ಅಂದರೆ ನಾಚಿಕೆಯಾಗಬೇಕು. ಒಬ್ಬ ಮನುಷ್ಯನ ಸಾಮಾನ್ಯ ಆಯುಷ್ಯವೇ 60 ವರ್ಷ ಆಗಿರುವುದರಿಂದ ಆದರೆ 75 ವರ್ಷ ಕಳೆದ ಬಾರತದಲ್ಲಿ ಮೀಸಲಾತಿ ಪದ್ದತಿಗಳು ಇನ್ನೂ ಜೀವಂತವಾಗಿಟ್ಟಿದ್ದೇವೆ ಎಂದರೆ 5-6 ದಶಕಗಳ ವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಆತ್ಮ ಸಾಕ್ಷಿ ಅನ್ನುವುದೇ ಇಲ್ಲವೇ. ಕಾಂಗ್ರೆಸ್ ಮತ್ತು ಬಿ.ಜೆ.ಪಿ ಸೇರಿದಂತೆ ಈ ದೇಶವನ್ನಾಳುತ್ತಿರುವ ಪಕ್ಷಗಳು ಮತ್ತು ರಾಜಕಾರಣೀಗಳು ಆತ್ಮ ಸಾಕ್ಷಿಯನ್ನೊಮ್ಮೆ ಮುಟ್ಟಿ ನೋಡಿಕೊಳ್ಳಬೇಕು. ಹಿಂದುಳಿದವರ ಮತ್ತು ಅಲ್ಪ ಸಂಖ್ಯಾತರ ಹೆಸರಿನಲ್ಲಿ ಪ್ರತಿಭಾವಂತರಿಗೆ ಮೋಸ ಮಾಡುತ್ತಿದ್ದೀರಿ ಜೊತೆಗೆ ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೂ ಮೋಸ ಮಾಡುತ್ತಿದ್ದೀರಿ ಏಕೆಂದರೆ ಸ್ಪರ್ಧೆಯಿದ್ದರೆ ಮಾತ್ರ ಗೆಲುವು ಮತ್ತು ಸಂತೋಷ ಸಾಧ್ಯ ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರನ್ನು ಮಾನಸಿಕವಾಗಿ ತುಳಿಯುತ್ತಿದ್ದೀರಿ. ಮತ್ತು ಪ್ರತಿಭಾವಂತರನ್ನ ಹತ್ಯೆ ಮಾಡುತ್ತಿದ್ದೀರಿ. ಹಾಗಾದರೇ ಇದೇ ಸತ್ಯವಲ್ಲವೇ ನವೀನನ ಸಾವಿಗೆ ನಾವೇ ಅಂದರೆ ನಮ್ಮ ವ್ಯವಸ್ಥೆಯೇ ಕಾರಣ ಆತನನ್ನು ರಷ್ಯಾ ಸೈನಿಕರು ದೈಹಿಕವಾಗಿ ಕೊಂದರೆ ನಾವು ಮಾನಸಿಕವಾಗಿ ಕನಸುಗಳನ್ನು ಕೊಂದಿಲ್ಲವೇ ಇಂತಹ ಅನಿಷ್ಟ ಪದ್ಧತಿಗಳನ್ನು ನೀರು ಗೊಬ್ಬರ ಹಾಕಿ ಬೆಳೆಸುತ್ತಿರುವ ರಾಜಕಾರಣಿಗಳನ್ನು ಮತ್ತು ರಾಜಕೀಯ ವ್ಯವಸ್ತೆಯನ್ನು ಬೆಂಬಲಿಸಿವುದೂ ಕೂಡ ಅಪರಾಧವಲ್ಲವೇ? ನವೀನನ ಕನಸುಗಳ ಹತ್ಯೆಯೊಂದಿಗೆ ನಮ್ಮ ವ್ಯವಸ್ಥೆಯ ದುರಂತವು ಕಣ್ಣು ಮುಂದೆ ಬರುತ್ತದೆ. ಇನ್ನು ಎಷ್ಟು ದಿನ ಸಹಿಸಿಕೊಳ್ಳುತ್ತೀರಿ?


Share

ರೇಷ್ಮೆ ಬೆಳೆಗಾರರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಕೋಲಾರದ ರೀರ‍್ಸ್ಗಳು ರಾಮನಗರ ಮಾದರಿಯಲ್ಲಿ ಕೋಲಾರ ರೇಷ್ಮೆ ಗೂಡು ಮಾರಾಟವಾಗಬೇಕು: ರೈತಸೇನೆ ತಾಲ್ಲೂಕು ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್

Share

ಬAಗಾರಪೇಟೆ: ಕೋಲಾರ ಜಿಲ್ಲೆ, ರೇಷ್ಮೆ ಮತ್ತು ಹಾಲಿಗೆ ಬಹಳ ಪ್ರಮುಖವಾಗಿ ಮುಂಚೂಣಿಯಲ್ಲಿದ್ದು, ಜಿಲ್ಲೆಯಲ್ಲಿ ಸಾಕಷ್ಟು ರೈತರು, ರೇಷ್ಮೆ ಬೆಳೆಯನ್ನೇ ವಾಣಿಜ್ಯ ಬೆಳೆಯನ್ನಾಗಿಸಿಕೊಂಡು ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯನ್ನು ಅತಿ ಹೆಚ್ಚಾಗಿ ರೇಷ್ಮೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಜಿಲ್ಲೆಯ ರೇಷ್ಮೆ ಬೆಳೆಗಾರರು ತಿಂಗಳೆಲ್ಲಾ ಕಷ್ಟಪಟ್ಟು ರೇಷ್ಮೆ ಬೆಳೆ ಬೆಳೆದು ಕೋಲಾರ ರೇಷ್ಮೆ ಗೂಡಿನ ಮಾರುಕಟ್ಟೆಗೆ ರೇಷ್ಮೆ ಗೂಡನ್ನು ಮಾರಾಟ ಮಾಡುವುದಕ್ಕೆ ಮಾರುಕಟ್ಟೆಗೆ ರೈತರು ಹೋದರೆ, ರೇಷ್ಮೆ ಬೆಳೆ ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗದೇ ಕಂಗಾಲಾಗುತ್ತಿದ್ದಾರೆ. ಹಾಗೂ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ರೈತ ಸೇನೆ ಒತ್ತಾಯಿಸಿ ರೇಷ್ಮೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಅವರಿಗೆ ಮನವಿ ನೀಡಿದರು.
ಈ ವೇಳೆ ಕರ್ನಾಟಕ ರೈತಸೇನೆ ತಾಲ್ಲೂಕು ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್ ಮಾತನಾಡಿ, ರೈತರು ಬೆಳೆದಂತಹ ರೇಷ್ಮೆ ಗೂಡನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವ ವ್ಯಾಪಾರಸ್ಥರು (ರೀರ‍್ಸ್ಗಳು) ರೈತನು ಬೆಳೆದ ರೇಷ್ಮೆಗೂಡನ್ನು ಮಾರುಕಟ್ಟೆಯಿಂದ ಸ್ಯಾಂಪಲ್ ತೆಗೆದುಕೊಂಡುಹೋಗಿ ಆ ಗೂಡನ್ನು ದಾರ ಬಿಚ್ಚಾಣಿಕೆಗೆ ಹಾಕಿ ಆ ಗೂಡಿನಿಂದ ದಾರ ಬಿಚ್ಚಾಣಿಕೆ ಬಂದರೆ ಮಾತ್ರ ರೇಷ್ಮೆ ಗೂಡನ್ನು ಉತ್ತಮ ಬೆಲೆಗೆ ಕೊಳ್ಳುತ್ತಾರೆ. ಇಲ್ಲವಾದರೆ ಈ ರೇಷ್ಮೆಗೂಡಿನಲ್ಲಿ ಸರಿಯಾಗಿ ದಾರ ಬಿಚ್ಚಾಣಿಕೆ ಬರುವುದಿಲ್ಲವೆಂದು ರೇಷ್ಮೆ ರೈತರ ಮೇಲೆ ಗೂಬೆ ಕೂರಿಸುತ್ತಿದ್ದಾರೆ, ಕೋಲಾರ ಜಿಲ್ಲೆಯ ಲೋಕಲ್ ರೇಷ್ಮೆ ಮಾರುಕಟ್ಟೆಯಲ್ಲಿ ಈ ರೀತಿ ಸ್ಯಾಂಪಲ್ ಚೆಕ್ ಮಾಡುವುದರಿಂದ, ನಿಗಧಿತ ಬೆಲೆಗೆ ವಂಚಿತರಾಗಿ, ರೇಷ್ಮೆ ರೈತರ ಹೊಟ್ಟೆ ಮೇಲೆ ಹೊಡೆಯುವಂತಹ ಕೆಲಸ ರೀರ‍್ಸ್ಗಳು ಮಾಡುತ್ತಿದ್ದಾರೆ. ರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡಿರುವ ಮಾರುಕಟ್ಟೆಯಲ್ಲೊಂದಾದ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರ ರೇಷ್ಮೆಗೂಡಿಗೆ ಗುಣಮಟ್ಟದ ಆಧಾರದಲ್ಲಿ ಬೆಲೆಯನ್ನು ನಿರ್ಧರಿಸಲಾಗುತ್ತಿದೆ. ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸ್ಯಾಂಪಲ್ ಚೆಕ್ ಮಾಡುವ ಅವಕಾಶವಿರುವುದಿಲ್ಲ. ಆಗಾಗಿ ಇದರಿಂದ ಯಾವುದೇ ರೇಷ್ಮೆ ರೈತರಿಗೆ ಅನ್ಯಾಯವಾಗುವುದಿಲ್ಲ.
ಆದಕಾರಣ ಈ ಕೂಡಲೇ ರೇಷ್ಮೆ ಗೂಡುಗಳನ್ನು ಯಾವುದೇ ಕಾರಣಕ್ಕೂ ರೀರ‍್ಸ್ಗಳು ಗೂಡನ್ನು ಸ್ಯಾಂಪಲ್ ತೆಗೆದುಕೊಂಡು ಹೋಗಿ ದಾರ ಬಿಚ್ಚಾಣಿಕೆ ಮಾಡುವುದಕ್ಕೆ ಕೋಲಾರದ ರೇಷ್ಮೆ ಸಹಾಯಕ ವ್ಯವಸ್ಥಾಪಕ ಅಧಿಕಾರಿಗಳು ಹಾಗೂ ರೈತರು ಅವಕಾಶ ಮಾಡಿಕೊಡಬಾರದು ಹಾಗೂ ರೈತರಿಗೆ ರೇಷ್ಮೆ ಗೂಡಿಗೆ ಗುಣಮಟ್ಟದ ಆಧಾರದ ಮೇಲೆ ಬೆಲೆಯನ್ನು ನಿಗಧಿಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೇಣುಗೋಪಾಲಪುರ ಆನಂದ್, ನಾಗೇಶ್‌ಗೌಡ, ನಾರಾಯಣಸ್ವಾಮಿ, ಶ್ರೀನಿವಾಸ್, ಹಾಗೂ ಮುಂತಾದವರು ಹಾಜರಿದ್ದರು.


Share

ಗ್ಯಾಂಡಿ-ಗಾಂಧಿ ಆಗಿರುವ ರೋಚಕ ಸತ್ಯ.

Share

ಸೋನಿಯಾಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇಂದಿರಾ ಮಕ್ಕಳಿಗೆ ‘ಗಾಂಧಿ’ ಅಡ್ಡ ಹೆಸರು ಬರಲು ಕಾರಣವೇನು ? ಇದರ ಸುತ್ತ ಅಂತೆ-ಕಂತೆಗಳ ಕಥೆಗಳು ಸಾಕಷ್ಟು ಹೊರಬಂದಿದೆ. ಕೆಲವರು ಹೇಳುವ ಫಿರೋಜ್‍ನನ್ನು ಮಹಾತ್ಮ ಗಾಂಧಿ ದತ್ತು ಪಡೆದಿದ್ದರು. ನೆಹರು ಮಗಳು ಇಂದಿರಾ ಗಾಂಧಿಯನ್ನು ಪ್ರೀತಿಸಿ ಮದುವೆ ಆಗಿದ್ದರಿಂದ ನೆಹರು ಕುಟುಂಬಕ್ಕೆ ‘ಗಾಂಧಿ’ ಅಡ್ಡ ಹೆಸರು ಬಂದಿದೆ ಅಂತ ವಾದಿಸುವವರ ಸಂಖ್ಯೆಯೂ ಬಹಳ ಇದೆ. ಆದರೆ 2ನೇ ಅಕ್ಟೋಬರ್ 1869 ರಲ್ಲಿ ಹುಟ್ಟಿ ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿ ಮತ್ತು ಹೋರಾಟ ನಂತರದ ಭಾರತಕ್ಕೆ ಆಗಮಿಸಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶಾಂತಿಯುತ ಹೋರಾಟದಿಂದ ಹೆಸರುವಾಸಿಯಾದ ಗಾಂಧಿ ಕುಟುಂಬಕ್ಕೂ ನೆಹರೂ ಆಗಲಿ, ಫಿರೋಜ್ ಕುಟುಂಬಕ್ಕಾಗಿ ಸಂಬಂಧವಿಲ್ಲ. ಗಾಂಧೀಜಿಯವರಿಗೆ ಮಕ್ಕಳು ಇದ್ದು ತಮ್ಮ 36ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದ ನಂತರ ಯಾರನ್ನು ದತ್ತು ಪಡೆಯಲಿಲ್ಲ. ಹಾಗಾದರೆ ಫಿರೋಜ್ ಮುಂದೆ ಅಡ್ಡ ಹೆಸರಾಗಿ ಗಾಂಧಿ ಸೇರಿದ್ದು ಹೇಗೆ ತಿಳಿಯಬೇಕಾದರೆ ಫಿರೋಜ್‍ನ ಇತಿಹಾಸ ತಿಳಿಯಬೇಕು. 12ನೇ ಸೆಪ್ಟೆಂಬರ್ 1912 ರಲ್ಲಿ ಮುಂಬೈನಲ್ಲಿ ಜನಿಸಿದ ಫಿರೋಜ್ ಗುಜರಾತ್ ಮೂಲದ ಪಾರ್ಸಿ ಕುಟುಂಬಕ್ಕೆ ಸೇರಿದವರು. ಈ ಪಾರ್ಸಿಗಳು ಮುಸ್ಲಿಮರಲ್ಲ ಇವರದೊಂದು ಜೋರಾಸ್ಟ್ರಿಯನ್ ಧರ್ಮ ಪರ್ಷಿಯಾ ದೇಶ ಇಸ್ಲಾಂನ ಆಕ್ರಮಣಕ್ಕೆ ಒಳಗಾದಾಗ ಬದುಕು ಕಟ್ಟಿಕೊಳ್ಳುವುದರ ಸಲುವಾಗಿ ಭಾರತಕ್ಕೆ ಬಂದು ಇಲ್ಲಿಯೇ ನೆಲೆ ನಿಂತು ಭಾರತೀಯರಿಗಿಂತ ಹೆಚ್ಚು ಭಾರತೀಯರಾದರು. ಪರ್ಷಿಯಾದಿಂದ ಬಂದಿದ್ದರಿಂದ ‘ಪಾರ್ಸಿ’ಗಳು ಅಂತ ಕರೆಯುತ್ತಿದ್ದರು. ಪಾರ್ಸಿ ಕುಟುಂಬದ ಜೆಹಾಂಗೀರ್ ಫೆರಾಜೋನ್ ಗ್ಯಾಂಡಿ ಮತ್ತು ರತಿಮಾಯಿಯ ಮಗ ಫಿರೋಜ್ ಜೆಹಾಂಗೀರ್ ಗ್ಯಾಂಡಿ ಫಿರೋಜ್ ತಂದೆ ಇಂಜಿನೀಯರ್ ಆಗಿದ್ದರೂ ಈ ಕಾರಣದಿಂದ ಕೆಲಸದ ನಿಮಿತ್ತ ಗುಜರಾತಿನಿಂದ ಮುಂಬೈಗೆ ಬಂದು ನೆಲೆಸಿದರು. 1930 ರಲ್ಲಿ ಫಿರೋಜ್ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಕಾಂಗ್ರೆಸ್ಸಿನ ಯುವ ದಳವಾದ ‘ವಾನರ ಸೇನೆ’ಯ ಸದಸ್ಯರಾದರು. ಇದು ಕೂಡ ತಂದೆಯ ಮರಣಾ ನಂತರ ಉತ್ತರ ಪ್ರದೇಶದ ಅಲಹಾಬಾದ್ ತಾಯಿಯ ಜೊತೆಗೆ ನೆಲೆಸಿದಾಗ ನಡೆದ ಘಟನೆ. ಈ ‘ವಾನರ್ ಸೇನೆ’ ಸಕ್ರಿಯ ನಾಯಕಿ ಇಂದಿರಾ ಅಥವಾ ಜವಾಹರಲಾಲ ನೆಹರೂ ಅವರ ಪ್ರೀತಿಯ ಪ್ರಿಯದರ್ಶಿನಿ ಇಬ್ಬರ ಮಧ್ಯ ಪರಿಚಯವಾಗಿ ಆತ್ಮೀಯತೆ ಬೆಳೆಯುತ್ತದೆ. ಫಿರೋಜ್ ಇಂದಿರಾ ಪ್ರಿಯದರ್ಶಿನಿ ನೆಹರು ಅವರಿಗೆ 16 ವರ್ಷ ಇರುವಾಗಲೇ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಸರಳ ಆಕರ್ಷಕ ಫಿರೋಜ್‍ನ ಪ್ರೇಮದಲ್ಲಿ ಇಂದಿರಾ ಸಿನಿಮೀಯ ರೀತಿಯಲ್ಲಿ ತೇಲುತ್ತಾರೆ. ಇತ್ತ ನೆಹರೂಗೆ ಈ ವಿಷಯದಲ್ಲಿ ಬಾರಿ ವಿರೋಧ ಇರುತ್ತದೆ. ಇವರ ಪ್ರೀತಿಯನ್ನು ಒಪ್ಪುವುದಿಲ್ಲ.

ಈ ಮಧ್ಯ ಭಾರತ ಸ್ವಾತಂತ್ರ್ಯ ಹೋರಾಟವು ತೀವ್ರಗೊಳ್ಳುತ್ತದೆ. ಗಾಂಧಿ, ನೆಹರೂ ಸೇರಿದಂತೆ ಹಲವರು ಹೋರಾಟ ಜೈಲು ಅಂತ ಕುಟುಂಬಗಳಿಂದ ದೂರ ಉಳಿಯುತ್ತಾರೆ. ಇಂದಿರಾನ ಮೇಲಿನ ಪ್ರೀತಿಯಿಂದ ಫಿರೋಜ್ ಮನೆಗೆ ಬರಲು ಪ್ರಾರಂಭಿಸುತ್ತಾನೆ. ಆರೋಗ್ಯದ ಸಮಸ್ಯೆ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇಂದಿರಾ ಅವರ ತಾಯಿ ಕಮಲಾ ನೆಹರು ಅವರ ಆತ್ಮೀಯತೆ ಬೆಳೆಸಿಕೊಂಡು ಅವರ ಸೇವೆ ಮಾಡುತ್ತಾ ಫಿರೋಜ್ ಬಹುಕಾಲ ಮನೆಯಲ್ಲೇ ಕಳೆಯುತ್ತಾರೆ. ನೆಹರು ಅವರ ಮನವಿಯ ಮೇರೆಗೆ ಗಾಂಧೀಜಿಯವರು ಕೂಡ ಫಿರೋಜ್‍ನನ್ನು ಕರೆದು ಬುದ್ಧಿ ಹೇಳುತ್ತಾರೆ. ಆದರೂ ಇಂದಿರಾ ಮತ್ತು ಫಿರೋಜ್ ಅವರ ಮಾತನ್ನು ಒಪ್ಪುವುದಿಲ್ಲ. ಜೊತೆಗೆ 26 ಮಾರ್ಚ್ 1942 ರಲ್ಲಿ ಮದುವೆ ಆಗುತ್ತಾರೆ. ಫಿರೋಜ್ ಗ್ಯಾಂಡಿ ಅವರಿಗೆ ಎಂ.ಕೆ. ಗಾಂಧಿಯವರ ಅಪರಾಧವಾದ ಅಭಿಮಾನ, ಭಕ್ತಿ ಇರುತ್ತದೆ. ಈ ಅಭಿಮಾನ ಮತ್ತು ಭಕ್ತಿ ಸೂಚಕವಾಗಿ ಫಿರೋಜ್ ತನ್ನ ಹೆಸರಿನ ಮುಂದೆ ‘ಗಾಂಧಿ’ ಅಂತ ಸೇರಿಸಿಕೊಳ್ಳುತ್ತಾರೆ. ಇದರಲ್ಲಿ ಒಪ್ಪಿಗೆ ಅಥವಾ ಕಾನೂನಿನ ಮಾನ್ಯತೆ ಇಲ್ಲದಿದ್ದಾಗಲೂ ಭವಿಷ್ಯದಲ್ಲಿ ಫಿರೋಜ್ ಗಾಂಧಿ ಅಂತ ಪ್ರಸಿದ್ಧಿ ಪಡೆಯುತ್ತಾರೆ. ಇವರನ್ನು ನೆಹರು ತಮ್ಮ ಕೊನೆಯ ಕ್ಷಣದವರೆಗೂ ವಿರೋಧಿಸುತ್ತಾ ಬಂದಿದ್ದಾರೆ. ಹಾಗೇ ಫಿರೋಜ್ ಕೂಡಾ ಮೊದಲ ಹಣಕಾಸು ಹಗರಣವನ್ನು ಬೆಳಕಿಗೆ ತಂದ ಕೀರ್ತಿಗೆ ಪಾತ್ರರಾಗಿದ್ದಾರೆ.
ಕಮಲ ನೆಹರೂ ಸಂಬಂಧದ ಬಗ್ಗೆ ಅನುಮಾನಗಳು ನೆಹರೂ ವಿರುದ್ಧ ಹಗರಣಗಳನ್ನು ಬೆಳಕಿಗೆ ತರಲು ಪ್ರಯತ್ನ. ಈ ಎಲ್ಲಾ ಕಾರಣಗಳಿಂದ ಇಂದಿರಾ ಮತ್ತು ಫಿರೋಜ್ ಗಾಂಧಿಯ ಸಂಬಂಧಗಳು ಹಳಸುತ್ತವೆ. ಸಮಾಜವಾದಿ ವಿಚಾರಗಳು ಸ್ವಾತಂತ್ರ್ಯ ಹೋರಾಟದ ಪ್ರಯತ್ನಗಳಲ್ಲೇ ಅಂದರೆ 1930 ರಲ್ಲೇ ‘ಗಾಂಧಿ’ ಹೆಸರನ್ನು ಫಿರೋಜ್ ತನ್ನ ಹೆಸರಿನೊಂದಿಗೆ ಬಳಸಿಕೊಂಡಿರುತ್ತಾನೆ. ಫಿರೋಜ್‍ನನ್ನು ಒಪ್ಪಂದ ನೆಹರೂ ಕುಟುಂಬ ‘ಗಾಂಧಿ’ ಅಡ್ಡ ಹೆಸರನ್ನು ಬಳಸಿಕೊಂಡು ಇಷ್ಟು ವರ್ಷ ರಾಜಕೀಯ ಮಾಡುತ್ತಿದ್ದಾರೆ. ನೆಹರೂ ಕುಟುಂಬ ಬ್ರಾಹ್ಮಣ ಕುಟುಂಬವಾದರೂ ಕೂಡಾ ಫಿರೋಜ್ ಪಾರ್ಸಿ ಆಗಿದ್ದರಿಂದ ಇವತ್ತಿನ ಗಾಂಧಿ ಕುಡಿಗಳು ‘ಪಾರ್ಸಿ’ಗಳೇ ಹೊರತು ಬ್ರಾಹ್ಮಣರಲ್ಲ. ಫಿರೋಜ್ ಉತ್ತಮ ಸಮಾಜವಾದಿ ಚಿಂತಕ, ಭ್ರಷ್ಟಾಚಾರದ ವಿರೋಧಿ 1960ರಲ್ಲಿ ಹೃದಯಾಘಾತದಿಂದ ನಿಧನರಾದರು. ಈಗ ಗಾಂಧಿ ಕುಟುಂಬಕ್ಕೆ ಸಂಬಂಧವಿಲ್ಲದವರು ‘ಗಾಂಧಿ’ ಬಳಸುತ್ತಾರೆ. ಇಂದಿರಾ ಗಾಂಧಿ ಇತಿಹಾಸ ಎಲ್ಲರಿಗೂ ಗೊತ್ತು ಹಾಗಾದರೆ ‘ಗಾಂಧಿ’ ಬಳಸುವುದು ಎಷ್ಟು ಸರಿ ?


Share

ಕರ್ನಾಟಕದಲ್ಲಿ ತಗ್ಗಿದ ಮಳೆ; ಈ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ವರುಣನ ಆರ್ಭಟ

Share

ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದ್ದು, ಪ್ರವಾಹ ಮಟ್ಟವೂ ಇಳಿಕೆಯಾಗುತ್ತಿದೆ. ಹೀಗಾಗಿ ನದಿ ತೀರದ ಜನರು ನಿಟ್ಟುಸಿರು ಬಿಡುವಂತಾಗಿದೆ. ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧರಣ ಮಳೆ, ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.

ಇಂದು ರಾಜಧಾನಿ ಬೆಂಗಳೂರಿನಲ್ಲಿಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು, ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾದರೆ, ಮಲೆನಾಡು ಭಾಗದ ಜಿಲ್ಲೆಗಳಲ್ಲೂ ಮಳೆ ಸುರಿಯಲಿದೆ. ಜೊತೆಗೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.ರಾಜ್ಯದ ಮಲೆನಾಡು ಭಾಗದಲ್ಲಿ ಇಂದು ಕೊಂಚ ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಉಡುಪಿ ಜಿಲ್ಲೆಯಾದ್ಯಂತ ಅಧಿಕ ಮಳೆಯಾದರೆ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆ, ದಾವಣಗೆರೆ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ.

ಇನ್ನು, ಉತ್ತರ ಒಳನಾಡಿನಲ್ಲೂ ಸಹ ಸಾಧಾರಣ ಮಳೆಯಾಗಲಿದೆ. ಬೀದರ್, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ವಿಜಯನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ನಿರೀಕ್ಷೆ ಇದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮುಂದಿನ ಕೆಲ ದಿನಗಳ ಕಾಲ ದೇಶದ ಕೆಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಯಥೇಚ್ಛ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ದಕ್ಷಿಣ ಗುಜರಾತ್​ ಕರಾವಳಿ ಮತ್ತು ಉತ್ತರ ಕೇರಳ ಕರಾವಳಿಯಲ್ಲಿ ಅಧಿಕ ಮಳೆಯಾಗಲಿದೆ. ಈ ಚಂಡಮಾರುತದ ಪ್ರಭಾವ ಉತ್ತರ ಪಾಕಿಸ್ತಾನ ಮತ್ತು ಪಂಜಾಬ್​ಗೂ ತಟ್ಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಜುಲೈ 30 ರವರೆಗೆ ಭಾರೀ ಮಳೆ ಮುಂದುವರೆಯಲಿದೆ.ಇನ್ನು, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲೂ ಜುಲೈ 30ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ಜುಲೈ 31ರವರೆಗೆ ವರುಣನ ಆರ್ಭಟ ಇರಲಿದೆ. ಪಶ್ಚಿಮ ಬಂಗಾಳದಲ್ಲಿ ಜುಲೈ 29ರಂದು, ಜಾರ್ಖಂಡ್​​ನಲ್ಲಿ ಜುಲೈ 30ರಂದು, ಛತ್ತೀಸ್​ಗಢದಲ್ಲಿ ಜುಲೈ 30ರಂದು ಮತ್ತು ಪೂರ್ವ ಮಧ್ಯ ಪ್ರದೇಶದಲ್ಲಿ ಜುಲೈ 31ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶ ರಾಜ್ಯಗಳಲ್ಲಿ ಆಗಸ್ಟ್​ 1ರವರೆಗೆ ಯಥೇಚ್ಛವಾಗಿ ಮಳೆ ಸುರಿಯಲಿದೆ. ಜುಲೈ 30ರಿಂದ ಮಳೆಯ ಪ್ರಮಾಣ ಅಧಿಕವಾಗಲಿದೆ. ಪಶ್ಚಿಮ ಮಧ್ಯಪ್ರದೇಶದಲ್ಲಿ ಆಗಸ್ಟ್​ 1ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಜೊತೆಗೆ ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಆಗಸ್ಟ್​ 1ರವರೆಗೆ ಮಳೆರಾಯನ ಅಬ್ಬರ ಇರಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್​ ಘೋಷಿಸಲಾಗಿದೆ


Share

ಸಿಎಂ ಬಸವರಾಜ ಬೊಮ್ಮಾಯಿ ಬದುಕಿನ ಪಯಣ

Share

ಬಸವರಾಜ ಬೊಮ್ಮಾಯಿ ಕರ್ನಾಟಕದ ಒಬ್ಬರು ರಾಜಕಾರಣಿ. ಭಾರತೀಯ ಜನತಾ ಪಕ್ಷದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ. ಜುಲೈ 28, 2021 ರಂದು ಬಿ.ಎಸ್. ಯಡಿಯೂರಪ್ಪರವರ ನಂತರ ಬೊಮ್ಮಾಯಿ ಕರ್ನಾಟಕದ ೨೩ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಸವರಾಜ ಸೋಮಪ್ಪ ಬೊಮ್ಮಾಯಿ ಕರ್ನಾಟಕದ ಮಾಜಿ ಸಿಎಂ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್. ಆರ್. ಬೊಮ್ಮಾಯಿ-ಗಂಗಮ್ಮ ಅವರ ಪುತ್ರ. 1960 ರ ಜ.28 ರಂದು ಜನಿಸಿದ ಬೊಮ್ಮಾಯಿ ಬಿ.ವಿ ಬೊಮ್ಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದ ಬೊಮ್ಮಾಯಿ ಮೂಲತಃ ವೃತ್ತಿಯಲ್ಲಿ ಕೃಷಿಕ ಮತ್ತು ಕೈಗಾರಿಕೋದ್ಯಮಿ.

ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುವ ಅವರು, ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಭಾರತದಲ್ಲೇ ಮೊದಲ ಶೇ.100 ರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ರಾಯಕೀಯ ಜೀವನ

ಅವರು ಜನತಾದಳದಿಂದ ತಮ್ಮ ರಾಜಕೀಯವನ್ನು ಪ್ರಾರಂಭಿಸಿದರು.
1998 ಹಾಗೂ 2004 ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು.
2008 ರಲ್ಲಿ ಜನತಾದಳವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
2008 ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು. ಬೊಮ್ಮಾಯಿ ಅವರು ಈ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಜೆ. ಹೆಚ್. ಪಟೇಲ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವವನ್ನು ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ.
ಯಡಿಯೂರಪ್ಪ ಅವರ ಸಂಪುಟದಲ್ಲಿ ಗೃಹ ಖಾತೆಯನ್ನು ನಿರ್ವಹಿಸಿ ಅನುಭವ ಹೊಂದಿರುವ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೇರಿದರು.
ಜನತಾದಳದಿಂದ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್ ಆರ್ ಬೊಮ್ಮಾಯಿ) ಅವರು ಮುಖ್ಯಮಂತ್ರಿಯಾಗಿದ್ದ (1988-89) 32-33 ವರ್ಷಗಳ ನಂತರ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದಾರೆ.


Share

ಕನ್ನಡ ಚಿತ್ರರಂಗದ ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ!

Share

ಅನಾರೋಗ್ಯದಿಂದ ಬಳಲುತ್ತಿದ್ದ  ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ(76) ನಿಧನರಾಗಿದ್ದಾರೆ.

ಕಳೆದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟಿ ಜಯಂತಿ ಎರಡು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ರಾತ್ರಿ ಈ ಸಮಸ್ಯೆ ಉಲ್ಭಣಗೊಂಡು ಅವರು ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

1945ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಜಯಂತಿಯವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ. ಮನೆಯಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಇವರ ತಂದೆ- ತಾಯಿಗಳು ವಿಚ್ಚೇದನ ಪಡೆದ ಕಾರಣ ಜಯಂತಿ ತಮ್ಮ ತಾಯಿಯ ಜೊತೆ ಮದ್ರಾಸ್‍ನಲ್ಲಿ ಬೆಳೆದರು.

1968ರಲ್ಲಿ ‘ಜೇನುಗೂಡು’ ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಪ್ರವೇಶಿಸಿದ್ದ ನಟಿ ಜಯಂತಿ ಕನ್ನಡದ ಒಟ್ಟು 190 ಸಿನಿಮಾ ಸೇರಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿನಯ ಶಾರದೆ ಎನಿಸಿಕೊಂಡಿದ್ದರು. ಇವರು ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಹೀಗೆ ಆರು ಭಾಷೆ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತಿ ಹೊಂದಿದ್ದರು.

ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತ್ತು, ಮಸಣದ ಹೂವು, ಆನಂದ್, ಟುವಿ ಟುವಿ ಟುವಿ ಚಿತ್ರಗಳಿಗೆ ಜಯಂತಿ ರಾಜ್ಯ ಪ್ರಶಸ್ತಿ ಪಡೆದಿದ್ದ ನಟಿ ಜಯಂತಿ, ‘ಮಿಸ್ ಲೀಲಾವತಿ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.

ಜಯಂತಿ ನಿಧನದಿಂದ ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿದೆ. ಅಭಿನಯ ಶಾರದೆ ಕಳೆದುಕೊಂಡ ಸ್ಯಾಂಡಲ್‌ವುಡ್‌ನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.


Share

ಶೌಚಾಲಯ ನಿರ್ಮಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋರಾಟ

Share

 

ಯಾದಗಿರಿ ಜಿಲ್ಲೆಯ ಶಹಪುರ್ ತಾಲೂಕಿನ ಸಗರ ಗ್ರಾಮದ ಹೆಣ್ಣು ಮಕ್ಕಳು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಮಹಿಳೆಯರಿಗೆ ಶೌಚಾಲಯ ಸುಮಾರು ವರ್ಷಗಳಿಂದ ಸಮಸ್ಯೆ ಇದ್ದು ಗ್ರಾಮ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಶಹಪುರ್ ತಶೀಲ್ದಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋರಾಟ ಮಾಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಮಹೇಶಗೌಡ ಸುಬೇದಾರ್ ಕಾರ್ಯಧ್ಯಕ್ಷರು ಅನೀಫ್ ಹತ್ತಿಕುಣಿ ಚಂದಪ್ಪ ಗಾಯಿ ಶರಣು ಉಳ್ಳಿ ಕಲ್ಲಪ್ಪ ಸತ್ಯಮಪೇಟ ಸಗರ್ ಗ್ರಾಮದ ಮಹಿಳೆಯರು ಭಾಗವಹಿಸಿ ಧರಣಿ. ವರದಿ : ಶಂಕರ ಗೌಡ ಯಾದಗಿರಿ


Share

Investor Success Story: 25 ವರ್ಷಕ್ಕೇ ಕೋಟ್ಯಧಿಪತಿಯಾದ ಈ ಯುವಕನ ಬಳಿ ಸ್ವಂತ ಕಾರಿಲ್ಲ; ಅರುಣ್ ಹೇಳಿದ ಹೂಡಿಕೆ ಸೂತ್ರ

Share

“ಇಂಗ್ಲಿಷ್ ಹಾಗೂ ಗಣಿತದ ಮೇಲೆ ಗಮನ ಕೊಡು. ಯಾವುದೇ ಕಾರಣಕ್ಕೂ ಷೇರು ಮಾರ್ಕೆಟ್​ ಕಡೆ ತಲೆ ಕೂಡ ಹಾಕಬೇಡ,” – ಈ ಎರಡು ಸಲಹೆಗಳನ್ನು ಬಂಗಾಲಿಗಳು ತಮಗಿಂತ ಕಿರಿಯರಿಗೆ ನೀಡುತ್ತಾರೆ. ಮಕ್ಕಳು ಶಾಲೆಯಲ್ಲಿ ಇರುವಾಗಲೇ ಅವರನ್ನು ಹೀಗೆ ಬೆಳೆಸಲಾಗುತ್ತದೆ. ಈ ಕಾರಣಕ್ಕೆ ಷೇರು ಮಾರ್ಕೆಟ್​ ಅಂದರೆ ಬಂಗಾಲಿಗಳಲ್ಲಿ ಒಂದು ಭಯ ಹಾಗೇ ಉಳಿದುಹೋಗುತ್ತದೆ. ಆದರೆ 32 ವರ್ಷದ ಅರುಣ್ ಮುಖರ್ಜಿ ಮಾತ್ರ ಬೇರೆಯದೇ ದಾರಿಯನ್ನು ಆರಿಸಿಕೊಂಡು, ಇವತ್ತಿಗೆ ಯಶಸ್ವಿಯಾಗಿ ಕಣ್ಣೆದುರು ನಿಂತಿದ್ದಾರೆ. ತಮ್ಮ ಮಗನಿಗೆ ಒಳ್ಳೆ ಇಂಗ್ಲಿಷ್ ಕಲಿಸಬೇಕು ಅನ್ನೋ ಕಾರಣಕ್ಕೆ ಅರುಣ್ ಪೋಷಕರು ಪ್ರತಿ ನಿತ್ಯ ಇಂಗ್ಲಿಷ್ ಪತ್ರಿಕೆ ಓದಿಸುತ್ತಿದ್ದರು. ಈ ಮೂಲಕವೇ ಷೇರು ಮಾರುಕಟ್ಟೆಗೆ ಪರಿಚಯವಾದರು. ತಮಗೆ ಎಲ್ಲರೂ ಹೇಳುತ್ತಾ ಬಂದಿದ್ದ ಸಲಹೆಗಳನ್ನೆಲ್ಲ ಮೀರಿ ಆ ಕಡೆಗೆ ಆಕರ್ಷಿತರಾದರು.

“ಬೇರೆಲ್ಲರಂತೆ ನನ್ನ ತಂದೆ ಕೂಡ ತಮ್ಮ ಹಿರಿಯ ಮಗನಿಗೆ ಅಸ್ಖಲಿತ ಇಂಗ್ಲಿಷ್ ಬರುವಂತೆಯೇ ಯೋಚಿಸಿದವರು. ಮನೆಗೆ ತರಿಸುತ್ತಿದ್ದ ಬಿಜಿನೆಸ್ ನ್ಯೂಸ್ ಪೇಪರ್​ಗಳನ್ನು ಓದುವಂತೆ ಹೇಳುತ್ತಿದ್ದರು. ಒಂದು ದಿನ ದಿನಪತ್ರಿಕೆ ಓದುತ್ತಾ ಇದ್ದೆ. Excel sheetನಂಥದ್ದನ್ನು ನೋಡುವಾಗ ಅಲ್ಲಿ ನಿಂತುಬಿಟ್ಟೆ. ಅದೇನು ಅಂತ ಕೇಳಿದಾಗ, ಸ್ಟಾಕ್ ಬೆಲೆಗಳು ಅಂತ ಹೇಳಲಾಯಿತು,” ಎನ್ನುವುದನ್ನು ನೆನಪಿಸಿಕೊಳ್ಳುತ್ತಾರೆ ಮುಖರ್ಜಿ. ಆದರೆ ಅರುಣ್ ಅವರ ತಂದೆ ಸಲಹೆ ಏನಾಗಿತ್ತೆಂದರೆ, ಷೇರು ಮಾರ್ಕೆಟ್​ನಲ್ಲಿ ಶೇ 90ರಷ್ಟು ಹೂಡಿಕೆದಾರರು ಹಣ ಕಳೆದುಕೊಳ್ಳುತ್ತಾರೆ ಎನ್ನುವುದಾಗಿತ್ತು. “ನನ್ನಲ್ಲೊಂದು ಕ್ರಾಂತಿಕಾರಿ ಆಲೋಚನೆ ಇತ್ತು. ಬಹುತೇಕರು ದೊಡ್ಡ ಸಮಯವನ್ನು ಎಲ್ಲಿ ಕಳೆದುಕೊಳ್ಳುತ್ತಾರೋ ಅಲ್ಲಿ ಗೆಲುವು ಸಾಧಿಸಬೇಕು ಎಂಬುದೇ ನನ್ನ ಪಾಲಿಗೆ ಸ್ಫೂರ್ತಿಯಾಯಿತು,” ಎನ್ನುತ್ತಾರೆ ಅರುಣ್ ಮುಖರ್ಜಿ.

16ನೇ ವಯಸ್ಸಿಗೇ ಸಿದ್ಧತೆ
ಇತರ ಗೆಳೆಯರು ಲವ್ ಅಂದುಕೊಂಡು ಹುಡುಗಿಯರ ಕಡೆಗೊಂದು ಬೆರಗಿನ ನೋಟ ಬೀರುತ್ತಾ ಇರುವಾಗಲೇ, ಅಂದರೆ 16 ವರ್ಷಗಳ ಹಿಂದೆ ಅರುಣ್ ಮುಖರ್ಜಿ ಮಾತ್ರ ಪ್ರತಿ ನಿತ್ಯ ವಾಣಿಜ್ಯ ನಿಯತಕಾಲಿಕೆಗಳನ್ನು ಓದುತ್ತಿದ್ದರು ಹಾಗೂ ಸ್ಟಾಕ್, ಷೇರು ಮಾರುಕಟ್ಟೆ ಹೇಗೆ ಕೆಲಸ ಮಾಡುತ್ತದೆ ಎಂದು ಕಲಿಯಲು ಆರಂಭಿಸಿದ್ದರು. ಈ ಪರಿಶ್ರಮದಿಂದಲೇ ಅರುಣ್​ಗೆ ಕ್ಯಾಪ್ಲಿನ್ ಪಾಯಿಂಟ್, ಅವಂತಿ ಫೀಡ್ಸ್, ಸಿಂಫೋನಿ, ಸೆರಾ ಸ್ಯಾನಿಟಿವೇರ್, ಮಿಂಡಾ ಇಂಡಸ್ಟ್ರೀಸ್ ಹಾಗೂ ಹೆಸ್ಟರ್ ಬಯೋದಂಥ ಸ್ಟಾಕ್​ಗಳನ್ನು ಗುರುತಿಸಲು ನೆರವಾಯಿತು ಮತ್ತು ಅರುಣ್​ಗೆ 25 ವರ್ಷದೊಳಗೆ ಕೋಟ್ಯಧಿಪತಿ ಆಗಲು ಕಾರಣವಾಯಿತು. ಸದ್ಯಕ್ಕೆ ಅವರು ಲಿಸ್ಟೆಡ್ ಕಂಪೆನಿಗಳು ಮತ್ತು ಸ್ಟಾರ್ಟ್​ ಅಪ್​ಗಳ ಕಂಪೆನಿಗಳಲ್ಲಿ ಹೂಡಿಕೆ ಮಾಡುತ್ತಾರೆ. ದೇಶದಾದ್ಯಂತ ಹಾಗೂ ಹೊರದೇಶಗಳಲ್ಲೂ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.

ಹೂಡಿಕೆ ಮಾಡುವಾಗ ಅನುಸರಿಸುವ ಪದ್ಧತಿ ಏನು?
ನಾನು ವಿಶ್ವದಾದ್ಯಂತ ಪ್ರಯಾಣ ಮಾಡ್ತೀನಿ, ಬುದ್ಧಿವಂತ ಜನರನ್ನು ಭೇಟಿ ಆಗ್ತೀನಿ. ಅವರೊಂದಿಗೆ ಚರ್ಚೆ ಮಾಡ್ತಿರ್ತೀನಿ. ನನ್ನ ಸಂಶೋಧನೆಯಲ್ಲಿ ಸೂಕ್ತ ಎಂದು ಕಂಡುಬರುತ್ತದೋ ಅದನ್ನು ಸೇರ್ಪಡೆ ಮಾಡುತ್ತೇನೆ. ಈ ರೀತಿಯ ವಿಚಾರ ವಿನಿಮಯ ನನ್ನ ಪಾಲಿಗೆ ಅದ್ಭುತಗಳನ್ನು ಮಾಡಿವೆ ಎನ್ನುತ್ತಾರೆ ಮುಖರ್ಜಿ. ಆದರೆ ಕೆಲವು ಮ್ಯಾನೇಜ್​ಮೆಂಟ್​ನವರು ಉತ್ಪ್ರೇಕ್ಷೆ ಮಾಡಿ ಹೇಳುವಂಥ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಹ ಸೇರಿಸುತ್ತಾರೆ.

ಮುಖರ್ಜಿ ತಮ್ಮದೇ ಸ್ವಂತದ್ದನ್ನು ಮಾಡಲು ಬಯಸುತ್ತಾರೆ. ಹೂಡಿಕೆದಾರರ ಮಧ್ಯೆ ಅರುಣ್​ಗೆ ಭಾರೀ ಫಾಲೋಯಿಂಗ್ ಇದೆ. ಟ್ವಿಟ್ಟರ್​ನಲ್ಲಿ 80 ಸಾವಿರಕ್ಕೂ ಹೆಚ್ಚು ಫಾಲೋವರ್ ಇದ್ದಾರೆ. ಈಗ ಬಂಗಾಲಿಗಳು, ಯಾರು ತಮ್ಮ ಕುಟುಂಬದವರಿಂದ ಉತ್ತೇಜನ ಸಿಕ್ಕಿರಲ್ಲವೋ ಅಂಥವರು ತಮ್ಮ ಪೋರ್ಟ್​ಫೋಲಿಯೋ ವಿಚಾರದಲ್ಲಿ ಗೊಂದಲಗಳಿದ್ದಲ್ಲಿ ಅರುಣ್ ಅವರ ಸಲಹೆ ಕೇಳುತ್ತಾರೆ.

ಅಮದಹಾಗೆ, ವಯಸ್ಸು ಮುಖರ್ಜಿ ಅವರ ಪರವಾಗಿದೆ. ಆದ್ದರಿಂದ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೆದರುವುದಿಲ್ಲ. ಉತ್ತಮ ತಂಡ ಹಾಗೂ ದೃಷ್ಟಿಕೋನ ಇರುವ ತಂಡ ಇರುವ ಸಂಸ್ಥೆಗಳ ಹುಡುಕಾಟ ನಡೆಸುತ್ತಾರೆ. ಸ್ಟಾರ್ಟ್ ಅಪ್ಸ್ ಮತ್ತು ಅನ್​ಲಿಸ್ಟೆಡ್ ಕಂಪೆನಿಗಳಲ್ಲಿ ಸಿಕ್ಕಾಪಟ್ಟೆ ಹೂಡಿಕೆ ಮಾಡುತ್ತಾರೆ. ಲಿಸ್ಟೆಡ್ ಕಂಪೆನಿಗಳಿಗಿಂತ ಹೆಚ್ಚಾಗಿ ಅನ್​ಲಿಸ್ಟೆಡ್​ನಲ್ಲೇ ಮುಖರ್ಜಿ ಅವರ ಹೂಡಿಕೆ ಹೆಚ್ಚಾಗಿದೆ. ಇನ್ನು ಅರುಣ್ ಹೇಳುವಂತೆ, ಆರಂಭದ ತಪ್ಪುಗಳಿಂದ ಪಾಠ ಕಲಿಯುತ್ತೇವೆ. ಅದನ್ನು ಪುನರಾವರ್ತನೆ ಮಾಡಬಹುದು, ಅಷ್ಟೇ ಎನ್ನುತ್ತಾರೆ. ಬುದ್ಧಿವಂತ ಹೂಡಿಕೆದಾರ ಯಾವಾಗಲೂ ಏರಿಕೆ ಆಗುವ ಆಸ್ತಿಗಳ ಮೇಲೆ ಹೂಡಿಕೆ ಮಾಡುತ್ತಾನೆ ಹೊರತು ಇಳಿಕೆ ಆಗುವುದರ ಮೇಲಲ್ಲ ಎನ್ನುತ್ತಾರೆ.

ಈಗಲೂ ಅರುಣ್ ಬಳಿ ಸ್ವಂತ ಕಾರಿಲ್ಲ
ಆ ಕಾರಣಕ್ಕೆ ಇಂದಿಗೂ ನನ್ನ ಬಳಿ ಸ್ವಂತ ಕಾರಿಲ್ಲ. ಮನೆ ಎಂಬುದು ಅಗತ್ಯ. ನನ್ನ ಬಳಿ ಹೆಚ್ಚು ಮನೆಗಳಿವೆ. ಹೊಸ ಮನೆ ನನಗೆ ಹೆಚ್ಚು ಸ್ಥಳಾವಕಾಶ ಹಾಗೂ ವಿಶ್ರಾಂತಿ ನೀಡುತ್ತದೆ. ಆದ್ದರಿಂದ ನನ್ನ ಗುರಿಯು ಬೆಲೆ ಹೆಚ್ಚಳ ಆಗುವ ಆಸ್ತಿಗಳ ಕಡೆಗೆ ಇರುತ್ತದೆ ಎನ್ನುತ್ತಾರೆ.

ಆರಂಭದ ಹೂಡಿಕೆದಾರರಿಗೆ ಸಲಹೆ ಏನು?
ಈಗಿನ ತಲೆಮಾರು ನೋಟು ನಿಷೇಧದ ನಂತರ ಬ್ಯಾಂಕಿನ ಎಫ್​ಡಿಯಲ್ಲಿ ಹಣ ಹಾಕುತ್ತಿಲ್ಲ. ಒಂದು ಕಂಪ್ಯೂಟರ್ ಇಟ್ಟುಕೊಂಡು ಮಾಡುವ ಬಿಜಿನೆಸ್​ ಕೂಡ ಆಕರ್ಷಕವಾಗಿದೆ. ಆ ಲಕ್ಷಣಗಳು ಕಾಣುತ್ತಿವೆ. ಯಾಕೆ ನಿವೃತ್ತಿ ಆಗುವುಕ್ಕೆ 60ರ ತನಕ ಕಾಯಬೇಕು, 40ನೇ ವಯಸ್ಸಿನಲ್ಲೇ ಆಗಬಹುದಲ್ಲಾ? ಶ್ರೀಮಂತರಾಗಿ ನಿವೃತ್ತರಾಗಲು ಈಕ್ಷಿಟಿ ಷೇರು ಸರಿಯಾದ ದಾರಿ, ಬೇಗ ರಿಟೈರ್ ಆಗಿ ಎನ್ನುವುದು ಅರುಣ್ ಮಾತು.

ಈಕ್ವಿಟಿಯೇ ಊಟ, ನಿದ್ರೆ ಎಲ್ಲವೂ
“ದೀರ್ಘಾವಧಿಯ ಬಂಡವಾಳ ಲಾಭದ ಪ್ರಮಾಣ ಕೇವಲ ಶೇ 10ರಷ್ಟು ಮಾತ್ರ. 26 ಪರ್ಸೆಂಟ್​ನ ಕಾಂಪೌಂಡ್​ ಬೆಳವಣಿಗೆಯು ನಿಮ್ಮ ಸಂಪತ್ತನ್ನು 10 ವರ್ಷಗಳಲ್ಲಿ 10 ಪಟ್ಟು ಹೆಚ್ಚಿಸುತ್ತದೆ ಮತ್ತು ಇದು ಹಣದುಬ್ಬರವನ್ನು ಮೀರಿ ಬೆಳೆದಿರುತ್ತದೆ. ನೀವು ಸರಿಯಾಗಿ ಹೂಡಿಕೆ ಮಾಡಲು ಸಾಧ್ಯವಾದರೆ 30 ವರ್ಷಗಳಲ್ಲಿ 1000 ಪಟ್ಟು ಗಳಿಸುವುದೂ ದೊಡ್ಡ ವಿಷಯವಲ್ಲ. ವಿಶ್ವದ ಯಾವುದೇ ಆಸ್ತಿ ಕ್ಲಾಸ್ ಆ ಪ್ರಮಾಣದ ಸಂಪತ್ತನ್ನು ಸೃಷ್ಟಿಸಲು ಸಾಧ್ಯವಿಲ್ಲ. ನೀವು ಮಾಸಿಕ ಸ್ಟಾಕ್ ಎಸ್‌ಐಪಿ ಮಾಡುತ್ತೀರಿ ಅಥವಾ ಲಾಭಾಂಶವನ್ನು ಮತ್ತೆ ಹೂಡಿಕೆ ಮಾಡುತ್ತೀರಿ ಅಂತಾದರೆ ಇದೆಲ್ಲವೂ ನಿಮ್ಮ ಪೋರ್ಟ್​ ಫೋಲಿಯೊವನ್ನು ಅಂತಹ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಅದು ನೀವು ಸಹ ಅರಿಯಬಹುದು,” ಎಂದು ಅರುನ್ ಹೇಳುತ್ತಾರೆ.

ಅಂದಹಾಗೆ, ಈ ಲೆಕ್ಕಾಚಾರಗಳನ್ನೆಲ್ಲ ಬಾಲ್ಯದ ಗಣಿತಶಾಸ್ತ್ರದ ಪಾಠಗಳಲ್ಲಿ ಕಲಿತಿರುತ್ತೀರಿ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.


Share

ಪಂಜಾಬ್ ರಾಜಕೀಯ ಬೇಗುದಿ ಉಲ್ಬಣ: ಸೋನಿಯಾ, ರಾಹುಲ್ ಗಾಂಧಿ ಭೇಟಿ ಮಾಡಿದ ನವಜೋತ್ ಸಿಂಗ್ ಸಿಧು

Share

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದು ಇಂದು ದೆಹಲಿಯಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದಾರೆ.

ಪಂಜಾಬ್ ಸಿಎಂ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಮತ್ತು ಮಾಜಿ ಸಚಿವ ನವಜೋತ್‌ ಸಿಂಗ್‌ ಸಿಧು ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತ್ಯ ಹಾಡಲು ಕೊನೆಗೂ ಸಂಧಾನ ಸೂತ್ರ ಸಿದ್ಧಪಡಿಸಿದ್ದು, ಈ ಹಿನ್ನೆಲೆಯಲ್ಲಿ ಸಿಧು ಅವರಿಗೆ ಹೈಕಮಾಂಡ್ ಬುಲಾವ್ ನೀಡಿತ್ತು.

ಈ ಹಿನ್ನೆಲೆಯಲ್ಲಿ ಇಂದು ದೆಹಲಿಯ ನಿವಾಸದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರನ್ನು ನವಜೋತ್ ಸಿಂಗ್ ಸಿಧು ಭೇಟಿ ಮಾಡಿದ್ದಾರೆ.ಈ ವೇಳೆ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಕೂಡ ಉಪಸ್ಥಿತರಿದ್ದರು.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಂಜಾಬ್‌ನಲ್ಲಿ ನಡೆಯುತ್ತಿರುವ ಭಿನ್ನಮತಕ್ಕೆ ಕೊನೆಗೂ ಪೂರ್ಣ ವಿರಾಮ ಬೀಳುವ ಸಾಧ್ಯತೆಯಿದೆ. ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ (ಪಿಪಿಸಿಸಿ) ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ನೇಮಕ ಮಾಡಲು ಕಾಂಗ್ರೆಸ್‌ ವರಿಷ್ಠರ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ


Share