POST

ಪ್ರಾರಂಭಿಕರ ಗುಂಪುರ ಪವನಮುಕ್ತಾಸನ ಸರಣಿ

ಪವನಮುಕ್ತಾಸನ ಸರಣಿಯ ಆಸನಗಳು ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮಕಾರೀ ಪ್ರಭಾವ ಉಂಟುಮಾಡುತ್ತವೆ. ಈ ಸರಣಿಯ ಆಸನಗಳು ಅಭ್ಯಾಸದ ಮೂಲಕ ದೈಹಿಕ ಹಾಗೂ ಮಾನಸಿಕ ಅಸಮತೋಲನಗಳ ನಿವಾರಣೆಗೆ ಮತ್ತು ಆರೋಗ್ಯ ರಕ್ಷಣೆಗೆ ಉಪಯುಕ್ತ ಸಾಧನಗಳಾಗಿವೆ. ಈ ಸರಣಿಯು ಬಿಹಾರ್ ಯೋಗ ವಿದ್ಯಾಲಯ ಮತ್ತು ಪರಮಹಂಸ ಸತ್ಯಾನಂದ ಬೋಧನೆಯ ಅಮೂಲ್ಯ ಕೊಡುಗೆ. ಹಠಯೋಗದಲ್ಲಿ ಬೋಧಿಸಲಾಗುವ ಪ್ರಾಥಮಿಕ ಅನುಷ್ಠಾನ ಯೋಗ್ಯ ಗುಂಪಿಗೆ ಈ ಸರಣಿಯು ಸೇರಿದೆ. ಯೋಗ ಜೀವನಕ್ಕೆ ಬಹು ಭದ್ರ ತಳಹದಿಯನ್ನು ಒದಗಿಸುವ ಸರಣಿಯಾಗಿ ಇದು ಅತ್ಯವಶ್ಯವಾಗಿದೆ. ಆಸನದ ಅರ್ಥ ತಿಳಿಯಲು ಪವನಮುಕ್ತಾಸನವು ಅಮೂಲ್ಯ ಸಾಧನವಾಗಿದ್ದು, ದೇಹದ ಚಲನವಲನದ ಬಗ್ಗೆ ಮತ್ತು ನಮ್ಮ ಅಸ್ತಿತ್ವದ ವಿವಿಧ ಪಾತಳಿಗಳಲ್ಲಿ (ಮಟ್ಟಗಳಲ್ಲಿ) ಉಂಟಾಗುವ ಪರಿಣಾಮಗಳ ಬಗ್ಗೆ ತೀವ್ರಗಮನ ಹರಿಸುವಲ್ಲಿ ಇದು ಸಹಕಾರಿಯಾಗಿದೆ. ಇದು ಎಲ್ಲ ಪ್ರಮುಖಕೀಲುಗಳನ್ನು ಮುಕ್ತಗೊಳಿಸುತ್ತದೆ ಮತ್ತು ದೇಹದ ಸ್ನಾಯುಗಳನ್ನು ಸಡಿಲಿಸುತ್ತದೆಯಾದ್ದರಿಂದ ಒಂದು ಪೂರ್ವ ಸಿದ್ಧತಾ ಆಸನವಾಗಿ ಇದು ಬಹಳ ಉಪಯುಕ್ತ. ಈ ಸರಣಿಯ ಆಸನಗಳನ್ನು ಯಾರು ಬೇಕಾದರೂ ಮಾಡಬಹುದು ಹೊಸಬರಿರಬಹುದು ಇಲ್ಲವೇ ನುರಿತವರಾಗಿರಬಹುದು. ಚಿಕ್ಕವರಿರಬಹುದು ಇಲ್ಲವೇ ವಯಸ್ಸಾದವರಿರಬಹುದು ಮತ್ತು ಖಾಯಿಲೆಯವರು ಅಥವಾ ಖಾಯಿಲೆಯಿಂದ ಚೇತರಿಸಿಕೊಳ್ಳುವವರೂ ಆಗಿರಬಹುದು. ಈ ಆಸನಗಳ ಅಭ್ಯಾಸವು ಸರಳ, ಆರಾಮದಾಯಕ ಮತ್ತು ಸುಲಭ ಎಂಬ ಕಾರಣಕ್ಕಾಗಿ ಇವುಗಳನ್ನು ಉಪೇಕ್ಷೆ ಮಾಡಕೂಡದು ಮತ್ತು ಲಘುವಾಗಿ ಪರಿಗಣಿಸಕೂಡದು.
ಈ ಆಸನಗಳನ್ನು ಸಂಸ್ಕೃತದಲ್ಲಿ ಸೂಕ್ಷö್ಮವ್ಯಾಯಾಮ ಎಂದು ನಿರ್ದೇಶಿಸಲಾಗಿದೆ. ಪವನ ಎಂದರೆ ‘ವಾಯು’ ಅಥವಾ ‘ಪ್ರಾಣ’ ಎಂದರ್ಥ. ಮುಕ್ತ ಎಂದರೆ ಬಿಡುಗಡೆ. ಆಸನ ಎಂದರೆ ಭಂಗಿ. ಆದ್ದರಿಂದ ಪವನಮುಕ್ತಾಸನ ಎಂದರೆ ದೇಹ ಮತ್ತು ಮನಸ್ಸಿನಲ್ಲಿ ಚೈತನ್ಯದ ಮುಕ್ತ ಪ್ರವಾಹಕ್ಕೆ ಅಡ್ಡಿ ಉಂಟುಮಾಡುವ ತಡೆಗಳ ನಿವಾರಣೆ ಮಾಡುವಂಥ ಆಸನಗಳ ಗುಂಪು. ಕೆಲವೊಮ್ಮೆ ನಮ್ಮ ದೇಹದ ಅಸಮರ್ಪಕ ಭಂಗಿಯಿAದ, ದೈಹಿಕ ಕ್ರಿಯೆಗಳ ಕ್ಷೆÆÃಭೆಯಿಂದ, ಮಾನಸಿಕ ಇಲ್ಲವೇ ಭಾವನಾತ್ಮಕ ತೊಂದರೆಗಳಿAದ ಅಥವಾ ಅಸಮತೋಲನ ಜೀವನ ಕ್ರಮದಿಂದ ಚೈತನ್ಯವು ಪ್ರವಹಿಸುವುದಕ್ಕೆ ಅಡಚಣೆಯಾಗುತ್ತದೆ. ಪ್ರಾರಂಭಸ್ಥಿತಿಯಲ್ಲಿ ಇದು ಮಾಂಸಖAಡಗಳ ಬಿಗುವು, ಪೆಡಸುತನ, ಅಸಮರ್ಪಕ ರಕ್ತಚಲನೆ ಇತ್ಯಾದಿ ಸಣ್ಣಪುಟ್ಟ ಲೋಪದೋಷಗಳ ಮೂಲಕ ಪ್ರಕಟವಾಗುತ್ತದೆ. ಆದರೆ ಈ ಚೈತನ್ಯ ಪ್ರವಾಹಕ್ಕೆ ಅಡ್ಡಿಯು ತೀವ್ರವಾದಾಗ ಕೈಕಾಲು, ಇಲ್ಲವೆ ಕೀಲು ಅಥವಾ ಅವಯವ ಅಸಮರ್ಪಕವಾಗಿ ಕೆಲಸ ಮಾಡಬಹುದು. ಪೂರ್ತಿ ನಿಷ್ಕಿçಯವೂ ಆಗಬಹುದು. ರೋಗಗ್ರಸ್ತವಾಗಬಹುದು. ಪವನ ಮುಕ್ತಾಸನ ಕ್ರಮಬದ್ಧ ಅಭ್ಯಾಸವು ದೇಹದಲ್ಲಿ ಚೈತನ್ಯದ ಪ್ರವಾಹಕ್ಕೆ ಇರುವ ಅಡ್ಡಿಗಳನ್ನು ನಿವಾರಿಸುವುದಲ್ಲದೆ ಹೊಸ ಅಡಚಣೆ ಉಂಟಾಗದAತೆ ನೋಡಿಕೊಳ್ಳುತ್ತದೆ. ಈ ವಿಧದಿಂದ ಇದು ದೇಹದಲ್ಲಿ ಚೈತನ್ಯ ಪ್ರವಾಹವನ್ನು ನಿಯಂತ್ರಿಸಿ ಸಮಸ್ಥಿತಿಗೆ ತರುವ ಮೂಲಕ ದೇಹಕ್ಕೆ ಪೂರ್ಣ ಆರೋಗ್ಯವನ್ನು ಒದಗಿಸುತ್ತದೆ.
ಮನಸ್ಸು-ದೇಹ
ಬಹುತೇಕ ಆಧುನಿಕ ರೋಗಗಳು ಮನೋದೈಹಿಕ ಸ್ವರೂಪದವು. ಈ ರೋಗಗಳಿಗಾಗಿ ಸೇವಿಸುವ ಔಷಧಗಳು ಕೇವಲ ರೋಗಲಕ್ಷಣಗಳನ್ನು ನಿವಾರಿಸುತ್ತವೆಯೇ ವಿನಹ ರೋಗಗಳನ್ನು ಬೇರು ಸಹಿತ ಕಿತ್ತೊಗೆಯುವುದಿಲ್ಲ. ಈ ಆಸನಗಳನ್ನು ಯಾವ ಸ್ಪರ್ಧಾತ್ಮಕ ಭಾವನೆ ಮೆದುಳನ್ನು ಪ್ರಚೋದಿಸುತ್ತದೆ ; ತನ್ಮೂಲಕ ಮನಸ್ಸನ್ನೂ ವಿಶ್ರಾಮಸ್ಥಿತಿಗೆ ತರುತ್ತದೆ. ಉಸಿರಾಟ ಮತ್ತು ಅದರ ಮೇಲಿನ ನಮ್ಮ ಗಮನವನ್ನು ಮೇಳವಿಸುವುದರಿಂದಾಗಿ ಮನಸ್ಸಿನ ಅವಧಾನಶಕ್ತಿಯು ಜಾಗೃತವಾಗುತ್ತದೆ. ತತ್ಫಲವಾಗಿ ಮನಸ್ಸು ಒತ್ತಡ ಉದ್ವೇಗಗಳಿಗೆ ಒಳಗಾಗುವುದಿಲ್ಲ. ಇದರಿಂದಾಗಿ ಈ ಆಸನಗಳಲ್ಲಿ ದೈಹಿಕಕ್ಕಿಂತ ಮಾನಸಿಕ ಅಂಶವೇ ಪ್ರಧಾನ ಎಂಬುದು ಗೋಚರವಾಗುತ್ತದೆ. ಈ ಆಸನಗಳ ಸಕ್ರಮ ಅಭ್ಯಾಸದಿಂದ ಮನಸ್ಸು ವಿಶ್ರಾಮಸ್ಥಿತಿಗೆ ಬರುತ್ತದೆ. ಕ್ರಿಯಾಶೀಲ (ಚಿuಣoಟಿomiಛಿ) ನರಗಳು ಹಾರ್ಮೋನು (hಚಿಡಿಟಿmoಟಿಚಿಟ) ಕ್ರಿಯೆಗಳು ಮತ್ತು ಶರೀರದ ಆಂತರಿಕ ಅವಯುಗಳು ಸರಿಗೊಳ್ಳುತ್ತವೆ. ಆದುದರಿಂದ ಈ ಆಸನಗಳು ಮಹತ್ತರವಾದ ಪ್ರತಿಬಂಧಕ ಹಾಗೂ ನಿವಾರಣಾತ್ಮಕ ಅಂಶಗಳನ್ನು ಹೊಂದಿವೆ.
ಮೂರು ಗುಂಪುಗಳು
ಪವನ ಮುಕ್ತಾಸನವನ್ನು ಮೂರು ಪ್ರಧಾನ ಗುಂಪುಗಳಾಗಿ ವಿಂಗಡಿಸಲಾಗಿದೆ. ಸಂಧಿವಾತ ನಿರೋಧ ಗುಂಪು, ಪಾಚಕ ಉದರಗುಂಪು ಮತ್ತು ಶಕ್ತಿಬಂಧ ಅಥವಾ ಚೈತ್ನಯರೋಧಕ ಗುಂಪು. ಈ ಗುಂಪುಗಳು ಒಂದಕ್ಕೊAದು ಪೂರಕವಾಗಿವೆ. ದೇಹದಲ್ಲಿ ಚೈತನ್ಯವು ಮುಕ್ತವಾಗಿ ಪ್ರವಹಿಸುವಂತೆ ಪ್ರಚೋದಿಸುತ್ತವೆ. ಹಾಗೂ ಉತ್ತೇಜನ ನೀಡುತ್ತವೆ. ಅಭ್ಯಾಸಿಗಳು ಪ್ರಧಾನ ಆಸನಗಳತ್ತ ಗಮನಹರಿಸುವ ಮುನ್ನ ಮೇಲೆ ಹೇಳಿರುವ ಮೂರೂ ಗುಂಪಿನ ಆಸನಗಳಲ್ಲಿ ಪರಿಣತಿ ಗಳಿಸಿರಬೇಕು. ಪವನಮುಕ್ತಾಸನ ಭಾಗ ೧, ೨ ಮತ್ತು ೩ ಇವುಗಳನ್ನು ಪ್ರತಿದಿನ ತಪ್ಪದೆ ಕೆಲವು ತಿಂಗಳವರೆಗೆ ಮಾಡಿದರೆ ದೇಹ ಮನಸ್ಸುಗಳಲ್ಲಿ ಪರಿಣಾಮಕಾರಿಯಾದ ವಿಶ್ರಾಂತಿ, ಇಡೀ ಮನೋದೇಹ ವ್ಯವಸ್ಥೆಯಲ್ಲಿ ಒಂದು ಹುರುಪು ಕಂಡುಬರುತ್ತದೆ. ಮತ್ತು ಮುಂದುವರೆದ ಆಸನಗಳಿಗೆ ಹೆಚ್ಚಿನ ದೈಹಿಕ ಸಾಮರ್ಥ್ಯದ ಅಗತ್ಯವಿದೆ ಮತ್ತು ಅವುಗಳು ದೇಹ ಹಾಗೂ ಮನಸ್ಸಿನ ಮೇಲೆ ಶಕ್ತಿಶಾಲಿ ಪರಿಣಾಮ ಬೀರುತ್ತವೆ. ಈ ಅಂಶದಿAದಾಗಿ ಆಸನಗಳ ಅಭ್ಯಾಸಕ್ಕೆ ಸರಿಯಾದ ಸಿದ್ಧತೆ ಅಗತ್ಯ.
ಪ್ರತಿಯೊಂದು ಗುಂಪಿನ ಆಸನಗಳನ್ನು ಮುಂದೆ ತಿಳಿಸಿರುವ ಅನುಕ್ರಮದಲ್ಲಿಯೇ ಅಭ್ಯಾಸ ಮಾಡಬೇಕು.

ಮಾಧ್ಯಮ ಧರ್ಮ

ಮಾಧ್ಯಮದ ಇತಿಹಾಸವು ಅತ್ಯಂತ ರೋಚಕವಾಗಿದ್ದು ಇಂತಹ ಇತಿಹಾಸವುಳ್ಳ ಮಾಧ್ಯಮದ ಹುಟ್ಟಿನಲ್ಲಿ ಧರ್ಮ ಪ್ರಚಾರ, ಬಡವರ, ಅನ್ಯಾಯಕ್ಕೊಳಗಾದವರ ಪರವಾಗಿ ಧ್ವನಿಯೆತ್ತುವವರು ಮಾಧ್ಯಮವನ್ನು ಆಯಾ ಪ್ರಾಂತೀಯ ಸಂಸ್ಕೃತಿಯ ರಾಯಭಾರಿ ಎನ್ನಬಹುದು. ಇಂತಹ ಮಾಧ್ಯಮಗಳ ಬಗ್ಗೆ ತನ್ನದೇ ಆದ ಧರ್ಮವಿದೆ ಅದು ಪತ್ರಿಕಾ ಧರ್ಮ. ಇಲ್ಲಿ ಧರ್ಮ ಎಂದರೆ ಒಗ್ಗಟ್ಟು, ನೈತಿಕತೆ, ಸಿದ್ದಾಂತದ ಪಾಲನೆ ಒಂದು ಸಿದ್ದಾಂತಕ್ಕಾಗಿ ಹೋರಾಟ ಒಳಗೊಂಡಿದೆ ಹೊರತು ಸ್ಪರ್ಧೆ, ಮೋಸ, ಬೆಳವಣಿಗೆಗಾಗಿ ಮತ್ತೊಬ್ಬರಿಗೆ ಹಾನಿ ಮಾಡುವುದು ಸೇರುವುದಿಲ್ಲ. ಮಾಧ್ಯಮವು ಮಾತಿನ ಮೂಲಕ, ಬರಹದ ಮೂಲಕ, ಚಿತ್ರದ ಮೂಲಕ, ಸನ್ನೆಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ತಲುಪುವುದರಿಂದ ಅತ್ಯಂತ ಜಾಗೃತಿವಹಿಸಬೇಕಾಗುತ್ತದೆ. ಚಲನಚಿತ್ರ, ನಾಟಕ, ಜಾನಪದ, ಬರಹ, ನಾಟ್ಯ, ತಾಳೆಗರಿಯ ಬರಹ ಮುಂದುವರಿಯುತ್ತ ಪತ್ರಿಕಾ ಲೋಕ ನಂತರದ ಸಾಲಿನಲ್ಲಿ ಟಿವಿ ಮತ್ತು ಆನ್‌ಲೈನ್‌ಗಳ ಭರಾಟೆಯಲ್ಲಿ ಪತ್ರಿಕಾ ಧರ್ಮಕ್ಕೆ ಕುತ್ತು ಬರುತ್ತಿದೆ. ಇಂದು ಸಾಮಾಜಿಕ ಜಾಲತಾಣಗಳೇ ದೊಡ್ಡ ಮಾಧ್ಯಮದಂತೆ ಅನಿಸುತ್ತಿದ್ದು ಈ ಮಾಧ್ಯಮಗಳ ಸಮೂಹದಲ್ಲಿ ಸುದ್ದಿ ಚಾನಲ್ ಗಳೂ ಕೂಡ ಮಾಧ್ಯಮ ಧರ್ಮವನ್ನು ಗಾಳಿಗೆ ತೂರುತ್ತಿದೆ.
ಪ್ರತಿಯಂದು ಪತ್ರಿಕೆ ಮತ್ತು ಟಿವಿ ವಾಹಿನಿಗಳು ತನ್ನದೇ ಆದ ವಿಚಾರ, ಗುರಿ, ನೈತಿಕತೆ ಮತ್ತು ಭವಿಷ್ಯವನ್ನು ಇಟ್ಟುಕೊಂಡು ಪ್ರಾರಂಭವಾಗಿರುತ್ತದೆ. ಆದ್ದರಿಂದ ಉಳಿವಿನ ಪ್ರಶ್ನೆಗಾಗಿ, ಭವಿಷ್ಯಕ್ಕಾಗಿ ಆಧುನಿಕ ಸ್ಪರ್ಧೆಯಲ್ಲಿ ಸ್ಪರ್ಧೆ ಮಾಡಲು ಸೋಲುತ್ತಿರುವ ಹಿನ್ನಲೆಯಲ್ಲಿ ತಮ್ಮ ನೈತಿಕತೆಯನ್ನು ಗಾಳಿಗೆ ತೂರಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಮಾಧ್ಯಮ ಧರ್ಮವನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದೆ. ಹಾಗಾದರೆ ಮಾಧ್ಯಮ ಧರ್ಮ ಎಂದರೆ ಏನು? ಮಾಧ್ಯಮವು ಆಯಾ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು, ಸಂಪಾದಕರು ಆಥವಾ ಆ ಮಾಧ್ಯಮದ ಸೃಷ್ಠಿಕರ್ತರ ವಿಚಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೂ ಕೂಡ ಮಾಧ್ಯಮದ ನೈತಿಕತೆ ಮತ್ತು ಧರ್ಮವನ್ನು ಸಾಮಾನ್ಯವಾಗಿ ಹೇಳಬೇಕೆಂದರೆ ಈ ಕೆಳಗಿನ ವಿಚಾರಗಳನ್ನು ಒಳಗೊಂಡಿರಬೇಕು.
1. ರಾಷ್ಟç ಪ್ರೇಮವನ್ನು ಹುಟ್ಟಿಸುವಂತಹ ವಿಚಾರಗಳಿಗೆ ಒತ್ತು ನೀಡಬೇಕು.
2. ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗೆ ಗೌರವ ನೀಡಬೇಕು.
3. ಯಾವುದೇ ಕಾರಣಕ್ಕೂ ಧರ್ಮ ಮತ್ತು ಜಾತಿಯ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಧ್ಯಮ ಮಾಡಬಾರದು.
4. ದೇಶದ ಪ್ರತಿಬಿಂಬಗಳಾದ ರಾಷ್ಟçಧ್ವಜ, ರಾಷ್ಟçಲಾಂಛನ, ಸಂವಿಧಾನಕ್ಕೆ ಮತ್ತು ನ್ಯಾಯಾಲಯಗಳಿಗೆ ಗೌರವ ಕೊಡಬೇಕು.
5. ಅಶ್ಲೀಲ ಪದಬಳಕೆ, ವ್ಯಕ್ತಿಗೆ ಮಾನಹಾನಿ ಆಗುವಂತಹ ಪದಬಳಕೆ ಮಾಡಬಾರದು.
6. ಸುದ್ದಿಯನ್ನು ಸುದ್ದಿಯಾಗಿ ಮಾಡಬೇಕೆ ಹೊರತು ತಮ್ಮ ವೈಯಕ್ತಿಕ ಧ್ವೇಷ, ಅಸೂಯೆ ತುಂಬಬಾರದು.
7. ಓರ್ವ ಪತ್ರಕರ್ತ ಅಥವಾ ಮಾಧ್ಯಮವು ಬಿಳಿ ಹಾಳೆಯಷ್ಟೇ ಶುದ್ದವಾಗಿರಬೇಕು. ಯಾವುದೇ ರೀತಿಯ ಭ್ರಮೆ, ಒತ್ತಡ, ಅಭಿಮಾನ, ವೈಯಕ್ತಿಕ ಧ್ವೇಷ, ಸೇಡಿನ ಮನೋಭಾವ, ಸ್ವಹಿತಾಸಕ್ತಿ, ಲಾಭ ಒಳಗೊಂಡಿರಬಾರದು.
8. ಯಾವುದೇ ಮಾಧ್ಯಮವು ತನ್ನದೇ ಆದ ವಿಚಾರ ಮತ್ತು ಗುರಿಯನ್ನು ಇಟ್ಟುಕೊಂಡು ನೈತಿಕತೆ ಪಾಲಿಸುತ್ತ ಬೆಳೆಯಬೇಕು.
9. ತನಿಖಾ ವರದಿಗಳನ್ನು ಮಾಡುವಾಗ ಎಲ್ಲಾ ಆಯಾಮಗಳನ್ನು ಅಧ್ಯಯನ ಮಾಡಿ ಸರಿಯಾದ ತನಿಖಾ ವರದಿಗಳನ್ನು ಸಿದ್ದಪಡಿಸಬೇಕು ಅಂದರೆ ಯಾವುದೇ ಕಾರಣಕ್ಕೂ ನಿರಪರಾಧಿಗೆ ಶಿಕ್ಷೆ ಆಗಬಾರದು.
10. ನಕಲಿ ಪತ್ರಿಕೋಧ್ಯಮ ಕಾನೂನು ಬಾಹಿರ ಪತ್ರಿಕೋಧ್ಯಮ ಮಾಡಬಾರದು.
11. ಮಾಧ್ಯಮಗಳು ಭಯ ಹುಟ್ಟಿಸುವ ವ್ಯವಸ್ಥೆಗಳಾಗಬಾರದು ಮಾಹಿತಿ ನೀಡುವ ಆಗರಗಳಾಗಬೇಕು.
12. ಯಾವುದೇ ವಿಚಾರಗಳನ್ನು ಬಲವಂತವಾಗಿ ಜನರ ಮನಸ್ಸಿನಲ್ಲಿ ತುಂಬಬಾರದು.
13. ಯಾರ ಪರ ಅಥವಾ ಯಾರ ವಿರುದ್ದವೂ ಇರಬಾರದು.
14. ಮಾಧ್ಯಮವು ರಾಜಕಾರಣಿಗಳಿಂದ, ರಾಜಕೀಯ ಪಕ್ಷಗಳಿಂದ ಮತ್ತು ರಾಜಕೀಯ ವ್ಯವಸ್ಥೆಯಿಂದ ಆದಷ್ಟು ದೂರನಿಂತು ಸುದ್ದಿ ಮಾಡಬೇಕು.
15. ಮಾಧ್ಯಮವು ಸರ್ಕಾರ, ವ್ಯವಸ್ಥೆ ಅಥವಾ ಇನ್ನೂ ಯಾರಾದರೂ ಒಳ್ಳೆಯ ಕೆಲಸ ಮಾಡಿದಾಗ ಹೊಗಳಬೇಕು. ತಪ್ಪು ಮಾಡಿದಾಗ ಕಂಡಿಸುವ ಧೈರ್ಯ ಮಾಡಬೇಕು.
16. ಹಣ, ಕೀರ್ತಿಗಾಗಿ ಮಾಧ್ಯಮ ಮಾಡಬಾರದು. ಗುರಿ ಮತ್ತು ನೈತಿಕತೆಯ ಆಧಾರದಲ್ಲಿ ಮಾತ್ರ ಮಾಧ್ಯಮ ಕಟ್ಟಬೇಕು.
17. ಸುದ್ದಿ ಮಾಡುವುದರ ಜೊತೆಗೆ ಸಹಾಯ ಮಾಡುವ ಮನಸ್ಥಿತಿ ಇರಬೇಕು.
18. ಮಾಧ್ಯಮದಲ್ಲಿ ಶುದ್ದ ಹಸ್ತದವರು ಇರಬೇಕು. ಭ್ರಷ್ಟಚಾರ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರು ಮಾಧ್ಯಮದಲ್ಲಿ ಇರಬಾರದು.
ಇಂತಹ ಹಲವಾರು ಮಾಧ್ಯಮ ನೈತಿಕತೆಯನ್ನು ಬಳಸಿಕೊಂಡು ನಾನು ಯಾವುದಕ್ಕಾಗಿ ಮಾಧ್ಯಮಕ್ಕೆ ಬಂದಿದ್ದೇನೆ, ಭವಿಷ್ಯದಲ್ಲಿ ನನ್ನಿಂದ ಏನು ಬದಲಾಗಬೇಕು? ಸಮಾಜ ಮತ್ತು ದೇಶಕ್ಕಾಗಿ ನಾನು ಏನು ಮಾಡಬಹುದು? ಎಂಬ ವಿಚಾರಗಳನ್ನು ಮಾಡುತ್ತಾ ಮಾಧ್ಯಮದಲ್ಲಿ ಸೇರಬೇಕು. ಮಾಧ್ಯಮದ ಧರ್ಮ ಪಾಲನೆಯು ಅತ್ಯಂತ ಶ್ರೇಷ್ಠವಾಗಿದ್ದು ಮಾಧ್ಯಮದ ಧರ್ಮವನ್ನು ತಾಯಿಗೆ ಹೋಲಿಸಬಹುದು. ತಾಯಿಯ ಶ್ರೇಷ್ಠತೆಯಂತೆ ಪತ್ರಿಕಾ ಧರ್ಮವನ್ನು ಪಾಲಿಸಬೇಕು.

ಬಾಯಿಯ ವಸಡಿನ ಮೇಲೆ ಬ್ಲ್ಯಾಕ್ ಫಂಗಸ್ ಗಂಭೀರ ಪರಿಣಾಮ: ಮುಂಜಾಗ್ರತೆ ಹೇಗೆ? ಇಲ್ಲಿದೆ ಮಾಹಿತಿ

ಇಡೀ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಕೋವಿಡ್-19 ಸಾಂಕ್ರಾಮಿಕ ರೋಗ ವೈದ್ಯಕೀಯ ಲೋಕಕ್ಕೆ ಪ್ರತಿನಿತ್ಯ ಒಂದಲ್ಲ ಒಂದು ಸವಾಲುಗಳನ್ನು ಎಸೆಯುತ್ತಲೇ ಇದೆ. ಸಾಂಕ್ರಾಮಿಕ ರೋಗದಿಂದ ಪಾರಾಗಲು ಹೋರಾಡುತ್ತಿರುವ ಭಾರತಕ್ಕೆ ಇದೀಗ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕರ್ಮೈಕೋಸಿಸ್ ತಲೆನೋವು ಶುರುವಾಗಿದೆ.

ಈ ಬ್ಲ್ಯಾಕ್ ಫಂಗಸ್ ಕೊರೋನಾ ವೈರಸ್ ಗಿಂತಲೂ ಅಪಾಯಕಾರಿ ಹಾಗೂ ಮಾರಣಾಂತಿಕವಾಗಿದೆ. ಈ ರೋಗ ಹೆಚ್ಚಾಗಿ ಬಾಯಿಯ ವಸಡಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಮಧುಮೇಹ ಅಧಿಕ ಇದ್ದವರಿಗೆ  ಬ್ಲ್ಯಾಕ್‌ ಫ‌ಂಗಸ್‌ ಹೆಚ್ಚಾಗಿದೆ (ಮ್ಯೂಕರ್ಮೈಕೋಸಿಸ್) ಬರುತ್ತಿದೆ. ಸ್ಟಿರಾಯ್ಡಾ ಔಷಧವನ್ನು ಕೊಟ್ಟಾಗ ಮಧುಮೇಹ ಹೆಚ್ಚಾಗುತ್ತದೆ. ಮಧುಮೇಹ ಇಲ್ಲದವರಿಗೆ ಕೊರೋನಾ ಬಂದರೆ ಮಧುಮೇಹ ಹೊಸದಾಗಿ ಅಂಟಿಕೊಳ್ಳುತ್ತಿದೆ. ಮಧುಮೇಹ ನಿಯಂತ್ರಣದಲ್ಲಿದ್ದವರಿಗೆ ಕೋವಿಡ್ ಬಂದರೆ ಒಮ್ಮೆಲೆ ಅಧಿಕವಾಗುತ್ತಿದೆ. ಕೊರೋನಾ ನಿಯಂತ್ರಿಸಲು ಸ್ಟಿರಾಯ್ಡ್ ಕೊಡಬೇಕಾಗುತ್ತದೆ. ಆಗ ಮಧುಮೇಹ ಜಾಸ್ತಿಯಾಗುತ್ತದೆ. ಇಂತಹ ಸಂದರ್ಭಕ್ಕಾಗಿಯೇ ಮ್ಯೂಕರ್ಮೈಕೋಸಿಸ್ ಫ‌ಂಗಸ್‌ ಕಾದು ಕುಳಿತಿರುತ್ತದೆ. ಇಂತಹವರನ್ನೇ ಫ‌ಂಗಸ್‌ ಆಶ್ರಯಿಸುತ್ತಿದೆ.

ಕೊರೊನಾ ಸೋಂಕು ಬಂದು ಉಸಿ ರಾಟದ ಸಮಸ್ಯೆಯಾದಾಗ ಸಹಜವಾಗಿ ಆಕ್ಸಿಜನ್‌ ಅಗತ್ಯವಾಗುತ್ತದೆ. ಆಕ್ಸಿಜನ್‌ ಬೇಡಿಕೆ ಹೆಚ್ಚಾದ ಕಾರಣ ಎಲ್ಲಿ ಆಕ್ಸಿಜನ್‌ ಸಿಗುತ್ತದೋ ಅಲ್ಲಿಂದ ತರುವ ಸ್ಥಿತಿ ಇದೆ. ಹೀಗಾಗಿ ಕೈಗಾರಿಕಾ ಆಕ್ಸಿಜನ್‌ ಕೂಡ ಬಳಕೆ ಮಾಡಲಾಗುತ್ತಿದೆ

ಕೈಗಾರಿಕಾ ಆಕ್ಸಿಜನ್‌ ಅಷ್ಟು ಶುದ್ಧ ಆಗಿರುವುದಿಲ್ಲ. ಇದರಲ್ಲಿ ಸ್ವಲ್ಪವಾದರೂ ಮಿಶ್ರಣ ಇರುತ್ತದೆ. ಆಕ್ಸಿಜನ್‌ ಕಾನ್ಸಂಟ್ರೇಟರ್‌ ಬಳಕೆಯಾಗುತ್ತಿದೆ. ಇದು ವಿದೇಶಗಳಿಂದ ದೇಣಿಗೆಯಾಗಿಯೂ ಬರುತ್ತಿದೆ. ಆಕ್ಸಿಜನ್‌ ಅನ್ನು ನೇರವಾಗಿ ಕೊಡಲು ಆಗುವುದಿಲ್ಲ, ನೀರಿನ ಮೂಲಕವೇ ಕೊಡಬೇಕು. ಆಗ ಬಹಳ ಜಾಗರೂಕತೆಯಿಂದ ಶುದ್ಧ ನೀರನ್ನು ಬಳಸಬೇಕು. ಎಲ್ಲ ಕಡೆ ಶುದ್ಧ ನೀರು ಸಿಗುತ್ತದೆಯೆ? ಎಲ್ಲ ಮನೆಗಳಲ್ಲಿಯೂ, ಎಲ್ಲ ಆಸ್ಪತ್ರೆಗಳಲ್ಲಿಯೂ ಇದನ್ನು ನಿರೀಕ್ಷಿಸುವುದು ಕಷ್ಟಸಾಧ್ಯ. ಯಾವುದೋ ನಳ್ಳಿ ನೀರನ್ನು ಬಳಸಿದರೆ ಅಪಾಯವಿದೆ. ಆದ್ದರಿಂದ ಪರಿಶುದ್ಧ ನೀರನ್ನೇ ಉಪಯೋಗಿಸಬೇಕು. ಈ ಎಲ್ಲಾ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ರೋಗ ಹೆಚ್ಚಾಗುತ್ತಿದೆ.

ಮ್ಯೂಕರ್ಮೈಕೋಸಿಸ್ ತೆಲಂಗಾಣ ರಾಜ್ಯವನ್ನು ಹೆಚ್ಚು ಬಾಧಿಸುತ್ತಿದೆ. ಅಲ್ಲಿನ ಆರೋಗ್ಯ ಇಲಾಖೆ ಇದನ್ನು ಸಾಂಕ್ರಾಮಿಕ ಎಂದು ಅಧಿಕೃತವಾಗಿ ಘೋಷಿಸಿದೆ.

ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರು ನೀಡಿದ ಅಧಿಸೂಚನೆಯ ಪ್ರಕಾರ, ಇದು ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ರ ಅಡಿಯಲ್ಲಿ ಸೂಚಿಸಬಹುದಾದ ಕಾಯಿಲೆಯಾಗಿದೆ ಎನ್ನಲಾಗಿದೆ. ಈ ಕಪ್ಪು ಶಿಲೀಂಧ್ರವು ಮುಖ್ಯವಾಗಿ ಕಣ್ಣು, ಕಿವಿ ಮತ್ತು ಬಾಯಿಯ ಕುಹರದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.

ಬಾಯಿಯ ಮೇಲಿನ ಪರಿಣಾಮ ಕುರಿತು ಪ್ರತಿಕ್ರಿಯೆ ನೀಡಿರುವ, ಮಹೇಂದ್ರ ದಂತ ಆಸ್ಪತ್ರೆಯ ಮುಖ್ಯ ಸಲಹೆಗಾರ ಡಾ. ಸಮೀರ್ ಆಜಾದ್ ಮಹೇಂದ್ರ ಅವರು, ಮ್ಯೂಕರ್ಮೈಕೋಸಿಸ್ ಬಾಯಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಕೋವಿಡ್-19 ರಿಂದ ಚೇತರಿಸಿಕೊಂಡ ರೋಗಿಗಳಿಗೆ ಕನಿಷ್ಠ ಒಂದು ತಿಂಗಳಾದರೂ ನಿಯಮಿತವಾಗಿ ಮೌಖಿಕ ತಪಾಸಣೆಗೆ ನಡೆಸಬೇಕು ವೈದ್ಯರು ಸಲಹೆ ನೀಡುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದ್ದಾರೆ. ಪ್ರಮುಖವಾಗಿ ಮಧುಮೇಹ ಇರುವವರಿಗೆ ಸಲಹೆ ನೀಡಲೇಬೇಕಿದೆ. ಬಾಯಿಯಲ್ಲಿ ಶುರುವಾಗುವ ಈ ಸೋಂಕು ರೋಗವನ್ನು ಉಲ್ಭಣಿಸುತ್ತದೆ ಎಂದು ತಿಳಿಸಿದ್ದಾರೆ.

ನಮ್ಮ ಸುತ್ತಲಿನ ಗಾಳಿಯಲ್ಲಿ ಬ್ಲ್ಯಾಕ್ ಫಂಗಸ್ ಇದೆ ಎಂಬುದನ್ನು ಜನರು ಅರಿಯಬೇಕಿದೆ. ನಾವು ಅದನ್ನು ಉಸಿರಾಡುತ್ತಿದ್ದೇವೆ. ಆದರೆ, ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಅದರ ವಿರುದ್ಧ ಹೋರಾಡುತ್ತಿದೆ. ಸೋಂಕಿಗೊಳಗಾಗಿರುವ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ, ಅವರಿಗೆ ಬ್ಲ್ಯಾಕ್ ಫಂಗಸ್ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಹಾಗಾದರೆ ಸೋಂಕಿನಿಂದ ಚೇತರಿಸಿಕೊಂಡವರು ಬ್ಲ್ಯಾಕ್ ಫಂಗಸ್ ರೋಗದಿಂದ ದೂರ ಉಳಿಯಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳಾದರೂ ಯಾವುವು? 

  • ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳಲು ಲವಯುಕ್ತ ಬಿಸಿ ನೀರಿನಿಂದ ಗಾರ್ಗಿಲ್ ಮಾಡಬೇಕು. ಉಪ್ಪು ನೀರಿನಲ್ಲಿ ಗಂಟಲು ಶುದ್ಧ ಮಾಡುವ ಪ್ರಕ್ರಿಯೆ ಎಲ್ಲರಿಗೂ ಗೊತ್ತಿದೆ. ಕ್ಲೊರೆಕ್ಸಿಡಿನ್‌ ಮೌತ್‌ ವಾಶ್‌ ಸಿಗುತ್ತದೆ. ಇದರಿಂದ ಗಂಟಲು ಶುದ್ಧ ಮಾಡಿದರೆ ಫ‌ಂಗಸ್‌ ಸಾಯುತ್ತದೆ.
  • ಬಿಸಿ ನೀರಿನ ಆವಿಯನ್ನು ತೆಗೆದುಕೊಳ್ಳುವಾಗ ಒಂದೆರಡು ಹನಿ ನೀಲಗಿರಿ ಎಣ್ಣೆಯನ್ನು ಹಾಕಿ ತೆಗೆದುಕೊಳ್ಳಿ. ಇದಕ್ಕೆ ಫ‌ಂಗಸ್‌ ಅನ್ನು ಕೊಲ್ಲುವ ಶಕ್ತಿ ಇರುತ್ತದೆ.
  • ಕೊರೋನಾ ಬಂದ ಬಳಿಕ ಆಕ್ಸಿಜನ್‌ ಕಾನ್ಸಂಟ್ರೇಟರ್‌ ನ ಯಂತ್ರವನ್ನು ಮನೆಯಲ್ಲಿರಿಸಿಕೊಂಡು ಬಳಸುತ್ತಿದ್ದಾರೆ. ಇದಕ್ಕೆ ನೀರು ಹಾಕಬೇಕಾಗುತ್ತದೆ. ಸಾಮಾನ್ಯವಾಗಿ ನಳ್ಳಿ ನೀರನ್ನು ಹಾಕುತ್ತಾರೆ. ಇದು ಸರಿಯಲ್ಲ. ನಳ್ಳಿ ನೀರಿನಲ್ಲಿಯೂ ಫ‌ಂಗಸ್‌ ಬರುವ ಸಾಧ್ಯತೆ ಇದೆ. ಆದ್ದರಿಂದ ಡಿಸ್ಟಿಲ್‌ ವಾಟರ್‌ (ಪ್ಯೂರಿಫೈಡ್‌ ವಾಟರ್‌) ಅಥವಾ ಬಿಸಿ ಮಾಡಿ ಆರಿದ ನೀರನ್ನು ಹಾಕಬೇಕು.
  • ಸೋಂಕಿನಿಂದ ಗುಣಮುಖರಾದವರು ಸಾಧ್ಯವಾದಷ್ಟು ಹೆಚ್ಚೆಚ್ಚು ಪ್ರೋಟೀನ್ ಇರುವ ಆಹಾರ, ಸಕ್ಕರೆ ಅಂಶ ಕಡಿಮೆ ಇರುವ ಆಹಾರ, ವಿಟಮಿನ್ ಎ.ಇ ಮತ್ತು ಬಿ ಸತ್ವಗಳಿರುವ ಆಹಾರ ಸೇವನೆ ಮಾಡುವುದು ಉತ್ತಮ.

ಭಾರತದ 62,100 ಸೇರಿ, 2020ರಲ್ಲಿ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣ: ಸಂಶೋಧನಾ ವರದಿ

ವಾಷಿಂಗ್ಟನ್: ಕಳೆದ ವರ್ಷ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣವಾಗಿದೆ ಎಂಬ ಆಘಾತಕಾರಿ ಅಂಶವನ್ನು ಸಂಶೋಧನಾ ವರದಿಯೊಂದು ಹೊರಹಾಕಿದೆ.

ದಿ ಲ್ಯಾನ್ಸೆಟ್ ಆಂಕಾಲಜಿ ವರದಿಯಲ್ಲಿ ಈ ಕುರಿತಂತೆ ಮಹತ್ವದ ಮಾಹಿತಿ ನೀಡಿದ್ದು, 2020ರಲ್ಲಿ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣವಾಗಿದೆ. ಆಲ್ಕೊಹಾಲ್ ಅಥವಾ ಮದ್ಯಪಾನ ಸೇವನೆಯು ಸ್ತನ, ಪಿತ್ತಜನಕಾಂಗ, ಕೊಲೊನ್, ಗುದನಾಳ, ಒರೊಫಾರ್ನೆಕ್ಸ್,  ಧ್ವನಿಪೆಟ್ಟಿಗೆಯನ್ನು ಮತ್ತು ಅನ್ನನಾಳವನ್ನು ಒಳಗೊಂಡಂತೆ ವಿವಿಧ ಕ್ಯಾನ್ಸರ್ಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಬಲವಾದ ಪುರಾವೆಗಳಿವೆ. ಕಡಿಮೆ ಮಟ್ಟದ ಕುಡಿಯುವಿಕೆಯೂ ಕೂಡ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಆದಾಗ್ಯೂ, ಸಾರ್ವಜನಿಕರಲ್ಲಿ ಜಾಗೃತಿ ಕಡಿಮೆ ಇದೆ:  ಬ್ರಿಟನ್ ಸಮೀಕ್ಷೆಯೊಂದರಲ್ಲಿ, 2018 ರಲ್ಲಿ, 10 ಜನರಲ್ಲಿ ಒಬ್ಬರಿಗೆ ಮಾತ್ರ ಆಲ್ಕೊಹಾಲ್ ಕ್ಯಾನ್ಸರ್ ಉಂಟಾಗುತ್ತದೆ ಎಂದು ತಿಳಿದಿತ್ತು.

2020 ರಲ್ಲಿ ಜಾಗತಿಕವಾಗಿ 741,300 ಕ್ಯಾನ್ಸರ್ ಪ್ರಕರಣಗಳು ಆಲ್ಕೋಹಾಲ್ ನಿಂದ ಉಂಟಾಗಿವೆ. ಆಲ್ಕೋಹಾಲ್ ಲೇಬಲ್‌ಗಳಿಗೆ ಕ್ಯಾನ್ಸರ್ ಎಚ್ಚರಿಕೆ ಇರಬೇಕು, ಆಲ್ಕೋಹಾಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸಬಹುದು ಮತ್ತು ಪಾನೀಯಗಳ ಮಾರಾಟವನ್ನು ಕಡಿಮೆ ಮಾಡಬಹುದು ಎಂದು ಈ ಅಧ್ಯಯನದ  ಸಹ-ಲೇಖಕರೂ ಕೂಡ ಆಗಿರುವ ಫ್ರಾನ್ಸ್ ನ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ನ ಹ್ಯಾರಿಯೆಟ್ ರುಮ್ಗೇ ಅವರು ಹೇಳಿದ್ದಾರೆ.

‘ಆಲ್ಕೋಹಾಲ್ ಜಾಗತಿಕವಾಗಿ ಕ್ಯಾನ್ಸರ್ ನ ಗಣನೀಯ ಹೊರೆಯನ್ನು ಉಂಟುಮಾಡುತ್ತದೆ ಮತ್ತು ಇದೇ ರೀತಿಯ ದುಷ್ಪರಿಣಾಮ ಕಡಿಮೆ ಮಟ್ಟದ ಕುಡಿತದಲ್ಲೂ ಕಂಡುಬರುತ್ತದೆ. ಕ್ಯಾನ್ಸರ್ ಮೇಲೆ ಆಲ್ಕೋಹಾಲ್ ನ ಪರಿಣಾಮವು ಹೆಚ್ಚಾಗಿ ತಿಳಿದಿಲ್ಲ ಅಥವಾ ಕಡೆಗಣಿಸಲಾಗುತ್ತದೆ, ಆದ್ದರಿಂದ ಆಲ್ಕೋಹಾಲ್ ಮತ್ತು  ಕ್ಯಾನ್ಸರ್ ನಡುವಿನ ಸಂಬಂಧದ ಬಗ್ಗೆ ನಮಗೆ ಹೆಚ್ಚಿನ ಸಾರ್ವಜನಿಕ ಜಾಗೃತಿಯ ಅಗತ್ಯವಿದೆ, ಮತ್ತು ಆಲ್ಕೋಹಾಲ್ ನಿಂದ ಉಂಟಾಗುವ ಕ್ಯಾನ್ಸರ್ ಗಳು ಮತ್ತು ಇತರ ರೋಗಗಳ ಹೊರೆಯನ್ನು ತಡೆಗಟ್ಟಲು ಒಟ್ಟಾರೆ ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡುವ ನೀತಿಗಳ ಅಗತ್ಯವಿದೆ ಎಂದು ರುಮ್ಗೇ  ಹೇಳಿದ್ದಾರೆ

2020 ರಲ್ಲಿ ಪುರುಷರಲ್ಲಿ ಅಂದಾಜು 568,700 ಕ್ಯಾನ್ಸರ್ ಪ್ರಕರಣಗಳು ಮತ್ತು ಮಹಿಳೆಯರಲ್ಲಿ 172,600 ಪ್ರಕರಣಗಳ ಹಿಂದೆ ಆಲ್ಕೋಹಾಲ್ ಸೇವನೆ ಇದೆ ಎಂದು ಫಲಿತಾಂಶಗಳು ಸೂಚಿಸಿವೆ, ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳು ಅನ್ನನಾಳ, ಯಕೃತ್ತು ಮತ್ತು ಸ್ತನಗಳ ಕ್ಯಾನ್ಸರ್ ಗಳನ್ನು ಒಳಗೊಂಡಿವೆ. ಆದಾಗ್ಯೂ, ಪ್ರತಿ  ಕ್ಯಾನ್ಸರ್ ಪ್ರಕಾರದ ಕಾರಣಗಳನ್ನು ಪ್ರತ್ಯೇಕವಾಗಿ ನೋಡಿದಾಗ, ಆಲ್ಕೋಹಾಲ್ ನಿಂದ ಉಂಟಾಗುವ ಪ್ರಕರಣಗಳ ಪ್ರಮಾಣವು ಅನ್ನನಾಳ, ಗಂಟಲು ಮತ್ತು ತುಟಿ ಮತ್ತು ಬಾಯಿ ಕ್ಯಾನ್ಸರ್ ಗಳಿಗೆ ಅತ್ಯಧಿಕವಾಗಿತ್ತು.

‘ಆಲ್ಕೋಹಾಲ್ ಸೇವನೆ ಮತ್ತು ಸಂಭಾವ್ಯ ಕ್ಯಾನ್ಸರ್ ಬೆಳವಣಿಗೆಯ ನಡುವೆ ವಿಳಂಬವಾಗಿದೆ, ಆದ್ದರಿಂದ ಆಲ್ಕೋಹಾಲ್ ಒಡ್ಡುವಿಕೆ ದತ್ತಾಂಶದ ವರ್ಷ ಮತ್ತು ಕ್ಯಾನ್ಸರ್ ರೋಗನಿರ್ಣಯದ ವರ್ಷದ ನಡುವಿನ ವಿಳಂಬದ ಅವಧಿಯ ಬಗ್ಗೆ ತಿಳಿಯುವುದು ಅಗತ್ಯವಾಗಿದೆ. ಈ ಬಗ್ಗೆ ಮತ್ತಷ್ಟು ಸಂಶೋಧನೆಗಳ ಅಗತ್ಯವಿದೆ  ಎಂದು ಹೇಳಿದ್ದಾರೆ.

ಭಾರತದಲ್ಲಿ 62,100 ಪ್ರಕರಣಗಳು
ಇನ್ನು 2020 ರಲ್ಲಿ ವಿಶ್ವಾದ್ಯಂತ ದಾಖಲಾದ  740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣವಾಗಿದೆ, ಈ ಪೈಕಿ ಭಾರತದಲ್ಲೇ ಶೇ.5ರಷ್ಟು ಅಂದರೆ 62,100 ಪ್ರಕರಣಗಳಿವೆ ಎಂದು ವರದಿಯಿಂದ ತಿಳಿದುಬಂದಿದೆ.  ಜಾಗತಿಕವಾಗಿ 2020ರಲ್ಲಿ ಹೊಸದಾಗಿ ಪತ್ತೆಯಾದ ಕ್ಯಾನ್ಸರ್ ಪ್ರಕರಣಗಳಲ್ಲಿ  ಶೇ.4ರಷ್ಟು ಮದ್ಯಪಾನಕ್ಕೆ ಸಂಬಂಧಿಸಿರಬಹುದು ಎಂದು ಈ ಅಧ್ಯಯನವು ಅಂದಾಜಿಸಿದೆ. ಮಹಿಳೆಯರೊಂದಿಗೆ ಹೋಲಿಸಿದರೆ ಪುರುಷರು ಶೇ.77 (568,700 ಪ್ರಕರಣಗಳು) ಆಲ್ಕೊಹಾಲ್-ಸಂಬಂಧಿತ ಕ್ಯಾನ್ಸರ್ ಪ್ರಕರಣಗಳಿಗೆ ತುತ್ತಾಗಿದ್ದಾರೆ ಎಂದು ಅಧ್ಯಯನವು ಅಂದಾಜಿಸಿದೆ.

172,600 ಪ್ರಕರಣಗಳು ಅನ್ನನಾಳ, ಯಕೃತ್ತು ಮತ್ತು ಸ್ತನದ ಕ್ಯಾನ್ಸರ್ ಗಳು ಹೆಚ್ಚಿನ ಸಂಖ್ಯೆಯ ಪ್ರಕರಣಗಳಿಗೆ ಕಾರಣವಾಗಿವೆ. ಇದಲ್ಲದೆ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದಾದ್ಯಂತ ಆರೋಗ್ಯ ಸೇವೆ ಮತ್ತು ಕ್ಯಾನ್ಸರ್ ಸೇವೆಗಳಿಗೆ ಉಂಟಾಗುವ ಅಡೆತಡೆಗಳು ಆ ವರ್ಷದ ರೋಗನಿರ್ಣಯದ  ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಮತ್ತು ದಾಖಲಾದ ದತ್ತಾಂಶಗಳಲ್ಲಿ ಹೊಸ ಕ್ಯಾನ್ಸರ್ ಪ್ರಕರಣಗಳನ್ನು ಕಡಿಮೆ ಅಂದಾಜು ಮಾಡಲು ಕಾರಣವಾಗಬಹುದು ಎಂದು ಅಧ್ಯಯನ ಹೇಳಿದೆ.

ಬದುಕುವ ಹಕ್ಕು’ ಮುಖ್ಯ: ಕನ್ವರ್ ಯಾತ್ರೆ ಕುರಿತ ನಿಲುವು ಮರುಪರಿಶೀಲಿಸಿ; ಉತ್ತರಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ಸೂಚನೆ

ನವದೆಹಲಿ: ಬದುಕುವ ಹಕ್ಕು ಪ್ರಮುಖವಾಗಿದ್ದು, ಕನ್ವರ್ ಯಾತ್ರೆ ಕುರಿತ ನಿಲುವನ್ನು ಮರುಪರಿಶೀಲಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.

ಕನ್ವರ್ ಯಾತ್ರೆಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ಶಿವನ ಭಕ್ತರು ಗಂಗಾ ನದಿಯ ವಿವಿಧ ಸ್ನಾನಘಟ್ಟಗಳಲ್ಲಿ ಇದೇ 25ರಿಂದ ಆಗಸ್ಟ್‌ 6ರವರೆಗೆ ಪವಿತ್ರ ಸ್ನಾನ ಮಾಡಲಿದ್ದಾರೆ. ಕೋವಿಡ್‌ ಸಾಂಕ್ರಾ ಮಿಕದ ಮಧ್ಯೆಯೇ ಕನ್ವರ್ ಯಾತ್ರೆ ನಡೆಸಲು ಈಗಾಗಲೇ ಹಲವು ಭಕ್ತರ ಅಖಾಡಗಳು ಸಿದ್ಧತೆ ನಡೆಸಿವೆ. ಹೀಗಾಗಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿದೆ.

ಇದರಂತೆ ನ್ಯಾಯಮೂರ್ತಿಗಳಾದ ಆರ್‌.ಎಫ್‌.ನರೀಮನ್ ಮತ್ತು ಬಿ.ಆರ್.ಗವಾಯಿ ಅವರಿದ್ದ ಪೀಠವು ವಿಚಾರಣೆ ನಡೆಸಿ, ಬದುಕುವ ಹಕ್ಕು ಪ್ರಮುಖವಾಗಿದ್ದು, ಕನ್ವರ್ ಯಾತ್ರೆ ಕುರಿತ ನಿಲುವನ್ನು ಮರುಪರಿಶೀಲಿಸುವಂತೆ ಹಾಗೂ ಈ ಕುರಿತು ಜು.19ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ.

ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ನಡೆಸಲು ಭಾರಿ ಸಿದ್ಧತೆ ನಡೆದಿದೆ. ರಾಜ್ಯದಲ್ಲಿರುವ ಗಂಗಾ ಸ್ನಾನಘಟ್ಟಗಳಲ್ಲಿ ಪವಿತ್ರ ಸ್ನಾನ ನಡೆಸಲು ಮತ್ತು ಗಂಗಾ ಜಲ ಕೊಂಡೊಯ್ಯಲು ಬೇಕಾದ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

2021ರ ಮಾರ್ಚ್‌ನಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದ್ದರು. ಕೋವಿಡ್‌ ಮಾರ್ಗಸೂಚಿಯನ್ನು ಕಡೆಗಣಿಸಿದ್ದರು. ಮೇಳದಲ್ಲಿ ಭಾಗವಹಿಸಿದ್ದವರಲ್ಲಿ ಹಲವರಿಗೆ ಕೋವಿಡ್‌ ತಗುಲಿತ್ತು. ಮೇಳ ನಡೆಸಲು ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.

ಇದರ ಬೆನ್ನಲ್ಲೇ ಕನ್ವರ್ ಯಾತ್ರೆಗೆ ಉತ್ತರಪ್ರದೇಶ ಸರ್ಕಾರ ಅನುಮತಿ ನೀರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.

ಉತ್ತರಪ್ರದೇಶ ಹಾಗೂ ಹರಿಯಾಣದ ರಾಜ್ಯದ ಶಿವಭಕ್ತರು ಹರಿದ್ವಾರಕ್ಕೆ ಆಗಮಿಸಿ ಗಂಗಾಜಲವನ್ನು ಶ್ರಾವಣದಲ್ಲಿ ತೆಗೆದುಕೊಂಡು ಹೋಗುವುದೇ ಕನ್ವರ್ ಯಾತ್ರೆಯಾಗಿದೆ.

2026ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆ ಭಾರತ ಆತಿಥ್ಯ

ನವದೆಹಲಿ: 2026ರಲ್ಲಿ ನಡೆಯಲಿರುವ ಪ್ರತಿಷ್ಠಿತ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸಲು ಭಾರತಕ್ಕೆ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್(ಬಿಡಬ್ಲ್ಯೂಎಫ್) ಒಪ್ಪಿಸಿದೆ ಎಂದು ಅಧಿಕೃತ ಘೋಷಣೆ ಮಾಡಲಾಗಿದೆ.

ಒಲಿಂಪಿಕ್ ವರ್ಷವನ್ನು ಹೊರತುಪಡಿಸಿ ಪ್ರತಿವರ್ಷ ನಡೆಯುವ ಈ ಟೂರ್ನಿಯನ್ನು ಭಾರತ ಎರಡನೇ ಬಾರಿಗೆ ಆಯೋಜಿಸುತ್ತದೆ.

ಭಾರತ ಕೊನೆಯ ಬಾರಿಗೆ 2009ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸಿತ್ತು.

ಭಾರತವು 2014 ರ ಥಾಮಸ್ ಮತ್ತು ಉಬರ್ ಕಪ್ ಫೈನಲ್ಸ್, ಏಷ್ಯನ್ ಚಾಂಪಿಯನ್‌ಶಿಪ್‌ಗಳು ಮತ್ತು ವಾರ್ಷಿಕ ಬಿಡಬ್ಲ್ಯೂಎಫ್ ಸೂಪರ್ 500 ಈವೆಂಟ್, ಯೋನೆಕ್ಸ್-ಸನ್‌ರೈಸ್ ಇಂಡಿಯಾ ಓಪನ್ ಸೇರಿದಂತೆ ವಿವಿಧ ಪ್ರಮುಖ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಆಯೋಜಿಸಿದೆ.

ಕಲ್ಪನಾ ಚಾವ್ಲಾ ಬಳಿಕ ಬಾಹ್ಯಾಕಾಶಯಾನಕ್ಕೆ ಆಂಧ್ರಪ್ರದೇಶ ಮೂಲದ ಮಹಿಳೆ ಸಿರಿಶಾ ಬಾಂಡ್ಲಾ!

ಅಮೆರಿಕಾದ ಬಾಹ್ಯಾಕಾಶ ಯೋಜನೆಯೊಂದರ ಭಾಗವಾಗಿ ಆಂಧ್ರಪ್ರದೇಶ ಗುಂಟೂರಿನ ನಿವಾಸಿ ಸಿರಿಶಾ ಬಾಂಡ್ಲಾ ಅಂತರಿಕ್ಷಕ್ಕೆ ಹಾರಲು ತಯಾರಿ ನಡೆಸಿದ್ದಾರೆ.

ಕಲ್ಪನಾ ಚಾವ್ಲಾ ನಂತರ ಬಾಹ್ಯಾಕಾಶಯಾನ ಕೈಗೊಳ್ಳುತ್ತಿರುವ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದೆ 11ರಂದು ನ್ಯೂ ಮೆಕ್ಸಿಕೋದಿಂದ ವಿಎಸ್ಎಸ್ ಯುನಿಟಿ ಆಫ್ ವರ್ಜಿನ್ ಗೆಲಾಕ್ಟಿಕ್ ಎಂಬ ಹೆಸರಿನ ಬಾಹ್ಯಾಕಾಶ ನೌಕೆ ಪ್ರಯಾಣ ಕೈಗೊಳ್ಳುತ್ತಿದ್ದು, ಒಟ್ಟು ಆರು ಮಂದಿಯನ್ನೊಳಗೊಂಡ ಈ ನೌಕೆಯಲ್ಲಿ ಸಿರಿಶಾ ಅವರೊಂದಿಗೆ ಇನ್ನೋರ್ವ ಮಹಿಳೆ ಬೆತ್ ಮೊಸೆಸ್ ಇರಲಿದ್ದಾರೆ.

ಈ ಬಗ್ಗೆ ಮಾತನಾಡಿರುವ 34 ವರ್ಷದ ಭಾರತ ಮೂಲದ ಸಿರಿಶಾ ಬಾಂಡ್ಲಾ, ತಂಡದ ಯೋಜನೆಯ ಭಾಗವಾಗಿರುವುದು ಬಹಳ ಸಂತೋಷವಾಗಿದೆ . ಯನಿಟಿ22 ಪಯಣದಲ್ಲಿ ಆರು ಜನರೊಟ್ಟಿಗೆ ನಾನೂ ಒಬ್ಬಳಾಗಿರುತ್ತೇನೆ. ಎಲ್ಲ ಜನರಿಗೂ ಬಾಹ್ಯಾಕಾಶ ಕೈಗೆಟಕುವಂತಾಗಬೇಕು ಎನ್ನುವುದೇ ಈ ಯೋಜನೆಯ ಉದ್ದೇಶ ಎಂದು ಸಿರಿಶಾ ಟ್ವೀಟ್ ಮಾಡಿದ್ದಾರೆ.

ಸಿರಿಶಾ ಬಾಂಡ್ಲಾ ಮೂಲತಃ ಆಂಧ್ರಪ್ರದೇಶ ರಾಜ್ಯದ ಗುಂಟೂರಿನವರಾಗಿದ್ದು, ಟೆಕ್ಸಾಸ್ನಲ್ಲಿ ತಮ್ಮ ಬಾಲ್ಯ ಕಳೆದಿದ್ದಾರೆ. ಸಿರಿಶಾಳ ತಂದೆ ಡಾ.ಮುರಳೀಧರ ಬಾಂಡ್ಲಾ ವಿಜ್ಞಾನಿಯಾಗಿದ್ದು ಅಮೆರಿಕಾದಲ್ಲಿ ಸರ್ಕಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕೆಯ ತಾತ ಬಾಂಡ್ಲಾ ರಾಘಯ್ಯಾ ಕೃಷಿ ವಿಜ್ಞಾನಿಯಾಗಿದ್ದು, ಗುಂಟೂರು ಜಿಲ್ಲೆಯ ಜನಪ್ದು ಹಳ್ಳಿಯಲ್ಲಿ ವಾಸವಿದ್ದಾರೆ. ಮೊಮ್ಮಗಳ ಈ ಸಾಧನೆಯ ಬಗ್ಗೆ ಕೇಳಿ ಪುಳಕಗೊಂಡಿದ್ದಾರೆ.

ಕಾರ್ಯಕ್ಕೆ ಮರಳಿದ ಇಸ್ರೋ: ಆಗಸ್ಟ್ 12 ರಂದು ಜಿಯೋ ಇಮೇಜಿಂಗ್ ಉಪಗ್ರಹ ಉಡಾವಣೆಗೆ ಯೋಜನೆ

ಬೆಂಗಳೂರು: ಆಗಸ್ಟ್ 12 ರಂದು ಜಿಎಸ್ಎಲ್ ವಿ-ಎಫ್ 10 ರಾಕೆಟ್ ನಿಂದ ಜಿಯೋ ಇಮೇಜಿಂಗ್ ಉಪಗ್ರಹ ಜಿಸ್ಯಾಟ್-1 ಉಡಾವಣೆ ಮಾಡಲು ಯೋಜನೆ ರೂಪಿಸುವುದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಂಪೂರ್ಣವಾಗಿ ಉಡಾವಣಾ ಚಟುವಟಿಕೆಗೆ ಮರಳುತ್ತಿದೆ.

ಇದು ಕೋವಿಡ್-19 ಸಾಂಕ್ರಾಮಿಕ ವೇಳೆಯಲ್ಲಿ ಬೆಂಗಳೂರು ಕೇಂದ್ರ ಕಚೇರಿಯಿಂದ ಉಡಾವಣೆಯಾಗುತ್ತಿರುವ ಎರಡನೇ ಉಪಗ್ರಹವಾಗಿದೆ. ಫೆಬ್ರವರಿ 28 ರಂದು ಬ್ರೆಜಿಲ್‌ನ ಭೂ ವೀಕ್ಷಣಾ ಉಪಗ್ರಹ ಅಮೆಜೋನಿಯಾ -1 ಮತ್ತು ಕೆಲ ವಿದ್ಯಾರ್ಥಿಗಳು ತಯಾರಿಸಿದ ಸಹ ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ-ಸಿ 51 ಯಶಸ್ವಿ ಕಾರ್ಯಾಚರಣೆ ಮಾಡಿತ್ತು.

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟದಿಂದ  2,268 ಕೆಜಿ ಸಾಮರ್ಥ್ಯದ ಗಿಸಾಟ್-1 ನ್ನು  ಕಳೆದ ವರ್ಷ ಮಾರ್ಚ್ 5 ರಂದು ಉಡಾಯಿಸಲು ನಿರ್ಧರಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಉಡಾವಣೆಗೂ ಒಂದು ದಿನ ಮೊದಲು ಮುಂದೂಡಲಾಯಿತು. ನಂತರ ಕೋವಿಡ್ ಲಾಕ್ ಡೌನ್ ಹೇರಿದ್ದರಿಂದ ಉಡಾವಣೆ ವಿಳಂಬವಾಯಿತು.

ಆ ಉಪಗ್ರಹ ಉಡಾವಣೆಯನ್ನು ಈ ವರ್ಷದ ಮಾರ್ಚ್ 28 ರಂದು ಉಡಾವಣೆ ಮಾಡಲು ವೇಳೆ ನಿಗದಿಪಡಿಸಲಾಗಿತ್ತು. ಆದರೆ, ಸಣ್ಣ ಸಮಸ್ಯೆಯಿಂದಾಗಿ ಅದನ್ನು ಮುಂದೂಡಲಾಯಿತು. ತದನಂತರ ಏಪ್ರಿಲ್ ಮತ್ತು ಮೇ ನಲ್ಲಿ ಉಡಾವಣೆಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಕೋವಿಡ್ ಎರಡನೇ ಅಲೆಯಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿದ್ದರಿಂದ ಅದು ಸಹ ಕಾರ್ಯಗತಗೊಳ್ಳಲಿಲ್ಲ.

ಇದೀಗ ಆಗಸ್ಟ್ 10 ಸಂಜೆ 5-43ಕ್ಕೆ ಜಿಎಸ್ ಎಲ್ ವಿ-ಎಫ್ 10 ವಾಹಕದ ಮೂಲಕ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಲಾಗಿದೆ ಎಂದು ಇಸ್ರೋ ಅಧಿಕಾರಿ ಶನಿವಾರ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಭೂ ಪರಿವೀಕ್ಷಣಾ ಉಪಗ್ರಹ ತನ್ನ ಗಡಿಯಲ್ಲಿ ನೈಜ ಕಾಲದ ಚಿತ್ರಗಳನ್ನು ದೇಶಕ್ಕೆ ಪೂರೈಸಲಿದೆ. ನೈಸರ್ಗಿಕ ವಿಪತ್ತುಗಳ ತ್ವರಿತ ಮೇಲ್ವಿಚಾರಣೆಗೂ ಶಕ್ತವಾಗಿದೆ. ಜಿಯೋಸ್ಟೇಷನರಿ ಕಕ್ಷೆಯಲ್ಲಿ ಅತ್ಯಾಧುನಿಕ ಚುರುಕುಬುದ್ಧಿಯ ಭೂ ವೀಕ್ಷಣಾ ಉಪಗ್ರಹವನ್ನು ಇಡುವುದರಿಂದ ಪ್ರಮುಖ ಅನುಕೂಲಗಳಿವೆ ಎಂದು ತಜ್ಞರು ಹೇಳಿದ್ದಾರೆ. ಇದು ಭಾರತಕ್ಕೆ ಒಂದು ಅರ್ಥದಲ್ಲಿ ಗೇಮ್ ಚೆಂಜರ್ ಆಗಲಿದೆ ಎಂದು ಬಾಹ್ಯಾಕಾಶ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ

ಬೇಲೂರು ತಾಲ್ಲೂಕಿನ ಪುರಸಭೆ ಚುನಾವಣೆ : ಕಾಂಗ್ರೆಸ್ ಮೇಲುಗೈ

ಬೇಲೂರು: ಬೇಲೂರು ತಾಲ್ಲೂಕಿನಲ್ಲಿ ನೆಡೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ ಕಾಂಗ್ರೆಸ್ ಪಕ್ಷ 17 ಸದಸ್ಯರು ಜಯ ಸಾಧಿಸಿದ್ದಾರೆ ಮತ್ತು ಜೆ ಡಿ ಎಸ್ ಪಕ್ಷ 5 ಜಯ ಸಾಧಿಸಿದ್ದಾರೆ ಹಾಗೂ ಬಿ ಜೆ ಪಿ ಪಕ್ಷ 1 ಸ್ಥಾನ ಪಡೆದಿದೆ ಕಾಂಗ್ರೆಸ್ ಪಕ್ಷ ಕೆ ಪಿ ಸಿ ಸಿ ಉಪಾಧ್ಯಕ್ಷ ರಾದ ಬಿ ಶಿವಾರಂ ರವರು ಕಾಂಗ್ರೆಸ್ ಪಕ್ಷವು ಸಾರ್ವಜನಿಕರಿಗೆ ಉತ್ತಮವಾದ ಪಕ್ಷವಾಗಿದೆ ಈ ರಾಜ್ಯ. ದಲ್ಲಿ ನಮ್ಮ ಪಕ್ಷ ವಾದ ಕಾಂಗ್ರೆಸ್ ಪಕ್ಷವು ಸಾರ್ವಜನಿಕರಿಗೆ ಉತ್ತಮ ಆಡಳಿತವನ್ನು ಕೊಟ್ಟಿದೆ ಬೇಲೂರು ತಾಲ್ಲೂಕಿನ ಜನತೆಗೆ ಹೃದಯ ಪೂರಕವಾಗಿ ಸ್ವಾಗತಿಸುತ್ತನೆ ಹಾಗೂ ಬೇಲೂರು ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷ ದಿಂದ ಗೆದ್ದಿರುವರು ತಾಲ್ಲೂಕಿನ. ಅಭಿವೃದ್ಧಿ ಕಡೆಗೆ ಹೇಚ್ಚಿನ ಗಮನಹರಿಸಬೇಕು.ಎಂದು ಹೇಳಿದರು.

ಪ್ರಮುಖ ಹುದ್ದೆಗಳಿಗೆ ಭಾರತೀಯ-ಅಮೆರಿಕನ್ ವೈದ್ಯರನ್ನು ನೇಮಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ವಾಷಿಂಗ್ ಟನ್: ಅಮೆರಿಕದ ಪ್ರಮುಖ ಹುದ್ದೆಗಳಿಗೆ ಅಧ್ಯಕ್ಷ ಜೋ ಬೈಡನ್ ಭಾರತೀಯ-ಅಮೆರಿಕನ್ ವೈದ್ಯರನ್ನು ನೇಮಕ ಮಾಡಿದ್ದಾರೆ. ವೆಸ್ಟ್ ವರ್ಜೀನಿಯಾದ ಆರೋಗ್ಯ ಆಯುಕ್ತರಾಗಿದ್ದ ಡಾ. ರಾಹುಲ್ ಗುಪ್ತಾ ಅವರನ್ನು ಜೋ ಬೈಡನ್ ಅಮೆರಿಕದ ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದಾರೆ.

ಶಸ್ತ್ರಚಿಕಿತ್ಸಕರಾಗಿರುವ ಡಾ. ಅತುಲ್ ಗವಾಂಡೆ ಅವರನ್ನು ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಇರುವ ಅಮೆರಿಕಾದ ಏಜೆನ್ಸಿಯ ಜಾಗತಿಕ ಆರೋಗ್ಯ ವಿಭಾಗದ ಸಹಾಯಕ ಆಡಳಿತಗಾರರನ್ನಾಗಿ ನೇಮಕ ಮಾಡಲಾಗಿದೆ.

25 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ. ಗುಪ್ತಾ ಅವರಿಗೆ ಇಬ್ಬರು ಗೌರ್ನರ್ ಗಳ ಅವಧಿಯಲ್ಲಿ ವೆಸ್ಟ್ ವರ್ಜೀನಿಯಾದ ಆರೋಗ್ಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ.

ರಾಜ್ಯದ ಮುಖ್ಯ ಆರೋಗ್ಯ ಅಧಿಕಾರಿಯಾಗಿ ಡಾ.ಗುಪ್ತಾ ಅವರು ಹಲವಾರು ಒಪಿಯಾಡ್ ಬಿಕ್ಕಟ್ಟು ಸ್ಪಂದನೆ ಪ್ರಯತ್ನಗಳ ನೇತೃತ್ವವವನ್ನು ವಹಿಸಿದ್ದು, ನಜಾತ ಶಿಶುಗಳಲ್ಲಿ ಕಂಡುಬರುವ ನಿಯೋನೇಟಲ್ ಆಬ್ಸ್ಟಿನೆನ್ಸ್ ಸಿಂಡ್ರೋಮ್ ಗೆ ತುತ್ತಾಗಲು ಅತಿ ಹೆಚ್ಚು ಅಪಾಯ ಹೊಂದಿರುವ ಮಕ್ಕಳನ್ನು ಗುರುತಿಸಲು ಬರ್ತ್ಕ್ಸೋರ್ ಯೋಜನೆಯನ್ನು ರೂಪಿಸುವುದು ಸೇರಿದಂತೆ ಹಲವು ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಪ್ರವರ್ತಕರೆಂದೇ ಖ್ಯಾತಿ ಪಡೆದಿದ್ದಾರೆ.

ಎಬೋಲಾ ವೈರಾಣು ಭೀತಿಯ ಸಂದರ್ಭದಲ್ಲಿ ರಾಜ್ಯದ ಝಿಕಾ ಕ್ರಿಯಾ ಯೋಜನೆಯ ಅಭಿವೃದ್ಧಿಯ ನೇತೃತ್ವವನ್ನೂ ಗುಪ್ತಾ ಅವರು ವಹಿಸಿಕೊಂಡಿದ್ದು ಗಮನಾರ್ಹವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿರುವ ಗುಪ್ತಾ ಅವರು ಹಲವು ಸಂಘಟನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನು ಭಾರತದ ರಾಯಭಾರಿಯ ಪುತ್ರರಾಗಿರುವ ರಾಹುಲ್ ಜನಿಸಿದ್ದು ಭಾರತದಲ್ಲಿ. ವಾಷಿಂಗ್ ಟನ್ ಡಿಸಿಯ ಉಪನಗರಗಳಲ್ಲಿ ಬೆಳೆದ ಇವರು, 21 ನೇ ವಯಸ್ಸಿನಲ್ಲಿ ದೆಹಲಿಯ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ್ದರು.

ಅಲಬಾಮಾ-ಬರ್ಮಿಂಗ್ಹ್ಯಾಮ್ ನ ವಿವಿಯಿಂದ ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ರಾಹುಲ್, ಲಂಡನ್ ಸ್ಕೂಲ್ ಅಫ್ ಬ್ಯುಸಿನೆಸ್& ಫೈನಾನ್ಸ್ ನ ವಿಭಾಗದಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.