POST

ಪರಿಸರದಲ್ಲಿ ಒಂದು ಪಯಣ Tv23 ಯ ವಿಶೇಷ ಕಾರ್ಯ ಕ್ರಮ

https://youtu.be/Yyd6Q4_80AY

 

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದ ಆಶ್ರಮ ಶಾಲೆಯ ಆವರಣದಲ್ಲಿ ಸುಮಾರು ಮೂರು ಸಾವಿರ ವಿವಿಧ ಜಾತಿಯ ಮರಗಳು ಜನರನ್ನು ಇತ್ತ ಕೈಬಿಸಿ ಕರೆಯುತ್ತಿದೆ. ಶನಿವಾರ ದಿನ ಒಂದು ಈ ಪರಿಸರದ ವಾತಾವರಣದ ಸವಿಯನ್ನು ಸವಿದ ಜನರು ತುಂಬಾನೆ ಖುಷಿ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಸಂಪನ್ಮೂಲ ವ್ಯಕ್ತಿ ಎ ಎಂ ಪಿ ವಾಗೀಶ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ. ಬಿ ಶಿವಾನಂದ, ಉಪಾಧ್ಯಕ್ಷ ಅಂಗಡಿ ಬಸವರಾಜ, ಸದಸ್ಯ ಜಗದೀಶ್ ಗೌಡ, ಅರಣಿ ಬಸವರಾಜ, ಸಿ ಜೆ ಮಂಜುನಾಥ, ಡಿ ಪ್ರಕಾಶ, ಎಂ ಮಲ್ಲಿಕಾರ್ಜುನ, ತಿರುಕಪ್ಪ, ತೋಟಗಾರಿಕೆ ಇಲಾಖೆಯ ರೇವಣ್ಣಸಿದ್ದಪ್ಪ, ಫಾರೆಸ್ಟ್ ಇಲಾಖೆಯ ಮಹಾಂತೇಶ. ಗುಡ್ಡಪ್ಪ, ಬಳ್ಳಾರಿಯ ವಿಶ್ವಪತಿ, ಹಾಸ್ಟೆಲ್ ವಾರ್ಡನ್ ರಫಿ, ಜಂಕಣ್ಣ. ಸೇರಿದಂತೆ ಊರಿನ ಹಿರಿಯರು ಗ್ರಾಮ ಸ್ಥರು ಇದ್ದರು

ಮಸ್ಕಿಯ ಬೆಟ್ಟಗುಡ್ಡಗಳಿಗೆ ಮರು ಸೊಬಗು ನೀಡುವತ್ತ ಹೆಜ್ಜೆಯಿಟ್ಟ ಅಭಿನಂದನ್ ಸಂಸ್ಥೆ

ಮಸ್ಕಿ : ಅಭಿನಂದನ್ ಶಿಕ್ಷಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಆರಂಭಿಸಿದ ಯೋಜನೆಯ ಭಾಗವಾಗಿ 10,001 ಸಸಿಗಳನ್ನು ನೆಡುವ ಕಾರ್ಯಕ್ರಮದ ಭಾಗವಾಗಿ ಮಸ್ಕಿಯ ಬೆಟ್ಟ ಗುಡ್ಡಗಳಿಗೆ ಮರು ಸೊಬಗನ್ನು ನೀಡಲು ಮುಂದಾಗಿರುವ ಅಭಿನಂದನ್ ಸಂಸ್ಥೆಯು ಮಸ್ಕಿಯ ಹೊರವಲಯದಲ್ಲಿ ಇರುವಂತಹ ಬೆಟ್ಟದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಮಸ್ಕಿಯ ಹಿರಿಯರಾದ ಶಿವಪ್ರಸಾದ್ ಕ್ಯಾತನಟ್ಟಿ ಮಾತನಾಡಿ ಅಭಿನಂದನ್ ಸಂಸ್ಥೆಯು ಮಸ್ಕಿಯನ್ನು ಹಸಿರು ಬೃಂದಾವನ ಮಾಡಲು ಮುಂದಾಗಿದ್ದು ಪರಿಸರದ ಮೇಲು ತೋರುತ್ತಿರುವ ವಿಶೇಷ ಕಾಳಜಿಯು ಸಂತಸವನ್ನುಂಟು ಮಾಡುತ್ತಿದ್ದು ಹಾಗೆಯೇ ಈ ಸಂಸ್ಥೆಯು ಇನ್ನು ಹಲವಾರು ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ನಮ್ಮ ಮಸ್ಕಿಯ ಘನತೆಯನ್ನು ಹೆಚ್ಚಿಸುತ್ತಿರುವ ಸಂಗತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಸಿದರು. ಇದೇ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಕಾರ್ಯದರ್ಶಿಗಳಾದ ರಾಮಣ್ಣ ಹಂಪರಗುಂದಿ, ಸಂಸ್ಥೆಯ ಸದಸ್ಯರಾದ ಶೃತಿ ಹಂಪರಗುಂದಿ, ಮಲ್ಲಿಕಾರ್ಜುನ ಬಡಿಗೇರ್, ಅಮೀತ್ ಕುಮಾರ್ ಪುಟ್ಟಿ, ಕಾರ್ತಿಕ್ ಜೋಗೀನ್, ಹನುಮಂತ ಗುಡದೂರು, ಕಿಶೋರ್ ಹಾಗೂ ಇತರರು ಉಪಸ್ಥಿತರಿದ್ದರು.

ತುಮಕೂರು ಜಿಲ್ಲಾ ಕಚೇರಿಯ ಮುಂದೆ ರೈತರ ಬೃಹತ್ ಪ್ರತಿಭಟನೆ

 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತುಮಕೂರು ಜಿಲ್ಲಾ ಕಚೇರಿಯ ಮುಂದೆ ರೈತರ ಬೃಹತ್ ಪ್ರತಿಭಟನೆರಾಜ್ಯಾಧ್ಯಕ್ಷರಾದ ಅಂತಹ ಕೋಡಿಹಳ್ಳಿ ಚಂದ್ರಶೇಖರ್ ಅವರು ನೇತೃತ್ವದಲ್ಲಿಕೊರಟಗೆರೆ ತಾಲ್ಲೂಕು ಬಡವನಹಳ್ಳಿ ಹೋಬಳಿ ಅಜ್ಜನಹಳ್ಳಿ ಗ್ರಾಮ ಸರ್ವೆ ನಂಬರ್ ನಲ್ಲಿ 33 . ರೈತರು ಉಳುಮೆ ಮಾಡುತ್ತಿರುವ ಜಮೀನನ್ನು ತಾಲೂಕ ದಂಡಾಧಿಕಾರಿಗಳ ದಂತಹ ಬೇರೆಯವರಿಗೆ ವರ್ಗಾವಣೆ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಕೂಡಲೇ ಅಧಿಕಾರಿಯನ್ನು ವರ್ಗಾಯಿಸಬೇಕೆಂದು

 

ವರದಿ ಶಿವಕುಮಾರ್

ಉಪ್ಪಾರ ಸಮಾಜದಿಂದ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ

ಭದ್ರಾವತಿ: ಈ ಬಾರಿ ನಗರಸಭೆ ಚುನಾವಣೆಯಲ್ಲಿ ಉಪ್ಪಾರ ಸಮಾಜ ಬಾಂಧವರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ ಗಿರೀಶ್ ಉಪ್ಪಾರ ಮತದಾರರಿಗೆ ಮನವಿ ಮಾಡಿದರು.
ಹಳೇ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶುಕ್ರವಾರ ಸಂಜೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುವ ಸಂದರ್ಭದಲ್ಲಿ ಸಮಾಜದ ಮುಖಂಡರೆಲ್ಲರೂ ಸೇರಿ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬೆಂಬಲಿಸುವ ನಿಟ್ಟಿನಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಉಪ್ಪಾರ ಸಮಾಜದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಪ್ರಸ್ತುತ ಸಮಾಜವನ್ನು ಗುರುತಿಸಿ ಎಲ್ಲಾ ರೀತಿಯಿಂದಲೂ ಪ್ರೋತ್ಸಾಹಿಸುತ್ತಿರುವ ಬಿಜೆಪಿ ಪಕ್ಷ ಬೆಂಬಲಿಸುವುದು ಸೂಕ್ತವಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಉಪ್ಪಾರ ಸಮಾಜ ಬಯಸುತ್ತದೆ. ಸಮಾಜದವರನ್ನು ಬೆದರಿಸಿ ಅಥವಾ ಆಮಿಷಗಳ ಮೂಲಕ ಮತ ಪಡೆಯಲು ಯತ್ನಿಸುವುದನ್ನು ನಾವು ಖಂಡಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಹಕ್ಕನ್ನು ಚಲಾಯಿಸುವ ಅಧಿಕಾರವಿದೆ. ಮತ ಚಲಾಯಿಸುವ ಹಕ್ಕಿಗೆ ಯಾವುದೇ ರೀತಿ ಚ್ಯುತಿ ಬರಬಾರದು ಎಂದರು.
ಗೋಷ್ಠಿಯಲ್ಲಿ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅವಿನಾಶ್, ಭಗೀರಥ ಯುವಕರ ಸಂಘದ ಜಿಲ್ಲಾಧ್ಯಕ್ಷ ಮುರುಳಿ, ನಿಗಮದ ನಿರ್ದೇಶಕ ಓಂಕಾರಪ್ಪ, ಮುಖಂಡರಾದ ಅಣ್ಣಪ್ಪ, ಅವಿನಾಶ್, ಕೆ.ಟಿ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೊಟ್ಟೂರು: ನೂತನ ಸಿಪಿಐ ಆಗಿ ಟಿ.ಎಸ್.ಮುರುಗೇಶ ಅಧಿಕಾರ ಸ್ವೀಕಾರ

ಕೊಟ್ಟೂರು: ಕೊಟ್ಟೂರು ತಾಲೂಕು ಪೊಲೀಸ್ ಇಲಾಖೆಯ ಸಿಪಿಐ ದೊಡ್ಡಣ್ಣ ಕರ್ನಾಟಕ ಲೋಕಾಯುಕ್ತ ವಿಭಾಗಕ್ಕೆ ವರ್ಗಾವಣೆ ಯಾಗಿದ್ದು ಇವರ ಸ್ಥಳಕ್ಕೆ ಟಿಎಸ್.ಮುರುಗೇಶ ನೇಮಕಗೊಂಡಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರದ ಪೊಲೀಸ್ ಇಲಾಖೆಯ ಐಪಿಎಸ್ ಅಧಿಕಾರಿ ಡಾ ಎಂಎಸಲೀಂ ಆದೇಶ ಮಾಡಿದ್ದಾರೆ.ಸರ್ಕಾರದ ಆದೇಶದಂತೆ ಕೆಲಸಕ್ಕೆ ಹಾಜರಾಗಿ ಅಧಿಕಾರವಹಿಸಿಕೊಂಡರು.

ಜಮಖಂಡಿ ತಾಲೂಕಿನ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಜಮಖಂಡಿ. ಇಂದು ನಗರದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕೋವಿಡ್ -19 ಸಂಕಷ್ಟದಲ್ಲಿರುವ ಜಮಖಂಡಿ ತಾಲೂಕಿನ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆಯ ಕಾರ್ಯವನ್ನು ಕೈಗೊಳ್ಳಲಾಯಿತು

ರಸ್ತೆ ಮೂರು ರಾಜ್ಯದ ಜನರಿಗೆ ಜೀವ ಹಿಂಡುತಿದೆ

 

ರಾಷ್ಟ್ರೀಯ ಹೆದ್ದಾರಿ NH 161A ಬೀದರ್ ಜಿಲ್ಲೆಯ ಔರಾದ ತಾಲೂಕಿನ ಮಾರ್ಗವಾಗಿ ಮಹಾರಾಷ್ಟ್ರದ ಲಾತುರ ಹಾಗೂ ತೆಲಂಗಾಣದ ರಾಜ್ಯದ ನಾರಾಯಣಖೈಡ ಈ ರಸ್ತೆ ಮೂರು ರಾಜ್ಯದ ಜನರಿಗೆ ಜೀವ ಹಿಂಡುತಿದೆ. ಈ ರಸ್ತೆ ಹದಗೆಡಲು ಕಾರಣ. ತೆಲಂಗಾಣದಿಂದ ಮರಳು ಸಾಗಾಣಿಕೆ ಮಾಡುವಂತಹ ಲಾರಿಗಳು. ಭಾರಿ ಪ್ರಮಾಣದಲಿ ಮರಳು ಸಾಗಾಣಿಕೆಯಿಂದಾಗಿ .15ದಿನಗಳ ಹಿಂದೆ ಎರಡು ಬೈಕಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು ಘಟನೆ-ಈ ರಸ್ತೆಮೇಲೆ ನಡೆದಿದೆ. ಇನ್ನೂ ಇಬ್ಬರು ಯುವಕರು ದವಾಖಾನೆಯಲ್ಲಿ ನರಳುತ್ತಿದ್ದಾರೆ. ಪಿಡಬ್ಲ್ಯೂಡಿ ಅಧಿಕಾರಿ ಕೂಡ ಇದಕ್ಕೆ ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ. ಕಣ್ಣಾರೆ ಕಂಡು ಕೂಡ ಕುರುಡರಂತೆ ಇದ್ದಾರೆ. ಆರ್. ಟಿ. ಒ ಸಹ ನೋಡಿ ಕೂಡ ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ. ಕಾಶಂಪೂರ್, ಯನಗುoದಾ, ಚಿಂತಾಕಿ, ನಾಗಂಪಲ್ಲಿ,ಕರಂಜಿ ಬಿ , ಕರಂಜಿ ಕೆ ರಾಯ ಪಳ್ಳಿ, ನಿಂಗದಳ್ಳಿ, ಎಲ್ಲ ಗ್ರಾಮದ ಜನರಿಗೆ ಈ ಒಂದು ರಸ್ತೆ ಜೀವ ಹಿಂಡುತಿದೆ. ಹೇಳೋಕೆ ಮಾತ್ರ ಬೀದರ್ ಜಿಲ್ಲೆಯಲಿ ಸಚಿವರು, ಕೇಂದ್ರದ ಮಂತ್ರಿಗಳು ಇದ್ದರೂ ಕೂಡ ಈ ಸ್ಥಿತಿ ನಮ್ಮ ಬೀದರ ಜಿಲ್ಲೆಯಲ್ಲಿ ನಾವು ಕಣ್ಣಾರೆ ಕಾಣಬಹುದು.ಮತದಾನದ ವೇಳೆಯಲ್ಲಿ ಎಲ್ಲಾ ಹಳ್ಳಿಹಳ್ಳಿಗೂ ಕೂಡ ಮತದಾನ ಹಾಕಿ ಅಂತ ಬರುತ್ತಾರೆ .ಆದರೆ ಮತದಾನ ಮುಗಿದ ಮೇಲೆ ಯಾರೂ ಕೂಡ ಹಳ್ಳಿಗಳಿಗೆ ಜನರ ಸಂಕಷ್ಟ ಯಾರು ಕೇಳಲ್ಲ? ದಯವಿಟ್ಟು ಈ ಒಂದು ರಸ್ತೆಗೆ ಯಾವುದಾದರೂ ಒಂದು ಕ್ರಮ ಕೈಗೊಳ್ಳಬೇಕು. ಜನರಿಗಾಗಿ ಸುವ್ಯವಸ್ಥಿತ ರಸ್ತೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು. ವರದಿ : ಸತ್ಯವಾನ ಮುಕ್ತೆದಾರ

ಕ್ಷಯ ಮುಕ್ತ ಗ್ರಾಮ ಪಂಚಾಯತಿ ಆಂದೋಲನ ಗ್ರಾಮ

ಕುಷ್ಟಗಿ: ತಾಲ್ಲೂಕಿನ ಕ್ಯಾದಿಗುಪ್ಪ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಕೊಪ್ಪಳ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಕುಷ್ಟಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ದೋಟಿಹಾಳ, ಗ್ರಾಮ ಪಂಚಾಯಿತಿ ಕಾರ್ಯಾಲಯ ಕ್ಯಾದಿಗುಪ್ಪ ಸಹಯೋಗದಲ್ಲಿ ಆಯೋಜಿಸಿದ್ದ ಕ್ಷಯ ಮುಕ್ತ ಗ್ರಾಮ ಪಂಚಾಯತ್ ಅಂದೋಲನ ಕಾರ್ಯಕ್ರಮದಲ್ಲಿ
ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾಕ್ಟರ್ ಮಹೇಶ್ ಎಮ್ ಜಿ* ಅವರು ಮಾತನಾಡಿ 2025 ರವಳಗೆ ಕ್ಷಯ ಮುಕ್ತ ಭಾರತ ಮಾಡುವಲ್ಲಿ ಭಾರತ ಸರ್ಕಾರ ಗುರಿ ಹೊಂದಿದ್ದು, ಅದು ಸಕಾರಗೊಳ್ಳಲು ಸ್ಥಳೀಯ ಸರಕಾರದಂತಿರುವ ಗ್ರಾಮ ಪಂಚಾಯಿತಿ ಮಹತ್ವದ ಪಾತ್ರ ವಹಿಸಬೇಕಿದೆ… ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೇ ಮೊದಲಿಗೆ ಕ್ಯಾದಿಗುಪ್ಪ ಪಂಚಾಯಿತಿ ಕ್ಷಯ ಮುಕ್ತ ಮಾಡಲು ಮೊದಲ ಹೆಜ್ಜೆ ಹಾಕಿದ್ದು, ಎಲ್ಲಾ ಇಲಾಖೆಯ ಸಹಾಯದೊಂದಿಗೆ ಸಹಕಾರಗೊಳ್ಳಲಿ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾಕ್ಟರ್ ಆನಂದ ಗೋಟುರ್* ಮಾತನಾಡಿ ಕ್ಷಯ ಮುಕ್ತ ಕ್ಯಾದಿಗುಪ್ಪ ಗ್ರಾಮ ಪಂಚಾಯಿತಿ ಮಾಡುವಲ್ಲಿ ನಮ್ಮ ತಾಲ್ಲೂಕಿನಿಂದಲೆ ಮೊದಲ ಹೆಜ್ಜೆ ಇಡೋಣ ಎಂದರು.

ಕಾರ್ಯಕ್ರಮದಲ್ಲಿ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಂತೋಷ , ಗ್ರಾಮ ಪಂಚಾಯಿತಿ ಪಿಡಿಓ ಶ್ರೀಶೈಲ್, ಕ್ಷಯರೋಗ ಸಿಬ್ಬಂದಿ ವೆಂಕಟೇಶ್ ಗುಡಗುಡಿ ಮತ್ತು ವೀರಭದ್ರಪ್ಪ ಗಂಗನಾಳ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಎಮ್.ಎಮ್.ಕೋರಿ,
ವೆಂಕಟೇಶ ರೆಡ್ಡಿ ,ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಭುವನೇಶ್ವರಿ ಬಳಿಗಾರ,
ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಚಾಮರಾಜನಗರ ಜಿಲ್ಲೆಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಚಾಮರಾಜನಗರ ಜಿಲ್ಲೆಗೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಆಗಮಿಸಿ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಬಿಜೆಪಿ ಕಛೇರಿ ಕಾಮಗಾರಿಯನ್ನು ವಿಕ್ಷಣಿ ಮಾಡಿದರು ಜಿಲ್ಲೆಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಸದಸ್ಯರು ಮುಖಂಡರು ಕಾರ್ಯಕರ್ತರು ಸೇರಿ ರಾಜ್ಯಾಧ್ಯಕ್ಷರನ್ನು ಸ್ವಾಗತಿಸಿದರು

ಉಚಿತವಾಗಿ ವ್ಯಾಕ್ಸಿನೇಷನ್ ಅಭಿಯಾನ

 

ಸೇಡಂ ಪಟ್ಟಣದಲ್ಲಿ ಇಂದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಶಾರದಾ ಚಾರಿಟೇಬಲ್ ಟ್ರಸ್ಟ್ ಮತ್ತು ಬಾಲರಾಜ್ ಗುತ್ತೇದಾರ್ ಬ್ರಿಗೇಡ್ ವತಿಯಿಂದ ಉಚಿತವಾಗಿ ವ್ಯಾಕ್ಸಿನೇಷನ್ ಅಭಿಯಾನ ಹಾಗೂ ಬಾಲರಾಜ್ ಗುತ್ತೇದಾರ್ ಬ್ರಿಗೇಡ್ ವೆಬ್ಸೈಟ್ ಬಿಡುಗಡೆ ಕಾರ್ಯಕ್ರಮಕ್ಕೆ ಹಾಲಪ್ಪಯ್ಯ ವಿರಕ್ತಮಠದ ಪರಮಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿಗಳು ಚಾಲನೆ ನೀಡಿದರು.