ಹೂವಿನ ಹಡಗಲಿ: ಜನ್ಮದಿನವನ್ನು ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ಆಚರಿಸುವ ಪರಿ ವಿನೂತನ ಪ್ರಯೋಗ ಎಂದು ನೀಲಕಂಠಪ್ಪ
ಹೇಳಿದರು.
ಪಟ್ಟಣದ ವಿಜಯನಗರ ಬಡಾವಣೆಯಲ್ಲಿರುವ ಕೃಪಾಶೃಯ ಟ್ರಸ್ಟ್ ವೃದ್ಧಾಶ್ರಮದಲ್ಲಿ
ಶುಕ್ರವಾರ ನಿವೃತ್ತ ಸಹಾಯಕ ಅಭಿಯಂತರರು ಶಿಂಟಾಲೂರು ಏತ ನೀರಾವರಿ ಯೋಜನೆ ಅಧಿಕಾರಿ ಓದೋ ಗಂಗಪ್ಪರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಯಸ್ಸಾಗಿ ಮಕ್ಕಳ ಪ್ರೀತಿಯಿಂದ ವಂಚಿತರಾದ ವೃದ್ಧಾಶ್ರಮದ ತಾಯಂದಿರ ಜೊತೆ ಜನ್ಮದಿನಾಚರಣೆ ಆಚರಿಸಿ ಅವರಿಗೆ ವಸ್ತೃ ಉಡುಗೊರೆ .ಹಾಗೂ ಆಹಾರ ಕೊಡುವ ಮೂಲಕ ಬಡವರ ಸೇವೆ ಸಲ್ಲಿಸಿದ್ದಾರೆ ಎಂದರು.
ಹಲಗಿ ಸುರೇಶ ಮಾತನಾಡಿ
ಸರ್ಕಾರಿ ನೌಕರರಲ್ಲಿ ಸಮಾಜ ಸೇವೆ ಸಲ್ಲಿಸುವ ಮನೋಭಾವ ಬೆಳೆಯುತ್ತಿದೆ. ತಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ದೀನರ ಬಡವರ ಬದುಕಿಗೆ ಹಂಚುವುದು ದೇವರಿಗೆ ಸಲ್ಲಿಸಿದಂತೆ ಎಂದು ತಿಳಿಸಿದರು.
ವೃದ್ಧಾಶ್ರಮ ಉಸ್ತುವಾರಿ ಜ್ಯೋತಿ ರವರು
ಕೃಪಾಶೃಯ ಟ್ರಸ್ಟ್ ನಾ ರಾಜ್ಯಾಧ್ಯಕ್ಷರಾದ ರೆ.ಶ್ಯಾಮಸನ್ಅರ್ಥಾರ್ ಪಾಲ್ ರವರು
ವೃದ್ಧಾಶ್ರಮದಲ್ಲಿರುವ ತಾಯಂದಿರಿಗೆ ಪ್ರತಿನಿತ್ಯ ಉತ್ತಮ ಗುಣಮಟ್ಟದ ಉಪಹಾರ ಊಟ.ಆರೋಗ್ಯ ಒದಗಿಸುತ್ತಿದ್ದಾರೆ ಎಂದು ಹೇಳಿದರು ಸಮಾರಂಭದಲ್ಲಿ ಬಿ.ಎಂ. ಮಹೇಶ್ವರಯ್ಯ ಮಲ್ಲಿಕಾರ್ಜುನ ಹೊಳಲು . ನಂದಿಹಳ್ಳಿ ಬಸವರಾಜ ಇತರರು ಉಪಸ್ಥಿತರಿದ್ದರು. ಓದೋ ಗಂಗಪ್ಪ ರವರನ್ನು ಆತ್ಮೀಯವಾಗಿ
ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ಪಟ್ಟಣದ
ಸರ್ಕಾರಿ ಶಾಲೆಗಳ ಮಕ್ಕಳಿಗೆ ಪೇನ್ನು ಪುಸ್ತಕನೀಡಿ ವಿದ್ಯಾರ್ಥಿಗಳಿಗೆ ಗವಿ ಸಿದ್ದೇಶ್ವರ ಮಠದಲ್ಲಿ ಉಪಹಾರದ ಸೇವೆ ಸಲ್ಲಿಸಿದರು.
