ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಿಂದ ಕುವೈತ್ ನಿಂದ ಮೃತದೇಹಗಳನ್ನು ತರಲು ಸಾಧ್ಯವಾಯಿತು: ಕೇರಳ ಸಿಎಂ ಪಿಣರಾಯಿ ವಿಜಯನ್

Share

ಕೊಚ್ಚಿ: ಕುವೈತ್‌ನಲ್ಲಿ ಅಗ್ನಿ ಅವಘಡದಲ್ಲಿ ಬಲಿಯಾದ 45 ಭಾರತೀಯರ ಪಾರ್ಥಿವ ಶರೀರವನ್ನು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡು ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿ ಇಂದು ಶುಕ್ರವಾರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟ ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ ವಿಮಾನ ಇಂದು ಬೆಳಗ್ಗೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು.ಗುರುವಾರ ಕುವೈತ್‌ಗೆ ಧಾವಿಸಿದ ಕೇಂದ್ರ ರಾಜ್ಯ ಸಚಿವ ಸಿಂಗ್ ವಿಕೆ ಸಿಂಗ್ ಮೃತದೇಹಗಳನ್ನು ಹೊತ್ತ ವಿಮಾನದಲ್ಲಿ ಆಗಮಿಸಿದರು. ಕೇಂದ್ರ ಸಚಿವ ಸುರೇಶ್ ಗೋಪಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವರು ವಿಮಾನ ನಿಲ್ದಾಣದಲ್ಲಿ ಭಾವಪೂರ್ಣವಾಗಿ ಬರಮಾಡಿಕೊಂಡರು. ಸಚಿವರಾದ ವೀಣಾ ಜಾರ್ಜ್, ಪಿ ರಾಜೀವ್, ಕೆ ರಾಜನ್ ಮತ್ತು ರೋಶಿ ಆಗಸ್ಟಿನ್ ಕೂಡ ಪಾರ್ಥಿವ ಶರೀರವನ್ನು ಸ್ವೀಕರಿಸಲು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

ಕುಟುಂಬಸ್ಥರಿಗೆ ಹಸ್ತಾಂತರಿಸಿದ ನಂತರ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್, ಮೃತಪಟ್ಟ ಭಾರತೀಯರ ಮೃತಶರೀರಗಳನ್ನು ತರೆತರಲು ಭಾರತ ಸರ್ಕಾರ ಮತ್ತು ಕುವೈತ್‌ನ ಮಧ್ಯಸ್ಥಿಕೆ ಸಹಾಯ ಮಾಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಮೃತಪಟ್ಟವರ ಕುಟುಂಬಗಳಿಗೆ ಇದು ತುಂಬಲಾರದ ನಷ್ಟವಾಗಿದೆ. ಕುವೈತ್ ಸರ್ಕಾರವು ಪರಿಣಾಮಕಾರಿ ಮತ್ತು ನಿಷ್ಪಾಪ ಕ್ರಮಗಳನ್ನು ತೆಗೆದುಕೊಂಡಿದೆ, ದುರಂತದ ಬಗ್ಗೆ ತಿಳಿದಾಗ, ಭಾರತ ಸರ್ಕಾರವೂ ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಕೈಗೊಂಡಿದೆ ಎಂದರು.


Share

ಸರಕು ಸಾಗಣೆ: ಖಾಸಗಿ ಕಂಪನಿಗಳ ಹಿಂದಿಕ್ಕುವಲ್ಲಿ KSRTC ‘ನಮ್ಮ ಕಾರ್ಗೋ ಸೇವೆ’ ವಿಫಲ!

Share

ಬೆಂಗಳೂರು: ಪಾರ್ಸಲ್ ಮತ್ತು ಕೋರಿಯರ್ ಸರ್ವಿಸ್ ಕ್ಷೇತ್ರಕ್ಕೂ ಲಗ್ಗೆಯಿಟ್ಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ನಿರೀಕ್ಷಿತ ಪ್ರಮಾಣದ ಆದಾಯ ಗಳಿಸುವಲ್ಲಿ ವಿಫಲವಾಗಿದೆ.

2025 ರ ವೇಳೆಗೆ 100 ಕೋಟಿ ವಾರ್ಷಿಕ ಆದಾಯ ಗಳಿಸುವುದು ನಿಗಮದ ಗುರಿಯಾಗಿತ್ತು. ಸೇವೆ ಆರಂಭವಾದಾಗ 100 ಲಾರಿಗಳ ಸೇರಿಸುವುದಾಗಿ ತಿಳಿಸಿತ್ತು. ಒಂದು ವರ್ಷದಲ್ಲಿ 500 ಕ್ಕೂ ಲಾರಿಗಳ ಸೇರಿಸಲು ಚಿಂತನೆ ನಡೆಸಿತ್ತು. ಆದಾಗ್ಯೂ, ಖಾಸಗಿ ಕಂಪನಿಗಳ ಕಠಿಣ ಪೈಪೋಟಿಯಿಂದಾಗಿ ಗುರಿ ಸಾಧಿಸುವಲ್ಲಿ ನಿಗಮವು ಹೆಣಗಾಡುವಂತಾಗಿದೆ.

ಕೆಎಸ್‌ಆರ್‌ಟಿಸಿಯ ಉನ್ನತಾಧಿಕಾರಿಯೊಬ್ಬರು ಮಾತನಾಡಿ, ಕಾರ್ಪೊರೇಷನ್ ಬಸ್‌ಗಳನ್ನು ಬಳಸಿಕೊಂಡು 2021 ರಲ್ಲಿ ನಮ್ಮ ಕಾರ್ಗೋ ಸೇವೆಗಳನ್ನು ಪ್ರಾರಂಭಿಸಿದ್ದೆವು. ಆರಂಭದಲ್ಲಿ ಉತ್ತಮ ಬೆಳವಣಿಗೆಗಳು ಕಂಡುಬಂದಿದ್ದವು. ಈವೇಳೆ 10 ಕೋಟಿ ಆದಾಯ ಗಳಿಸಿದ್ದೆವು. ಬಳಿಕ ಆಂಧ್ರಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯು ಯಶಸ್ವಿಯಾಗಿ ನಡೆಸುತ್ತಿರುವ ಕಾರ್ಗೋ ಸೇವೆಗಳನ್ನು ಅಧ್ಯಯನ ನಡೆಸಿದ್ದೆವು, ಈ ಸಂಸ್ಥೆಯು 150 ಕೋಟಿ ರೂ.ಗಿಂತ ಹೆಚ್ಚು ಆದಾಯವನ್ನು ಗಳಿಸುತ್ತಿದೆ. ಹೀಗಾಗಿ ನಾವೂ ಈ ಸೇವೆ ಆರಂಭಿಸಲು ಮುಂದಾಗಿದ್ದೆವು. ಆರಂಭದಲ್ಲಿ 20 ಲಾರಿಗಳಿಗೆ ಜಿಪಿಎಸ್ ಅಳವಡಿಸಿ, ಸೇವೆ ಆರಂಭಿಸಿದ್ದೆವು. ಆದರೆ, ಯೋಜನೆ ನಿರೀಕ್ಷೆಯಂತೆ ಯಶಸ್ವಿಯಾಗಲಿಲ್ಲ. 20 ಲಾರಿಗಳಲ್ಲಿ ಪೈಕಿ 14 ಲಾರಿಗಳು ಬಿಡಿ ಭಾಗಗಳು ಮತ್ತು ಇತರ ಸರಕುಗಳನ್ನು ಸಾಗಿಸಲು ನಿಗಮವು ಬಳಸುತ್ತಿದೆ. ಈ ಹಿಂದೆ ಈ ಸರಕುಗಳನ್ನು ಸಾಗಿಸಲು ನಾವು ಹಳೆಯ ಬಸ್‌ಗಳನ್ನು ಬಳಸುತ್ತಿದ್ದೆವು. ಕಾರ್ಗೋ ವಲಯವು ಹೆಚ್ಚಿನ ಸ್ಪರ್ಧಾತ್ಮಕತೆ ಹೊಂದಿದೆ. ಆದರೆ, ಖಾಸಗಿ ಸಂಸ್ಥೆಯವರು ರಾತ್ರಿಯಿಡೀ ಕಾರ್ಯನಿರ್ವಹಿಸುತ್ತಿದ್ದು, ಪೈಪೋಟಿಯಿದೆ ಎಂದು ಹೇಳಿದ್ದಾರೆ.ಈ ವಿಫಲತೆಗೆ ಒಂದು ಕಾರಣವೆಂದರೆ ನಮ್ಮಲ್ಲಿ ಸರಕು ಲೋಡರ್‌ಗಳು ಮತ್ತು ಅನ್‌ಲೋಡರ್‌ಗಳಿಲ್ಲ. ಅಲ್ಲದೆ, ನಾವು ವಿವಿಧ ಕ್ಲಸ್ಟರ್‌ಗಳನ್ನು ಮ್ಯಾಪ್ ಮಾಡಬೇಕು. ಹಣ್ಣುಗಳು, ಖಾಸಗಿ ಸಂಸ್ಥೆ ಒದಗಿಸುವ ಸೇವೆಗಳನ್ನು ನಾವೂ ಒದಗಿಸಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಬೇಕು ಎಂದು ತಿಳಿಸಿದರು.

ಸೇವೆಯನ್ನು ಸುಧಾರಿಸಲು ನಿಗಮವು ಎಲ್ಲಾ ರೀತಿಯ ಆಯ್ಕೆಗಳನ್ನು ಅನ್ವೇಷಿಸುತ್ತಿದೆ. ಮಾತುಕತೆ ನಡೆಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಹೇಳಿದ್ದಾರೆ.

ಮುಂದಿನ ತಿಂಗಳುಗಳಲ್ಲಿ ನಿಗಮದ ಕಾರ್ಗೋ ಸೇವೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Share

ಏವೂರ್ ಪ್ರೌಢಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ಕೂಡಲೆ ಕಾಯಂ ನಿಯೋಜನೆ ಮಾಡಬೇಕು ದೇವೇಂದ್ರಪ್ಪ ದೊರೆ ಆಗ್ರಾಹ.

Share

ಸುರಪುರ ತಾಲೂಕಿನ ಏವುರ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರನ್ನು ಖಾಯಂ ಆಗಿ ನೇಮಕ ಮಾಡಬೇಕು ಮತ್ತು ಬೇರೆ ಶಿಕ್ಷಕರಿಗೆ ಎರಡು ಕಡೆ ಡೆಪ್ಯುಟೇಷನ್ ಕೊಡಲಾಗಿದೆ ಇದರಿಂದ ಮಕ್ಕಳ ಶಿಕ್ಷಣದ ಮೇಲೆ ಅನಾನುಕೂಲ ಪರಿಣಾಮ ಬೀರುವ ಕಾರಣ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಪ್ರೌಢಶಾಲೆಗೆ ಇಂಗ್ಲಿಷ್ ಭಾಷೆಯ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು ಈಗಾಗಲೇ ಸುರಪುರ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಲಾಗಿದೆ ಅದೇ ರೀತಿಯಾಗಿ ನೂತನವಾಗಿ ಬಂದಂತಹ ತಾಲೂಕ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಮತ್ತು ಯಾದಗಿರಿ ಜಿಲ್ಲಾ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಯಾದಗಿರಿ ಜಿಲ್ಲಾ ಅವರಿಗೆ ಈ ವಿಷಯದ ಕುರಿತು ಮನವಿ ಪತ್ರ ಸಲ್ಲಿಸಿರುವದಾಗಿ ಕರ್ನಾಟಕ ರಾಜ ರೈತ ಸಂಘ ಮತ್ತು ರೈತ ಸೇನೆಯ ಅಧ್ಯಕ್ಷರಾದ ದೇವೇಂದ್ರಪ್ಪ ದೊರೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಜೆಟ್ಟಪ್ಪ ಎಸ್ ಪೂಜಾರಿ


Share

ಚುನಾವಣಾ ಕರ್ತವ್ಯದ ಬಳಿಕ ಸ್ವಸ್ಥಾನಕ್ಕೆ ಮರಳಿದ ಅಧಿಕಾರಿಗಳು: ತೆರಿಗೆ ವಂಚಕರ ವಿರುದ್ಧ ಕ್ರಮಕ್ಕೆ BBMP ಮುಂದು!

Share

ಬೆಂಗಳೂರು: ಲೋಕಸಭಾ ಚುನಾವಣೆ ಚುನಾವಣಾ ಕರ್ತವ್ಯ ಪೂರ್ಣಗೊಳಿಸಿದ ಬಳಿಕ ಸ್ವಸ್ಥಾನಕ್ಕೆ ಬಿಬಿಎಂಪಿ ಅಧಿಕಾರಿಗಳು ಮರಳಿದ್ದು, ತೆರಿಗೆ ವಂಚಕರತ್ತ ಗಮನ ಹರಿಸಿದ್ದಾರೆ,

ಕೆಲವರು ‘ಒನ್ ಟೈಮ್ ಸೆಟ್ಲ್‌ಮೆಂಟ್’ (ಒಟಿಎಸ್) ಯೋಜನೆಯ ಅಡಿಯಲ್ಲಿ ತೆರಿಗೆ ಕಟ್ಟಿಲ್ಲ. ಹೀಗಾಗಿ ತೆರಿಗೆ ಕಟ್ಟದ ಆಸ್ತಿಗಳು, ವಿಶೇಷವಾಗಿ ವಾಣಿಜ್ಯ ಕಟ್ಟಡಗಳ ವಶಕ್ಕೆ ಪಡೆಯುವಂತೆ ಕಂದಾಯ ಅಧಿಕಾರಿಗಳಿಗ ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.

ಒನ್ ಟೈಮ್ ಸೆಟ್ಲ್‌ಮೆಂಟ್ ಯೋಜನೆಯಡಿಯಲ್ಲಿ, ದೀರ್ಘಾವಧಿಯ ತೆರಿಗೆ ಬಾಕಿಗಳ (ಐದು ವರ್ಷಗಳು) ಬಡ್ಡಿಯ ಮೇಲೆ ಶೇಕಡಾ 50 ರಷ್ಟು ಕಡಿತವನ್ನು ನೀಡಲಾಗಿತ್ತು. ಕಂದಾಯ ಅಧಿಕಾರಿಗಳು ಅಂತಹ ಸುಸ್ತಿದಾರರಿಗೆ ನೋಟಿಸ್ ಜಾರಿ ಮಾಡಿದ್ದು, ಶೀಘ್ರದಲ್ಲಿಯೇ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತಹ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.ತೆರಿಗೆ ಬಾಕಿಯ ಮೇಲೆ ಶೇಕಡಾ 50 ರಷ್ಟು ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಮೂರು ತಿಂಗಳ ಹಿಂದೆಯೇ ಯೋಜನೆ ಜಾರಿಗೆ ಬಂದಿದ್ದರೂ ಬಾಕಿ ಉಳಿಸಿಕೊಂಡಿರುವ ಕಟ್ಟಡ ಮಾಲೀಕರು ಅವಕಾಶವನ್ನು ಬಳಸಿಕೊಂಡಿಲ್ಲ. ಬಾಕಿ ಇರುವ ತೆರಿಗೆಯನ್ನು ವಸೂಲಿ ಮಾಡಲು ಪಾಲಿಕೆ ಸೋಮವಾರದಿಂದ ಅಂತಹ ಕಟ್ಟಡಗಳನ್ನು ವಶಪಡಿಸಿಕೊಂಡು ಬೀಗ ಹಾಕಲಿದೆ ಎಂದು ಬಿಬಿಎಂಪಿ ಕಂದಾಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಕುರಿತು ಹಲವು ಬಾರಿ ನೋಟಿಸ್‌ ಜಾರಿ ಮಾಡಿದರೂ ಕೆಲವರು ಸ್ಪಂದಿಸಿಲ್ಲ. ಅವರ ಆಸ್ತಿ, ಅದರಲ್ಲೂ ವಾಣಿಜ್ಯ ಕಟ್ಟಡಗಳಿಗೆ ಬೀಗ ಹಾಕುವ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.


Share

Breaking News: ಇನ್ನು ಕೆಲವೇ ಗಂಟೆಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ರಾಜಿನಾಮೆ?: ಪ್ರತಾಪ್ ಸಿಂಹ ಟ್ವೀಟ್!

Share

ಬೆಂಗಳೂರು: ಕರ್ನಾಟಕ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. 28 ಕ್ಷೇತ್ರಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಮಧ್ಯೆ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ. ಕೆ ಸುಧಾಕರ್ ಗೆದ್ದರೆ ತಾವು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಪ್ರದೀಪ್ ಈಶ್ವರ್ ಮಾಧ್ಯಮಗಳ ಮುಂದೆ ಮಾತನಾಡಿದ್ದರು.

ಈ ಹಿಂದೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಕಾಂಗ್ರೆಸ್ ಶಾಸಕ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಖಚಿತವಾಗಿ ಗೆಲ್ಲುತ್ತಾರೆ. ನಮ್ಮ ಅಭ್ಯರ್ಥಿಗಿಂತ ಡಾ. ಸುಧಾಕರ್ 1 ಮತ ಹೆಚ್ಚಿಗೆ ಪಡೆದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಘಂಟಾ ಘೋಷವಾಗಿ ಹೇಳಿದ್ದರು.

ಇದೀಗ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಅವರು 8,19,588 ಮತಗಳನ್ನು ಪಡೆದು 1,62,099 ಮತಗಳ ಅಂತರದಿಂದ ಬೃಹತ್ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ 6,57,489 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.ಇದೀಗ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪ್ರದೀಪ್ ಈಶ್ವರ್ ಮಾತನಾಡಿದ್ದ ವಿಡಿಯೋ ತುಣುಕನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು ಇನ್ನು ಕೆಲವೇ ಗಂಟೆಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ರಾಜಿನಾಮೆ ನೀಡಲಿದ್ದಾರೆ ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.


Share

ಭಾರತದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮೂರನೇ ಪ್ರಧಾನಿ ನರೇಂದ್ರ ಮೋದಿ; ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?

Share

2024ರ ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದರೂ, ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಮರಳುವ ಭರವಸೆಯಲ್ಲಿದೆ. ಒಂದು ವೇಳೆ ಈ ಬಾರಿಯೂ ಎನ್‌ಡಿಎ ಗೆಲುವು ಸಾಧಿಸಿದ್ದೇ ಆದರೆ ಪ್ರಧಾನಿಯಾಗಿ 10 ವರ್ಷಗಳಿಗೂ ಅಧಿಕ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಸ್ಥಾನ ಪಡೆಯಲಿದ್ದಾರೆ.

ಭಾರತದ ಕೆಲವು ದೀರ್ಘಾವಧಿಯ ಪ್ರಧಾನ ಮಂತ್ರಿಗಳ ಪಟ್ಟಿಯನ್ನು ನೋಡೋಣ…

ಜವಾಹರಲಾಲ್ ನೆಹರು (ಕಾಂಗ್ರೆಸ್)

ಅಧಿಕಾರಾವಧಿ: 1947-1964

ಅವಧಿ: 16 ವರ್ಷ, 286 ದಿನ

ಜವಾಹರಲಾಲ್ ನೆಹರು ಭಾರತದ ಮೊದಲ ಮತ್ತು ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿದ್ದಾರೆ. ಅವರು 1947 ರಿಂದ 1964 ರಲ್ಲಿ ಸಾಯುವವರೆಗೂ ದೇಶವನ್ನು ಮುನ್ನಡೆಸಿದರು ಮತ್ತು ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನೆಹರು ಅವರು ದೇಶದಲ್ಲಿ ದೊಡ್ಡ ಕಾರ್ಖಾನೆಗಳು ಮತ್ತು ಅಣೆಕಟ್ಟುಗಳು ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಿದರು ಮತ್ತು ವೈಜ್ಞಾನಿಕ ಶಿಕ್ಷಣವನ್ನು ಉತ್ತೇಜಿಸಿದರು. ಅವರು ಶೀತಲ ಸಮರದ ಸಮಯದಲ್ಲಿ ಯುಎಸ್ ಮತ್ತು ಸೋವಿಯತ್ ಒಕ್ಕೂಟದಿಂದ ಸ್ವತಂತ್ರವಾಗಿ ದೇಶವನ್ನು ಉಳಿಸಿಕೊಂಡು ಅಲಿಪ್ತ ಭಾರತದ ವಿದೇಶಾಂಗ ನೀತಿಯನ್ನು ಸ್ಥಾಪಿಸಲು ಸಹಾಯ ಮಾಡಿದರು.

ಇಂದಿರಾ ಗಾಂಧಿ (ಕಾಂಗ್ರೆಸ್)

ಅಧಿಕಾರಾವಧಿ: 1966-1977, 1980-1984

ಅವಧಿ: 15 ವರ್ಷ, 350 ದಿನ

ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ನಾಲ್ಕು ಅವಧಿಗಳಲ್ಲಿ ಸುಮಾರು 16 ವರ್ಷಗಳ ಕಾಲ ಪ್ರಧಾನಿಯಾಗಿ ದೇಶ ಸೇವೆ ಸಲ್ಲಿಸಿದರು. ಬ್ಯಾಂಕ್‌ಗಳ ರಾಷ್ಟ್ರೀಕರಣ, ಹಸಿರು ಕ್ರಾಂತಿ ಮತ್ತು ತುರ್ತು ಪರಿಸ್ಥಿತಿ (1975-1977) ಮುಂತಾದವುಗಳಿಂದ ಹೆಚ್ಚಾಗಿ ಇಂದಿರಾ ಗಾಂಧಿ ಗುರುತಿಸಿಕೊಳ್ಳುತ್ತಾರೆ. ಅವರು 1971ರ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಭಾರತವನ್ನು ವಿಜಯದತ್ತ ಮುನ್ನಡೆಸಿದರು. ಇದು ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು.

ನರೇಂದ್ರ ಮೋದಿ (ಬಿಜೆಪಿ)

ಅಧಿಕಾರಾವಧಿ: 2014-ಇಂದಿನವರೆಗೆ

ಅವಧಿ: 10 ವರ್ಷ, 19 ದಿನ

ಸದ್ಯದ ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಇದೀಗ ಮೂರನೇ ಅವಧಿಗೆ ಪ್ರಧಾನಿಯಾಗಲು ಎದರು ನೋಡುತ್ತಿದ್ದು, ತಮ್ಮ ಸುಧಾರಣೆಗಳು ಮತ್ತು ಕ್ರಿಯಾತ್ಮಕ ವಿದೇಶಾಂಗ ನೀತಿಗಾಗಿ ಗುರುತಿಸಲ್ಪಟ್ಟಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿ ಪ್ರಶಂಸೆ ಗಳಿಸಿದ್ದಾರೆ. ಅವರ ಎರಡನೇ ಅವಧಿ (2019) ಆರ್ಥಿಕ ಪುನರುಜ್ಜೀವನ, ಮೂಲಸೌಕರ್ಯ ಮತ್ತು ಜಾಗತಿಕ ಒಳಗೊಳ್ಳುವಿಕೆಯ ಮೇಲೆ ಕೇಂದ್ರೀಕರಿಸಿದೆ.ಮನಮೋಹನ್ ಸಿಂಗ್ (ಕಾಂಗ್ರೆಸ್)

ಅಧಿಕಾರಾವಧಿ: 2004-2014

ಅವಧಿ: 10 ವರ್ಷ, 4 ದಿನ

ಅರ್ಥಶಾಸ್ತ್ರಜ್ಞರಾಗಿದ್ದ ಮನಮೋಹನ್ ಸಿಂಗ್ ಅವರು 10 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯಲು ಸಹಾಯ ಮಾಡಿದ ನಿರಂತರ ಆರ್ಥಿಕ ಸುಧಾರಣೆಗಳಿಗೆ ಅವರು ಹೆಸರಾಗಿದ್ದಾರೆ. ಸಿಂಗ್ ಅವರ ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆಯಂತಹ ಪ್ರಮುಖ ಕಾನೂನುಗಳನ್ನು ಪರಿಚಯಿಸಿತು. ಭಾರತದಲ್ಲಿ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಸುಧಾರಿಸಲು ಕೆಲಸ ಮಾಡಿದೆ.

ಅಟಲ್ ಬಿಹಾರಿ ವಾಜಪೇಯಿ (ಬಿಜೆಪಿ)

ಅಧಿಕಾರಾವಧಿ: 1996, 1998-2004

ಅವಧಿ: 6 ವರ್ಷ, 80 ದಿನ

ಅಟಲ್ ಬಿಹಾರಿ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿಯಾಗಿದ್ದರು. 1998 ರಲ್ಲಿ ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆಗೆ ಹೆಸರಾಗಿದ್ದಾರೆ. ಇದು ಭಾರತವನ್ನು ಮಾನ್ಯತೆ ಪಡೆದ ಪರಮಾಣು ಶಕ್ತಿಯನ್ನಾಗಿ ಮಾಡಿದೆ. ವಾಜಪೇಯಿ ಅವರು ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಸುಧಾರಿಸಲು ಕೆಲಸ ಮಾಡಿದರು ಮತ್ತು ಸುವರ್ಣ ಚತುಷ್ಪಥ ಹೆದ್ದಾರಿ ಜಾಲದಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪ್ರಾರಂಭಿಸಿದರು.


Share

ಬೆಂಗಳೂರು ರೇವ್ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾರನ್ನು ಬಂಧಿಸಿದ ಸಿಸಿಬಿ

Share

ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಹೇಮಾಗೆ ಸಿಸಿಬಿ ನೋಟಿಸ್ ನೀಡಿತ್ತು. ಅದರಂತೆ ಇಂದು ಬುರ್ಕಾ ಧರಿಸಿದ್ದ ಬಂಧಿದ್ದ ಹೇಮಾ ಸಿಸಿಬಿ ಅಧಿಕಾರಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಹಿನ್ನಲೆಯಲ್ಲಿ ನಟಿಯನ್ನು ಬಂಧಿಸಿದ್ದಾರೆ.

ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ನಟಿ ಹೇಮಾ ಸೇರಿದಂತೆ ಎಂಟು ಮಂದಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದರೆ ಹೇಮಾ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಕೋರಿದ್ದರು. ಅದರಂತೆ ಇಂದು ನಟಿ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿದ್ದರು.

ಇತ್ತೀಚೆಗಷ್ಟೇ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಜಿಎಂ ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯ ಮೇಲೆ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ದಾಳಿ ನಡೆಸಿ, ಸ್ಥಳದಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿತ್ತು.ಪ್ರಕರಣದಲ್ಲಿ ತೆಲುಗು ನಟಿಯನ್ನು ರಕ್ಷಿಸುವಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಪ್ರಭಾವಿಗಳಿಂದ ಒತ್ತಡ ಹೇರಲಾಗುತ್ತಿದೆ. ಬಂಧಿತ ವ್ಯಕ್ತಿಗಳು ಹೆಚ್ಚು ಸಂಪರ್ಕ ಹೊಂದಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಮತ್ತು ಪ್ರಕರಣದಲ್ಲಿ ಹೆಚ್ಚಿನ ತನಿಖೆಯು ಸಂಭವನೀಯ ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ


Share

ಪ್ರಜ್ವಲ್ ರೇವಣ್ಣನನ್ನು ಹೆಡೆಮುರಿಕಟ್ಟಿದ ಐವರು ಮಹಿಳಾ ಪೊಲೀಸರು

Share

ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋಗಳು ಪೆನ್‌ಡ್ರೈವ್ ಮೂಲಕ ವೈರಲ್ ಆಗಿದ್ದು, ಮಹಿಳೆಯರ ಮೇಲೆ
ಅತ್ಯಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈಗ ಪ್ರಜ್ವಲ್ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ.
ಇದರ ಬೆನ್ನಲ್ಲಿಯೇ 34 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಿದ ಬೆನ್ನಲ್ಲಿಯೇ ಐವರು ಮಹಿಳಾ ಪೊಲೀಸ್‌ ಅಧಿಕಾರಿಗಳು ಹೆಡೆಮುರಿಕಟ್ಟಿ ಎಸ್‌ಐಟಿ ಕಚೇರಿಗೆ ಕರೆದು ತಂದಿದ್ದಾರೆ.


Share

ಕಬ್ಬಿಣದ ಗೇಟ್ ಹಾರಲು ಯತ್ನಿಸಿದ 10 ಅಡಿ ದೈತ್ಯ ಮೊಸಳೆ!

Share

ಲಖನೌ: ದಾರಿ ತಪ್ಪಿ ಊರಿನೊಳಗೆ ಬಂದಿದ್ದ ದೈತ್ಯ ಮೊಸಳೆಯೊಂದು ಕಬ್ಬಿಣದ ಗೇಟ್ ಹಾರಲು ಯತ್ನಿಸುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ.

ಉತ್ತರ ಪ್ರದೇಶದ ಬುಲಂದ್ಶಹರ್ನ ನರೋರಾ ಘಾಟ್ ಬಳಿ ಈ ಘಟನೆ ನಡೆದಿದ್ದು, ಕಾಲುವೆಯ ಗೇಟ್‌ ದಾಟಿ ಜನ ನಿಬಿಡ ಪ್ರದೇಶಕ್ಕೆ ಬಂದಿದ್ದ ಸುಮಾರು 10 ಅಡಿ ಉದ್ದದ ಮೊಸಳೆ ಮರಳಿ ನೀರಿನತ್ತ ತೆರಳಲು ಪ್ರಯತ್ನಪಡುವ ದೃಶ್ಯ ವೈರಲ್‌ ಆಗಿದೆ.

ಗಂಗಾ ಕಾಲುವೆಯಿಂದ ಆಕಸ್ಮಿಕವಾಗಿ ಹೊರಗೆ ಬಂದ ಈ ಬೃಹತ್‌ ಗಾತ್ರದ ಮೊಸಳೆ ನರೋರಾ ಬ್ಯಾರೇಜ್ ಕೆಳಗಿನ ಗಂಗಾ ನದಿಗೆ ಹಾರಲು ಪ್ರಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.ಅಲ್ಲೇ ಸಮೀಪದಲ್ಲಿರುವ ಅಧಿಕಾರಿಯೊಬ್ಬರು ದೊಣ್ಣೆ ಹಿಡಿದು ಮೊಸಳೆ ಜನರತ್ತ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿ ಅದನ್ನು ಸುರಕ್ಷಿತವಾಗಿ ನೀರಿಗೆ ಬಿಟ್ಟಿದ್ದಾರೆ.ನಾಲ್ವರು ಅರಣ್ಯ ಅಧಿಕಾರಿಗಳು ಮೊಸಳೆಯ ತಲೆ ಮತ್ತು ಮುಂಭಾಗದ ಕಾಲುಗಳನ್ನು ಬಿಗಿದಿರುವ ಹಗ್ಗಗಳನ್ನು ಹಿಡಿದರು. ಈ ವೇಳೆ ಇನ್ನೊಬ್ಬ ಅಧಿಕಾರಿ ಅದರ ಹಿಂದಿನ ಕಾಲುಗಳಿಗೆ ಹಗ್ಗವನ್ನು ಸುತ್ತಿದರು. ಇಬ್ಬರು ಮೊಸಳೆಯ ಬಾಲವನ್ನು ಎತ್ತಿಕೊಂಡರು. ಹೀಗೆ ಕೆಲವು ಗಂಟೆಗಳ ಕಾರ್ಯಾಚರಣೆ ಬಳಿಕ ಮೊಸಳೆಯನ್ನು ಸುರಕ್ಷಿತವಾಗಿ ನೀರಿಗೆ ಬಿಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Share

ಜಲಜೀವನ್ ಮಿಷನ್ ಪೈಪ್‌ಗಳಿಗೆ ಆಕಸ್ಮಿಕ ಬೆಂಕಿ.

Share

ಲಕ್ಷಾಂತರ ರೂ ಮೌಲ್ಯದ ಪೈಪ್‌ಗಳು ಬೆಂಕಿಗಾಹುತಿ,ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಘಟನೆ‌
ಮನೆಮನೆಗೆ ನೀರು ಪೂರೈಸುವ ಸಲುವಾಗಿ ತಂದಿಡಲಾಗಿದ್ದ ಜಲಜೀವನ್ ಮಿಷನ್ ಯೋಜನೆಯ ಪೈಪುಗಳು ಭಸ್ಮ.ಹುಲ್ಲಹಳ್ಳಿಯ ಟೀಚರ್ ಕಾಲೋನಿಯ ಖಾಲಿ ಜಾಗವೊಂದರಲ್ಲಿದ್ದ ಪೈಪ್ಗಳು.ಯಾವುದೇ ರಕ್ಷಣೆ ಇಲ್ಲದೆ ಇಡಲಾಗಿದ್ದ ಪ್ಲಾಸ್ಟಿಕ್ ಪೈಪ್‌ಗಳು.ಮನೆಮನೆಗೆ ಗಂಗೆ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಬೆಳೆ ಬಾಳುವ ಪೈಪುಗಳು ಮತ್ತು ಸಾಮಗ್ರಿಗಳನ್ನು ಇಡಲಾಗಿತ್ತು.ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ಮೌಲ್ಯದ ಪೈಪುಗಳು ಸುಟ್ಟು ಕರಕಲು.ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ.ಸ್ಥಳಕ್ಕೆ ಡಿವೈಎಸ್ಪಿ ರಘು, ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಪಿಎಸ್ಐ ಚೇತನ್ ಕುಮಾರ್, ದೊಡ್ಡಯ್ಯ ಭೇಟಿ, ಪರಿಶೀಲನೆ.


Share