ಒಳ ಮೀಸಲಾತಿ ಹೋರಾಟ ಸಮಿತಿ ಹುಣಸೂರು ವತಿಯಿಂದ ನೆನ್ನೆ ಟಿ ನರಸೀಪುರದಲ್ಲಿ ನಡೆದ ಬಿ ಆರ್ ಭಾಸ್ಕರ್ ಪ್ರಸಾದ್ ನೇತೃತ್ವದಲ್ಲಿ ಭೀಮ ಸೇನಾನಿಗಳು ವಿಭಿನ್ನ ಕ್ರಾಂತಿಕಾರಿ ಹೋರಾಟ ಮಾಡುವ ಸಂದರ್ಭದಲ್ಲಿ ಪೊಲೀಸ್ ರವರು ಬಂಧಿಸಿರುತ್ತಾರೆ.ಮತ್ತು ಪುಟ್ಟಪ್ಪ ಎನ್ನುವ ಪೊಲೀಸ್ ಪೇದೆ ಹೋರಾಟಗಾರರನ್ನುಅವ್ಯಾಚ ಶಬ್ದಗೊಳಿಂದ ನಿಂದಿಸಿರುತ್ತಾನೆ ಆ ಪೊಲೀಸ್ ನನ್ನು ಅಮಾನತು ಗೊಳಿಸಬೇಕು,ಹೋರಾಟಗಾರರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಈದಿನ ಹುಣಸೂರು ತಾಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನೆ ಮಾಡಿ ರಾಜ್ಯಪಾಲರಿಗೆ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.
ಮಾದಿಗ ಹೋರಾಟ ಸಮಿತಿ
ಹುಣಸೂರು ಹೋರಾಟಗಾರರಾದ ಮಾದಿಗ ಹೋರಾಟ ಸಮಿತಿ ಅಧ್ಯಕ್ಷರು ಪರಶುರಾಮ್, ಪ್ರಧಾನಕಾರ್ಯದರ್ಶಿ ಬೆಳ್ತೂರು ವೆಂಕಟೇಶ್.ಆರ್ ಮಹದೇವ್, ಕಿಟ್ಟು ಎಸ್, ಸ್ವಾಮಿ ರಾಯನಹಳ್ಳಿ, ಶಿವರಾಮು ಹೆಚ್ಚು ಎಸ್, ಹೊಸೂರ್ ವೆಂಕಟರಾಮ್, ಚಲುವಯ್ಯ,ರಾಜು, ವೈರಮುಡಿ, ಮಹದೇವ್ ಬನ್ನಿಕುಪ್ಪೆ, ಶಂಕರ್, ಕೆ ಆರ್ ನಗರದ ರಮೇಶ್, ಕುಮಾರ್, ತಿರುಮಲ ಎಂಬ ಮುಖಂಡರು ಭಾಗವಹಿಸಿದ್ದರು.
