ಸುತ್ತೂರು ಮಠ, ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಶಿವರಾತೇಶ್ವರ ಧಾರ್ಮಿಕ ದತ್ತಿ ಸಹಯೋಗದಲ್ಲಿ ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ವಿವಿಧ ಶಿಬಿರ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 22 ರಿಂದ 24ರ ವರೆಗೆ ವಿದ್ಯಾರ್ಥಿಗಳಿಗೆ, 25 ರಿಂದ 27 ರವರೆಗೆ ಯುವಕರಿಗೆ ಹಾಗೂ ಮೇ ಒಂದರಿಂದ ಮೂರರವರೆಗೆ ರೈತರಿಗೆ ಶಿಬಿರವನ್ನು ಏರ್ಪಡಿಸಲಾಗಿದೆ ಉಚಿತವಾಗಿ ಪಾಲ್ಗೊಳ್ಳಬಹುದು. ಚಿಂತನ, ಮಂಥನ, ದೇಸಿ ಆಟಗಳು ಮತ್ತು ಸಾಂಸ್ಕೃತಿ ಕಾರ್ಯಕ್ರಮ ಇರುತ್ತವೆ. ಮಾಹಿತಿಗೆ ಮೊಬೈಲ್ ಸಂಖ್ಯೆ 96 866 77 296. ಸಂಪರ್ಕಿಸಬಹುದು.
