ಕನ್ನಡ ನಾಡಿನ ಗಡಿನಾಡು ಅತ್ತಿಬೆಲೆ ಪ್ರದೇಶದಲ್ಲಿ ಕನ್ನಡ ಪ್ರೀತಿ ಮತ್ತು ಸಮಾಜ ಸೇವೆಯನ್ನು ಸಾರುವ ಉದ ಗಡಿನಾಡು ಕನ್ನಡ ಯುವ ಸೇನೆಯು ತನ್ನ 70ನೇ ಕನ್ನಡ ರಾಜ್ಯೋತ್ಸವ ಮಹೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ ನಾಗರಾಜ್ (ಸೋನಿ) ಅವರು ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳನ್ನು ಪ್ರಕಟಿಸಿದರು.
ಡಾ. ಪುನೀತ್ ರಾಜ್ಕುಮಾರ್ ವೇದಿಕೆಯಲ್ಲಿ ಸಾರಿಗೆ ಸಂಚಾರ
ರಾಜ್ಯೋತ್ಸವ ಸಮಾರಂಭವು ಶನಿವಾರ, ಡಿಸೆಂಬರ್ 13, 2025 ರಂದು ಸಂಜೆ 6:00 ಗಂಟೆಗೆ ಅತ್ತಿಬೆಲೆಯ ಸರ್ಕಾರಿ ಬಾಲಕರ ಪ್ರಾಥಮಿಕ ಪಾಠಶಾಲೆ ಆಟದ ಮೈದಾನದಲ್ಲಿರುವ ಡಾ. ಪುನೀತ್ ರಾಜ್ಕುಮಾರ್ ವೇದಿಕೆಯಲ್ಲಿ ನಡೆಯಲಿದೆ.

ಖ್ಯಾತನಾಮರ ಸಮಾಗಮ: ಕನ್ನಡದ ಶಕ್ತಿಗೆ ಪ್ರೋತ್ಸಾಹ
ಗಡಿನಾಡಿನ ಈ ಕನ್ನಡ ಹಬ್ಬಕ್ಕೆ ಕನ್ನಡದ ಪ್ರಮುಖ ತಾರೆಯರು ಮತ್ತು ಹೋರಾಟಗಾರರು ಆಗಮಿಸುತ್ತಿರುವುದು ವಿಶೇಷವಾಗಿದೆ:
ಮನರಂಜನೆ : ‘ತಿಸ್ಟಾರ್ ಈವೆಂಟ್ಸ್’ ತಂಡದವರಿಂದ ಮನರಂಜನಾ ಕಾರ್ಯಕ್ರಮಗಳು, ಜೊತೆಗೆ ಸಾಂಸ್ಕೃತಿಕವಾಧ್ಯಗೋಷ್ಠಿ ನಡೆಯಲಿದೆ.
ಬಡವರಿಗಾಗಿ ಟೈಲರಿಂಗ್ ಮಿಷನ್ ಹಾಗೂ ಆಟೋ ರ್ಯಾಲಿ
ಸೇವೆಗೆ ಒತ್ತು : ರಾಜ್ಯೋತ್ಸವದ ಅಂಗವಾಗಿ ಬಡ ಮಹಿಳೆಯರ ಸ್ವಾವಲಂಬನೆಗಾಗಿ ಉಚಿತ ಟೈಲರಿಂಗ್ ಮಿಷನ್ಗಳ ವಿತರಣೆ ಮತ್ತು ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ಕಂಬಳಿ (ಕಮ್ಮಳಿ) ವಿತರಣೆ ಮಾಡಲಾಗುವುದು.
ಐತಿಹಾಸಿಕ ಆಟೋ ರ್ಯಾಲಿ : ಕಾರ್ಯಕ್ರಮಕ್ಕೆ ಮುನ್ನ, ಆನೇಕಲ್ ತಾಲ್ಲೂಕಿನ ಪ್ರಮುಖ ನಾಯಕರು, ಚಲನಚಿತ್ರ ನಟರು ಹಾಗೂ ವಿಶೇಷವಾಗಿ ಆಟೋ ಚಾಲಕ ಬಂಧುಗಳ ವತಿಯಿಂದ ಗಡಿನಾಡಿನಲ್ಲಿ ಕನ್ನಡದ ಶಕ್ತಿಯನ್ನು ಸಾರುವ ಅದ್ದೂರಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ನಾಗರಾಜ್ (ಸೋನಿ) ಅವರು, “ಗಡಿನಾಡಿನಲ್ಲಿ ಕನ್ನಡದ ಶಕ್ತಿ ಕುಂದದಂತೆ ನೋಡಿಕೊಳ್ಳುವುದು ನಮ್ಮ ಸಂಕಲ್ಪ. ಕನ್ನಡ ರಾಜ್ಯೋತ್ಸವವನ್ನು ಸೇವಾ ಕಾಯಕದ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಸಮಸ್ತ ಕನ್ನಡಾಭಿಮಾನಿಗಳು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಕಾರ್ಯಕ್ರಮದ ರೂವಾರಿಗಳು ಮತ್ತು ಸಹಕಾರ ನೀಡಿದವರು
ಈ ಬೃಹತ್ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿರುವವರು ನಾಗರಾಜ್ ಸೋನಿ (ರಾಜ್ಯಾಧ್ಯಕ್ಷರು), ವಸಂತ ಕುಮಾರ್, ಮಂಜುನಾಥ್, ಮುನಿರಾಜು, ರವಿ ಕಿರಣ್, ರವಿ, ನಚ್ಚಿ ಛಲವಾದಿ, ಮಂಜುನಾಥ್ ಎಮ್ ಆರ್, ಶ್ರೀನಿವಾಸ್ ಟಿ.
ವಿಶೇಷ ಸಹಕಾರ : ಆಟೋ ಅಂಬರೀಷ್, JMC ಸೌಂಡ್ಸ್ ಮಾಲೀಕರು ಮುನಿಕೃಷ್ಣ, ಹಾಗೂ ಸಮಸ್ತ ಆಟೋ ಚಾಲಕ ಬಂಧುಗಳು.
