ನಂಜನಗೂಡು ತಾಲೂಕು ಆಡಳಿತ ವೈಖರಿ ತುಕ್ಕು ಹಿಡಿದಂತಾಗಿದೆ.ಒಂದೆಡೆ ಕ್ರೈಂ ರೇಟ್ ಜನರನ್ನ ಬೆಚ್ಚಿಬೀಳಿಸುತ್ತಿದ್ದರೆ ಮತ್ತೊಂದೆಡೆ ಸ್ವಚ್ಛತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಕೊಲೆ,ಸುಲಿಗೆ,ಕಳ್ಳತನಗಳ ಪ್ರಕರಣಗಳಿಂದ ಬೇಸತ್ತ ಜನಕ್ಕೆ ಸ್ವಚ್ಛತೆಯೂ ಸಹ ಆಕ್ರೋಷ ವ್ಯಕ್ತಪಡಿಸುವಂತಾಗಿದೆ.ನಂಜನಗೂಡಿಗೆ ಬರುವ ಭಕ್ತರನ್ನ ಮೊದಲು ಸ್ವಾಗತಿಸುವುದೇ ಗೊಬ್ಬುವಾಸನೆ.ರಾಷ್ಟ್ರಪತಿ ರಸ್ತೆಯ ರೈಲ್ವೆ ಗೇಟ್ ಬಳಿ ನೀವು ಸಾಗಬೇಕೆಂದ್ರೆ ಮೂಗುಮುಚ್ಚಿ ನಡೆಯಲೇ ಬೇಕು..ಇಲ್ಲದಿದ್ದಲ್ಲಿ ವಾಕರಿಕೆ ಬರುವಂತ ಸಂಕಟ,ಅನುಭವ ನಿಮಗಾಗೋದು ಗ್ಯಾರೆಂಟಿ.ಸುಭಾಷ್ ಪಾರ್ಕಿನ ಮಟನ್ ತ್ಯಾಜ್ಯ ಈ ಜಾಗಕ್ಕೆ ಬಂದು ಸೇರುತ್ತದೆ.ಇನ್ನು ಪಟ್ಟಣದ ಹೊರಭಾಗದ ಹುಲ್ಲಹಳ್ಳಿ ನಾಲೆ ಪರಿಸ್ಥಿತಿ ಆ ನಂಜುಂಡೇಶ್ವರನಿಗೇ ಪ್ರೀತಿ..ಮಟನ್ ಮಾರ್ಕೆಟ್ ನ ತ್ಯಾಜ್ಯ ಇಲ್ಲಿ ಸಂಗ್ರಹವಾಗುತ್ತಿದೆ.

ರೈಲ್ವೆ ಗೇಟ್ ಹಾಕಿದ್ರಂತೂ ವಾಹನ ಸವಾರರು ಗೊಬ್ಬುವಾಸನೆಯಿಂದ ಹೈರಾಣರಾಗಿದ್ದಾರೆ.ಸಮೀಪದಲ್ಲೇ ಕಾಲೇಜು ಇದೆ.ಶಿಕ್ಷಕರ ಭವನವಿದೆ,ಶನಿದೇವರ ದೇವಾಲಯವಿದೆ.ಜನನಿಬಿಡ ಪ್ರದೇಶವೂ ಇದಾಗಿದೆ.ಅಶುಚಿತ್ವ ತಾಂಡವವಾಡುತ್ತಿದೆ.ನಂಜನಗೂಡಿನ ಅಭಿವೃದ್ದಿಯ ಕನಸು ಕಾಣುತ್ತಿರುವ ಶಾಸಕ ದರ್ಶನ್ ಧೃವನಾರಾಯಣ್ ಕಣ್ಣಿಗೆ ಇದು ಕಾಣಿಸದಿರುವುದು ದುರಂತ.ಈಗಾಗಲೇ ಸ್ಥಳೀಯರು ತಾಲೂಕು ಆಡಳಿತದ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.ಗೊಬ್ಬೆದ್ದು ನಾರುತ್ತಿರುವ ನಂಜನಗೂಡಿನಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡದಿದ್ದಲ್ಲಿ ರೋಗರುಜಿನಗಳ ಗೂಡಾಗುವುದರಲ್ಲಿ ಸಂಶಯವಿಲ್ಲ.ಇನ್ನಾದ್ರೂ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ.ಇಲ್ಲದಿದ್ದಲ್ಲಿ ಭಾರಿ ದಂಡ ತೆರಬೇಕಾಗುತ್ತದೆ
