ಸಂಚಾರಿ ಪೊಲೀಸರರಿಗೆ ಸಾರ್ವಜನಿಕರ ಅಭಿನಂದನೆಗಳ ಮಹಾಪುರ. ಮಡಿಕೇರಿ ನಗರದ ಕಾಲೇಜು ರಸ್ತೆಯ ಏಕಮುಖ ರಸ್ತೆಯಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ಮಹಿಳಾ ಸಹಾಯವಾಣಿ (ಪಿಂಕ್ ಗಸ್ತು ವಾಹನ )ಕ್ಕೆ ಮಡಿಕೇರಿ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ವಾಹನ ಸಂಖ್ಯೆ KA02 G 1815 ವಾಹನ ಚಾಲಕ ಜಯಶಂಕರ್ ರಿಗೆ 500ರೂ ದಂಡ ವಿಧಿಸಲಾಗಿದೆ. ಸಂಚಾರಿ ಪೊಲೀಸ್ ರ ಕರ್ತವ್ಯ ನಿಷ್ಠೆಯನ್ನು ಗಮನಿಸಿದ ಸ್ಥಳೀಯರು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಮುಲಾಜು ಇಲ್ಲದೆ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಎತ್ತಿ ಹಿಡಿದಿದ್ದಾರೆ.
Category: LiveTV
ಆ.13 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ
ಮಡಿಕೇರಿ :-ಕರ್ನಾಟಕ ಲೋಕಾಯುಕ್ತ ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ಆಗಸ್ಟ್, 13 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಗೆಯವರೆಗೆ ಸೋಮವಾರಪೇಟೆ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಗಳನ್ನು ವಿತರಿಸಲಿದ್ದಾರೆ. ಭರ್ತಿ ಮಾಡಿದ ಮತ್ತು ನೋಟರಿಯಿಂದ ಆಫಿಡೆವಿಟ್ ಮಾಡಿಸಿದ ಅರ್ಜಿ ಸ್ವೀಕರಿಸಲಾಗುವುದು.
ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ದ ಸಾರ್ವಜನಿಕ ದೂರುಗಳನ್ನು ನಿಗದಿತ ಪತ್ರದಲ್ಲಿ ನೀಡಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಿದೆ. ಹೆಚ್ಚಿನ ವಿವರಗಳಿಗೆ ಮಡಿಕೇರಿ ಲೋಕಾಯುಕ್ತ ಪೊಲೀಸ್ ಕಚೇರಿ, ಗೌಳಿಬೀದಿ, ದೂರವಾಣಿ ಸಂಖ್ಯೆ. 08272-295297 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಸಿದ್ದಾರೆ.
ಡಿ ಎ ಆರ್ ಮುಖ್ಯಪೇದೆ ವಿಜಯ್ ಹೃದಯಘಾತದಿಂದ ನಿಧನ
ಕೊಡಗು ಡಿ ಎ ಆರ್ ಮುಖ್ಯಪೇದೆ ವಿಜಯ್ ಬುಧವಾರ ರಾತ್ರಿ 9:00 ಏಳು ನಿಮಿಷಕ್ಕೆ ಹೃದಯಘಾತದಿಂದ ನಿಧನ ಇವರು ಪೊಲೀಸ್ ಬ್ಯಾಂಡ್ ಮೆನ್ ಡ್ರಮ್ ವಾದಕರು ಸಹ ಆಗಿದ್ದರು. ಇವರು ಮೂಲತಃ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಹುಟ್ಟೂರಾಗಿದ್ದು 1997ರಲ್ಲಿ ನೇಮಕಾತಿ ಹೊಂದಿದ್ದು ಸುಮಾರು 28 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಇವರು ತಂದೆ ತಾಯಿ, ರತ್ನಮ್ಮ ಧರ್ಮ ಪತ್ನಿ ಪತ್ನಿ ಮತ್ತು, ಎರಡು ಮಕ್ಕಳನ್ನು ಅಗಲಿದ್ದು, ಇವರ ಅಂತ್ಯ ಸಂಸ್ಕಾರ ಇಂದು ಚಾಮರಾಜನಗರದಲ್ಲಿ ನಡೆಯಲಿದೆ. ಇವರ ಪಾರ್ಥಿವ ಶರೀರಕ್ಕೆ ಕೊಡಗು ಎಸ್ ಪಿ ರಾಮರಾಜ ನವರು ಎಲ್ಲಾ ಸಿಬ್ಬಂದಿ ವರ್ಗಗಳೊಂದಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಲಾಯಿತು. ಪಾರ್ಥಿವ ಶರೀರವನ್ನು ಸೂಕ್ತ ಗೌರವಗಳೊಂದಿಗೆ ಕೊಡಗಿನ ಕೇಂದ್ರ ಸ್ಥಳವಾದ ಮಡಿಕೇರಿಯಿಂದ ಚಾಮರಾಜನಗರಕ್ಕೆ ಬೆಳಗಿನ ಸಮಯದಲ್ಲಿ ಕಳುಹಿಸಿಕೊಡಲಾಯಿತು.
ಜೇವರ್ಗಿ ಬಂದನಿಂದ ಸ್ತಬ್ಧವಾದ ಜೇವರ್ಗಿ ಬಸ್ ತಂಗುಧಾಣ ಪ್ರಯಾಣಿಕರ ಪರದಾಟ.
ಸಾರಿಗೆ ಇಲಾಖೆಯ ನೌಕರರ ವೇತನಗಳನ್ನು ಅತಿ ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕು ಹಾಗೂ ಸಾರಿಗೆ ಇಲಾಖೆಯ ನೌಕರರ ಬೇಡಿಕೆಗಳನ್ನು ಕೂಡಲೇ ಸ್ಪಂದಿಸಬೇಕೆಂದು ಆಗ್ರಹಿಸಿ 5-8-2025 ರಂದು ಮಂಗಳವಾರ ಸಾರಿಗೆ ಇಲಾಖೆಯ ನೌಕರರ ವತಿಯಿಂದ ಜೇವರ್ಗಿ ಬಂದಗೆ ಕರೆಕೊಡಲಾಯಿತು ಸಾರಿಗೆ ಇಲಾಖೆಯ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಸಾರಿಗೆ ಇಲಾಖೆಯ ನೌಕರರ ವೇತನವನ್ನು ಅತಿ ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕು ಸಾರಿಗೆ ಇಲಾಖೆಯ ನೌಕರರು ವೇತನ ಬಿಡುಗಡೆಯಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಕೂಡಲೇ ರಾಜ್ಯ ಸರ್ಕಾರ ಸಾರಿಗೆ ಇಲಾಖೆಯ ನೌಕರರ ಬೇಡಿಕೆಗಳಿಗೆ ಸ್ಪಂದಿಸಿ ಅತಿ ಶೀಘ್ರದಲ್ಲಿ ವೇತನವನ್ನು ಬಿಡುಗಡೆ ಗೊಳಿಸಬೇಕೆಂದು ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ನೌಕರರು ಆಗ್ರಹಿಸಿದರು ತಾಲೂಕಿನಲ್ಲಿ ಬಸ್ಸಿನ ಸಂಚಾರವಿಲ್ಲದೆ ಹಲವಾರು ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ಹಳ್ಳಿಯ ಪ್ರಯಾಣಿಕರು ತಾಲೂಕಿನಲ್ಲಿ ಬಸ್ಸಿನ ಸಂಚಾರ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಕಂಗಾಲಾಗಿ ಪರದಾಡುತ್ತಿರುವುದು ಕಂಡು ಬಂತ
ವರದಿ ಜೇಟ್ಟೆಪ್ಪ ಎಸ್ ಪೂಜಾರಿ
ಜ್ಯೋತಿ ಕುದುಪಜೆ ಕೊಡಗು ಜಿಲ್ಲೆಯ ಮಹಿಳಾ ಘಟಕದ ನೂತನ ಜಿಲ್ಲಾ ಅಧ್ಯಕ್ಷೆಯಾಗಿ ನೇಮಕ
ಬೆಂಗಳೂರಿನ ಕರ್ನಾಟಕ ರಕ್ಷಣಾ ವೇದಿಕೆಯ ಕೇಂದ್ರ ಕಚೇರಿಯಲ್ಲಿ, ರಾಜ್ಯಾಧ್ಯಕ್ಷರಾದ ಶ್ರೀ ಟಿ. ಎ. ನಾರಾಯಣಗೌಡರ ನೇತೃತ್ವದಲ್ಲಿ ಜ್ಯೋತಿ ಕುದುಪಜೆ ಅವರನ್ನು ಕೊಡಗು ಜಿಲ್ಲೆಯ ಮಹಿಳಾ ಘಟಕದ ನೂತನ ಜಿಲ್ಲಾ ಅಧ್ಯಕ್ಷೆಯಾಗಿ ಹಾಗೂ ದಿವ್ಯ ದೇವಾಂಗರನ್ನು ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕೃತವಾಗಿ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ರಾಜ್ಯ ಸಂಚಾಲಕರಾದ ದೀಪಾ ಪೂಜಾರಿಯವರು ಕೇಂದ್ರ ಕಚೇರಿಯಲ್ಲಿ ಉಪಸ್ಥಿತರಿದ್ದರು.
ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ಜನ್ಮದಿನ ಆಚರಿಸಿಕೊಂಡ ಓದೋ ಗಂಗಪ್ಪ
ಹೂವಿನ ಹಡಗಲಿ: ಜನ್ಮದಿನವನ್ನು ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ಆಚರಿಸುವ ಪರಿ ವಿನೂತನ ಪ್ರಯೋಗ ಎಂದು ನೀಲಕಂಠಪ್ಪ
ಹೇಳಿದರು.
ಪಟ್ಟಣದ ವಿಜಯನಗರ ಬಡಾವಣೆಯಲ್ಲಿರುವ ಕೃಪಾಶೃಯ ಟ್ರಸ್ಟ್ ವೃದ್ಧಾಶ್ರಮದಲ್ಲಿ
ಶುಕ್ರವಾರ ನಿವೃತ್ತ ಸಹಾಯಕ ಅಭಿಯಂತರರು ಶಿಂಟಾಲೂರು ಏತ ನೀರಾವರಿ ಯೋಜನೆ ಅಧಿಕಾರಿ ಓದೋ ಗಂಗಪ್ಪರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಯಸ್ಸಾಗಿ ಮಕ್ಕಳ ಪ್ರೀತಿಯಿಂದ ವಂಚಿತರಾದ ವೃದ್ಧಾಶ್ರಮದ ತಾಯಂದಿರ ಜೊತೆ ಜನ್ಮದಿನಾಚರಣೆ ಆಚರಿಸಿ ಅವರಿಗೆ ವಸ್ತೃ ಉಡುಗೊರೆ .ಹಾಗೂ ಆಹಾರ ಕೊಡುವ ಮೂಲಕ ಬಡವರ ಸೇವೆ ಸಲ್ಲಿಸಿದ್ದಾರೆ ಎಂದರು.
ಹಲಗಿ ಸುರೇಶ ಮಾತನಾಡಿ
ಸರ್ಕಾರಿ ನೌಕರರಲ್ಲಿ ಸಮಾಜ ಸೇವೆ ಸಲ್ಲಿಸುವ ಮನೋಭಾವ ಬೆಳೆಯುತ್ತಿದೆ. ತಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ದೀನರ ಬಡವರ ಬದುಕಿಗೆ ಹಂಚುವುದು ದೇವರಿಗೆ ಸಲ್ಲಿಸಿದಂತೆ ಎಂದು ತಿಳಿಸಿದರು.
ವೃದ್ಧಾಶ್ರಮ ಉಸ್ತುವಾರಿ ಜ್ಯೋತಿ ರವರು
ಕೃಪಾಶೃಯ ಟ್ರಸ್ಟ್ ನಾ ರಾಜ್ಯಾಧ್ಯಕ್ಷರಾದ ರೆ.ಶ್ಯಾಮಸನ್ಅರ್ಥಾರ್ ಪಾಲ್ ರವರು
ವೃದ್ಧಾಶ್ರಮದಲ್ಲಿರುವ ತಾಯಂದಿರಿಗೆ ಪ್ರತಿನಿತ್ಯ ಉತ್ತಮ ಗುಣಮಟ್ಟದ ಉಪಹಾರ ಊಟ.ಆರೋಗ್ಯ ಒದಗಿಸುತ್ತಿದ್ದಾರೆ ಎಂದು ಹೇಳಿದರು ಸಮಾರಂಭದಲ್ಲಿ ಬಿ.ಎಂ. ಮಹೇಶ್ವರಯ್ಯ ಮಲ್ಲಿಕಾರ್ಜುನ ಹೊಳಲು . ನಂದಿಹಳ್ಳಿ ಬಸವರಾಜ ಇತರರು ಉಪಸ್ಥಿತರಿದ್ದರು. ಓದೋ ಗಂಗಪ್ಪ ರವರನ್ನು ಆತ್ಮೀಯವಾಗಿ
ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ಪಟ್ಟಣದ
ಸರ್ಕಾರಿ ಶಾಲೆಗಳ ಮಕ್ಕಳಿಗೆ ಪೇನ್ನು ಪುಸ್ತಕನೀಡಿ ವಿದ್ಯಾರ್ಥಿಗಳಿಗೆ ಗವಿ ಸಿದ್ದೇಶ್ವರ ಮಠದಲ್ಲಿ ಉಪಹಾರದ ಸೇವೆ ಸಲ್ಲಿಸಿದರು.
ಆಲಮೇಲ ಬಂದಗೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿದರು.
ಆಲಮೇಲ: ಪಟ್ಟಣದ ಗ್ರಾಮ ದೇವರಾದ ಹಜರತ್ ಪೀರ್ ಗಾಲೀಬ್ ಸಾಬ್ ದರ್ಗಾಕ್ಕೆ ಹೋಗುವ ಶಾಶ್ವತ ರಸ್ತೆ ಸಲುವಾಗಿ ಹೋರಾಟಗಾರರು ಬಂದಗೇ ಕರೆ ಕೊಟ್ಟರು.
ಗಾಲಿಬ್ ಸಾಬ್ ದರ್ಗಾದಿಂದ ಊರಿನ ಪ್ರಮುಖ ಬೀದಿಗಳ ಮುಖಾಂತರ ಪಟ್ಟಣ ಪಂಚಾಯಿತಿ ವರೆಗೆ ಹೋರಾಟ ಜರಗಿತು. ಹೋರಾಟಕ್ಕೆ ಜಾತಿ ಧರ್ಮ ಪಕ್ಷ ಬಿಟ್ಟು ಅನೇಕ ಧರ್ಮದವರು ಮತ್ತು ಮಹಿಳೆಯರು ಹೋರಾಟದಲ್ಲಿ ಭಾಗವಹಿಸಿದರು.
ನಾಗರಿಕ ವೇದಿಕೆ ಅಧ್ಯಕ್ಷ ರಮೇಶ್ ಬಂಟನೂರು ಮಾತನಾಡಿ ಊರಿನ ಗ್ರಾಮ ದೇವರಾದ ಹಜರತ್ ಪೀರ್ ಗಾಲೀಬ್ ಸಾಬ್ ದರ್ಗಾ ಕೆ ರಸ್ತೆ ಕಲ್ಪಿಸಿ ಕೊಡಬೇಕು ನಾವು ನಮ್ಮ ವೈಯಕ್ತಿಕವಾಗಿ ರಸ್ತೆ ಬೇಡುತ್ತಿಲ್ಲ ಜಾತ್ರೆಯ ವೇಳೆ ಸಾವಿರಾರು ಹಳ್ಳಿಯ ಜನರು ಬರುವುದರಿಂದ ತೊಂದರೆ ಗಿಡಾಗುತ್ತಿದೆ ಆದ್ದರಿಂದ ನಾವು ರಸ್ತೆ ಕೇಳುತ್ತಿದ್ದೇವೆ ವೆಂದರು.
ಅರ್ಬನ್ ಬ್ಯಾಂಕಿನ ಅಧ್ಯಕ್ಷರಾದ ಶಿವಕುಮಾರ್ ಗುಂದಗಿ ಮಾತನಾಡಿ ದರ್ಗಾ ಕ್ಕೆ ಹೋಗುವ ರಸ್ತೆ ಅವಶ್ಯಕತೆ ವಿದೇ ಯಾರ ಹಿತಕಾಗಿ ಅಲ್ಲ ಇದನ್ನು ಪಕ್ಷಾಭೇದ ಮರೆತು ಹೋರಾಟ ಮಾಡುತ್ತಿರುವ ತಮಗೆಲ್ಲರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ್ ಸುಂಬುಡ ಮಾತನಾಡಿ ನಾನು ಮತ್ತು ಶಾಸಕರು ಸಂಬಂಧ ಪಟ್ಟ ಅಧಿಕಾರಿಗಳು ಜೊತೆ ಚರ್ಚೆ ಮಾಡಿದ್ದೇವೆ ನಕ್ಷೆಯಲ್ಲಿ ರಸ್ತೆಯು ಬೇರೆ ಬೇರೆ ಕಡೆ ತೋರಿಸುವದರಿಂದ ವಾಕ್ಪ ಬೋರ್ಡ್ ಮತ್ತು ಅಂಜುಮನ್ ಕಮಿಟಿ ಜೊತೆ ಚರ್ಚೆ ಮಾಡಿ 20 ಪುಟು ಸದ್ಯಕ್ಕೆ ಯಾವ ತಕರಾರು ಇಲ್ಲ 20 ಪುಟ್ಟು ರಸ್ತೆಗೆ ಸಾಲದೆ ಇರುವುದರಿಂದ 25 ಪುಟು ಅಥವಾ 30 ಪುಟ್ಟಿಗೆ ಶಾಸಕರು ಮತ್ತು ಅಂಜಮನ ಕಮಿಟಿ ಸದಸ್ಯರಿಂದ ಹಾಗೂ ಊರಿನ ಪ್ರಮುಖ ಹಿರಿಯರು ಜೊತೆಗೂಡಿ ನಿರ್ಣಯ ತೆಗೆದುಕೊಳ್ಳೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಶೋಕ್ ಕೊಳಾರಿ ಪ್ರಭು ವಾಲಿಕರ, ಬಸವರಾಜ ತೆಲ್ಲೋರ್,
ಡಾಕ್ಟರ್ ಸಂಜು ಯಂಟಮನ, ಶಶಿಧರ ನಾಯ್ಕೋಡಿ, ರಾಜು, ಬಸವರಾಜ್ ಹೂಗಾರ್, ದೇವಪ್ಪ ಗುಣಾರಿ ಉಪಸ್ಥಿತರಿದ್ದರು.
ವರದಿ. ಉಮೇಶ ಕಟಬರ
ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಘದ ಸದಸ್ಯರುಗಳೊಂದಿಗೆ ಪೂರ್ವಭಾವಿ ಸಭೆ
ಕುಶಾಲನಗರದಲ್ಲಿ (ಏ ಪಿ ಎಂ ಸಿ ) ಸಭಾಂಗಣದಲ್ಲಿ ಮುಂದೆ ಬರಲಿರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಾನ್ಯ ಎಸ್ ಪಿ ಹಾಗೂ adl SP ಸಾಹೇಬರವರು ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಘದ ಸದಸ್ಯರುಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಿದ್ದು ಹಾಗೂ ಸಬ್ ಡಿವಿಷನ್ ಮಟ್ಟದ ಮನೆಮನೆ ಪೊಲೀಸ್ ಕಾರ್ಯಕ್ರಮದ ಉದ್ಘಾಟನೆ ಇದ್ದು . ಗೌರಿ ಗಣೇಶ ಹಬ್ಬದ ಸಂಘದ ಸದಸ್ಯರುಗಳು ನಾಳೆ ಬೆಳಗ್ಗೆ 11:00 ಗಂಟೆಗೆ ಕುಶಾಲನಗರ ಪಟ್ಟಣದ ಎ.ಪಿ.ಎಂ.ಸಿ ಸಭಾಂಗಣದಲ್ಲಿ ಹಾಜರಾಗಬೇಕಾಗಿ ಈ ಮೂಲಕ ತಿಳಿಯಪಡಿಸುತ್ತೇವೆ
ಮಾಲಗತ್ತಿ ವಿಎಸ್ಎಸ್ಎನ್ ಗೆ ಅಧ್ಯಕ್ಷ, ಉಪಾದ್ಯಕ್ಷ, ನಿರ್ದೇಶಕರು ಅವಿರೋಧ ಆಯ್ಕೆ
ಸುರಪುರ: ತಾಲ್ಲೂಕಿನ ಮಾಲಗತ್ತಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಕ್ಕೆ ನೂತನ ಪದಾಧಿಕಾರಿಗಳು ಅವಿರೋದವಾಗಿ ಆಯ್ಕೆಯಾದರು.
ಸಂಘದ ಆವರಣದಲ್ಲಿ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಶರಣಗೌಡ ನಿಂಗಪ್ಪಗೌಡ ಗೌಡಗೇರಾ ಉಪಾದ್ಯಕ್ಷರಾಗಿ ಭೀಮಣ್ಣಗೌಡ ಬಸನಗೌಡ ಗೌಡಗೇರಾ ಅವಿರೋಧವಾಗಿ ಆಯ್ಕೆಯಾದರು.
ಇನ್ನುಳಿದಂತೆ ಈ ಮೊದಲೇ ನಿರ್ದೇಶಕರಾಗಿ ದೇವಿಂದ್ರಪ್ಪಗೌಡ ವಿರೂಪಾಕ್ಷಪ್ಪಗೌಡ ಪೊ.ಪಾ., ಸುರೇಶ ಶಿವನಗೌಡ, ರಾಮಕೃಷ್ಣ ಹಣಮಂತ, ಚಿದಾನಂದ ನಾಗಪ್ಪ, ನಿಂಗಣ್ಣ ಮಲ್ಲಣ್ಣ ಸಾಹುಕಾರ, ಭೀಮರಾಯ ಕಂಬಾರ, ಅಕ್ಬರ್ ಅಲಿ ಪಾಡಿಶಾ, ಸಾವಿತ್ರಮ್ಮ ಗಂ. ಬಸನಗೌಡ, ಲಕ್ಷಿö್ಮÃಬಾಯಿ ಗಂ. ನಿಂಗಪ್ಪ, ನಿಂಗಮ್ಮ ಗಂ. ಮಲ್ಲಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದರು.
ಚುನಾವಣಾಧಿಕಾರಿಯಾಗಿ ವಿಜಯಭಾಸ್ಕರ್ ಕಾರ್ಯನಿರ್ವಹಿಸಿ ಫಲಿತಾಂಶ ಪ್ರಕಟಿಸಿದರು. ಸಂಘದ ಕಾರ್ಯದರ್ಶಿ ಬಲಭೀಮ ಹುಜರತಿ ಕೂಡ್ಲಿಗಿ ಇದ್ದರು.
ನಂತರ ವಿಜೇತರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ದೇವಿಂದ್ರಪ್ಪಗೌಡ ಗೌಡಗೇರಿ, ವಾಲ್ಮೀಕ ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ಶ್ರೀನಿವಾಸ ದೊರೆ, ವೆಂಕೋಬ ದೊರಿ ಗೌಡಗೇರಾ, ಮಲ್ಲನಗೌಡ, ಭೀಮಣ್ಣ ದೊರಿ, ಅಂಬ್ರೇಷ್ ಸುರಪುರ, ಹುಸೇನ್ ಪಟೇಲ್, ಭೀಮಣ್ಣ ಕಚಕನೂರ, ಮಂಜುನಾಥ ಯಾನಗುಂಟಿ, ಅರುಣಕುಮಾರ ಸತ್ಯಂಪೇಟೆ, ಪರಶುರಾಮ ಗಡ್ಡದ, ವೆಂಕೋಬ ಹವಲ್ದಾರ, ಬಂದಗಿ ಪಟೇಲ್, ಹಣಮಂತ್ರಾಯ ಅಣಿಕೇರಿ, ಮಲ್ಲಿಕಾರ್ಜುನ ಯನಗುಂಟಿ ಸೇರಿದಂತೆ ಇನ್ನಿತರರು ಇದ್ದರು.
ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ಬಿಸ್ಕೆಟ್ ವಿತರಣೆ ಮಾಡೋ ಮೂಲಕ ಹುಟ್ಟುಹಬ್ಬ ಆಚರಣೆ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕರಾದ ಸುರೇಶ್ ಗೋಕಾಕ್ ಅವರ ಸೋದರ ಜಗದೀಶ್ ಗೋಕಾಕ್
ಮತ್ತು ಲಕ್ಷ್ಮೇಶ್ವರ ತಾಲೂಕ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಮುಧೋಳ
ಅವರ ಹುಟ್ಟು ಹಬ್ಬವನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಡ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ಬಿಸ್ಕೆಟ್ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿದರು
ಹುಟ್ಟುಹಬ್ಬ ಆಚರಣೆ ಕುರಿತು ಮಾತನಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ್ ಹಿರೇಮನಿ ಅವರು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕರಾದ ಸುರೇಶ್ ಗೋಕಾಕ್ ಅವರ ಸಹೋದರ ಜಗದೀಶ್ ಗೋಕಾಕ್ ಮತ್ತು ನಮ್ಮ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ ಮುಧೋಳ್ ಅವರು ತಮ್ಮ ಹುಟ್ಟು ಹಬ್ಬವನ್ನು ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ಬಿಸ್ಕೆಟ್ ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಅವರಿಗೆ
ಆ ದೇವರು ಉತ್ತಮ ಆರೋಗ್ಯ ಸಿರಿಸಂಪತ್ತನ್ನು ಕೊಟ್ಟು ಕರುಣಿಸಲಿ ಎಂದರು
ಈ ಸಮಯದಲ್ಲಿ ತಾಲೂಕಾಧ್ಯಕ್ಷ ಸುರೇಶ ಹಟ್ಟಿ, ಮಂಜುನಾಥ್ ಮುಳುಗುಂದ, ಮಹೇಶ್ ಸುಗುಣಗಿ, ಗಣೇಶ ಹಾದಿಮನಿ ವಿನಾಯಕ ಸೋಲಾಪುರ, ಮೈಲಾರಪ್ಪ ಹೆಗ್ಗಪ್ಪನವರ ,ಅಭಿಷೇಕ್ ಸಾತಪೊತೆ
ಸೇರಿದಂತ ಅಭಿಮಾನಿ ಬಳಗದ ಯುವ ಮುಖಂಡರು ಉಪಸ್ಥಿತರಿದ್ದರು
