ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕರಾದ ಸುರೇಶ್ ಗೋಕಾಕ್ ಅವರ ಸೋದರ ಜಗದೀಶ್ ಗೋಕಾಕ್
ಮತ್ತು ಲಕ್ಷ್ಮೇಶ್ವರ ತಾಲೂಕ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಮುಧೋಳ
ಅವರ ಹುಟ್ಟು ಹಬ್ಬವನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಡ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ಬಿಸ್ಕೆಟ್ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿದರು
ಹುಟ್ಟುಹಬ್ಬ ಆಚರಣೆ ಕುರಿತು ಮಾತನಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ್ ಹಿರೇಮನಿ ಅವರು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕರಾದ ಸುರೇಶ್ ಗೋಕಾಕ್ ಅವರ ಸಹೋದರ ಜಗದೀಶ್ ಗೋಕಾಕ್ ಮತ್ತು ನಮ್ಮ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ ಮುಧೋಳ್ ಅವರು ತಮ್ಮ ಹುಟ್ಟು ಹಬ್ಬವನ್ನು ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ಬಿಸ್ಕೆಟ್ ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಅವರಿಗೆ
ಆ ದೇವರು ಉತ್ತಮ ಆರೋಗ್ಯ ಸಿರಿಸಂಪತ್ತನ್ನು ಕೊಟ್ಟು ಕರುಣಿಸಲಿ ಎಂದರು
ಈ ಸಮಯದಲ್ಲಿ ತಾಲೂಕಾಧ್ಯಕ್ಷ ಸುರೇಶ ಹಟ್ಟಿ, ಮಂಜುನಾಥ್ ಮುಳುಗುಂದ, ಮಹೇಶ್ ಸುಗುಣಗಿ, ಗಣೇಶ ಹಾದಿಮನಿ ವಿನಾಯಕ ಸೋಲಾಪುರ, ಮೈಲಾರಪ್ಪ ಹೆಗ್ಗಪ್ಪನವರ ,ಅಭಿಷೇಕ್ ಸಾತಪೊತೆ
ಸೇರಿದಂತ ಅಭಿಮಾನಿ ಬಳಗದ ಯುವ ಮುಖಂಡರು ಉಪಸ್ಥಿತರಿದ್ದರು
