ಕುಶಲನಗರದ ತಾಲೂಕು ಕಚೇರಿ ಸಮೀಪ ಇರುವ ಪೋಲಿಸ್ ಸಭಾಂಗಣದಲ್ಲಿ ಸ್ವಾತಂತ್ರ ದಿನಾಚರಣೆಯ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಸಭೆ ಅಧ್ಯಕ್ಷತೆಯನ್ನು ತಾಲೂಕು ದಂಡಾಧಿಕಾರಿಗಳಾದ ಮಾನ್ಯ ಶ್ರೀಯುತ ಕಿರಣ್ ಗೌರಯ್ಯನವರು ವಹಿಸಿದ್ದು ಸಭೆಯನ್ನು ಉದ್ದೇಶಿಸಿ ಅವರು ಈಗ ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಆ ದಿನ ಮಳೆ ವಾತಾವರಣ, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜ ಹಾರಿಸುವುದರ ಮೂಲಕ ಸರಳವಾಗಿ ಆಚರಿಸಲಾಗುವುದು ಮತ್ತು ಮಕ್ಕಳಿಂದ ಸರಳವಾಗಿ ಮನರಂಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು. ಸಭೆಯನ್ನು ಉದ್ದೇಶಿಸಿ ಅಧ್ಯಕ್ಷರು ಮುಖ್ಯ ಅತಿಥಿಗಳು ಭಾಷಣವನ್ನು ನಡೆಸಿಕೊಡುವರು ಎಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ತಾಲೂಕಿನ ಎಲ್ಲಾ ವಿವಿಧ ಜನಪ್ರತಿನಿಧಿಗಳ ಮುಖಂಡರು ಹಾಜರಿದ್ದು ಪೂರ್ವಭಾವಿ ಸಭೆಯು ಯಶಸ್ವಿಯಾಗಿ ನಡೆಯಿತು.
