ಆಲಮೇಲ: ಪಟ್ಟಣದ ಆರಾಧ್ಯ ದೇವರಾದ ಹಜರತ್ ಪೀರ್ ಗಾಲಿಬ್ ಸಾಹೇಬರ ದರ್ಗಾಕ್ಕೆ ಮತ್ತು ಹಿಂದೂ ಸಮುದಾಯದ ಸ್ಮಶಾನವ ಭೂಮಿಗೆ ಹೋಗಲು ಸಮರ್ಪಕ ದಾರಿ ಮಾಡಿ ಕೊಡಬೇಕೆಂದು ಆಗ್ರಹಿಸಿ ಕಳೆದ ಎಂಟು ದಿನಗಳಿಂದ ಆಲಮೇಲ್ ಪಟ್ಟಣದ ನಾಗರಿಕರು ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

ಧರಣಿಗೆ ಸೂಕ್ತ ಸ್ಪಂದನೆ ಸಿಗದೆ ಹಿನ್ನೆಲೆಯಲ್ಲಿ ಜುಲೈ 31 ರಂದು ಪ್ರಗತಿಪರ ಸಂಘಟನೆಗಳು ಒಕ್ಕೂಟದಿಂದ ಸ್ವಯಂ ಪ್ರೇರಿತ ಆಲಮೇಲ ಪಟ್ಟಣ ಬಂದಿಗೆ ಕರೆ ನೀಡಲಾಗಿದೆ ಆಲಮೇಲ ಪಟ್ಟಣದ ಬಸವೇಶ್ವರ ಸರ್ಕಲ್ ಹತ್ತಿರ ಪ್ರಗತಿಪರ ಸಂಘಟನೆಗಳು ಒಕ್ಕೂಟ ವಿವಿಧ ಬೇಡಿಕೆಗೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಆಲಮೇಲ ಡಾಕ್ಟರ್ ಸಂದೀಪ್ ಪಾಟೀಲ್ ಡಾ “ರಾಜೇಶ್ ಪಾಟೀಲ್ ಡಾ ಸಮೀರ್ ಹಾದಿಮನಿ ಡಾ”ಸಂಜಯ ಪಾಟೀಲ ವೈದ್ಯರ ಸಂಘ ಬೆಂಬಲ ವ್ಯಕ್ತಪಡಿಸಿದ್ದಾರೆ ಹಾಗೂ ರೈತ ಸಂಘ ಹೀಗೆ ಅನೇಕ ಸಂಘಟನೆಗಳು ಆಲಮೇಲ್ ಬಂದಿಗೆ ಸ್ಪಂದಿಸಿದರು
ರಮೇಶ್ ಬಂಟನೂರ.ಶ್ರೀಶೈಲ ಮಠಪತಿ.ಹರೀಶ ಯಂಟಮನ.ಸಂಜು ಯಂಟಮನ. ಪ್ರಭು ವಾಲಿಕರ ಶ್ರೀಶೈಲ್ ಶಿಂಗೆ ರಜಪೂತ ಪಿಟಿ ಪಾಟೀಲ್ ಉಪಸ್ಥಿತರಿದ್ದರು.
