ಸುರಪುರ: ತಾಲ್ಲೂಕಿನ ಮಾಲಗತ್ತಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಕ್ಕೆ ನೂತನ ಪದಾಧಿಕಾರಿಗಳು ಅವಿರೋದವಾಗಿ ಆಯ್ಕೆಯಾದರು.
ಸಂಘದ ಆವರಣದಲ್ಲಿ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಶರಣಗೌಡ ನಿಂಗಪ್ಪಗೌಡ ಗೌಡಗೇರಾ ಉಪಾದ್ಯಕ್ಷರಾಗಿ ಭೀಮಣ್ಣಗೌಡ ಬಸನಗೌಡ ಗೌಡಗೇರಾ ಅವಿರೋಧವಾಗಿ ಆಯ್ಕೆಯಾದರು.
ಇನ್ನುಳಿದಂತೆ ಈ ಮೊದಲೇ ನಿರ್ದೇಶಕರಾಗಿ ದೇವಿಂದ್ರಪ್ಪಗೌಡ ವಿರೂಪಾಕ್ಷಪ್ಪಗೌಡ ಪೊ.ಪಾ., ಸುರೇಶ ಶಿವನಗೌಡ, ರಾಮಕೃಷ್ಣ ಹಣಮಂತ, ಚಿದಾನಂದ ನಾಗಪ್ಪ, ನಿಂಗಣ್ಣ ಮಲ್ಲಣ್ಣ ಸಾಹುಕಾರ, ಭೀಮರಾಯ ಕಂಬಾರ, ಅಕ್ಬರ್ ಅಲಿ ಪಾಡಿಶಾ, ಸಾವಿತ್ರಮ್ಮ ಗಂ. ಬಸನಗೌಡ, ಲಕ್ಷಿö್ಮÃಬಾಯಿ ಗಂ. ನಿಂಗಪ್ಪ, ನಿಂಗಮ್ಮ ಗಂ. ಮಲ್ಲಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದರು.
ಚುನಾವಣಾಧಿಕಾರಿಯಾಗಿ ವಿಜಯಭಾಸ್ಕರ್ ಕಾರ್ಯನಿರ್ವಹಿಸಿ ಫಲಿತಾಂಶ ಪ್ರಕಟಿಸಿದರು. ಸಂಘದ ಕಾರ್ಯದರ್ಶಿ ಬಲಭೀಮ ಹುಜರತಿ ಕೂಡ್ಲಿಗಿ ಇದ್ದರು.
ನಂತರ ವಿಜೇತರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ದೇವಿಂದ್ರಪ್ಪಗೌಡ ಗೌಡಗೇರಿ, ವಾಲ್ಮೀಕ ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ಶ್ರೀನಿವಾಸ ದೊರೆ, ವೆಂಕೋಬ ದೊರಿ ಗೌಡಗೇರಾ, ಮಲ್ಲನಗೌಡ, ಭೀಮಣ್ಣ ದೊರಿ, ಅಂಬ್ರೇಷ್ ಸುರಪುರ, ಹುಸೇನ್ ಪಟೇಲ್, ಭೀಮಣ್ಣ ಕಚಕನೂರ, ಮಂಜುನಾಥ ಯಾನಗುಂಟಿ, ಅರುಣಕುಮಾರ ಸತ್ಯಂಪೇಟೆ, ಪರಶುರಾಮ ಗಡ್ಡದ, ವೆಂಕೋಬ ಹವಲ್ದಾರ, ಬಂದಗಿ ಪಟೇಲ್, ಹಣಮಂತ್ರಾಯ ಅಣಿಕೇರಿ, ಮಲ್ಲಿಕಾರ್ಜುನ ಯನಗುಂಟಿ ಸೇರಿದಂತೆ ಇನ್ನಿತರರು ಇದ್ದರು.
