ಹುಣಸಗಿ : ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದ ನವ ಚೇತನ ಶಿಕ್ಷಣ ಸಂಸ್ಥೆ ಕಡೆಯಿಂದ ಶ್ರೀ ವೀರಯ್ಯ ಅಪ್ಪನವರ ಏಳನೇ ವರ್ಷದ ಪುಣ್ಯರಾಧನೆ ಮಕ್ಕಳಿಗೆ ಬಟ್ಟೆ ವಿತರಣೆ ಮಾಡಿದರು.
ಬಯಲೋಳು ಬಯಲಾದ ಪರಮಪೂಜ್ಯ ಶ್ರೀ ವೀರಯ್ಯ ಅಪ್ಪನವರ ಏಳನೇ ವರ್ಷದ ಪುಣ್ಯರಾಧನೆಯನ್ನು ನವಚೇತನ ಶಿಕ್ಷಣ ಸಂಸ್ಥೆಯಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಪೂಜಾ ಕಾರ್ಯಗಳನ್ನು ನೆರವೇರಿಸಿ ಪೂಜ್ಯರ ಪುಣ್ಯರಾಧನೆ ನಿಮಿತ್ಯ 100ಮಕ್ಕಳಿಗೆ ಉಚಿತ ಬಟ್ಟೆಗಳನ್ನು ಸಂಸ್ಥೆಯ ವತಿಯಿಂದ ನೀಡಿದರು.

ಈ ಕಾರ್ಯಕ್ರಮದಲ್ಲಿ ನೀಲಮ್ಮ ಪಂಜಗಲ್ ಶಾಲೆಯ ಮುಖ್ಯಸ್ಥರಾದ ಸಂಗನಬಸಪ್ಪ ಪಂಜಗಲ್ ಶಾಂತಕುಮಾರ್ ಅಡ್ಡಿ ಬಸವರಾಜ್ ಜಾಲಿಗಿಡ ಬಸವರಾಜ್ ರಾಮಣ್ಣವರ್ ಗುರುಬಸಪ್ಪ ಪಂಜಗಲ್ ಅರುಣ್ ಪಂಜಗಲ್ ಬಸಮ್ಮ, ಗಂಗಮ್ಮ ಪಾರ್ವತಿ ಶಿಕ್ಷಕಿಯರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಊರಿನ ಹಿರಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
